Posts

ದಿನಕ್ಕೊಂದು ಕಥೆ 956

🌻ದಿನಕ್ಕೊಂದು ಕಥೆ 🌻 ಬೆರಗಿನ ಬೆಳಕು ಡಾ.ಗುರುರಾಜ ಕರ್ಜಗಿ ಸಂಗ್ರಹ : ಪ್ರಜಾವಾಣಿ ಪತ್ರಿಕೆ ಪರರ ಕೃಪೆ ಇಲ್ಲದ ಸಾಧನೆ    ಬೋಧಿಸತ್ವ ಒಂದು ಸ್ವರ್ಣಹಂಸೆಯಾಗಿ ಹುಟ್ಟಿದ್ದ. ಆತನಿಗೆ ತಮ್ಮನೊಬ್ಬನಿದ್ದ. ಇಬ್ಬರೂ ಯಾವಾಗಲೂ ಜೊತೆಯಾಗಿಯೇ ಇರುತ್ತಿದ್ದರು. ಅವರು ಬದುಕಿದ್ದು ಚಿತ್ರಕೂಟದ ಪರ್ವತ ಪ್ರದೇಶದಲ್ಲಿ. ಆದರೆ, ದಿನವೂ ಹಿಮಾಲಯದ ಪರ್ವತಗಳಿಗೆ ಹಾರಿ ಹೋಗಿ ಅಲ್ಲಿ ದೊರೆಯುವ ಅತ್ಯುತ್ತಮ ಕಾಳುಗಳನ್ನು ತಿಂದು ಬರುತ್ತಿದ್ದರು.    ಒಂದು ದಿನ ಹೀಗೆ ಕಾಳುಗಳನ್ನು ತಿಂದು ಹಾರಿಬರುವಾಗ ಮತ್ತೊಂದು ದಾರಿಯನ್ನು ಹಿಡಿದು ಬಂದರು. ದಾರಿಯಲ್ಲಿ ಒಂದು ಹೊಳೆ ಹೊಳೆವ ಪರ್ವತವನ್ನು ಕಂಡವು. ಕುತೂಹಲದಿಂದ ಆ ಪರ್ವತದ ಶಿಖರಗಳ ಮೇಲೆ ಇಳಿದು ನೋಡಿದಾಗ ಅವರಿಗೊಂದು ಆಶ್ಚರ್ಯ ಕಾದಿತ್ತು. ಅದೊಂದು ಕಂಚಿನ ಪರ್ವತ. ಅದರ ಹೆಸರು ನೆರು. ಈ ನೆರು ಪರ್ವತದ ಮೇಲೆ ವಾಸ ಮಾಡುತ್ತಿದ್ದ ಎಲ್ಲ ಪಕ್ಷಿ, ಪ್ರಾಣಿಗಳು ಬಂಗಾರದ ಬಣ್ಣದಾಗಿದ್ದವು. ಇದರ ವಿಷಯವಾಗಿ ವಿಚಾರಿಸಿದಾಗ ತಿಳಿದು ಬಂದದ್ದಿಷ್ಟು. ಇವೆಲ್ಲ ಸಾಮಾನ್ಯವಾದ ಪಶು-ಪಕ್ಷಿಗಳು. ಬೇರೆ ಪರ್ವತಗಳಲ್ಲಿದ್ದಾಗ ಅವು ತಮ್ಮ ತಮ್ಮ ನೈಸರ್ಗಿಕ ಬಣ್ಣಗಳಲ್ಲೇ ಇರುತ್ತವೆ. ಆದರೆ, ಈ ಕಂಚಿನ ಪರ್ವತದ ಮೇಲೆ ಬಂದೊಡನೆ ಅವು ಸ್ವರ್ಣದ ಬಣ್ಣವನ್ನು ತಳೆಯುತ್ತವೆ.    ಅಲ್ಲಿ ಹಾರಾಡುತ್ತಿದ್ದ ಗರುಡನನ್ನು ಈ ವಿಷಯದ ಬಗ್ಗೆ ಕೇಳಿದಾಗ ಅದು ಹೇಳಿತು, ’ಈ ಪರ್ವತಕ್ಕೆ ಬಂದೊಡನೆ ಎಲ್ಲರೂ ಸಮಾನರೇ ಆಗ...

