Posts

ದಿನಕ್ಕೊಂದು ಕಥೆ 984

ದಿನಕ್ಕೊಂದು ಕಥೆ 🙏ಇಂದಿನ ಐಕಾನ್ - ಆಧುನಿಕ ಸಾವಿತ್ರಿ ಲತಾ ಭಗವಾನ್ ಖರೆ.        ನನ್ನ ತರಬೇತಿಗಳಲ್ಲಿ ಅತೀ ಹೆಚ್ಚು ಸಲ ಬಳಸಿಕೊಂಡ ರಿಯಲ್ ಲೈಫ್ ಕಥೆಗಳಲ್ಲಿ ಇದು ಕೂಡ ಒಂದು. ಆಕೆ ಸಿನೆಮಾ ತಾರೆ ಅಥವಾ ಮಾಡೆಲ್ ಅಲ್ಲ. ಆದರೆ ಆಕೆಯ ಬದುಕಿನ ಹೋರಾಟ ಸಾವಿರಾರು ಮಂದಿಗೆ ಸ್ಫೂರ್ತಿ ತುಂಬಬಲ್ಲದು.        ಆಕೆ ಲತಾ ಭಗವಾನ್ ಖರೆ. ಆಕೆಯ ಗಂಡ ಭಗವಾನ್ ಖರೆ. ಮಹಾರಾಷ್ಟ್ರದ ಬುಲ್ದಾನ ಜೆಲ್ಲೆಯ ಒಂದು ಗ್ರಾಮದವರು. ಗಂಡನಿಗೆ 68 ವರ್ಷ ಮತ್ತು ಹೆಂಡತಿಗೆ 67 ವರ್ಷ. ಗಂಡ ಸುದೀರ್ಘ ವರ್ಷ ಸೆಕ್ಯುರಿಟಿ ಗಾರ್ಡ್ ಆಗಿದ್ದು ನಿವೃತ್ತಿ ಆಗಿದ್ದವರು. ಈಗ ಅವರಿಬ್ಬರೂ ಕೃಷಿಯ ದಿನಗೂಲಿ ನೌಕರರು. ಅವರಿಗೆ ಮೂರು ಜನ ಹೆಣ್ಣು ಮಕ್ಕಳು. ಮಕ್ಕಳಿಗೆ ಮದುವೆ ಮಾಡಿದ ಈ ದಂಪತಿ ತುಂಬಾ ಸಾಲ ಮಾಡಿದರು. ಮನೆಯನ್ನು ಮಾರಿ ಗುಡಿಸಲಲ್ಲಿ  ಇರಬೇಕಾಯಿತು. ದುಡಿದರೆ ಮಾತ್ರ ಅವರ ಹಸಿವು ನೀಗುತ್ತಿತ್ತು..ಬಹಳ ಕಷ್ಟದ ಸಮಯ ಅವರದ್ದು.        ಒಂದು ದಿನ ಗದ್ದೆಯಲ್ಲಿ ಕೃಷಿಯ ಕೆಲಸ ಮಾಡುವಾಗ ಗಂಡ ತಲೆ ತಿರುಗಿ ಬಿದ್ದು ಬಿಟ್ಟರು. ಹೆಂಡತಿಗೆ ತಕ್ಷಣ ಏನು ಮಾಡುವುದು ಎಂದು  ತೋಚಲಿಲ್ಲ. ಒಂದು ರಿಕ್ಷಾದಲ್ಲಿ ಗಂಡನನ್ನು ಹಾಕಿಕೊಂಡು ಪಕ್ಕದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಅಲ್ಲಿನ ವೈದ್ಯರು ಪರೀಕ್ಷೆ ಮಾಡಿ ಏನೋ ಸೋಂಕು ಉಂಟಾಗಿದೆ. ನಮ್ಮಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ದೊಡ್ಡ ...

ದಿನಕ್ಕೊಂದು ಕಥೆ 983

ದಿನಕ್ಕೊಂದು ಕಥೆ *ಸುಂದರ ಮನಸುಗಳು* 🌿🌿🌿🌿🌿🌿🌿🌿 ಒಂದು ಕ್ಲಾಸ್ ರೂಮ್ ನಲ್ಲಿ ಸುಮಾರು ವಿದ್ಯಾರ್ಥಿಗಳಿದ್ದರು. ಅವರಲ್ಲಿ ಒಬ್ಬ ಎದ್ದು ನಿಂತು ಪ್ರಾಧ್ಯಾಪಕರಿಗೆ ಹೇಳಿದ "ಸರ್ ನನ್ನ ತಂದೆ ನನ್ನ ಜನ್ಮ ದಿನಕ್ಕೆ ಒಂದು ದುಬಾರಿ ಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ  5 ನಿಮಿಷದ ಬ್ರೇಕ್ ನಲ್ಲಿ ಅದನ್ನು ಇಲ್ಲಿಯೇ ಬಿಟ್ಟು ಹೊರಗೆ ಹೋಗಿದ್ದೆ, ಬಂದು ನೋಡಿದರೆ ಕಾಣುತ್ತಿಲ್ಲ." ಆಗ ಪ್ರಾಧ್ಯಾಪಕರು ವಿಚಾರ ಮಾಡಲಾಗಿ ಈ ಹುಡುಗ ಹೊರಗೆ ಹೋಗಿ ಒಳಗೆ ಬರುವವರೆಗೆ ಕ್ಲಾಸ್ ರೂಮ್ ಒಳಗಿರುವ ಯಾವನೋ ಒಬ್ಬ ಕದ್ದಿರುತ್ತಾನೆ ಎಂದು ಊಹಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಎದ್ದು ನಿಲ್ಲಿಸಿ ತಮ್ಮ ತಮ್ಮ ಕರ್ಚೀಫಿನಿಂದ ತಮ್ಮ ಕಣ್ಣುಗಳನ್ನು ಕಟ್ಟಿಕೊಳ್ಳಲು ತಿಳಿಸಿದರು. ಒಬ್ಬೊಬ್ಬರನ್ನು  ಮೈಮುಟ್ಟಿ ಹುಡುಕುತ್ತಾ ಬಂದಾಗ ಒಬ್ಬನ ಜೇಬಿನಲ್ಲಿ ಅದು ಸಿಕ್ಕಿತು. ಅದನ್ನು ಕಳೆದುಕೊಂಡ ವಿದ್ಯಾರ್ಥಿಗೆ ಒಪ್ಪಿಸಿ, ಎಲ್ಲರಿಗೂ ಕಣ್ಣಿನ ಬಟ್ಟೆ  ತೆಗೆಯಲು ತಿಳಿಸಿದರು. ಎಂದಿನಂತೆ ಪಾಠ ಮುಂದುವರೆಯಿತು. ಆದರೆ ಗಡಿಯಾರ ಕದ್ದ ವಿದ್ಯಾರ್ಥಿಯ ಮನದಲ್ಲಿ ಭಯ, ಆತಂಕ ಶುರುವಾಗಿತ್ತು. ಇಂದೋ ನಾಳೆಯೋ ನಾನು ಕಳ್ಳ ಎಂದು ಎಲ್ಲರ ಮುಂದೆ ಬಹಿರಂಗವಾಗಿ ವಿಷಯ ತಿಳಿಸುತ್ತಾರೆ. ಆಗ ನನ್ನ ಗತಿ ಏನಾಗಬೇಕು ಎಂದು ಆತಂಕದಿಂದಲೇ ಕ್ಲಾಸಿಗೆ ಬರುತ್ತಿದ್ದ. ಹೀಗೆ ದಿನಗಳು ಕಳೆದು, ತಿಂಗಳುಗಳು ಕಳೆದು, ವರ್ಷವೇ ಕಳೆದು ಹೋಯಿತು. ಆ ವಿಷಯ ಯಾರಿಗೂ ಗೊತ್ತಾಗಲಿ...

ದಿನಕ್ಕೊಂದು ಕಥೆ 982

ದಿನಕ್ಕೊಂದು ಕಥೆ ಕೃಪೆ:ಕನ್ನಡ_ಸಂಪದ #ಅಲ್ಲೂರಿ_ಸೀತಾರಾಮ_ರಾಜು ಜನನ --  ಜುಲೈ 4 1897  ಆದಿವಾಸಿಗಳ ಹಕ್ಕು ಕುರಿತಂತೆ ಈ ದೇಶದಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತಿದ್ದು  ಉತ್ತರ ತೆಲಂಗಾಣದ ಅಲ್ಲೂರಿ ಸೀತಾರಾಮ ರಾಜು. ಅವರನ್ನು ಬ್ರಿಟಿಷ್ ಆಡಳಿತ 1924 ವರ್ಷದ ಮೇ 7 ರಂದು ಅಮಾನುಷ ರೀತಿಯಲ್ಲಿ ಕೊಂದುಹಾಕಿತು. ಇಂದಿನ ಬಸ್ತಾರ್ ಅರಣ್ಯ ಪ್ರದೇಶವೆಂದು ಕರೆಯುವ ಆಂಧ್ರ ಗಡಿ ಭಾಗದ ಅರಣ್ಯ ಸೇರಿದಂತೆ ಮಧ್ಯಪ್ರದೇಶ, ಒರಿಸ್ಸಾ, ಆಂಧ್ರದ ಗಡಿಭಾಗದ ಅರಣ್ಯದಲ್ಲಿ ವಾಸವಾಗಿರುವ ಚೆಂಚು ಎಂಬ ಬುಡಕಟ್ಟು ಜನಾಂಗದ ಪರವಾಗಿ 1920ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಪ್ರಥಮ ಬಾರಿಗೆ ಧ್ವನಿ ಎತ್ತಿ ಹೋರಾಡಿ  ಹುತಾತ್ಮನಾದ ಸ್ವಾತಂತ್ರ್ಯ ಹೋರಾಟಗಾರ ಈ ಅಲ್ಲೂರಿ ಸೀತಾರಾಮ ರಾಜು. 1897 ರ ಜುಲೈ 4 ರಂದು ವಿಶಾಖಪಟ್ಟಣ ಜಿಲ್ಲೆಯ ಪಂಡುರಂಗಿ ಎಂಬ ಗ್ರಾಮದದಲ್ಲಿ ಜನಿಸಿದ ರಾಜುವಿನ ತಂದೆ ಆಗಿನ ಬ್ರಿಟಿಷ್ ಆಳ್ವಿಕೆಯ ಸರ್ಕಾರದಲ್ಲಿ ರಾಜಮಂಡ್ರಿ ಸರೆಮನೆಯಲ್ಲಿ ಪೋಟೊಗ್ರಾಪರ್ ಆಗಿ ಕೆಲಸಮಾಡುತಿದ್ದರು.  ಅಲ್ಲೂರಿ ಸೀತಾರಾಮ ರಾಜು ಬಾಲ್ಯದಿಂದಲೇ ತಮ್ಮ ತಂದೆಯಿಂದ ಆತ್ಮಗೌರವ, ಪರೋಪಕಾರ ಮುಂತಾದ ಗುಣಗಳನ್ನು ಕಲಿತಿದ್ದರು. ಪುಟ್ಟ ಬಾಲಕನಾಗಿದ್ದಾಗ ಇವರು ಒಮ್ಮೆ ಆಂಗ್ಲ ಅಧಿಕಾರಿಗೆ ಸೆಲ್ಯೂಟ್ ಹೊಡೆದಿದ್ದಕ್ಕೆ ತಮ್ಮ ತಂದೆಯಿಂದ ಪೆಟ್ಟುತಿಂದು, ದೇಶವನ್ನಾಕ್ರಮಿಸಿ ಆಡಳಿತ ನಡೆಸುವ ಆಂಗ್ಲರು ತಮ್ಮ ಶತ್ರುಗಳು ಎಂಬುದನ್ನರಿತರು. ಇವರ ತಂದೆ ವೆಂಕ...

