ದಿನಕ್ಕೊಂದು ಕಥೆ 1135
"ಎಲ್ಲಿಗೆ ನಿಲ್ಲಿಸಬೇಕು? ಎoದು ತಿಳಿದರೇ ಅದೇ ತೃಪ್ತಿ" “ಕೌನ್ ಬನೇಗಾ ಕರೋಡ್‌ಪತಿ” - ಇತ್ತೀಚಿನ ಸಂಚಿಕೆಯಲ್ಲಿ “ಫಾಸ್ಟೆಸ್ಟ್ ಫಿಂಗರ್ ಫಸ್ಟ್” ಸುತ್ತಿನಲ್ಲಿ ಅತ್ಯಂತ ವೇಗವಾಗಿ ಉತ್ತರಿಸಿ ಹಾಟ್ ಸೀಟಿಗೆ ಬಂದವರು ಡಾ. ನೀರಜ್ ಸಕ್ಸೇನಾ. ಅವರು ಹೇಗೆ ಕುಳಿತಿದ್ದರು ಗೊತ್ತಾ? ಕೂಗಲಿಲ್ಲ, ಕುಣಿಯಲಿಲ್ಲ, ಅಳಲಿಲ್ಲ, ಕೈ ಎತ್ತಿ ಸಂಭ್ರಮಿಸಲಿಲ್ಲ, ಅಮಿತಾಭ್ ಅವರನ್ನು ತಬ್ಬಿಕೊಳ್ಳಲೂ ಇಲ್ಲ. ಅತ್ಯಂತ ಶಾಂತವಾಗಿ, ಮುಗುಳ್ನಗೆಯೊಂದಿಗೆ ಕುಳಿತರು. ಡಾ. ನೀರಜ್ ಅವರು ಒಬ್ಬ ವಿಜ್ಞಾನಿ, Ph.D ಪದವೀಧರರು. ಈಗ ಕೋಲ್ಕತ್ತಾದ ಒಂದು ವಿಶ್ವವಿದ್ಯಾಲಯದ ಕುಲಪತಿಗಳು. ಅತ್ಯಂತ ಸರಳ, ಸೌಮ್ಯ ವ್ಯಕ್ತಿತ್ವ. ಅವರು ಹೇಳಿದ ಒಂದು ಮಾತು ಮನಸ್ಸಿಗೆ ಚುಚ್ಚಿತು - “ನನಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರೊಂದಿಗೆ ಕೆಲಸ ಮಾಡುವ ಭಾಗ್ಯ ಸಿಕ್ಕಿತು. ಮೊದಲು ನಾನು ‘ನಾನು, ನನ್ನದು’ ಎಂದು ಮಾತ್ರ ಯೋಚಿಸುತ್ತಿದ್ದೆ. ಆದರೆ ಕಲಾಂ ಸರ್ ಪ್ರಭಾವದಿಂದ, ‘ಇತರರ ಬಗ್ಗೆ, ದೇಶದ ಬಗ್ಗೆ’ ಯೋಚಿಸಲು ಕಲಿತೆ.” ಆಟ ಶುರುವಾಯಿತು. ಒಂದು ಬಾರಿ Audience Poll ಬಳಸಿದರು. “ಡಬಲ್ ಡಿಪ್” ಲೈಫ್‌ಲೈನ್ ಇತ್ತು, ಅದರಿಂದ ಇನ್ನೊಂದು ಅವಕಾಶವೂ ಸಿಕ್ಕಿತು. ಪ್ರತಿ ಪ್ರಶ್ನೆಗೂ ಅಷ್ಟು ಸುಲಭವಾಗಿ ಉತ್ತರಿಸಿದರು. ಅವರ ಬುದ್ಧಿವಂತಿಕೆ ಕಂಡು ಎಲ್ಲರೂ ಬೆರಗಾದರು. ₹3,20,000 ಗೆದ್ದರು. ಜೊತೆಗೆ ಅದೇ ಮೊತ್ತದ ಬೋನಸ್. ನಂತರ ಬ್ರೇಕ್ ಆಯಿತು. ಬ್ರೇಕ್ ಆದ ಮೇಲೆ ಅಮಿತಾ...