ದಿನಕ್ಕೊಂದು ಕಥೆ 1135
"ಎಲ್ಲಿಗೆ ನಿಲ್ಲಿಸಬೇಕು? ಎoದು ತಿಳಿದರೇ ಅದೇ ತೃಪ್ತಿ"
“ಕೌನ್ ಬನೇಗಾ ಕರೋಡ್‌ಪತಿ” - ಇತ್ತೀಚಿನ ಸಂಚಿಕೆಯಲ್ಲಿ “ಫಾಸ್ಟೆಸ್ಟ್ ಫಿಂಗರ್ ಫಸ್ಟ್” ಸುತ್ತಿನಲ್ಲಿ ಅತ್ಯಂತ ವೇಗವಾಗಿ ಉತ್ತರಿಸಿ ಹಾಟ್ ಸೀಟಿಗೆ ಬಂದವರು ಡಾ. ನೀರಜ್ ಸಕ್ಸೇನಾ.
ಅವರು ಹೇಗೆ ಕುಳಿತಿದ್ದರು ಗೊತ್ತಾ? ಕೂಗಲಿಲ್ಲ, ಕುಣಿಯಲಿಲ್ಲ, ಅಳಲಿಲ್ಲ, ಕೈ ಎತ್ತಿ ಸಂಭ್ರಮಿಸಲಿಲ್ಲ, ಅಮಿತಾಭ್ ಅವರನ್ನು ತಬ್ಬಿಕೊಳ್ಳಲೂ ಇಲ್ಲ. ಅತ್ಯಂತ ಶಾಂತವಾಗಿ, ಮುಗುಳ್ನಗೆಯೊಂದಿಗೆ ಕುಳಿತರು.
ಡಾ. ನೀರಜ್ ಅವರು ಒಬ್ಬ ವಿಜ್ಞಾನಿ, Ph.D ಪದವೀಧರರು. ಈಗ ಕೋಲ್ಕತ್ತಾದ ಒಂದು ವಿಶ್ವವಿದ್ಯಾಲಯದ ಕುಲಪತಿಗಳು. ಅತ್ಯಂತ ಸರಳ, ಸೌಮ್ಯ ವ್ಯಕ್ತಿತ್ವ.
ಅವರು ಹೇಳಿದ ಒಂದು ಮಾತು ಮನಸ್ಸಿಗೆ ಚುಚ್ಚಿತು - “ನನಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರೊಂದಿಗೆ ಕೆಲಸ ಮಾಡುವ ಭಾಗ್ಯ ಸಿಕ್ಕಿತು. ಮೊದಲು ನಾನು ‘ನಾನು, ನನ್ನದು’ ಎಂದು ಮಾತ್ರ ಯೋಚಿಸುತ್ತಿದ್ದೆ. ಆದರೆ ಕಲಾಂ ಸರ್ ಪ್ರಭಾವದಿಂದ, ‘ಇತರರ ಬಗ್ಗೆ, ದೇಶದ ಬಗ್ಗೆ’ ಯೋಚಿಸಲು ಕಲಿತೆ.”
ಆಟ ಶುರುವಾಯಿತು. ಒಂದು ಬಾರಿ Audience Poll ಬಳಸಿದರು. “ಡಬಲ್ ಡಿಪ್” ಲೈಫ್‌ಲೈನ್ ಇತ್ತು, ಅದರಿಂದ ಇನ್ನೊಂದು ಅವಕಾಶವೂ ಸಿಕ್ಕಿತು. ಪ್ರತಿ ಪ್ರಶ್ನೆಗೂ ಅಷ್ಟು ಸುಲಭವಾಗಿ ಉತ್ತರಿಸಿದರು. ಅವರ ಬುದ್ಧಿವಂತಿಕೆ ಕಂಡು ಎಲ್ಲರೂ ಬೆರಗಾದರು.
₹3,20,000 ಗೆದ್ದರು. ಜೊತೆಗೆ ಅದೇ ಮೊತ್ತದ ಬೋನಸ್. ನಂತರ ಬ್ರೇಕ್ ಆಯಿತು.
ಬ್ರೇಕ್ ಆದ ಮೇಲೆ ಅಮಿತಾಭ್ ಅವರು ಹೇಳಿದರು, “ಬನ್ನಿ ಡಾಕ್ಟರ್ ಸಾಹೇಬ್, ಹನ್ನೊಂದನೇ ಪ್ರಶ್ನೆಗೆ ಹೋಗೋಣ...”
