Posts

ದಿನಕ್ಕೊಂದು ಕಥೆ 1006

ದಿನಕ್ಕೊಂದು ಕಥೆ ಕಟಕ್ ನಿಂದ ಕಲಕತ್ತಾಗೆ ಹೋಗುವ ರೈಲು ಇನ್ನೇನು ಬಿಡುತ್ತಿದೆ ಎನ್ನುವಷ್ಟರಲ್ಲಿ, ಸೂಟು ಬೂಟು ಧರಿಸಿದ್ದ, ಸುಮಾರು 14 ವಯಸ್ಸಿನ, ಶ್ರೀಮಂತ ಕುಟುಂಬದವನೆನ್ನಬಹುದಾದ ಯುವಕನೊಬ್ಬ ಓಡುತ್ತ ಬಂದು, ರೈಲು ಹತ್ತಿದ. ಇದೀಗ ರೈಲು ಹತ್ತಿ ಇನ್ನೂ ಬಾಗಿಲ ಬಳಿಯೇ ಇದ್ದ, ಸಾದಾ ಖಾದಿ ಬಟ್ಟೆ ಧರಿಸಿದ್ದ ಹಿರಿಯರೊಬ್ಬರು, ಓಡೋಡಿ ಬರುತ್ತಿದ್ದ ಆ ಹುಡುಗನಿಗೆ ಕೈ ಕೊಟ್ಟು ಮೇಲೆ ಏರಲು ಸಹಾಯ ಮಾಡಿದರು. ರೈಲಿನಲ್ಲಿ ಆ ಹುಡುಗ ಮತ್ತು ಆ ಹಿರಿಯರು ಒಂದೇ ಸೀಟಿನಲ್ಲಿ ಕುಳಿತರು. ಆಗ ಹುಡುಗ ಉಶ್ ಎನ್ನುತ್ತ, "ರೈಲು ಹಿಡಿಯಬಾಕಾದರೆ ಸಾಕುಸಾಕಾಗಿ ಹೋಯಿತು" ಎಂದು ಎದುಸಿರು ಬಿಡುತ್ತ ತನ್ನ ಕರ್ಚೀಫ್ ತೆಗೆದು, ಮುಖ ಒರೆಸಿಕೊಂಡ ಆ ಹಿರಿಯರು ಆ ಹುಡುಗನ್ನು ಕುರಿತು, "ಮಗು ಇಷ್ಟು ಗಡಿಬಿಡಿಯಿಂದ ಎಲ್ಲಿಗೆ ಹೋಗುತ್ತಿರುವಿ ? ಏನು ಕೆಲಸ ?" ಎಂದರು. ಆಗ ಆ ಹುಡುಗ, "ಇವತ್ತು ಸಾಯಂಕಾಲ ಕಲಕತ್ತಾ ನಗರದಲ್ಲಿ, ಈಶ್ವರಚಂದ್ರ ವಿದ್ಯಾಸಾಗರ ಅವರ ಭಾರತ ಸ್ವಾತಂತ್ರ್ಯದ ಕುರಿತು ಬೃಹತ್ ಭಾಷಣದ ಕಾರ್ಯಕ್ರಮವಿದೆ ; ಅದನ್ನು ಕೇಳಲು ಹೋಗುತ್ತಿದ್ದೇನೆ. ನಮ್ಮ ತಂದೆಯವರ ಪ್ರಭಾವದಿಂದ ನನಗೆ ಆ ಕಾರ್ಯಕ್ರಮದಲ್ಲಿ, ಗಣ್ಯರು ಕುಳಿತುಕೊಳ್ಳುವ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಗೌರವ ಪಾಸ್ ದೊರೆತಿದೆ, ಆ ಕಾರಣದಿಂದಾಗಿ, ನಾನು ವಿದ್ಯಾಸಾಗರರನ್ನು ಅತ್ಯಂತ ಸಮೀಪದಿಂದ ನೋಡಬಹುದು" ಎಂದು ತನ್ನ ಶ್ರೀಮಂತ ತಂದೆಯ ಬಗ್ಗೆ ಹೆಮ್ಮೆಯಿಂ...

ದಿನಕ್ಕೊಂದು ಕಥೆ 1005

*🌻ದಿನಕ್ಕೊಂದು ಕಥೆ🌻* *ಬೆರಗಿನ ಬೆಳಕು* ಹಿಂದೆ ವಿದೇಹ ರಾಜ್ಯವನ್ನು ಅಂಗರಾಜ ಆಳುತ್ತಿದ್ದಾಗ ಬೋಧಿಸತ್ವ ನಾರದನೆಂಬ ಮಹಾಬ್ರಹ್ಮನಾಗಿದ್ದ. ಆತ ಕರುಣೆಯಿಂದ ಭೂಲೋಕದ ಕಡೆಗೆ ದೃಷ್ಟಿಯನ್ನು ಹರಿಸಿ, ಯಾವ ಯಾವ ಜೀವಗಳು ಧರ್ಮದಲ್ಲಿ ಬದುಕುತ್ತಿವೆ, ಯಾವ ಜೀವಗಳು ಅಧರ್ಮದ ಕಡೆಗೆ ಮುಖ ಮಾಡಿವೆ ಎಂದು ನೋಡುತ್ತಿದ್ದ. ಆಗ ಅವನ ದೃಷ್ಟಿ ಅಂಗರಾಜನ ಅರಮನೆಯ ಮೇಲೆ ಬಿತ್ತು. ಅವನು ನೋಡಿದ್ದು ಅವನಿಗೆ ಆಶ್ಚರ್ಯವನ್ನು ತಂದಿತು. ರಾಜ ತನ್ನ ಅಮಾತ್ಯರಲ್ಲಿ ನೀಚಬುದ್ಧಿ ಇರುವವರನ್ನೇ ಆದರಿಸುತ್ತ, ಅವರ ಮಾತುಗಳನ್ನು ಕೇಳುತ್ತಿದ್ದ. ಸಜ್ಜನರಾದ ಅಮಾತ್ಯರು ಅಸಹಾಯಕರಾಗಿದ್ದರು. ಅವನಿಗೆ ಅಲ್ಲೊಂದು ಆಶಾಕಿರಣ ಕಂಡಿತು. ಅಂಗರಾಜನ ಮಗಳು ರುಜಾ ತಂದೆಗೆ ಧರ್ಮದ ದಾರಿಯನ್ನು ಹೇಳುತ್ತಿದ್ದಳು. ಆದರೆ ತಂದೆ ಮಾತ್ರ ಕುತ್ಸಿತ ಬುದ್ಧಿಯ ಕಾಶ್ಯಪನ ಮಾತುಗಳನ್ನು ಕೇಳಿ ಮಗಳಿಗೆ ಹೇಳಿದ, “ಮಗಳೇ, ನೀನು ಬಹಳಷ್ಟು ಹಣವನ್ನು ವ್ಯರ್ಥ ಮಾಡುತ್ತಿದ್ದೀಯಾ. ಯಾವುಯಾವುದೋ ವೃತಗಳನ್ನು ಮಾಡಿ ಪ್ರಯೋಜನವಿಲ್ಲದವರಿಗೆ ಹಂಚುತ್ತೀಯಾ, ಸುಮ್ಮನೆ ಉಪವಾಸ, ವ್ರತಗಳನ್ನು ಮಾಡುತ್ತ ದೇಹವನ್ನು ದಂಡಿಸುತ್ತೀ. ಅದರಿಂದ ಯಾವ ಪುಣ್ಯವೂ ಬರುವುದಿಲ್ಲ. ಬದುಕಿರುವ ತನಕ ತಿಂದು ಸಂತೋಷಪಡುವುದನ್ನು ಬಿಡಬಾರದು. ಪರಲೋಕವೆಂಬುವುದು ಇಲ್ಲವೇ ಇಲ್ಲ”. ಆ ಮಾತುಗಳನ್ನು ಕೇಳಿ ಮಗಳಿಗೆ ಬಹಳ ದು:ಖವಾಯಿತು. ಸ್ವಭಾವತ: ಒಳ್ಳೆಯವನಾಗಿದ್ದ ತಂದೆ, ನೀಚ ಮಂತ್ರಿಯ ಮಾತಿನಿಂದ ಅಧರ್ಮದ ಹಾದಿಗೆ ಹೋಗುತ್ತಿದ್ದನಲ್ಲ ಎ...