ದಿನಕ್ಕೊಂದು ಕಥೆ 981

ದಿನಕ್ಕೊಂದು ಕಥೆ  ಬೆರಗಿನ ಬೆಳಕು |  ಭಯದ ದಾರಿ ಹಿಂದೆ ಕಾಶ್ಯಪ ಸಮ್ಯಕ್ ಸಂಬುದ್ಧರ ಸಮಯದಲ್ಲಿ ವಾರಾಣಸಿಯನ್ನು ಉಸೀನರ ಎಂಬ ರಾಜ ಆಳುತ್ತಿದ್ದ. ಅವನು ತುಂಬ ಅಶಕ್ತ. ರಾಜ್ಯದಲ್ಲಿ ಧರ್ಮವನ್ನು ಕಡೆಗಣಿಸಲಾಗಿತ್ತು. ಬುದ್ಧ ತನ್ನ ಉಪದೇಶದಿಂದ ಜನರನ್ನು ಬಂಧನದಿಂದ ಬಿಡುಗಡೆಗೊಳಿಸಿ ನಿರ್ವಾಣ ಹೊಂದಿದ ಮೇಲೆ ಬಹಳ ಕಾಲದ ನಂತರ ಬುದ್ಧನ ಮಾತುಗಳು ಜನರಿಂದ ಮರೆಯಾಗತೊಡಗಿದವು. ಭಿಕ್ಷುಗಳು ಅನುಚಿತವಾದ ಮಾರ್ಗಗಳಿಂದ ಬದುಕತೊಡಗಿದರು, ಭಿಕ್ಷುಣಿಯರ ಸಂಗ ಮಾಡಲಾರಂಭಿಸಿದರು. ಅವರ ಸಂಸಾರಗಳು ನಡೆದವು. ಉಪಾಸಕರು ತಮ್ಮ ಉಪಾಸನೆಗಳನ್ನು ಮರೆತರು, ಬ್ರಾಹ್ಮಣರು ಬ್ರಾಹ್ಮಣ ಧರ್ಮವನ್ನು ಬಿಟ್ಟರು. ಎಲ್ಲರೂ ಬದುಕುವುದಕ್ಕಾಗಿ ಬುದ್ಧ ಪ್ರತಿಪಾದಿಸಿದ ಮೌಲ್ಯಗಳನ್ನು ಮರೆತು ಅನಾಚಾರಿಗಳಾದರು. ಆಗ ಸತ್ತವರೆಲ್ಲ ನರಕಕ್ಕೆ ಹೋದರು. ಹಿಂದೆ ಕಾಶ್ಯಪ ಸಮ್ಯಕ್ ಸಂಬುದ್ಧರ ಸಮಯದಲ್ಲಿ ವಾರಾಣಸಿಯನ್ನು ಉಸೀನರ ಎಂಬ ರಾಜ ಆಳುತ್ತಿದ್ದ. ಅವನು ತುಂಬ ಅಶಕ್ತ. ರಾಜ್ಯದಲ್ಲಿ ಧರ್ಮವನ್ನು ಕಡೆಗಣಿಸಲಾಗಿತ್ತು. ಬುದ್ಧ ತನ್ನ ಉಪದೇಶದಿಂದ ಜನರನ್ನು ಬಂಧನದಿಂದ ಬಿಡುಗಡೆಗೊಳಿಸಿ ನಿರ್ವಾಣ ಹೊಂದಿದ ಮೇಲೆ ಬಹಳ ಕಾಲದ ನಂತರ ಬುದ್ಧನ ಮಾತುಗಳು ಜನರಿಂದ ಮರೆಯಾಗತೊಡಗಿದವು. ಭಿಕ್ಷುಗಳು ಅನುಚಿತವಾದ ಮಾರ್ಗಗಳಿಂದ ಬದುಕತೊಡಗಿದರು, ಭಿಕ್ಷುಣಿಯರ ಸಂಗ ಮಾಡಲಾರಂಭಿಸಿದರು. ಅವರ ಸಂಸಾರಗಳು ನಡೆದವು. ಉಪಾಸಕರು ತಮ್ಮ ಉಪಾಸನೆಗಳನ್ನು ಮರೆತರು, ಬ್ರಾಹ್ಮಣರು ಬ್ರಾಹ್ಮಣ ಧರ್ಮವನ್ನು ಬಿಟ್...

ದಿನಕ್ಕೊಂದು ಕಥೆ 980

*🌻ದಿನಕ್ಕೊಂದು ಕಥೆ🌻* *ಮನೆಯಲ್ಲಿರುವುದೇನು ಕರಿನೀರ ರೌರವಕ್ಕಿಂತ ಹೆಚ್ಚಿನದ್ದೇ?*    ಗೂಡಿನಂತಹಾ ಕಗ್ಗತ್ತಲ ಕೊಠಡಿ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ, ಮಧ್ಯಾಹ್ನ 12ರಿಂದ 5 ಗಂಟೆಯವರೆಗೆ ಗೋಡೆ ಕಡೆ ಮುಖ ಮಾಡಿ ನಿಲ್ಲಿಸಿ ಕೈಗಳಿಗೆ ಬೇಡಿ ಹಾಕುತ್ತಿದ್ದರು. ಸೊಂಟದ ಸುತ್ತ ಬಿಗಿದು ಬರುವ ಎರಡು ಎಳೆಗಳನ್ನು ಪಾದಗಳೆರಡಕ್ಕೂ ಬಿಗಿದು ಹಾಕುವ ಕಂಬಿ ಬೇಡಿ ಎಂದು ಕರೆಯಲ್ಪಡುವ ಸ್ಥಿತಿಯಲ್ಲಿ ಕಾಲನ್ನು ಕಿಂಚಿತ್ತೂ ಮಡಿಸದೆ ತಿಂಗಳುಗಟ್ಟಲೆ ಇರಬೇಕಿತ್ತು! ಕೈಗಳನ್ನು ಹಿಂದಕ್ಕೆ ಸರಿಸಿ ಬೇಡಿ ಹಾಕುವುದು ಇನ್ನೊಂದು. ಮಗದೊಂದು ಅಡ್ಡಕಂಬಿ ಬೇಡಿ - ಎರಡೂ ಕಾಲುಗಳನ್ನು ಒಂದಡಿಗಿಂತಲೂ ಹೆಚ್ಚು ದೂರದಲ್ಲಿರಿಸಿ ಹಾಕಲಾಗುತ್ತಿತ್ತು. ವಾರಗಟ್ಟಲೆ, ಕೆಲವೊಮ್ಮೆ ತಿಂಗಳುಗಟ್ಟಲೆ ಊಟ, ನಿದ್ರೆ, ವಿಸರ್ಜನೆ, ಓಡಾಟ, ಕೆಲಸ ಎಲ್ಲವನ್ನೂ ಇದೇ ಸ್ಥಿತಿಯಲ್ಲಿ ಮಾಡಬೇಕು. ಕೇಳಿದರೆ ಮೈಜುಮ್ಮೆನಿಸುವ ಶಿಕ್ಷೆ. ಇದು  ಯಾರು ಕಾಣದ, ಅನುಭವಿಸದ ಶಿಕ್ಷೆ. ಇದು ಅಂಡಮಾನಿನಲ್ಲಿ ಹನ್ನೊಂದು ವರ್ಷ ವೀರ ಸಾವರ್ಕರ್ ಅನುಭವಿಸಿದ, ನರಕಯಾತನೆ ಪಟ್ಟ ಕರಿನೀರ ಶಿಕ್ಷೆ!  ಮಾರ್ಸೆಲ್ಸಿನಲ್ಲಿ ಮೊರಿಯಾ ಹಡಗಿನ ಶೌಚ ಕೊಠಡಿಯ ಕಿರು ಗವಾಕ್ಷದಿಂದ ಯೋಗಶಕ್ತಿಯಿಂದ ದೇಹವನ್ನು ಸಂಕುಚಿಸಿ ಸಮುದ್ರಕ್ಕೆ ಹಾರಿ ಈಜಿದಂತೆ ಅಂಡಮಾನಿಗೆ ಹೊರಟ ಮಹಾರಾಜ ಹಡಗಿನಿಂದ ತಪ್ಪಿಸಿಕೊಳ್ಳಲು ವೀರ ಸಾವರ್ಕರರಿಗೆ ಯಾವುದೇ ಮಾರ್ಗಗಳಿರಲಿಲ್ಲ. ಕೈಕಾಲುಗಳೆಲ್ಲದಕ್ಕೂ ಬೇಡಿ ಹಾಕ...

