Posts

ದಿನಕ್ಕೊಂದು ಕಥೆ 1036

*🌻ದಿನಕ್ಕೊಂದು ಕಥೆ🌻* *ನಂಬಿಕೆಯೇ ದೇವರು* ಭಕ್ತರಿಗೆ  ದೇವರ ಮೇಲೆ ಇದ್ದ ನಂಬಿಕೆ ಪ್ರಾಮಾಣಿಕವಾಗಿದ್ದರೆ, ಭಕ್ತರ ಬೇಡಿಕೆ ನೆರವೇರಿಸಲು  ಹೇಗೆ ಬೇಕೋ ಹಾಗೆ ಭಗವಂತ ಒಲಿಯುತ್ತಾನೆ. ಎಲ್ಲರಿಗೂ ತಿಳಿದಿರುವ ಹಾಗೆ  ಕೃಷ್ಣನಂತೂ, ಭಕ್ತಿಯನ್ನು ಪರೀಕ್ಷಿಸುವ ಸಲುವಾಗಿ  ಭಕ್ತರಿಗೆ ನಾನಾ ಪರೀಕ್ಷೆಗಳನ್ನು ಒಡ್ಡುತ್ತಾನೆ  ಮತ್ತು  ನಾನಾ ರೂಪಗಳಲ್ಲಿ ಬಂದು ಸಲಹುತ್ತಾನೆ.  ಕೃಷ್ಣನ ಮಹಿಮೆಯನ್ನು ಎಷ್ಟು ಹೇಳಿದರೂ ಸಾಲದು. ಹಿಂದೆ ಒಬ್ಬ ರಾಜನಿದ್ದ. ಕೃಷ್ಣನ ಪರಮ ಭಕ್ತ. ರಾಜ್ಯದಲ್ಲಿ ದೊಡ್ಡದಾದ ಕೃಷ್ಣನ ದೇವಾಲಯವನ್ನು  ನಿರ್ಮಿಸುತ್ತಾನೆ.  ಸುಂದರವಾದ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ, ಪೂಜೆಗಾಗಿ  ಅರ್ಚಕರನ್ನು  ನೇಮಿಸುತ್ತಾನೆ.  ರಾಜನು ನಿತ್ಯವೂ ಸುಂದರವಾದ  ಹೂಮಾಲೆ ತಂದು ಕೃಷ್ಣನಿಗೆ ಅರ್ಪಿಸುತ್ತಿದ್ದ.  ಅರ್ಚಕರು ಹೂ ಮಾಲೆಯನ್ನು  ಕೃಷ್ಣನಿಗೆ ಹಾಕಿ ಪೂಜಿಸಿ ಮಂಗಳಾರತಿ ಮಾಡಿ ರಾಜನಿಗೆ ಮಂಗಳಾರತಿ ಕೊಟ್ಟು, ಪ್ರಸಾದ ಕೊಡುವಾಗ  ಭಗವಂತನ  ಅನುಗ್ರಹ ಎಂದು ಆಶೀರ್ವದಿಸಿ  ಅದೇ  ಹೂ ಮಾಲೆಯನ್ನು  ಪ್ರತಿದಿನವೂ ರಾಜನಿಗೆ  ಹಾಕುತ್ತಿದ್ದರು.  ರಾಜನು  ನೇಮಕ ಮಾಡಿದ  ಅರ್ಚಕರು  ಶ್ರದ್ಧಾ, ಭಕ್ತಿಯಿಂದ ಕೃಷ್ಣನಿಗೆ ಪೂಜೆ ಮಾಡುತ್ತಿದ್ದರು. ಭಗವಂತನ ಪೂಜೆ ಮಾಡುವ ಕೈಂಕರ್ಯ  ಸಿಕ್ಕಿ...

ದಿನಕ್ಕೊಂದು ಕಥೆ 1035

*🌻ದಿನಕ್ಕೊಂದು ಕಥೆ🌻* *ವಿದ್ಯಾ ದದಾತಿ ವಿನಯಂ* ಚಂದ್ರಗುಪ್ತ ನೆಂಬ ರಾಜನು ವಿದ್ಯಾಕಾಶಿಯನ್ನು ಆಳುತ್ತಿದ್ದನು. ಚತುರನು, ವಿದ್ಯಾವಂತನು, ಬುದ್ಧಿವಂತನು, ಸಮರ್ಥ ಆಡಳಿತಗಾರನಾಗಿದ್ದನು. ರಾಜ್ಯವು ಸುಭಿಕ್ಷವಾಗಿತ್ತು. ರಾಜನಿಗೆ ಅಧ್ಯಾತ್ಮದತ್ತ ಒಲವು ಮೂಡಿತು. ಆಧ್ಯಾತ್ಮವನ್ನು ಕಲಿತು ತಿಳಿದುಕೊಳ್ಳಬೇಕೆಂಬ ಹಂಬಲದಿಂದ, ಆತನು ತನ್ನ ಮಂತ್ರಿಯನ್ನು ಕರೆದು ಮಹಾಮಂತ್ರಿಗಳೆ ನಾನು ಆಧ್ಯಾತ್ಮವನ್ನು ಕಲಿತುಕೊಳ್ಳಬೇಕು ನಮ್ಮ ರಾಜ್ಯದಲ್ಲಿರುವ ಎಲ್ಲಾ ಗುರುಕುಲಗಳನ್ನು ವಿಚಾರಿಸಿ, ಶ್ರೇಷ್ಠವಾದ ಆಧ್ಯಾತ್ಮ ಅನುಭವವಿರುವ ಗುರುವನ್ನು ಗುರುತಿಸಿ, ಪ್ರತಿದಿನ ಅರಮನೆಗೆ ಬಂದು ನನಗೆ ಆಧ್ಯಾತ್ಮ ಕಲಿಸಿಕೊಡುವಂತೆ ತಿಳಿಸಿ ಎಂದನು .  ಸ್ವಲ್ಪ ದೂರದ ಕಾಡಿನಲ್ಲಿ 'ಸುಗುಣಾನಂದ' ಎಂಬ ಅನುಭವಿ ಆಧ್ಯಾತ್ಮ ಗುರುಗಳು ವಾಸಿಸುತ್ತಿದ್ದಾರೆ. ಅವರಿಗೆ ದೈವ ಸಾಕ್ಷಾತ್ಕಾರವಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅವರು ಅರಮನೆಗೆ ಬರಲು ಒಪ್ಪುವರೇ ಎಂಬ ಅನುಮಾನ ನನಗೆ ಇದೆ ಎಂದು ಮಂತ್ರಿಯು ಹೇಳಿದನು. ಅದಕ್ಕೆ ರಾಜನು ಮಂತ್ರಿಗಳೆ, ನೀವು ರಥವನ್ನು ತೆಗೆದುಕೊಂಡು ಹೋಗಿ ಗೌರವಾದರದಿಂದ ಮಾತನಾಡಿಸಿ ಅವರನ್ನು ಹೇಗಾದರೂ ಮಾಡಿ ಅರಮನೆಗೆ ಕರೆತನ್ನಿ ಎಂದನು.  ರಾಜನ ಮಾತಿನಂತೆ ಮಂತ್ರಿ ರಥದಲ್ಲಿ ಹೊರಟು ಗುರುಗಳ ಆಶ್ರಮಕ್ಕೆ ಬಂದನು. ಗುರುಗಳನ್ನು ಕಂಡು ವಿನಯದಿಂದ ನಮಸ್ಕರಿಸಿ, ಸ್ವಾಮಿ ನಾನು ಅರಮನೆಯಿಂದ ಬಂದಿದ್ದೇನೆ. ನಮ್ಮ ರಾಜರ...

ದಿನಕ್ಕೊಂದು ಕಥೆ 1034

*🌻ದಿನಕ್ಕೊಂದು ಕಥೆ🌻* *ಹವ್ಯಾಸ ಬದಲಿಸಿದರೆ ಹಣೆಬರಹ ಬದಲಾದೀತು!* ಇದು ಎರಡು ಓಟೆಗಳ ಕಥೆ. ಒಮ್ಮೆ ಒಬ್ಬ ಗೃಹಿಣಿ ಎರಡು ಮಾವಿನ ಹಣ್ಣಿನ ಓಟೆಗಳನ್ನು ತಿಪ್ಪೆಯ ಮೇಲೆ ಬಿಸಾಡಿದಳು. ಒಂದು ಓಟೆ ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯ ಗೊಬ್ಬರ ಪೌಷ್ಟಿಕಾಂಶ ಕೊಡುತ್ತದೆ, ಸಸಿಯಾಗುತ್ತೇನೆ, ನಂತರ ಸಣ್ಣ ಗಿಡವಾಗುತ್ತೇನೆ, ಕಾಲಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರ ಮಾವಿನ ಹಣ್ಣನ್ನು ಕೋಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆ ಎಂದು ಯೋಚಿಸಿ ಅದರಂತೆಯೇ ಬೆಳೆಯಿತು, ಬದುಕಿತು. ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಓಟೆ ನನ್ನ ಬೇರುಗಳಿಗೆ ಅಂತರ್ಜಲ ಸಿಕ್ಕದಿದ್ದರೇ? ಪೌಷ್ಟಿಕಾಂಶ ಸಿಗದಿದ್ದರೇ? ಗಿಡವಾದಾಗ ಕುರಿ ಮೇಕೆಗಳು ಬಂದು ತಿಂದುಬಿಟ್ಟರೇ? ಮರವಾಗಿ ಹಣ್ಣು ಬಿಡುವಾಗ, ಜನ ಹಣ್ಣು ಉದುರಿಸಲು ಕಲ್ಲು ಹೊಡೆದರೆ ನನಗೆ ನೋವಾಗುದಿಲ್ಲವೇ? ಎಂದೆಲ್ಲ ಯೋಚಿಸಿ ಬೇರನ್ನು ಕೆಳಗೆ ಬಿಡದೆ, ಮೇಲೆ ಸಸಿಯಾಗಿ ಬೆಳೆಯದೆ ಹಾಗೆಯೇ ಉಳಿಯಿತು. ಕೆಲವೇ ದಿನಗಳಲ್ಲಿ ತಿಪ್ಪೆಯಲ್ಲಿನ ಗೊಬ್ಬರದೊಂದಿಗೆ ಗೊಬ್ಬರವಾಗಿ ಬೆರೆತು ಹಾಳಾಗಿ ಹೋಯಿತು. ಮೊದಲನೆಯ ಓಟೆಯ ಮನೋಭಾವ ಸಕಾರಾತ್ಮಕ. ಎರಡನೆಯ ಓಟೆಯ ಮನೋಭಾವ ನಕಾರಾತ್ಮಕ. ಸಕಾರಾತ್ಮಕ ವಾಗಿದ್ದ ಓಟೆ ಬೆಳೆದು ದಶಕಗಳ ಕಾಲ ಉಳಿಯಿತು. ಆದರೆ ನಕಾರಾತ್ಮಕವಾಗಿದ್ದ ಓಟೆ ಒಂದೆರಡು ವಾರಗಳಲ್ಲೇ ಮರೆಯಾಗಿ ಹೋಯಿತು. ನೀಜ ಜೀವನದ...