ದಿನಕ್ಕೊಂದು ಕಥೆ 955

🌻🌻 ದಿನಕ್ಕೊಂದು ಕಥೆ🌻🌻 💐*ಕೊಂಬೆಗೆ ಅಂಟಿ ಕುಳಿತ ಗರುಡ;*💐 ಒಬ್ಬ ರಾಜನಿಗೆ ಪರದೇಶದಲ್ಲಿದ್ದ ಅವನ ಸ್ನೇಹಿತನೊಬ್ಬ ಅತ್ಯಂತ  ಸುಂದರವಾದ ಎರಡು ಗರುಡ ಪಕ್ಷಿಗಳನ್ನು ಕಾಣಿಕೆಯಾಗಿ ಕಳುಹಿಸಿದ.  ಅವುಗಳಷ್ಟು ಸುಂದರವಾದ ಪಕ್ಷಿಗಳನ್ನು ರಾಜ ನೋಡಿರಲೇ ಇಲ್ಲ.  ಅವುಗಳಿಗೆ ಚೆನ್ನಾಗಿ ತರಬೇತಿ ದೊರಕಲೆಂದು ತಮ್ಮ ರಾಜ್ಯದಲ್ಲಿದ್ದ ಶ್ರೇಷ್ಠ ಪಕ್ಷಿ ತರಬೇತಿದಾರನಿಗೆ ಅವನ್ನು ಒಪ್ಪಿಸಿದ.  ಪ್ರತಿದಿನ ಅವುಗಳ ವಿವರ ತನಗೆ ದೊರಕುವಂತೆ ಆಜ್ಞೆ ನೀಡಿದ.  ತರಬೇತಿದಾರ ತನ್ನ ತರಬೇತಿಯನ್ನು ಪ್ರಾರಂಭಿಸಿದ. ವಾರ ಕಳೆಯಿತು, ತಿಂಗಳು ಕಳೆಯಿತು, ತರಬೇತಿದಾರ ದಿನವೂ ವರದಿ ಒಪ್ಪಿಸುತ್ತಿದ್ದ. ಒಂದು ಗರುಡಪಕ್ಷಿ ಗಂಭೀರವಾಗಿ, ರಾಜಯೋಗ್ಯವಾದ ಶೈಲಿಯಿಂದ ಹಾರುತ್ತ ಇಡೀ ಆಕಾಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.  ಅದು ರೆಕ್ಕೆಯನ್ನು ಬಿಚ್ಚಿ ಆಕಾಶದಲ್ಲಿ ಹಾರಾಡಿದ್ದನ್ನು ನೋಡಿದ ಯಾರಿಗಾದರೂ ಪ್ರೀತಿ, ಅಭಿಮಾನ ಉಕ್ಕಿ ಬರುತ್ತಿತ್ತು. ಆದರೆ ಎರಡನೆಯ ಪಕ್ಷಿಯ ಬಗ್ಗೆ ವರದಿ ನಿರಾಶಾದಾಯಕವಾಗಿತ್ತು ಅದು ಹಾರಲು ಪ್ರಯತ್ನಿಸಲೇ ಇಲ್ಲ. ಏನೆಷ್ಟು ಪುಸಲಾಯಿಸಿದರೂ, ಆಸೆ ತೋರಿದರೂ, ಹೆದರಿಸಿದರೂ, ಅದು ತಾನು ಕುಳಿತ ಮರದ ಕೊಂಬೆಯನ್ನು ಬಿಟ್ಟು ಸರಿಯುತ್ತಲೇ ಇಲ್ಲ.  ರಾಜ ತನ್ನ ಅರಮನೆಯ ಕಿಟಕಿಯಿಂದ ಅದನ್ನು ಗಮನಿಸುತ್ತಲೇ ಇದ್ದ. ಅವನಿಗೆ ಈ ಗರುಡ ಪಕ್ಷಿಯ ಬಗ್ಗೆ ಚಿಂತೆಯಾಗಿ ಮತ್ತೊಬ್ಬ ತರಬೇತಿದಾರನನ್ನು ನಿಯಮಿಸಿದ....