ದಿನಕ್ಕೊಂದು ಕಥೆ 1004

ದಿನಕ್ಕೊಂದು ಕಥೆ ಮಾನಸಿಕ ಏಕಾಗ್ರತೆಯ ಮಹತ್ವ ಮಹಾಭಾರತದಲ್ಲಿ ಅರ್ಜುನನ ಅನೇಕ ಕಥೆಗಳಿವೆ. ಅವುಗಳಲ್ಲಿ ಒಂದು ಅರ್ಜುನ್ ರಾಜ್ ಕುಮಾರ್. ಅವನು ತನ್ನ ನಾಲ್ಕು ಸಹೋದರರೊಂದಿಗೆ ಗುರುವಿನಿಂದ ಬಿಲ್ಲುಗಾರಿಕೆ ಕಲೆಯನ್ನು ಕಲಿಯುತ್ತಿದ್ದನು. ಕೆಲವು ದಿನಗಳ ನಂತರ, ಗುರು ತನ್ನ ಶಿಷ್ಯರನ್ನು ಪರೀಕ್ಷಿಸಲು ಬಯಸಿದನು. ಅವರು ಮಣ್ಣಿನ ಹಕ್ಕಿಯನ್ನು ಮಾಡಿದರು.ಅವರು ಅದನ್ನು ಮರದ ಮೇಲೆ ಹಾಕಿದರು. ನಂತರ ಅವರು ಪಕ್ಷಿಗಳ ಕಣ್ಣಿಗೆ ಹೊಡೆಯಲು ಎಲ್ಲರಿಗೂ ಹೇಳಿದರು. ಗುರು ಮೊದಲು ಇತರ ಸಹೋದರರನ್ನು ಕೇಳಿದನು, "ನೀವು ಮೇಲೆ ಏನು ನೋಡುತ್ತೀರಿ?" ಎಲ್ಲರೂ ಅನೇಕ ವಿಷಯಗಳನ್ನು ಹೇಳಿದರು. ಉದಾಹರಣೆಗೆ, ಮರ, ಎಲೆ, ಕೊಂಬೆ, ಪಕ್ಷಿ, ಇತ್ಯಾದಿ. ಈ ಎಲ್ಲ ಶಿಷ್ಯರನ್ನು ಗುರು ವಿಫಲಗೊಳಿಸಿದನು. ನಂತರ ಅರ್ಜುನ್ ಅವರನ್ನು ಶೂಟ್ ಮಾಡಲು ಹೇಳಿದರು. ನಂತರ ಅವನು ಅರ್ಜುನನನ್ನು ಕೇಳಿದನು, "ನೀವು ಮೇಲೆ ಏನು ನೋಡುತ್ತೀರಿ?" ಹಕ್ಕಿಯ ಕಣ್ಣು ಎಂದು ಅರ್ಜುನ್ ಹೇಳಿದರು. ಗುರುಗಳು ಪ್ರತಿ ಬಾರಿ ಪ್ರಶ್ನೆ ಕೇಳಿದಾಗ ಅವರು ಅದೇ ಉತ್ತರವನ್ನು ನೀಡಿದರು. ಗುರು ನಂತರ ಪರೀಕ್ಷೆಯನ್ನು ಅರ್ಜುನನಿಗೆ ಉತ್ತೀರ್ಣನಾಗಿ ಹೇಳಿದನು - ಲಕ್ಷ್ ಪಡೆಯಲು, ಒಬ್ಬರ ಗಮನವನ್ನು ಲಕ್ಷ್ ಮೇಲೆ ಕೇಂದ್ರೀಕರಿಸಬೇಕು. ಯಾವುದೇ ಪ್ರಯತ್ನದಲ್ಲಿ ಯಶಸ್ಸಿಗೆ ಈ ತತ್ವ ಅತ್ಯಗತ್ಯ. ಇದನ್ನೇ ಮಾನಸಿಕ ಏಕಾಗ್ರತೆ ಎಂದು ಕರೆಯಲಾಗುತ್ತದೆ, ಅಂದರೆ, ಒಬ್ಬ ವ್ಯಕ್ತಿಯು ತನ್ನ ಎಲ್ಲ ಗಮನ ಮತ್ತು...

ದಿನಕ್ಕೊಂದು ಕಥೆ 1003

ದಿನಕ್ಕೊಂದು ಕಥೆ ಬೇಡಿದ್ದನ್ನೇಲ್ಲಾ ನೀಡುವ ದೇವರು ದೇವರಲ್ಲ. ಹಾಗಾದರೆ ದೇವರು ಯಾರು? ಇಲ್ಲಿರುವ ಪುಟ್ಟ ಘಟನೆಯೊಂದು ಉತ್ತರವನ್ನು ತೋರಿಸಬಹುದು! ಒಬ್ಬ ಗೃಹಸ್ಥರ ಮನೆಯಲ್ಲಿ, ಅವರ ಹತ್ತು ವರ್ಷ ವಯಸ್ಸಿನ ಒಬ್ಬಳೇ ಮಗಳ ಹುಟ್ಟುಹಬ್ಬದ ಸಮಾರಂಭ ನಡೆಯುತ್ತಿತ್ತು. ಗೃಹಸ್ಥರ ಅನೇಕ ಗೆಳೆಯರು ಬಂದಿದ್ದರು. ಗೃಹಸ್ಥರ ಗೆಳೆಯರೊಬ್ಬರು ಕಟ್ಟಾ ನಾಸ್ತಿಕರಾಗಿದ್ದರು. ಅವರು ಆಕೆಗೆ ಒಂದು ಮರದ ಬೊಂಬೆಯನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಎಲ್ಲರೂ ಔತಣಕೂಟದಲ್ಲಿ ಭಾಗವಹಿಸುತ್ತಿದ್ದಾಗ ಆಕೆ ಮರದ ಬೊಂಬೆಯೊಂದಿಗೆ ಆಟವಾಡುತ್ತಿದ್ದಳು. ಆಟದ  ಮರದಗೊಂಬೆ ಮುರಿದುಹೋಯಿತು. ಮುರಿದ ಬೊಂಬೆಯನ್ನು ನೋಡಿ ಆಕೆ ಗಟ್ಟಿಯಾಗಿ ಅಳಲಾರಂಭಿಸಿದಳು. ಆನಂತರ ಆಕೆ ದೇವರ ಮನೆಗೆ ಹೋದಳು. ಬೊಂಬೆಯನ್ನು ದೇವರ ಮಂಟಪದ ಮುಂದಿಟ್ಟು ದೇವರೇ, ಈ ಬೊಂಬೆ ಮುರಿದುಹೋಗಿದೆ. ಇದನ್ನು ರಿಪೇರಿ ಮಾಡಿಕೊಡು ಎಂದು ಬೇಡಿಕೊಂಡಳು. ಇದನ್ನು ಗಮನಿಸಿದ ನಾಸ್ತಿಕ ಮಿತ್ರರು, ಆಕೆಗೆ ಮಗು! ನೀನು ಮುಗ್ಧೆ! ಆದರೆ ದೇವರೇ ಬಂದು ಮುರಿದುಹೋದ ಬೊಂಬೆ ರಿಪೇರಿ ಮಾಡಿಕೊಡುತ್ತಾನೆ ಎಂಬ ನಿನ್ನ ನಂಬಿಕೆ ಕಂಡು ನನಗೆ ಅಯ್ಯೋ ಎನಿಸುತ್ತದೆ. ಏಕೆಂದರೆ  ಅಸ್ತಿತ್ವ ದಲ್ಲೇ ಇಲ್ಲ. ಆತ ಬಂದು ಯಾರ ಬೊಂಬೆಯನ್ನೂ ರಿಪೇರಿ ಮಾಡಿಕೊಟ್ಟದ್ದೂ ಇಲ್ಲ ಎಂದರು. ಆಕೆ ನನಗೆ ಖಂಡಿತ ನಂಬಿಕೆಯಿದೆ. ದೇವರು ಖಂಡಿತ ಬೊಂಬೆಯನ್ನು ರಿಪೇರಿ ಮಾಡಿ, ಪರಿಹಾರ ಒದಗಿಸುತ್ತಾನೆ ಎಂದು ಹೇಳಿದಳು. ನಾಸ್ತಿಕರು ಮತ್ತೊಮ್ಮೆ ನಕ್ಕು,...

ದಿನಕ್ಕೊಂದು ಕಥೆ 1002

ದಿನಕ್ಕೊಂದು ಕಥೆ *ಬುದ್ಧನ ಜಾತಕ ಕಥೆಗಳು* *ಕರಗಿದ ಅಹಂಕಾರ*    ನೇತ್ರಾವತಿ ನಗರದ ಬಳಿ ಇದ್ದ ನೇತ್ರಾವತಿ ನದಿಯ ದಂಡೆಯಲ್ಲಿ ಜಾತಿಮಂತ ಎಂಬ ಬ್ರಾಹ್ಮಣನಿದ್ದ. ಅವನು ಪ್ರವ್ರಜಿತನಾದ. ಆದರೆ ಅವನಿಗೆ ತಾನು ಬ್ರಾಹ್ಮಣನೆಂಬ ಜಾತಿಯ ಅಭಿಮಾನ ದೊಡ್ಡದಾಗಿತ್ತು. ಆಗ ಬೋಧಿಸತ್ವ ಅವನ ಅಭಿಮಾನವನ್ನು ಒಡೆದು ಹಾಕಲೆಂದು ಅವನಿಗೆ ಹತ್ತಿರದಲ್ಲೇ ನದಿಯ ಮೇಲ್ಭಾಗದಲ್ಲಿ ಬಂದು ನೆಲೆಸಿದ. ಒಂದು ದಿನ ಬೆಳಿಗ್ಗೆ ಹಲ್ಲುಜ್ಜುತ್ತಿದ್ದಾಗ, ನದಿಯ ಕೆಳಭಾಗದಲ್ಲಿ ಜಾತಿವಂತ ಸ್ನಾನಮಾಡಲು ಬಂದದ್ದನ್ನು ಕಂಡ. ತನ್ನ ಹಲ್ಲು ಉಜ್ಜುವ ಕಡ್ಡಿ ಜಾತಿವಂತನ ಜುಟ್ಟಿನಲ್ಲಿ ಸಿಕ್ಕಿಕೊಳ್ಳಲೆಂದೇ ಸಂಕಲ್ಪ ಮಾಡಿ ಕಡ್ಡಿಯನ್ನು ನೀರಿನಲ್ಲಿ ಎಸೆದ. ಅದು ತೇಲಿಬಂದು ಆಚಮನ ಮಾಡುತ್ತಿದ್ದ ಜಾತಿಮಂತನ ಜುಟ್ಟಿನಲ್ಲಿ ಸೇರಿಕೊಂಡಿತು. ಆತನಿಗೆ ಭಾರೀ ಕೋಪ ಬಂದಿತು. ಈ ಹಲ್ಲುಕಡ್ಡಿ ಎಲ್ಲಿಂದ ಬಂತು ಎಂದು ನೋಡಲು ಪ್ರವಾಹದ ಮೇಲಿನ ಭಾಗಕ್ಕೆ ಬಂದ. ಅಲ್ಲಿ ಬೋಧಿಸತ್ವನನ್ನು ಕಂಡು, “ಎಲೆ ಪಾಪಿ, ನೀನೇ ಈ ಹಲ್ಲುಕಡ್ಡಿಯನ್ನು ಬೀಳಿಸಿದೆಯಾ?” ಎಂದು ಕೇಳಿದ. “ಹೌದು, ನಾನೇ ಬೀಳಿಸಿದ್ದು” ಎಂದ ಬೋಧಿಸತ್ವ. “ನೀನೊಬ್ಬ ಅಮಂಗಳ, ನಿನಗೆ ಕೆಟ್ಟದ್ದಾಗುತ್ತದೆ. ನೀನು ಹೋಗಿ ಪ್ರವಾಹದ ಕೆಳಭಾಗದಲ್ಲಿ ಇರು. ಇಲ್ಲಿ ಮೇಲಿರುವುದು ಬೇಡ” ಎಂದು ಕೂಗಾಡಿದ. ಬೋಧಿಸತ್ವ ಮಾತನಾಡದೆ ಪ್ರವಾಹದ ಕೆಳಭಾಗಕ್ಕೆ ಹೋಗಿ ನೆಲೆಸಿದ.    ಮರುದಿನ ಮತ್ತೆ ಜಾತಿಮಂತ ಸ್ನಾನಕ್ಕೆ ಬಂದಾಗ ಬೋಧಿಸತ್ವ ಮತ್...

ದಿನಕ್ಕೊಂದು ಕಥೆ 1001

ದಿನಕ್ಕೊಂದು ಕಥೆ ರಾಜನ ದಯೆ – ದೇವರ ದಯೆ........ ಒಂದಾನೊಂದು ಕಾಲದಲ್ಲಿ ಕನಕಪುರಿ ಎಂಬ ರಾಜ್ಯವನ್ನು ಆಳುತ್ತಿದ್ದ ರಾಜನಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ಇದೊಂದರ ಹೊರತಾಗಿ ಅವನಲ್ಲಿ ಬೇರಾವ ದೋಷವೂ ಇರಲಿಲ್ಲ. ಒಂದು ದಿನ ಅವನು ಮಾರುವೇಷದಿಂದ ಮಂತ್ರಿಯೊಡಗೂಡಿ ತನ್ನ ರಾಜಧಾನಿಯಲ್ಲಿ ತಿರುಗಾಡುತ್ತಿದ್ದಾಗ, ಇಬ್ಬರು ಭಿಕ್ಷುಕರು ಭಿಕ್ಷೆ ಬೇಡುತ್ತಿದ್ದುದನ್ನು ಕಂಡನು. ಅವರಲ್ಲಿ ಒಬ್ಬನು ‘ರಾಮನ ದಯೆ’ ಎಂದೂ, ಮತ್ತೊಬ್ಬನು ‘ರಾಜನ ದಯೆ’ ಎಂದೂ ಕೂಗಿ ಭಿಕ್ಷೆ ಬೇಡುತ್ತಿದ್ದರು. ಮರುದಿನ ರಾಜನು ಅವರಿಬ್ಬರನ್ನು ಪರೀಕ್ಷಿಸಲು ಆಸ್ಥಾನಕ್ಕೆ ಕರೆಸಿದನು. ಅವನ ಮಂತ್ರಿಯು ಅವರಿಬ್ಬರನ್ನು ಪ್ರಶ್ನಿಸಿದ, “ನಿನ್ನೆ ನೀವಿಬ್ಬರೂ ಭಿಕ್ಷೆಯನ್ನು ಬೇಡುವಾಗ ಒಬ್ಬ ರಾಮನ ದಯೆ ಎಂದು, ಮತ್ತು ರಾಜನ ದಯೆ ಎಂದೂ ಹೇಳುತ್ತಿದ್ದಿರಿ. ಅದರ ಅರ್ಥವೇನು?” ರಾಮನ ದಯೆ ಎನ್ನುವವನು ಹೇಳಿದನು, “ಸ್ವಾಮಿ, ಈ ಇಡೀ ಪ್ರಪಂಚ ಶ್ರೀರಾಮನಿಂದ ರಕ್ಷಿಸಲ್ಪಟ್ಟಿದೆ. ಅವನೇ ಸಂಪತ್ತನ್ನೂ, ಶ್ರೀಮಂತಿಕೆಯನ್ನೂ ನೀಡುವನು. ಅದಕ್ಕಾಗಿ ರಾಮನ ದಯೆ ಎಂದು ನಾನು ಭಿಕ್ಷೆಯನ್ನು ಬೇಡುತ್ತಿದ್ದೆ”. ಮಂತ್ರಿಯ ಪ್ರಶ್ನೆಗೆ ಇನ್ನೊಬ್ಬನು, “ಸ್ವಾಮಿ, ದೇವರು ಕಣ್ಣಿಗೆ ಕಾಣಲಾರ. ರಾಜನು ಕಣ್ಣಿಗೆ ಕಾಣುವ ದೇವರು. ಅವನೇನಾದರೂ ಬಯಸಿದರೆ ಯಾರನ್ನು ಬೇಕಾದರೂ ಶ್ರೀಮಂತನನ್ನಾಗಿ ಮಾಡಬಹುದು. ಅದಕ್ಕಾಗಿ ರಾಜನ ದಯೆ ಎಂದು ನಾನು ಭಿಕ್ಷೆಯನ್ನು ಬೇಡುತ್ತಿದ್ದೆ” ಎಂದನು. ರಾಜನು ‘ರಾಜನ ದಯೆ’ ಎಂಬುವವನೇ ...

ದಿನಕ್ಕೊಂದು ಕಥೆ 1000

ದಿನಕ್ಕೊಂದು ಕಥೆ ನಿನ್ನ ಮನಸ್ಸೇ ನಿನಗೆ ಶತ್ರು    ಒಬ್ಬ ಭಕ್ತನು ದೇವರನ್ನು ಕುರಿತು ಬಹಳ ಕಾಲ ತಪಸ್ಸು ಮಾಡುತ್ತಿದ್ದ. ಕಡೆಗೊಂದು ದಿನ ಭಗವಂತನು ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ. ಭಗವಂತನ ಕೈಯಲ್ಲಿ ಗದೆ ಕೂಡಾ ಇತ್ತು. ನಿನಗೇನು ವರ ಬೇಕು ಎಂದು ಭಗವಂತನು ಕೇಳಿದ ಕೂಡಲೋ ಆ ಭಕ್ತನು, "ಭಗವಂತಾ! ನನ್ನ ಅಭಿವೃದ್ಧಿಗೆ ಅಡ್ಡವಾಗಿರುವ ಶಕ್ತಿಗಳನ್ನೆಲ್ಲಾ ನಿನ್ನ ಗದೆಯ ಮೂಲಕ ನೀನು ಚಚ್ಚಿ ಹಾಕಬೇಕು. ಇದೇ ನನ್ನ ಅಭಿಲಾಷೆ!" ಎಂದು ಬೇಡಿಕೊಂಡ. ಭಗವಂತನು ಕಿರುನಗೆ ನಕ್ಕು ಹಾಗೇ ಆಗಲಿ ಎಂದು ಹೇಳಿ ಕೂಡಲೇ ಮಾಯವಾದನು.   ಸ್ವಲ್ಪ ಸಮಯದ ನಂತರ ಭಗವಂತನ ಗದೆ ವೇಗವಾಗಿ ತೂರಿ ಬಂತು. ಅದು ವರವನ್ನು ಕೋರಿಕೊಂಡ ಭಕ್ತನ ಮೇಲೆ ದಾಳಿ ಮಾಡಿ ಅವನನ್ನು ಸಿಕ್ಕ ಸಿಕ್ಕಲ್ಲಿ ಚಚ್ಚತೊಡಗಿತು. ಭಕ್ತನು ನೋವಿನ ಬಾಧೆಯಿಂದ ಹಾಗೇ ನೆಲಕ್ಕೆ ಉರುಳಿ ಬಿದ್ದ. ಇದೇನಿದು ನಾನು ವರವನ್ನು ಬೇಡಿಕೊಂಡದ್ದೇ ತಪ್ಪಾಗಿ ಹೋಯಿತಲ್ಲ ಎಂದು ಗಟ್ಟಿಯಾಗಿ ಅಳತೊಡಗಿದನು. "ನಾನು ನನ್ನ ಅಭಿವೃದ್ಧಿಗೆ ಅಡ್ಡವಾಗಿರುವ ನನ್ನ ಶತ್ರುಗಳನ್ನು ಚಚ್ಚಿ ಹಾಕು ಎಂದು ಬೇಡಿಕೊಂಡರೆ, ನೀನು ಮರೆಗುಳಿತನದಿಂದ ನಿನ್ನ ಗದೆಯನ್ನು ನನ್ನ ಮೇಲೆಯೇ ಪ್ರಯೋಗಿಸುತ್ತೀಯಾ?" ಎಂದು ಭಗವಂತನನ್ನು ಶಪಿಸತೊಡಗಿದ.   ಭಗವಂತನು ಪುನಃ ಪ್ರತ್ಯಕ್ಷನಾದನು. ಭಕ್ತನನ್ನು ನೋಡಿ ಹೀಗೆ ಹೇಳಿದ, "ಭಕ್ತಾ! ನೀನು ಕೋರಿಕೊಂಡಂತೆಯೇ ನಾನು ನನ್ನ ಗದೆಯನ್ನು ಪ್ರಯೋಗಿಸಿದೆ. ನಾನು ಮರೆಗು...

ದಿನಕ್ಕೊಂದು ಕಥೆ 999

ದಿನಕ್ಕೊಂದು ಕಥೆ ಆಶ್ಚರ್ಯವಾಗುತ್ತದಲ್ಲವೇ.!? ದೇವರ ಅಸ್ತಿತ್ವವನ್ನೇ ನಂಬದ ನಾಸ್ತಿಕರು ದೇವರಿಗೆ ಕೈಮುಗಿದರು ಎಂದರೆ ಆಶ್ಚರ್ಯವಾಗುತ್ತದಲ್ಲವೇ?*  ಹಾಗಿದ್ದರೆ ಇಲ್ಲಿರುವ ಪುಟ್ಟ ಪ್ರಸಂಗವನ್ನು ನೋಡಬ ಹುದು. ಇಬ್ಬರು ನಾವಿಕರಿದ್ದರು. ಒಬ್ಬ ಆಸ್ತಿಕ, ಮತ್ತೊಬ್ಬ ನಾಸ್ತಿಕ. ದೇವರು ಮಾಡುವುದೆಲ್ಲ ನನ್ನ ಒಳ್ಳೆಯದಕ್ಕೇ ಎಂಬ ನಂಬಿಕೆ. ನಾಸ್ತಿಕನಿಗೆ ಇದೆಲ್ಲಾ ಅಸಂಬದ್ಧ ಎನ್ನುವ ನಂಬಿಕೆ. ಒಮ್ಮೆ ಅವರು ಯಾನ ಮಾಡುತ್ತಿದ್ದ ಹಡಗು ಅಪಘಾತಕ್ಕೀಡಾಗಿ ನುಚ್ಚುನೂರಾಯಿತು. ಒಂದು ಮರದ ಹಲಗೆಯ ಮೇಲೆ ಆಸರೆ ಪಡೆದ ಇವರಿಬ್ಬರು ತೇಲುತ್ತ ಒಂದು ನಿರ್ಜನ ದ್ವೀಪವನ್ನು ಸೇರಿಕೊಂಡರು. ಆಸ್ತಿಕ ನಾವು ದೇವರ ದಯೆಯಿಂದ ಬದುಕಿದ್ದೇವೆ. ನಾವು ದೇವರಿಗೆ ಕೃತಜ್ಞರಾಗಿರಬೇಕು ಎಂದರು. ನಾಸ್ತಿಕ ಸಿಟ್ಟಿನಿಂದ ಕಾಣದ ದೇವರನ್ನು ಬಾಯಿಗೆ ಬಂದಂತೆ ಬೈದರು. ಅವರು ಆ ದ್ವೀಪದಲ್ಲಿ ಸಿಕ್ಕ ಹಣ್ಣು-ಹಂಪಲುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇಡೀ ದಿನ ಸಮುದ್ರದಲ್ಲಿ ಹಾದು ಹೋಗುವ ಹಡಗುಗಳ ಗಮನ ಸೆಳೆಯಲು ’ಹೋ’ ಎಂದು ಕಿರುಚುತ್ತಾ ಕೈಬೀಸುತ್ತಿದ್ದರು. ಆದರೆ ಯಾರೂ ಇವರನ್ನು ಗಮನಿಸಲಿಲ್ಲ. ಸಮುದ್ರ ತೀರದಲ್ಲಿ ಕುಳಿತು ಯಾವುದಾದರೂ ಹಡಗು ಬಂದು ನಮ್ಮನ್ನು ಕಾಪಾಡಬಾರದೇ ಎಂದು ಕಾಯುತ್ತಿದ್ದರು. ಕೆಲವು ದಿನಗಳ ನಂತರ ಬಿಸಿಲು, ಚಳಿಗಾಳಿಯನ್ನು ತಡೆಯಲಾಗದೆ ಕಾಡಿನಲ್ಲಿ ಸಿಗುವ ತೆಂಗಿನ ಗರಿಗಳಿಂದ ಒಂದು ಸಣ್ಣ ಗುಡಿಸಲು ಕಟ್ಟಿಕೊಂಡರು. ಆಸ್ತಿಕ ನಮಗೆ ತಿನ್ನುವುದ...

ದಿನಕ್ಕೊಂದು ಕಥೆ 998

ದಿನಕ್ಕೊಂದು ಕಥೆ ಕರ್ಣನ ಹಿರಿಮೆ ಒಂದು ದಿನ‌ ಹಸ್ತಿನಾಪುರದಲ್ಲಿ ಶ್ರೀಕೃಷ್ಣ ಮತ್ತು ಅರ್ಜುನ ಮಾತನಾಡುತ್ತಿದ್ದರು. ಅರ್ಜುನ: "ಕೃಷ್ಣ, ‌ನಾನು ಬೇಕಾದಷ್ಟು ದಾನ ಮಾಡುತ್ತೇನೆ. ಆದರೂ ಎಲ್ಲರೂ ಕರ್ಣನ ಔದಾರ್ಯದ ಬಗ್ಗೆ ಹೊಗಳುತ್ತಾರೆ." ಕೃಷ್ಣ: "ಇಲ್ಲ ಅರ್ಜುನ. ದಾನದಲ್ಲಿ ಎಂದಿಗೂ ನೀನು ಕರ್ಣನ ಸಮಕ್ಕೆ ಬರಲಾರೆ. ಅವನು ಆ ಗುಣದಲ್ಲಿ ಎಲ್ಲರನ್ನೂ ಮೀರಿದವನು." ಅರ್ಜುನನು ಕೃಷ್ಣನು ಕರ್ಣನ ಪಕ್ಷಪಾತಿಯಾಗಿದ್ದಾನೆ ಎಂದು ಮನಸ್ಸಿನಲ್ಲೇ ಅಂದುಕೊಂಡ. ಅರ್ಜುನನ ಮನಸ್ಸನ್ನು ಅರಿತ ಕೃಷ್ಣ "ನಾಳೆ ನಿಮಗಿಬ್ಬರಿಗೂ ಒಂದು ಸ್ಪರ್ಧೆ ಏರ್ಪಡಿಸುತ್ತೇನೆ. ಆಗ ಯಾರು ಹೆಚ್ವಿನ ದಾನಿಗಳು" ಎಂದು ನಿನಗೇ ಅರ್ಥವಾಗುತ್ತದೆ. " ಎಂದ. ಅರ್ಜುನ ಅದಕ್ಕೆ ಒಪ್ಪಿಕೊಂಡ. ಕೃಷ್ಣನು ಮಾರನೆಯ ದಿನ ಒಂದು ಚಿನ್ನದ ಹಾಗೂ ಒಂದು ಬೆಳ್ಳಿಯ ಬೆಟ್ಟಗಳನ್ನು ಸೃಷ್ಟಿಸಿ ಅರ್ಜುನನಿಗೆ ಸಂಜೆಯೊಳಗೆ ಆ ಎರಡೂ ಬೆಟ್ಟಗಳನ್ನು ದಾನಮಾಡಿ‌ ಮುಗಿಸಲು ಹೇಳಿದ. ಅರ್ಜುನನು ಆ ಬೆಟ್ಟಗಳನ್ನು ‌ಒಡೆಯುತ್ತಾ ಬಂದವರಿಗೆಲ್ಲಾ ಹಂಚಲಾರಂಭಿಸಿದ. ಸಂಜೆಯವರೆಗೂ ಕೆಲಸವನ್ನು ಮುಂದುವರೆಸಿದರೂ ಅರ್ಧವನ್ನೂ ಕೊಟ್ಟು ಮುಗಿಸಲಾಗಲಿಲ್ಲ. ಕೊನೆಗೆ ದಿನದಂತ್ಯಕ್ಕೆ ಕಾಲು ಭಾಗದಷ್ಟು ಇನ್ನೂ ಉಳಿದಿತ್ತು. ಕೃಷ್ಣನು ಬಂದು ಅದನ್ನು ನೋಡಿ ಕರ್ಣನಾಗಿದ್ದರೆ ಇದನ್ನು ಯಾವಾಗಲೋ ಕೊಟ್ಟು ಮುಗಿಸುತ್ತಿದ್ದ ಎಂದ. ಅರ್ಜುನನಿಗೆ‌ ಸಿಟ್ಟು ಬಂದರೂ ಕರ್ಣ ಅದನ್ನು ಹೇಗೆ ಮಾಡುತ್ತಾನೆಂದ...

ದಿನಕ್ಕೊಂದು ಕಥೆ 997

ದಿನಕ್ಕೊಂದು ಕಥೆ         ಹರಿದುಹೋದ ಧೋತಿ ಮತ್ತು ಹರಿದ ಅಂಗಿಯನ್ನು ಧರಿಸಿದ ವ್ಯಕ್ತಿ ತನ್ನ 15-16 ವರ್ಷದ ಮಗಳ ಜೊತೆ ದೊಡ್ಡ ಹೋಟೆಲ್ ಗೆ ಹೋದರು. ಇಬ್ಬರೂ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಿ , ವೇಟರ್ ಬಂದು ಎರಡು ನೀರಿನ  ಲೋಟ ಇಟ್ಟು ಕೇಳಿದ. ತಮಗೇನು ಬೇಕು? ಆಗ ಆ ವ್ಯಕ್ತಿ " ನನ್ನ ಮಗಳಿಗೆ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಬಂದರೆ ನಗರದ ಅತಿದೊಡ್ಡ ಹೋಟೆಲ್ ನಲ್ಲಿ ದೋಸೆ ತಿನ್ನಿಸುತ್ತೇನೆ ಎಂದು ಭರವಸೆ ನೀಡಿದ್ದೆ. ಇದು  ಆ ಭರವಸೆಯನ್ನು ನನ್ನ  ಮಗಳು ಈಡೇರಿಸಿದ್ದಾಳೆ. ದಯವಿಟ್ಟು ಮಗಳಿಗಾಗಿ ಒಂದು ದೋಸೆ ತನ್ನಿ. ? ವೇಟರ್ ಕೇಳಿದ " ಆಯಿತು ತಮಗೇನು ತರಬೇಕು?"   ನನ್ನ ಬಳಿ ಕೇವಲ ಒಂದು ದೊಸೆ ಸಾಕಾಗುವಷ್ಟು ಮಾತ್ರ ಹಣವಿದೆ ಅವಳಿಗಷ್ಟೆ ಕೊಟ್ಟರೆ ಸಾಕು.ಎಂದ.ಈ  ಮಾತು ಕೇಳಿ ವೇಟರ್ ನ ಮನಸು ಕರಗಿತು. ಮಾಲೀಕನ ಬಳಿ ಹೋಗಿ   ಅವನು ವ್ಯಕ್ತಿ ಮತ್ತು ಮಗಳ ಕಥೆ ಹೇಳಿದ.ಮುಂದುವರಿದು ಇವರಿಬ್ಬರಿಗೂ ನನ್ನ ಪರವಾಗಿ ತಿಂಡಿ  ನೀಡಬೇಕೆಂದು ನಿರ್ಧರಿಸಿದ್ದೇನೆ.  ನೀವು ಅವರ ಬಿಲ್ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಬಹುದು. ಈ ಮಾತನ್ನು ಕೇಳಿದ ಹೊಟೆಲ್ ಮಾಲಿಕನಿಗೂ ಅವರಿಬ್ಬರ ಮೇಲೆ ಮರುಕವಾಯಿತು ಹಾಗೂ ವೆಯ್ಟರ್ ನ ಅಭಿಮಾನ ಕಂಡು  ಸಂತುಷ್ಟನಾಗಿ "ಅವರಿಬ್ಬರಿಗೆ  ಹೋಟೆಲ್ ಪರವಾಗಿ ಇಂದು ನಾವು ಅಭಿನಂದನಾ ಪಾರ್ಟಿ ಕೊಡೋಣ ಎಂದು ಮಾಲೀಕ...

ದಿನಕ್ಕೊಂದು ಕಥೆ 996

ದಿನಕ್ಕೊಂದು ಕಥೆ ಕೃಪೆ:ಕನ್ನಡ_ಸಂಪದ ದಯಾನಂದ ಸರಸ್ವತಿ  ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಸಂಸ್ಥಾಪಕರಾಗಿ ಮತ್ತು ಭಾರತೀಯ ಸಮಾಜದ ಧಾರ್ಮಿಕ ಸುಧಾರಕರಾಗಿ, ಹಿಂದೂ ಧರ್ಮದ ಪುನರುತ್ಥಾರಕರಾಗಿ ಅವರು  ಸ್ಮರಣೀಯರಾಗಿದ್ದಾರೆ.  ಇಂದು ಅವರ ಸಂಸ್ಮರಣಾ ದಿನ. ದಯಾನಂದ ಸರಸ್ವತಿ  ಗುಜರಾತಿನ ಟಂಕಾರಾ ಎಂಬ ಗ್ರಾಮದಲ್ಲಿ 1824ರ ಫೆಬ್ರವರಿ 12ರಂದು ಜನಿಸಿದರು. ಅವರ ಮೊದಲ ಹೆಸರು ಮೂಲಶಂಕರ ಎಂದು. ತಂದೆ ಕೃಷ್ಣಜೀ ಲಾಲ್ಜಿ ಕಪಾಡಿ. ತಾಯಿ ಯಶೋದಾಬಾಯಿ.  ಅವರದು ದಾನ ಧರ್ಮಗಳಿಗೆ ಹೆಸರಾದ ಶ್ರೀಮಂತ ಮನೆತನ. ಕುಲಪದ್ಧತಿಯಂತೆ ಬಾಲ್ಯದಲ್ಲಿಯೇ ಮೂಲ ಶಂಕರನ ವೇದಾಧ್ಯಯನ ಸಾಂಗವಾಗಿ ನೆರವೇರಿತು. ಶಿವರಾತ್ರಿಯ ದಿನ ಶಿವ ಲಿಂಗದ ಮೇಲೇರಿ ಅಕ್ಷತೆ ಕಾಳನ್ನು ಆರಿಸಿ ತಿನ್ನುತ್ತಿದ್ದ ಇಲಿ, ಪ್ರೀತಿಯ ಚಿಕ್ಕಪ್ಪ ಮತ್ತು ತಂಗಿಯ ಅಕಾಲಮೃತ್ಯು ಈ ಘಟನೆಗಳಿಂದ ಮೂಲಶಂಕರನ ಹೃದಯದಲ್ಲಿ ಬಗೆಬಗೆಯ ಪ್ರಶ್ನೆಗಳು ಎದ್ದುವು. ಜೀವಿತದಲ್ಲಿ ಇವಕ್ಕೆ ಉತ್ತರ ಪಡಯಲೇಬೇಕೆಂದು ಬಾಲಕ ದೃಡಸಂಕಲ್ಪ ಮಾಡಿದ. ಅದಕ್ಕಾಗಿ ತಂದೆ ತಾಯಿ ಸಂಪತ್ತು ಎಲ್ಲವನ್ನೂ ತೊರೆದ. ದುರ್ಗಮ ಅರಣ್ಯಗಳಲ್ಲಿ ಅಲೆದು ಯೋಗಿಗಳಿಂದ ಯೋಗ್ಯವಿದ್ಯೆಯ ಅನೇಕ ರಹಸ್ಯಗಳನ್ನರಿತ. 1848 ರಲ್ಲಿ ಪೂರ್ಣಾನಂದ ಸರಸ್ವತಿಗಳು ಈ ಬ್ರಹ್ಮಚಾರಿಗೆ ಸಂನ್ಯಾಸದೀಕ್ಷೆಯನ್ನು ಕೊಟ್ಟು ದಯಾನಂದ ಸರಸ್ವತಿ ಎಂದು ಹೆಸರಿಟ್ಟರು. 1858 ರಲ್ಲಿ ದಯಾನಂದರು ಮಥುರೆಗೆ ಬಂದು ವಿರಜಾನಂದ ಸರಸ್ವತಿಗಳಲ್ಲಿ ವೇದವೇ...

ದಿನಕ್ಕೊಂದು ಕಥೆ 995

ದಿನಕ್ಕೊಂದು ಕಥೆ ಆಧುನಿಕ ಪಕ್ಷಿ ಪ್ರೇಮಿ. ಬದುಕು ಯಾವಾಗ ಬೇಕಾದರೂ ಬದಲಾಗಬಹದು. ಕೆಲವೊಮ್ಮೆ ಸಣ್ಣ ಘಟನೆಗಳು ಕೂಡ ಬದುಕುವ ರೀತಿಯನ್ನ ಬದಲಾಯಿಸಿ ಬಿಡುತ್ತವೆ. ಜೋಸೆಫ್ ಶೇಖರ್ ವಿಷಯದಲ್ಲೂ ಇಂತಹ ಒಂದು ಘಟನೆ ನಡೆಯುತ್ತದೆ. ೨೭ ಡಿಸೆಂಬರ್ ೨೦೦೪ ರ ಬೆಳಿಗ್ಗೆ ಶೇಖರ್ ಮನೆಯ ಮಹಡಿಯ ಮೇಲೆ ನಾಲ್ಕು ಗಿಣಿಗಳು ನೆಲದಲ್ಲಿ ಬಿದ್ದಿದ್ದ ಅಕ್ಕಿ ಯನ್ನ ಹೆಕ್ಕಿ ತಿನ್ನಲು ಪ್ರಯತ್ನಿಸುತ್ತಿರುತ್ತವೆ. ಈ ವೇಳೆಗಾಗಲೇ ಸುನಾಮಿ ಹೊಡೆತಕ್ಕೆ ಚೆನ್ನೈ ಸಿಕ್ಕಿರುತ್ತದೆ. ಲಕ್ಷಾಂತರ ಜನರ ಬದುಕು ಮೂರಾಬಟ್ಟೆ ಆಗಿರುತ್ತದೆ. ಇಂತಹ ಸಮಯದಲ್ಲಿ ಹಕ್ಕಿ -ಪಕ್ಷಿಗಳ ಕೇಳುವರಾರು?  ಶೇಖರ್ ಮನೆಯ ತಾರಸಿಯ ಮೇಲೆ ಒಂದಷ್ಟು ಕಾಳು ಮತ್ತು ನೀರು ಇಡುವುದನ್ನ ಮೊದಲಿನಿಂದಲೂ ಪಾಲಿಸಿಕೊಂಡು ಬಂದಿರುತ್ತಾರೆ. ಸುನಾಮಿ ನಂತರ ಅಯ್ಯೋ ಈ ಪಕ್ಷಿಗಳ ಕಥೆಯೇನು? ಎನ್ನುವ ಪ್ರಶ್ನೆ ಅವರಲ್ಲಿ ಮೂಡುತ್ತದೆ. ನಿತ್ಯವೂ ನೆನೆಸಿದ ಅಕ್ಕಿಯನ್ನ ತಂದು ಮಹಡಿಯ ಮೇಲೆ ಹರಡಲು ಶುರು ಮಾಡುತ್ತಾರೆ. ಅದು ನಿತ್ಯ ಕಾಯಕವಾಗುತ್ತದೆ. ಕಳೆದ ೧೬ ವರ್ಷದಿಂದ ಇದನ್ನ ಮಾಡುತ್ತಾ ಬಂದಿದ್ದಾರೆ. ಅವರ ಬದುಕಿನಲ್ಲಿ ಇಷ್ಟು ಸಮಯದಲ್ಲಿ ಹಲವಾರು ಏಳು ಬೀಳುಗಳನ್ನ ಕಂಡಿದ್ದಾರೆ. ಬದಲಾಗದೆ ಅಚಲವಾಗಿ ಉಳಿದಿರುವುದು ಅವರ ಮನೆಗೆ ಬರುವ ಗಿಣಿಗಳಿಗೆ ಆಹಾರ ನೀಡುವ ಕಾರ್ಯ.  ಪ್ರಾರಂಭದಲ್ಲಿ ಹತ್ತಿಪ್ಪತ್ತು ಬರುತ್ತಿದ್ದ ಗಿಣಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗಿ ಯಾವಾಗ  ಸಾವಿರಾರು ಸಂಖ್ಯೆಗೆ ಏರಿತು ಎನ್ನು...

ದಿನಕ್ಕೊಂದು ಕಥೆ 994

ದಿನಕ್ಕೊಂದು ಕಥೆ ನಳನ ಕಥೆ ಜೂಜಾಟದಲ್ಲಿ ದುರ್ಯೋಧನನಿಂದ ಸೋತುಹೋದ ಧರ್ಮರಾಯನು ಚಿಂತೆಯಲ್ಲಿ ಮಗ್ನನಾಗಿದ್ದನು. ತನ್ನಂತೆ ನೊಂದವರು ಯಾರೂ ಈ ಭೂಮಿಯಲ್ಲೇ ಇಲ್ಲ ಎಂದು ತಿಳಿದು ಬೇಸರಗೊಂಡಿದ್ದನು. ಆಗ ಬೃಹದೇಶ್ವರನೆಂಬ ಮುನಿ ಅಲ್ಲಿಗೆ ಬಂದರು. ಅವರು ಧರ್ಮರಾಯನಿಗೆ ಸಾಂತ್ವನ ಹೇಳುವ ಬಗೆಯಲ್ಲಿ ನಳದಮಯಂತಿಯರು ಪಟ್ಟ ಕಷ್ಟದ ಕಥೆಯನ್ನು ಹೇಳಿದರು. “ನಿಷದ ದೇಶದ ರಾಜನಾದ ವೀರಸೇನನು ಚೆನ್ನಾಗಿ ರಾಜ್ಯವಾಳುತ್ತಿದ್ದನು. ಅವನಿಗೆ ನಳನೆಂಬ ಮಗ ಇದ್ದನು. ಸೌಂದರ್ಯವೇ ಮೂರ್ತಿವೆತ್ತ ನಳನು ವಿದ್ಯೆಯಲ್ಲೂ ಅರಿವಿನಲ್ಲೂ ಶೌರ್ಯದಲ್ಲೂ ಶ್ರೇಷ್ಠನಾಗಿ ಬೆಳಗಿದನು. ಸದ್ಗುಣಗಳನ್ನು ಪಡೆದ ಅವನು ಕುದುರೆ ಸವಾರಿಯಲ್ಲಿಯೂ ನಿಪುಣನಾಗಿದ್ದನು. ಅದೇ ಸಮಯದಲ್ಲಿ ವಿದರ್ಭ ದೇಶವನ್ನು ಭೀಮನೆಂಬ ರಾಜನು ಆಳುತ್ತಿದ್ದನು. ಅವನಿಗೆ ದಮಯಂತಿ ಎಂಬ ಮಗಳಿದ್ದಳು. ಅವಳು ಅರಿವಿನಿಂದಲೂ, ಕಲೆಗಳಲ್ಲಿಯೂ ಶ್ರೇಷ್ಠಳಾಗಿದ್ದಳು. ಅವಳ ಸೌಂದರ್ಯ ಲಾವಣ್ಯಗಳ ಕೀರ್ತಿಯನ್ನು ಹಲವರು ವರ್ಣಿಸಿದ್ದನ್ನು ಕೇಳಿ ನಳನು ಅವಳನ್ನು ಕಾಣದೇ ಇದ್ದರೂ ಮನಸ್ಸಿನಲ್ಲೇ ಅವಳನ್ನು ಪ್ರೀತಿಸತೊಡಗಿದನು. ಅವನಂತೆಯೇ ದಮಯಂತಿಯೂ ಸಹ ನಳನ ಬಗ್ಗೆ ಕೇಳಿ ತಿಳಿದು ಅವನನ್ನು ಪ್ರೀತಿಸತೊಡಗಿದಳು. ಒಬ್ಬರನ್ನೊಬ್ಬರು ನೋಡದೆಯೇ ನಳದಮಯಂತಿಯರ ಪ್ರೇಮ ಬೆಳೆಯಿತು. ಒಂದು ದಿನ ನಳನು ಅರಮನೆಯ ಹತ್ತಿರದ ತೋಟದಲ್ಲಿ ಒಬ್ಬನೇ ಇದ್ದನು. ಆಗ ಸುಂದರವಾದ ಹಂಸಗಳು ಅಲ್ಲಿಗೆ ಬಂದವು. ಅವುಗಳಲ್ಲಿ ಒಂದು ಅವನ ಬಳಿಗೆ ಬಂದು “ಸುಂದರನಾದ ರ...

ದಿನಕ್ಕೊಂದು ಕಥೆ 993

ದಿನಕ್ಕೊಂದು ಕಥೆ ಟೈಟಾನಿಕ್ ಹಡಗು ಮುಳುಗುತ್ತಾ ಇದ್ದಾಗ ಅದರ ಆಸುಪಾಸು ಒಟ್ಟು ಮೂರು ಬೇರೆ ಹಡಗುಗಳಿದ್ದವು ಹಾಗೂ ಇವು ಮನಸ್ಸು ಮಾಡಿದ್ದರೆ 1500 ಜನರನ್ನು ಬದುಕಿಸಬಹುದಿತ್ತು. ತೀರಾ ಹತ್ತಿರ ಇದ್ದ ಹಡಗಿನ ಹೆಸರು 'ಸ್ಯಾಮ್ಸನ್'ಇದು ಕೇವಲ ಏಳು ಮೈಲಿ ದೂರದಲ್ಲಿತ್ತು. ಅಷ್ಟೇ ಅಲ್ಲ ಟೈಟಾನಿಕ್ ಹಡಗಿನ ಕ್ಯಾಪ್ಟನ್ ಮಾಡಿದ್ದ ಎಮರ್ಜೆನ್ಸಿ ಸಿಗ್ನಲ್  ಹಾಗೂ ಟೈಟಾನಿಕ್ ಹಡಗಿನಲ್ಲಿದ್ದ ಜನರ ಚೀತ್ಕಾರ ಸಹ ಕೇಳುತ್ತಿತ್ತು.ಆದರೆ ಒಂದೇ ಕಾರಣಕ್ಕೆ ಈ ಕ್ಯಾಪ್ಟನ್ ಮನಸು ಮಾಡಲಿಲ್ಲ ಯಾಕೆ ಅಂದರೆ  ಈ ಹಡಗಿನಲ್ಲಿದ್ದವರು ಕಾನೂನು ಬಾಹಿರವಾಗಿ ಸಮುದ್ರ ಜೀವಿಗಳನ್ನು ಬೇಟೆ ಮಾಡುತ್ತಿದ್ದರು. ಹಾಗಾಗಿ ತನ್ನ ಹಡಗಿನ ದಿಕ್ಕನ್ನು ಬದಲಾಯಿಸಿದ್ದ ಸ್ಯಾಮ್ಸನ್ ಹಡಗಿನ ಕ್ಯಾಪ್ಟನ್. ಇದು ಹೇಗಿದೆ ಅಂದರೆ ನಮ್ಮಲ್ಲಿ ಕೆಲವು ಜನ ತಮ್ಮ ಪಾಪಭರಿತ ಜೀವನದಲ್ಲಿ ಮಗ್ನರಾಗಿ ಮಾನವೀಯತೆಯನ್ನೇ ಮರೆತುಬಿಡುವವರ ಹಾಗಿದೆ. ಎರಡನೇ ಹತ್ತಿರವಿದ್ದ ಹಡಗಿನ ಹೆಸರು 'ಕ್ಯಾಲಿಫೋರ್ನಿಯನ್'ಇದು ಟೈಟಾನಿಕ್ ಹಡಗಿನಿಂದ 14 ಮೈಲಿ ದೂರದಲ್ಲಿ ಇತ್ತು.ಈ ಹಡಗಿನ ಕ್ಯಾಪ್ಟನ್ ಗು ಟೈಟಾನಿಕ್ ನ ಎಮರ್ಜೆನ್ಸಿ ಸಿಗ್ನಲ್ ಸಿಕ್ಕಿತ್ತು. ಆದರೆ ಈ ಹಡಗು ಟೈಟಾನಿಕ್ ಯಾವ ಮಂಜುಗಡ್ಡೆಯ ಪರ್ವತಕ್ಕೆ ಡಿಕ್ಕಿ ಹೊಡೆದಿತ್ತೋ ಅದನ್ನು ಸುತ್ತಿಕೊಂಡು ಹೋಗಬೇಕಿತ್ತು.ಹಾಗಾಗಿ ಈ ಕ್ಯಾಪ್ಟನ್  ಬೆಳಕು ಹರಿಯಲಿ ನೋಡೋಣ ಅಂತ ಕಾಯ್ತಾ ಇದ್ದ.ಆದರೆ ಅವನು ಮರುದಿನ ಅಲ್ಲಿಗೆ  ಹೋಗುವಷ್ಟೊತ್ತಿಗೆ ...

ದಿನಕ್ಕೊಂದು ಕಥೆ 992

ದಿನಕ್ಕೊಂದು ಕಥೆ ಒಂದು ಸ್ಥಳದಲ್ಲಿ ಪೋಲೀಸರು ಒಂದು ಫಲಕವನ್ನು ಸ್ಥಾಪಿಸಿದರು- "ನೋ ಪಾರ್ಕಿಂಗ್ ಜೋನ್ ಪೆನಾಲ್ಟಿ 250 ರೂಪಾಯಿ ಗಳು (No Parking Zone.  Penalty Rs. 250) ಪ್ರಸ್ತುತ ಆಜ್ಞೆಯನ್ನು ಯಾರೂ ಕೂಡ ಪಾಲನೆ  ಮಾಡುತ್ತಿರಲಿಲ್ಲ. ಜನರು ಫಲಕದ ಕೆಳಗಡೆಯೇ ವಾಹನಗಳನ್ನು ನಿಲ್ಲಿಸುತ್ತಿದ್ದರು. ಕೆಲವು ದಿನಗಳ ನಂತರ ಅಧ್ಯಾಪಕರೊಬ್ಬರು ಆ ದಾರಿಯ ಮೂಲಕ ಹಾದು ಹೋಗುತ್ತಿದ್ದರು. ಅವರು ಆ ಫಲಕ ಮತ್ತು ಪರಿಸರವನ್ನು ಸೂಕ್ಷ್ಮವಾಗಿ ವೀಕ್ಷಿಸಿದ ಬಳಿಕ ಫಲಕದಲ್ಲಿ ಸಣ್ಣ ಬದಲಾವಣೆಯನ್ನು ಮಾಡಿದರು. ಫಲಕದಿಂದ "ನೋ" ಮತ್ತು "ಪೆನಾಲ್ಟಿ" ಇವೆರಡನ್ನು ಉಜ್ಜಿ ತೆಗೆದರು. ಈಗ ಅದು ಹೀಗಾಯಿತು :  "ಪಾರ್ಕಿಂಗ್ ಜೋನ್ 250 ರೂಪಾಯಿಗಳು". ಆ ನಂತರ ಅಲ್ಲಿ ಯಾರೂ ಕೂಡ ವಾಹನಗಳನ್ನು ನಿಲ್ಲಿಸುತ್ತಿರಲಿಲ್ಲ.!!! ಪೋಲೀಸರು ಈಗ ಆ ಅಧ್ಯಾಪಕರನ್ನು ಹುಡುಕುತ್ತಿದ್ದಾರೆ, ಅವರಿಂದ ಹೆಚ್ಚು ತಂತ್ರ (trick)ಗಳನ್ನು ಕಲಿಯುವುದಕ್ಕಾಗಿ..... ಶಿಕ್ಷೆಯಿಂದ ಎಲ್ಲರನ್ನೂ ಸರಿದಾರಿಗೆ ತರಲು ಸಾಧ್ಯವಿಲ್ಲ. ಇದನ್ನು ಸರಿಯಾಗಿ ಬಲ್ಲವರು ನಿಜವಾದ ಅಧ್ಯಾಪಕರಾಗುತ್ತಾರೆ. ಇಲ್ಲಿ ಆಗಿದ್ದೂ ಕೂಡ ಅದೇ.  ಕೃಪೆ: ವಾಟ್ಸ್ ಆ್ಯಪ್ ಗ್ರೂಪ್ ಸಂಗ್ರಹ:ವೀರೇಶ್ ಅರಸಿಕೆರೆ

ದಿನಕ್ಕೊಂದು ಕಥೆ 991

ದಿನಕ್ಕೊಂದು ಕಥೆ ಭಿಕ್ಷುಕನೋರ್ವˌ ಒಂದು ಮನೆಗೆ ಯಾಚಿಸುತ್ತಾ ಹೋಗುತ್ತಾನೆ... ಆತ ಆ ಮನೆಯನ್ನು ನೋಡುತ್ತಾನೆ  ಅದು ಮನೆ ಅಲ್ಲˌ ಅರಮನೆ..... ನೋಡಿ ಮುಗಿಸಲು ಎರಡು ಕಣ್ಣು ಸಾಲದು...... ಹೊರಗಡೆ ಐಶರಾಮಿ ಕಾರುಗಳು ಸಾಲುಗಟ್ಟಿ ನಿಂತಿವೆ.... ಕೊಟ್ಟಾರದ ಹೊರಾಂಗಣದಲ್ಲಿ ಅರಮನೆಯ ಒಡೆಯ ಕಪ್ಪು ಕೂಲಿಂಗ್ ಗ್ಲಾಸೊಂದನ್ನ ಹಾಕಿ ಐಶಾರಾಮಿ ಕುರ್ಚಿಯಲ್ಲಿ ಕುಳಿತಿದ್ದಾನೆ.... ಅವನ ಪಕ್ಕದಲ್ಲಿ ಸುಂದರಿಯಾದಂತಹ ಪತ್ನಿಯೂ ಇದ್ದಾಳೆ...... ತಂದೆ—ತಾಯಿಯ ಸೇವೆಗೆ ಸದಾ ಸಿಧ್ಢರಾಗೋ ಮಕ್ಕಳೂ ಇದ್ದಾರೆ....... ಇದನ್ನೆಲ್ಲಾ ಗಮನಿಸಿದ ಭಿಕ್ಷುಕ ಹೇಳಿದˌ "ಓ ಯಜಮಾನಾರೇ.... ಓ ಯಜಮಾನರೇ...... ನೀವೆಷ್ಟು ಭಾಗ್ಯವಂತರುˌ ದೇವರು ನಿಮಗೆ ಎಷ್ಟು ಅನುಗ್ರಹ ನೀಡಿದ್ದಾನೆ. ನಿಜಕ್ಕೂ ನೀವು ಭಾಗ್ಯವಂತ... ನಿಮಗೆ ದೇವರು ಅರಮನೆ ನೀಡದಿದ್ದಾನಲ್ಲವೇ..? ನನಗೆ ಒಂದಿಂಚು ಭೂಮಿಯೂ ಇಲ್ಲ. ನಿಮಗೆ ದೇವರು ಐಶಾರಾಮಿ ಕಾರು ನೀಡಿದ್ದಾನಲ್ಲವೇ...?ನನಗೆ ಸರಿಯಾದ ಚಪ್ಪಲಿಯೂ ಇಲ್ಲ... ನಿಮಗೆ ಸುಂದರಿಯಾದ ಪತ್ನಿಯೂ ಇದ್ದಾಳೆˌ ನನಗೆ ಯಾರು ಹೆಣ್ಣು ಕೊಡುವವರು, ಆದ್ದರಿಂದ ಮಕ್ಕಳೂ ಇಲ್ಲ. ನಿಜಕ್ಕೂ ನೀವು ಭಾಗ್ಯವಂತರು... ಇದನ್ನ ಕೇಳಿದ ಯಜಮಾನ ಭಿಕ್ಷುಕನೊಂದಿಗೆ ಹೇಳಿದ -  *"ದೇವರು ನನಗೆ ನೀಡದಂತಹ ಒಂದು ದೊಡ್ಡ ಅನುಗ್ರಹವನ್ನ ನಿನಗೆ ನೀಡಿದ್ದಾನೆ"* ಭಿಕ್ಷುಕ ಅಚ್ಚರಿಯೊಂದಿಗೆˌ ಅದೇನೆಂದು ಕೇಳುತ್ತಾನೆ. ಯಜಮಾನˌ ತನ್ನ ಕನ್ನಡಕವನ್ನ ತೆಗೆದು ಹೇಳುತ್ತಾನೆˌ...

ದಿನಕ್ಕೊಂದು ಕಥೆ 990

ದಿನಕ್ಕೊಂದು ಕಥೆ 😷😷ಮಾನಸಿಕ ಒತ್ತಡ😷😷    ಮತಾಜುರ ಎನ್ನುವ ಯುವಕನು ಕತ್ತಿವರಸೆಯಲ್ಲಿ ನೈಪುಣ್ಯವನ್ನು ಸಂಪಾದಿಸಬೇಕೆಂದುಕೊಂಡನು. ಬಂಜೋ ಎನ್ನುವ ಗುರುಗಳ ಬಳಿಗೆ ಅವನು ಹೋದ. "ನಾನು ನಿಮ್ಮ ಬಳಿ ಶಿಷ್ಯತ್ವವನ್ನು ಸ್ವೀಕರಿಸಿ ಕತ್ತಿಯುದ್ಧವನ್ನು ಕಲಿತುಕೊಳ್ಳಬೇಕೆಂದುಕೊಂಡಿದ್ದೇನೆ. ಇದಕ್ಕೆ ಎಷ್ಟು ಸಮಯ ಹಿಡಿಯಬಹುದು" ಎಂದು ಕೇಳಿದ. "ಹತ್ತು ವರ್ಷಗಳು" ಎಂದು ಗುರುಗಳು ಹೇಳಿದರು. "ಹೋಗಲಿ ನಿಮ್ಮ ಬಳಿ ಎರಡರಷ್ಟು ಸಮಯ ವಿದ್ಯೆಯನ್ನು ಕಲಿತರೆ ಎಷ್ಟು ಕಾಲದಲ್ಲಿ ಕಲಿತುಕೊಳ್ಳಬಹುದೋ ಹೇಳಿ ಗುರುಗಳೇ" ಎಂದು ಕೇಳಿದ ಮತಾಜುರ. ಗುರುಗಳು ಸಣ್ಣದಾಗಿ ತಲೆಯಾಡಿಸಿ, "ಇಪ್ಪತ್ತು ವರ್ಷ ಹಿಡಿಯಬಹುದು" ಎಂದು ಹೇಳಿದರು. ಆಶ್ಚರ್ಯಗೊಂಡ ಮತಾಜುರ, "ಅನ್ನಪಾನಾದಿಗಳನ್ನು ಕೈಬಿಟ್ಟು ನಿಮ್ಮ ಹತ್ತಿರ ಹಗಲಿರುಳೂ ಕಲಿತುಕೊಂಡರೆ ನಾನು ಎಷ್ಟು ವರ್ಷಗಳಲ್ಲಿ ಕತ್ತಿವರಸೆಯಲ್ಲಿ ನಿಪುಣನಾಗಬಹುದು" ಎಂದು ಕೇಳಿದ. ಗುರುಗಳು ಮತ್ತಷ್ಟು ದೊಡ್ಡದಾಗಿ ನಕ್ಕು, "ಎಪ್ಪತ್ತು ವರ್ಷ" ಎಂದು ಹೇಳಿದರು. ಮತಾಜುರನಿಗೆ ಇದರಿಂದ ಸಿಟ್ಟು ಬಂತು, "ಏನು? ನೀವು ನನ್ನೊಂದಿಗೆ ಆಟವಾಡುತ್ತಿದ್ದೀರಾ? ನಾನು ಎಷ್ಟು ಹೆಚ್ಚು ಕಾಲ ಕಲಿತುಕೊಳ್ಳುತ್ತೇನೆಂದರೆ ಅಷ್ಟು ಹೆಚ್ಚು ಸಮಯ ಹಿಡಿಯುತ್ತದೆ ಎಂದು ನೀವು ಹೇಳುತ್ತಿದ್ದೀರಿ" ಎಂದು ಗಟ್ಟಿಯಾಗಿ ಹೇಳಿದ.   ಗುರುಗಳಾದ ಬಂಜೋ ಶಿಷ್ಯನಾದ ಮತಾಜರನ ತಲೆಯನ...

ದಿನಕ್ಕೊಂದು ಕಥೆ 989

ದಿನಕ್ಕೊಂದು ಕಥೆ  ಆಧುನಿಕ ಭಾರತದ ಶಿಲ್ಪಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ.          ಭಾರತರತ್ನ ಪ್ರಶಸ್ತಿಯನ್ನು ಹೆಮ್ಮೆಯಿಂದ ಪಡೆದ ಕನ್ನಡಿಗ  ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಸಾಧನೆಗಳನ್ನು ಕೆಲವೇ ಶಬ್ದಗಳಲ್ಲಿ ಕಟ್ಟಿ ಕೊಡುವುದು ತುಂಬಾ ಕಷ್ಟ. ಮೈಸೂರು ಸಂಸ್ಥಾನದ ದಿವಾನರಾಗಿ ಹಾಗೂ ಮುಖ್ಯ ಇಂಜಿನಿಯರ್ ಆಗಿ ಅವರು ಹುಟ್ಟು ಹಾಕಿದ ಸಂಸ್ಥೆಗಳು ಅಸಂಖ್ಯ! ಅವರ ಬದುಕೇ ಒಂದು ಅದ್ಭುತ ಯಶೋಗಾಥೆ.        ಅವರು ಮೊದಲು ಓದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎ ಪದವಿಯನ್ನು. ಅದರ ನಂತರ ಪೂನಾ ಇಂಜಿನಿಯರಿಂಗ್ ಕಾಲೇಜಿನಿಂದ BE ( civil) ಪದವಿ. ಮೊದಲು ಸೇವೆ ಸಲ್ಲಿಸಿದ್ದು ಮಹಾರಾಷ್ಟ್ರ ಸರಕಾರದ PWD  ಇಲಾಖೆಯಲ್ಲಿ. ಈ ಅವಧಿಯಲ್ಲಿ ಮುಂಬೈ ಮಹಾನಗರದ ನೀರು ಸರಬರಾಜು, ಒಳಚರಂಡಿ, ನೀರಾವರಿ ಯೋಜನೆಗಳನ್ನು ಜಾರಿಗೆ ತಂದರು. ಮುಂದೆ ಹೈದರಾಬಾದ ಸರಕಾರವು ಅವರ ಸೇವೆಯನ್ನು ಪಡೆಯುವಲ್ಲಿ ಯಶಸ್ವಿ ಆಯಿತು. ಅಲ್ಲಿ ಪ್ರವಾಹದಿಂದ ನಗರದ ಕೆರೆಗಳು ತುಂಬಿ ಹರಿದು ಇಡೀ ನಗರವೇ ಕೊಚ್ಚಿಕೊಂಡು ಹೋಗುವ ಸಮಸ್ಯೆ ಇತ್ತು. ಅಲ್ಲಿನ ಕೆರೆಗಳ ಸಂರಕ್ಷಣೆ, ಒಳಚರಂಡಿ ಯೋಜನೆಯ ಯಶಸ್ವೀ ನಿರೂಪಣೆಯಿಂದ ಮತ್ತೆ ಹೈದರಾಬಾದ ನಗರದಲ್ಲಿ ನೆರೆ ಬರಲಿಲ್ಲ!          ಅವರ ಕೀರ್ತಿ ಎಲ್ಲೆಡೆ ಹರಡಿದಂತೆ ಮೈಸೂರಿನ  ಮಹಾರಾಜರು ಅವರನ್ನು ತುಂಬು ಗೌರವದಿಂದ ...

ದಿನಕ್ಕೊಂದು ಕಥೆ 988

ದಿನಕ್ಕೊಂದು ಕಥೆ ಕಣ್ಣೀರನ್ನು ಕಾಣದ ನಗೆ:~ (ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ಓದಿ)🐍🐍 ಒಂದು ಊರಿನ ಹೊರಗಡೆ ಒಂದು ಸಂಸಾರ ವಾಸವಾಗಿತ್ತು. ಅವರ ಮನೆಯ ಪಕ್ಕದಲ್ಲೇ ಸ್ಮಶಾನ. ಈ ಮನೆಯಲ್ಲಿದ್ದವರು ಮೂವರೇ ಜನ. ತಂದೆ, ತಾಯಿ ಮತ್ತು ಪುಟ್ಟ ಮಗಳು. ಅವಳಿಗೆ ಸುಮಾರು ಆರು ವರ್ಷ ವಯಸ್ಸು. ಮನೆಯಲ್ಲಿ ಕಡು ಬಡತನ.🐍🐍 ಮನೆಯೊಳಗೆ ತಿನ್ನಲು ಆಹಾರವಿಲ್ಲ. ಹೊರಗಡೆ ತಿರುಗಾಡುವುದು ಸಾಧ್ಯವಿಲ್ಲದಷ್ಟು ಹಿಮಪಾತ.🐍🐍 ಅಪ್ಪನ ಕೆಲಸವೇ ವಿಚಿತ್ರ. ಸ್ಮಶಾನಕ್ಕೆ ಯಾವುದಾದರೂ ಹೆಣ ಬಂದರೆ ಮಾತ್ರ ಅವನ ಕೆಲಸ ಪ್ರಾರಂಭ. ಆತ ಮಾಡುವುದು ಹೆಣದ ಅಲಂಕಾರ. ಆ ದೇಶಗಳಲ್ಲಿ ಹೆಣವನ್ನು ಚೆನ್ನಾಗಿ ಅಲಂಕಾರ ಮಾಡಿ, ಮರದ ಪೆಟ್ಟಿಗೆಯೊಳಗಿರಿಸಿ ನಂತರ ನೆಲದಲ್ಲಿ ಹೂಳುತ್ತಾರೆ.🐍🐍 ಈತ ಹೆಣದ ಅಲಂಕಾರದಲ್ಲಿ ಪರಿಣಿತ. ಅದಕ್ಕೇ ಜನ ಮೃತದೇಹಗಳನ್ನು ಅಲ್ಲಿಗೆ ತಂದು ಒಪ್ಪಿಸುತ್ತಿದ್ದರು. ಈತ ಹೆಣವನ್ನು ಶುದ್ಧವಾಗಿ ತೊಳೆದು, ಮುಲಾಮು ಸವರಿ ನಂತರ ಅವುಗಳಿಗೆ ಒಳ್ಳೆಯ ಪೋಷಾಕು ತೊಡಿಸುತ್ತಿದ್ದ. ಮುಖಕ್ಕೆ ವಿಶೇಷವಾದ ಅಲಂಕಾರ ಮಾಡಿ ದೇಹವನ್ನು ಮತ್ತಷ್ಟು ಅಲಂಕಾರ ಮಾಡಿದ ಮರದ ಪೆಟ್ಟಿಗೆಯಲ್ಲಿಟ್ಟು ಸಂಬಂಧಿಕರಿಗೆ ಒಪ್ಪಿಸುತ್ತಿದ್ದ.🐍🐍🐍 ಈ ಕೆಲಸಕ್ಕೆ ಅವನಿಗೆ ಸುಮಾರು ಮೂರರಿಂದ ನಾಲ್ಕು ತಾಸು ಸಮಯ ತಗಲುತ್ತಿತ್ತು. ಅದಕ್ಕಾಗಿ ಅವನಿಗೆ ಒಂದಷ್ಟು ಹಣ ದೊರಕುತ್ತಿತ್ತು. ಅದರಿಂದ ಕೆಲವು ದಿನ ಜೀವನ ಸಾಗುತ್ತಿತ್ತು.🐍🐍🐍🐍 ಹೆಣಗಳು ಬಾರದಿದ್ದ ದಿನ ಬದುಕು ದುರ್ಭರವಾಗುತ್ತಿತ...

ದಿನಕ್ಕೊಂದು ಕಥೆ 987

ದಿನಕ್ಕೊಂದು ಕಥೆ ಸಣ್ಣ ವಿಷಯ ,ಮನಸು ಹಗುರ....... (ಶಿಕ್ಷಕ ಮಿತ್ರರಿಗಾಗಿ) ಕೃಪೆ:ವಾಟ್ಸ್ ಆ್ಯಪ್ ಗ್ರೂಪ್. ಇಂದು ಮದ್ಯಾನ್ಹ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಕುಳಿತು ವಿದ್ಯಾಗಮಕ್ಕೆ ಸಂಬಂಧಿಸಿದ ದಾಖಲೆ,ಮಾಹಿತಿಗಳನ್ನು ಬರೆಯುತ್ತಾ ಕುಳಿತಿದ್ದೆ  ತುಂಬಾ ಸೋತಿದ್ದಂತಿದ್ದ ಒಬ್ಬರು ಹೆಂಗಸು,HM ಕೊಠಡಿಯ ಒಳಕ್ಕೆ ಬಂದು ನಮಸ್ಕಾರ ಸರ್ ಅಂದರು. ನಮ್ಮ ತಾಯಿಯ ವಯಸ್ಸಿನವರು,ನೋಡಲು ನನ್ನ ತಾಯಿಯಂತೆ ಇದ್ದರು ,ಅವರು ಸರ್ ಅಂದಾಗಲೇ ಅಷ್ಟು ಹಿರಿಯ ಜೀವದ ಬಾಯಿಂದ  ಸೋತ ದ್ವನಿಯಲ್ಲಿ ಸರ್ ಎನ್ನುವ ಮಾತು ಕೇಳಲು ಯಾಕೊ ಸಂಕೊಚ ,ಮುಜುಗರವು ಆಯಿತು ,ಬನ್ನಿ ಅಮ್ಮ ಕುಳಿತುಕೊಳ್ಳಿ‌ ಏನಾಗಬೇಕು ಅಂದೆ ಪಾಪ ಬಿಸಲ ಜಗಳದಲ್ಲಿ ಬೆವೆತಿದ್ದ ಮೂಖವನ್ನು ತಾನು ತೊಟ್ಟಿದ್ದ ಹಳೆಯ ಸೀರೆಯೊಂದರ ಸೆರಗಿನಿಂದ ಒರೆಸಿಕೊಳ್ಳುತ್ತಾ ,ಈ ಕರೋನಾ ಹರಡುತ್ತಿರುವ ಸಮಯದಲ್ಲಿಯೂ ನೆಡದೂ ನೆಡೆದು ಸೋತಂತೆ ಬಾಯಿಗೆ ಹಾಕಿದ್ದ ಮಾಸ್ಕ್ ಸರಿಸಿ .....,ನಾನು ಈ ಶಾಲೆಯಲ್ಲಿ ಒಂದನೆ ಕ್ದಾಸಿಗೆ ಸೇರಿ ,ಎರಡನೇ ಕ್ಲಾಸಿನವರೆಗೆ ಶಾಲೆಗೆ ಬಂದಿದ್ದೆ ,ನನಗೆ ಈಗ 63_64 ವರ್ಷ ವಯಸ್ಸು ,ಆದರೆ ಆಧಾರ್ ಕಾರ್ಡ್ ನಲ್ಲಿ ವಯಸ್ಸು ತಪ್ಪಾಗಿ ,ನನಗಿನ್ನು ಅರವತ್ತು ತುಂಬಿಲ್ಲ,ಅದಕ್ಕಾಗಿ,ವೃದ್ದಾಪ್ಯ ವೇತನ ಮಾಡಿಸಲು ಆಗುತ್ತಿಲ್ಲ, ಎಲ್ಲಾ ಕಡೆ ಅಲೆದಾಡುತ್ತಿದ್ದೇನೆ ನನಗೆ  ನೋಡಿಕೊಳ್ಳುವವರು ಯಾರು ಇಲ್ಲ, ಕೂಲಿ ಮಾಡಿ ಸೋತು ಸೊರಗಿದ್ದೇನೆ,ದಯಮಾಡಿ ನಾನು ಶಾಲೆಗೆ ಸೇರಿದ ವರ್ಷದಲ...