Posts

ದಿನಕ್ಕೊಂದು ಕಥೆ 1025

*🌻ದಿನಕ್ಕೊಂದು ಕಥೆ🌻* *ಕಂಠಿಹಾರದ  ಕಳ್ಳ* ಒಮ್ಮೆ ಅಕ್ಬರ್ ತನ್ನ ಪ್ರೀತಿಯ ರಾಣಿಗೆ  ಬೆಲೆಬಾಳುವ ಕಂಠೀಹಾರವನ್ನು ಉಡುಗರೆಯಾಗಿ ತಂದುಕೊಟ್ಟನು. ರಾಣಿಗೆ ಆ ಕಂಠೀ ಹಾರವನ್ನು ನೋಡಿ ಬಹಳ  ಸಂತೋಷವಾಯಿತು. ಪ್ರಭು ನೀವು ಪ್ರೀತಿಯಿಂದ ತಂದುಕೊಟ್ಟ  ಈ ಬೆಲೆಬಾಳುವ ಹಾರವನ್ನು ನಾನು ಬಹಳ ಜೋಪಾನವಾಗಿ ನೋಡಿಕೊಳ್ಳುವೆ. ನಾನು ತುಂಬಾ ಅದೃಷ್ಟವಂತೆ ಎಂದು  ಹೇಳಿದಳು. ರಾಜನು "ನಿನಗೆ ಸಂತೋಷವಾಗುತ್ತದೆ  ಎಂದು  ರಾಜ್ಯದ ಕುಶಲಕರ್ಮಿಗಳಿಂದ  ಈ ಬೆಲೆಬಾಳುವ ಕಂಠಿ ಹಾರವನ್ನು ಮಾಡಿಸಿದೆ.  ನಿನಗೆ ಇಷ್ಟವಾದರೆ ನನಗೆ ಸಂತೋಷ "ಎಂದನು. ಆಗ ರಾಣಿಯು, ಈ ಹಾರ ನನಗೆ ತುಂಬಾ ಇಷ್ಟವಾಗಿದೆ. ನನ್ನ ಜೀವಮಾನ ಪರ್ಯಂತ ಜೋಪಾನವಾಗಿ ಕಾಪಾಡುವೆ ಎಂದಳು. ರಾತ್ರಿ ಸರವನ್ನು ತೆಗೆದು ಮೇಜಿನ ಮೇಲೆ ಇಟ್ಟು ಮಲಗಿದಳು. ಮರುದಿನ ಬೆಳಗ್ಗೆ ರಾಣಿಯು ಕಂಠಿ ಹಾರವನ್ನು ಮತ್ತೊಮ್ಮೆ ನೋಡಬೇಕೆಂದು ತೆಗೆದುಕೊಳ್ಳಲು ಹೋದಳು. ಆದರೆ ಅವಳಿಟ್ಟ ಜಾಗದಲ್ಲಿ ಆ ಕಂಠಿಹಾರ ಇರಲಿಲ್ಲ. ರಾತ್ರಿ ಮಲಗುವಾಗ ಅದನ್ನು ತೆಗೆದು ಟೇಬಲ್ಲಿನ ಮೇಲೆ ಇಟ್ಟಿದ್ದಳು. ಅವಳಿಗೆ ಅದು ಚೆನ್ನಾಗಿ ನೆನಪಿದೆ. ಆದರೆ ಈಗ ಹಾರ ಕಾಣುತ್ತಿಲ್ಲ ಎಲ್ಲಾ ಕಡೆ ಹುಡುಕಿದರೂ ಅದು ಸಿಗಲಿಲ್ಲ. ಆಗ ಅವಳು ತನ್ನ ದಾಸಿಯನ್ನು ಕರೆದು ನಿನ್ನೆ ನನಗೆ ಮಹಾರಾಜರು ತಂದುಕೊಟ್ಟ ಕಂಠಿಹಾರ ಇಲ್ಲೇ ಇಟ್ಟಿದ್ದೆ. ಅದು ಕಳೆದುಹೋಗಿದೆ ನನಗೆ ಹುಡುಕಿಕೊಡು  ಎಂದಳು. ದಾಸಿಯು ಮಹಾರಾಣ...

ದಿನಕ್ಕೊಂದು ಕಥೆ 1024

*🌻ದಿನಕ್ಕೊಂದು ಕಥೆ🌻* *ಮೇರು ಗುಣದ ಆ ವಿದ್ಯಾರ್ಥಿನಿ....................... ಮತ್ತು ಕಲಿಯುತ್ತಲೇ ಇರುವ ನಾನು* ಎರಡು ವಾರಗಳ ಹಿಂದೆ.............. ಕಾಲೇಜಿಗೆ ಯಥಾ ರೀತಿ ಹೋದೆ. ದ್ವಿತೀಯ ಪಿಯುಸಿಯ ಪ್ರವೇಶ ಆಗಲೇ ಆರಂಭಗೊಂಡಿದ್ದವು. ಮಾಸಿದ ಬಟ್ಟೆ ಧರಿಸಿದ ನಮ್ಮ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಅಲ್ಲಿನ ಮೆಟ್ಟಿಲ ಮೇಲೆ ಸುಮ್ಮನೆ ಕುಳಿತಿದ್ದಳು. ನಾನು ಯಥಾರೀತಿ ಸ್ಟಾಫ್ ರೂಂ ಗೆ ಹೋದೆ. ಆ ವಿದ್ಯಾರ್ಥಿನಿ ಎಷ್ಟೊತ್ತಾದರೂ ಹಾಗೇ ಕುಳಿತಿದ್ದುದರಿಂದ ಯಾಕೋ ಅನುಮಾನ ಬಂದು ಕರೆದೆ. “ ಯಾಕಮ್ಮ ಏನು ಸಮಸ್ಯೆ.... ಎಷ್ಟೊತ್ತಾದರೂ ಇಲ್ಲೇ ಕೂತಿದೀಯಲ್ಲ ? ಎಂದೆ. “ ಏನಿಲ್ಲ ಸರ್ “ ಎಂದಳು. “ ಹೇಳು ಹೇಳು ಏನು ಸಮಸ್ಯೆ ? “ ಎಂದೆ. ಮತ್ತೆ ಮತ್ತೆ ಕೇಳಿದರೂ ಅದೇ ಉತ್ತರ. ನಿಧಾನವಾಗಿ ವಿಶ್ವಾಸಕ್ಕೆ ತೆಗೆದುಕೊಂಡು “ ಹೇಳಮ್ಮ “ ಎಂದೆ. “ ಸರ್ ಫೀಸ್ ಕಟ್ಟಲಿಕ್ಕೆ ದುಡ್ಡಿಲ್ಲ ಆದರೆ ಅಡ್ಮಿಶನ್ ಮಾಡಿಸಬೇಕು “ ಎಂದಳು. “ ಈಗ ಎಷ್ಟೂ ಇಲ್ಲವೇ ? “ ಎಂದು ಕೇಳಿದೆ. “ ಇಲ್ಲ ಸರ್ ತಂದಿದೀನಿ ಆದರೆ ಕಡಿಮೆ ಇದೆ “, “ ಎಷ್ಟು ಕಡಿಮೆ ಇದೆ ? ಈಗ ಎಷ್ಟು ಕಟ್ಟೋದಿದೆ ? “ ಎಂದು ಕೇಳಿದೆ. “ ಸರ್ ಇನ್ನೂ ಒಂದು ಸಾವಿರ ರೂ. ಬೇಕು “ ಎಂದಳು. ನಾನು ಸಹಜವಾಗಿಯೇ ಕೇಳಿದೆ “ ನಿನ್ನ ತಂದೆ ಏನು ಕೆಲಸ ಮಾಡ್ತಾರೆ, ಅವರು ದುಡ್ಡು ಕೊಟ್ಟಿಲ್ಲವಾ ? “ ಎಂದು ಕೇಳಿದೊಡನೆ ಅಳಲು ಆರಂಭಿಸಿದಳು. ಅಯ್ಯೋ ಏನು ಸಮಸ್ಯೆಯೋ ಪಾಪ ಎಂದು ಸಮಾಧಾನಿಸಿ ಕೇಳಿದೆ “ ಸಮಾಧಾನ ಮಾ...

ದಿನಕ್ಕೊಂದು ಕಥೆ 1023

*🌻ದಿನಕ್ಕೊಂದು ಕಥೆ🌻* *ಸರ್ವಂ ಶ್ರೀ ಕೃಷ್ಣಾರ್ಪಣಂ.*  ಒಂದು ಸ್ವಾರಸ್ಯವಾದ ಕತೆ.  ಮುಲ್ಲೈಕ್ಕೊಡು ಎಂದು ತಮಿಳುನಾಡಿನ ಒಂದು ಪುಟ್ಟ ಗ್ರಾಮ. ಅಲ್ಲಿ ಶ್ರೀಕೃಷ್ಣ ನ ಒಂದು ಸುಂದರವಾದ ದೇವಾಲಯ. ಅರ್ಚಕರೂ ಅವರಿಗೆ ಸಹಾಯಕನಾಗಿದ್ದ ತುಳಸಿ ಎಂಬ ಯುವಕನೂ ದಿನವೂ ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ಶುಚಿಯಾಗಿ ದೇವಸ್ಥಾನಕ್ಕೆ ಬರುತ್ತಿದ್ದರು. ದೇವಾಲಯದ ಪಕ್ಕದಲ್ಲೇ ಒಂದು ಹೂದೋಟ.  ತೋಟದಿಂದ ಹೂಗಳನ್ನು ತಂದು ದೇವರೀಗೆ ಮಾಲೆಯಾಗಿ ಕಟ್ಟಿಕೊಡುವ ಕೆಲಸ ತುಳಸಿಯದು. ಅವನೋ ಪರಮ ಕೃಷ್ಣ ಭಕ್ತ. ಸದಾ ಕೃಷ್ಣಧ್ಯಾನ ನಿರತ.  ತೋಟದಲ್ಲಿ ಹೂಗಳನ್ನು ಕೀಳುವಾಗಲೂ ಅವನಿಗೆ ಕೃಷ್ಣನದೇ ನೆನಪು. ಕೃಷ್ಣಾರ್ಪಣಂ ಎಂದು ಮನದಲ್ಲಿ ಹೇಳಿಕೊಂಡೇ ಹೂಗಳನ್ನು ಕಿತ್ತು ಪೋಣಿಸಿ ಹಾರ ಮಾಡುವನು ಈ ಭಕ್ತ.   ಹತ್ತು ಹದಿನೈದು ಮಾಲೆಗಳನ್ನು ಸಿದ್ಧ ಪಡಿಸಿದ ಮೇಲೆ ಕೃಷ್ಣನಿಗೆ ಅವನ್ನು ತಾನೇ ಮುಡಿಸಿದಂತೆ ಭಾವಿಸಿಕೊಂಡು ಅದೇ ನೆನಪಿನಲ್ಲೇ ಅರ್ಚಕರ ಬಳಿಗೆ ಅವನ್ನು ತಲುಪಿಸಿಬಿಡುವನು.  ಇತ್ತ ಅರ್ಚಕರು ಅವನಿತ್ತ ಮಾಲೆಗಳನ್ನು ಶ್ರೀ ಕೃಷ್ಣನ ಮಂಗಳ ಮೂರ್ತಿಗೆ ಮುಡಿಸಿ  ಅಲಂಕಾರ ಮಾಡಲು ಹೋದರೆ, ಅದಾಗಲೇ ದೇವರು ಒಂದು ಹೊಸ ಮಾಲೆಯನ್ನು ಧರಿಸಿ ಹುರುಪಿನೊಂದಿಗೆ ಇವರನ್ನು ಎದುರುಗೊಳ್ಳಲು ಸಿದ್ಧನಾಗಿರುತ್ತಿದ್ದ. ಹಳೆಯ ನಿರ್ಮಾಲ್ಯವನ್ನು ತೆಗೆದು ಹೊಸ ಮಾಲೆಯನ್ನು ದೇವರಿಗೆ ಹಾಕಿ ಅಲಂಕಾರ ಮಾಡಬೇಕೆಂದಿದ್ದ ಅರ್ಚಕರಿಗೆ ಒಂದು ಕಡೆ ನಿರಾ...