ಅಷ್ಟರಲ್ಲಿ ನೀರಜ್ ಅವರು ನಿಧಾನವಾಗಿ ಹೇಳಿದರು, *“ಸರ್, ನಾನು ಈ ಆಟವನ್ನು ಇಲ್ಲಿಗೆ ನಿಲ್ಲಿಸಲು ಬಯಸುತ್ತೇನೆ.”*
ಅಮಿತಾಭ್ ದಂಗಾದರು! ಇಷ್ಟು ಚೆನ್ನಾಗಿ ಆಡುತ್ತಿರುವವರು, ಇನ್ನೂ 3 ಲೈಫ್‌ಲೈನ್‌ಗಳು ಕೈಯಲ್ಲಿ ಇಟ್ಟುಕೊಂಡು, ಕೋಟಿ ರೂಪಾಯಿ ಗೆಲ್ಲುವ ಅವಕಾಶ ಇದ್ದರೂ... “ಇದುವರೆಗೆ ಹೀಗೆ ಯಾರೂ ಮಾಡಿಲ್ಲ” ಎಂದು ಕೇಳಿದರು.
ಅದಕ್ಕೆ ನೀರಜ್ ಅವರು ಕೊಟ್ಟ ಉತ್ತರ ಇಡೀ ಸ್ಟುಡಿಯೋವನ್ನೇ ಮೌನ ಮಾಡಿತು.
*“ಸರ್, ನನ್ನ ನಂತರ ಇನ್ನೂ ಅನೇಕರು ಕಾಯುತ್ತಿದ್ದಾರೆ. ಅವರು ನನ್ನಗಿಂತ ಚಿಕ್ಕವರು. ಅವರಿಗೂ ಅವಕಾಶ ಸಿಗಬೇಕು. ನನಗೆ ಸಾಕಷ್ಟು ಹಣ ಸಿಕ್ಕಿದೆ. ‘ಇರುವುದೇ ಸಾಕು’ ಎನಿಸುತ್ತಿದೆ. ಇನ್ನಷ್ಟು ಬೇಕೆಂಬ ಆಸೆ ಇಲ್ಲ.”*
ಒಂದು ಕ್ಷಣ ಮೌನ. ಆಮೇಲೆ ಇಡೀ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ನಿಮಿಷಗಳ ಕಾಲ ಚಪ್ಪಾಳೆ ನಿಲ್ಲಲೇ ಇಲ್ಲ.
ಅಮಿತಾಭ್ ಹೇಳಿದರು, “ಇವತ್ತು ನಾವು ತುಂಬಾ ಕಲಿತೆವು. ಇಂತಹ ವ್ಯಕ್ತಿಯನ್ನು ನೋಡುವುದು ಅಪರೂಪ.”
ಪ್ರಾಮಾಣಿಕವಾಗಿ ಹೇಳುವುದಾದರೆ, ನನ್ನ ಜೀವನದಲ್ಲಿ ಮೊದಲ ಬಾರಿಗೆ ಇಂತಹ ಅವಕಾಶ ಕೈಯಲ್ಲಿದ್ದರೂ, “ಇತರರಿಗೂ ಅವಕಾಶ ಕೊಡಬೇಕು” ಎಂದು ಯೋಚಿಸಿದ ವ್ಯಕ್ತಿಯನ್ನು ನೋಡಿದೆ. ಮನಸ್ಸಿನಲ್ಲೇ ಅವರಿಗೆ ನಮಸ್ಕರಿಸಿದೆ.
*ಇಂದಿನ ಕಾಲಕ್ಕೆ ಕನ್ನಡಿ*
ಇವತ್ತು ಜನರು ಹಣದ ಹಿಂದೆ ಹುಚ್ಚರಂತೆ ಓಡುತ್ತಿದ್ದಾರೆ. ಎಷ್ಟು ಬಂದರೂ ತೃಪ್ತಿ ಇಲ್ಲ. ಆಸೆ ಬೆಳೆಯುತ್ತಲೇ ಇದೆ.
ಆ ಹಣದ ಬೆನ್ನಟ್ಟುವಲ್ಲಿ ಕುಟುಂಬ, ನಿದ್ದೆ, ನೆಮ್ಮದಿ, ಪ್ರೀತಿ, ಗೆಳೆತನ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಕೊನೆಗೆ ನಾವು ಸಂಪಾದಿಸಿದ್ದೆಲ್ಲವನ್ನೂ ನಮ್ಮ ಜೊತೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ.
ಇಂತಹ ಕಾಲದಲ್ಲಿ ಡಾ. ನೀರಜ್ ಸಕ್ಸೇನಾ ಅವರಂತವರು ನಮಗೆ ಒಂದು ಎಚ್ಚರಿಕೆಯ ಗಂಟೆ.
