Posts

ದಿನಕ್ಕೊಂದು ಕಥೆ 1044

*🌻ದಿನಕ್ಕೊಂದು ಕಥೆ🌻* *ಜಿಮ್ ಕಾರ್ಬೆಟ್* ಜಿಮ್ ಕಾರ್ಬೆಟ್  ಬೇಟೆಗಾರನಾಗಿದ್ದವರು  ಪರಿಸರ ಪ್ರೇಮಿಯಾಗಿ ರೂಪುಗೊಂಡ ಒಂದು  ರೋಚಕ ವ್ಯಕ್ತಿತ್ವ.   ಇಂದು ಅವರ ಸಂಸ್ಮರಣೆ ದಿನ. ಎಡ್ವರ್ಡ್ ಜೇಮ್ಸ್ ಜಿಮ್  ಕಾರ್ಬೆಟ್ 1875ರ ಜುಲೈ 25ರಂದು ಭಾರತದ ನೈನಿತಾಲ್‍ನಲ್ಲಿ ಜನಿಸಿದರು.   ಐರಿಶ್ ಮನೆತನಕ್ಕೆ ಸೇರಿದ ಕಾರ್ಬೆಟ್ 13 ಮಕ್ಕಳ ಕುಟುಂಬದಲ್ಲಿ 8ನೇ ಮಗುವಾಗಿ ಜನಿಸಿದರು.  ತಂದೆ ವಿಲಿಯಮ್ ಕ್ರಿಸ್ಟಾಫರ್ ಕಾರ್ಬೆಟ್. ತಾಯಿ ಮೇರಿ ಜೇನ್ ಕಾರ್ಬೆಟ್.  1862ರಲ್ಲಿ ಕ್ರಿಸ್ಟಾಫರ್ ಕಾರ್ಬೆಟ್ ಈ ನಗರದ ಪೋಸ್ಟ್ ಮಾಸ್ಟರ್ ಆಗಿ ಇಲ್ಲಿಗೆ ವರ್ಗಾವಣೆಗೊಂಡರು. ತಂದೆ ಕ್ರಿಸ್ಟಾಫರ್ ಕಾರ್ಬೆಟ್ ನಿಧನರಾದಾಗ ಜಿಮ್ ಕಾರ್ಬೆಟ್ ಇನ್ನೂ ನಾಲ್ಕು ವರ್ಷದ ಬಾಲಕ.  ತಂದೆಯ ಪೋಸ್ಟ್ ಮಾಸ್ಟರ್ ಕೆಲಸ ಅವರ ಹಿರಿಯಣ್ಣ ಟಾಮ್ ಕಾರ್ಬೆಟ್ ಅವರಿಗೆ ದೊರಕಿತು.   ಕಾರ್ಬೆಟ್ ಅವರ ಕುಟುಂಬ ಚಳಿಗಾಲದ ಸಮಯದಲ್ಲಿ ನೈನಿತಾಲ್ ಬೆಟ್ಟ ಪ್ರದೇಶದ ಕೆಳಗಣ ಪ್ರದೇಶವಾದ ಕಾಲಾಧುಂಗಿ ಎಂಬಲ್ಲಿ ನೆಲೆಗೊಳ್ಳುತ್ತಿತ್ತು.  ಎಳೆವಯಸ್ಸಿನಲ್ಲೇ ಜಿಮ್ ತನ್ನ ಕಾಲಾಧುಂಗಿಯ ಸುತ್ತಮುತ್ತಲಿನ ಪರಿಸರದಿಂದಾಗಿ ವನ್ಯಜೀವಿ ಮತ್ತು ಅರಣ್ಯಗಳ ಕುರಿತಾದ ಆಕರ್ಷಣೆಗೊಳಗಾದರು. ಚಿಕ್ಕ ವಯಸ್ಸಿನಲ್ಲಿಯೇ ಯಾವ ಪ್ರಾಣಿ, ಯಾವ ಪಕ್ಷಿ ಎಂಬುದನ್ನು ಅವುಗಳ ಧ್ವನಿ ಸಪ್ಪಳಗಳ ಮೂಲಕವೇ ಪತ್ತೆಹಚ್ಚವುದನ್ನು ರೂಢಿಸಿಕೊಂಡಿದ್ದರು....