ದಿನಕ್ಕೊಂದು ಕಥೆ 1022

*🌻ದಿನಕ್ಕೊಂದು ಕಥೆ🌻* ನದಿ ದಂಡೆಯಲ್ಲಿ ಕೆಲವರು ಹಾಯಾಗಿ ವಿಹರಿಸುತ್ತಿದ್ದರು. ಕೆಲವರು ಕೆಮೆರಾ ಕಣ್ಣಿಗೆ ಭಂಗಿಗಳಾಗಿದ್ದರು. ಕೆಲವರು ಬುತ್ತಿ ಬಿಚ್ಚಿ ಕುಳಿತಿದ್ದರು. ಕೆಲವರು ಕಾಲುಗಳನ್ನು  ನೀರಿನಲ್ಲಿ ಇಳಿಬಿಟ್ಟು  ಹರಟುತ್ತಿದ್ದರು. ಆಗ ನದಿಯ ನಡುಮಧ್ಯದಲ್ಲಿ ಇದ್ದಕ್ಕಿದ್ದಂತೆ ದೋಣಿಯೊಂದು ಮಗುಚಿ ಬೀಳುತ್ತದೆ.   ಮುಳುಗುತ್ತಿರುವವರ ಆಕ್ರಂದನ ಹಕ್ಕಿಗಳ ಚಿಲಿಪಿಲಿಯನ್ನು ಹಿನ್ನೆಲೆಗೆ ದೂಕುತ್ತದೆ.  ದಂಡೆಯಲ್ಲಿರುವವರು ಭಯಭೀತರಾಗಿ ಆ ದೃಶ್ಯವನ್ನು ನೋಡತೊಡಗುತ್ತಾರೆ. "ಮಾರಣಾಂತಿಕ ಸುಳಿಗಳಿವೆ ಎಚ್ಚರ"  ಎಂದು ಅಲ್ಲಿ ಬೋರ್ಡು ಹಾಕಲಾಗಿದೆ.  ಅಲ್ಲೀವರೆಗೂ ಸುಳಿಗೆ ಬಲಿಯಾದವರ ಅಂಕಿ ಅಂಶಗಳನ್ನೂ ಹಾಕಲಾಗಿದೆ .ಯಾರೂ ನೀರಿಗೆ ಇಳಿಯಲೊಲ್ಲರು. ಗುಂಪನ್ನು ಸೀಳಿಕೊಂಡು ಒಬ್ಬ ಬಂದೇಬಿಟ್ಟನಲ್ಲ! ಆತ ಭರ್ಜಿಯಂತೆ ನೀರಿಗೆ ಜಿಗಿದಿದ್ದನ್ನು ನೋಡಿ  ಎಲ್ಲರೂ  ಬೆರಗಾದರು. ಆತಂಕ ತಿಳಿಯಾಯಿತು.‌ ತಮ್ಮ ಜವಾಬ್ದಾರಿಯನ್ನು ಅವನ ಹೆಗಲಿಗೆ ಹೊರಿಸಿ ನಿರಾಳದ ನಿಟ್ಟುಸಿರು ಬಿಟ್ಟರು. ಆತ ಒಬ್ಬೊಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸುತ್ತಿದ್ದರೆ, ಹುರಿದುಂಬಿಸುವ ಶಿಳ್ಳೆಗಳ ಮೊರೆತ ನಾಲ್ಕೂ ದಿಕ್ಕುಗಳಲ್ಲಿ ಮಾರ್ದನಿಸತೊಡಗಿತು.‌.. ಆತ ಕಟ್ಟಕಡೆಯ ವ್ಯಕ್ತಿಯನ್ನು ದಂಡೆಗೆ ತಲುಪಿಸಿ ಕುಸಿದು ಕುಳಿತಾಗ ಜೈಕಾರದ ಸದ್ದು ಮುಗಿಲನ್ನು ಕೊರೆದು  ನಭೋಮಂಡಲವನ್ನು ವ್ಯಾಪಿಸಿತು.  ದುರದೃಷ್ಟವಶಾತ್,...

ದಿನಕ್ಕೊಂದು ಕಥೆ 1021

*🌻ದಿನಕ್ಕೊಂದು ಕಥೆ*🌻 *ಬುದ್ಧಿವಂತಿಕೆಗೆ ಬಡತನ ಸಿರಿತನ ಮುಖ್ಯವಲ್ಲ* ಒಂದೂರಿನಲ್ಲಿ ಒಬ್ಬ ರಾಜನಿದ್ದ. ರಾಜನಿಗೆ ಇಬ್ಬರು ಗಂಡು ಮಕ್ಕಳು. ಚಿಕ್ಕ ರಾಜ್ಯವಾಗಿದ್ದು  ಪ್ರಜೆಗಳು ನೆಮ್ಮದಿಯಿಂದ ಬದುಕುತ್ತಿದ್ದರು.ರಾಜನ ಆಸ್ಥಾನದಲ್ಲಿ ಅವನ ತಂದೆಯ ಕಾಲದಿಂದ ಬಂದ ವಿದ್ವಾಂಸರು, ಪಂಡಿತರು, ಗಾಯಕರು, ವಾಕ್ಚಾತುರ್ಯರು, ಕವಿಗಳು, ಹೀಗೆ ಎಲ್ಲಾ ತರಹದ ಕಲಾವಿದರಿಂದ ರಾಜನ ಸಭೆ ಮೇಳೈಸಿತ್ತು. ಆದರೆ ಸಭಾಭವನದಲ್ಲಿ,ಹಳೆಯ ಕಾಲದ, ಜಿಗಟು ಹಿಡಿದಂತೆ,  ಜಿಡ್ಡುಗಟ್ಟಿದ, ಹಾಡಿದ್ದೇ ಹಾಡೋ ಕಿಸುಬಾಯಿ ದಾಸಾ ಎನ್ನುವಂತಹ ಒಬ್ಬ ವಿದ್ವಾಂಸನು  ಪ್ರತಿಬಾರಿಯೂ ಸಭೆ ಶುರುವಾಗುತ್ತಿದ್ದಂತೆ, ಯಾವುದಾದರೂ ಒಂದು ವಿಷಯವನ್ನು ಪ್ರಸ್ತಾಪಿಸಿ, ಅದೇ ವಿಷಯದಲ್ಲೇ, ಇಡೀ ದಿನದ ಸಭೆಯನ್ನು ವ್ಯರ್ಥ ಮಾಡುತ್ತಿದ್ದನು. ರಾಜನಿಗೆ ಆಡುವಂತಿಲ್ಲ, ಅನುಭವಿಸುವಂತಿಲ್ಲ ಎನ್ನುವಂತಾಗಿತ್ತು, ಆದರೆ ಗತ್ಯಂತರವಿಲ್ಲ. ಹಿರಿಯ ತಲೆಮಾರಿನವರು, ಪಂಡಿತನಾದುದರಿಂದ ವಿರೋಧವಾಗಿ ಮಾತನಾಡಲು ಸಾಧ್ಯವಿಲ್ಲ. ಸೂಕ್ಷ್ಮವಾಗಿ ಬೇಕಾದಷ್ಟು ಸಲ ಹೇಳಿ, ಹೇಳಿಸಿ, ಆಗಿದೆ ಆದರೆ ಅದು ಯಾವುದು ಪ್ರಯೋಜನವಾಗದೆ, ರಾಜನೇ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.  ಈ  ಮಧ್ಯೆ ರಾಜನ ಎರಡು ಗಂಡು ಮಕ್ಕಳು, ರಾಜ್ಯದ ಗಡಿಭಾಗದಲ್ಲಿ ಮನರಂಜನೆಗೆಂದು ಹೋಗಿ, ಪಕ್ಕದ ರಾಜ್ಯದ ಮಕ್ಕಳ ಜೊತೆಗೆ ಜಗಳವಾಡಿಕೊಂಡು ಮನೆಗೆ ಬಂದರು. ಈ ಕಾರಣದಿಂದ ಪಕ್ಕದ ರಾಜನು ಈ ರಾಜ್ಯದ ಮೇಲೆ ಯುದ...

ದಿನಕ್ಕೊಂದು ಕಥೆ 1020

*🌻 ದಿನಕ್ಕೊಂದು ಕಥೆ🌻* *ಬಿದಿರಿನ ಬೊಂಬು* ಬಲಿಷ್ಠ ಸಾಮ್ರಾಜ್ಯಕ್ಕೆ  ಒಬ್ಬ ರಾಜನಿದ್ದನು. ವಸಂತಋತು ಬರುತ್ತಿದ್ದಂತೆ  ನಿಗದಿ  ಪಡಿಸಿದ ದಿನಗಳಲ್ಲಿ, ನೆರೆ ಹೊರೆ  ರಾಜ್ಯದವರು,  ಸಣ್ಣಪುಟ್ಟ ಸಂಸ್ಥಾನದ ಸಾಮಂತರಾಜರು, ದೂರದೂರದ ಕಾಡಿನ ರಾಜರುಗಳು, ಕೋಟೆಕೊತ್ತಲಗಳ ಪಾಳೇಗಾರರು,ಇವರುಗಳೆಲ್ಲಾ ಪ್ರತಿವರ್ಷವೂ ಬಲಿಷ್ಠ ಸಾಮ್ರಾಜ್ಯದ ರಾಜನಿಗೆ ಕಪ್ಪ ಕಾಣಿಕೆಗಳನ್ನು ತಂದು ಕೊಡುತ್ತಿದ್ದರು. ಅದರಲ್ಲಿ ಬೆಲೆಬಾಳುವ ಮುತ್ತು ರತ್ನಗಳು, ವಿಶೇಷವಾಗಿ ಬೆಳೆದ ದವಸಧಾನ್ಯಗಳು, ಹಣ್ಣು ಹಂಪಲು,  ಕುಶಲ ಕಲೆಗಾರಿಕೆಯಿಂದ ಮಾಡಿದ  ಅತ್ಯಾಕರ್ಷಕ ವಸ್ತುಗಳು, ಇಂಥ ತರಹೆವಾರಿ ಕೊಡುಗೆಗಳನ್ನು ಪ್ರೀತಿಯಿಂದ ಕೊಡುತ್ತಿದ್ದರು. ರಾಜನು ಸಹ ಬಂದಿರುವ ಅತಿಥಿಗಳಿಗೆ, ಕುಂದು ಕೊರತೆ ಆಗದಂತೆ ಮಾಡಿ, ದೊಡ್ಡ ಸತ್ಕಾರದ ಜೊತೆಗೆ ಮನೋರಂಜನೆ, ಪ್ರತಿಭಾ ಪ್ರದರ್ಶನ ನಡೆಸಿ ಎಲ್ಲರಿಗೂ ನೆನಪಿನ ಕಾಣಿಕೆಗಳನ್ನು ಕೊಟ್ಟು, ಗೌರವದಿಂದ ಕಳಿಸಿ ಕೊಡುತ್ತಿದ್ದನು.ಇದು ಅನೇಕ ವರ್ಷಗಳಿಂದ ನಡೆದು ಬಂದಿದ್ದು, ಯಾವುದೇ ರಾಜ್ಯದಲ್ಲಿ  ವೈಮನಸ್ಸಾಗಲಿ ,ಯುದ್ಧಗಳಾಗಲಿ, ನಡೆಯುತ್ತಿರಲಿಲ್ಲ. ಶ್ರೀಸಾಮಾನ್ಯ ರಿಂದ ಹಿಡಿದು ಶ್ರೀಮಂತರವರೆಗೂ ನೆಮ್ಮದಿಯಾಗಿ ಬದುಕುತ್ತಿದ್ದರು.  ಈ ವರ್ಷವೂ ವಸಂತಋತುವಿನ ಸಂಭ್ರಮಾಚರಣೆ  ಬಂದಿತು. ಮನೋರಂಜನೆಯ ದಿನ ನಿಗದಿಪಡಿಸಿ, ದೂತವಾಹಕರ ಮೂಲಕ ಎಲ್ಲ ಕಡೆಗೂ ತಿಳಿಸಲಾಯಿತು. ರಾಜಧಾನಿ ಸಿಂಗಾರಗೊಂಡ...

ದಿನಕ್ಕೊಂದು ಕಥೆ 1019

*🌻ದಿನಕ್ಕೊಂದು ಕಥೆ🌻* *ಅಹಲ್ಯೆಬಾಯಿ ಹೋಳ್ಕರ್ ಎಂಬ ಅಚ್ಚಳಿಯದ ನಕ್ಷತ್ರ ಇಂದು 226ನೇ ಪುಣ್ಯಸ್ಮರಣೆ* 12ನೇ ವಯಸ್ಸಿನಲ್ಲಿ ವಿವಾಹ, 29ನೇ ವಯಸ್ಸಿನಲ್ಲಿ ವೈಧವ್ಯ, 42ನೇ ವಯಸ್ಸಿನಲ್ಲಿ ರಾಣಿಯಾಗಿ ರಾಜ್ಯಾಧಿಕಾರ ಸ್ವೀಕಾರ , 28 ವರ್ಷಗಳ ಸುದೀರ್ಘ, ಯಶಸ್ವಿ ಆಳ್ವಿಕೆ ಬಳಿಕ 70ನೇ ವಯಸ್ಸಿನಲ್ಲಿ ದೇಹತ್ಯಾಗ.. ದೇಶದ ಮೂಲೆಮೂಲೆಗಳಲ್ಲಿ ಖಿಲ್ಜಿ, ತುಘಲಕ್, ಮೊಘಲರು, ನಿಜಾಮರು ಮತ್ತಿತರ ಆಕ್ರಮಣಕಾರರಿಂದ ನಾಶವಾಗಿದ್ದ ಹಿಂದೂ ದೇವಾಲಯಗಳನ್ನು, ಪುಣ್ಯಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿದ ಮಹಾಸಾಧ್ವಿ. ಒಂದೂ ಯುದ್ದವನ್ನು ಸೋಲದೇ, ರಾಜ್ಯದ ಭೂಭಾಗದಲ್ಲಿ ಒಂದಿಂಚೂ ವಿರೋಧಿಗಳಿಗೆ ಬಿಟ್ಟುಕೊಡದೆ ಮಾಳವ ಸಾಮ್ರಾಜ್ಯ ಕಾಪಾಡಿದ ವೀರನಾರಿ , ವಿಸ್ತರಣೆಯ ಮಹಾತ್ವಾಕಾಂಕ್ಷೆಯಿಂದ ಪರರ ಮೇಲೆ ಆಕ್ರಮಣ ನಡೆಸದ ಸಂಯಮಿ. ಯುದ್ದದಲ್ಲಿ ಸೆರೆಸಿಕ್ಕ ಶತ್ರುಸೈನಿಕರ ಮಡದಿ, ಮಕ್ಕಳಿಗೆ ಪತ್ರಬರೆದು ಯೋಗಕ್ಷೇಮ ವಿಚಾರಿಸುತ್ತಿದ್ದ ಕರುಣಾಳು, ಎಂಥ ಘೋರ ಅಪರಾಧಕ್ಕೂ ಮರಣದಂಡನೆ ಪರಿಹಾರವಲ್ಲ ಎಂದು ಕ್ಷಮಿಸಿಬಿಡುತ್ತಿದ್ದ ದಯಾಳು, ಭಾರತದ ಇತಿಹಾಸದಲ್ಲಿ ಆಗಿಹೋದ ಹತ್ತುಹಲವು ವೀರರಮಣಿಯರ ತಾರಾಕಾಶದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅಚ್ಚಳಿಯದೇ ಹೊಳೆಯುವ ಅರುಂಧತಿ ನಕ್ಷತ್ರ. ಭಾರತ ದೇಶದ ಮಣ್ಣಿನ ಗುಣವೇ ಅಂಥದ್ದು ಈ ಧರ್ಮಭೂಮಿಯನ್ನು ಆಳಿದ ಸಹಸ್ರಾರು ರಾಜವಂಶಗಳ ಅಸಂಖ್ಯಾತ ರಾಜಮಹಾರಾಜರಂತೆ, ಅಪಾರ ಸಂಖ್ಯೆಯ ವೀರನಾರಿಯರೂ ಇತಿಹಾಸವನ್ನು ಶ್ರೀಮಂತಗೊಳಿಸಿದ್ದಾರೆ. ಮಧ್ಯಪ್ರದ...

ದಿನಕ್ಕೊಂದು ಕಥೆ 1018

*🌻ದಿನಕ್ಕೊಂದು ಕಥೆ🌻* *ವೃದ್ಧೆಯ ಜಾಣತನ.* ನ್ಯಾಯ, ನೀತಿ, ದಾನ,ಧರ್ಮಗಳನ್ನು ತಿಳಿದು  ಪಾಲಿಸುತ್ತಿದ್ದ  ಒಬ್ಬ ಮಹಾರಾಜನಿದ್ದನು. ಒಂದು ಸಲ ಒಂದು ದೊಡ್ಡ ಪ್ರದರ್ಶನವನ್ನು ಏರ್ಪಾಟು ಮಾಡಿದ.ಆ  ಪ್ರದರ್ಶನದಲ್ಲಿ ಹಲವಾರು ವಸ್ತುಗಳು ಇದ್ದವು. ಬೆಲೆಬಾಳುವ  ಬಟ್ಟೆಗಳು ಅಪರೂಪದ ಒಡವೆ,ವಸ್ತುಗಳು ಇದ್ದವು. ಪ್ರದರ್ಶನದಲ್ಲಿಟ್ಟ ವಸ್ತುಗಳನ್ನು ನೋಡಲು ಬಂದವರು, ತಮಗೆ ಯಾವ ವಸ್ತು ಬೇಕೋ ಅದನ್ನು  ತೆಗೆದುಕೊಂಡು ಹೋಗಬಹುದಿತ್ತು. ಇದರಿಂದ ಸುತ್ತಮುತ್ತಲ ಹಳ್ಳಿ, ಪಟ್ಟಣ ಹಾಗೂ ನಗರದ ಜನರು ಬಂದರು. ಪ್ರದರ್ಶನ ನೋಡಲು ಬಂದವರೆಲ್ಲ ನೋಡು ನೋಡುತ್ತಾ ತಮಗೆ ಬೇಕಾದ ಬೆಲೆಬಾಳುವ ಬಟ್ಟೆಗಳನ್ನು, ಇನ್ನು ಕೆಲವರು ಒಡವೆಗಳನ್ನು, ಮತ್ತೆ ಕೆಲವರು ಅದ್ಭುತವಾದ ಪುಸ್ತಕಗಳನ್ನು, ಇನ್ನಷ್ಟು ಜನ ಹಣ್ಣುಹಂಪಲುಗಳನ್ನು, ಹೇಗೆ ತಮಗೆ ಬೇಕು ಬೇಕಾದಂತಹ ವಸ್ತುಗಳನ್ನು ತೆಗೆದುಕೊಂಡು ಹೋದರು  ಅಲ್ಲಿಗೆ ಬಂದವರೆಲ್ಲಾ ತಮಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೋದರು. ಆದರೆ ಅಲ್ಲಿಗೆ ಬಂದವರಲ್ಲಿ , ವೃದ್ಧಳಾದ ಮಹಿಳೆಯೂಬ್ಬಳು ಅಲ್ಲಿರುವ ಯಾವ ವಸ್ತುವನ್ನು ಮುಟ್ಟಲಿಲ್ಲ. ಅವಳಿಗೆ ಯಾವುದೂ ತೃಪ್ತಿ ಕಂಡಂತೆ ಅನಿಸಲಿಲ್ಲ. ಇದನ್ನೇ ಗಮನಿಸುತ್ತಿದ್ದ ದಿವಾನನು, ರಾಜನ್, "ಈ ಪಟ್ಟಣದ ಜನರೆಲ್ಲರೂ ಈ ಪ್ರದರ್ಶನವನ್ನು ನೋಡಿ ಆನಂದಿಸಿ ಅದರಲ್ಲಿನ ಎಲ್ಲಾ ವಸ್ತುಗಳನ್ನು ನೋಡಿ ಕಣ್ತುಂಬಿಕೊಂಡು ತಮಗೆ ಬೇಕಾದುದನ್ನು ತೆಗೆದುಕೊಂಡು ಸಂತೋಷಗೊಂಡರು....