ದಿನಕ್ಕೊಂದು ಕಥೆ 954

ದಿನಕ್ಕೊಂದು ಕಥೆ ಇರಾಕ್‌ ದೇಶದ ಕತೆ: ಬುದ್ಧಿ ಕಲಿತ ಸೋಮಾರಿ ಒಂದು ಪಟ್ಟಣದಲ್ಲಿ ಮಹಮೂದ್‌ ಎಂಬ ವ್ಯಾಪಾರಿಯಿದ್ದ. ಅವನು ಮನೆಮನೆಗಳಿಗೆ ಹೋಗಿ ಮೂಲೆಯಲ್ಲಿ ಎಸೆದ ಹಳೆಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದ. ಅದು ನಿರುಪಯೋಗಿ ವಸ್ತುವೆಂಬ ಭಾವನೆಯಿಂದ ಅವನು ಎಷ್ಟು ಕಡಿಮೆ ಬೆಲೆ ಕೊಟ್ಟರೂ ಅಷ್ಟನ್ನೇ ಜನ ಸ್ವೀಕರಿಸಿ ಅವನಿಗೆ ವಸ್ತುವನ್ನು ಒಪ್ಪಿಸಿಬಿಡುತ್ತಿದ್ದರು. ಬುದ್ಧಿವಂತನಾದ ಮಹಮೂದ್‌ ಈ ವಸ್ತುವನ್ನು ಥಳಥಳ ಹೊಳೆಯುವ ಹಾಗೆ ಮಾಡಿ ರಾಜ ಮಹಾರಾಜರು, ಧನಿಕರಿಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದ. ಅದೊಂದು ಅಮೂಲ್ಯ ವಸ್ತುವೆಂದು ಅವರು ಕೈತುಂಬ ಚಿನ್ನದ ನಾಣ್ಯಗಳನ್ನೇ ಬೆಲೆಯಾಗಿ ಕೊಟ್ಟು ಕೊಳ್ಳುತ್ತಿದ್ದರು. ಹೀಗೆ ಬಂದ ಹಣದಿಂದ ವ್ಯಾಪಾರಿ ಆಗರ್ಭ ಶ್ರೀಮಂತನಾದ. ವ್ಯಾಪಾರಿಗೆ ಸಲೀಂ ಎಂಬ ಒಬ್ಬನೇ ಮಗನಿದ್ದ. ತನ್ನ ಮಗ ಮುಂದೆ ಈ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಿ ಸಂಪತ್ತನ್ನು ವೃದ್ಧಿಪಡಿಸುತ್ತಾನೆಂದು ವ್ಯಾಪಾರಿ ಭಾವಿಸಿದ್ದ. ಆದರೆ ಅವನಿಗೆ ಯಾವುದೇ ಕೆಲಸದಲ್ಲಿಯೂ ಆಸಕ್ತಿಯಿರಲಿಲ್ಲ. ಹೊಟ್ಟೆ ತುಂಬ ಊಟ ಮಾಡುವುದು, ಕೆಲಸ ಮಾಡದೆ ಅಲೆಯುವ ಗೆಳೆಯರ ಜೊತೆಗೆ ವಿಹಾರಕ್ಕೆ ಹೋಗುವುದು, ಹೊತ್ತೇರುವವರೆಗೂ ಮಲಗುವುದು ಇದರಲ್ಲಿಯೇ ಆಯುಷ್ಯ ಕಳೆಯುತ್ತಿದ್ದ. ಇದನ್ನು ಕಂಡು ವ್ಯಾಪಾರಿಗೆ ಬೇಸರವಾಗುತ್ತಿತ್ತು. ವೃತ್ತಿಯನ್ನು ಕಡೆಗಣಿಸಬಾರದೆಂದು ಹಲವು ರೀತಿಯಿಂದ ಮಗನಿಗೆ ಬುದ್ಧಿ ಹೇಳಿದ. ಆದರೂ ಅವನು ದಾರಿಗೆ ಬರಲಿಲ್ಲ. ಒಂದು ದಿನ ವ್...