ದಿನಕ್ಕೊಂದು ಕಥೆ 979

ದಿನಕ್ಕೊಂದು ಕಥೆ ನೂರೆಂಟು ಮಾತು: ವಿಶ್ವೇಶ್ವರ ಭಟ್ ಚೀನಾದ  ಜೈಲಿನಲ್ಲಿ 33 ವರ್ಷ ಘನಘೋರ ಚಿತ್ರಹಿಂಸೆ ಅನುಭವಿಸಿದವನ ಮುಂದೆ ಲಾಕ್ಡೌನ್ ಯಾವ ಲೆಕ್ಕ ?  - ವಿಶ್ವೇಶ್ವರ ಭಟ್  ಪಾಲ್ಡೆನ್ ಗ್ಯಾತ್ಸೋ !  ನನಗೇಕೆ ಈ ಸಮಯದಲ್ಲಿ ಈತನ ನೆನಪಾಯಿತು ಎಂದು ತುಸು ಆಶ್ಚರ್ಯವಾಯಿತು. ನಾನು ಇವನನ್ನು ಮರೆತೇ ಬಿಟ್ಟಿದ್ದೆ. ಆದರೆ ಈ ಲಾಕ್ ಡೌನ್ ಕಾಲದಲ್ಲಿ ಮೊನ್ನೆ ದಕ್ಷಿಣ ಆಫ್ರಿಕಾದ ’ಮಹಾತ್ಮಾ ಗಾಂಧಿ’ ಎಂದೇ ಪ್ರಸಿದ್ಧರಾದ ನೆಲ್ಸನ್ ಮಂಡೇಲಾ ಅವರನ್ನು ನೆನಪಿಸಿಕೊಳ್ಳುವಾಗ, ಈ ಪಾಲ್ಡೆನ್ ಗ್ಯಾತ್ಸೋ ಅಚಾನಕ್ ಆಗಿ ನೆನಪಾದ.  ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಗೆ ನಾವು ಪಡಬಾರದ ಹಿಂಸೆ ಅನುಭವಿಸುತ್ತಿದ್ದೇವೆ, ಆದರೆ ವರ್ಣಭೇದ ನೀತಿ ವಿರುದ್ಧ ಹೋರಾಡಿದ ಮಂಡೇಲಾ ಸತತ ಇಪ್ಪತ್ತೇಳು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದರು. ಆರಡಿ ಎಂಟಡಿ ಜೈಲು ಕೋಣೆಯಲ್ಲಿ ತಮ್ಮ ಯೌವನದ ಬಹುಮುಖ್ಯ ಅವಧಿಯನ್ನು ಕಳೆದರು. ಅಲ್ಲಿ ಒಂದು ಫೋನ್, ಫ್ಯಾನ್, ಪುಸ್ತಕ, ಪೆನ್ನು, ರೇಡಿಯೋ, ಟಿವಿ ಏನೇನೂ ಇರಲಿಲ್ಲ. ಅಂಥ ಭಯಾನಕ ಜೈಲು ಕೋಣೆಯಲ್ಲಿ  ಅವರು ಇಪ್ಪತ್ತೇಳು ವರ್ಷಗಳನ್ನು ಕಳೆದರು. ಆ ಜೈಲಾದರೂ ಎಲ್ಲಿತ್ತು ? ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರದಿಂದ ಏಳು ಕಿಮಿ ದೂರದ ಒಂದು ದ್ವೀಪದಲ್ಲಿ. ಬೋಟಿನಲ್ಲಿಯೇ ಹೋಗಬೇಕು. ಅದು ಭೀಕರ ಸಾಂಕ್ರಾಮಿಕ ರೋಗಗಳಿಂದ ಬಳಲುವವರನ್ನು ಪ್ರತ್ಯೇಕವಾಗಿ ಕೂಡಿಡುವ ಐಸೋಲೇಷನ್ ಕ್ಯಾಂಪ್. ಜೈಲಿಂದ ಹೊರಬಂದ...

ದಿನಕ್ಕೊಂದು ಕಥೆ 978

ದಿನಕ್ಕೊಂದು ಕಥೆ *"ನಮ್ಮನ್ನು ವಿನಾಕಾರಣ ದ್ವೇಷಿಸುವವರನ್ನು, ಹಲ್ಲೆ ಮಾಡುವವರನ್ನು ಉದಾಸೀನ ಮಾಡಿದಷ್ಟು ಅವರ ಶಕ್ತಿ ಕಡಿಮೆಯಾಗುತ್ತದೆ. ಮಹತ್ವ ಕೊಟ್ಟಷ್ಟು ದೊಡ್ಡವರಾಗುತ್ತಾರೆ"* _ಕೃಷ್ಣ, ಬಲರಾಮ ಮತ್ತು ಸಾತ್ಯಕಿ ಒಮ್ಮೆ ಕಾಡಿನಲ್ಲಿ ನಡೆದು ಹೋಗುತ್ತಿದ್ದರು.‌ ಕತ್ತಲು ಆವರಿಸಿದ್ದರಿಂದ ಒಂದು ಮರದ ಕೆಳಗೆ ವಿರಮಿಸಿದರು.‌ ಅವರಲ್ಲಿಯೇ ಒಂದು ವ್ಯವಸ್ಥೆ ರೂಪಿಸಿಕೊಂಡರು. ಒಂದೊಂದು ಜಾವ ಒಬ್ಬೊಬ್ಬರು‌ ಎದ್ದು ಕಾವಲು ಕಾಯುವುದು ಎಂದು._ _ಮೊದಲು ಬಲರಾಮನ ಸರದಿ. ಇನ್ನಿಬ್ಬರು ಮಲಗಿದರು. ಸ್ವಲ್ಪ ಹೊತ್ತಾದ‌ ಮೇಲೆ ಓರ್ವ ಬ್ರಹ್ಮರಾಕ್ಷಸ ಮರದ ಮೇಲಿಂದ ಜಿಗಿದ. ಬಲರಾಮನಿಗೋ ತನ್ನ ಭುಜಬಲದ ಬಗ್ಗೆ ಅತೀವ ವಿಶ್ವಾಸ. ಸರಿ. ಕಾಳಗ ಪ್ರಾರಂಭವಾಯಿತು. ಬಲರಾಮ ಬ್ರಹ್ಮರಾಕ್ಷಸನಿಗೆ ಹೊಡೆಯಲು ಪ್ರಾರಂಭಿಸಿದ. ಊಹೂ. ಬ್ರಹ್ಮರಾಕ್ಷಸನಿಗೆ ಏನೂ ಆಗಲಿಲ್ಲ. ಬದಲಿಗೆ ಬಲರಾಮನ ಒಂದೊಂದು ಹೊಡೆತಕ್ಕೆ ಆ ಬ್ರಹ್ಮರಾಕ್ಷಸ ಬೆಳೆಯುತ್ತಾ ಹೋದ. ಕೊನೆಗೆ ಬಲರಾಮ ಹಣ್ಣುಗಾಯಿ-ನೀರುಗಾಯಿಯಾಗಿ ಸುಸ್ತಾಗಿ ಕೆಳಗೆ ಬಿದ್ದ._ _ಮುಂದಿನದು ಸಾತ್ಯಕಿಯ ಸರದಿ.‌ ಇವನಿಗೂ ತನ್ನ ಪರಾಕ್ರಮದ ಬಗ್ಗೆ ಅತೀವ ವಿಶ್ವಾಸ. ಸರಿ. ಬಲರಾಮ ಮಾಡಿದ್ದನ್ನೇ ಈ ಸಾತ್ಯಕಿಯೂ ಮಾಡಿದ. ಮತ್ತೆ ಬ್ರಹ್ಮರಾಕ್ಷಸ ಬೆಳೆಯುತ್ತಾ ಹೋದ. ಬಲರಾಮನಿಗೆ ಆದದ್ದೇ ಸಾತ್ಯಕಿಗೂ ಆಗಿ ಅವನೂ ಸುಸ್ತಾಗಿ ಬಿದ್ದ._ _ಮುಂದಿನದು ಕೃಷ್ಣನ ಸರದಿ..._ _ಕೃಷ್ಣ ಆ ಬ್ರಹ್ಮರಾಕ್ಷಸನನ್ನು ಎದುರಿಸಿದ ರೀತಿಯೇ ವಿಭಿನ್...

ದಿನಕ್ಕೊಂದು ಕಥೆ 977

ದಿನಕ್ಕೊಂದು ಕಥೆ ಮೂರ್ತಿ ಚಿಕ್ಕದಾದರು  ಕೀರ್ತಿ ದೊಡ್ಡದು..!  ಈ ಮಾತು ಯಾಕೆ ಬಂತು ಗೊತ್ತಾ.. ಇವಾಗೆಲ್ಲಾ ಡಬಲ್ ಮೀನಿಂಗ್ ಗೆ ಈ ಮಾತನ್ನು ಬಳಸುತ್ತಾರೆ..  ನೆನಪಿಡಿ..  ಈ ಮಾತು ತುಂಬ ಅರ್ಥ ಗರ್ಭಿತವಾಗಿದೆ.. ಓದಿ.. ಹೀಗೆ ಒಂದು ಸಂದರ್ಭದಲ್ಲಿ ಕೈಯಲ್ಲಿನ ಬೆರಳುಗಳು.. ಪರಸ್ಪರ ಮಾತಾಡುತ್ತಿರಬೇಕಾದರೆ.. ನಮ್ಮಲ್ಲಿ ಯಾರು ಶ್ರೇಷ್ಠ ಎಂಬ ಮಾತು ಹಾದು ಹೋಯಿತು.. ಎಲ್ಲಾ ಬೆರಳುಗಳು ನಾವು ನಾವು ಎಂದು ಚೀರ ತೊಡಗಿದವು.. ಆಗ ಯಾರ್ಯಾರು ತಾವು ಹೇಗೆ ಯಾವುದರಲ್ಲಿ ಶ್ರೇಷ್ಠವೆಂದು ಹೇಳಿದರೆ ತೀರ್ಮಾನಿಸಲು ಸೂಕ್ತವಾಗುತ್ತದೆ ಎಂದು ಆಲೋಚಿಸಿ.. ಒಂದೋಂದಾಗೇ ತಮ್ಮ ಶ್ರೇಷ್ಠತೆಯನ್ನು ಹೇಳತೊಡಗಿದವು.. ಮೊದಲು ಹೆಬ್ಬೆರೆಳು ಹೇಳಿತು.. ನಾನು ನಿಮಗಿಂತಲೂ ಗಾತ್ರದಲ್ಲಿ.. ಉಪಮೆಯಲ್ಲಿ ( ಹೋಲಿಕೆ) ದೊಡ್ಡವ... ನಿಮ್ಮೆಲ್ಲರಿಗೂ ಹಿರಿಯಣ್ಣ..  ತಂದೆ ತಾಯಿಗೆ ನನ್ನನ್ನು ಹೋಲಿಸಲಾಗುತ್ತದೆ.. ಏಕಲವ್ಯ. ಅರ್ಜುನರಾದಿ ದ್ರೋಣರು ಕೂಡ ನನ್ನಿಂದಲೇ ಪ್ರಸಿದ್ಧರಾಗಿದ್ದು ಗೊತ್ತಾ ಎಂದು ಬೀಗಿತು.. ಎಲ್ಲಾ ಬೆರಳುಗಳು ಹೌದೆಂದೆವು.. ನಂತರ ತೋರು ಬೆರಳು ಹೇಳಿತು.. ನಾನು ತೋರು ಬೆರಳು.. ನಾನು ಪ್ರತಿಯೊಬ್ಬರ ಅಹಂ ನ ಸಂಕೇತ.. ನಾನು ನನ್ನದು ನನಗೆ ನಾನೇ ಎಂಬ ಸ್ವಂತಿಕೆಯ ಪ್ರತೀಕ.. ನಾನು ಪ್ರತಿಯೊಬ್ಬರ ಸೊಕ್ಕು ಧಿಮಾಕು ಜಂಭದ ಪ್ರತೀಕ ವೆಂದು ಜಂಭಪಟ್ಟಿತು.. ಎಲ್ಲಾ ಬೆರಳುಗಳು ತಲೆಯಾಡಿಸಿದವು.. ನಂತರ ನಡುಬೆರಳು ಎದ್ದು ನಿಂತಿತು.. ನಾನ...

ದಿನಕ್ಕೊಂದು ಕಥೆ 976

*🌻ದಿನಕ್ಕೊಂದು ಕಥೆ🌻* *ಹಣ ಏನೇನೆಲ್ಲಾ ಮಾಡಿಸುತ್ತದೆ.. ಅಲ್ಲವಾ..?*  ಒಂದೂರಲ್ಲಿ ಮಾಂಸದ ವ್ಯಾಪಾರಿಯಿದ್ದ..ದಿನವೂ ಕುರಿಯನ್ನೋ ಕೋಳಿಯನ್ನೋ ಕೊಯ್ದು.. ಮಾರಾಟ ಮಾಡಿ ಜೀವನ ಮಾಡುತ್ತಿದ್ದ.. ಆ ಮಾಂಸ ವ್ಯಾಪಾರಿಯ ಒಂದೇ ಒಂದು ವೀಕ್ನೆಸ್ ಎಂದರೆ ಕೋಪ.. ! ಊರವರ ಎಲ್ಲರೊಂದಿಗೂ ಕೋಪ ಮಾಡಿಕೊಳ್ಳುತ್ತಿದ್ದ.. ಕಟ್ಟಿಕೊಂಡ ಹೆಂಡತಿಯನ್ನು ಕಣ್ಣಳತೆಯಲ್ಲೇ ಇಟ್ಟಿದ್ದ..  ಇವನ ಈ ವರ್ತನೆಯಿಂದ ಜನ ಇವನ ಜೋಡಿ ಅಷ್ಟಕಷ್ಟೆ ಇದ್ದರು.. ಅದೇ ಊರಲ್ಲಿ  ಇನ್ನೊಬ್ಬನಿದ್ದ.. ಕಾಳುಗಳ ವ್ಯಾಪಾರಿ.. ಭಲೇ ಮಾತುಗಾರ.. ತನ್ನ ಬಣ್ಣ ಬಣ್ಣದ ಮಾತುಗಳಿಂದ ಮುಂದಿರುವವರನ್ನು ಹೌದೆಂದೂ ತಲೆಯಾಡಿಸುವಂತೆ ಮಾಡುವ ಚಾತುರ್ಯ್ಯ ಉಳ್ಳವನು.. ಆವತ್ತು ಎಂದಿನಂತೆ ಭಾನುವಾರ.. ಮಾಂಸದ ವ್ಯಾಪಾರಿ ತುಸು ಗಡಿಬಿಡಿಯಲ್ಲಿದ್ದ.. ಆ ದಿನ ವ್ಯಾಪಾರ ಜೋರಿತ್ತು.. ಮಧ್ಯಾಹ್ನವಾದ್ದರಿಂದ ಆಳುಗಳಿಬ್ಬರೂ ಊಟಕ್ಕೆಂದು ಹೋಗಿದ್ದರು.. ಇತ್ತ ಮಾಂಸದ ವ್ಯಾಪಾರಿ ಅಂಗಡಿಯನ್ನು ಸ್ವಚ್ಛಗೊಳಿಸಿ.. ಒಂದು ವಾರದಿಂದ ಬಾಕಿ ಇರುವ ಹಣದ ಬಟವಾಡೆ ಮಾಡುವ ಸಲುವಾಗಿ ಹಣದ ಥೈಲಿಯನ್ನು ( ಥೈಲಿ -ಚೀಲ) ಕೈಯಲ್ಲಿಡಿದುಕೊಂಡಿದ್ದ.. ವಾರದಿಂದ ಕುರಿ ಕೋಳಿ ಸಾಲದಿಂದ ತಂದವರಿಗೆ.. ಆಳುಗಳಿಗೆ ದುಡ್ಡನ್ನು ಕೊಟ್ಟರೆ ತಲೆ ಬಿಸಿ ಮುಗಿಯುತೆಂದು.. ಹುಫ್ ಎಂದು ಉಸಿರೆಳೆದುಕೊಂಡ.. ಅದೇ ಹೊತ್ತಿಗೆ ಅವನ ಹತ್ತಿರವೇ ಕಾಳುಗಳ ವ್ಯಾಪಾರಿ ಬಂದ.. ಮಾಂಸದ ವ್ಯಾಪಾರಿ ನಗುತ್ತಾ ಬಾ ಎಂದು ಕರೆದ.. ಇವನು ನಗುತ್ತ...

ದಿನಕ್ಕೊಂದು ಕಥೆ 975

*🌻ದಿನಕ್ಕೊಂದು ಕಥೆ🌻* *ಈ ಕಂಪನಿಯ ಯಶಸ್ಸಿನಿಂದ ಕಲಿಯುವುದು ಬೇಕಾದಷ್ಟಿದೆ!*   ‘ದ ಸ್ಪೋರ್ಟಿಂಗ್ ನ್ಯೂಸ್’ ಪತ್ರಿಕೆ 1993ರಲ್ಲಿ ವರ್ಷದ ವ್ಯಕ್ತಿ ಎಂದು ಘೊಷಿಸಿದ ವ್ಯಕ್ತಿ ಆಟಗಾರನೂ ಆಗಿರಲಿಲ್ಲ, ಕೋಚ್ ಕೂಡ ಆಗಿರಲಿಲ್ಲ. ಆದರೆ ದಶಕಗಳಿಂದ ಅತ್ಯುನ್ನತ ಕ್ರೀಡಾಪಟುಗಳು ಧರಿಸುತ್ತ ಬಂದಿರುವ ಜಗತ್ತಿನ ಅತಿದೊಡ್ಡ ಶೂ ಕಂಪನಿಯ ಸ್ಥಾಪಕ ಫಿಲ್ ನೈಟ್ ಆ ಗೌರವಕ್ಕೆ ಪಾತ್ರನಾದ! ಇಂತಹ ದೊಡ್ಡ ದೊಡ್ಡ ಕಂಪನಿಗಳ ಯಶಸ್ಸಿನ ಹಿಂದೆ ಸಾಮಾನ್ಯ ಜನರಿಗೆ ಹುಚ್ಚುತನ, ಮೂರ್ಖತನ ಎಂದು ಅನಿಸುವ ಐಡಿಯಾಗಳಿರುತ್ತವೆ! ಇವರೇನು ಮಾಡುತ್ತಿದ್ದಾರೆಂಬುದು ಜನರಿಗೆ ಗೊತ್ತೇ ಆಗುವುದಿಲ್ಲ. ಅಂತಹುದೇ ಒಂದು ಕಂಪನಿ ನೈಕಿ. ಈಗ ನೈಕಿ ಕಂಪನಿಯ ಹೆಸರನ್ನು ಕೇಳದವರು ಇರಲಿಕ್ಕಿಲ್ಲ. ಇದೊಂದು ಬಿಲಿಯನ್ ಡಾಲರ್ ಕಂಪನಿ. ಫಿಲ್ ನೈಟ್ ಇದರ ಸಂಸ್ಥಾಪಕ. ಇದು ನೈಕಿ ಕಂಪನಿ ಶುರುವಾದ ಕಥೆ. ಫಿಲ್ ಅತ್ಯಂತ ಬುದ್ಧಿವಂತ ಹುಡುಗನೇನಲ್ಲ. ಕಾಲೇಜಿನಲ್ಲಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದನಾದರೂ ಮೊದಲ ಸ್ಥಾನ ಪಡೆಯುವಂತಹ ಓಟಗಾರನಾಗಿರಲಿಲ್ಲ. ಆದರೆ ಓರ್ವ ಉದ್ಯಮಶೀಲ ವ್ಯಕ್ತಿಯಾಗುವ ಲಕ್ಷಣಗಳು ಅವನಲ್ಲಿದ್ದವು. ಓದುವಾಗಲೇ ಫಿಲ್ ತನ್ನ ತಂದೆಯ ಪತ್ರಿಕೆಯಲ್ಲಿ ಕೆಲಸ ಮಾಡಲು ಬಯಸಿದ. ಆದರೆ ಫಿಲ್​ನ ಸಾಮರ್ಥ್ಯದ ಅರಿವಿದ್ದ ತಂದೆ ಕೆಲಸ ಕೊಡಲು ನಿರಾಕರಿಸಿದರು. ಫಿಲ್ ಅಪ್ಪನ ಪ್ರತಿಸ್ಪರ್ಧಿ ಪತ್ರಿಕೆಯಾದ ‘ಒರೆಗಾನಿಯನ್’ನಲ್ಲಿ ಕ್ರೀಡಾ ವಿಭಾಗದಲ್ಲಿ ರಾತ್ರಿಪಾಳಿಯ ಕೆಲಸಕ್...

ದಿನಕ್ಕೊಂದು ಕಥೆ 974

*🌻ದಿನಕ್ಕೊಂದು ಕಥೆ🌻* ನಾನು ಕಲ್ಕತ್ತಾ ಜೈಲಿನಿಂದ ಅಂಡಮಾನ್ ತಲುಪಿದಾಗ ನಮ್ಮನ್ನು ಉಳಿದ ರಾಜಕೀಯ ಕೈದಿಗಳೊಂದಿಗೆ ಕತ್ತಲ ಕೋಣೆಯೊಳಗೆ ತಳ್ಳಲಾಯಿತು. . ಅಲ್ಲಿ ಚಾಪೆ ಕಂಬಳಿ ಗಳಂತಹ ಯಾವುದೇ ವಸ್ತುಗಳು ಕಾಣುತ್ತಿರಲಿಲ್ಲ. ಇಲ್ಲಿ ನೀರಿನ ನಡುವೆ ಅಜ್ಞಾತ ದ್ವೀಪದಲ್ಲಿ ಕೊಳೆಯುತ್ತಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಹೇಗೆ ದೊರಕೀತು..? ಎಂಬ ಚಿಂತೆ ಕಂಬಳಿ ಚಾಪೆಯ ಚಿಂತೆಯನ್ನು ದೂರ ಮಾಡಿತ್ತು.. ಹೇಗೂ ಆಯಾಸದಿಂದ ಕಲ್ಲು ಚಪ್ಪಡಿಯ ಮೇಲೆ ಒರಗಿದಂತೆಯೇ ನಿದ್ದೆ ಬಂದಿತ್ತು. ರಾತ್ರಿ ಸುಮಾರು 12 ಗಂಟೆ ಹೊತ್ತಿಗೆ ಒಬ್ಬ ಗಾರ್ಡ್ ಕಂಬಳಿ ತೆಗೆದುಕೊಂಡು ಬಂದು ಏನೊಂದೂ ಮಾತಾಡದೆ ಮಲಗಿದ್ದವರ ಮೇಲೆಸೆದು ಹೋದ. ಸೂರ್ಯೋದಯದ ನಂತರ ತಿನ್ನಲು ನನಗೆ ಕಿಚಡಿ ದೊರಕಿತು. ಸ್ವಲ್ಪ ಸಮಯದ ನಂತರ ಕಮ್ಮಾರ ಬಂದಿದ್ದ. ಕೈಗಳಿಗೆ ತೊಡಿಸಿದ ಸಂಕೋಲೆಯನ್ನು ತುಂಡರಿಸುವಾಗ ಕೈಯ ಚರ್ಮವೇ ಕಿತ್ತುಬಂದಿತ್ತು . ಕಾಲಿನ ಬೇಡಿ ತುಂಡರಿಸುವಾಗಂತೂ ಸುತ್ತಿಗೆ ಏಟು ಕಾಲ ಗಂಟಿಗೆ ಬಡಿದಿತ್ತು. ಒಮ್ಮೆಯಂತೂ ನೋವಿನಿಂದ ತಡೆಯಲಾರದೆ ಹೇಳಿದೆ "ಕಾಲಿನ ಮೇಲೆಯೇ ಸುತ್ತಿಗೆ ಬಡಿಯುತ್ತಿದ್ದೀಯಲ್ಲಾ .. ನೀನೇನು ಕುರುಡನೇ..?" "ಕಾಲೇನು? ನಿನ್ನ ಎದೆಗೂ ಬಡಿಯಬಲ್ಲೆ.". ಎಂದು ದರ್ಪದಿಂದ ಹೇಳಿದನವ. ನನಗೆ ಕೋಪ ತಡೆಯಲಾಗಲಿಲ್ಲ. ತಲೆಯೆತ್ತಿ ಅವನ ಮುಖಕ್ಕೆ ಉಗುಳಿದೆ..! "ಮಹಿಳೆಯರಿಗೆ ಗೌರವ ಕೊಡಲು ಕಲಿತುಕೋ" ಎಂದೆ. ಜೈಲರನೂ ಅವರೊಂದಿಗಿದ್ದ .ಅವನು ದನಿ ಎತ...

ದಿನಕ್ಕೊಂದು ಕಥೆ 973

*🌻ದಿನಕ್ಕೊಂದು ಕಥೆ🌻* *ಎಂಥವನ ದಾಸ್ಯತ್ವವಿರಬೇಕು?* ನೂರಾರು ಎಕರೆ ಕೃಷಿ ಭೂಮಿ ಇರುವ ಜಮೀನ್ದಾರನೊಬ್ಬನ ಹೊಲದಲ್ಲಿ ಆ ಊರಿನ ಏಳೆಂಟು ಜನ ಕಾರ್ವಿುಕರು ಕೆಲಸ ಮಾಡುತ್ತಿದ್ದರು. ಅವರೆಲ್ಲ ಬೆಳಗ್ಗೆ ಬೇಗನೆ ಎದ್ದು ಕೆಲಸಕ್ಕೆ ಹೋಗುತ್ತಿದ್ದುದರಿಂದ ಅವರವರ ಮನೆಗಳಿಂದ ಊಟ ತೆಗೆದುಕೊಂಡು ಹೋಗಿ ಮಧ್ಯಾಹ್ನ ಅವರಿಗೆ ತಲುಪಿಸುವುದಕ್ಕಾಗಿ ಒಬ್ಬ ನೌಕರನನ್ನು ನೇಮಿಸಿದ್ದ. ಒಂದು ದಿನ ಜಮೀನ್ದಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಾಡೆಯಲ್ಲಿ ಕಾಲಿಡುತ್ತಲೇ ಅವನ ಹೆಂಡತಿ ಹೇಳಿದಳು, ‘ಈ ದಿನ ನಮ್ಮ ನೌಕರನು ಕೆಲಸಕ್ಕೆ ಬಂದಿಲ್ಲ. ಮೈಯಲ್ಲಿ ಹುಷಾರಿಲ್ಲವೆಂದು ಹೇಳಿ ಕಳುಹಿಸಿದ್ದಾನೆ’. ‘ಹೌದಾ! ಹಾಗಾದರೆ ನಮ್ಮ ಕಾರ್ವಿುಕರ ಮನೆಗಳಲ್ಲಿ ಹೆಣ್ಣುಮಕ್ಕಳು ಅಡುಗೆ ತಯಾರಿಸಿ ಬುತ್ತಿ ಕಟ್ಟಿ ನೌಕರನ ದಾರಿ ಕಾಯುತ್ತಿರಬಹುದು. ನಾನೇ ಅವರೆಲ್ಲರ ಮನೆಗಳಿಗೆ ಹೋಗಿ ಬುತ್ತಿಯನ್ನು ತೆಗೆದುಕೊಂಡು ಹೊಲಕ್ಕೆ ಹೋಗುತ್ತೇನೆ’. ‘ಇನ್ನೂ ನಿಮ್ಮ ಊಟವೂ ಆಗಿಲ್ಲ. ತಿರುಗಿ ಬರುವಷ್ಟರಲ್ಲಿ ವೇಳೆ ಆಗುತ್ತದೆ. ಈ ವಯಸ್ಸಿನಲ್ಲಿ ಆಯಾಸವಾಗುವದಿಲ್ಲವೇ?’ ‘ನನ್ನ ಊಟವನ್ನೂ ಕಟ್ಟಿಕೊಡು. ಜೊತೆಗೇ ಕೊಂಡೊಯ್ಯುತ್ತೇನೆ’ ಎಂದು ಪೇಟ ಸುತ್ತಿಕೊಂಡು ತಯಾರಾಗಿಯೇ ಬಿಟ್ಟ. ಸ್ವತಃ ಜಮೀನ್ದಾರನೇ ಬುತ್ತಿ ಕೊಂಡೊಯ್ಯಲು ಬಂದದ್ದು ನೋಡಿ ಅವರಿಗೆಲ್ಲ ಆಶ್ಚರ್ಯ. ಒಬ್ಬರು ಬಟ್ಟೆಯಲ್ಲಿ ಸುತ್ತಿದ ರೊಟ್ಟಿ- ಪಲ್ಯ, ಇನ್ನೊಬ್ಬರು ಮಡಿಕೆಯಲ್ಲಿ ಮಜ್ಜಿಗೆ, ಮತ್ತೊಬ್ಬರು ಕಾಗದದಲ್ಲಿ ಚಟ್ನಿಪು...

ದಿನಕ್ಕೊಂದು ಕಥೆ 972

*🌻ದಿನಕ್ಕೊಂದು ಕಥೆ🌻* *ಭರವಸೆಯೇ ಬದುಕಿನ ಬೆಳಕು* ಅವನೊಬ್ಬ ಚಿಕ್ಕಂದಿನಿಂದಲೂ ಸಮಸ್ಯೆಗಳನ್ನು ಕಂಡಿರದೆ ತುಂಬ ಸುಖದಲ್ಲಿಯೇ ಬೆಳೆದು ಬಂದ ಹುಡುಗ. ಒಬ್ಬನೇ ಮಗನೆಂಬ ಕಾರಣದಿಂದ ತಂದೆ-ತಾಯಿ ಯಾವ ಸಮಸ್ಯೆಯನ್ನೂ ಕಾಣಗೊಡದೆ, ಕಷ್ಟಗಳ ಕಲ್ಪನೆಯೂ ಇಲ್ಲದಂತೆ, ಮುದ್ದಿನಿಂದ ಬೆಳೆಸಿದ್ದರು. ಮುಂದೊಂದು ದಿನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಹುಡುಗನಿಗೆ ಎಲ್ಲ ಜವಾಬ್ದಾರಿಗಳು ಒಂದೇ ಬಾರಿಗೆ ಹೆಗಲೇರಿದವು. ಒಂದೊಂದೇ ಸಮಸ್ಯೆಗಳು ಎದುರಾಗಿ ಬದುಕು ಕಷ್ಟ ಎನಿಸತೊಡಗಿತು. ಇದುವರೆಗೂ ಬರೀ ಸುಖವನ್ನಷ್ಟೇ ಕಂಡು ಬೆಳೆದ ಹುಡುಗನಿಗೆ ಜವಾಬ್ದಾರಿಯನ್ನೆಲ್ಲ ನಿಭಾಯಿಸಿ ಜೀವನ ಸಾಗಿಸುವುದು ಅಸಾಧ್ಯವೆಂದೆನಿಸತೊಡಗಿತು. ಹೀಗೆ ಒಂದು ದಿನ ಬದುಕಿನ ಬಗ್ಗೆ ಎಲ್ಲ ವಿಶ್ವಾಸ, ನಂಬಿಕೆಗಳನ್ನು ಕಳೆದುಕೊಂಡು ಜೀವನೋತ್ಸಾಹವೇ ಇಲ್ಲದೆ ಕೈಚೆಲ್ಲಿ, ಊರಾಚೆಯ ಕೆರೆಯ ದಡದಲ್ಲಿ ಹೋಗಿ ಕುಳಿತ. ಶೂನ್ಯಭಾವದಿಂದ ನೀರನ್ನೇ ದೃಷ್ಟಿಸಿ ನೋಡುತ್ತಿದ್ದ ಅವನಿಗೆ ನೀರಿನಲ್ಲಿ ಬಿದ್ದು ಒದ್ದಾಡುತ್ತಿರುವ ಇರುವೆಯೊಂದು ಕಣ್ಣಿಗೆ ಕಂಡಿತು. ಈಜು ಪಾದಗಳಿಲ್ಲದಿದ್ದರೂ ನೀರಿನಲ್ಲಿ ಚಲಿಸುವ ಸಾಮರ್ಥ್ಯವಿಲ್ಲದಿದ್ದರೂ ಆ ಇರುವೆ ತನ್ನ ಉಳಿವಿಗಾಗಿ ಹೋರಾಡುತ್ತಿತ್ತು. ಬೀಸುತ್ತಿರುವ ಗಾಳಿಗೆ ಅಂಜದೆ, ನೀರಿನ ರಭಸಕ್ಕೆ ಹೆದರದೆ ತುಂಬ ಕಷ್ಟಪಟ್ಟು ದಡ ಸೇರಲು ಹವಣಿಸುತ್ತಿತ್ತು. ಕೊನೆಗೂ ನಿರಂತರ ಹೋರಾಟದ ಫಲವಾಗಿ ಇರುವೆ ದಡವನ್ನು ಸೇರಿತು. ಇರುವೆಯನ್ನು ನೋಡಿದ ಹುಡುಗನಿಗೆ ಆಶ್ಚ...

ದಿನಕ್ಕೊಂದು ಕಥೆ 971

*🌻ದಿನಕ್ಕೊಂದು ಕಥೆ🌻* *ನಿಮ್ಮನ್ನು ನೀವು ಸಾಬೀತು ಮಾಡಬೇಕಿರುವುದು ಎಲ್ಲಿ ಗೊತ್ತೇ?* ಒಂದು ಸ್ಪರ್ದೆ ಏರ್ಪಾಟಾಗಿತ್ತು ," ಪ್ರತಿಯೊಬ್ಬರೂ ನೀವು ಸಾಕಿರುವ ಪ್ರಾಣಿಯನ್ನು ಕರೆತನ್ನಿ ಯಾವುದು ವೇಗವಾಗಿ ಓಡುತ್ತದೆಯೋ ಅದಕ್ಕೆ ಪ್ರಶಸ್ತಿ ಕೊಡುತ್ತೇವೆ" ಎಂದರು. ಊರವರೆಲ್ಲರೂ ತಮ್ಮತಮ್ಮ ಮನೆಯಲ್ಲಿದ್ದ ನಾಯಿಗಳನ್ನು ಹಿಡಿದು ತಂದು,ಈಗ ವೇಗವಾಗಿ ಓಡಿ ಸ್ಪರ್ದೆ ಗೆಲ್ಲಬೇಕೆಂದು ಅವರವರ ನಾಯಿಗೆ ಹೇಳಿಕೊಟ್ಟರು. ಅದರಲ್ಲೊಬ್ಬ ಸಾಕಿದ ಚಿರತೆಯನ್ನೂ ಕೂಡ ತಂದಿದ್ದ! ಸೇರಿದ್ದ ಸಾರ್ವಜನಿಕರು ದಿಗ್ಭ್ರಮೆಯಾಗಿದ್ದರು,'ಚಿರತೆಯ ಸರಿಸಮನಾಗಿ ಈ ನಾಯಿಗಳು ಓಡುವುದುಂಟಾ?' ಎಂದು. ಸ್ಪರ್ದೆ ಶುರುವಾದದ್ದೇ ತಡ ಎಲ್ಲಾ ನಾಯಿಗಳೂ ದೌಡಾಯಿಸಿದವು,ಧೂಳೆಬ್ಬಿಸಿಕೊಂಡು ಪೇರಿ ಕಿತ್ತವು,ಮೊದಲ ಸ್ಥಾನ ಪಡೆಯಲು ಉಲ್ಕಾ ವೇಗ ಕಾಪಾಡುತ್ತಾ ಓಡತೊಡಗಿದವು ಆದರೆ ಚಿರತೆ ಮಾತ್ರ ಉಹ್ಞೂಂ, ಅಲುಗಾಡಲಿಲ್ಲ,ನಿರುಮ್ಮಳವಾಗಿ ಸುಮ್ಮನೆ ಕೂತಿತ್ತು. ಅದನ್ನು ನೋಡಿ ಸಿಟ್ಟಾದ ಮಾಲೀಕ ಚಿರತೆಯ ಬಳಿ ಹೋಗಿ 'ನಿನಗೇನು ಬರಬಾರದ್ದು ಬಂದಿದೆ? ಯಾಕೆ ಹೀಗೆ ಮಾಡಿದೆ? ಓಡಿದ್ದಿದ್ದರೆ ನೀನೇ ಅಲ್ಲವಾ ಗೆಲ್ಲುತ್ತಿದ್ದದ್ದು' ಎಂದ. ಆಗ ಚಿರತೆಯು 'ಕೆಲವು ಸಲ ಎಲ್ಲರಿಗಿಂತ ನಾವೇ ಶ್ರೇಷ್ಟ ಎಂದು ಪ್ರತಿಪಾದಿಸಹೊರಡುವುದು ಅನೇಕ ಸಲ ನಮಗೆ ನಾವೇ ಅವಮಾನ ಮಾಡಿಕೊಂಡದ್ದಕ್ಕೆ ಸಮಾನವಾಗುತ್ತದೆ,ಅದಲ್ಲದೆ ಅನಗತ್ಯ ಜಾಗದಲ್ಲಿ ನಮ್ಮನ್ನು ನಾವು ಸಾಬೀತುಪಡಿಸಬೇಕಾದ ಅವಶ್ಯ...

ದಿನಕ್ಕೊಂದು ಕಥೆ 970

*🌻ದಿನಕ್ಕೊಂದು ಕಥೆ🌻* *ಕೆಲಸದಲ್ಲಿ ಶ್ರದ್ಧೆ ಇರಲಿ.*   ಅದೊಂದು ದಿನ ಯೋಗಸಂಸ್ಥೆಯ ಕಾರ್ಯಕ್ರಮಕ್ಕೆ ನಾನು ಮತ್ತು ಮೈಸೂರಿನ ಪ್ರಸಿದ್ಧ ಯೋಗ ಗುರುಗಳು ಹೋಗಬೇಕಿತ್ತು. ಯೋಗಗುರುಗಳನ್ನು ಮೆಜೆಸ್ಟಿಕ್​ನ ರೈಲು ನಿಲ್ದಾಣದಲ್ಲಿ ಬರ ಮಾಡಿಕೊಂಡು ಇನ್ನೇನು ಟ್ಯಾಕ್ಸಿ ಅಥವಾ ಆಟೋದಲ್ಲಿ ಹೋಗಬೇಕೆಂದುಕೊಂಡಾಗ ಟ್ಯಾಕ್ಸಿಯವರು ಬರೋಲ್ಲ ಅಂದ್ರು. ಮತ್ತು ಆಟೋದವರ ಹತ್ತಿರ ಕೇಳಿದಾಗ ಮೂರರಿಂದ ನಾಲ್ಕು ಪಟ್ಟು ಜಾಸ್ತಿ ಹಣ ಕೇಳಿದರು. ನಾವು ಇನ್ನೇನು ಅಲ್ಲೇ ಬಸ್ ನಿಲ್ದಾಣದಿಂದ, ಬಸ್ ಮೂಲಕ ಪ್ರಯಾಣ ಮಾಡಬೇಕು ಅನ್ನುವಷ್ಟರಲ್ಲಿ ಮತ್ತೊಬ್ಬ ಆಟೋದವರು ಬಂದು ‘ನೀವು ಎಲ್ಲಿಗೆ ಹೋಗಬೇಕು’ ಎಂದು ವಿಚಾರಿಸಿದರು. ನಮ್ಮ ಸ್ಥಳ ತಿಳಿಸಿದಾಗ ಆ ಆಟೋದವ ‘ಬನ್ನಿ ಸ್ವಾಮಿ ನಾನು ಕರೆದುಕೊಂಡು ಹೋಗುವೆ’ ಅಂದರು. ಹಣದ ಬಗ್ಗೆ ವಿಚಾರಿಸಿದಾಗ, ‘ಸ್ವಾಮಿ ನನಗೆ ಒಂದು ರೂಪಾಯಿಯೂ ಜಾಸ್ತಿ ಬೇಡ. ಮೀಟರ್ ಪ್ರಕಾರ ಎಷ್ಟು ಆಗುತ್ತೋ ಅಷ್ಟೇ ಕೊಡಿ’ ಅಂದ್ರು. ಆಟೋ ಏರಿ ಹೊರಟೆವು. ಹಾಗೇ ಮಾತಾಡ್ತಾ ಅವರಿಗೆ ಕೇಳಿದೆವು-‘ಎಷ್ಟು ವರ್ಷಗಳಿಂದ ಆಟೋ ಓಡಿಸುತ್ತಿದ್ದಿರಿ’ ಅಂತ. ‘ಸ್ವಾಮಿ ನಾನು 30 ವರ್ಷದಿಂದ ಆಟೋ ಓಡಿಸಿಕೊಂಡೇ ಜೀವನ ಸಾಗಿಸುತ್ತಿರುವೆ. ಈಗ ನನಗೆ 65 ವರ್ಷ. ನಾನು ಇಲ್ಲಿಯವರೆಗೂ ಪ್ರಯಾಣಿಕರಿಂದ ಅನ್ಯಾಯವಾಗಿ ಜಾಸ್ತಿ ಹಣ ತೊಗೊಂಡಿಲ್ಲ. ಮೀಟರ್ ಪ್ರಕಾರ ಎಷ್ಟಾಗುತ್ತೋ ಅಷ್ಟು ಮಾತ್ರ ಪಡೆಯುತ್ತೇನೆ. ನನಗೆ ಮೂರು ಜನ ಮಕ್ಕಳು. ಒಬ್ಬ ಸಿವಿ...

ದಿನಕ್ಕೊಂದು ಕಥೆ 969

*🌻ದಿನಕ್ಕೊಂದು ಕಥೆ🌻* *ಸೋಲು ಬದುಕಿನ ಕೊನೆಯಲ್ಲ, ಅದು ಗೆಲುವಿನ ಮುನ್ನುಡಿ* ನಮ್ಮೆಲ್ಲರಿಗೂ ಇಂದು ಬೇಕಾಗಿರುವುದು ಸಮಸ್ಯೆಗಳಿಲ್ಲದ ಜೀವನ. ಅದು ಅಸಾಧ್ಯ ಎಂದು ಗೊತ್ತಿದ್ದರೂ ನಾವು ಸಮಸ್ಯೆಗಳನ್ನು ಇಷ್ಟಪಡುವುದಿಲ್ಲ. ಆದರೆ ಸಮಸ್ಯೆಗಳು ಮಾರುವೇಷದಲ್ಲಿ ಬರುವ ಅವಕಾಶಗಳು. ಕಡಿದು ಕೆತ್ತಲ್ಪಟ್ಟ ಕಲ್ಲೇ ವಿಗ್ರಹವಾಗುವುದೆಂಬ ಅರಿವಿದ್ದರೂ ನೋವೇ ಆಗದೇ ಮೂರ್ತಿಯಾಗಬೇಕೆಂದು ಬಯಸುವವರೇ ಜಾಸ್ತಿ. ಏಕೆಂದರೆ ಈ ಜಗತ್ತಿನಲ್ಲಿ ಸಮಸ್ಯೆಗಳೇ ಸಾಧನೆಗೆ ಮೂಲವೆಂಬುದರ ಅರಿವಿದ್ದರೂ ಹಳಹಳಿಸುವವರೇ ಹೆಚ್ಚು. ಸಮಸ್ಯೆ ದೊಡ್ಡದಾದಷ್ಟೂ ಪರಿಹಾರ ದೊಡ್ಡದಿರುತ್ತದೆ. ಪರಿಹಾರ ದೊಡ್ಡದಾದಷ್ಟೂ ನಾವು ಹರಿಸುವ ಬೆವರು, ಪಡುವ ಕಷ್ಟ ಹೆಚ್ಚಾಗಿರುತ್ತದೆ. ಹಿರಿದನ್ನು ಸಾಧಿಸುವ ಬಯಕೆಯಿದ್ದವರು ಏರಿಳಿತಗಳ ದುರ್ಗಮ ಹಾದಿಯಲ್ಲಿ ಸಾಗಲೇಬೇಕು. ಅಂದಾಗ ಮಾತ್ರ ಯಶಸ್ಸು ಕೂಡ ದೊಡ್ಡ ಪ್ರಮಾಣದಲ್ಲಿ ಸಿಗುತ್ತದೆ. ಆದರೆ ನಾವಿದನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಆದರೆ ನೆನಪಿರಲಿ, ತೊಂದರೆಗಳನ್ನು, ಕಷ್ಟಗಳನ್ನು ಅವಕಾಶ ಎಂದು ನೋಡಿದವರೇ ಇಂದು ಜಗತ್ತಿನಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿಲಿನ ಧಗೆಗೆ ‘ಅಬ್ಬಾ ದರಿದ್ರ ಬಿಸಿಲು’ ಎನ್ನದವರುಂಟೇ? ಆದರೆ ಕೂಲರ್, ಎಸಿ ಸಂಶೋಧಿಸಿ ಆ ಸಮಸ್ಯೆಗೆ ಯಾರೋ ಪರಿಹಾರ ಕಂಡುಹಿಡಿದರು. ಚಳಿಗಾಲವನ್ನು ಶಪಿಸುವವರು ಶಪಿಸುತ್ತಲೇ ಇದ್ದರು. ಆದರೆ ಯಾರೋ ಒಬ್ಬ ಹೀಟರ್ ಕಂಡುಹಿಡಿದ. ಸೊಳ್ಳೆಗಳು ಯಾರಿಗೆ ಸಮಸ್ಯೆಯಲ್ಲ? ಎಲ್ಲರೂ ಗೊಣಗುತ್ತಲ...

ದಿನಕ್ಕೊಂದು ಕಥೆ 968

*ದಿನಕ್ಕೊಂದು ಕಥೆ ಒಂದು ದಿನ ಖ್ಯಾತ ಚಿತ್ರ ಕಲಾವಿದ "ರಾಜಾ ರವಿವರ್ಮ" ನಗರ ಸಂಚಾರ ಮಾಡುವಾಗ ಒಬ್ಬ ಸುಂದರ ಯುವತಿ ಅವನನ್ನು ಗುರುತಿಸಿ, ನೀವು ನನಗಾಗಿ ಒಂದು ಚಿಕ್ಕ ಚಿತ್ರವನ್ನು ಬಿಡಿಸಿ ಕೊಡುವಂತೆ ಮನವಿ ಮಾಡಿಕೊಳ್ಳುತ್ತಾಳೆ.!!* *ರವಿವರ್ಮ ಆಶ್ಚರ್ಯ ವ್ಯಕ್ತಪಡಿಸಿ, ಈ ಕೂಡಲೇ ಅದೂ ಬಜಾರ {ರಸ್ತೆ} ದಲ್ಲಿ ಹೇಗೆ ಸಾಧ್ಯ? ಪ್ರಶ್ನಿಸಿದರು... ಮುಂದಿನ ದಿನಗಳಲ್ಲಿ ಭೇಟಿ ಯಾದಾಗ ಖಂಡಿತಾ ಬಿಡಿಸಿ ಕೊಡುತ್ತೇನೆ ಎಂದರೂ, ಪಟ್ಟು ಬಿಡದೆ ಈಗಲೇ ಬೇಕೆಂದು ಹಠ ಹಿಡಿದು ಅಂಗಲಾಚಿದಾಗ,, ಬೇರೆ ದಾರಿ ಕಾಣದೆ ಆ ಕ್ಷಣಕ್ಕೆ ಒಂದು ಚಿತ್ರವನ್ನು ಬಿಡಿಸಿ ಕೊಡುವಾಗ... ನಗುತ್ತಾ ಹೇಳುತ್ತಾನೆ... ಇದರ ಬೆಲೆ ಕೋಟಿ ರೂಪಾಯಿಗೂ ಅಧಿಕ, ಜಾಗೃತೆ ಇಂದ ಕಾಪಾಡಲು ಹೇಳಿ ಹೋಗುತ್ತಾನೆ.!!* *ಆ ಯುವತಿ ಆಶ್ಚರ್ಯದಿಂದ ಚಿತ್ರ ನೋಡಿ, ಮರುದಿನವೇ ಪೇಟೆಗೆ ಹೋಗಿ ಪ್ರಮುಖ ಚಿತ್ರಕಾರರ ಚಿತ್ರ {Paintings} ಗಳನ್ನು ಮಾರುವ ಒಬ್ಬ ವ್ಯಕ್ತಿಯ ಹತ್ತಿರ ಹೋಗಿ ರವಿವರ್ಮ ಚಿತ್ರಿಸಿ ಕೊಟ್ಟ ಚಿತ್ರದ ಬೆಲೆ ಎಷ್ಟಿರಬಹುದು?? ಎಂದು ಕೇಳುತ್ತಾಳೆ... ಅವನೂ ಸಹ ರವಿವರ್ಮ ಹೇಳಿದ ಮಾತನ್ನೇ ಹೇಳುತ್ತಾನೆ.. ಕೋಟಿ ರೂಪಾಯಿಗೂ ಹೆಚ್ಚು ಎಂದು.!! ಆ ಚಿತ್ರದ ಬೆಲೆ ಕೇಳಿ ಯುವತಿಯ ಬಾಯಿಂದ ಮಾತೇ ಹೊರಡಲಿಲ್ಲ,, ಆ ತಕ್ಷಣವೇ ಮತ್ತೆ ರವಿವರ್ಮ ರನ್ನು ಭೇಟಿಯಾಗಲು ಹೊರಟಳು...* *ರವಿವರ್ಮರನ್ನು ಭೇಟಿಯಾಗಿ... ನೀವು ಹತ್ತೇ ನಿಮಿಷದಲ್ಲಿ ಚಿತ್ರಿಸಿದ ಈ ಚಿತ್ರ ಇಷ್ಟೊಂದು ಬೆಲೆ ಬಾಳುವ...

ದಿನಕ್ಕೊಂದು ಕಥೆ 967

*🌻ದಿನಕ್ಕೊಂದು ಕಥೆ🌻* *ಬೆನ್ನು ಮೂಳೆ ಮುರಿದರೂ ಸಮಾಜಕ್ಕೆ ಬೆನ್ನೆಲುಬಾದರು!* ಇಂಥ ಬದುಕಿಗೆ, ಆ ಸ್ಥೈರ್ಯದ ಪರಿಗೆ ನಮೋನಮಃ! ಕನ್ಯಾಡಿ ಅಂದಾಕ್ಷಣ ನಮಗೆಲ್ಲ ಥಟ್ಟನೇ ನೆನಪಾಗೋದು ಶ್ರೀರಾಮನ ಕ್ಷೇತ್ರ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಟ್ಟಗ್ರಾಮ ಕನ್ಯಾಡಿ ಶ್ರೀರಾಮನ ಸುಂದರ ದೇಗುಲದಿಂದ ಪ್ರಸಿದ್ಧ. ಅದೇ ಊರಲ್ಲಿ ಶ್ರೀರಾಮನ ಮೌಲ್ಯಗಳು ಸಾಕ್ಷಾತ್ಕಾರಗೊಂಡು, ಸೇವೆಯ ಪುಟ್ಟ ಸಾಮ್ರಾಜ್ಯವೊಂದು ಸ್ಥಾಪಿತವಾಗಿದೆ. ಅದು ಸ್ಥಾಪಿಸಿರುವ ವಿಕಾಸ ಮಾದರಿ ಮತ್ತು ಆದರ್ಶಗಳು ಅನುಕರಣೀಯ. ಗಾಲಿಕುರ್ಚಿಯಲ್ಲೇ ಕೂತು, ಪಾದರಸದಂತೆ ಕಾರ್ಯನಿರ್ವಹಿಸುವ ವಿನಾಯಕ್ ರಾವ್ (ಕರಾವಳಿ ಜನರ ಪಾಲಿಗೆ ಅವರು ವಿನಾಯಕಣ್ಣ ಎಂದೇ ಖ್ಯಾತರು) ಇದರ ಹಿಂದಿನ ಶಕ್ತಿ. ಆರೋಗ್ಯ, ಶಿಕ್ಷಣ, ಸ್ವಾವಲಂಬನೆ, ಮಹಿಳಾ ಸಬಲೀಕರಣ, ಸುಸ್ಥಿರ ಅಭಿವೃದ್ಧಿ, ನವೀನ ಕೃಷಿ ಪ್ರಯೋಗ, ಸಂಸ್ಕೃತಿಯ ವೈಶಿಷ್ಟ್ಯ… ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಕನ್ಯಾಡಿ ಸೇರಿ ಬೆಳ್ತಂಗಡಿ ತಾಲೂಕು ಸಾಧಿಸಿರುವ ಅಭಿವೃದ್ಧಿ ರಾಜ್ಯಕ್ಕೇ ದಿಕ್ಸೂಚಿ. ಎರಡು ದಶಕಗಳ ಈ ಬದಲಾವಣೆಯ ಪಯಣ ರೋಚಕವಾದದ್ದು. ಬದುಕೇ ಸಾಕು ಅಂದುಕೊಂಡಿದ್ದ ವ್ಯಕ್ತಿ ತನ್ನ ನೋವು, ಕಷ್ಟವನ್ನು ಮೀರಿ ನಿಲ್ಲಲು ಸಮಾಜಮುಖಿಯಾದಾಗ ಬದಲಾದದ್ದು ಬರೀ ಅವರ ಬದುಕಲ್ಲ, ಸಾವಿರಾರು ಜನರ ಜೀವನ. ಕನ್ಯಾಡಿಯ ಕೃಷಿ ಪರಿವಾರದಲ್ಲಿ ಜನಿಸಿದ ವಿನಾಯಕ್ ರಾವ್​ರದ್ದು ದೊಡ್ಡ ಕುಟುಂಬ. ಎಂಟುಜನ ಮಕ್ಕಳಲ್ಲಿ (ಮೂರು ಜನ ಅಣ್...