*ಈ ಯುಗದಲ್ಲಿ ತೃಪ್ತಿ ಇರುವ, ಸ್ವಾರ್ಥವಿಲ್ಲದ ಮನುಷ್ಯರನ್ನು ಕಾಣುವುದು ಕಷ್ಟ.*
*ಅವರ ತ್ಯಾಗದ ಫಲ*
ಅವರು ಆಟದಿಂದ ಹೊರ ಬಂದ ತಕ್ಷಣ, ಒಬ್ಬ ಹುಡುಗಿ ಹಾಟ್ ಸೀಟ್ ಮೇಲೆ ಬಂದಳು. ಅವಳ ಕಥೆ ಕೇಳಿ ಎಲ್ಲರ ಕಣ್ಣು ತೇವವಾಯಿತು.
“ನಾವು 3 ಜನ ಹೆಣ್ಣು ಮಕ್ಕಳು ಅಂತ ನನ್ನ ತಂದೆ ಅಮ್ಮನನ್ನೂ ಸೇರಿ ನಮ್ಮನ್ನು ಮನೆಯಿಂದ ಹೊರ ಹಾಕಿದರು. ಈಗ ನಾವು ಅನಾಥಾಶ್ರಮದಲ್ಲಿ ಇದ್ದೇವೆ...”
🌻ದಿನಕ್ಕೊಂದು ಕಥೆ 🌻
ಒಂದು ಕ್ಷಣ ಯೋಚಿಸಿದೆ. ನೀರಜ್ ಸರ್ ಆ ದಿನ ನಿಲ್ಲದೇ ಇದ್ದಿದ್ದರೆ, ಅದು ಕೊನೆಯ ದಿನವಾಗಿದ್ದರಿಂದ ಬೇರೆ ಯಾರಿಗೂ ಅವಕಾಶವೇ ಸಿಗುತ್ತಿರಲಿಲ್ಲ. ಅವರ ಒಂದು ಸಣ್ಣ ತ್ಯಾಗದಿಂದ ಈ ಬಡ ಹುಡುಗಿಗೆ ಸ್ವಲ್ಪ ಹಣ ಸಂಪಾದಿಸುವ ಅವಕಾಶ ಸಿಕ್ಕಿತು.
ಇಂದಿನ ಜಗತ್ತಿನಲ್ಲಿ ಆಸ್ತಿಯಲ್ಲಿ ಒಂದು ಪೈಸೆ ಕೂಡ ಬಿಟ್ಟುಕೊಡಲು ಜನ ಸಿದ್ಧವಿಲ್ಲ. ಅದಕ್ಕಾಗಿ ಜಗಳ, ಕೊಲೆಗಳು ನಡೆಯುತ್ತಿವೆ. ಸ್ವಾರ್ಥ ತಾಂಡವಾಡುತ್ತಿದೆ. ಆದರೆ ಇದು ಒಂದು ಅಪವಾದ.
*ಕೊನೆಯ ಮಾತು*
ನೀರಜ್ ಅವರಂತಹ ಮನುಷ್ಯರಲ್ಲಿ ದೇವರು ವಾಸಿಸುತ್ತಾನೆ. ಇತರರ ಬಗ್ಗೆ, ದೇಶದ ಬಗ್ಗೆ ಯೋಚಿಸುವವರಲ್ಲಿ ದೇವರು ಕಾಣುತ್ತಾನೆ.
ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಬರೆಯಲು ಸಿಕ್ಕಿದ್ದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಅವರನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ.
*"ನಿಮ್ಮ ಅಗತ್ಯಗಳು ಪೂರ್ಣವಾದಾಗ, ಅಲ್ಲಿಗೆ ನಿಲ್ಲಬೇಕು. ಇತರರಿಗೆ ಅವಕಾಶ ಕೊಡಬೇಕು. ಸ್ವಾರ್ಥವನ್ನು ಬಿಡಬೇಕು. ಆಗ ಎಲ್ಲರೂ ಸುಖವಾಗಿರುತ್ತಾರೆ."*
ಇದೇ ಇವತ್ತು ನಾನು ಕಲಿತ ಪಾಠ. ಇಂತಹ ವ್ಯಕ್ತಿಗಳನ್ನು ಮನಸಾರೆ ಮೆಚ್ಚುತ್ತೇನೆ. ಸಮಾಜದ ಒಳಿತಿಗಾಗಿ ಅವರ ಬಗ್ಗೆ ಪ್ರಾಮಾಣಿಕವಾಗಿ ಬರೆಯುವುದು ನನ್ನ ಕರ್ತವ್ಯ ಎಂದು ನಂಬುತ್ತೇನೆ.
*ಲೋಕಾ ಸಮಸ್ತಾ ಸುಖಿನೋ ಭವಂತು🌹*
ಕೃಪೆ :ವಾಟ್ಸಾಪ್
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment