Posts

ದಿನಕ್ಕೊಂದು ಕಥೆ 1058

*🌻ದಿನಕ್ಕೊಂದು ಕಥೆ*🌻 ನಮ್ಮ ಜೀವನಕ್ಕೊಂದು ಮಾದರಿ ಪಾಠ.... *ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ  ಸಾಹಿತಿಗಳು.*..!!🌟 *ಗಳಗನಾಥರು:-* 🙏🏻 ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.ಸತ್ತಮೇಲೆ ಅಂತ್ಯಸಂಸ್ಕಾರ ಮಾಡಲೂ ಇವರ ಮನೆಯವರ ಬಳಿ ಹಣವಿರಲಿಲ್ಲ. ಪುಸ್ತಕಗಳಿಂದಲೇ ಇವರ ಅಂತ್ಯಸಂಸ್ಕಾರ  ಮಾಡಬೇಕಷ್ಟೇಯೆಂದು ಅವರ ಮನೆಯವರು ಅ ಸಂದರ್ಭದಲ್ಲಿ ನೊಂದುಕೊಂಡು ನುಡಿದಿದ್ದರು. *ವಿ.ಸೀತಾರಾಮಯ್ಯ*🙏🏻  ಇವರು ದಿನಾ ಬೆಳಿಗ್ಗೆ ಹೊಟೇಲಿನಿಂದ ಹತ್ತು ಇಡ್ಲಿ ತರಿಸುತ್ತಿದ್ದರಂತೆ.ಅದರಲ್ಲಿ ಒಂದು ಇಡ್ಲಿಯನ್ನಷ್ಟೇ ತಾವು ತಿಂದು ಉಳಿದ ಒಂಬತ್ತು ಇಡ್ಲಿಯನ್ನು ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಿದ್ದರು.ಇದನ್ನು ಅವರು ತಮ್ಮ ಬದುಕಿನುದ್ದಕ್ಕೂ ದಿನಚರಿಯಂತೆ ಪಾಲಿಸುತ್ತಿದ್ದರು. *ದ.ರಾ.ಬೇಂದ್ರೆ:-*🙏🏻 ಇವರೊಮ್ಮೆ ದಾರಿಯಲ್ಲಿ ನಡೆದುಕೊಂಡು ಬರಬೇಕಾದರೆ ಚಪ್ಪಲಿ ಕಿತ್ತುಹೋಗುತ್ತದೆ.ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಸ್ವಲ್ಪ ದೂರ ನಡೆದುಕೊಂಡು ಬಂದಮೇಲೆ,ದಾರಿಪಕ್ಕ ಕೂತಿದ್ದ ಚಮ್ಮಾರ ಸಿಗುತ್ತಾನೆ.ಬಿರುಬಿಸಿಲು ಆಗಿದ್ದರಿಂದ ಬೇಂದ್ರೆ ಅಜ್ಜ ಛತ್ರಿಬಿಡಿಸಿಕೊಂಡಿದ್ದರು.ಚಮ್ಮಾರ ತಮ್ಮ  ಚಪ್ಪಲಿಯನ್ನು ರಿಪೇರಿ ಮಾಡುವಾಗ ಅವರು ತಮ್ಮ ಛತ್ರಿಯನ್ನು ಬಿಸಿಲಲ್ಲಿದ್ದ ಚಮ್ಮಾರನಿಗೆ ಹಿಡಿದಿದ್ದರು..! ಇದರಿಂದ ಮುಜುಗರಗೊಂಡ ಚಮ್ಮಾರ,'ನಾನು ದಿನಾ ಬಿಸಿಲಲ್ಲೇ ಕೂತು ಕೆಲಸ ಮಾಡು...

ದಿನಕ್ಕೊಂದು ಕಥೆ 1057

*🌻ದಿನಕ್ಕೊಂದು ಕಥೆ🌻* *ಸಮುದ್ರದ ಚಿಪ್ಪು ಹಣವಾದರೆ?* ಒಬ್ಬ ಪುಟ್ಟ ಬಾಲಕ ತನ್ನ ತಂಗಿಯೊಂದಿಗೆ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ. ಹಿಂತಿರುಗಿ ನೋಡಿದರೆ ತಂಗಿ ಕಾಣುತ್ತಿಲ್ಲ. ಅವಳು ಒಂದು ಆಟಿಕೆಯ ಅಂಗಡಿಯ ಮುಂದೆ ನಿಂತು ಸುಂದರವಾದ ಗೊಂಬೆಯೊಂದನ್ನು  ನೋಡುತ್ತಿದ್ದಾಳೆ. ತಂಗಿಯ ಆಸೆಯನ್ನು ಅರಿತು  ಒಬ್ಬ ಜವಾಬ್ದಾರಿಯುತ ಅಣ್ಣನಾಗಿ ಆ ಗೊಂಬೆಯನ್ನು ತಂಗಿಗೆ ತೆಗೆದುಕೊಡುತ್ತಾನೆ.  ತಂಗಿಗೆ ಬಹಳ ಖುಷಿಯಾಗುತ್ತದೆ.   ಬಾಲಕನ ವಯಸ್ಸಿಗೂ ಮೀರಿದ ವರ್ತನೆಯನ್ನು ಅಂಗಡಿ ಮಾಲಕ ಬಹಳ ಕುತೂಹಲದಿಂದ ಗಮನಿಸುತ್ತಿದ್ದ. ಬಾಲಕ ತಂಗಿಯ ಕೈಹಿಡಿದುಕೊಂಡು  ಕ್ಯಾಶ್ ಕೌಂಟರ್ ಬಂದು ಗೊಂಬೆಯ ಕ್ರಯ ಕೇಳುತ್ತಾನೆ.. ಬದುಕಿನಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದ್ದ ಆ ಶಾಂತ ಸ್ವಭಾವದ ಅಂಗಡಿ ಮಾಲಕ ಬಾಲಕನಲ್ಲಿ ಕೇಳುತ್ತಾನೆ.  "ನಿನಗೆ ಏನು ಕೊಡಬಹುದು?".ಆಗ ಆ ಬಾಲಕ ಸಮುದ್ರದ ಬದಿಯಲ್ಲಿ ತಾನು ಸಂಗ್ರಹಿಸಿದ್ದ ಚಿಪ್ಪನ್ನು  ತನ್ನ ಕಿಸೆಯಿಂದ  ತೆಗೆದು   ಕೊಡುತ್ತಾನೆ. ಅಂಗಡಿ ಮಾಲಿಕ ನೋಟುಗಳನ್ನು ಎಣಿಸಿದಂತೆ ಎಲ್ಲಾ ಚಿಪ್ಪುಗಳನ್ನು ಎಣಿಸುತ್ತಾನೆ. ನಂತರ ಅದರಲ್ಲಿ 4 ಚಿಪ್ಪುಗಳನ್ನು ಮಾತ್ರ ತಗೊಂಡು ಉಳಿದ ಎಲ್ಲಾ ಚಿಪ್ಪುಗಳನ್ನು ಬಾಲಕನಿಗೆ ವಾಪಾಸು ಕೊಡುತ್ತಾನೆ. ಬಾಲಕ ಉಳಿದ ಚಿಪ್ಪುಗಳನ್ನು ತನ್ನ ಕಿಸೆಗೆ ತುಂಬಿಸಿಕೊಂಡು ತಂಗಿಯೊಂದಿಗೆ ತುಂಬಾ ಸಂತೋಷದಿಂದ ಅಂಗಡಿಯಿಂದ ಹೊರ ನಡೆಯುತ್ತಾನೆ...

ದಿನಕ್ಕೊಂದು ಕಥೆ 1056

*🌻ದಿನಕ್ಕೊಂದು ಕಥೆ🌻*                                                                     *ದೇವರಾದ ಡಾಕ್ಟರ್*                           ಅರ್ಧರಾತ್ರಿಯ ಸಮಯ. ಆ ಡಾಕ್ಟರ್ ತಮ್ಮ ಕೆಲಸವೆಲ್ಲಾ ಮುಗಿಸಿ ಮಲಗಿ ಹತ್ತು ನಿಮಿಷವಾಗಿಲ್ಲ, ಯಾರೋ ಬಾಗಿಲು ತಟ್ಟಿದರು.     ‌ಡಾಕ್ಟರು ಬಹಳ ನಿಯತ್ತಿನ ಮನುಷ್ಯ. ಬೇಸರ ಪಟ್ಟುಕೊಳ್ಳದೆ ಹೋಗಿ ತೆಗೆದರು. ಬಂದ ಮನುಷ್ಯ ಇವರ ಕಾಲು ಹಿಡಿದುಕೊಂಡು "ಸಾರ್, ಒಬ್ಬ ಗರ್ಭಿಣಿ ಹೆಂಗಸು ಬಹಳ ಪ್ರಸವವೇದನೆ ಅನುಭವಿಸುತ್ತಿದ್ದಾಳೆ ಸಾರ್. ಆಕೆಯನ್ನು ನೀವೇ ಕಾಪಾಡಬೇಕು ಸಾರ್. ದಯಮಾಡಿ ನೀವೇ ಬಂದು ಅವಳನ್ನು ಉಳಿಸಬೇಕು, ಆಗಲ್ಲ ಅನ್ನಬೇಡಿ ಸಾರ್" ಎಂದು ಅಲವತ್ತುಕೊಂಡ.  ಸುಮಾರು ೭೦ ವರ್ಷಗಳ ಕೆಳಗೆ ಮಹಾರಾಷ್ಟ್ರದ ಮೂಲೆಯಲ್ಲೊಂದು ಗ್ರಾಮದಲ್ಲಿನ ಡಾಕ್ಟರ್ ಅವರು. ತಕ್ಷಣ ಅವನೊಂದಿಗೆ ಹೊರಟರು.     ಆ ಹೆಂಗಸು ೧೯-೨೦ರ ವಯಸ್ಸಿನವಳಿದ್ದಿರಬೇಕು ಎಂದು ತಿಳಿಯಿತು. ಪ್ರಸವ ನಿಜಕ್ಕೂ ಕಷ್ಟದಾಯಕ ವಾಗಿತ್ತು ಆಕೆಗೆ. ಬೆಳಗಿನ ಜಾವವಾಗಿತ್ತು ಆಗ. ಆ ಹೆಂಗಸು ಡಾಕ್ಟರ ಕ...

ದಿನಕ್ಕೊಂದು ಕಥೆ 1055

*🌻ದಿನಕ್ಕೊಂದು ಕಥೆ 🌻* *ಮಿಡಿತ*      "ಅವ್ವಾ..ss, ಬಾಕ್ಲು ಹಾಕ್ಕೋ..,ನಾ ಬತ್ತೀನೀ.."ಎಂದು ತನ್ನ ತಾಯಿಗೆ ಕೂಗಿ ಹೇಳಿದ ನಿಂಗಿಯ ಗಂಡ ಪರಶು,ಅವರ ಉತ್ತರಕ್ಕಾಗಿ ಕಾಯದೇ, ಎಂದಿನಂತೆ ಗಾರೆ ಕೆಲಸಕ್ಕೆಂದು ಮೊಪೆಡ್ ಸ್ಟಾರ್ ಮಾಡಿ, ಇನ್ನೇನು ಹೊರಡಬೆಕೆನ್ನುವಷ್ಟರಲ್ಲಿ ಎದುರಿನಿಂದ ನಿಧಾನವಾಗಿ ಬರುತ್ತಿದ್ದ ಆಟೋ ಆತನ ಪಕ್ಕಕ್ಕೆ ಬಂದು ನಿಂತಿತು.ಪರಶು ಇಣುಕಿ ನೋಡಿದ.ಅದರೊಳಗೆ ತನ್ನ ಪತ್ನಿ ಇರುವುದನ್ನು ಕಂಡು ಮನದಲ್ಲಿ"ಅರ್ರೇ.. ಇದೇನು  ಇವಳು ಭಾಗಕ್ಕನ ಮನೆ ಕೆಲಸಕ್ಕೆ ಹೋಗಿ ಇನ್ನೂ ಒಂದು ಗಂಟೆ ಕೂಡಾ ಆಗಿಲ್ಲ.. ಇದ್ಯಾಕೆ ರಿಕ್ಷಾ ದಲ್ಲಿ ಬಂದ್ಲು"ಎಂದು ಯೋಚಿಸುತ್ತಿದ್ದವ ಅರ್ಧಕ್ಕೆ ನಿಲ್ಲಿಸಿ ಕುತೂಹಲದಿಂದ"ಇದ್ಯಾಕೆ ನಿಂಗೀ.."ಎಂದು ಕೇಳುತ್ತಿದ್ದಂತೆ , ಆಕೆ ಕುಳಿತಲ್ಲಿಂದಲೇ "ಮತ್ತೆ..ಭಾಗಕ್ಕಾವ್ರು ಇಂದ ನಸಕ್ ನ್ಯಾಗೆ  ಹೂ ಕಿತ್ತಾಕೆ ಹೋಗಿ ತಲೆತಿರುಗಿ ಮೆಟ್ಲಮ್ಯಾಲಿಂದ ಬಿದ್ದು ತಲೆಗೆ ಏಟು ಮಾಡ್ಕೊಂಡಾವ್ರೆ.. ತಲೆಯಿಂದ ಸಾನೆ ರಕ್ತ ಹೋಗಿ ಪ್ರಜ್ಞೆ ತಪ್ಪಿತ್ತಂತೆ, ಹಿಂಗಾಗಿ ಅಪ್ಪಾರು ಮತ್ತೆ ಅವರ ಮಗ ಎಲ್ಲಾ ಸೇರಿ  ಅವರನ್ನ ಆಸ್ಪತ್ರೆಗೆ ಸೇರ್ಸಿದ್ದಾರಂತೆ... ಅಲ್ಲಿ ಅವ್ರ ರಕ್ತದ ಗುಂಪಿನ ರಕ್ತ ಸಿಗ್ತಿಲ್ಲಂತ ಎಲ್ಲಾ ಕಡೆ ಹುಡುಕ್ತಾವ್ರೆ... ಹಿಂಗಾಗಿ ಭಾಗಕ್ಕಾರ ಮಗಳು. ನನಗೆ ಪಾತ್ರೆ ತೊಳ್ದು ಬಿಟ್ಟು, ನೀ ಆಸ್ಪತ್ರೆಗೆ ಹೋಗೀರು ಎಂದು ಆಟೋ ಮಾಡಿ ಕಳ್ಸಕೊಟ್ಟವ್ರೆ.. ಅದ್ಕೆ  ಅತ್ತೆಗೆ ಒ...

ದಿನಕ್ಕೊಂದು ಕಥೆ 1054

*🌻ದಿನಕ್ಕೊಂದು ಕಥೆ*🌻 *ನಿಮ್ಮ_ಆಲೋಚನಾ_ಶಕ್ತಿಯೇ_ನಿಮ್ಮ_ಸಂಪತ್ತು*  (ಮಹಾರಾಷ್ಟ್ರದ ಜಿಲ್ಲಾಧಿಕಾರಿ ಒಬ್ಬರ ಸತ್ಯ ಘಟನೆ) ಒಂದು ಶಾಲೆಯಲ್ಲಿ ದಿನದ ಪಾಠಗಳು ನೆಡೆಯುತ್ತಿತ್ತು ಎಂದಿನಂತೆ.......ಹೊರಗೆ ಜೋರಾಗಿ ಮಳೆ ಬರುತ್ತಿತ್ತು,....4ನೇ ತರಗತಿಯಲ್ಲಿ ಪಾಠದ ಮದ್ಯ ಶಿಕ್ಷಕರೊಬ್ಬರು ತಮಾಷೆಗೆ ಮಕ್ಕಳನ್ನು ಕೇಳಿದರು - ನಿಮ್ಮೆಲ್ಲರಿಗೂ ನಾನು 100-100 ರೂಪಾಯಿ ಕೊಟ್ಟರೆ ನೀವೆಲ್ಲರೂ ಏನು ಖರೀದಿಸುತ್ತೀರಿ?  ಒಬ್ಬ ವಿದ್ಯಾರ್ಥಿ ಹೇಳಿದ - ನಾನು ವಿಡಿಯೋ ಗೇಮ್‌ ಖರೀದಿಸುತ್ತೇನೆ.. ಇನ್ನೊಬ್ಬ ಹೇಳಿದ - ನಾನು ಕ್ರಿಕೆಟ್ ಬಾಲ್ ಖರೀದಿಸುತ್ತೇನೆ. ಮತ್ತೊಬ್ಬ ಹೇಳಿದ- ನಾನು ಒಂದು ಮುದ್ದಾದ ಗೊಂಬೆಯನ್ನು ಖರೀದಿಸುತ್ತೇನೆ. ಬೇರೆಯೊಬ್ಬ ಹೇಳಿದ - ನಾನು  ಚಾಕೊಲೇಟ್ಗಳನ್ನು ಖರೀದಿಸುತ್ತೇನೆ. ...ಆದರೆ..   ಒಂದು ಮಗು ಆಲೋಚನೆಯಲ್ಲಿ ಮುಳುಗಿತ್ತು....ಅದನ್ನು ಗಮನಿಸಿದ ಶಿಕ್ಷಕರು ಆ ಹುಡುಗನನ್ನು ಕೇಳಿದರು - ನೀನು ಏನು ಯೋಚಿಸುತ್ತಿದ್ದಿಯ ಮರಿ, ನೀನು ಏನು ಖರೀದಿಸುತ್ತೀಯಾ? ಆ ಮಗು ಹೇಳಿತು - ಕನ್ನಡಕ ಖರೀದಿಸುವೇ!! ಶಿಕ್ಷಕ-:ಕನ್ನಡಕನ....ಯಾಕೆ ನಿನಗೆ ಅದು? ಆ ಹುಡುಗ ಹೇಳಿದ.....ಸಾರ್, ನನ್ನ ತಾಯಿಗೆ ಸ್ವಲ್ಪ  ದೃಷ್ಟಿ ಮಂಜು, ಸರಿಯಾಗಿ ಕಣ್ಣು ಕಾಣಿಸುವುದಿಲ್ಲ...ಆದ್ದರಿಂದ ನಾನು ನನ್ನ ತಾಯಿಗೆ ಕನ್ನಡಕವನ್ನು ಖರೀದಿಸುತ್ತೇನೆ!  ಶಿಕ್ಷಕರು ಕೇಳಿದರು - ನಿನ್ನ ತಂದೆ ನಿನ್ನ ತಾಯಿಗೆ ಕನ್ನಡಕವನ್ನು ತಂದು...

ದಿನಕ್ಕೊಂದು ಕಥೆ 1053

*🌻ದಿನಕ್ಕೊಂದು ಕಥೆ🌻                                ಪ್ರಜೆಯೊಬ್ಬಳಿಗೆ ದೇಶದ  ಪ್ರಧಾನಿಯ ಪ್ರಾಮಿಸ್ !* ದೇಶದ ಪ್ರಧಾನಿಯೊಬ್ಬರು ಸಾಮಾನ್ಯ ಪ್ರಜೆಯೊಬ್ಬಳಿಗೆ ಮಾಡಿದ ಪ್ರಾಮಿಸ್ ಒಂದರ ಬಗೆಗಿನ ಕುತೂಹಲಕಾರಿಯಾದ ಪ್ರಸಂಗವೊಂದು ಇಲ್ಲಿದೆ. ಬ್ರಿಟನ್ನಿನಲ್ಲಿ ವಿಕ್ಟೋರಿಯಾ ರಾಣಿಯ ಆಳ್ವಿಕೆಯಿದ್ದಾಗ, 1855ರಿಂದ 1865ರವರೆಗೆ ಲಾರ್ಡ್ ವಿಸ್ಕೌಂಟ್ ಪಾಮರ್ಸ್ಟನ್ ಬ್ರಿಟನ್ನಿನ ಪ್ರಧಾನಿಯಾಗಿದ್ದರು. ರಾಣಿಯವರ ಮತ್ತು ಪ್ರಧಾನಿಗಳ ನಡುವೆ ಮನಸ್ತಾಪಗಳ ಶೀತಲ ಸಮರ ನಡೆಯುತ್ತಿತ್ತು. ಆದರೆ ಪ್ರಜಾಪ್ರಭುತ್ವದ ಮೂಲಕ ಪ್ರಧಾನಿಯಾಗಿದ್ದವರನ್ನು ಪದಚ್ಯುತಗೊಳಿಸಲು ರಾಣಿಯವರಿಗೆ ಸಾಧ್ಯವಿರಲಿಲ್ಲ. ಹಾಗಾಗಿ ಸಹಿಸಿಕೊಳ್ಳಬೇಕಿತ್ತು! ಒಮ್ಮೆ ಸಚಿವ ಸಂಪುಟದ  ನಡೆಯುತ್ತಿತ್ತು. ಗಹನ ಚರ್ಚೆಯಾಗುತ್ತಿತ್ತು. ಇದ್ದಕ್ಕಿದ್ದಂತೆ ಪ್ರಧಾನಿಯವರು ಈಗಲೇ ಬರುತ್ತೇನೆನ್ನುತ್ತ ಹೊರಕ್ಕೆ ಹೋದರು. ಅರ್ಧ ಗಂಟೆಯ ನಂತರ ಹಿಂತಿರುಗಿ ಸಭೆಯನ್ನು ಮುಂದುವರೆಸಿದರು. ಎಲ್ಲರಿಗೂ ಸಂಪುಟದ ಸಭೆಯನ್ನು ಮಧ್ಯದಲ್ಲೇ ಬಿಟ್ಟು ಪ್ರಧಾನಿಯವರು ಹೋಗಿ ಬರುವಂತಹ ಘನಕಾರ್ಯ ಏನಿರಬಹುದೆನ್ನುವ ಕುತೂಹಲ! ಹಿರಿಯ ಮಂತ್ರಿಗಳೊಬ್ಬರು ಧೈರ್ಯದಿಂದ ಪ್ರಶ್ನೆಯನ್ನು ಕೇಳಿಬಿಟ್ಟರು! ಪ್ರಧಾನಿಯವರು ತಕ್ಷಣ ಹೇಳಲು ಪ್ರಾರಂಭಿಸಿದರು. ನಾನಿಂದು ಮುಂಜಾನೆ ಕಚೇರಿಗೆ ಬರುವಾಗ ರಸ್ತೆಯಲ್ಲಿ ಹತ...

ದಿನಕ್ಕೊಂದು ಕಥೆ 1052

*🌞ದಿನಕ್ಕೊಂದು ಕಥೆ🌞* ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು.. ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು.. ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.  ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..  ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...  ಮಂತ್ರಿ ಹೇಳಿದ *‘ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್...

ದಿನಕ್ಕೊಂದು ಕಥೆ 1051

*🌞ದಿನಕ್ಕೊಂದು ಕಥೆ🌞* *ಅವಕಾಶ ಸಿಕ್ಕಾಗ ಸಹಾಯ ಮಾಡಬೇಕು.* ಇದೊಂದು ನೈಜ ಘಟನೆ ಉತ್ತರ  ಭಾರತದ ಒಂದು ಗ್ರಾಮದಲ್ಲಿ ಒಬ್ಬ ವೈದ್ಯರಿದ್ದರು. ಅವರು ಬಡತನದಲ್ಲಿ ಕಷ್ಟಪಟ್ಟು ಓದಿ ವೈದ್ಯರಾಗಿದ್ದರು. ವೈದ್ಯರಾದ ಮೇಲೆ ಬಡಬಗ್ಗರಿಗೆ  ತುಂಬಾ ಸಹಾಯ ಮಾಡುತ್ತಿದ್ದರು.  ಬಡಜನರ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಸುತ್ತಮುತ್ತ ಊರಿನಲ್ಲೆಲ್ಲಾ ಅವರಿಗೆ ಒಳ್ಳೆಯ ಹೆಸರಿತ್ತು. ಅವರ  ಹತ್ತಿರ ಒಂದು ಮೊಬೈಲ್ ಇತ್ತು. ಆ ಮೊಬೈಲ್ನಲ್ಲಿ ಇದ್ದ  ನಂಬರನ್ನು  ಒಂದು ಪೇಪರ್ ನಲ್ಲಿ ಬರೆದು ಮರದ ಮೇಲೆ, ಹಳೆಯ ಕಾಂಪೌಂಡುಗಳ ಮೇಲೆ, ಕಟ್ಟಡಗಳಲ್ಲಿ , ಬಸ್ಟಾಂಡ್ ಗಳಲ್ಲಿ ಹೀಗೆ  ಎಲ್ಲಾ ಕಡೆಗಳಲ್ಲಿ  ಅಂಟಿಸಿದ್ದರು. ಯಾಕೆಂದರೆ  ಯಾರಿಗಾದರೂ ಹುಷಾರಿಲ್ಲದಿದ್ದರೆ ಅಂದರೆ ಸಣ್ಣಪುಟ್ಟ ಜ್ವರ ಕೆಮ್ಮು ನೆಗಡಿಗಲ್ಲ, ತುರ್ತುಚಿಕಿತ್ಸೆಯ ಅಗತ್ಯವಿದ್ದ ಯಾರಾದರೂ ಸರಿಯೇ ಇಲ್ಲಿ ಬರೆದಿರುವ ನಂಬರಿಗೆ ಫೋನ್  ಮಾಡಿದರೆ ಸ್ವಲ್ಪವೂ ತಡಮಾಡದೆ ಬಿಟ್ಟ ಕೆಲಸ ಬಿಟ್ಟು, ಅದು ಎಷ್ಟೇ ದೂರ ಇರಲಿ, ಯಾವ ಮೂಲೆಯಲ್ಲೇ ಇರಲಿ, ಅಲ್ಲಿಗೆ ಹೋಗಿ ಅವರಿಗೆ ಚಿಕಿತ್ಸೆಯನ್ನು ಕೊಡುವುದು ಅವರ  ಕಾರ್ಯವಾಗಿತ್ತು. ಸಾಧಾರಣವಾಗಿ ಇದರ ಅವಶ್ಯಕತೆ ಬಡಬಗ್ಗರಿಗೆ ಮಾತ್ರ ಇರುತ್ತದೆ. ಇವರಾದರೋ, ಅವರಿಗೆ ಇಂತಿಷ್ಟೇ ಹಣ ಕೊಡಿ ಎಂದು ಯಾವತ್ತೂ ಕೇಳುತ್ತಿರಲಿಲ್ಲ ಅವರ ಯೋಗ್ಯತಾನುಸಾರ ಕೊಟ್ಟರೆ ತೆಗೆದುಕೊಳ್ಳುತ್ತಿದ್ದರು....

ದಿನಕ್ಕೊಂದು ಕಥೆ 1050

*🌞ದಿನಕ್ಕೊಂದು ಕಥೆ🌞* *ಜಗದ್ರಕ್ಷಕ ಶ್ರೀಕೃಷ್ಣ*    ಮಹಾಭಾರತವೆಂಬ ಬಹುದೊಡ್ಡ ಗ್ರಂಥವನ್ನು ಬರೆದ ವೇದವ್ಯಾಸರು,  ದೊಡ್ಡ ದೊಡ್ಡ ಘಟನೆಗಳ, ಸಂದರ್ಭಗಳಲ್ಲಿ ನಡೆದ ಲೆಕ್ಕಕ್ಕಿಲ್ಲ ಎನ್ನುವಂಥ ಸಣ್ಣಸಣ್ಣ ಘಟನೆಗಳನ್ನು ದಾಖಲಿಸಿದ್ದಾರೆ, ಅಂಥ ಘಟನೆಗಳು ಅನನ್ಯವಾದದ್ದು, ಅದ್ಭುತವಾದದ್ದು. ಅದು ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ, ದಾಯಾದಿಗಳು ಪಾಂಡವರು ಕೌರವರು ಯುದ್ಧಕ್ಕೆ ನಿಂತಿದ್ದಾರೆ.ಇನ್ನೇನು ಯುದ್ಧ ಆರಂಭವಾಗಬೇಕು. ಕೃಷ್ಣ ಅರ್ಜುನನಿಗೆ  ಗೀತೋಪದೇಶ   ಮಾಡಿದ್ದಾಗಿದೆ. ಯುದ್ಧ ಆರಂಭವಾಗುವ ಮೊದಲು ಶಂಖ, ಜಾಗಂಟೆ, ನಗಾರಿ ಡೋಲು, ಕುದುರೆಗಳ  ಹೇಷಾವರ, ಆನೆಗಳಿಗೆ  ಘೀಳಿಟ್ಟವು. ಸೈನಿಕರ ಕೂಗಾಟ, ಯುದ್ಧ ಭೂಮಿ ಆಗಲೇ ರಣರಂಗವಾಗಿ, ಇಡೀ ಜಗತ್ತನ್ನೇ ತುಂಬಿದಂತಾಗಿತ್ತು. ಈ ಸಮಯದಲ್ಲಿ  ಕೃಷ್ಣಾ ನನ್ನ ರಥವನ್ನು ಎರಡೂ ಸೇನೆಗಳ ನಡುವೆ ನಿಲ್ಲಿಸು ನಾನು ಒಮ್ಮೆ ಎಲ್ಲರನ್ನೂ ನೋಡಬೇಕು ಎಂದು ಹೇಳಿದ ಅರ್ಜುನನಿಗಾಗಿ ರಥವನ್ನು ಎರಡೂ ಸೇನೆಗಳ ನಡುವೆ ನಿಲ್ಲಿಸಿದ.  ಹೀಗೆ ಕೃಷ್ಣ ರಥ ನಿಲ್ಲಿಸಿದ ಸಮಯದಲ್ಲಿ ಎಲ್ಲೆಲ್ಲೂ ಧೂಳು, ಗಲಾಟೆ, ಕೂಗು,ಘೋಷಣೆ, ಈ ಬಾರಿ  ಗದ್ದಲದಲ್ಲಿ  ಒಂದು  ಟಿಟ್ಟಿಬ ಎಂಬ ಪುಟ್ಟಹಕ್ಕಿ  ಆಕಾಶದಲ್ಲಿ ಹಾರುತ್ತಾ,  ಅಯ್ಯಯ್ಯೋ ಈ ಗಲಾಟೆ ಏನು ಇದು, ಪ್ರಪಂಚದ ಕಥೆಯೇ ಮುಗಿದು ಹೋಗುತ್ತಾ, ಈ ಗಲಾಟೆ  ನಿಲ್ಲುವಂತೆ ಕಾಣುತ್ತಿಲ್ಲ...

ದಿನಕ್ಕೊಂದು ಕಥೆ 1049

*🌞ದಿನಕ್ಕೊಂದು ಕಥೆ🌞*               ರಾಜ ನೊಬ್ಬನಿಗೆ ,ಯಾರೋ ಸ್ನೇಹಿತರು ಸುಂದರವಾದ ಎರಡು ಗಿಡುಗ ಪಕ್ಷಿಗಳನ್ನು ಉಡುಗೊರೆಯಾಗಿ ಕೊಟ್ಟಿದ್ದರು. ರಾಜ ಅದನ್ನು ಗಿಡುಗಗಳಿಗೆ ತರಬೇತಿ ನೀಡುವವನ ಹತ್ತಿರ ಕೊಟ್ಟು ಅವಕ್ಕೆ ತರಬೇತಿ ನೀಡಲು ಹೇಳಿದ.         ಕೆಲವು ತಿಂಗಳುಗಳ ನಂತರ ಆ ತರಬೇತುದಾರ ಬಂದು ಹೇಳಿದ,ಮಹಾಸ್ವಾಮಿ ,ಒಂದು ಹಕ್ಕಿ ,ಬಹಳ ಸುಂದರವಾಗಿ ರಾಜಗಾಂಭೀರ್ಯದಿಂದ ಮುಗಿಲೆತ್ತರಕ್ಕೆ  ಹಾರಾಡುತ್ತದೆ ,ಆದರೆ ಇನ್ನೊಂದು ಏನು ಮಾಡಿದರೂ  ಮರದ ಕೊಂಬೆಯನ್ನು ಬಿಟ್ಟು ಕದಲುವುದಿಲ್ಲಾ, ನಾನು  ಅದು  ಹಾರಲು ನನ್ನ ಬುದ್ದಿ ಯನ್ನೆಲ್ಲಾ   ಉಪಯೋಗಿಸಿದ್ದೇನೆ,ಆದರೆ ಏನೂ ಪ್ರಯೋಜನ ವಾಗಲಿಲ್ಲಾ ಎಂಬುದಾಗಿ ತಿಳಿಸಿದ.      ಏನೋ ಅನಾರೋಗ್ಯ ಇರಬೇಕೆಂದು,ಭಾವಿಸಿದ ರಾಜ ,ವೈಧ್ಯರು,ಚಿಕಿತ್ಸಕರನ್ನು ಕರೆಸಿ ,ಔಷಧೋಪಚಾರ ಮಾಡಿಸಿದ,ಆದರೂ ಗಿಡುಗ ಕೊಂಬೆಯನ್ನು ಬಿಟ್ಟು ಹಾರಲೇ ಇಲ್ಲಾ. ರಾಜನಿಗೆ ತುಂಬಾ ಬೇಸರವಾಯ್ತ.     ಕೊನೆಗೆ ನೈಸರ್ಗಿಕ ಜೀವನ ನೆಡೆಸುವವರಿಂದ  ಇದಕ್ಕೆ ಪರಿಹಾರ ಸಿಗಬಹುದೆಂದು ಒಬ್ಬ  ರೈತಾಪಿ  ವ್ಯಕ್ತಿ ಯನ್ನು  ಕರೆತಂದು ಇದರ  ವಿಷಯವನ್ನು ತಿಳಿಸಿದ.        ಮರುದಿನ ಅಂತಃಪುರದ ಕಿಟಕಿಯಿಂದ  ನೋಡಿದಾಗ  ಈ ಗಿಡುಗ ,ಗರ...

ದಿನಕ್ಕೊಂದು ಕಥೆ 1048

🌻  *ದಿನಕ್ಕೊಂದು ಕಥೆ* 🌻  🪷🪴    *ಹಗಲು ಕನಸಿನ ಅಪಾಯ.* 🪷🪴 ಒಂದು ಹಳ್ಳಿಯಲ್ಲಿ ಒಬ್ಬ ಯುವಕನಿದ್ದ. ಹೆಸರು ರಮೇಶ್. ಗಟ್ಟಿಮುಟ್ಟಾದ ದೇಹವಿದ್ದರೂ ದುಡಿಯುವುದರಲ್ಲಿ ಅವನಿಗೆ ಆಸಕ್ತಿಯಿರಲಿಲ್ಲ. ತಾಯಿ ದುಡಿದು ತಂದುದನ್ನೇ ಹೊಟ್ಟೆ ತುಂಬ ಊಟ ಮಾಡಿ ಹಗಲಲ್ಲೇ ಚೆನ್ನಾಗಿ ನಿದ್ರೆ ಮಾಡುತ್ತಿದ್ದ. ನಿದ್ರೆಯಿಂದ ಎದ್ದ ಮೇಲೆ ತಾಯಿಯೊಂದಿಗೆ, 'ಅಮ್ಮ, ನಾನೊಂದು ಕನಸು ಕಂಡೆ. ಅದರಲ್ಲಿ ರಾಜಕುಮಾರಿ ನನ್ನ ಕೈ ಹಿಡಿದುಕೊಂಡಿದ್ದಳು" ಎನ್ನುತ್ತಿದ್ದ. ಇನ್ನೊಂದು ದಿನ ತಾನು ದೊಡ್ಡ ಅರಮನೆ ಕಟ್ಟಿಸಿದಂತೆ ಕನಸು ಕಂಡೆನೆಂದು ಹೇಳುತ್ತಿದ್ದ. ದಿನವೂ ಅವನ ಕನಸಿನ ಕಥೆ ಕೇಳಿ ಬೇಸತ್ತು ತಾಯಿ, ಮಗನೇ, ಕನಸಿನಲ್ಲಿ ಬರುವ ಸಿರಿವಂತಿಕೆ ಎಚ್ಚರವಾದಾಗ ಇರುವುದಿಲ್ಲ. ಹಗಲು ನಿದ್ರೆ ಮಾಡಿದರೆ ಇಂತಹ ಕನಸು ಬೀಳುವುದು ಸಹಜ. ಹಗಲು ದೇಹ ಶ್ರಮದಿಂದ ಸಂಪಾದಿಸಿ ಸಿರಿವಂತನಾಗಿ ಕನಸುಗಳನ್ನೆಲ್ಲ ನನಸು ಮಾಡಿಕೊಳ್ಳಬೇಕು ಎಂದು ಹೇಳಿದಳು. "ಸರಿ, ನಾಳೆಯಿಂದಲೇ ಕನಸು ಕಾಣುವುದನ್ನು ನಿಲ್ಲಿಸಿ ಕೆಲಸಕ್ಕೆ ಹೋಗಿ ನಿಜವಾಗಿಯೂ ಶ್ರೀಮಂತನಾಗಿ ಸುಖವಾಗಿರುತ್ತೇನೆ" ಎಂದು ಹೇಳಿದ ಮರುದಿನ ರಮೇಶ್ ಕೆಲಸ ಹುಡುಕಿಕೊಂಡು ಹೊರಟ. ಒಬ್ಬ ರೈತ, "ನನ್ನಲ್ಲಿ ಐವತ್ತು ತೆಂಗಿನ ಮರಗಳಿವೆ. ಎಲ್ಲ ಮರಗಳನ್ನೇರಿ ತೆಂಗಿನಕಾಯಿ ತೆಗೆದುಕೊಟ್ಟರೆ ಮರಕ್ಕೊಂದು ಕಾಯಿಯಂತೆ ಐವತ್ತು ತೆಂಗಿನಕಾಯಿ ಕೂಲಿ ಕೊಡುತ್ತೇನೆ" ಎಂದು ಹೇಳಿದೆ. ಅವನು ಒಪ್ಪಿಕೊಂಡು ಕೆಲವು ...

ದಿನಕ್ಕೊಂದು ಕಥೆ 1047

*🌞ದಿನಕ್ಕೊಂದು ಕಥೆ 🌞* ಕಾಲೇಜು ಪ್ರಿನ್ಸ್ ಪಾಲರ ಮನೆಗೆ ತೆಂಗಿನ ಮರಕ್ಕೆ ಹತ್ತಲು ಸುಬ್ಬಣ್ಣ ಹೋಗಿದ್ದ. ಮನೆಯ ಜಗಲಿಯಲ್ಲಿ ಪ್ರಿನ್ಸಿಪಾಲರು ಸೋಫಾದಲ್ಲಿ ಕುಳಿತ್ತಿದ್ದರು. ಅವರೊಂದಿಗೆ ಮಾತನಾಡುತ್ತ ಸುಬ್ಬಣ್ಣ ಕೇಳಿದ "ಧನಿ ನಿಮಗೆ ಕಾಲೇಜಿನಲ್ಲಿ ಸಂಬಳ ಎಷ್ಟು ಸಿಗುತ್ತದೆ". ಅದಕ್ಕೆ ಅವರು ಹೇಳಿದರು "ಒಂದು ಒಂದೂವರೆ ಲಕ್ಷದಷ್ಟು". ಆಗ ಸುಬ್ಬಣ್ಣ ಹೇಳಿದ "ಅದು ಸ್ವಲ್ಪ ಜಾಸ್ತಿ ಆಯಿತು ಅಲ್ವಾ" ಅದಕ್ಕೆ ಪ್ರಿನ್ಸಿಪಾಲ್ ಹೇಳಿದರು "ಶಾಲೆಗೆ ಹೋಗೋ ಸಮಯದಲ್ಲಿ ಹಲಸಿನ ಮರ ಮಾವಿನ ಮರ ಏರಿ ಆಟ ಆಡದೆ ಶಾಲೆಗೆ ಹೋಗಬೇಕಿತ್ತು ಈಗ ಅಸೂಯೆ ಪಟ್ಟು ಪ್ರಯೋಜನ ಇಲ್ಲ "ಎಂದು ನಕ್ಕುಬಿಟ್ಟರು. ನಂತರ ಸುಬ್ಬಣ್ಣ ತೆಂಗಿನ ಮರಕ್ಕೆ ಹತ್ತಿ ತೆಂಗಿನ ಕಾಯಿ ಎಲ್ಲಾ ತೆಗೆದು. ಪ್ರಿನ್ಸಿಪಾಲರ ಹತ್ತಿರ ಕೂಲಿಗಾಗಿ ಕೈ ಚಾಚಿದ ಆಗ ಪ್ರಿನ್ಸಿಪಾಲರು ಅವನ ಕೈಗೆ 100 ರೂಪಾಯಿ ನೋಟೊಂದನ್ನು ಕೈಗೆ ಕೊಟ್ಟರು. ಆಗ ಸುಬ್ಬಣ್ಣ ಹೇಳಿದ "ನನ್ನ ಕೂಲಿ ನೂರು ರೂಪಾಯಿ ಅಲ್ಲ 500 ರೂಪಾಯಿ "ಎಂದ. ಅದಕ್ಕೆ ಪ್ರಿನ್ಸಿಪಾಲರು "ಅದು ಜಾಸ್ತಿಯಾಯಿತು ಅಲ್ವ" ಎಂದರು. ಸುಬ್ಬಣ್ಣ ಅದಕ್ಕೆ ಉತ್ತರಿಸಿದ "ಚಿಕ್ಕ ವಯಸ್ಸಿನಲ್ಲಿ ಕಾಗದ, ಪೆನ್ನು, ಶಾಲೆ ಕಾಲೇಜು ಅಂತ ತಿರುಗಾಡುವಾಗ ಆಲೋಚಿಸಬೇಕಿತ್ತು. ತೆಂಗಿನ ಮರ ಹತ್ತಲು ಕೂಡ ಕಲಿಯಬೇಕು ಎಂದ".... ಪ್ರಿನ್ಸಿಪಾಲರು ಒಮ್ಮೆಗೆ ದಂಗಾಗಿ ಸುಬ್ಬಣ್ಣನಿಗೆ 500 ...

ದಿನಕ್ಕೊಂದು ಕಥೆ 1046

*🌻 ದಿನಕ್ಕೊಂದು ಕಥೆ 🌻* *ವಿದುರನು ಶಸ್ತ್ರಸಂನ್ಯಾಸ.*  ಪಾಂಡವರು ಹನ್ನೆರಡು ವರ್ಷ ವನವಾಸವನ್ನು ಒಂದು ವರ್ಷ  ಅಜ್ಞಾತವಾಸವನ್ನು ಮುಗಿಸಿ ಬಂದರು. ಷರತ್ತಿನಂತೆ ಅವರ ಪಾಲಿನ ಅರ್ಧರಾಜ್ಯವನ್ನು ಕೌರವರು ಕೊಡಬೇಕು. ಆದರೆ ದುರ್ಯೋಧನ ಕೊಡುವುದಿಲ್ಲ .ಸಂಧಾನ ಮಾಡಿಕೊಳ್ಳಬೇಕು.  ಪಾಂಡವರು ಕೃಷ್ಣನ ಜೊತೆ ಕುಳಿತು ಮಾತುಕತೆ ನಡೆಸಿ ಅದರಂತೆ ಕೃಷ್ಣನೇ ಇದರ ರಾಯಭಾರಿಯಾಗಿ ಹೋಗಿ ಸಂಧಾನ ನಡೆಸಬೇಕು ಎಂದು ತೀರ್ಮಾನಿಸಿದರು.  ಒಂದು ಶುಭ ದಿನ ಕೃಷ್ಣನು ಸೂರ್ಯೋದಯಕ್ಕೂ ಮುನ್ನವೇ ಸ್ನಾನ , ಸಂಧ್ಯಾವಂದನೆ, ಪ್ರಾತರ್ವಿಧಿಗಳನ್ನು ಮುಗಿಸಿ ಸಾರಥಿಯೋಡನೆ ರಥದಲ್ಲಿ ಕುಳಿತು ಪಾಂಡವರಿಂದ ಬೀಳ್ಕೊಂಡು ಹಸ್ತಿನಾಪುರಕ್ಕೆ ಬರುತ್ತಿದ್ದಾನೆ. ಒಂದಷ್ಟು ದೂರ ಬಂದ ಮೇಲೆ ಸಣ್ಣ ಸಣ್ಣ ಸಂಸ್ಥಾನದ ರಾಜರುಗಳೆಲ್ಲ ಬಂದು ಕೃಷ್ಣನನ್ನು ಸ್ವಾಗತಿಸಿ ಅತಿಥಿ ಸತ್ಕಾರಕ್ಕಾಗಿ ಆಹ್ವಾನಿಸುತ್ತಾರೆ.ಕೃಷ್ಣನು ಮುಗುಳ್ನಗೆಯಿಂದಲೇ ಸತ್ಕಾರ ಗಳನ್ನು ಇನ್ನೂಮ್ಮೆ ಸ್ವೀಕರಿಸುತ್ತೇನೆ ಎಂದು ಹೇಳಿ  ಅವರಿಂದ ಬೀಳ್ಕೊಂಡು ಹಸ್ತಿನಾಪುರದ ದ್ವಾರದ ಸಮೀಪ ಬಂದಿದ್ದಾನೆ.  ಕೃಷ್ಣನನ್ನು ಸ್ವಾಗತಿಸಲು ಅರಮನೆಯ ಪ್ರಮುಖರಾದ ಭೀಷ್ಮ ,ದ್ರೋಣ, ವಿದುರ ,ಕೃಪಾಚಾರ್ಯರು ನಿಂತಿದ್ದರೆ ,ಕೃಷ್ಣನನ್ನು ನೋಡಲು ಹಸ್ತಿನಾಪುರದ ಜನಸ್ತೋಮವೇ ಕಾತರಿಸಿ ಕಾಯುತ್ತಿದೆ. ಕುದುರೆಯ ಖರಪುಟದ ಸದ್ದು ಕೇಳಿಸಿತು. ರಥದಲ್ಲಿ ವಿರಾಜಮಾನನಾಗಿ ಕುಳಿತಿದ್ದ ಕೃಷ್ಣನನ್ನು ಕಣ್ತುಂಬಿಕೊಳ್ಳ...