ದಿನಕ್ಕೊಂದು ಕಥೆ 966

*🌻ದಿನಕ್ಕೊಂದು ಕಥೆ🌻* *ಕಾರ್ಗಿಲ್ ಹೀರೋ, ಕೃತಕ ಕಾಲು ಮತ್ತು ಸಾಲು ಸಾಲು ದಾಖಲೆಗಳು!* *ಸತ್ ಶ್ರೀ ಅಕಾಲ್!* ಬದುಕಿನಲ್ಲಿ ಚಾಲೆಂಜ್ ಅಂತ ತೆಗೆದುಕೊಂಡರೆ ಹೇಗಿರಬೇಕು? ಮೇಜರ್ ದೇವೇಂದ್ರ ಪಾಲ್ ಸಿಂಗ್ ಬದುಕಿನಂತಿರಬೇಕು! ಸೇನೆ ಸೇರಬೇಕೆಂಬ ಕನಸಿಗೆ ನೂರೆಂಟು ಅಡ್ಡಿಗಳು ಬಂದರೂ, ಜತೆಯಲ್ಲಿರುವವರು ‘ಸಾಕಪ್ಪ ಬಿಡು ಎಷ್ಟು ಅಂತ ಪ್ರಯತ್ನ ಪಡ್ತೀಯ’ ಅಂತ ಹೇಳಿದ ಮೇಲೂ ಆ ಎಲ್ಲ ಸವಾಲುಗಳನ್ನು ಗೆದ್ದು ಸೇನೆ ಸೇರಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡುವಾಗ ಈ ತರುಣ ಸಿಂಹಕ್ಕೆ ಬರೀ 25 ವರ್ಷ. ಪಾಕಿಸ್ತಾನದ ಕಡೆಯಿಂದ ನಡೆದ ಶೆಲ್ ದಾಳಿಯಲ್ಲಿ ಕಾಲು ಕಳೆದುಕೊಂಡ ಬಳಿಕ ಜೀವನ ಒಮ್ಮೆ ನಿಂತ ನೀರಿನಂತಾದಾಗ ಸಿಂಗ್ ಮಾಡಿದ್ದೇನು ಗೊತ್ತೆ? ‘ಕಮಾನ್, ಕಷ್ಟಗಳೇ ಬನ್ನಿ, ಸವಾಲುಗಳೇ ಬನ್ನಿ, ನಾನು ಕಾಲು ಕಳೆದುಕೊಂಡಿದ್ದು ಒಳ್ಳೆಯದೇ ಆಯಿತು, ಯಾವ ಕಷ್ಟ ಬಂದರೂ ಹೀಗೆ ನಗುತ್ತಿರುತ್ತೇನೆ, ಇದು ನನ್ನ ಚಾಲೆಂಜ್…’ ಅಂತ ಹೇಳಿ ‘ಅಭಾವ್ ಕೀ ಜಿಂದಗಿ ಮೇ ಭೀ ಜೋ ರಹೆಂಗೇ ಪ್ರಸನ್ನ, ಸಚ್ಚೆ ಮಾಯ್ನೆ ಮೇ ವೋಹಿ ಸರ್ವಗುಣ ಸಂಪನ್ನ…’ (ಕೊರತೆಗಳ ಬದುಕಿನಲ್ಲಿ ಯಾರು ಪ್ರಸನ್ನ-ಸಂತೋಷವಾಗಿ ಇರುತ್ತಾರೋ ಅವರೇ ನಿಜಾರ್ಥದಲ್ಲಿ ಸರ್ವಗುಣ ಸಂಪನ್ನರು) ಅಂತ ಕರೆ ನೀಡಿದರು. ಮುಂದೇನಾಯಿತು ಗೊತ್ತೆ? ಭಾರತದ ಮೊದಲ ಬ್ಲೇಡ್ ರನ್ನರ್, ‘ಭಾರತದ ಮೊದಲ ಸೋಲೋ ಸ್ಕೈಡ್ರೖೆವರ್’ (ಅಂಗವೈಕಲ್ಯ ಹೊಂದಿದ), ಹಾಫ್ ಮ್ಯಾರಥಾನ್​ನಲ್ಲಿ ನಾಲ್ಕು ಲಿಮ್ಕಾ ದಾಖಲೆಗಳು, ರಾಷ್ಟ್...

ದಿನಕ್ಕೊಂದು ಕಥೆ 965

*🌻ದಿನಕ್ಕೊಂದು ಕಥೆ🌻* *ಆಲೋಚಿಸಿ ತೀರ್ಮಾನಿಸಿ ಅಪಾರ ಲಾಭ ಕಟ್ಟಿಟ್ಟಬುತ್ತಿ…* ಸಂನ್ಯಾಸಿಯೊಬ್ಬ ಏಕಾಂಗಿಯಾಗಿ ಧ್ಯಾನಮಾಡಬೇಕೆಂದು ತನ್ನ ಆಶ್ರಮದಿಂದ ದೂರಹೋಗಲು ನಿರ್ಧರಿಸುತ್ತಾನೆ. ಏಕೆಂದರೆ ಆತ ಬಹುಕೋಪಿಷ್ಟ. ಆಶ್ರಮದಲ್ಲಿ ಆತನ ಧ್ಯಾನಕ್ಕೆ ತೊಂದರೆಯಾಗುತ್ತಿರುತ್ತದೆ. ಯಾರಾದರೂ ಬರುವುದು, ಈತ ಅವರ ಮೇಲೆ ಕೋಪಗೊಳ್ಳುವುದು ನಡೆಯುತ್ತಲೇ ಇರುತ್ತದೆ. ದೋಣಿಯನ್ನೇರಿ ಕೆರೆಯ ನಡುವೆ ನಿಲ್ಲಿಸಿ ಕಣ್ಣುಮುಚ್ಚಿ ಧ್ಯಾನಕ್ಕೆ ತೊಡಗುತ್ತಾನೆ. ಕೆಲವು ಗಂಟೆಗಳು ನಿಶ್ಶಬ್ದವಾಗಿ ಸರಿದುಹೋಗುತ್ತವೆ. ಇದ್ದಕ್ಕಿದ್ದಂತೆ ಇನ್ನೊಂದು ದೋಣಿ ಬಂದು ಸಂನ್ಯಾಸಿಯ ದೋಣಿಗೆ ಡಿಕ್ಕಿಹೊಡೆದ ಅನುಭವವಾಗುತ್ತದೆ. ಕಣ್ಣುಮುಚ್ಚಿದ್ದ ಸಂನ್ಯಾಸಿಗೆ ತನ್ನ ಕೋಪ ಹೆಚ್ಚಾಗುತ್ತಿರುವ ಅನುಭವವಾಗುತ್ತದೆ. ಏಕಾಗ್ರತೆಗೆ ಭಂಗತಂದ ದೋಣಿಯಾತನನ್ನು ಚೆನ್ನಾಗಿ ಬೈದುಬಿಡಬೇಕು ಎಂದುಕೊಳ್ಳುತ್ತ ಸಿಟ್ಟಿನಿಂದ ಕಣ್ಣುಬಿಡುತ್ತಾನೆ. ಆದರೆ, ಎದುರಿನ ದೋಣಿ ಖಾಲಿ ಇರುತ್ತದೆ. ನಾವಿಕನಿಲ್ಲದ ಆ ದೋಣಿ ಹಗ್ಗ ಬಿಚ್ಚಿಹೋಗಿ ತಾನಾಗಿಯೇ ತೇಲುತ್ತ ತೇಲುತ್ತ ಬಂದು ಈ ದೋಣಿಗೆ ಡಿಕ್ಕಿ ಹೊಡೆಯಿತು. ಆ ಸಂನ್ಯಾಸಿಗೆ ಜ್ಞಾನೋದಯವಾಗುತ್ತದೆ. ‘ಕೋಪವೆಂಬುದು ತನ್ನೊಳಗೇ ಇದೆಯೇ ಹೊರತು ಹೊರಗಡೆಯಿಂದ ಬರುವುದಲ್ಲ; ಹೊರಗಡೆಯ ವಸ್ತುವೊಂದು ತಾಕುವುದರಿಂದ ತನ್ನೊಳಗಿರುವ ಕೋಪ ಜಾಗೃತಗೊಳ್ಳುತ್ತದೆ’ ಎಂಬ ಸತ್ಯವನ್ನು ಆತ ಅರಿತುಕೊಳ್ಳುತ್ತಾನೆ. ಆಗಿನಿಂದ ಆತ ಯಾರಾದರೂ ಕಿರಿಕಿರಿಯಾಗುವಂತೆ ವರ್ತಿಸಿದರೆ, ಕೋಪ ಬ...