ದಿನಕ್ಕೊಂದು ಕಥೆ 1043

*🌻ದಿನಕ್ಕೊಂದು ಕಥೆ🌻* *ನಮಸ್ಕಾರದ ಪ್ರಾಮುಖ್ಯತೆ*        ಮಹಾಭಾರತದ ಯುದ್ಧ ನಡೆಯುತ್ತಿತ್ತು -      ಒಂದು ದಿನ, ದುರ್ಯೋಧನನ ವ್ಯಂಗ್ಯ ವಿಡಂಬನೆಯಿಂದ ನೊಂದ  ಭೀಷ್ಮ ಪಿತಾಮಹ ಹೀಗೆ ಘೋಷಿಸುತ್ತಾನೆ .        *"ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"*         ಅವರ ಘೋಷಣೆ ಬಂದ ಕೂಡಲೇ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಯಿತು -     ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದ್ದರಿಂದ ಪ್ರತಿಯೊಬ್ಬರೂ ಕೆಟ್ಟದ್ದರ ಸಾಧ್ಯತೆಯ ಬಗ್ಗೆ ಚಿಂತೆ ಮಾಡಿದರು. ನಂತರ -   ಶ್ರೀ ಕೃಷ್ಣ ದ್ರೌಪದಿ ಗೆ, ಈಗ ನನ್ನೊಂದಿಗೆ ಬಾ - ಶ್ರೀಕೃಷ್ಣನು ದ್ರೌಪದಿಯೊಂದಿಗೆ ನೇರವಾಗಿ ಭೀಷ್ಮ ಪಿತಾಮಹನ ಶಿಬಿರವನ್ನು ತಲಿಪಿದನು -   ಶಿಬಿರದ ಹೊರಗೆ ನಿಂತು ದ್ರೌಪದಿ ಗೆ – *“ಒಳಗೆ ಹೋಗಿ, ಅಜ್ಜನಿಗೆ ನಮಸ್ಕರಿಸು.”* ಎಂದು ಹೇಳಿದರು       ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ -    *"ಅಖಂಡ ಸೌಭಾಗ್ಯವತಿ ಭವ"* ಎಂದು ಆಶೀರ್ವದಿಸಿದ ಅವರು ನಂತರ ದ್ರೌಪದಿಯನ್ನು ಕೇಳಿದರು !!    *"ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ, ಶ್ರೀ ಕೃಷ್ಣ ಅವರು ನಿನ್ನನ್ನು ಇಲ್ಲಿಗೆ  ಕರೆತಂದಿದ್ದಾರಾ"?* ಆಗ ದ್ರೌಪದಿ ಹೀಗೆ ಹೇಳ...

