Posts

Showing posts from November, 2019

ದಿನಕ್ಕೊಂದು ಕಥೆ 951

ದಿನಕ್ಕೊಂದು ಕಥೆ ಹವ್ಯಾಸ ಬದಲಿಸಿದರೆ ಹಣೆಬರಹ ಬದಲಾದೀತು! ಇದು ಎರಡು ಓಟೆಗಳ ಕಥೆ. ಒಮ್ಮೆ ಒಬ್ಬ ಗೃಹಿಣಿ ಎರಡು ಮಾವಿನ ಹಣ್ಣಿನ ಓಟೆಗಳನ್ನು ತಿಪ್ಪೆಯ ಮೇಲೆ ಬಿಸಾಡಿದಳು. ಒಂದು ಓಟೆ ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯ ಗೊಬ್ಬರ ಪೌಷ್ಟಿಕಾಂಶ ಕೊಡುತ್ತದೆ, ಸಸಿಯಾಗುತ್ತೇನೆ, ನಂತರ ಸಣ್ಣ ಗಿಡವಾಗುತ್ತೇನೆ, ಕಾಲಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರ ಮಾವಿನ ಹಣ್ಣನ್ನು ಕೋಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆ ಎಂದು ಯೋಚಿಸಿ ಅದರಂತೆಯೇ ಬೆಳೆಯಿತು, ಬದುಕಿತು. ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಓಟೆ ನನ್ನ ಬೇರುಗಳಿಗೆ ಅಂತರ್ಜಲ ಸಿಕ್ಕದಿದ್ದರೇ? ಪೌಷ್ಟಿಕಾಂಶ ಸಿಗದಿದ್ದರೇ? ಗಿಡವಾದಾಗ ಕುರಿ ಮೇಕೆಗಳು ಬಂದು ತಿಂದುಬಿಟ್ಟರೇ? ಮರವಾಗಿ ಹಣ್ಣು ಬಿಡುವಾಗ, ಜನ ಹಣ್ಣು ಉದುರಿಸಲು ಕಲ್ಲು ಹೊಡೆದರೆ ನನಗೆ ನೋವಾಗುದಿಲ್ಲವೇ? ಎಂದೆಲ್ಲ ಯೋಚಿಸಿ ಬೇರನ್ನು ಕೆಳಗೆ ಬಿಡದೆ, ಮೇಲೆ ಸಸಿಯಾಗಿ ಬೆಳೆಯದೆ ಹಾಗೆಯೇ ಉಳಿಯಿತು. ಕೆಲವೇ ದಿನಗಳಲ್ಲಿ ತಿಪ್ಪೆಯಲ್ಲಿನ ಗೊಬ್ಬರದೊಂದಿಗೆ ಗೊಬ್ಬರವಾಗಿ ಬೆರೆತು ಹಾಳಾಗಿ ಹೋಯಿತು. ಮೊದಲನೆಯ ಓಟೆಯ ಮನೋಭಾವ ಸಕಾರಾತ್ಮಕ. ಎರಡನೆಯ ಓಟೆಯ ಮನೋಭಾವ ನಕಾರಾತ್ಮಕ. ಸಕಾರಾತ್ಮಕ ವಾಗಿದ್ದ ಓಟೆ ಬೆಳೆದು ದಶಕಗಳ ಕಾಲ ಉಳಿಯಿತು. ಆದರೆ ನಕಾರಾತ್ಮಕವಾಗಿದ್ದ ಓಟೆ ಒಂದೆರಡು ವಾರಗಳಲ್ಲೇ ಮರೆಯಾಗಿ ಹೋಯಿತು. ನೀಜ ಜೀವನದಲ್ಲೂ ಸಹ ...

ದಿನಕ್ಕೊಂದು ಕಥೆ 950

ದಿನಕ್ಕೊಂದು ಕಥೆ ಲೇಖಕರು:ಡಾ.ಗವಿಸ್ವಾಮಿ. ಗಂಗಮ್ಮ ತಾಯಿ ಮೂರು ಅವಕಾಶಗಳನ್ನು ಕೊಡುತ್ತಾಳಂತೆ. ಮುಳುಗುತ್ತಿರುವವನನ್ನು ಬದುಕಿಕೋ ಹೋಗೆಂದು ಮೂರು ಸಲ ಮೇಲಕ್ಕೆ ಚಿಮ್ಮಿಸಿ ತೇಲಿಸುತ್ತಾಳಂತೆ. ಆದರೆ ಮುಳುಗಲೆಂದೇ ಹಾರಿದವನಿಗೆ ಎಷ್ಟು ಅವಕಾಶ ಕೊಟ್ಟರೇನು ಬಂತು? ಒಬ್ಬ ಆಗ ತಾನೇ ಧುಮುಕಿ , ಗಂಗೆಯ ಒಡಲಾಳಕ್ಕೆ ಇಳಿದು ಹೋಗುತ್ತಿದ್ದ . ಆತನನ್ನು ಕಂಡು ಮರುಗಿದ ಗಂಗೆಗೆ ಅವನೊಂದಿಗೆ ಮೂರು ಮಾತನ್ನಾದರೂ ಆಡಿ ಬೀಳ್ಕೊಡುವ ಬಯಕೆಯಾಯಿತು. "ಹುಟ್ಟುಬಟ್ಟೆಯಲ್ಲಿ ಜಿಗಿಯುತ್ತಿದ್ದ ವಯಸ್ಸಿನಿಂದಲೂ ನಿನ್ನನ್ನು ನೋಡುತ್ತಿದ್ದೇನೆ. ನೀನು ಮುಳುಗುವ ಆಸಾಮಿಯಲ್ಲ. ಏನಾಯಿತು ಹೇಳು?" "ನಿಜ ತಾಯಿ, ಬದುಕಿನುದ್ದಕ್ಕೂ ಘೋರ ಸುಳಿಗಳನ್ನು ಹಾದು ಬಂದಿದ್ದೇನೆ ..ಅಪ್ಪನ ಮೊಣಕಾಲು ಹಿಡಿದು ತಿರುಗುತ್ತಿದ್ದ ವಯಸ್ಸಿನಲ್ಲಿ ಪ್ಲೇಗು ಮಾರಿ ಅವನನ್ನು ಹೊತ್ತೊಯ್ದಾದಾಗಲೂ ನಾನು ಮುಳುಗಲಿಲ್ಲ.ಅವರಿವರ ಮನೆಯ ಕಸ ಹೊತ್ತು ಸುರಿದೆ,ಜೀತ ಮಾಡಿದೆ.ಹೆತ್ತವಳನ್ನು ಕಾಪಾಡಿಕೊಂಡೆ..ಎದೆ ಮಟ್ಟಕ್ಕೆ  ಬೆಳೆದ ಮಗ  ಕಾಡಾನೆಯ ಕಾಲಿಗೆ ತುತ್ತಾದಾಗಲೂ ನಾನು ಮುಳುಗಲಿಲ್ಲ..ಕೆಂಡದ ಉಂಡೆಗಳನ್ನು ಎದೆ ಗೂಡಿನಲ್ಲಿ  ಬಚ್ಚಿಟ್ಟುಕೊಂಡು ಮರುದಿನವೇ ಆರಂಭಕ್ಕೆ ಕಟ್ಟಿದೆ..ಬರಗಾಲ ಬಂದು ಬಾಯಿ ತೆರೆದುಕೊಂಡಿದ್ದ ಭೂಮ್ತಾಯಿಯೊಡಲಲ್ಲಿ ನನ್ನೆರಡು ಎತ್ತುಗಳನ್ನು ಹುಗಿದು ಮುಚ್ಚಿದ ದಿನದಂದೂ ನಾನು ಮುಳುಗಲಿಲ್ಲ.. ಇಂದು ಮಾತಿಗೆ ಅಂಜಿ, ಮಾನಕ್ಕೆ ಅಂಜಿ ಮುಳುಗುತ್ತಿದ್ದೇನೆ ತಾಯಿ...

ದಿನಕ್ಕೊಂದು ಕಥೆ 949

*🌻ದಿನಕ್ಕೊಂದು ಕಥೆ🌻* ಅಂದು ಉದ್ಯಮಿ ಅಶೋಕ್‌ ಖಾಡೆ, ಮಂದಿರದ ಜೀರ್ಣೋದ್ಧಾರಕ್ಕಾಗಿ 1 ಕೋಟಿ ರೂಪಾಯಿ ಚೆಕ್‌ ಕೊಟ್ಟು, ಕಣ್ಣಂಚಿನಲ್ಲಿ ನೀರು ತಂದುಕೊಂಡು ಹೇಳಿದರು: ""ನಮ್ಮದು ದಲಿತ ಕುಟುಂಬ. ನಾನು ಚಮ್ಮಾ...

ದಿನಕ್ಕೊಂದು ಕಥೆ 948

*🌻ದಿನಕ್ಕೊಂದು ಕಥೆ🌻* ಕೃಪೆ:Umeshchar kb ಒಮ್ಮೆ ಇಬ್ಬರು ನೆರೆ ಹೊರೆಯ ರಾಜರು ರಥದಲ್ಲಿ ಪ್ರಯಾಣಿಸುತ್ತ ಒಂದು ಇಕ್ಕಟ್ಟಾದ ಸೇತುವೆಯ ಮೇಲೆ ಎದಿರಾಗುತ್ತಾರೆ. ಒಬ್ಬರು ಮುಂದೆ ಹೋಗಬೇಕಾದರೆ, ಇನ್ನೊಬ್ಬ ರಾಜನು ತನ...