ದಿನಕ್ಕೊಂದು ಕಥೆ 1045

*🌻ದಿನಕ್ಕೊಂದು ಕಥೆ🌻* *ತಪಸ್ಸಿಗಿಂತ 'ವಿಶ್ವಾಸ ಮತ್ತು ನಂಬಿಕೆ' ಬೇಕು.* ಪ್ರಾಚೀನ ಕಾಲದಲ್ಲಿ ನಡೆದ ಕಥೆ ,  ಒಂದು  ಮರದಲ್ಲಿ  ಪುಟ್ಟ ಪಕ್ಷಿ  ಗೂಡಿನಲ್ಲಿ ತನ್ನ ಎರಡು  ಮರಿಗಳೊಂದಿಗೆ ವಾಸವಾಗಿತ್ತು. ಪುಟ್ಟ ಪಕ್ಷಿ ದಿನವೂ  ಹೊರಗೆ ಹೋಗಿ ತನಗೂ ಹಾಗೂ ಮರಿಗಳಿಗೆ  ಆಹಾರ ತಂದು  ಕೊಕ್ಕಿನಿಂದ ಮರಿಗಳಿಗೆ  ತಿನ್ನಿಸಿ,  ಆಟವಾಡಿ  ದಿನ ಕಳೆಯುತ್ತಾ  ಸಂತೋಷವಾಗಿದ್ದವು.  ಹೀಗೆ ಒಂದು ದಿನ ತಾಯಿ ಪಕ್ಷಿಯು ಆಹಾರ ತರುವಾಗ  ಆಕಾಶವೆಲ್ಲಾ ಮೋಡ  ಕವಿತಿರುವುದನ್ನು  ನೋಡಿ  ಲಘು ಬಗೆ ಯಿಂದ ಗೂಡಿಗೆ ಬಂದು ಸೇರಿತು. ಅದು ಅಂದು ಕೊಂಡಂತೆ ಮಳೆ ಬಂದಿತು. ಎರಡು  ದಿನಗಳಾದರೂ ಮಳೆ ಕಡಿಮೆಯಾಗಲಿಲ್ಲ. ಜೋರಾಗಿಯೇ  ಸುರಿಯುತ್ತಿತ್ತು. ಹೀಗಾಗಿ ತಾಯಿ ಪಕ್ಷಿ ಹೊರಗೆ ಹೋಗಿ  ತನ್ನ  ಮರಿಗಳಿಗೆ ಆಹಾರ ತರಲು ಸಾಧ್ಯವಾಗಲಿಲ್ಲ. ಮರಿಗಳು ತಾಯಿ ಮುಂದೆ ತಮ್ಮ ಕೊಕ್ಕನ್ನು  ಕಳೆದು ಆಹಾರ ಕೇಳುತ್ತಿದ್ದವು. ಮರಿಗಳು ಹಸಿವಿಗಾಗಿ   ಒದ್ದಾಡುವುದನ್ನು ತಾಯಿ ಪಕ್ಷಿಗೆ ನೋಡಲಾಗಲಿಲ್ಲ. ಮಳೆ ಕಡಿಮೆಯಾದ ಹೊರತು ಆಹಾರ ತರಲು ಅದರ ಕೈಯಲ್ಲಿ ಸಾಧ್ಯವಿರಲಿಲ್ಲ.  ಆಗ ಅದು ಕೃಷ್ಣನನ್ನು ಪ್ರಾರ್ಥಿಸುತ್ತಾ,  ಹೀಗೆ ಹೇಳಿತು. ಹೇ ಪ್ರಭು ನೀನು ಗೋಕುಲ ಪರ್ವತವನ್ನೆ  ಎತ್ತಿ  ಗೋಪಾಲಕರ  ಜೀವವನ್ನು ರಕ್ಷ...

ದಿನಕ್ಕೊಂದು ಕಥೆ 1044

*🌻ದಿನಕ್ಕೊಂದು ಕಥೆ🌻* *ಜಿಮ್ ಕಾರ್ಬೆಟ್* ಜಿಮ್ ಕಾರ್ಬೆಟ್  ಬೇಟೆಗಾರನಾಗಿದ್ದವರು  ಪರಿಸರ ಪ್ರೇಮಿಯಾಗಿ ರೂಪುಗೊಂಡ ಒಂದು  ರೋಚಕ ವ್ಯಕ್ತಿತ್ವ.   ಇಂದು ಅವರ ಸಂಸ್ಮರಣೆ ದಿನ. ಎಡ್ವರ್ಡ್ ಜೇಮ್ಸ್ ಜಿಮ್  ಕಾರ್ಬೆಟ್ 1875ರ ಜುಲೈ 25ರಂದು ಭಾರತದ ನೈನಿತಾಲ್‍ನಲ್ಲಿ ಜನಿಸಿದರು.   ಐರಿಶ್ ಮನೆತನಕ್ಕೆ ಸೇರಿದ ಕಾರ್ಬೆಟ್ 13 ಮಕ್ಕಳ ಕುಟುಂಬದಲ್ಲಿ 8ನೇ ಮಗುವಾಗಿ ಜನಿಸಿದರು.  ತಂದೆ ವಿಲಿಯಮ್ ಕ್ರಿಸ್ಟಾಫರ್ ಕಾರ್ಬೆಟ್. ತಾಯಿ ಮೇರಿ ಜೇನ್ ಕಾರ್ಬೆಟ್.  1862ರಲ್ಲಿ ಕ್ರಿಸ್ಟಾಫರ್ ಕಾರ್ಬೆಟ್ ಈ ನಗರದ ಪೋಸ್ಟ್ ಮಾಸ್ಟರ್ ಆಗಿ ಇಲ್ಲಿಗೆ ವರ್ಗಾವಣೆಗೊಂಡರು. ತಂದೆ ಕ್ರಿಸ್ಟಾಫರ್ ಕಾರ್ಬೆಟ್ ನಿಧನರಾದಾಗ ಜಿಮ್ ಕಾರ್ಬೆಟ್ ಇನ್ನೂ ನಾಲ್ಕು ವರ್ಷದ ಬಾಲಕ.  ತಂದೆಯ ಪೋಸ್ಟ್ ಮಾಸ್ಟರ್ ಕೆಲಸ ಅವರ ಹಿರಿಯಣ್ಣ ಟಾಮ್ ಕಾರ್ಬೆಟ್ ಅವರಿಗೆ ದೊರಕಿತು.   ಕಾರ್ಬೆಟ್ ಅವರ ಕುಟುಂಬ ಚಳಿಗಾಲದ ಸಮಯದಲ್ಲಿ ನೈನಿತಾಲ್ ಬೆಟ್ಟ ಪ್ರದೇಶದ ಕೆಳಗಣ ಪ್ರದೇಶವಾದ ಕಾಲಾಧುಂಗಿ ಎಂಬಲ್ಲಿ ನೆಲೆಗೊಳ್ಳುತ್ತಿತ್ತು.  ಎಳೆವಯಸ್ಸಿನಲ್ಲೇ ಜಿಮ್ ತನ್ನ ಕಾಲಾಧುಂಗಿಯ ಸುತ್ತಮುತ್ತಲಿನ ಪರಿಸರದಿಂದಾಗಿ ವನ್ಯಜೀವಿ ಮತ್ತು ಅರಣ್ಯಗಳ ಕುರಿತಾದ ಆಕರ್ಷಣೆಗೊಳಗಾದರು. ಚಿಕ್ಕ ವಯಸ್ಸಿನಲ್ಲಿಯೇ ಯಾವ ಪ್ರಾಣಿ, ಯಾವ ಪಕ್ಷಿ ಎಂಬುದನ್ನು ಅವುಗಳ ಧ್ವನಿ ಸಪ್ಪಳಗಳ ಮೂಲಕವೇ ಪತ್ತೆಹಚ್ಚವುದನ್ನು ರೂಢಿಸಿಕೊಂಡಿದ್ದರು....

ದಿನಕ್ಕೊಂದು ಕಥೆ 1043

*🌻ದಿನಕ್ಕೊಂದು ಕಥೆ🌻* *ನಮಸ್ಕಾರದ ಪ್ರಾಮುಖ್ಯತೆ*        ಮಹಾಭಾರತದ ಯುದ್ಧ ನಡೆಯುತ್ತಿತ್ತು -      ಒಂದು ದಿನ, ದುರ್ಯೋಧನನ ವ್ಯಂಗ್ಯ ವಿಡಂಬನೆಯಿಂದ ನೊಂದ  ಭೀಷ್ಮ ಪಿತಾಮಹ ಹೀಗೆ ಘೋಷಿಸುತ್ತಾನೆ .        *"ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"*         ಅವರ ಘೋಷಣೆ ಬಂದ ಕೂಡಲೇ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಯಿತು -     ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದ್ದರಿಂದ ಪ್ರತಿಯೊಬ್ಬರೂ ಕೆಟ್ಟದ್ದರ ಸಾಧ್ಯತೆಯ ಬಗ್ಗೆ ಚಿಂತೆ ಮಾಡಿದರು. ನಂತರ -   ಶ್ರೀ ಕೃಷ್ಣ ದ್ರೌಪದಿ ಗೆ, ಈಗ ನನ್ನೊಂದಿಗೆ ಬಾ - ಶ್ರೀಕೃಷ್ಣನು ದ್ರೌಪದಿಯೊಂದಿಗೆ ನೇರವಾಗಿ ಭೀಷ್ಮ ಪಿತಾಮಹನ ಶಿಬಿರವನ್ನು ತಲಿಪಿದನು -   ಶಿಬಿರದ ಹೊರಗೆ ನಿಂತು ದ್ರೌಪದಿ ಗೆ – *“ಒಳಗೆ ಹೋಗಿ, ಅಜ್ಜನಿಗೆ ನಮಸ್ಕರಿಸು.”* ಎಂದು ಹೇಳಿದರು       ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ -    *"ಅಖಂಡ ಸೌಭಾಗ್ಯವತಿ ಭವ"* ಎಂದು ಆಶೀರ್ವದಿಸಿದ ಅವರು ನಂತರ ದ್ರೌಪದಿಯನ್ನು ಕೇಳಿದರು !!    *"ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ, ಶ್ರೀ ಕೃಷ್ಣ ಅವರು ನಿನ್ನನ್ನು ಇಲ್ಲಿಗೆ  ಕರೆತಂದಿದ್ದಾರಾ"?* ಆಗ ದ್ರೌಪದಿ ಹೀಗೆ ಹೇಳ...

ದಿನಕ್ಕೊಂದು ಕಥೆ 1042

*🌻 ದಿನಕ್ಕೊಂದು ಕಥೆ*🌻                                                *ಬದುಕಿನ ರೀತಿ*  ಒಂದು ಹೆಮ್ಮರ ಇತ್ತು.  ಒಂದು ಸಸಿ, ಗಾಳಿ ಹೊಡೆತಕ್ಕೆ ಏಳುತ್ತ ಬೀಳುತ್ತ ,ಬೆಳೆಯುತ್ತಿತ್ತು. ಒಬ್ಬ ಸಂತನು ಅಲ್ಲಿಗೆ ಬಂದ. ಎಳೆಯ ಸಸಿಯ ಕಷ್ಟವನ್ನು ಕಂಡು ಮನ ಕರಗಿತು. ಅದಕ್ಕೊಂದು ಕೋಲಿನ ಆಶ್ರಯ ಕೊಡಲು ಹೋದ. ಸಸಿ ಹೇಳಿತು “ಸಂತನೇ”, ಈ ಕೋಲಿನ ಆಶ್ರಯ ನನಗೆ ದಯವಿಟ್ಟು ಕೊಡಬೇಡಿ !” ಸಂತ ಕೇಳಿದ – “ಅದೇಕೆ ಬೇಡ ? ಈ ಕೋಲು ಮಳೆ-ಗಾಳಿಯಿಂದ ನಿನ್ನನ್ನು ರಕ್ಷಿಸುತ್ತದೆ.”   ಸಸಿ ಹೇಳಿತು – “ಎಲ್ಲದಕ್ಕೂ ಆಶ್ರಯವನ್ನು ಬಯಸುವವರು ಮನುಷ್ಯರೇ ವಿನಾ ನಾವಲ್ಲ. ಎಲೆ ಉದುರಬೇಕು. ಅವೆಲ್ಲವನ್ನೂ ಎದುರಿಸಿ ನಾವು ಗಟ್ಟಿಗೊಳ್ಳಬೇಕು. ಭವಿಷ್ಯತ್ತಿನಲ್ಲಿ ಹೆಮ್ಮರವಾಗಿ ಬೆಳೆಯಬೇಕು. ಅದು ನಮ್ಮ ಬದುಕಿನ ರೀತಿ!!” ಸಸಿಯ ಮಾತನ್ನು ಕೇಳಿ ಸಂತರಿಗೆ ಸಾನಂದಾಶ್ಚರ್ಯವಾಯಿತು.  ಸಂಗ್ರಹ: ವೀರೇಶ್ ಅರಸಿಕೆರೆ. ************************************* *🌻 ದಿನಕ್ಕೊಂದು ಕಥೆ 🌻* *ಸಾಮಾನ್ಯನೊಬ್ಬ ಅಸಾಮಾನ್ಯನಾಗಿದ್ದು !* ಕೃಪೆ: ವಿಶ್ವೇಶ್ವರ ಭಟ್ I ಸಂಪಾದಕರು  ವಿಶ್ವವಾಣಿ . ನೀವು ಬ್ರಾಂಡನ್ ಸ್ಟಾಂಟನ್ ಬಗ್ಗೆ ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಬ್ಬ ಸಾಮಾನ್ಯ...

ದಿನಕ್ಕೊಂದು ಕಥೆ 1041

ದಿನಕ್ಕೊಂದು ಕಥೆ *ಹೆಣ ಭಾರವಾದ 🐑ಕುರಿಮರಿ*  ಒಂದೂರಿನಲ್ಲಿ ಒಬ್ಬ ಸತೀಶ ಅಂತ ಹುಡುಗ ಇದ್ದ.ಓ!ಆ ಹುಡುಗ ಯಾರು ಅಂತೀರಾ?ನಾನೇ ಕಣ್ರೀ. ನಮ್ಮ ಊರಲ್ಲಿ ಊರಿಂದ ಹೊರಗೆ ಒಂದು ಹಳ್ಳ ಇತ್ತು.ಹಳ್ಳಕ್ಕೆ ದೊಡ್ಡ ಸೇತುವೆ ಇತ್ತು.ಆ ಸೇತುವೆಯತ್ರ ಮಧ್ಯರಾತ್ರೀಲಿ ದೆವ್ವಗಳು ಓಡಾಡ್ತವೆ ಅಂತ ಊರವರೆಲ್ಲ ಮಾತಾಡ್ತಿದ್ರು. ನನಗೆ ಯಾವಾಗಲೂ ಇಂಥ ಕುತೂಹಲಕಾರಿ ಸಂಗತಿಗಳನ್ನು ಭೇದಿಸುವುದು ಅಂದ್ರೆ ಬಹಳ ಇಷ್ಟ. ಒಂದಿನ ನಾನು ಮಧ್ಯರಾತ್ರೀಲಿ ಹೋಗ್ಬೇಕು ಅಂತ ಅನ್ನುಸ್ತು. ಅಲ್ಲೇನಿದೆ?ನೋಡೇ ಬಿಡಬೇಕು ಅಂತ ಒಂದು ದಿನ ಏಕಾಏಕಿ ನಿರ್ಧಾರ ಮಾಡಿ ಒಬ್ಬನೇ ಹೊರಟೇ ಬಿಟ್ಟೆ.ಮಧ್ಯರಾತ್ರಿ ಹನ್ನೆರಡು ಗಂಟೆ ಆಗಿದೆ.ನಿಧಾನವಾಗಿ ಹೊರಟೆ. ಯಾವ ಕಡೆ ನೋಡಿದರೂ ಕತ್ತಲು ಕತ್ತಲು.ಯಾಕೆಂದ್ರೆ ಅವತ್ತು ಅಮವಾಸೆ ಕಣ್ರೀ.ಒಂದು ಸಣ್ಣ ಇಲಿ ಹೋದ್ರು ಭಯ ಆಗ್ತಿತ್ತು.ಒಂದು ಸಣ್ಣ ಎಲೆ ಗಾಳಿಗೆ ಅಲುಗಾಡಿದರೆ ಸರಸರ ಸರಸರ ಅಂತಿತ್ತು.ಎಂದುಾ ಹೆದರದ ನಾನು ಅವತ್ತು ಒಂದು ಸಣ್ಣ ಎಲೆಗೆ ಹೆದರಲೇಬೇಕಾಯ್ತು. ಯಾಕೇಂದ್ರೆ ಯಾವ ಕಡೆ ನೋಡಿದರೂ ಕತ್ತಲೆ.ಮಧ್ಯರಾತ್ರೀಲಿ ಆಗೊಂದು ಈಗೊಂದು ಗೂಬೆ ಕೂಗೋದು ಬಿಟ್ರೆ ನೀರವ ಮೌನ. ಯಾರೂ ಇಲ್ಲ ನೀವೇ ಊಹೆ ಮಾಡ್ಕೊಳ್ರಿ.ಹೇಗಾಗಿರಬೇಕು? ಧೈರ್ಯವಾಗಿ ನಿಧಾನವಾಗಿ ನಡಕೊಂಡು ನಡಕೊಂಡು ಹೋದೆ. ಅಂತೂ ಇಂತೂ ಆ ಸೇತುವೆಯ ಹತ್ರ ತಲುಪಿದೆ.ನೋಡ್ತಿನಿ ಒಂದು ಸಣ್ಣ ಕುರಿಮರಿ ಆ ಕತ್ತಲ ಸರಿರಾತ್ರೀಲಿ ಮೇಯ್ತಾ ಇದೆ. ಅಯ್ಯೋ!ಪಾಪ ಯಾರೋ  ಕುರಿಮರಿಯನ್ನು ಬಿಟ್ಟು...

ದಿನಕ್ಕೊಂದು ಕಥೆ 1040

*🌻 ದಿನಕ್ಕೊಂದು ಕಥೆ🌻* ನೂರು ಜನರಿದ್ದ ಹಾಸ್ಟೆಲ್ ಒಂದರಲ್ಲಿ ದಿನವೂ ಬೆಳಿಗ್ಗೆ ಉಪ್ಪಿಟ್ಟಿನ ಸಮಾರಾಧನೆ ನಡೆಯುತ್ತಿತ್ತು. ಒಂದುದಿನ ತಿಂಡಿಯ ಕುರಿತು ಅಸಮಧಾಮ ಭುಗಿಲೆದ್ದಿತು. ಉಪ್ಪಿಟ್ಟು ಪ್ರಿಯರಾಗಿದ್ದ 20 ಜನ, ದಿನವೂ ಉಪ್ಪಿಟ್ಟೇ ಇರಲಿ ಅಂತಾ ಬೇಡಿಕೆಯಿಟ್ಟರೆ, ಉಳಿದ 80 ಜನ ದಿನದಿನವೂ ಬೇರೆ ತಿಂಡಿ ಬೇಕು ಅಂತಾ ಕೂತರು. ದಿನದಿವೂ ಬೇರೆ ಕೊಡಲಾಗುವುದಿಲ್ಲ. ತಿಂಗಳಿಗೊಂದು ಮಾಡಬಹುದು ಅಂತಾ ವಾರ್ಡನ್ ಹೇಳಿದರು. ಉಪ್ಪಿಟ್ಟಿನವರು ಆಗಲೂ “ಬೇಡ ಬೇಡ ಉಪ್ಪಿಟ್ಟೇ ಇರಲಿ” ಅಂತಾ ಹಠಹಿಡಿದು ಕೂತಿದ್ದರು. ಉಳಿದವರು “ಅದೆಲ್ಲಾ ಆಗಲ್ಲ. ಬೇರೆ ತಿಂಡಿ ಬೇಕು ಅಂತಾ ರಚ್ಚೆ ಹಿಡಿದರು. ವಾರ್ಡನ್ “ನಾವು ಸಂವಿಧಾನಯುಕ್ತ ಭವ್ಯ ಭಾರತದ ಪ್ರಜಾಪ್ರಭುತ್ವದ ಪ್ರಜೆಗಳು. ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ವೋಟಿಂಗ್ ಮಾಡಿಸಿ ಮೆಜಾರಿಟಿ ನೋಡೋಣ ಎಂದರು. ಇಪ್ಪತ್ತುಜನ “ಉಪ್ಪಿಟ್ಟಿರುವಾಗ ಇವೆಲ್ಲಾ ಯಾಕೆ?” ಅಂತಾ ಕುಸುಗುಟ್ಟಿದರು. ಉಳಿದ 80 ಜನ “ವೋಟಿಂಗ್ ಮಾಡಿ ಪ್ರಜಾಸತ್ತಾತ್ಮಕವಾಗಿ ನಿಮಗೆ ಬುದ್ಧಿ ಕಲಿಸ್ತೀವಿ” ಅಂತಾ ಬುಸುಗುಟ್ಟಿದರು. ಮರುದಿನ ಮತದಾನ. ಉಪ್ಪಿಟ್ಟುಪ್ರಿಯ ಇಪ್ಪತ್ತು ಜನರು ಮೊದಲೇ ನಿರ್ಧರಿಸಿದಂತೆ ಉಪ್ಪಿಟ್ಟಿಗೇ ಮತ ಹಾಕಿದರು. ಉಳಿದ ಎಂಬತ್ತು ಜನರ ಮತಗಳು ಹೀಗಿದ್ದವು: ಮಸಾಲೆ ದೋಸೆ - 18 ಜನ ಆಲೂ ಪರಾಠ - 16 ಜನ ಪೂರಿ ಸಾಗು - 14 ಜನ ಮ್ಯಾಗಿ - 12 ಜನ ಇಡ್ಲಿ ಸಾಂಬಾರ್ - 10 ಜನ ಟೋಸ್ಟ್ ಆಮ್ಲೆಟ್ - 10 ಜನ ಬಹುಮತ ಉ...

ದಿನಕ್ಕೊಂದು ಕಥೆ 1039

ದಿನಕ್ಕೊಂದು ಕಥೆ 🙏🏼🙏🏼ಸಗಣಿ ಮತ್ತು ದೂರ್ವೆಯಲ್ಲಿ ಗಣೇಶನ ಶ್ರೇಷ್ಠತೆ  🙏🏼🙏🏼 ಶನಿ ಮಹಾರಾಜನ ಮಹಿಮೆ  ಎಲ್ಲರಿಗೂ ಗೊತ್ತಿದೆ,  ಶನಿಮಹಾತ್ಮ ಸಾಕ್ಷಾತ್ ಪರಮೇಶ್ವರನನ್ನೆ  ಬಿಟ್ಟಿಲ್ಲ. ಅಂದಮೇಲೆ  ಮನುಷ್ಯನನ್ನು ಬಿಟ್ಟಾನೆಯೇ, ಇಂತಹ ಶನಿದೇವನಿಗೆ, ದೇವಾನು ದೇವತೆಗಳು  ಹೆದರಿ ನಡುಗುತ್ತಾರೆ. ಆದರೆ ಆಂಜನೇಯ ಮತ್ತು ಗಣಪತಿ ಮಾತ್ರ ಶನಿದೇವರಿಗೆ ಹೆದರುವುದಿಲ್ಲ. ಶನಿ ಪರಿಹಾರಕ್ಕೆ ಆಂಜನೇಯ ಹಾಗೂ  ಗಣಪತಿ ಪೂಜೆ ಮಾಡಿದರೆ ಪರಿಹಾರ ಎಂದು ಹೇಳುತ್ತಾರೆ. ಶನಿ ದೋಷ ನಿವಾರಣೆಗೆ ಆಂಜನೇಯನ ಗುಡಿಗೆ ಜನ ಹೋಗುವುದನ್ನು ನೋಡಿರುತ್ತೇವೆ, ಹಾಗೆಯೇ  ಪ್ರಥಮ ಪೂಜಕ,  ಆದಿ ದೈವ, ವಿಘ್ನನಿವಾರಕ, ವಿದ್ಯಾಗಣಪತಿ, ಹೀಗೆ ನಾನಾ ಹೆಸರುಗಳಿಂದ ಕರೆಯುವ  ಗಣೇಶನನ್ನು ಪೂಜಿಸಿದರೆ ಶನಿ ದೋಷ  ನಿವಾರಣೆಯಾಗುತ್ತದೆ ಎಂಬುದರ ಕುರಿತಾಗಿ ಒಂದು ಕಥೆಯಿದೆ.  ಒಂದು ದಿನ ಗಣೇಶ  ನಿಧಾನವಾಗಿ ವಾಯು ವಿಹಾರ  ಹೋಗ್ತಾ ಇದ್ದ. ಹೀಗೆ ಹೋಗ್ತಾ ಇರುವಾಗ ಶನಿದೇವ ಎದುರಿಗೆ  ಬರುತ್ತಿದ್ದ . ಗಿಡ್ಡ ಬುಡ್ಡಕ್ಕೆ ,ಮುದ್ದು ಮುದ್ದಾಗಿರುವ   ಗಣೇಶನನ್ನ ನೋಡಿ  ಶನಿಗೆ ಕೀಟಲೆ ಮಾಡಬೇಕೆನಿಸಿತು.  ಹೀಗೆ ಮನಸ್ಸಿನಲ್ಲಿ ಅಂದುಕೊಂಡ ಶನಿ ಗಣೇಶನಿಗೆ ಎದುರಾಗೆ ಹೊರಟ, ಗಣೇಶ ತನ್ನ ಕಡೆಗೆ  ಶನಿ ಬರುವುದನ್ನು ನೋಡಿದ, ಶನಿಗೆ ಸ್ವಲ್ಪ ಆಟ ಆಡಿಸಬೇಕು ಎಂದು ಅನಿಸಿತು....