ದಿನಕ್ಕೊಂದು ಕಥೆ 1042

*🌻 ದಿನಕ್ಕೊಂದು ಕಥೆ*🌻                                                *ಬದುಕಿನ ರೀತಿ*  ಒಂದು ಹೆಮ್ಮರ ಇತ್ತು.  ಒಂದು ಸಸಿ, ಗಾಳಿ ಹೊಡೆತಕ್ಕೆ ಏಳುತ್ತ ಬೀಳುತ್ತ ,ಬೆಳೆಯುತ್ತಿತ್ತು. ಒಬ್ಬ ಸಂತನು ಅಲ್ಲಿಗೆ ಬಂದ. ಎಳೆಯ ಸಸಿಯ ಕಷ್ಟವನ್ನು ಕಂಡು ಮನ ಕರಗಿತು. ಅದಕ್ಕೊಂದು ಕೋಲಿನ ಆಶ್ರಯ ಕೊಡಲು ಹೋದ. ಸಸಿ ಹೇಳಿತು “ಸಂತನೇ”, ಈ ಕೋಲಿನ ಆಶ್ರಯ ನನಗೆ ದಯವಿಟ್ಟು ಕೊಡಬೇಡಿ !” ಸಂತ ಕೇಳಿದ – “ಅದೇಕೆ ಬೇಡ ? ಈ ಕೋಲು ಮಳೆ-ಗಾಳಿಯಿಂದ ನಿನ್ನನ್ನು ರಕ್ಷಿಸುತ್ತದೆ.”   ಸಸಿ ಹೇಳಿತು – “ಎಲ್ಲದಕ್ಕೂ ಆಶ್ರಯವನ್ನು ಬಯಸುವವರು ಮನುಷ್ಯರೇ ವಿನಾ ನಾವಲ್ಲ. ಎಲೆ ಉದುರಬೇಕು. ಅವೆಲ್ಲವನ್ನೂ ಎದುರಿಸಿ ನಾವು ಗಟ್ಟಿಗೊಳ್ಳಬೇಕು. ಭವಿಷ್ಯತ್ತಿನಲ್ಲಿ ಹೆಮ್ಮರವಾಗಿ ಬೆಳೆಯಬೇಕು. ಅದು ನಮ್ಮ ಬದುಕಿನ ರೀತಿ!!” ಸಸಿಯ ಮಾತನ್ನು ಕೇಳಿ ಸಂತರಿಗೆ ಸಾನಂದಾಶ್ಚರ್ಯವಾಯಿತು.  ಸಂಗ್ರಹ: ವೀರೇಶ್ ಅರಸಿಕೆರೆ. ************************************* *🌻 ದಿನಕ್ಕೊಂದು ಕಥೆ 🌻* *ಸಾಮಾನ್ಯನೊಬ್ಬ ಅಸಾಮಾನ್ಯನಾಗಿದ್ದು !* ಕೃಪೆ: ವಿಶ್ವೇಶ್ವರ ಭಟ್ I ಸಂಪಾದಕರು  ವಿಶ್ವವಾಣಿ . ನೀವು ಬ್ರಾಂಡನ್ ಸ್ಟಾಂಟನ್ ಬಗ್ಗೆ ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಬ್ಬ ಸಾಮಾನ್ಯ...