ದಿನಕ್ಕೊಂದು ಕಥೆ 1017

*🌻ದಿನಕ್ಕೊಂದು ಕಥೆ🌻*  *ಮಣ್ಣಿನ ಗಣಪ* *ಕೃಪೆ: ಡಾ.ಗವಿಸ್ವಾಮಿ.ಚಾಮರಾಜನಗರ.* ಆತ ಕಾಲೇಜು ಅಧ್ಯಾಪಕ. ಆತನ ಮಗ ನಾಲ್ಕನೇ ತರಗತಿಯಲ್ಲಿ‌ ಕಲಿಯುತ್ತಿದ್ದ.‌ ಅಪ್ಪ-ಮಗ ಆವತ್ತು ಗೌರಿ ಹಬ್ಬಕ್ಕೆ ಹುಟ್ಟೂರಿಗೆ ಬಂದಿದ್ದರು.   ಇಬ್ಬರೂ ಸಂಜೆ ಹೊತ್ತು ಕೆರೆ ಬಯಲಿನಲ್ಲಿ ತಿರುಗಾಡುತ್ತಿದ್ದಾಗ ಹುಡುಗರಿಬ್ರು ಹಸಿ ಮಣ್ಣಿನೊಂದಿಗೆ ಆಟವಾಡುತ್ತಿದ್ದುದು ಕಾಣಿಸಿತು.  ಮಗನಿಗೆ ಅವರೊಂದಿಗೆ ಬೆರೆತು ಆಟವಾಡಲು‌ ಆಸೆಯಾಯಿತು. ಅಪ್ಪನನ್ನು ಬಲವಂತದಿಂದ ಅವರ ಬಳಿಗೆ ಕರೆದುಕೊಂಡು ಹೋದ. ಆ ಹುಡುಗರು ಕೆರೆಯ ಅಂಟು ಮಣ್ಣಿನಲ್ಲಿ ಗಣಪನ ಮೂರ್ತಿಗಳನ್ನು ಮಾಡುವಲ್ಲಿ ತಲ್ಲೀನರಾಗಿದ್ದರು .  ಒಬ್ಬ ಹುಡುಗ ಅಂಗೈ ಮೇಲೆ ಇಲಿ ಬಾಲದಂತಹ ಸೊಂಡಿಲನ್ನು ಹೊಸೆಯುತ್ತಿದ್ದ . ಇನ್ನೊಬ್ಬ ತನ್ನ ಗಣಪನ ಮುಖಕ್ಕೆ ಸಕ್ಕರೆ ಗಾತ್ರದ ಕಲ್ಲುಗಳನ್ನು ಅಂಟಿಸಿ  ಕಣ್ಣು ಗುಡ್ಡೆಗಳನ್ನು ರೂಪಿಸುತ್ತಿದ್ದ . ಆ ಹುಡುಗನಿಗೆ ಅವರಿಬ್ಬರ ಕೈಚಳಕವನ್ನು ಕಂಡು ಅಸೂಯೆಯಾಯಿತು . ಮಣ್ಣಿನುಂಡೆಯಲ್ಲಿ ತಾನೂ ಒಂದು ಗಣಪತಿಯನ್ನು ಮಾಡುವ ಆಸೆಯಾಯಿತು . ಮಣ್ಣಿಗೆ ಕೈ ಹಾಕಿದರೆ ಅಪ್ಪ ಗದರಬಹುದು ಎಂಬ ಭಯವೂ ಇತ್ತು . ಹಾಗಾಗಿ ಆಸೆಗಣ್ಣಿನಿಂದ ಆ ಹುಡುಗರ ಕೈಗಳನ್ನೇ  ಗಮನಿಸತೊಡಗಿದ ‌. ಏತನ್ಮಧ್ಯೆ, ದಾರಿಯಲ್ಲಿ ಹೊಲಕ್ಕೆ ಹೊರಟಿದ್ದವನೊಬ್ಬ ಅಧ್ಯಾಪಕನನ್ನು ಗುರುತಿಸಿ ಮಾತನಾಡಿಸಲು ಬಂದ. ಆತ ಅಧ್ಯಾಪಕನ ಸಹಪಾಠಿಯಾಗಿದ್ದ . ಏಳನೇ ಕ್ಲಾಸ್ ಫೇಲಾದ ಮೇಲೆ ದನಕರು, ತ...

ದಿನಕ್ಕೊಂದು ಕಥೆ 1016

*🌻ದಿನಕ್ಕೊಂದು ಕಥೆ🌻* *ಬುದ್ಧಿವಂತ ತಾತ* ಒಮ್ಮೆ ವಯಸ್ಸಾದ ವೃದ್ದರು, ಕೆಲಸದಿಂದ ನಿವೃತ್ತರಾದ ಮೇಲೆ, ಒಂದು ಒಳ್ಳೆಯ ಜಾಗದಲ್ಲಿ ಮನೆ ಕೊಂಡುಕೊಂಡರೂ. ಇವರ ಮನೆಯ ಹತ್ತಿರದಲ್ಲೇ ಒಂದು ಶಾಲೆ ಇತ್ತು. ಬೇಸಿಗೆ ಕಳೆದು ಶಾಲೆ ಪುನರಾರಂಭವಾಯಿತು. ಶಾಲೆಯ ಮೂರು ತುಂಟ ಹುಡುಗರು, ಊಟವಾದ ಮೇಲೆ, ಪಕ್ಕದಲ್ಲಿದ್ದ ತಾತನ ಮನೆಯ ಮುಂದೆ ಇದ್ದ ಕಸದ ಡಬ್ಬವನ್ನು ಒದೆಯುವುದು, ಬಡಿಯುವುದು ಮಾಡುತಿದ್ದರು. ಕಸದ ಡಬ್ಬ ತುಂಟ ಹುಡುಗರ ತಬಲವಾಗಿತ್ತು. ಗಲಾಟೆಯಿಂದ ಬೇಸತ್ತ ತಾತ, ಇವರಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿ, ಮಾರನೆ ದಿನ ಹುಡುಗರು ಬರುವುದನ್ನೇ ಕಾಯುತಿದ್ದರು. ಹುಡುಗರು ಬಂದು ಎಂದಿನಂತೆ ತಬಲಾ ಬಾರಿಸಲಾರಂಬಿಸಿದಾಗ, ತಾತ ಹೊರಗಡೆ ಬಂದು, ಹುಡುಗರೊಡನೆ ಪರಿಚಯ ಮಾಡಿಕೊಂಡರು. ನಿಮ್ಮ ವಯಸ್ಸಿನವನಾಗಿದ್ದಾಗ ನಾನು ಹೀಗೆ ಮಾಡುತಿದ್ದೆ, ನೀವು ತಬಲಾ ಬಾರಿಸುವುದನ್ನು ಕೇಳುವುದೇ ಆನಂದ ಎಂದು ಹೇಳಿದರು. ಇನ್ನೂ ಮುಂದುವರೆದು, ಇನ್ನೂ ಮುಂದೆ ನೀವು ದಿನಾ ಇಲ್ಲಿ ಬಂದು ತಬಲಾ ಬಾರಿಸುವುದಾದರೆ ನಿಮಗೆ ದಿನಕ್ಕೆ ಒಬ್ಬೊಬ್ಬರಿಗೆ ಒಂದು ರೂಪಾಯಿ ಕೊಡುತ್ತೇನೆ ಎಂದರು. ಹುಡುಗರಿಗೋ ಆನಂದವೋ ಆನಂದ, ತಾತನ ಮಾತಿಗೆ ಒಪ್ಪಿ. ಪ್ರತಿದಿನ ಬಂದು ತಬಲಬಾರಿಸಿ, ಹಣ ಪಡೆದು ಹೋಗುತಿದ್ದರು. ಒಂದು ವಾರವಾಯಿತು, ಆ ದಿನ ಹುಡುಗರು ಹಣ ಪಡೆಯಲು ಹೋದಾಗ, ತಾತ “ಮಕ್ಕಳೇ ನನಗೆ ಬರುತಿದ್ದ ಕಾಸು ಕಡಿಮೆಯಾಗಿದೆ. ಇನ್ನೂ ಮುಂದೆ ನಿಮಗೆ ಪ್ರತಿಯೊಬ್ಬರಿಗೂ ಐವತ್ತು ಪೈಸೆ ಮಾತ್ರ ಕೊಡಬಲ್...