ದಿನಕ್ಕೊಂದು ಕಥೆ 1033

*🌻ದಿನಕ್ಕೊಂದು ಕಥೆ🌻* *ಬಡತನ ಸತ್ತು ಹೋದಾಗ* ಒಂದು ಬಡ ಸಂಸಾರವಿತ್ತು. ಆ ಸಂಸಾರದ ಯಜಮಾನ ಒಂದು ಖಾಸಗಿ ಕಂಪನಿಯ ಉದ್ಯೋಗಿಯಾದರೆ ಪತ್ನಿ ಗೃಹಿಣಿ. ಅವರಿಗೆ ಇಬ್ಬರು ಮುದ್ದು ಮಕ್ಕಳು. ಆದರೆ ಯಜಮಾನನಿಗೆ ಮಾತ್ರ ಕುಡಿತದ ಚಟ. ಸರಿಯಾಗಿ ಕೆಲಸಕ್ಕೆ ಹೋಗದೆ, ದಿನಾ ಕುಡಿದು ಮನೆಗೆ ಬಂದು ಲೇ ಲೇ ಹಾಕುತಿದ್ದ. ಆತನ ತಿಂಗಳ ಸಂಬಳ ಅವನ ಕುಡಿತಕ್ಕೆ ಸಾಕಾಗುತ್ತಿರಲಿಲ್ಲ. ಮನೆ ಗೃಹಿಣಿ ಕೆಲಸಕ್ಕೆ ಸೇರಿದಾಗ, ಅದಕ್ಕೂ ಅನುಮಾನ ಪಟ್ಟು ಬೈದು ನಿಂದನೆ ಮಾಡಿ ಕೆಲಸ ಬಿಡಿಸಿದ. ಮನೆ ಬಾಡಿಗೆ, ಮಕ್ಕಳ ವಿದ್ಯಬ್ಯಾಸ, ಮನೆ ಖರ್ಚು ಎಂಬಂತೆ, ಯಾವುದನ್ನೂ ನಿಭಾಯಿಸಲು ಸಾಧ್ಯವಾಗದೆ ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಅದರ ಪರಿಣಾಮ, ಅತೀವವಾದ ಬಡತನ ಅವನ ಸಂಸಾರವನ್ನು ಕಾಡುತ್ತಿತ್ತು. ಕೈಯಲ್ಲಿ ಹಣವಿಲ್ಲ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುವ ಪರಿಸ್ಥಿತಿ ಅವರದ್ದು. ಅಂದರೆ, ಆತನ ಈ ಕುಡಿತದ ಚಟದಿಂದಾಗಿ ಬಡತನ ಅವರ ಬೆನ್ನು ಹತ್ತಿ ಕಾಡುತ್ತಿತ್ತು. ಒಂದು ಕಡೆ ಬಾಡಿಗೆಗಾಗಿ ಮನೆ ಮಾಲೀಕರ ಕಿರುಕುಳವಾದರೆ ಇನ್ನೊಂದು ಕಡೆ ಸಾಲಗಾರರ ಕಿರುಕುಳ. ಈ ಎಲ್ಲಾ ಕಷ್ಟಗಳಿಂದ ಪಾರಾಗುದು ತುಂಬಾ ಕಷ್ಟ ಎಂದು ಭಾವಿಸಿದ ಆತನ ಹೆಂಡತಿ ' ಮರಿಯಾದೆಗೆ ಅಂಜಿದಳು. ಬದುಕಲು ಇಷ್ಟವಿಲ್ಲದೆ, ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದು ಬಿಟ್ಟಳು . ಮರುದಿನ ಅವಳ ಯಜಮಾನ ಕೆಲಸಕ್ಕೆಂದು ಹೊರಟು ಹೋದ. ಮಕ್ಕಳೂ ಶಾಲೆಗೆ ಹೊರಟು ಹೋದರು. ಆ ವೇಳೆಗೆ ಮನೆಯಲ್ಲಿ ...

ದಿನಕ್ಕೊಂದು ಕಥೆ 1032

*🌻ದಿನಕ್ಕೊಂದು ಕಥೆ🌻* *ಆಸರೆ* ಲ್ಯಾಪ್ಟಾಪ್ ನೋಡುತ್ತಲೇ ಎಸ್ ವಾಟ್, ಎಂದು ಎದುರಿನಲ್ಲಿ ನಿಂತಿದ್ದ ಹುಡುಗಿಯನ್ನು ನೋಡದೇ ಕೇಳಿದಳು ಲತಾ...ಮೇಡಂ ನನಗೆ ಕೆಲಸದ ಅವಶ್ಯಕತೆ ತುಂಬಾನೆ ಇದೆ.  ಪಿಯುಸಿ ಮಾರ‍್ಕಕಾರ‍್ಡ್ ನೋಡಿ ಮೇಡಂ 90%...ಈಗ ಡಿಗ್ರಿ ಮಾಡ್ತಾ ಇದೀನಿ ಕರೆಸ್ಪಾಂಡೆನ್ಸ್ ಲ್ಲಿ...ಒಂದೇ ಒಂದು ತಿಂಗಳು ನನ್ನ ಕೆಲಸ ನೋಡಿ ,ಆಮೇಲೆ ಬೇಕಾದ್ರೆ ನನ್ನ  ತೆಗೆದುಹಾಕಿ...ನನ್ನ ತಮ್ಮ ಹೈಸ್ಕೂಲ್ ಓದ್ತಾ ಇದಾನೆ,ತಾಯಿಗೆ ಖಾಯಿಲೆಯಿಂದ ನರಳ್ತಾ ಇದಾಳೆ, ಹೆಚ್ ಆರ್ ಡಿಗ್ರಿ ಆಗಿಲ್ಲ ಕೆಲಸ ಕೊಡಲ್ಲ ಎಂದರು ಒಂದೇ ಸಮ ಹೇಳುತ್ತಿದ್ದ ಆ ಹುಡುಗಿಯನ್ನು ತಲೆ ಎತ್ತಿ ನೋಡಿದಳು ಕಂಪನಿಯ ಎಂ ಡಿ ಲತಾ... ಮುಗ್ದತೆಯ ಸಹಜ ಸುಂದರಿ...ಬಡತನದ ಛಾಯೆ ಅವಳು ತೊಟ್ಟಿರುವ ಬಟ್ಟೆಯಲ್ಲಿ ಎದ್ದು ಕಾಣುತ್ತಿತ್ತು.  ಕರುಣೆ ಮನದಲ್ಲಿ ಹಾದುಹೋದರೂ ಕಂಪನಿಯ ನಿಯಮದ ಪ್ರಕಾರ ಪದವಿ ಇಲ್ಲದೆ ಕೆಲಸ ಕೊಡುವಂತಿಲ್ಲ. ಐ ಮ್ ಸಾರಿ ,ಕಾಂಟ್ ಹೆಲ್ಪ್ ,ಟ್ರೈ ಆಫ್ಟರ್ ಡಿಗ್ರಿ ಎದ್ದು ಹೊರ ಹೊರಟಳು ಲತಾ. ಆ ಹುಡುಗಿ ದುಃಖ ನಿರಾಶೆಯಿಂದ ಕಣ್ಣೀರು ಒರೆಸುತ್ತಾ ನಿಂತಿದ್ದಳು. ರಾತ್ರಿ  ಮಲಗಿದರೂ ನಿದ್ದೆ ಕಣ್ಣಿಗೆ ಸುಳಿಯುತ್ತಿಲ್ಲ.ಯಾಕೊ ಆ ಹುಡುಗಿಯ ಧೈನ್ಯ ಮುಖ ಕಣ್ಣೇದುರೇ     ಬಿಂಬಿಸುತ್ತಿದೆ. ಏನಾದರೂ ಸಹಾಯ ಮಾಡಬೇಕಿತ್ತು. ಯಾಕೋ ಕಣ್ಣು          ಮಸಕಾಯಿತು ...ಲತಾಳ ಮನಸು ಹದಿನೈದು ವರ್ಷಗಳ ಹಿಂದಕ...

ದಿನಕ್ಕೊಂದು ಕಥೆ 1031

*🌻ದಿನಕ್ಕೊಂದು ಕಥೆ🌻* *ಯಥಾರ್ಥ ಮಾನವೀಯತೆ* ಕಪಿಲ ನಗರದ ಮಹಾರಾಜ ಒಂದುದಿನ ಬೆಳಿಗ್ಗೆ ತನ್ನ ಕೈ ತೋಟದಲ್ಲಿ ಕುಳಿತು ಮಂತ್ರಿ, ಸೇನಾಧಿಪತಿಗಳ ಜತೆ ಗಹನವಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದ. ಕೈತೋಟದ ಸುತ್ತಲೂ ಎತ್ತರವಾದ ಬಲಿಷ್ಠ ಗೋಡೆಯಿತ್ತು. ಗೋಡೆಯ ಆ ಬದಿಯಲ್ಲಿ ಬಯಲು ಪ್ರದೇಶವಿತ್ತು. ಒಬ್ಬ ವೃದ್ಧ ತನ್ನ ಮೊಮ್ಮಗನ ಜತೆಯಲ್ಲಿ ಆ ಕಡೆ ಬರುತ್ತಿದ್ದ. ತಾತ ಹಾಗೂ ಹುಡುಗನಿಗೆ ತುಂಬಾ ಹಸಿವಾಗುತ್ತಿತ್ತು. ರಾತ್ರಿಯಿಂದ ಉಪವಾಸ, ಗೋಡೆಯ ಪಕ್ಕದಲ್ಲಿ ನಡೆದು ಬರುವಾಗ ರಾಜನ ಕೈ ತೋಟದಲ್ಲಿರುವ ದೊಡ್ಡ ಮಾವಿನ ಕೊಂಬೆಯೊಂದು ಹೊರಗಡೆ ಬಾಗಿತ್ತು. ಅದರಲ್ಲಿ ಫಲಿತ ಮಾವಿನ ಹಣ್ಣುಗಳಿದ್ದವು. ವೃದ್ಧ ಅಲ್ಲೇ ಬಿದ್ದಿದ್ದ ಒಂದು ಕಲ್ಲೆತ್ತಿಕೊಂಡು ಎತ್ತರದ ಕೊಂಬೆಗೆ ಹೊಡೆದ. ಮಾವಿನಹಣ್ಣು ಕೆಳಗೆ ಬಿತ್ತು. ಹುಡುಗ ಖುಷಿಯಿಂದ ಎತ್ತಿಕೊಂಡು ತಿನ್ನತೊಡಗಿದ. ಆದರೆ ಗೋಡೆಯ ಆ ಬದಿಯಲ್ಲಿ ಕುಳಿತಿದ್ದ ರಾಜನ ಹಣೆಗೆ ಕಲ್ಲು ಬಡಿದು ಹಣೆ ಸೀಳಿತು. ಮಂತ್ರಿ ಹಾಗೂ ಸೇನಾಧಿಪತಿ ಗಾಬರಿಗೊಂಡರು. ಕೂಡಲೇ ಗಾಯಕ್ಕೆ ಪಟ್ಟಿ ಕಟ್ಟಿದರು. ಹೊರಗೆ ಬಂದು ಇಣುಕಲಾಗಿ ಮುದುಕ ಹಾಗೂ ಹುಡುಗ ಕುಳಿತಿದ್ದರು. ಸೇನಾಧಿಪತಿ ಅವರಿಬ್ಬರನ್ನೂ ಹಿಡಿದು ರಾಜನೆದುರು ನಿಲ್ಲಿಸಿದರು. ಅವರಿಬ್ಬರೂ ವಂದಿಸಿ ಕ್ಷಮೆ ಬೇಡಿದರು. ತಕ್ಷಣವೇ ರಾಜ ಮುಗುಳ್ನಕ್ಕು ಆ ಬಡವನಿಗೆ ನೂರು ಚಿನ್ನದ ನಾಣ್ಯವನ್ನು ಕೊಡುವಂತೆ ಮಂತ್ರಿಗೆ ಸೂಚಿಸಿದ. ಇದನ್ನು ಕಂಡು ಸೇನಾಧಿಪತಿಗೆ ವಿಚಿತ್ರ ಎನಿಸಿತು. 'ಶಿಕ್ಷೆ ಕೊ...

ದಿನಕ್ಕೊಂದು ಕಥೆ 1030

*🌻ದಿನಕ್ಕೊಂದು ಕಥೆ🌻*           *ಕಾಮನೆಗಳು* ಬಹಳ ಹಿಂದೆ ಪರ್ವತ ಪ್ರದೇಶದಲ್ಲಿ ಒಬ್ಬ ವೃದ್ಧನು  ವಾಸಿಸುತ್ತಿದ್ದನು. ಅವನ ಹೆಸರು 'ವಿಕ್ರಾಂತ ಯಾವಗಲ್'. ಕಡು ಬಡವ. ಈತನಿಗೆ ಒಂದು ಜೋಪಡಿ ತರಹದ ಗುಡಿಸಲು ಇತ್ತು. ಇವನು ತುಂಬಾ ಸೋಮಾರಿ ; ಹಾಗಾಗಿ ಜೀವನ ಮಾಡಲು  ಕಷ್ಟ ಪಡುತ್ತಿದ್ದನು. ವಿಕ್ರಾಂತ ಯಾವಗಲ್ಗೆ ಒಂದು ವಿಷಯ ತಿಳಿದಿತ್ತು. ಸಾಧು ಸನ್ಯಾಸಿಗಳು ತಮ್ಮ ಯೋಗಶಕ್ತಿಯಿಂದ ಸಿದ್ಧಿಗಳನ್ನು, ಮಾಡಬಲ್ಲರು, ಹಾಗೂ ಬೇಕಾದ ವಸ್ತುಗಳನ್ನು ಪಡೆಯಬಲ್ಲರು ಎಂದು ಕೇಳಿ ತಿಳಿದಿದ್ದನು. ಈಗ ಅವನ ತಲೆಯಲ್ಲಿ  ಯೋಚನೆಯೊಂದು  ಬಂದಿತು. ನಾನು ಯಾವ ಕೆಲಸವನ್ನೂ ಮಾಡದೆ ಸುಖವಾದ ಜೀವನ ನಡೆಸಬೇಕೆಂಬ ಆಸೆಯೊಂದು  ಮೊಳಕೆಯೊಡೆಯಿತು. ಇದನ್ನು ಪಡೆಯಬೇಕೆಂಬ ಆಕಾಂಕ್ಷೆಯಿಂದ, ಅವನು ಪರ್ವತದ ಮೇಲೆ ಹತ್ತಿ ಅಲ್ಲಿನ ಗವಿಗಳಲ್ಲಿ ವಾಸಮಾಡುವ ಯಾರಾದರೂ ಸಿದ್ಧಪುರುಷರನ್ನು ಭೇಟಿ ಮಾಡಿ ಮನದಿಚ್ಚೆಯನ್ನು  ಪೂರೈಸಿಕೊಳ್ಳಬೇಕೆಂದು ಹವಣಿಸಿದನು. ಇದಕ್ಕಾಗಿ ಸಾಧುಗಳನ್ನು ಹುಡುಕಲು  ಗವಿಗಳನ್ನು  ಹುಡುಕಿಕೊಂಡು ಹೊರಟನು. ಪರ್ವತದ ಮೇಲೆ ನಡೆಯುತ್ತಾ ಒಂದು ಕಡೆ ಹೋದಾಗ ಗವಿ ಕಂಡಿತು. ಅಲ್ಲೇ ತಪಸ್ಸು ಮಾಡುತ್ತಿದ್ದ ಸಾಧುವನ್ನು ಕಂಡನು. ಮತ್ತು ಅವರಿಗೆ ಭಕ್ತಿಯಿಂದ ಪ್ರಣಾಮ ಮಾಡಿದನು. ಸಾಧುಗಳು ಅವನನ್ನು ಸ್ವಾಗತಿಸಿ ಮಾತನಾಡಿಸಿ, ನೀನು ನಮ್ಮಲ್ಲಿಗೆ ಬಂದ ಉದ್ದೇಶ ಏನು ಎಂದು ಕೇಳಿದರು...

ದಿನಕ್ಕೊಂದು ಕಥೆ 1029

*🌻ದಿನಕ್ಕೊಂದು ಕಥೆ🌻*                                            ಸಾಧಕರಿಗೆ ಜೇಡರ ಹುಳು ಒಂದು ಜೀವಂತ ಪಾಠವಾಗಿದೆ.ಸಹನೆ ಮತ್ತು ಪ್ರಯತ್ನಶೀಲತೆಗೆ ಜೇಡರ ಹುಳು ಒಂದು ಆದರ್ಶ.ಬಲೆ ನಿರ್ಮಿಸುವ ಕೆಲಸದಲ್ಲಿ ಅದು ಹಲವು ಬಾರಿ ಸೋಲುತ್ತದೆ.ನೆಲಕ್ಕೆ ಉರುಳುತ್ತದೆ.ಆದರೂ ಅದು ಸದ್ದಿಲ್ಲದೆ ತನ್ನ ಪ್ರಯತ್ನವನ್ನು ಸಹನೆಯಿಂದ ಮುಂದುವರೆಸುತ್ತದೆ.ಅದು ಕೊನೆಗೂ ಒಂದು ಬಲೆಯನ್ನು ನಿರ್ಮಿಸಿಯೇ ನಿರ್ಮಿಸುತ್ತದೆ.                                                           ಒಬ್ಬ ರಾಜ ಯುದ್ದದಲ್ಲಿ ಹಲವು ಬಾರಿ ವೈರಿಗಳಿಂದ ಸೋತುಹೋದ.ಸೋತ ಆತ ನಿರಾಶನಾದ.ಹಾಗೆ ಕುಳಿತ್ತಿದ್ದಾರೆ ಅವನ ಕಣ್ಣಿಗೆ ಒಂದು ಜೇಡರ ಹುಳು ಕಾಣಿಸಿಕೊಂಡಿತು.ಅದನ್ನು ಆತ ಗಮನವಿರಿಸಿ ನೋಡಿದ!                                                        ...

ದಿನಕ್ಕೊಂದು ಕಥೆ 1028

*🌻ದಿನಕ್ಕೊಂದು ಕಥೆ🌻*                                        *ಬುದ್ಧನ ಕಥೆ* 'ಗೌತಮ ಬುದ್ಧ' ವೈಶಾಲಿಯಲ್ಲಿದ್ದಾಗ, 'ಮೌಲಿಂದಪುತ್ತ' ಅಂತ ಒಬ್ಬ  ಬುದ್ದನನ್ನು ನೋಡೋಕೆ ಬಂದ. ಅವನು ಬಹಳ  ಓದಿ ಎಲ್ಲವನ್ನು ತಿಳಿದುಕೊಂಡಿದ್ದ. ವೇದ, ಪುರಾಣ, ಉಪನಿಷತ್ತು, ಇವುಗಳನ್ನೆಲ್ಲಾ ಕರತಲಾಮಲಕ ಎನ್ನುವಂತೆ ಅರೆದು ಕುಡಿದಿದ್ದ. ಯಾವ ರೀತಿ ಸುತ್ತಿಬಳಸಿ ಕೇಳಿದರೂ ಅವನು ಎಲ್ಲವನ್ನೂ ಹೇಳುವಷ್ಟು  ಜ್ಞಾನವಂತನಾಗಿದ್ದ. ಅಂದಿನ ದಿನಗಳಲ್ಲಿ ಹೀಗೆ ವಿಪರೀತ ತಿಳಿದುಕೊಂಡವರು ತಮ್ಮ ಬುದ್ಧಿಮತ್ತೆಯನ್ನು ಬೇರೆ ಪಂಡಿತರೊಂದಿಗೆ ವಾದ ಮಾಡಿ ಗೆದ್ದು , ಸೋತವರಿಂದ ಜಯ ಪತ್ರವನ್ನು ಪಡೆದುಕೊಳ್ಳಬೇಕೆಂಬ ಆಕಾಂಕ್ಷೆ ಇಟ್ಟುಕೊಂಡಿರುತ್ತಾರೆ. ಈ ಮೌಲಿಂಗ ಪುತ್ತ ಸಹ ಇದಕ್ಕೆ ಹೊರತಾಗಿ ರದೆ ಈಗಾಗಲೇ ಅನೇಕ ಕಡೆ ತನ್ನ ಪಾಂಡಿತ್ಯವನ್ನು ಬೇರೆ ಪಂಡಿತರೊಂದಿಗೆ ವಾದ ಮಾಡಿ ಗೆದ್ದು ಜಯ ಪತ್ರವನ್ನು ಸಾಕಷ್ಟು ಪಡೆದಿದ್ದನು.  ಇನ್ನೂ ಒಂದಷ್ಟು ಕಡೆ ಹೊರಡುವ  ಯೋಚನೆಯಲ್ಲಿದ್ದಾಗ, ಕೆಲವರು ಹೇಳಿದರು. ನೀನು ಅಲ್ಲಿ ಇಲ್ಲಿ ಹಲವು ಕಡೆ ಹೋಗುವುದಕ್ಕಿಂತ ನೇರವಾಗಿ ಬುದ್ಧನ ಬಳಿ ಹೋಗಿ ವಾದಮಾಡಿ ನೀನು ಜಯ ಪತ್ರವನ್ನು ಪಡೆಯಬಹುದು. ಅದಕ್ಕಿಂತ ದೊಡ್ಡ ಜಯಪತ್ರ ಬೇರೆ ಯಾವುದೂ ಇರುವುದಿಲ್ಲ ಎಂದರು. ಇದನ್ನು ತಿಳಿದುಕೊಂಡ 'ಮೌ...

ದಿನಕ್ಕೊಂದು ಕಥೆ 1027

*🌻ದಿನಕ್ಕೊಂದು ಕಥೆ🌻*                                      *ಕರ್ಮ ಮತ್ತು ಕರ್ಮ ಯೋಗದ ಕುರಿತು ಉದಾಹರಣೆಯ ಒಂದು ಕಥೆ.* ರಮಣ ಮಹರ್ಷಿಗಳು  ಒಮ್ಮೆ  ಬೆಟ್ಟ ಹತ್ತಿ ಹೊರಟಿರುವಾಗ, ವಿದೇಶಿ ಯಾತ್ರಿಕರೂಬ್ಬರು ಬಂದು ಅವರಿಗೆ ನಮಸ್ಕರಿಸಿದರು. ಹಾಗೆ, ಸ್ವಾಮಿ ನೆನ್ನೆ ನೀವು ಉಪನ್ಯಾಸದಲ್ಲಿ ಕರ್ಮ ಮತ್ತು ಕರ್ಮಯೋಗದ ಕುರಿತಾಗಿ ಹೇಳಿದಿರಿ.  ಇದರ ಅರ್ಥ ಏನು ಎಂದು ಕೇಳಿದರು. ಆಗ ಮಹರ್ಷಿಗಳು ನನ್ನ ಜೊತೆ ಬೆಟ್ಟಹತ್ತಿ ಬನ್ನಿ ನಿಮಗೆ ಗೊತ್ತಾಗುತ್ತದೆ ಎಂದರು. ಸರಿ ಯಾತ್ರಿಕರು ಅವರೊಟ್ಟಿಗೆ ಬೆಟ್ಟ ಹತ್ತುತ್ತಿದ್ದರು. ಸುಮಾರು ಅರ್ಧ-ಮುಕ್ಕಾಲು ದಾರಿ ಹೋಗಿದ್ದರು. ಆಗ ಅಲ್ಲೊಬ್ಬಳು ಅಜ್ಜಿ ಕಟ್ಟಿಗೆ ಆರಿಸಲು ಕಾಡಿಗೆ ಬಂದಿದ್ದಳು. ಅಜ್ಜಿಗೆ  ವಯಸ್ಸಾಗಿದೆ, ಮೈಯಲ್ಲಿ ಶಕ್ತಿ ಇಲ್ಲ. ಹಾಗಾಗಿ ಕಟ್ಟಿಗೆಗಳನ್ನು ಕಡಿಯುವುದಾಗಲಿ, ಮುರಿಯುವುದಾಗಲಿ  ಮಾಡದೆ ಒಣಗಿ  ಬಿದ್ದಿರುವ  ಸಣ್ಣ ಪುರಲೆಯಂಥ  ಕಟ್ಟಿಗೆಗಳ ತುಂಡುಗಳನ್ನೆ ಆರಿಸಿಕೊಂಡು  ಎಲ್ಲವನ್ನು  ಒಟ್ಟಿಗೆ  ಮಾಡಿ, ಬರುವಾಗಲೇ ತಂದಿದ್ದ ಸಣ್ಣ ಸಣ್ಣ ತುಂಡಾದ ಹಗ್ಗಗಳನ್ನು  ಸೇರಿಸಿ ಗಂಟುಕಟ್ಟಿ ಕಟ್ಟಿಗೆಯ ಹೊರೆ ಮಾಡಿದಳು.  ಆ ಕಟ್ಟಿಗೆ ಹೊರೆಯನ್ನು ತಲೆಯ ಮೇಲೆ ಇಟ್ಟುಕೊಳ್ಳಲು ತುಂಬಾ ಪ್ರಯತ್...

ದಿನಕ್ಕೊಂದು ಕಥೆ 1026

*🌻ದಿನಕ್ಕೊಂದು ಕಥೆ🌻*                                       *ಒಂದು ಸ್ಪೂರ್ತಿದಾಯಕ ಕಥೆ* ಹಿಂದೆ  ಬಂಗಾಳ ಪ್ರಾಂತ್ಯದಲ್ಲಿ  ತುಂಬಾ ಬರಗಾಲ ಬಂದಿತು. ಎರಡ್ಮೂರು  ವರ್ಷಗಳಿಂದ ಮಳೆ ಕಡಿಮೆಯಾಗಿ, ಆಹಾರದ ಕೊರತೆಯಾಗಿತ್ತು. ಮತ್ತೆ ಈ ವರ್ಷವೂ ಹಾಗೆ ಆದುದರಿಂದ ಕುಡಿಯುವ ನೀರಿಗೂ ತತ್ವಾರ, ಆಹಾರ ಪದಾರ್ಥಗಳಿಗೂ  ಅದ್ವಾನವಾಗಿ  ಬಡಬಗ್ಗರೀಗಂತು ಒಪ್ಪತ್ತು ಗಂಜಿ ಸಿಗುವುದು ಕಷ್ಟವಾಯಿತು. ದುಡಿಯಲು ಕೆಲಸವಿಲ್ಲ, ಹೊಲಗದ್ದೆಗಳೆಲ್ಲ ಒಣಗಿಹೋಗಿವೆ, ಸ್ವಲ್ಪ ಸ್ಥಿತಿವಂತರು ಹೇಗೋ ಕಾಲ ಹಾಕುತ್ತಿದ್ದಾರೆ.  ಆ ಪ್ರಾಂತ್ಯದ ಒಂದು ಪುಟ್ಟ ಹಳ್ಳಿಯಲ್ಲಿ, ಒಬ್ಬ ತಾಯಿ ಏಳೆಂಟು ವರ್ಷದ  ಮಗ ವಾಸವಾಗಿದ್ದರು. ಮೊದಲೇ ಬಡವರು ಈಗಂತೂ ಕೇಳುವುದೇ ಬೇಡ. ಆ ತಾಯಿ ಕೂಲಿನಾಲಿ ಮಾಡಿ ಮಗನನ್ನು ಸಾಕುತ್ತಿದ್ದಳು. ಜೀವನಕ್ಕೆ ತೊಂದರೆ ಇರಲಿಲ್ಲ. ಆದರೆ ಈ ಬರಗಾಲದಿಂದಾಗಿ ಮನೆಯಲ್ಲಿ ಒಂದು ಕಾಳು , ದವಸ ಧಾನ್ಯಗಳು  ಇಲ್ಲದೆ ಎರಡು ದಿನಗಳಾಗಿದೆ . ತಾಯಿಯಂತೂ ನಿತ್ರಾಣಳಾಗಿ ಮಲಗಿದವಳು  ಎದ್ದಿಲ್ಲ. ಪಾಪ ಸಣ್ಣ ಹುಡುಗ,  ಎರಡು ದಿನಗಳಿಂದ ಹೊರಗೆ ಹೋಗಿ ಅವರಿವರನ್ನು ಕೇಳಿದರೂ  ಒಂದು ಪೈಸೆ  ಸಿಕ್ಕಿಲ್ಲ. ಇವತ್ತು ಒಂದು ದಿನ ನೋಡಿ ಬರುತ್ತೇನೆ, ಮುಂದೆ ಭಗವಂತ  ಇ...

ದಿನಕ್ಕೊಂದು ಕಥೆ 1025

*🌻ದಿನಕ್ಕೊಂದು ಕಥೆ🌻* *ಕಂಠಿಹಾರದ  ಕಳ್ಳ* ಒಮ್ಮೆ ಅಕ್ಬರ್ ತನ್ನ ಪ್ರೀತಿಯ ರಾಣಿಗೆ  ಬೆಲೆಬಾಳುವ ಕಂಠೀಹಾರವನ್ನು ಉಡುಗರೆಯಾಗಿ ತಂದುಕೊಟ್ಟನು. ರಾಣಿಗೆ ಆ ಕಂಠೀ ಹಾರವನ್ನು ನೋಡಿ ಬಹಳ  ಸಂತೋಷವಾಯಿತು. ಪ್ರಭು ನೀವು ಪ್ರೀತಿಯಿಂದ ತಂದುಕೊಟ್ಟ  ಈ ಬೆಲೆಬಾಳುವ ಹಾರವನ್ನು ನಾನು ಬಹಳ ಜೋಪಾನವಾಗಿ ನೋಡಿಕೊಳ್ಳುವೆ. ನಾನು ತುಂಬಾ ಅದೃಷ್ಟವಂತೆ ಎಂದು  ಹೇಳಿದಳು. ರಾಜನು "ನಿನಗೆ ಸಂತೋಷವಾಗುತ್ತದೆ  ಎಂದು  ರಾಜ್ಯದ ಕುಶಲಕರ್ಮಿಗಳಿಂದ  ಈ ಬೆಲೆಬಾಳುವ ಕಂಠಿ ಹಾರವನ್ನು ಮಾಡಿಸಿದೆ.  ನಿನಗೆ ಇಷ್ಟವಾದರೆ ನನಗೆ ಸಂತೋಷ "ಎಂದನು. ಆಗ ರಾಣಿಯು, ಈ ಹಾರ ನನಗೆ ತುಂಬಾ ಇಷ್ಟವಾಗಿದೆ. ನನ್ನ ಜೀವಮಾನ ಪರ್ಯಂತ ಜೋಪಾನವಾಗಿ ಕಾಪಾಡುವೆ ಎಂದಳು. ರಾತ್ರಿ ಸರವನ್ನು ತೆಗೆದು ಮೇಜಿನ ಮೇಲೆ ಇಟ್ಟು ಮಲಗಿದಳು. ಮರುದಿನ ಬೆಳಗ್ಗೆ ರಾಣಿಯು ಕಂಠಿ ಹಾರವನ್ನು ಮತ್ತೊಮ್ಮೆ ನೋಡಬೇಕೆಂದು ತೆಗೆದುಕೊಳ್ಳಲು ಹೋದಳು. ಆದರೆ ಅವಳಿಟ್ಟ ಜಾಗದಲ್ಲಿ ಆ ಕಂಠಿಹಾರ ಇರಲಿಲ್ಲ. ರಾತ್ರಿ ಮಲಗುವಾಗ ಅದನ್ನು ತೆಗೆದು ಟೇಬಲ್ಲಿನ ಮೇಲೆ ಇಟ್ಟಿದ್ದಳು. ಅವಳಿಗೆ ಅದು ಚೆನ್ನಾಗಿ ನೆನಪಿದೆ. ಆದರೆ ಈಗ ಹಾರ ಕಾಣುತ್ತಿಲ್ಲ ಎಲ್ಲಾ ಕಡೆ ಹುಡುಕಿದರೂ ಅದು ಸಿಗಲಿಲ್ಲ. ಆಗ ಅವಳು ತನ್ನ ದಾಸಿಯನ್ನು ಕರೆದು ನಿನ್ನೆ ನನಗೆ ಮಹಾರಾಜರು ತಂದುಕೊಟ್ಟ ಕಂಠಿಹಾರ ಇಲ್ಲೇ ಇಟ್ಟಿದ್ದೆ. ಅದು ಕಳೆದುಹೋಗಿದೆ ನನಗೆ ಹುಡುಕಿಕೊಡು  ಎಂದಳು. ದಾಸಿಯು ಮಹಾರಾಣ...

ದಿನಕ್ಕೊಂದು ಕಥೆ 1024

*🌻ದಿನಕ್ಕೊಂದು ಕಥೆ🌻* *ಮೇರು ಗುಣದ ಆ ವಿದ್ಯಾರ್ಥಿನಿ....................... ಮತ್ತು ಕಲಿಯುತ್ತಲೇ ಇರುವ ನಾನು* ಎರಡು ವಾರಗಳ ಹಿಂದೆ.............. ಕಾಲೇಜಿಗೆ ಯಥಾ ರೀತಿ ಹೋದೆ. ದ್ವಿತೀಯ ಪಿಯುಸಿಯ ಪ್ರವೇಶ ಆಗಲೇ ಆರಂಭಗೊಂಡಿದ್ದವು. ಮಾಸಿದ ಬಟ್ಟೆ ಧರಿಸಿದ ನಮ್ಮ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಅಲ್ಲಿನ ಮೆಟ್ಟಿಲ ಮೇಲೆ ಸುಮ್ಮನೆ ಕುಳಿತಿದ್ದಳು. ನಾನು ಯಥಾರೀತಿ ಸ್ಟಾಫ್ ರೂಂ ಗೆ ಹೋದೆ. ಆ ವಿದ್ಯಾರ್ಥಿನಿ ಎಷ್ಟೊತ್ತಾದರೂ ಹಾಗೇ ಕುಳಿತಿದ್ದುದರಿಂದ ಯಾಕೋ ಅನುಮಾನ ಬಂದು ಕರೆದೆ. “ ಯಾಕಮ್ಮ ಏನು ಸಮಸ್ಯೆ.... ಎಷ್ಟೊತ್ತಾದರೂ ಇಲ್ಲೇ ಕೂತಿದೀಯಲ್ಲ ? ಎಂದೆ. “ ಏನಿಲ್ಲ ಸರ್ “ ಎಂದಳು. “ ಹೇಳು ಹೇಳು ಏನು ಸಮಸ್ಯೆ ? “ ಎಂದೆ. ಮತ್ತೆ ಮತ್ತೆ ಕೇಳಿದರೂ ಅದೇ ಉತ್ತರ. ನಿಧಾನವಾಗಿ ವಿಶ್ವಾಸಕ್ಕೆ ತೆಗೆದುಕೊಂಡು “ ಹೇಳಮ್ಮ “ ಎಂದೆ. “ ಸರ್ ಫೀಸ್ ಕಟ್ಟಲಿಕ್ಕೆ ದುಡ್ಡಿಲ್ಲ ಆದರೆ ಅಡ್ಮಿಶನ್ ಮಾಡಿಸಬೇಕು “ ಎಂದಳು. “ ಈಗ ಎಷ್ಟೂ ಇಲ್ಲವೇ ? “ ಎಂದು ಕೇಳಿದೆ. “ ಇಲ್ಲ ಸರ್ ತಂದಿದೀನಿ ಆದರೆ ಕಡಿಮೆ ಇದೆ “, “ ಎಷ್ಟು ಕಡಿಮೆ ಇದೆ ? ಈಗ ಎಷ್ಟು ಕಟ್ಟೋದಿದೆ ? “ ಎಂದು ಕೇಳಿದೆ. “ ಸರ್ ಇನ್ನೂ ಒಂದು ಸಾವಿರ ರೂ. ಬೇಕು “ ಎಂದಳು. ನಾನು ಸಹಜವಾಗಿಯೇ ಕೇಳಿದೆ “ ನಿನ್ನ ತಂದೆ ಏನು ಕೆಲಸ ಮಾಡ್ತಾರೆ, ಅವರು ದುಡ್ಡು ಕೊಟ್ಟಿಲ್ಲವಾ ? “ ಎಂದು ಕೇಳಿದೊಡನೆ ಅಳಲು ಆರಂಭಿಸಿದಳು. ಅಯ್ಯೋ ಏನು ಸಮಸ್ಯೆಯೋ ಪಾಪ ಎಂದು ಸಮಾಧಾನಿಸಿ ಕೇಳಿದೆ “ ಸಮಾಧಾನ ಮಾ...

ದಿನಕ್ಕೊಂದು ಕಥೆ 1023

*🌻ದಿನಕ್ಕೊಂದು ಕಥೆ🌻* *ಸರ್ವಂ ಶ್ರೀ ಕೃಷ್ಣಾರ್ಪಣಂ.*  ಒಂದು ಸ್ವಾರಸ್ಯವಾದ ಕತೆ.  ಮುಲ್ಲೈಕ್ಕೊಡು ಎಂದು ತಮಿಳುನಾಡಿನ ಒಂದು ಪುಟ್ಟ ಗ್ರಾಮ. ಅಲ್ಲಿ ಶ್ರೀಕೃಷ್ಣ ನ ಒಂದು ಸುಂದರವಾದ ದೇವಾಲಯ. ಅರ್ಚಕರೂ ಅವರಿಗೆ ಸಹಾಯಕನಾಗಿದ್ದ ತುಳಸಿ ಎಂಬ ಯುವಕನೂ ದಿನವೂ ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ಶುಚಿಯಾಗಿ ದೇವಸ್ಥಾನಕ್ಕೆ ಬರುತ್ತಿದ್ದರು. ದೇವಾಲಯದ ಪಕ್ಕದಲ್ಲೇ ಒಂದು ಹೂದೋಟ.  ತೋಟದಿಂದ ಹೂಗಳನ್ನು ತಂದು ದೇವರೀಗೆ ಮಾಲೆಯಾಗಿ ಕಟ್ಟಿಕೊಡುವ ಕೆಲಸ ತುಳಸಿಯದು. ಅವನೋ ಪರಮ ಕೃಷ್ಣ ಭಕ್ತ. ಸದಾ ಕೃಷ್ಣಧ್ಯಾನ ನಿರತ.  ತೋಟದಲ್ಲಿ ಹೂಗಳನ್ನು ಕೀಳುವಾಗಲೂ ಅವನಿಗೆ ಕೃಷ್ಣನದೇ ನೆನಪು. ಕೃಷ್ಣಾರ್ಪಣಂ ಎಂದು ಮನದಲ್ಲಿ ಹೇಳಿಕೊಂಡೇ ಹೂಗಳನ್ನು ಕಿತ್ತು ಪೋಣಿಸಿ ಹಾರ ಮಾಡುವನು ಈ ಭಕ್ತ.   ಹತ್ತು ಹದಿನೈದು ಮಾಲೆಗಳನ್ನು ಸಿದ್ಧ ಪಡಿಸಿದ ಮೇಲೆ ಕೃಷ್ಣನಿಗೆ ಅವನ್ನು ತಾನೇ ಮುಡಿಸಿದಂತೆ ಭಾವಿಸಿಕೊಂಡು ಅದೇ ನೆನಪಿನಲ್ಲೇ ಅರ್ಚಕರ ಬಳಿಗೆ ಅವನ್ನು ತಲುಪಿಸಿಬಿಡುವನು.  ಇತ್ತ ಅರ್ಚಕರು ಅವನಿತ್ತ ಮಾಲೆಗಳನ್ನು ಶ್ರೀ ಕೃಷ್ಣನ ಮಂಗಳ ಮೂರ್ತಿಗೆ ಮುಡಿಸಿ  ಅಲಂಕಾರ ಮಾಡಲು ಹೋದರೆ, ಅದಾಗಲೇ ದೇವರು ಒಂದು ಹೊಸ ಮಾಲೆಯನ್ನು ಧರಿಸಿ ಹುರುಪಿನೊಂದಿಗೆ ಇವರನ್ನು ಎದುರುಗೊಳ್ಳಲು ಸಿದ್ಧನಾಗಿರುತ್ತಿದ್ದ. ಹಳೆಯ ನಿರ್ಮಾಲ್ಯವನ್ನು ತೆಗೆದು ಹೊಸ ಮಾಲೆಯನ್ನು ದೇವರಿಗೆ ಹಾಕಿ ಅಲಂಕಾರ ಮಾಡಬೇಕೆಂದಿದ್ದ ಅರ್ಚಕರಿಗೆ ಒಂದು ಕಡೆ ನಿರಾ...

ದಿನಕ್ಕೊಂದು ಕಥೆ 1022

*🌻ದಿನಕ್ಕೊಂದು ಕಥೆ🌻* ನದಿ ದಂಡೆಯಲ್ಲಿ ಕೆಲವರು ಹಾಯಾಗಿ ವಿಹರಿಸುತ್ತಿದ್ದರು. ಕೆಲವರು ಕೆಮೆರಾ ಕಣ್ಣಿಗೆ ಭಂಗಿಗಳಾಗಿದ್ದರು. ಕೆಲವರು ಬುತ್ತಿ ಬಿಚ್ಚಿ ಕುಳಿತಿದ್ದರು. ಕೆಲವರು ಕಾಲುಗಳನ್ನು  ನೀರಿನಲ್ಲಿ ಇಳಿಬಿಟ್ಟು  ಹರಟುತ್ತಿದ್ದರು. ಆಗ ನದಿಯ ನಡುಮಧ್ಯದಲ್ಲಿ ಇದ್ದಕ್ಕಿದ್ದಂತೆ ದೋಣಿಯೊಂದು ಮಗುಚಿ ಬೀಳುತ್ತದೆ.   ಮುಳುಗುತ್ತಿರುವವರ ಆಕ್ರಂದನ ಹಕ್ಕಿಗಳ ಚಿಲಿಪಿಲಿಯನ್ನು ಹಿನ್ನೆಲೆಗೆ ದೂಕುತ್ತದೆ.  ದಂಡೆಯಲ್ಲಿರುವವರು ಭಯಭೀತರಾಗಿ ಆ ದೃಶ್ಯವನ್ನು ನೋಡತೊಡಗುತ್ತಾರೆ. "ಮಾರಣಾಂತಿಕ ಸುಳಿಗಳಿವೆ ಎಚ್ಚರ"  ಎಂದು ಅಲ್ಲಿ ಬೋರ್ಡು ಹಾಕಲಾಗಿದೆ.  ಅಲ್ಲೀವರೆಗೂ ಸುಳಿಗೆ ಬಲಿಯಾದವರ ಅಂಕಿ ಅಂಶಗಳನ್ನೂ ಹಾಕಲಾಗಿದೆ .ಯಾರೂ ನೀರಿಗೆ ಇಳಿಯಲೊಲ್ಲರು. ಗುಂಪನ್ನು ಸೀಳಿಕೊಂಡು ಒಬ್ಬ ಬಂದೇಬಿಟ್ಟನಲ್ಲ! ಆತ ಭರ್ಜಿಯಂತೆ ನೀರಿಗೆ ಜಿಗಿದಿದ್ದನ್ನು ನೋಡಿ  ಎಲ್ಲರೂ  ಬೆರಗಾದರು. ಆತಂಕ ತಿಳಿಯಾಯಿತು.‌ ತಮ್ಮ ಜವಾಬ್ದಾರಿಯನ್ನು ಅವನ ಹೆಗಲಿಗೆ ಹೊರಿಸಿ ನಿರಾಳದ ನಿಟ್ಟುಸಿರು ಬಿಟ್ಟರು. ಆತ ಒಬ್ಬೊಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸುತ್ತಿದ್ದರೆ, ಹುರಿದುಂಬಿಸುವ ಶಿಳ್ಳೆಗಳ ಮೊರೆತ ನಾಲ್ಕೂ ದಿಕ್ಕುಗಳಲ್ಲಿ ಮಾರ್ದನಿಸತೊಡಗಿತು.‌.. ಆತ ಕಟ್ಟಕಡೆಯ ವ್ಯಕ್ತಿಯನ್ನು ದಂಡೆಗೆ ತಲುಪಿಸಿ ಕುಸಿದು ಕುಳಿತಾಗ ಜೈಕಾರದ ಸದ್ದು ಮುಗಿಲನ್ನು ಕೊರೆದು  ನಭೋಮಂಡಲವನ್ನು ವ್ಯಾಪಿಸಿತು.  ದುರದೃಷ್ಟವಶಾತ್,...

ದಿನಕ್ಕೊಂದು ಕಥೆ 1021

*🌻ದಿನಕ್ಕೊಂದು ಕಥೆ*🌻 *ಬುದ್ಧಿವಂತಿಕೆಗೆ ಬಡತನ ಸಿರಿತನ ಮುಖ್ಯವಲ್ಲ* ಒಂದೂರಿನಲ್ಲಿ ಒಬ್ಬ ರಾಜನಿದ್ದ. ರಾಜನಿಗೆ ಇಬ್ಬರು ಗಂಡು ಮಕ್ಕಳು. ಚಿಕ್ಕ ರಾಜ್ಯವಾಗಿದ್ದು  ಪ್ರಜೆಗಳು ನೆಮ್ಮದಿಯಿಂದ ಬದುಕುತ್ತಿದ್ದರು.ರಾಜನ ಆಸ್ಥಾನದಲ್ಲಿ ಅವನ ತಂದೆಯ ಕಾಲದಿಂದ ಬಂದ ವಿದ್ವಾಂಸರು, ಪಂಡಿತರು, ಗಾಯಕರು, ವಾಕ್ಚಾತುರ್ಯರು, ಕವಿಗಳು, ಹೀಗೆ ಎಲ್ಲಾ ತರಹದ ಕಲಾವಿದರಿಂದ ರಾಜನ ಸಭೆ ಮೇಳೈಸಿತ್ತು. ಆದರೆ ಸಭಾಭವನದಲ್ಲಿ,ಹಳೆಯ ಕಾಲದ, ಜಿಗಟು ಹಿಡಿದಂತೆ,  ಜಿಡ್ಡುಗಟ್ಟಿದ, ಹಾಡಿದ್ದೇ ಹಾಡೋ ಕಿಸುಬಾಯಿ ದಾಸಾ ಎನ್ನುವಂತಹ ಒಬ್ಬ ವಿದ್ವಾಂಸನು  ಪ್ರತಿಬಾರಿಯೂ ಸಭೆ ಶುರುವಾಗುತ್ತಿದ್ದಂತೆ, ಯಾವುದಾದರೂ ಒಂದು ವಿಷಯವನ್ನು ಪ್ರಸ್ತಾಪಿಸಿ, ಅದೇ ವಿಷಯದಲ್ಲೇ, ಇಡೀ ದಿನದ ಸಭೆಯನ್ನು ವ್ಯರ್ಥ ಮಾಡುತ್ತಿದ್ದನು. ರಾಜನಿಗೆ ಆಡುವಂತಿಲ್ಲ, ಅನುಭವಿಸುವಂತಿಲ್ಲ ಎನ್ನುವಂತಾಗಿತ್ತು, ಆದರೆ ಗತ್ಯಂತರವಿಲ್ಲ. ಹಿರಿಯ ತಲೆಮಾರಿನವರು, ಪಂಡಿತನಾದುದರಿಂದ ವಿರೋಧವಾಗಿ ಮಾತನಾಡಲು ಸಾಧ್ಯವಿಲ್ಲ. ಸೂಕ್ಷ್ಮವಾಗಿ ಬೇಕಾದಷ್ಟು ಸಲ ಹೇಳಿ, ಹೇಳಿಸಿ, ಆಗಿದೆ ಆದರೆ ಅದು ಯಾವುದು ಪ್ರಯೋಜನವಾಗದೆ, ರಾಜನೇ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.  ಈ  ಮಧ್ಯೆ ರಾಜನ ಎರಡು ಗಂಡು ಮಕ್ಕಳು, ರಾಜ್ಯದ ಗಡಿಭಾಗದಲ್ಲಿ ಮನರಂಜನೆಗೆಂದು ಹೋಗಿ, ಪಕ್ಕದ ರಾಜ್ಯದ ಮಕ್ಕಳ ಜೊತೆಗೆ ಜಗಳವಾಡಿಕೊಂಡು ಮನೆಗೆ ಬಂದರು. ಈ ಕಾರಣದಿಂದ ಪಕ್ಕದ ರಾಜನು ಈ ರಾಜ್ಯದ ಮೇಲೆ ಯುದ...

ದಿನಕ್ಕೊಂದು ಕಥೆ 1020

*🌻 ದಿನಕ್ಕೊಂದು ಕಥೆ🌻* *ಬಿದಿರಿನ ಬೊಂಬು* ಬಲಿಷ್ಠ ಸಾಮ್ರಾಜ್ಯಕ್ಕೆ  ಒಬ್ಬ ರಾಜನಿದ್ದನು. ವಸಂತಋತು ಬರುತ್ತಿದ್ದಂತೆ  ನಿಗದಿ  ಪಡಿಸಿದ ದಿನಗಳಲ್ಲಿ, ನೆರೆ ಹೊರೆ  ರಾಜ್ಯದವರು,  ಸಣ್ಣಪುಟ್ಟ ಸಂಸ್ಥಾನದ ಸಾಮಂತರಾಜರು, ದೂರದೂರದ ಕಾಡಿನ ರಾಜರುಗಳು, ಕೋಟೆಕೊತ್ತಲಗಳ ಪಾಳೇಗಾರರು,ಇವರುಗಳೆಲ್ಲಾ ಪ್ರತಿವರ್ಷವೂ ಬಲಿಷ್ಠ ಸಾಮ್ರಾಜ್ಯದ ರಾಜನಿಗೆ ಕಪ್ಪ ಕಾಣಿಕೆಗಳನ್ನು ತಂದು ಕೊಡುತ್ತಿದ್ದರು. ಅದರಲ್ಲಿ ಬೆಲೆಬಾಳುವ ಮುತ್ತು ರತ್ನಗಳು, ವಿಶೇಷವಾಗಿ ಬೆಳೆದ ದವಸಧಾನ್ಯಗಳು, ಹಣ್ಣು ಹಂಪಲು,  ಕುಶಲ ಕಲೆಗಾರಿಕೆಯಿಂದ ಮಾಡಿದ  ಅತ್ಯಾಕರ್ಷಕ ವಸ್ತುಗಳು, ಇಂಥ ತರಹೆವಾರಿ ಕೊಡುಗೆಗಳನ್ನು ಪ್ರೀತಿಯಿಂದ ಕೊಡುತ್ತಿದ್ದರು. ರಾಜನು ಸಹ ಬಂದಿರುವ ಅತಿಥಿಗಳಿಗೆ, ಕುಂದು ಕೊರತೆ ಆಗದಂತೆ ಮಾಡಿ, ದೊಡ್ಡ ಸತ್ಕಾರದ ಜೊತೆಗೆ ಮನೋರಂಜನೆ, ಪ್ರತಿಭಾ ಪ್ರದರ್ಶನ ನಡೆಸಿ ಎಲ್ಲರಿಗೂ ನೆನಪಿನ ಕಾಣಿಕೆಗಳನ್ನು ಕೊಟ್ಟು, ಗೌರವದಿಂದ ಕಳಿಸಿ ಕೊಡುತ್ತಿದ್ದನು.ಇದು ಅನೇಕ ವರ್ಷಗಳಿಂದ ನಡೆದು ಬಂದಿದ್ದು, ಯಾವುದೇ ರಾಜ್ಯದಲ್ಲಿ  ವೈಮನಸ್ಸಾಗಲಿ ,ಯುದ್ಧಗಳಾಗಲಿ, ನಡೆಯುತ್ತಿರಲಿಲ್ಲ. ಶ್ರೀಸಾಮಾನ್ಯ ರಿಂದ ಹಿಡಿದು ಶ್ರೀಮಂತರವರೆಗೂ ನೆಮ್ಮದಿಯಾಗಿ ಬದುಕುತ್ತಿದ್ದರು.  ಈ ವರ್ಷವೂ ವಸಂತಋತುವಿನ ಸಂಭ್ರಮಾಚರಣೆ  ಬಂದಿತು. ಮನೋರಂಜನೆಯ ದಿನ ನಿಗದಿಪಡಿಸಿ, ದೂತವಾಹಕರ ಮೂಲಕ ಎಲ್ಲ ಕಡೆಗೂ ತಿಳಿಸಲಾಯಿತು. ರಾಜಧಾನಿ ಸಿಂಗಾರಗೊಂಡ...

ದಿನಕ್ಕೊಂದು ಕಥೆ 1019

*🌻ದಿನಕ್ಕೊಂದು ಕಥೆ🌻* *ಅಹಲ್ಯೆಬಾಯಿ ಹೋಳ್ಕರ್ ಎಂಬ ಅಚ್ಚಳಿಯದ ನಕ್ಷತ್ರ ಇಂದು 226ನೇ ಪುಣ್ಯಸ್ಮರಣೆ* 12ನೇ ವಯಸ್ಸಿನಲ್ಲಿ ವಿವಾಹ, 29ನೇ ವಯಸ್ಸಿನಲ್ಲಿ ವೈಧವ್ಯ, 42ನೇ ವಯಸ್ಸಿನಲ್ಲಿ ರಾಣಿಯಾಗಿ ರಾಜ್ಯಾಧಿಕಾರ ಸ್ವೀಕಾರ , 28 ವರ್ಷಗಳ ಸುದೀರ್ಘ, ಯಶಸ್ವಿ ಆಳ್ವಿಕೆ ಬಳಿಕ 70ನೇ ವಯಸ್ಸಿನಲ್ಲಿ ದೇಹತ್ಯಾಗ.. ದೇಶದ ಮೂಲೆಮೂಲೆಗಳಲ್ಲಿ ಖಿಲ್ಜಿ, ತುಘಲಕ್, ಮೊಘಲರು, ನಿಜಾಮರು ಮತ್ತಿತರ ಆಕ್ರಮಣಕಾರರಿಂದ ನಾಶವಾಗಿದ್ದ ಹಿಂದೂ ದೇವಾಲಯಗಳನ್ನು, ಪುಣ್ಯಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿದ ಮಹಾಸಾಧ್ವಿ. ಒಂದೂ ಯುದ್ದವನ್ನು ಸೋಲದೇ, ರಾಜ್ಯದ ಭೂಭಾಗದಲ್ಲಿ ಒಂದಿಂಚೂ ವಿರೋಧಿಗಳಿಗೆ ಬಿಟ್ಟುಕೊಡದೆ ಮಾಳವ ಸಾಮ್ರಾಜ್ಯ ಕಾಪಾಡಿದ ವೀರನಾರಿ , ವಿಸ್ತರಣೆಯ ಮಹಾತ್ವಾಕಾಂಕ್ಷೆಯಿಂದ ಪರರ ಮೇಲೆ ಆಕ್ರಮಣ ನಡೆಸದ ಸಂಯಮಿ. ಯುದ್ದದಲ್ಲಿ ಸೆರೆಸಿಕ್ಕ ಶತ್ರುಸೈನಿಕರ ಮಡದಿ, ಮಕ್ಕಳಿಗೆ ಪತ್ರಬರೆದು ಯೋಗಕ್ಷೇಮ ವಿಚಾರಿಸುತ್ತಿದ್ದ ಕರುಣಾಳು, ಎಂಥ ಘೋರ ಅಪರಾಧಕ್ಕೂ ಮರಣದಂಡನೆ ಪರಿಹಾರವಲ್ಲ ಎಂದು ಕ್ಷಮಿಸಿಬಿಡುತ್ತಿದ್ದ ದಯಾಳು, ಭಾರತದ ಇತಿಹಾಸದಲ್ಲಿ ಆಗಿಹೋದ ಹತ್ತುಹಲವು ವೀರರಮಣಿಯರ ತಾರಾಕಾಶದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅಚ್ಚಳಿಯದೇ ಹೊಳೆಯುವ ಅರುಂಧತಿ ನಕ್ಷತ್ರ. ಭಾರತ ದೇಶದ ಮಣ್ಣಿನ ಗುಣವೇ ಅಂಥದ್ದು ಈ ಧರ್ಮಭೂಮಿಯನ್ನು ಆಳಿದ ಸಹಸ್ರಾರು ರಾಜವಂಶಗಳ ಅಸಂಖ್ಯಾತ ರಾಜಮಹಾರಾಜರಂತೆ, ಅಪಾರ ಸಂಖ್ಯೆಯ ವೀರನಾರಿಯರೂ ಇತಿಹಾಸವನ್ನು ಶ್ರೀಮಂತಗೊಳಿಸಿದ್ದಾರೆ. ಮಧ್ಯಪ್ರದ...

ದಿನಕ್ಕೊಂದು ಕಥೆ 1018

*🌻ದಿನಕ್ಕೊಂದು ಕಥೆ🌻* *ವೃದ್ಧೆಯ ಜಾಣತನ.* ನ್ಯಾಯ, ನೀತಿ, ದಾನ,ಧರ್ಮಗಳನ್ನು ತಿಳಿದು  ಪಾಲಿಸುತ್ತಿದ್ದ  ಒಬ್ಬ ಮಹಾರಾಜನಿದ್ದನು. ಒಂದು ಸಲ ಒಂದು ದೊಡ್ಡ ಪ್ರದರ್ಶನವನ್ನು ಏರ್ಪಾಟು ಮಾಡಿದ.ಆ  ಪ್ರದರ್ಶನದಲ್ಲಿ ಹಲವಾರು ವಸ್ತುಗಳು ಇದ್ದವು. ಬೆಲೆಬಾಳುವ  ಬಟ್ಟೆಗಳು ಅಪರೂಪದ ಒಡವೆ,ವಸ್ತುಗಳು ಇದ್ದವು. ಪ್ರದರ್ಶನದಲ್ಲಿಟ್ಟ ವಸ್ತುಗಳನ್ನು ನೋಡಲು ಬಂದವರು, ತಮಗೆ ಯಾವ ವಸ್ತು ಬೇಕೋ ಅದನ್ನು  ತೆಗೆದುಕೊಂಡು ಹೋಗಬಹುದಿತ್ತು. ಇದರಿಂದ ಸುತ್ತಮುತ್ತಲ ಹಳ್ಳಿ, ಪಟ್ಟಣ ಹಾಗೂ ನಗರದ ಜನರು ಬಂದರು. ಪ್ರದರ್ಶನ ನೋಡಲು ಬಂದವರೆಲ್ಲ ನೋಡು ನೋಡುತ್ತಾ ತಮಗೆ ಬೇಕಾದ ಬೆಲೆಬಾಳುವ ಬಟ್ಟೆಗಳನ್ನು, ಇನ್ನು ಕೆಲವರು ಒಡವೆಗಳನ್ನು, ಮತ್ತೆ ಕೆಲವರು ಅದ್ಭುತವಾದ ಪುಸ್ತಕಗಳನ್ನು, ಇನ್ನಷ್ಟು ಜನ ಹಣ್ಣುಹಂಪಲುಗಳನ್ನು, ಹೇಗೆ ತಮಗೆ ಬೇಕು ಬೇಕಾದಂತಹ ವಸ್ತುಗಳನ್ನು ತೆಗೆದುಕೊಂಡು ಹೋದರು  ಅಲ್ಲಿಗೆ ಬಂದವರೆಲ್ಲಾ ತಮಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೋದರು. ಆದರೆ ಅಲ್ಲಿಗೆ ಬಂದವರಲ್ಲಿ , ವೃದ್ಧಳಾದ ಮಹಿಳೆಯೂಬ್ಬಳು ಅಲ್ಲಿರುವ ಯಾವ ವಸ್ತುವನ್ನು ಮುಟ್ಟಲಿಲ್ಲ. ಅವಳಿಗೆ ಯಾವುದೂ ತೃಪ್ತಿ ಕಂಡಂತೆ ಅನಿಸಲಿಲ್ಲ. ಇದನ್ನೇ ಗಮನಿಸುತ್ತಿದ್ದ ದಿವಾನನು, ರಾಜನ್, "ಈ ಪಟ್ಟಣದ ಜನರೆಲ್ಲರೂ ಈ ಪ್ರದರ್ಶನವನ್ನು ನೋಡಿ ಆನಂದಿಸಿ ಅದರಲ್ಲಿನ ಎಲ್ಲಾ ವಸ್ತುಗಳನ್ನು ನೋಡಿ ಕಣ್ತುಂಬಿಕೊಂಡು ತಮಗೆ ಬೇಕಾದುದನ್ನು ತೆಗೆದುಕೊಂಡು ಸಂತೋಷಗೊಂಡರು....

ದಿನಕ್ಕೊಂದು ಕಥೆ 1017

*🌻ದಿನಕ್ಕೊಂದು ಕಥೆ🌻*  *ಮಣ್ಣಿನ ಗಣಪ* *ಕೃಪೆ: ಡಾ.ಗವಿಸ್ವಾಮಿ.ಚಾಮರಾಜನಗರ.* ಆತ ಕಾಲೇಜು ಅಧ್ಯಾಪಕ. ಆತನ ಮಗ ನಾಲ್ಕನೇ ತರಗತಿಯಲ್ಲಿ‌ ಕಲಿಯುತ್ತಿದ್ದ.‌ ಅಪ್ಪ-ಮಗ ಆವತ್ತು ಗೌರಿ ಹಬ್ಬಕ್ಕೆ ಹುಟ್ಟೂರಿಗೆ ಬಂದಿದ್ದರು.   ಇಬ್ಬರೂ ಸಂಜೆ ಹೊತ್ತು ಕೆರೆ ಬಯಲಿನಲ್ಲಿ ತಿರುಗಾಡುತ್ತಿದ್ದಾಗ ಹುಡುಗರಿಬ್ರು ಹಸಿ ಮಣ್ಣಿನೊಂದಿಗೆ ಆಟವಾಡುತ್ತಿದ್ದುದು ಕಾಣಿಸಿತು.  ಮಗನಿಗೆ ಅವರೊಂದಿಗೆ ಬೆರೆತು ಆಟವಾಡಲು‌ ಆಸೆಯಾಯಿತು. ಅಪ್ಪನನ್ನು ಬಲವಂತದಿಂದ ಅವರ ಬಳಿಗೆ ಕರೆದುಕೊಂಡು ಹೋದ. ಆ ಹುಡುಗರು ಕೆರೆಯ ಅಂಟು ಮಣ್ಣಿನಲ್ಲಿ ಗಣಪನ ಮೂರ್ತಿಗಳನ್ನು ಮಾಡುವಲ್ಲಿ ತಲ್ಲೀನರಾಗಿದ್ದರು .  ಒಬ್ಬ ಹುಡುಗ ಅಂಗೈ ಮೇಲೆ ಇಲಿ ಬಾಲದಂತಹ ಸೊಂಡಿಲನ್ನು ಹೊಸೆಯುತ್ತಿದ್ದ . ಇನ್ನೊಬ್ಬ ತನ್ನ ಗಣಪನ ಮುಖಕ್ಕೆ ಸಕ್ಕರೆ ಗಾತ್ರದ ಕಲ್ಲುಗಳನ್ನು ಅಂಟಿಸಿ  ಕಣ್ಣು ಗುಡ್ಡೆಗಳನ್ನು ರೂಪಿಸುತ್ತಿದ್ದ . ಆ ಹುಡುಗನಿಗೆ ಅವರಿಬ್ಬರ ಕೈಚಳಕವನ್ನು ಕಂಡು ಅಸೂಯೆಯಾಯಿತು . ಮಣ್ಣಿನುಂಡೆಯಲ್ಲಿ ತಾನೂ ಒಂದು ಗಣಪತಿಯನ್ನು ಮಾಡುವ ಆಸೆಯಾಯಿತು . ಮಣ್ಣಿಗೆ ಕೈ ಹಾಕಿದರೆ ಅಪ್ಪ ಗದರಬಹುದು ಎಂಬ ಭಯವೂ ಇತ್ತು . ಹಾಗಾಗಿ ಆಸೆಗಣ್ಣಿನಿಂದ ಆ ಹುಡುಗರ ಕೈಗಳನ್ನೇ  ಗಮನಿಸತೊಡಗಿದ ‌. ಏತನ್ಮಧ್ಯೆ, ದಾರಿಯಲ್ಲಿ ಹೊಲಕ್ಕೆ ಹೊರಟಿದ್ದವನೊಬ್ಬ ಅಧ್ಯಾಪಕನನ್ನು ಗುರುತಿಸಿ ಮಾತನಾಡಿಸಲು ಬಂದ. ಆತ ಅಧ್ಯಾಪಕನ ಸಹಪಾಠಿಯಾಗಿದ್ದ . ಏಳನೇ ಕ್ಲಾಸ್ ಫೇಲಾದ ಮೇಲೆ ದನಕರು, ತ...