ದಿನಕ್ಕೊಂದು ಕಥೆ 1041

ದಿನಕ್ಕೊಂದು ಕಥೆ *ಹೆಣ ಭಾರವಾದ 🐑ಕುರಿಮರಿ*  ಒಂದೂರಿನಲ್ಲಿ ಒಬ್ಬ ಸತೀಶ ಅಂತ ಹುಡುಗ ಇದ್ದ.ಓ!ಆ ಹುಡುಗ ಯಾರು ಅಂತೀರಾ?ನಾನೇ ಕಣ್ರೀ. ನಮ್ಮ ಊರಲ್ಲಿ ಊರಿಂದ ಹೊರಗೆ ಒಂದು ಹಳ್ಳ ಇತ್ತು.ಹಳ್ಳಕ್ಕೆ ದೊಡ್ಡ ಸೇತುವೆ ಇತ್ತು.ಆ ಸೇತುವೆಯತ್ರ ಮಧ್ಯರಾತ್ರೀಲಿ ದೆವ್ವಗಳು ಓಡಾಡ್ತವೆ ಅಂತ ಊರವರೆಲ್ಲ ಮಾತಾಡ್ತಿದ್ರು. ನನಗೆ ಯಾವಾಗಲೂ ಇಂಥ ಕುತೂಹಲಕಾರಿ ಸಂಗತಿಗಳನ್ನು ಭೇದಿಸುವುದು ಅಂದ್ರೆ ಬಹಳ ಇಷ್ಟ. ಒಂದಿನ ನಾನು ಮಧ್ಯರಾತ್ರೀಲಿ ಹೋಗ್ಬೇಕು ಅಂತ ಅನ್ನುಸ್ತು. ಅಲ್ಲೇನಿದೆ?ನೋಡೇ ಬಿಡಬೇಕು ಅಂತ ಒಂದು ದಿನ ಏಕಾಏಕಿ ನಿರ್ಧಾರ ಮಾಡಿ ಒಬ್ಬನೇ ಹೊರಟೇ ಬಿಟ್ಟೆ.ಮಧ್ಯರಾತ್ರಿ ಹನ್ನೆರಡು ಗಂಟೆ ಆಗಿದೆ.ನಿಧಾನವಾಗಿ ಹೊರಟೆ. ಯಾವ ಕಡೆ ನೋಡಿದರೂ ಕತ್ತಲು ಕತ್ತಲು.ಯಾಕೆಂದ್ರೆ ಅವತ್ತು ಅಮವಾಸೆ ಕಣ್ರೀ.ಒಂದು ಸಣ್ಣ ಇಲಿ ಹೋದ್ರು ಭಯ ಆಗ್ತಿತ್ತು.ಒಂದು ಸಣ್ಣ ಎಲೆ ಗಾಳಿಗೆ ಅಲುಗಾಡಿದರೆ ಸರಸರ ಸರಸರ ಅಂತಿತ್ತು.ಎಂದುಾ ಹೆದರದ ನಾನು ಅವತ್ತು ಒಂದು ಸಣ್ಣ ಎಲೆಗೆ ಹೆದರಲೇಬೇಕಾಯ್ತು. ಯಾಕೇಂದ್ರೆ ಯಾವ ಕಡೆ ನೋಡಿದರೂ ಕತ್ತಲೆ.ಮಧ್ಯರಾತ್ರೀಲಿ ಆಗೊಂದು ಈಗೊಂದು ಗೂಬೆ ಕೂಗೋದು ಬಿಟ್ರೆ ನೀರವ ಮೌನ. ಯಾರೂ ಇಲ್ಲ ನೀವೇ ಊಹೆ ಮಾಡ್ಕೊಳ್ರಿ.ಹೇಗಾಗಿರಬೇಕು? ಧೈರ್ಯವಾಗಿ ನಿಧಾನವಾಗಿ ನಡಕೊಂಡು ನಡಕೊಂಡು ಹೋದೆ. ಅಂತೂ ಇಂತೂ ಆ ಸೇತುವೆಯ ಹತ್ರ ತಲುಪಿದೆ.ನೋಡ್ತಿನಿ ಒಂದು ಸಣ್ಣ ಕುರಿಮರಿ ಆ ಕತ್ತಲ ಸರಿರಾತ್ರೀಲಿ ಮೇಯ್ತಾ ಇದೆ. ಅಯ್ಯೋ!ಪಾಪ ಯಾರೋ  ಕುರಿಮರಿಯನ್ನು ಬಿಟ್ಟು...