ದಿನಕ್ಕೊಂದು ಕಥೆ 1015

*🌻ದಿನಕ್ಕೊಂದು ಕಥೆ🌻* *ಈ ದೃಶ್ಯ ಟೋಕಿಯೊ ೨೦೨೦ರ ಓಲಂಪಿಕ್ ನ ಪುರುಷರ ಹೈಜಂಪ್ ಫೈನಲ್ಲಿನ ದೃಶ್ಯ.* ಪುರುಷರ ಹೈಜಂಪ್ ಫೈನಲ್ಲಿನಲ್ಲಿ ಇಟಲಿಯ ಜಿಯಾನ್ ಮಾರ್ಕೊ ತಂಬರಿ ಸ್ಪರ್ಧೆಯು ಕತಾರ್ ದೇಶದ ಮುತಾಜ್ ಈಸಾ ಬಾರ್ಶಿಮ್ ಜೊತೆಗಿತ್ತು. ಇಬ್ಬರು ಸ್ಪರ್ಧಿಗಳೂ 2.37 ಮೀಟರ್ ಎತ್ತರ ಹಾರಿದ್ದರಿಂದ ರಿಸಲ್ಟ್ ಸಮ ಬಂದಿತು. ನಂತರದಲ್ಲಿ ಓಲಂಪಿಕ್ ಅಧಿಕಾರಿಗಳು ಇಬ್ಬರೂ ಸ್ಪರ್ಧಿಗಳಿಗೆ ತಲಾ ಮೂರು ಅವಕಾಶಗಳನ್ನು ನೀಡಿದರು. ಮೂರು ಬಾರಿಯೂ ಇವರಿಬ್ಬರು 2.37 ಮೀ.ಗಿಂತ ಹೆಚ್ಚಿನ ಎತ್ತರ ಹಾರಲಿಲ್ಲ. ಹಾಗಾಗಿ ಇಬ್ಬರಿಗೂ ಮತ್ತೊಂದು ಅವಕಾಶವನ್ನು ನೀಡಲಾಯಿತು. ಆದರೆ ಇಟಲಿಯ ಸ್ಪರ್ಧಿ ತಂಬರಿಯ ಕಾಲಿಗೆ ಗಂಭೀರ ಪೆಟ್ಟಾದ್ದರಿಂದ ಆತನು ದುಃಖದಿಂದ ಕೊನೆಯ ಅವಕಾಶವನ್ನು ಉಪಯೋಗಿಸಿಕೊಳ್ಳದೇ ಹಿಂದೆ ಸರಿದನು. ಈ ಕ್ಷಣದಲ್ಲಿ ಕತಾರ್ ನ ಬಾರ್ಶಿಮ್ ಎದುರಿಗೆ ಯಾವ ಸ್ಪರ್ಧಿಯು ಇಲ್ಲದಂತಾಗಿ,ಆತನು ಸುಲಭವಾಗಿ ಚಿನ್ನದ ಪದಕ ಧರಿಸಲು ಕೊರಳು ಒಡ್ಡಬಹುದಿತ್ತು. ಆದರೆ ಬಾರ್ಶಿಮ್ ತಲೆಯಲ್ಲಿ ನಡೆಯುತ್ತಿದ್ದ ವಿಚಾರವೇ ಬೇರೆ ಇತ್ತು. ಆತನು ನಿಧಾನವಾಗಿ ಯೋಚಿಸಿ ಅಲ್ಲಿದ್ದ ಓಲಂಪಿಕ್ ಅಧಿಕಾರಿಗಳನ್ನು "ನಾನು ಕೂಡ  ಈ ಅಂತಿಮ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಬಂಗಾರದ ಪದಕವನ್ನ ಇಬ್ಬರಿಗೂ ಹಂಚುತ್ತೀರಲ್ಲವೇ?" ಅಂತ ಪ್ರಶ್ನಿಸಿದ. ಅಧಿಕಾರಿಗಳು ತಮ್ಮಲ್ಲಿ ಪರಾಮರ್ಶೆ ಮಾಡಿ 'ಹೌದು ಹಾಗಾದಲ್ಲಿ ನಿಮ್ಮಿಬ್ಬರನ್ನೂ ಜಂಟಿಯಾಗಿ ವಿಜೇತರೆಂದು ಘೋಷಿಸಲಾಗುತ್ತದೆ....

ದಿನಕ್ಕೊಂದು ಕಥೆ 1014

*🌻ದಿನಕ್ಕೊಂದು ಕಥೆ🌻* *ಈ ದೃಶ್ಯ ಟೋಕಿಯೊ ೨೦೨೦ರ ಓಲಂಪಿಕ್ ನ ಪುರುಷರ ಹೈಜಂಪ್ ಫೈನಲ್ಲಿನ ದೃಶ್ಯ.* ಪುರುಷರ ಹೈಜಂಪ್ ಫೈನಲ್ಲಿನಲ್ಲಿ ಇಟಲಿಯ ಜಿಯಾನ್ ಮಾರ್ಕೊ ತಂಬರಿ ಸ್ಪರ್ಧೆಯು ಕತಾರ್ ದೇಶದ ಮುತಾಜ್ ಈಸಾ ಬಾರ್ಶಿಮ್ ಜೊತೆಗಿತ್ತು. ಇಬ್ಬರು ಸ್ಪರ್ಧಿಗಳೂ 2.37 ಮೀಟರ್ ಎತ್ತರ ಹಾರಿದ್ದರಿಂದ ರಿಸಲ್ಟ್ ಸಮ ಬಂದಿತು. ನಂತರದಲ್ಲಿ ಓಲಂಪಿಕ್ ಅಧಿಕಾರಿಗಳು ಇಬ್ಬರೂ ಸ್ಪರ್ಧಿಗಳಿಗೆ ತಲಾ ಮೂರು ಅವಕಾಶಗಳನ್ನು ನೀಡಿದರು. ಮೂರು ಬಾರಿಯೂ ಇವರಿಬ್ಬರು 2.37 ಮೀ.ಗಿಂತ ಹೆಚ್ಚಿನ ಎತ್ತರ ಹಾರಲಿಲ್ಲ. ಹಾಗಾಗಿ ಇಬ್ಬರಿಗೂ ಮತ್ತೊಂದು ಅವಕಾಶವನ್ನು ನೀಡಲಾಯಿತು. ಆದರೆ ಇಟಲಿಯ ಸ್ಪರ್ಧಿ ತಂಬರಿಯ ಕಾಲಿಗೆ ಗಂಭೀರ ಪೆಟ್ಟಾದ್ದರಿಂದ ಆತನು ದುಃಖದಿಂದ ಕೊನೆಯ ಅವಕಾಶವನ್ನು ಉಪಯೋಗಿಸಿಕೊಳ್ಳದೇ ಹಿಂದೆ ಸರಿದನು. ಈ ಕ್ಷಣದಲ್ಲಿ ಕತಾರ್ ನ ಬಾರ್ಶಿಮ್ ಎದುರಿಗೆ ಯಾವ ಸ್ಪರ್ಧಿಯು ಇಲ್ಲದಂತಾಗಿ,ಆತನು ಸುಲಭವಾಗಿ ಚಿನ್ನದ ಪದಕ ಧರಿಸಲು ಕೊರಳು ಒಡ್ಡಬಹುದಿತ್ತು. ಆದರೆ ಬಾರ್ಶಿಮ್ ತಲೆಯಲ್ಲಿ ನಡೆಯುತ್ತಿದ್ದ ವಿಚಾರವೇ ಬೇರೆ ಇತ್ತು. ಆತನು ನಿಧಾನವಾಗಿ ಯೋಚಿಸಿ ಅಲ್ಲಿದ್ದ ಓಲಂಪಿಕ್ ಅಧಿಕಾರಿಗಳನ್ನು "ನಾನು ಕೂಡ  ಈ ಅಂತಿಮ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಬಂಗಾರದ ಪದಕವನ್ನ ಇಬ್ಬರಿಗೂ ಹಂಚುತ್ತೀರಲ್ಲವೇ?" ಅಂತ ಪ್ರಶ್ನಿಸಿದ. ಅಧಿಕಾರಿಗಳು ತಮ್ಮಲ್ಲಿ ಪರಾಮರ್ಶೆ ಮಾಡಿ 'ಹೌದು ಹಾಗಾದಲ್ಲಿ ನಿಮ್ಮಿಬ್ಬರನ್ನೂ ಜಂಟಿಯಾಗಿ ವಿಜೇತರೆಂದು ಘೋಷಿಸಲಾಗುತ್ತದೆ....

