ದಿನಕ್ಕೊಂದು ಕಥೆ 1128

*🌻ದಿನಕ್ಕೊಂದು ಕಥೆ🌻*
*" ಅಳುಕು"*

 ಸಾಯಂಕಾಲ , ಸಂಜಯ್ ಕಚೇರಿ ಕೆಲಸ ಮುಗಿಸಿ  ಮನೆಗೆ ಬಂದು ಗೇಟು ತೆರೆದು ಒಳಗೆ ಬರುತ್ತಿದ್ದಂತೆ, ವರಾಂಡದಲ್ಲಿ ಆರಾಮ ಕುರ್ಚಿ ಮೇಲೆ ಕುಳಿತಿದ್ದ ಆತನ ಎಪ್ಪತ್ತೆಂಟು ವರ್ಷದ ವಯೋವೃದ್ಧ ತಂದೆ ಗೋವಿಂದ ರಾಯರು ಆತನ ಕೈಯಲ್ಲಿ ಕಚೇರಿ ಬ್ಯಾಗ್ ಬಿಟ್ಟು ಮತ್ತಿನ್ಧೆನೂ  ಇಲ್ಲದಿರುವುದನ್ನು ಆಸೆ ಕಣ್ಣಿನಿಂದ ಒಮ್ಮೆ ಗಮನಿಸಿ -"ಏನೂ ತಂದಿಲ್ವೇನೋ..? ಹಿಂದೂ"ಎಂದು ಕೇಳಿದಾಗ ಆತ " ಇಲ್ಲಾ ಅಪ್ಪಾಜಿ" ಎನ್ನುತ್ತ ತನ್ನ ರೂಮಿಗೆ ಹೋಗುತ್ತಾನೆ.ಆತನ ತಂದೆ ಮೆಲ್ಲಗಿನ ಸ್ವರದಲ್ಲಿ  "ಹೋಗಲಿ ಬಿಡು" ಎನ್ನುವುದನ್ನು  ಕೇಳಿಸಿಕೊಂಡವ ತನ್ನಷ್ಟಕ್ಕೆ ತಾನು " ಛೇ.. ಎಂಥಾ ಕೆಲಸ ಮಾಡ್ದೆ" ಎಂದು ಅಂದು ಕೊಂಡು ಫ್ರೆಶ್ ಅಪ್ ಆಗಿ ಬಂದವ ಪತ್ನಿ ಕೊಟ್ಟ ಕಾಫೀ ಕುಡಿದು , ಕಚೇರಿಗೆ ಸಂಬಂಧಿಸಿದ ಯಾವುದೋ ಫೈಲ್ ತೆಗೆದುಕೊಂಡು ಬಂದು ವೆರಾಂಡಾ ದಲ್ಲಿ  ಆತನ ತಂದೆ ಕುಳಿತ ಕುರ್ಚಿ ಪಕ್ಕ ಇದ್ದ ಮತ್ತೊಂದು ಕುರ್ಚಿ ಮೇಲೆ ಕುಳಿತು,  ಕೈಯಲ್ಲಿ ಇದ್ದ ಫೈಲ್ ನೋಡುವ ಮೊದಲು ಅಪ್ಪನ ಮುಖ ಗಮನಿಸುತ್ತಾನೆ.ತನ್ನ ತಾಯಿ ತೀರಿ ಹೋದ ನಂತರ ಮೊದಲಿಗಿಂತ ಅವರು ದೈಹಿಕವಾಗಿ ಮಾನಸಿಕವಾಗಿ ಅಶಕ್ತ ರಾಗಿರುತ್ತಾರೆ . ಅವರನ್ನು ನೋಡುತ್ತಿದ್ದಂತೆ ಸಂಜಯ್ ನಿಗೆ ತನ್ನ ಬಾಲ್ಯದ ದಿನಗಳು ನೆನಪಿಗೆ ಬರುತ್ತವೆ....
ಬಾಲ್ಯದಲ್ಲಿ ನಿತ್ಯವೂ ಆತನ ತಂದೆ ಸಂಜೆ ಕಚೇರಿಯಿಂದ ಮನೆಗೆ ಬರುವಾಗ 