ದಿನಕ್ಕೊಂದು ಕಥೆ 953

ದಿನಕ್ಕೊಂದು ಕಥೆ. ‘ಚಪ್ಪಲಿ ಹಾಕಿ ಭಾರತದ ನೆಲ ಮೆಟ್ಟಲ್ಲ’ ಎಂದು ಬಂದ ಇಸ್ರೇಲಿ ಪ್ರಜೆಗೆ ‘ಏಂಜಲ್’ ಆದ ಬೆಂಗ್ಳೂರು ಕಾಪ್ ಅಹ್ಮದ್. ಬೆಂಗಳೂರು: ತನ್ನಿಚ್ಛೆಗೆ ತಕ್ಕಂತೆ ಬೆಳೆದ ಗಡ್ಡ, ಮೀಸೆ, ದಟ್ಟ ತಲೆಯ ಕೂದಲು, ಕೈ ಕಾಲುಗಳಲ್ಲಿ ಚಿತ್ರ ವಿಚಿತ್ರ ದಾರಗಳು, ಕೇವಲ ಬರ್ಮುಡಾ ಚಡ್ಡಿ ಹಾಕಿ ಮೇಲೆ ಯಾವ ಶರ್ಟನ್ನೂ ಹಾಕದೆ ಬರಿ ಮೈಯಲ್ಲಿ, ಬರಿಗಾಲಲ್ಲಿ ಚಿಂತಾಕ್ರಾಂತನಾಗಿ ಒಂದೆರಡು ಬ್ಯಾಗ್​ಗಳು ಹಾಗೂ ಆಫ್ರಿಕಾ ದೇಶದ ವಾದ್ಯ ಜಂಬೆಯನ್ನು ತನ್ನ ಪಕ್ಕದಲ್ಲಿಟ್ಟುಕೊಂಡು, ತಿಳಿಯದ ಭಾಷೆಯಲ್ಲಿ ವಟಗುಡುತ್ತ, ಸುಮಾರು 25 ವಯಸ್ಸಿನ ಯುವಕ ನಿಮ್ಮ ಮುಂದೆ ಬಂದು ಕುಳಿತರೆ ನೀವೇನು ಮಾಡುತ್ತೀರಿ? ಒಂದೋ ಅರೆ ಹುಚ್ಚ ಎಂದುಕೊಂಡು ಉದಾಸೀನ ಮಾಡ್ತೀರಿ.. ಇಲ್ಲವೇ ಪೊಲೀಸರಿಗೆ ಮಾಹಿತಿ ನೀಡಿ ಸುಮ್ಮನಾಗ್ತೀರಿ. ಆದ್ರೆ, ಅದೇ ಪೊಲೀಸ್​ ಸ್ಟೇಷನ್​ಗೆ ಇಂಥ ವ್ಯಕ್ತಿ ಬಂದರೆ..? ಹೌದು. ಇಂಥ ಸನ್ನಿವೇಶವೊಂದು ನಗರದ ಕಬ್ಬನ್ ಪಾರ್ಕ್​ ಪೊಲೀಸರಿಗೆ ಎದುರಾಗಿತ್ತು. ಆದ್ರೆ, ಆ ವ್ಯಕ್ತಿ ಬಗ್ಗೆ ಉದಾಸೀನ ಮಾಡದೇ ಇಲ್ಲಿನ ಸಿಬ್ಬಂದಿ ಸ್ಪಂದಿಸಿದ ರೀತಿಗೆ ಇಡೀ ಇಸ್ರೇಲ್​ ಭೇಷ್ ಅಂತಿದ್ದರೆ, ಭಾರತದ ಗರಿಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಮೆರೆಯಲು ಕಾರಣವಾಗಿದೆ. ಅಷ್ಟಕ್ಕೂ ಆಗಿದ್ದು ಏನಂದ್ರೆ, ಕಳೆದ ನವೆಂಬರ್​ 24ರ ಭಾನುವಾರ ಭಾರತದ ಬಗ್ಗೆ ಅತೀವ ಅಭಿಮಾನ ಹೊಂದಿರೋ ‘ಯೀಡೋ’ ಅನ್ನೋ ಹೆಸರಿನ ಇಸ್ರೇಲ್​ ದೇಶದ ಪ್ರಗತಿ ಪರ ರೈತ ಬೆಂಗಳೂರಿಗೆ ಬಂದಿದ್ದರು. ನಮ್ಮ ದೇ...

ದಿನಕ್ಕೊಂದು ಕಥೆ 952

ದಿನಕ್ಕೊಂದು ಕಥೆ ಹಾಲಿನಿಂದ_ಬೆಳಕಾಗುವ_ಪರಿ..!  ಇದೇನಿದು ಹಾಲಿನಿಂದ ಬೆಳಕೇ?  ಸಂಸ್ಕೃತದಲ್ಲಿ ಒಂದು ಕಥೆ ಇದೆ..  ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ.. ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ.. ಆಗ ಹಾಲು ಹೇಳಿತಂತೆ..' ದೇವರೇ.. ನಾನು ಹಾಲು ಆಕಳು.. ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ... ಆದರೆ ಈ ಪಾಪಿ ಮಾನವ ನನಗೆ ಹುಳಿ ಇಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ.. ನನಗೆ ಹಾಲಾಗೇ ಇರುವಂತೆ ವರ ಕೊಡು ' ಎಂದು ಬೇಡಿಕೊಂಡಿತಂತೆ.. ಆಗ ದೇವರು ನಕ್ಕು.  ' ಎಲೈ .. ಹಾಲೇ ಇಲ್ಲಿ ಕೇಳು.. ನೀನು ಹಾಲಾಗಿ ಇರುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು..  ನೀನು ಹಾಲಾದರೆ ಒಂದು ದಿನ ಮಾತ್ರ ಬದುಕುವೆ.. ಹಾಲಿಗೆ ಹೆಪ್ಪಾಕಿದರೆ ಎರಡು ದಿನ ಬದುಕುವೆ.. ಮೊಸರಾಗಿ ಕಡೆದರೆ.. ಹುಳಿ ಹುಳಿಯಾಗಿ ಮೂರನೇ ದಿನ ಬದುಕುವೆ.. ಮಜ್ಜಿಗೆಯಿಂದ ಬಂದ ಬೆಣ್ಣೆಯಾದರೆ ವಾರಗಟ್ಟಲೆ ಬದುಕುವೆ... ಬೆಣ್ಣೆಯನ್ನು  ಹದವಾಗಿ ಕಾಯಿಸಿ.. ಮೇಲೆ ಒಂದೆರೆಡು ವೀಳ್ಯೆದೆಲೆ ಹಾಕಿದರೆ ಘಮಗುಡುವ ತುಪ್ಪವಾಗುವೆ.. ಆ ತುಪ್ಪದಿಂದ ದೀಪ ಹಚ್ಚಿದರೆ ನನಗೆ ಬೆಳಕಾಗುವೆ.   ಈಗ ಹೇಳು ಒಂದು ದಿನ   ಹಾಲಾಗಿಯೇ ಹುಟ್ಟಿ ಹಾಲಾಗಿಯೇ ಸಾಯುವೆಯಾ..  ಅಥವಾ ಕ್ಷಣ ಕ್ಷಣವೂ.. ಅನುದಿನವೂ .. ದಿನ ದಿನವೂ..  ಬೆಳೆದು.. ರೂಪಾಂತರ ಪಡೆದು ..  ಭಗವಂತನಿಗೆ ಬೆಳಕಾಗುವೆಯ...

ದಿನಕ್ಕೊಂದು ಕಥೆ 951

ದಿನಕ್ಕೊಂದು ಕಥೆ ಹವ್ಯಾಸ ಬದಲಿಸಿದರೆ ಹಣೆಬರಹ ಬದಲಾದೀತು! ಇದು ಎರಡು ಓಟೆಗಳ ಕಥೆ. ಒಮ್ಮೆ ಒಬ್ಬ ಗೃಹಿಣಿ ಎರಡು ಮಾವಿನ ಹಣ್ಣಿನ ಓಟೆಗಳನ್ನು ತಿಪ್ಪೆಯ ಮೇಲೆ ಬಿಸಾಡಿದಳು. ಒಂದು ಓಟೆ ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯ ಗೊಬ್ಬರ ಪೌಷ್ಟಿಕಾಂಶ ಕೊಡುತ್ತದೆ, ಸಸಿಯಾಗುತ್ತೇನೆ, ನಂತರ ಸಣ್ಣ ಗಿಡವಾಗುತ್ತೇನೆ, ಕಾಲಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರ ಮಾವಿನ ಹಣ್ಣನ್ನು ಕೋಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆ ಎಂದು ಯೋಚಿಸಿ ಅದರಂತೆಯೇ ಬೆಳೆಯಿತು, ಬದುಕಿತು. ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಓಟೆ ನನ್ನ ಬೇರುಗಳಿಗೆ ಅಂತರ್ಜಲ ಸಿಕ್ಕದಿದ್ದರೇ? ಪೌಷ್ಟಿಕಾಂಶ ಸಿಗದಿದ್ದರೇ? ಗಿಡವಾದಾಗ ಕುರಿ ಮೇಕೆಗಳು ಬಂದು ತಿಂದುಬಿಟ್ಟರೇ? ಮರವಾಗಿ ಹಣ್ಣು ಬಿಡುವಾಗ, ಜನ ಹಣ್ಣು ಉದುರಿಸಲು ಕಲ್ಲು ಹೊಡೆದರೆ ನನಗೆ ನೋವಾಗುದಿಲ್ಲವೇ? ಎಂದೆಲ್ಲ ಯೋಚಿಸಿ ಬೇರನ್ನು ಕೆಳಗೆ ಬಿಡದೆ, ಮೇಲೆ ಸಸಿಯಾಗಿ ಬೆಳೆಯದೆ ಹಾಗೆಯೇ ಉಳಿಯಿತು. ಕೆಲವೇ ದಿನಗಳಲ್ಲಿ ತಿಪ್ಪೆಯಲ್ಲಿನ ಗೊಬ್ಬರದೊಂದಿಗೆ ಗೊಬ್ಬರವಾಗಿ ಬೆರೆತು ಹಾಳಾಗಿ ಹೋಯಿತು. ಮೊದಲನೆಯ ಓಟೆಯ ಮನೋಭಾವ ಸಕಾರಾತ್ಮಕ. ಎರಡನೆಯ ಓಟೆಯ ಮನೋಭಾವ ನಕಾರಾತ್ಮಕ. ಸಕಾರಾತ್ಮಕ ವಾಗಿದ್ದ ಓಟೆ ಬೆಳೆದು ದಶಕಗಳ ಕಾಲ ಉಳಿಯಿತು. ಆದರೆ ನಕಾರಾತ್ಮಕವಾಗಿದ್ದ ಓಟೆ ಒಂದೆರಡು ವಾರಗಳಲ್ಲೇ ಮರೆಯಾಗಿ ಹೋಯಿತು. ನೀಜ ಜೀವನದಲ್ಲೂ ಸಹ ...

ದಿನಕ್ಕೊಂದು ಕಥೆ 950

ದಿನಕ್ಕೊಂದು ಕಥೆ ಲೇಖಕರು:ಡಾ.ಗವಿಸ್ವಾಮಿ. ಗಂಗಮ್ಮ ತಾಯಿ ಮೂರು ಅವಕಾಶಗಳನ್ನು ಕೊಡುತ್ತಾಳಂತೆ. ಮುಳುಗುತ್ತಿರುವವನನ್ನು ಬದುಕಿಕೋ ಹೋಗೆಂದು ಮೂರು ಸಲ ಮೇಲಕ್ಕೆ ಚಿಮ್ಮಿಸಿ ತೇಲಿಸುತ್ತಾಳಂತೆ. ಆದರೆ ಮುಳುಗಲೆಂದೇ ಹಾರಿದವನಿಗೆ ಎಷ್ಟು ಅವಕಾಶ ಕೊಟ್ಟರೇನು ಬಂತು? ಒಬ್ಬ ಆಗ ತಾನೇ ಧುಮುಕಿ , ಗಂಗೆಯ ಒಡಲಾಳಕ್ಕೆ ಇಳಿದು ಹೋಗುತ್ತಿದ್ದ . ಆತನನ್ನು ಕಂಡು ಮರುಗಿದ ಗಂಗೆಗೆ ಅವನೊಂದಿಗೆ ಮೂರು ಮಾತನ್ನಾದರೂ ಆಡಿ ಬೀಳ್ಕೊಡುವ ಬಯಕೆಯಾಯಿತು. "ಹುಟ್ಟುಬಟ್ಟೆಯಲ್ಲಿ ಜಿಗಿಯುತ್ತಿದ್ದ ವಯಸ್ಸಿನಿಂದಲೂ ನಿನ್ನನ್ನು ನೋಡುತ್ತಿದ್ದೇನೆ. ನೀನು ಮುಳುಗುವ ಆಸಾಮಿಯಲ್ಲ. ಏನಾಯಿತು ಹೇಳು?" "ನಿಜ ತಾಯಿ, ಬದುಕಿನುದ್ದಕ್ಕೂ ಘೋರ ಸುಳಿಗಳನ್ನು ಹಾದು ಬಂದಿದ್ದೇನೆ ..ಅಪ್ಪನ ಮೊಣಕಾಲು ಹಿಡಿದು ತಿರುಗುತ್ತಿದ್ದ ವಯಸ್ಸಿನಲ್ಲಿ ಪ್ಲೇಗು ಮಾರಿ ಅವನನ್ನು ಹೊತ್ತೊಯ್ದಾದಾಗಲೂ ನಾನು ಮುಳುಗಲಿಲ್ಲ.ಅವರಿವರ ಮನೆಯ ಕಸ ಹೊತ್ತು ಸುರಿದೆ,ಜೀತ ಮಾಡಿದೆ.ಹೆತ್ತವಳನ್ನು ಕಾಪಾಡಿಕೊಂಡೆ..ಎದೆ ಮಟ್ಟಕ್ಕೆ  ಬೆಳೆದ ಮಗ  ಕಾಡಾನೆಯ ಕಾಲಿಗೆ ತುತ್ತಾದಾಗಲೂ ನಾನು ಮುಳುಗಲಿಲ್ಲ..ಕೆಂಡದ ಉಂಡೆಗಳನ್ನು ಎದೆ ಗೂಡಿನಲ್ಲಿ  ಬಚ್ಚಿಟ್ಟುಕೊಂಡು ಮರುದಿನವೇ ಆರಂಭಕ್ಕೆ ಕಟ್ಟಿದೆ..ಬರಗಾಲ ಬಂದು ಬಾಯಿ ತೆರೆದುಕೊಂಡಿದ್ದ ಭೂಮ್ತಾಯಿಯೊಡಲಲ್ಲಿ ನನ್ನೆರಡು ಎತ್ತುಗಳನ್ನು ಹುಗಿದು ಮುಚ್ಚಿದ ದಿನದಂದೂ ನಾನು ಮುಳುಗಲಿಲ್ಲ.. ಇಂದು ಮಾತಿಗೆ ಅಂಜಿ, ಮಾನಕ್ಕೆ ಅಂಜಿ ಮುಳುಗುತ್ತಿದ್ದೇನೆ ತಾಯಿ...

ದಿನಕ್ಕೊಂದು ಕಥೆ 949

*🌻ದಿನಕ್ಕೊಂದು ಕಥೆ🌻* ಅಂದು ಉದ್ಯಮಿ ಅಶೋಕ್‌ ಖಾಡೆ, ಮಂದಿರದ ಜೀರ್ಣೋದ್ಧಾರಕ್ಕಾಗಿ 1 ಕೋಟಿ ರೂಪಾಯಿ ಚೆಕ್‌ ಕೊಟ್ಟು, ಕಣ್ಣಂಚಿನಲ್ಲಿ ನೀರು ತಂದುಕೊಂಡು ಹೇಳಿದರು: ""ನಮ್ಮದು ದಲಿತ ಕುಟುಂಬ. ನಾನು ಚಮ್ಮಾ...

ದಿನಕ್ಕೊಂದು ಕಥೆ 948

*🌻ದಿನಕ್ಕೊಂದು ಕಥೆ🌻* ಕೃಪೆ:Umeshchar kb ಒಮ್ಮೆ ಇಬ್ಬರು ನೆರೆ ಹೊರೆಯ ರಾಜರು ರಥದಲ್ಲಿ ಪ್ರಯಾಣಿಸುತ್ತ ಒಂದು ಇಕ್ಕಟ್ಟಾದ ಸೇತುವೆಯ ಮೇಲೆ ಎದಿರಾಗುತ್ತಾರೆ. ಒಬ್ಬರು ಮುಂದೆ ಹೋಗಬೇಕಾದರೆ, ಇನ್ನೊಬ್ಬ ರಾಜನು ತನ...

ದಿನಕ್ಕೊಂದು ಕಥೆ 947

*🌻ದಿನಕ್ಕೊಂದು ಕಥೆ🌻* *ಏಕಾಂಗಿಯಾಗಿ 300 ಚೀನಿ ಸೈನಿಕರನ್ನು ಹೊಡೆದುರುಳಿಸಿದ್ದ ಜಸ್ವಂತ್‍ಸಿಂಗ್ ಯಶೋಗಾತೆಗೆ ಸ್ವತಃ ಚೀನೀಯರೇ ತಲೆಬಾಗಿದ್ದರು! ಈ ಯೋಧನ ಸಾಹಸಕ್ಕೊಂದು ಸೆಲ್ಯೂಟ್…* ನಮ್ಮ ದೇಶಕ್ಕಾಗಿ ...