ದಿನಕ್ಕೊಂದು ಕಥೆ 1013

*🌻ದಿನಕ್ಕೊಂದು ಕಥೆ🌻* *ಎರಡು ವಜ್ರಗಳು* ರಾಜಸ್ಥಾನದಲ್ಲಿ ವ್ಯಾಪಾರಿ ರಾಜಾಸಿಂಗ್ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದ. ಅವನಿಗೆ ಸ್ವಂತ ಉಪಯೋಗಕ್ಕೆ ಒಂದು ಒಂಟೆ ಖರೀದಿಸಬೇಕು ಎನ್ನುವ ಆಸೆಯಿತ್ತು. ಅದೊಂದು ದಿನ ತನ್ನ ಪಕ್ಕದ ಊರಿನಲ್ಲಿ ನಡೆಯುತ್ತಿದ್ದ ಒಂಟೆಗಳ ಜಾತ್ರೆಯ ಸುದ್ದಿ ಅವನ ಕಿವಿಗೆ ಬಿದ್ದಿತು. ಅಲ್ಲಿ ಒಂಟೆಗಳನ್ನು ನೋಡಲು ಮತ್ತು ಖರೀದಿಸಲು ಅವಕಾಶವಿತ್ತು. ತಡಮಾಡದೆ, ರಾಜಾಸಿಂಗ್ ಒಂಟೆಗಳ ಜಾತ್ರೆ ನಡೆಯುತ್ತಿದ್ದ ಸ್ಥಳಕ್ಕೆ ಬೆಳ್ಳಂಬೆಳಗ್ಗೆ ಹೋದ. ಅಲ್ಲಿ ಹತ್ತಾರು ವ್ಯಾಪಾರಿಗಳು ನೂರಾರು ಒಂಟೆಗಳನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಸಿಂಗಾರ ಮಾಡಿ ಇಟ್ಟಿದ್ದರು. ಜಾತ್ರೆಯ ಮೂಲೆಯೊಂದರಲ್ಲಿ ಒಂಟೆ ಮಾರುತ್ತಿದ್ದವನ  ಬಳಿಯಿದ್ದ ದೊಡ್ಡದೊಂದು ಒಂಟೆ ರಾಜಾಸಿಂಗ್ ಗಮನ ಸೆಳೆಯಿತು. ಅದನ್ನು ಚೆಂದಗೆ ಅಲಂಕರಿಸಿ ಹಳದಿ ಬಣ್ಣದ ದಪ್ಪ ಬಟ್ಟೆಯನ್ನು ಅದರ ಬೆನ್ನ  ಮೇಲೆ ಹೊದೆಸಿದ್ದರು. ಒಂಟೆ  ನೋಡಿ ಖುಷಿಯಾದ ರಾಜಾಸಿಂಗ್, ಅದನ್ನು ಕೊಳ್ಳಲು ಬಯಸಿ, ಅದರ ಮಾಲಿಕನ ಬಳಿ ಹೋಗಿ ಅದರ ದರ ಕೇಳಿದ. ಮಾಲಿಕ ಹೇಳಿದ ಬೆಲೆ ತುಸು ಹೆಚ್ಚಾಯ್ತು ಎನ್ನಿಸಿ ಅವನೊಂದಿಗೆ ಚೌಕಾಸಿಗಿಳಿದ. ಬಹಳ ಹೊತ್ತಿನವರೆಗೆ ಚೌಕಾಸಿ ನಡೆಯಿತು. ಬಳಿಕ ಒಂದು ಉತ್ತಮ ಬೆಲೆಗೆ ವ್ಯವಹಾರ ಕುದುರಿತು. ರಾಜಾಸಿಂಗ್ ಸಂತೋಷದಿಂದ ಒಂಟೆಯನ್ನು ಖರೀದಿಸಿ ಅದರ ಅಲಂಕಾರದ ಸಮೇತ ಮನೆಗೆ ಕೊಂಡೊಯ್ದ. ಮನೆಗೆ ಬಂದು, ಒಂಟೆಯನ್ನು ಮನೆಯ ಹೊರಗೆ ಕಟ್ಟಿ ಹೆಂಡತಿಯನ್ನು ಕರೆದು ...

ದಿನಕ್ಕೊಂದು ಕಥೆ 1012

*🌻ದಿನಕ್ಕೊಂದು ಕಥೆ🌻* ಹಾಸ್ಟೆಲ್ ಒಂದ್ರಲ್ಲಿ ಪ್ರತಿದಿನ ಚಿತ್ರಾನ್ನಾನೇ ತಿಂದು ತಿಂದು ಬೇಜಾರಾಗಿ 80 ವಿದ್ಯಾರ್ಥಿಗಳು ಹಾಸ್ಟೆಲ್ ವಾರ್ಡನ್‌ಗೆ ಪ್ರತಿದಿನವೂ ಬೇರೆ ಬೇರೆ ಥರದ್ ಟಿಫನ್ ಮಾಡೋಕೆ ಹೇಳದ್ರು ಆದರೆ 100 ರಲ್ಲಿ 20 ಜನರಿಗೆ ಮಾತ್ರ ಪ್ರತಿದಿನ ಚಿತ್ರಾನ್ನಾನೇ ಬೇಕಾಗಿತ್ತು, ಆದರೆ ಉಳಿದ 80 ಜನಕ್ಕೆ ಅದು ಬೇಕಾಗಿರಲಿಲ್ಲ... ಅವರಿಗೆ ಬಗೆಬಗೆಯ ಉಪಹಾರ ಬೇಕಾಗಿತ್ತು ಆಗ ವಾರ್ಡನ್ ವೋಟಿಂಗ್ ಮಾಡೋಣ, ಯಾರ ಪರವಾಗಿ ಹೆಚ್ಚು ವೋಟ್ ಬರುತ್ತೋ ಅದೇ ಮಾಡೋಣಾಂತ ತೀರ್ಮಾನಿಸಿದರು   ಯಾವ 20 ವಿದ್ಯಾರ್ಥಿಗಳಿಗೆ ಚಿತ್ರಾನ್ನ ಇಷ್ಟ ಇತ್ತೋ ಅವರು ಚಿತ್ರಾನ್ನಕ್ಕೇ ವೋಟ್ ಹಾಕದ್ರು         ಉಳಿದ 80 ಜನ ವಿದ್ಯಾರ್ಥಿಗಳು ಮಾತ್ರ ಒಂಚೂರೂ ಯೋಚನೆ ಮಾಡದೆ ತಮಗಿಷ್ಟವಾದ ಉಪಹಾರಗಳ ಬಗ್ಗೆ ಜಗಳವಾಡೋಕೆ ಶುರು ಮಾಡದ್ರು... ತಮ್ಮ ಬುದ್ದಿ, ವಿವೇಚನೆಗೆ ಕೆಲಸ ಕೊಡಲೇ ಇಲ್ಲ.. ತಮಗಿಷ್ಟವಾಗೋ ಉಪಹಾರಗಳಿಗೆ ವೋಟ್ ಮಾಡೋಕೆ ಶುರು ಮಾಡದ್ರು               18 ಜನ ದೋಸಾ, 16 ಜನ ಪರೋಟ, 14 ಜನ ರೊಟ್ಟಿ, 12 ಜನ ಬ್ರೆಡ್ ಬಟರ್, 10 ಜನ ನೂಡಲ್ಸ್, 10 ಜನ ಇಡ್ಲಿಗೆ ವೋಟ್ ಮಾಡಿಬಿಟ್ರು ಈಗ ಯೋಚನೆ ಮಾಡಿ ಏನಾಗಿರಬಹುದೂಂತ?  ಆ ಹಾಸ್ಟೆಲ್ಲಿನ ಕ್ಯಾಂಟಿನ್ ‌ನಲ್ಲಿ ಈಗಲೂ ಆ 80 ವಿದ್ಯಾರ್ಥಿಗಳಿಗೆ ಚಿತ್ರಾನ್ನಾನೇ ಗತಿಯಾಗಿದೆ. ಯಾಕಂದ್ರೆ ಉಳಿದ ಆ 20 ವಿದ್ಯಾರ್ಥಿಗಳು ಒಗ್ಗಟ್ಟ...

ದಿನಕ್ಕೊಂದು ಕಥೆ 1011

ದಿನಕ್ಕೊಂದು ಕಥೆ "ಸುರಭಿ ಸ್ಕೂಲ್ಗೆ ಚಿನ್ನ ತರಬಾರದು ಅಂತ ಗೊತ್ತಿಲ್ವಾ ನಿನಗೆ " "ಸಾರ್ ಅದು ನಿನ್ನೆ ನನ್ನ ಹುಟ್ಟಿದ ಹಬ್ಬ ಇತ್ತು ಅಂತ ಅಮ್ಮ ಸರ ಹಾಕಿದ್ರು ವಾಪಸ್ ಕೊಡೋದು ಮರೆತೆ.. ಸಂಜೆ ಕೊಡೋಣ ಅಂತ ಬ್ಯಾಗ್ ಅಲ್ಲಿ ಇಟ್ಟಿದ್ದೆ ..ಈಗ ನೋಡಿದ್ರೆ ಇಲ್ಲ" "ಎಲ್ಲ ಕಡೆ ನೋಡಿದೆಯಾ,ಡೆಸ್ಕ್ ಬ್ಯಾಗ್ ಎಲ್ಲ" "ಹು ಸಾರ್ ಎಲ್ಲ ಕಡೆ ನೋಡಿದೆ" ಪ್ರಿನ್ಸಿಪಾಲ್ ಚೇಂಬರ್ ಅಲ್ಲಿ ಎಲ್ಲರ ಮುಖದಲ್ಲೂ ಒಂದು ರೀತಿಯ ದುಗುಡ ಗಾಬರಿ... ಸರಿ ನೀನು ಕ್ಲಾಸ್ಗೆ ಹೋಗು ನಾನು ಬರ್ತೀನಿ ಪ್ರಿನ್ಸಿಪಾಲ್ ಹೇಳಿದಾಗ ಕ್ಲಾಸ್ ಟೀಚರ್ ಜೊತೆ ತರಗತಿಗೆ ಬಂದಳು..10 ನಿಮಿಷದಲ್ಲಿ ಬಂದವರೇ "ಸುರಭಿದು ಚಿನ್ನದ ಚೈನ್ ಕಳುವಾಗಿದೆ ಯಾರು ತೊಗೊಂಡಿದಿರಾ ನಿಜ ಹೇಳಿ" ಇಡೀ ತರಗತಿಯಲ್ಲೂ ಪೂರ್ತಿ ನಿಶಬ್ದ... "ಸರಿ ..ನಿಮಗೆಲ್ಲ ಯಾರ ಮೇಲೆ ಆದ್ರೂ ಅನುಮಾನ ಇದೆಯಾ ಇದ್ರೆ ಹೇಳಿ..." ಎಲ್ಲರ ದೃಷ್ಟಿ ಕೊನೆ ಬೆಂಚ್ ಕೊನೆ ಹುಡುಗನ ಕಡೆ ಹೋಯ್ತು ಗಣೇಶ ಇದೆ ವರ್ಷ ಶಾಲೆಗೆ ಸೇರಿದ್ದ ಬಂದು ತಿಂಗಳು ಆಗಿತ್ತು ಪ್ರಾಂಶುಪಾಲರು ಕೋಪದಿಂದ "ಅದ್ಕೆ ಅವತ್ತೇ ನಿಮ್ ತಾಯಿಗೆ ಸೇರಿಸಿಕೊಳ್ಳೋದಿಲ್ಲ ಅಂತ ಹೇಳಿದೆ.. ನೀವೆಲ್ಲ ಸರಕಾರಿ ಶಾಲೆ ಮಕ್ಳು ಹೀಗೆ..ನಿಮಗೆಲ್ಲ ಶಿಸ್ತು ಅನ್ನೋದೇ ಗೊತ್ತಿರೋಲ್ಲ..ಓದು ಇರೋಲ್ಲ... ಅದರ ಜೊತೆ ಈ ಕಳ್ಳತನ ...ಸುಳ್ಳುತನಗಳು ಬೇರೆ" "ಸಾರ್ ಇಲ್ಲ ಸಾರ್ ನಾನು ಏನು ಕದಿ...