ಮಕ್ಕಳು ಇಷ್ಟ ಪಡುವ ಒಂದಿಲ್ಲೊಂದು ಬಿಸಿ ಬಿಸಿ ತಂಡಿ ತರುತ್ತಿದ್ದರು. ಅವರು ಮನೆ ಒಳಗೆ ಬರುತ್ತಿದ್ದಂತೆ ಮಕ್ಕಳು " ಅಪ್ಪಾ.. ಏನಾದ್ರೂ ತಂದಿದ್ದಿಯಾ"ಎಂದು ಕೇಳುವ ಮೊದಲೇ ತಮ್ಮ ಕೈಯಲ್ಲಿ ನ ತಿಂಡಿ ಇರುವ ಪುಟ್ಟ  ಬ್ಯಾಗ್ ನ್ನು ಆತನ ಕೈಗೆ ಕೊಡುತ್ತಿದ್ದುದು... ಆತ ತಕ್ಷಣವೇ ಅದನ್ನು ತೆಗೆದುಕೊಂಡು ಅಮ್ಮನ ಬಳಿ ಓಡಿ ಹೋಗುತ್ತಿದ್ದಂತೆ ಅಲ್ಲಿ ಆತನ ತಮ್ಮ, ತಂಗಿ ಬರುತ್ತಿದ್ದುದು... ಅಮ್ಮ ಅದನ್ನು  ಮೂವರೂ ಮಕ್ಕಳಿಗೆ ಸಮವಾಗಿ ಹಂಚುತಿತ್ತಿದ್ದು... ಅದರ ಪೈಕಿ ಏನಾದರೂ ಮಿಕ್ಕಿದ್ದರೆ ಅಪ್ಪ ಅಮ್ಮ ಇಬ್ಬರೂ ತನ್ನುತ್ತಿದ್ದುದು, ಏನೂ ಉಳಿಯದಾದಾಗ ಮಕ್ಕಳಿಗೆ ಹಂಚಿ ತೃಪ್ತಿ ಪಡುತ್ತಿದ್ದುದು ನೆನಪಿಗೆ ಬಂದಾಗ, ವಯಸ್ಸಾದಂತೆ  ಹಿರಿಯರೂ ಮಕ್ಕಳ ಥರ ಆಗುತ್ತಾರೆ ಎನ್ನುವುದು ಅರ್ಥೈಸಿಕೊಂಡವ ಇಂದು 
ತನ್ನ ತಂದೆಗೆ ನಿರಾಸೆ ಮಾಡಿದೆ  ಎಂಬ ಅಳುಕು ಮನದಲ್ಲಿ ಆರಂಭವಾಗುತ್ತಿದೆ. ಆಗ ಕೈಯಲ್ಲಿ ಇದ್ದ ಫೈಲ್ ಟೇಬಲ್ ಮೇಲೆ ಇಟ್ಟು ಶರ್ಟ್ ಧರಿಸಿ  ಅಪ್ಪನಿಗೆ 
" ಒಂದು ನಿಮಿಷ ಬಂದೆ ಇರಿ ಅಪ್ಪಾಜಿ" ಎಂದು ಹೊರಗೆ ಹೊರಟು ನಿಂತಾಗ,
ಆತನ ತಂದೆ ಕಾಳಜಿ ಪೂರ್ವಕ ವಾಗಿ " ಎಲ್ಲಿಗೆ ಹೋಗ್ತಿದ್ದೀ"ಎಂದು ಕೇಳಿದಾಗ ಆತ ಹಿಂದಿನ ಬೀದಿಗೆ ಹೋಗಿ ಏನಾದರೂ ತಿಂಡಿ...." ಎಂದು ಹೇಳುತ್ತಿದ್ದವನನ್ನು ಅರ್ಧಕ್ಕೆ ತಡೆದು" ಬೇಡಾ ಸುಮ್ನಿರು... ಮಳೆ ಬರ್ತಾ ಇದೆ ಎಲ್ಲೂ ಹೋಗಬೇಡ " ಎನ್ನುತ್ತಾರೆ. ಆದರೂ ಆತನ ಮನದಲ್ಲಿ ಆ ಒಂದು ಅಳುಕು ಕಾಡಲು ಆರಂಭಿಸಿದಾಗ ಮನದಲ್ಲಿ " ನಾಳೆಯಿಂದ ಎಷ್ಟೇ ಕೆಲಸ ಇದ್ದರೂ ತಿಂಡಿ 
 ತರಲು ಮರೆಯಲ್ಲ " ಎಂದುಕೊಳ್ಳುತ್ತಾನೆ.
                                      
ಲೇಖಕರು:ಅರವಿಂದ.ಜಿ.ಜೋಷಿ.
      ಮೈಸೂರು
ಸಂಗ್ರಹ ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1097

ದಿನಕ್ಕೊಂದು ಕಥೆ 1110