ದಿನಕ್ಕೊಂದು ಕಥೆ 1010

*🌻ದಿನಕ್ಕೊಂದು ಕಥೆ 🌻* *ಜೋನ್ ಆಫ್ ಆರ್ಕ್* ಫ್ರಾನ್ಸ್ ಬ್ರಿಟಿಷರ ಆಳ್ವಿಕೆಗೆ ಸಿಲುಕಿ ನಲುಗಿ ಹೋಗಿದ್ದ ಕಾಲವದು. ಫ್ರಾನ್ಸ್ಗೆ ಹೆಸರಿಗೊಬ್ಬ ರಾಜನಿದ್ದನು ಅವನು ಆಂಗ್ಲರ ಅಡಿಯಾಳಾಗಿ ಕೆಲಸ ಮಾಡುತ್ತಿದ್ದನು. ಇಂತಹ ದಿನಗಳಲ್ಲಿ ಒಮ್ಮೆ ಫ್ರಾನ್ಸ್ನ ಬೀದಿಯಲ್ಲಿ ಮಲಗಿದ್ದ ಅನಾಥ ಬಾಲಕಿಯೊಬ್ಬಳಿಗೆ ಕನಸೊಂದು ಬಿದ್ದಿತು. ಆ ಕನಸಿನಲ್ಲಿ ಸಂತನೊಬ್ಬ ಕಾಣಿಸಿಕೊಂಡು ಫ್ರಾನ್ಸ್ನ್ನು ಬ್ರಿಟಿಷರಿಂದ ಮುಕ್ತಗೊಳಿಸುವಂತೆ ಬಾಲಕಿಗೆ ಆದೇಶವಿತ್ತರಂತೆ. ಆದರೆ, ದೇಶಕ್ಕೆ ದೇಶವೇ ಮಹಾರಾಜನಿಂದ ಹಿಡಿದು ಎಲ್ಲರೂ ಬ್ರಿಟಿಷರ ಅಡಿಯಾಳಾಗಿರುವಾಗ ಕೇವಲ ೧೩ ವರ್ಷ ವಯಸ್ಸಿನ ಆ ಹುಡುಗಿಯಿಂದ ಫ್ರಾನ್ಸ್ ಗೆ ಸ್ವಾತಂತ್ರ ಕೊಡಿಸಲಾದೀತೇ? ಆದರೆ, ಆ ಬಾಲಕಿ ಧೃತಿಗೆಡದೆ ಸಂತವಾಣಿಯಿಂದ ಪ್ರಭಾವಿತಳಾದವಳಂತೆ ನೇರವಾಗಿ ಸೇನಾ ಮುಖ್ಯಸ್ಥರನ್ನು ಕಂಡು ತನಗೆ ಬಿದ್ದ ಕನಸಿನ ಬಗ್ಗೆ ವಿವರಿಸಿ, ಬ್ರಿಟಿಷರ ವಿರುದ್ಧ ಹೋರಾಡುವಂತೆ ತಿಳಿಸಿದಳು. ಮೊದಮೊದಲು ಬಾಲಕಿಯ ಮಾತಿಗೆ ಫ್ರಾನ್ಸ್ ಸೈನಿಕರು ನಗುತ್ತಿದ್ದರು. ಆದರೆ, ಪಟ್ಟು ಬಿಡದ ಬಾಲಕಿ ಸೈನಿಕರನ್ನು ಹೂರಿದುಂಬಿಸಿದಳು. ಸೈನಿಕರಿಗೆ ಬಾಲಕಿಯ ಧೈರ್ಯ, ಕೆಚ್ಚಿದೆ ಮತ್ತು ಅವಳಿಗಿದ್ದ ರಾಷ್ಟ್ರಾಭಿಮಾನ ಮೆಚ್ಚುಗೆಯಾಯಿತು ಮತ್ತು ಬ್ರಿಟಿಷರ ದಬ್ಬಾಳಿಕೆಗೆ ರೋಸಿಹೋಗಿದ್ದ ಅವರು ಅವರು ಬಾಲಕಿಯಿಂದ ಸ್ಪೂರ್ತಿ ಪಡೆದವರಂತೆ ದೊರೆಯ ಮಾತನ್ನು ಲೆಕ್ಕಿಸದೆ ಆಂಗ್ಲರ ವಿರುದ್ಧ ದಂಗೆ ಎದ್ದರು. ಫ್ರಾನ್ಸ್ ಕಲಿಗಳ ಕೆಚ್ಚೆದೆಯ ಹೋರಾಟಕ್ಕೆ ಬ್ರಿ...

ದಿನಕ್ಕೊಂದು ಕಥೆ 1009

*🌻ದಿನಕ್ಕೊಂದು ಕಥೆ 🌻* *ಜೋನ್ ಆಫ್ ಆರ್ಕ್* ಫ್ರಾನ್ಸ್ ಬ್ರಿಟಿಷರ ಆಳ್ವಿಕೆಗೆ ಸಿಲುಕಿ ನಲುಗಿ ಹೋಗಿದ್ದ ಕಾಲವದು. ಫ್ರಾನ್ಸ್ಗೆ ಹೆಸರಿಗೊಬ್ಬ ರಾಜನಿದ್ದನು ಅವನು ಆಂಗ್ಲರ ಅಡಿಯಾಳಾಗಿ ಕೆಲಸ ಮಾಡುತ್ತಿದ್ದನು. ಇಂತಹ ದಿನಗಳಲ್ಲಿ ಒಮ್ಮೆ ಫ್ರಾನ್ಸ್ನ ಬೀದಿಯಲ್ಲಿ ಮಲಗಿದ್ದ ಅನಾಥ ಬಾಲಕಿಯೊಬ್ಬಳಿಗೆ ಕನಸೊಂದು ಬಿದ್ದಿತು. ಆ ಕನಸಿನಲ್ಲಿ ಸಂತನೊಬ್ಬ ಕಾಣಿಸಿಕೊಂಡು ಫ್ರಾನ್ಸ್ನ್ನು ಬ್ರಿಟಿಷರಿಂದ ಮುಕ್ತಗೊಳಿಸುವಂತೆ ಬಾಲಕಿಗೆ ಆದೇಶವಿತ್ತರಂತೆ. ಆದರೆ, ದೇಶಕ್ಕೆ ದೇಶವೇ ಮಹಾರಾಜನಿಂದ ಹಿಡಿದು ಎಲ್ಲರೂ ಬ್ರಿಟಿಷರ ಅಡಿಯಾಳಾಗಿರುವಾಗ ಕೇವಲ ೧೩ ವರ್ಷ ವಯಸ್ಸಿನ ಆ ಹುಡುಗಿಯಿಂದ ಫ್ರಾನ್ಸ್ ಗೆ ಸ್ವಾತಂತ್ರ ಕೊಡಿಸಲಾದೀತೇ? ಆದರೆ, ಆ ಬಾಲಕಿ ಧೃತಿಗೆಡದೆ ಸಂತವಾಣಿಯಿಂದ ಪ್ರಭಾವಿತಳಾದವಳಂತೆ ನೇರವಾಗಿ ಸೇನಾ ಮುಖ್ಯಸ್ಥರನ್ನು ಕಂಡು ತನಗೆ ಬಿದ್ದ ಕನಸಿನ ಬಗ್ಗೆ ವಿವರಿಸಿ, ಬ್ರಿಟಿಷರ ವಿರುದ್ಧ ಹೋರಾಡುವಂತೆ ತಿಳಿಸಿದಳು. ಮೊದಮೊದಲು ಬಾಲಕಿಯ ಮಾತಿಗೆ ಫ್ರಾನ್ಸ್ ಸೈನಿಕರು ನಗುತ್ತಿದ್ದರು. ಆದರೆ, ಪಟ್ಟು ಬಿಡದ ಬಾಲಕಿ ಸೈನಿಕರನ್ನು ಹೂರಿದುಂಬಿಸಿದಳು. ಸೈನಿಕರಿಗೆ ಬಾಲಕಿಯ ಧೈರ್ಯ, ಕೆಚ್ಚಿದೆ ಮತ್ತು ಅವಳಿಗಿದ್ದ ರಾಷ್ಟ್ರಾಭಿಮಾನ ಮೆಚ್ಚುಗೆಯಾಯಿತು ಮತ್ತು ಬ್ರಿಟಿಷರ ದಬ್ಬಾಳಿಕೆಗೆ ರೋಸಿಹೋಗಿದ್ದ ಅವರು ಅವರು ಬಾಲಕಿಯಿಂದ ಸ್ಪೂರ್ತಿ ಪಡೆದವರಂತೆ ದೊರೆಯ ಮಾತನ್ನು ಲೆಕ್ಕಿಸದೆ ಆಂಗ್ಲರ ವಿರುದ್ಧ ದಂಗೆ ಎದ್ದರು. ಫ್ರಾನ್ಸ್ ಕಲಿಗಳ ಕೆಚ್ಚೆದೆಯ ಹೋರಾಟಕ್ಕೆ ಬ್ರಿ...

ದಿನಕ್ಕೊಂದು ಕಥೆ 1008

*🌻ದಿನಕ್ಕೊಂದು ಕಥೆ🌻* *ಮನಃಶಾಂತಿ* ಒಬ್ಬನು ಮನಶಾಂತಿಯನ್ನು ಹುಡುಕಿಕೊಂಡು ವಿವಿಧ ಆಧಾತ್ಮಿಕ ಗುರುಗಳು ಹೇಳಿದಂತೆ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದನು. ಅವನು ಒಮ್ಮೆ ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿ ’ಸ್ವಾಮೀಜಿ, ನಾನು ಒಂದು ಮುಚ್ಚಿದ ಕೋಣೆಯಲ್ಲಿ ಗಂಟೆಗಟ್ಟೆಲೆ ಕುಳಿತು ಧ್ಯಾನ ಮಾಡುತ್ತೇನೆ, ಅದರೆ ನನಗೆ ಮನಃಶಾಂತಿ ಸಿಗಲಿಲ್ಲ’ ಎಂದು ಹೇಳಿದನು. ಆಗ ಸ್ವಾಮೀ ವಿವೇಕಾನಂದರು ’ ಮೊಟ್ಟಮೊದಲು ನೀನು ನಿನ್ನ ಕೋಣೆಯ ಬಾಗಿಲನ್ನು ತೆರೆದಿಡು. ಅನಂತರ ಹೊರಗೆ ದುಃಖದಲ್ಲಿರುವವರನ್ನು, ಅನಾರೋಗ್ಯದಿಂದ ಬಳಲುವವರನ್ನು ಹಾಗೂ ಹಸಿದವರನ್ನು ನೋಡಿ ಅವರಿಗೆ ನಿನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡು’ ಎಂದು ಹೇಳಿದರು. ಆಗ ಆ ವ್ಯಕ್ತಿಯು ವಿವೇಕಾನಂದರಿಗೆ ’ರೋಗಿಗಳ ಸೇವೆಯನ್ನು ಮಾಡುವುದರಿಂದ ನನಗೆ ರೋಗ ಬಂದರೆ ಏನು ಮಾಡಲಿ?’ ಎಂದು ಕೇಳಿದನು. ಅವನ ಈ ಸಂದೇಹವನ್ನು ಕೇಳಿ ಸ್ವಾಮೀ ವಿವೇಕಾನಂದರು ’ನೀನು ಪ್ರತಿಯೊಂದು ಒಳ್ಳೆಯ ಕೆಲಸದಲ್ಲಿಯೂ ತಪ್ಪನ್ನು ಹುಡುಕುತ್ತಿರುವುದರಿಂದ ನಿನಗೆ ಮನಃಶಾಂತಿ ಸಿಗುತ್ತಿಲ್ಲ, ಶ್ರೇಷ್ಠ ಕಾರ್ಯವನ್ನು ಮಾಡಲು ಬಹಳ ತಡ ಮಾಡಬಾರದು. ಅಂತೆಯೇ ಅದರಲ್ಲಿ ತಪ್ಪು ಕಂಡು ಹಿಡಿಯಬಾರದು. ಇದೇ ಮನಃಶಾಂತಿಯನ್ನು ಪಡೆಯುವ ಏಕೈಕ ಮಾಧ್ಯಮವಾಗಿದೆ.’ ಎಂದು ಹೇಳಿದರು. ಆಧಾರ : ಸನಾತನ ನಿರ್ಮಿತ ಗ್ರಂಥ – ಬೋಧಕಥಾ. ಸಂಗ್ರಹ:ವೀರೇಶ್ ಅರಸಿಕೆರೆ.

ದಿನಕ್ಕೊಂದು ಕಥೆ 1007

ದಿನಕ್ಕೊಂದು ಕಥೆ ಸರ್ವೋಚ್ಚ ತ್ಯಾಗ.......... ಇಪ್ಪತ್ತು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಹಳ್ಳಿಯಿಂದ ದೇಶದ ರಕ್ಷಣಾ ಸಚಿವಾಲಯಕ್ಕೆ ಒಂದು ಪತ್ರ ಬಂದಿತ್ತು. ಪತ್ರ ಬರೆದವರು ಒಬ್ಬ ಸಾಮಾನ್ಯ ಶಾಲಾ ಶಿಕ್ಷಕರಾಗಿದ್ದರು.  ಅವರ ಕೋರಿಕೆ ಹೀಗಿತ್ತು.  "ಸಾಧ್ಯವಾದರೆ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಏಕೈಕ ಪುತ್ರ ವೀರ ಮರಣ ಹೊಂದಿದ ಸ್ಥಳವನ್ನು ನೋಡಲು ನನ್ನ ಹೆಂಡತಿ ಮತ್ತು ನನಗೆ ಅನುಮತಿ ನೀಡಬಹುದೇ? , ಅವನ ಸಾವಿನ ಮೊದಲ ವಾರ್ಷಿಕ ದಿನ 07/7/2000 ದಂದು ನನ್ನ ಕೋರಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ಹಾಗು ಇದು ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿದ್ದರೆ ನಾನು ನನ್ನ ಅರ್ಜಿಯನ್ನು ಹಿಂಪಡೆಯುತ್ತೇನೆ ಎಂದಿತ್ತು...... ಪತ್ರವನ್ನು ಓದಿದ ಇಲಾಖೆ ಅಧಿಕಾರಿ, "ಅವರ ಭೇಟಿಯ ವೆಚ್ಚ ಏನೇ ಇರಲಿ, ನನ್ನ ಸಂಬಳದಿಂದ ಅದನ್ನು ಪಾವತಿಸುತ್ತೇನೆ, ಇಲಾಖೆಗೆ ಇಷ್ಟವಿಲ್ಲದಿದ್ದರೆ ಮತ್ತು ನಾನು ಶಿಕ್ಷಕ ಮತ್ತು ಅವರ ಹೆಂಡತಿಯನ್ನು ಅವರ ಏಕೈಕ ಮಗ ವೀರಮರಣ ಹೊಂದಿದ ಸ್ಥಳಕ್ಕೆ ಕರೆತರುತ್ತೇನೆ ಎಂದುಕೊಂಡು ಅವರನ್ನು ಅಲ್ಲಿಯ ಭೇಟಿಗೆ ಎಲ್ಲಾ ವ್ಯವಸ್ಥೆ ಮಾಡುವಂತೆ ಆದೇಶ ಹೊರಡಿಸುತ್ತಾರೆ. ಮೃತ ವೀರನ ನೆನಪಿನ ದಿನದಂದು ವೃದ್ಧ ದಂಪತಿಗಳನ್ನು ಸರಿಯಾದ ಗೌರವದಿಂದ ಪರ್ವತ ಶ್ರೇಣಿಗೆ ಕರೆತರಲಾಯಿತು.  ಅವರ ಮಗ ವೀರಸ್ವರ್ಗ ಪಡೆದ ಸ್ಥಳಕ್ಕೆ ಕರೆದೊಯ್ದಾಗ ಕರ್ತವ್ಯದಲ್ಲಿದ್ದ ಎಲ್ಲಾ ಸೈನಿಕರೂ ಅವರಿಗೆ ಗೌರವಪೂರ್ವಕವಾಗಿ ನಿಂತು ನಮಸ್ಕರಿಸಿದರು....

ದಿನಕ್ಕೊಂದು ಕಥೆ 1006

ದಿನಕ್ಕೊಂದು ಕಥೆ ಕಟಕ್ ನಿಂದ ಕಲಕತ್ತಾಗೆ ಹೋಗುವ ರೈಲು ಇನ್ನೇನು ಬಿಡುತ್ತಿದೆ ಎನ್ನುವಷ್ಟರಲ್ಲಿ, ಸೂಟು ಬೂಟು ಧರಿಸಿದ್ದ, ಸುಮಾರು 14 ವಯಸ್ಸಿನ, ಶ್ರೀಮಂತ ಕುಟುಂಬದವನೆನ್ನಬಹುದಾದ ಯುವಕನೊಬ್ಬ ಓಡುತ್ತ ಬಂದು, ರೈಲು ಹತ್ತಿದ. ಇದೀಗ ರೈಲು ಹತ್ತಿ ಇನ್ನೂ ಬಾಗಿಲ ಬಳಿಯೇ ಇದ್ದ, ಸಾದಾ ಖಾದಿ ಬಟ್ಟೆ ಧರಿಸಿದ್ದ ಹಿರಿಯರೊಬ್ಬರು, ಓಡೋಡಿ ಬರುತ್ತಿದ್ದ ಆ ಹುಡುಗನಿಗೆ ಕೈ ಕೊಟ್ಟು ಮೇಲೆ ಏರಲು ಸಹಾಯ ಮಾಡಿದರು. ರೈಲಿನಲ್ಲಿ ಆ ಹುಡುಗ ಮತ್ತು ಆ ಹಿರಿಯರು ಒಂದೇ ಸೀಟಿನಲ್ಲಿ ಕುಳಿತರು. ಆಗ ಹುಡುಗ ಉಶ್ ಎನ್ನುತ್ತ, "ರೈಲು ಹಿಡಿಯಬಾಕಾದರೆ ಸಾಕುಸಾಕಾಗಿ ಹೋಯಿತು" ಎಂದು ಎದುಸಿರು ಬಿಡುತ್ತ ತನ್ನ ಕರ್ಚೀಫ್ ತೆಗೆದು, ಮುಖ ಒರೆಸಿಕೊಂಡ ಆ ಹಿರಿಯರು ಆ ಹುಡುಗನ್ನು ಕುರಿತು, "ಮಗು ಇಷ್ಟು ಗಡಿಬಿಡಿಯಿಂದ ಎಲ್ಲಿಗೆ ಹೋಗುತ್ತಿರುವಿ ? ಏನು ಕೆಲಸ ?" ಎಂದರು. ಆಗ ಆ ಹುಡುಗ, "ಇವತ್ತು ಸಾಯಂಕಾಲ ಕಲಕತ್ತಾ ನಗರದಲ್ಲಿ, ಈಶ್ವರಚಂದ್ರ ವಿದ್ಯಾಸಾಗರ ಅವರ ಭಾರತ ಸ್ವಾತಂತ್ರ್ಯದ ಕುರಿತು ಬೃಹತ್ ಭಾಷಣದ ಕಾರ್ಯಕ್ರಮವಿದೆ ; ಅದನ್ನು ಕೇಳಲು ಹೋಗುತ್ತಿದ್ದೇನೆ. ನಮ್ಮ ತಂದೆಯವರ ಪ್ರಭಾವದಿಂದ ನನಗೆ ಆ ಕಾರ್ಯಕ್ರಮದಲ್ಲಿ, ಗಣ್ಯರು ಕುಳಿತುಕೊಳ್ಳುವ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಗೌರವ ಪಾಸ್ ದೊರೆತಿದೆ, ಆ ಕಾರಣದಿಂದಾಗಿ, ನಾನು ವಿದ್ಯಾಸಾಗರರನ್ನು ಅತ್ಯಂತ ಸಮೀಪದಿಂದ ನೋಡಬಹುದು" ಎಂದು ತನ್ನ ಶ್ರೀಮಂತ ತಂದೆಯ ಬಗ್ಗೆ ಹೆಮ್ಮೆಯಿಂ...