ದಿನಕ್ಕೊಂದು ಕಥೆ 1040

*🌻 ದಿನಕ್ಕೊಂದು ಕಥೆ🌻* ನೂರು ಜನರಿದ್ದ ಹಾಸ್ಟೆಲ್ ಒಂದರಲ್ಲಿ ದಿನವೂ ಬೆಳಿಗ್ಗೆ ಉಪ್ಪಿಟ್ಟಿನ ಸಮಾರಾಧನೆ ನಡೆಯುತ್ತಿತ್ತು. ಒಂದುದಿನ ತಿಂಡಿಯ ಕುರಿತು ಅಸಮಧಾಮ ಭುಗಿಲೆದ್ದಿತು. ಉಪ್ಪಿಟ್ಟು ಪ್ರಿಯರಾಗಿದ್ದ 20 ಜನ, ದಿನವೂ ಉಪ್ಪಿಟ್ಟೇ ಇರಲಿ ಅಂತಾ ಬೇಡಿಕೆಯಿಟ್ಟರೆ, ಉಳಿದ 80 ಜನ ದಿನದಿನವೂ ಬೇರೆ ತಿಂಡಿ ಬೇಕು ಅಂತಾ ಕೂತರು. ದಿನದಿವೂ ಬೇರೆ ಕೊಡಲಾಗುವುದಿಲ್ಲ. ತಿಂಗಳಿಗೊಂದು ಮಾಡಬಹುದು ಅಂತಾ ವಾರ್ಡನ್ ಹೇಳಿದರು. ಉಪ್ಪಿಟ್ಟಿನವರು ಆಗಲೂ “ಬೇಡ ಬೇಡ ಉಪ್ಪಿಟ್ಟೇ ಇರಲಿ” ಅಂತಾ ಹಠಹಿಡಿದು ಕೂತಿದ್ದರು. ಉಳಿದವರು “ಅದೆಲ್ಲಾ ಆಗಲ್ಲ. ಬೇರೆ ತಿಂಡಿ ಬೇಕು ಅಂತಾ ರಚ್ಚೆ ಹಿಡಿದರು. ವಾರ್ಡನ್ “ನಾವು ಸಂವಿಧಾನಯುಕ್ತ ಭವ್ಯ ಭಾರತದ ಪ್ರಜಾಪ್ರಭುತ್ವದ ಪ್ರಜೆಗಳು. ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ವೋಟಿಂಗ್ ಮಾಡಿಸಿ ಮೆಜಾರಿಟಿ ನೋಡೋಣ ಎಂದರು. ಇಪ್ಪತ್ತುಜನ “ಉಪ್ಪಿಟ್ಟಿರುವಾಗ ಇವೆಲ್ಲಾ ಯಾಕೆ?” ಅಂತಾ ಕುಸುಗುಟ್ಟಿದರು. ಉಳಿದ 80 ಜನ “ವೋಟಿಂಗ್ ಮಾಡಿ ಪ್ರಜಾಸತ್ತಾತ್ಮಕವಾಗಿ ನಿಮಗೆ ಬುದ್ಧಿ ಕಲಿಸ್ತೀವಿ” ಅಂತಾ ಬುಸುಗುಟ್ಟಿದರು. ಮರುದಿನ ಮತದಾನ. ಉಪ್ಪಿಟ್ಟುಪ್ರಿಯ ಇಪ್ಪತ್ತು ಜನರು ಮೊದಲೇ ನಿರ್ಧರಿಸಿದಂತೆ ಉಪ್ಪಿಟ್ಟಿಗೇ ಮತ ಹಾಕಿದರು. ಉಳಿದ ಎಂಬತ್ತು ಜನರ ಮತಗಳು ಹೀಗಿದ್ದವು: ಮಸಾಲೆ ದೋಸೆ - 18 ಜನ ಆಲೂ ಪರಾಠ - 16 ಜನ ಪೂರಿ ಸಾಗು - 14 ಜನ ಮ್ಯಾಗಿ - 12 ಜನ ಇಡ್ಲಿ ಸಾಂಬಾರ್ - 10 ಜನ ಟೋಸ್ಟ್ ಆಮ್ಲೆಟ್ - 10 ಜನ ಬಹುಮತ ಉ...

ದಿನಕ್ಕೊಂದು ಕಥೆ 1039

ದಿನಕ್ಕೊಂದು ಕಥೆ 🙏🏼🙏🏼ಸಗಣಿ ಮತ್ತು ದೂರ್ವೆಯಲ್ಲಿ ಗಣೇಶನ ಶ್ರೇಷ್ಠತೆ  🙏🏼🙏🏼 ಶನಿ ಮಹಾರಾಜನ ಮಹಿಮೆ  ಎಲ್ಲರಿಗೂ ಗೊತ್ತಿದೆ,  ಶನಿಮಹಾತ್ಮ ಸಾಕ್ಷಾತ್ ಪರಮೇಶ್ವರನನ್ನೆ  ಬಿಟ್ಟಿಲ್ಲ. ಅಂದಮೇಲೆ  ಮನುಷ್ಯನನ್ನು ಬಿಟ್ಟಾನೆಯೇ, ಇಂತಹ ಶನಿದೇವನಿಗೆ, ದೇವಾನು ದೇವತೆಗಳು  ಹೆದರಿ ನಡುಗುತ್ತಾರೆ. ಆದರೆ ಆಂಜನೇಯ ಮತ್ತು ಗಣಪತಿ ಮಾತ್ರ ಶನಿದೇವರಿಗೆ ಹೆದರುವುದಿಲ್ಲ. ಶನಿ ಪರಿಹಾರಕ್ಕೆ ಆಂಜನೇಯ ಹಾಗೂ  ಗಣಪತಿ ಪೂಜೆ ಮಾಡಿದರೆ ಪರಿಹಾರ ಎಂದು ಹೇಳುತ್ತಾರೆ. ಶನಿ ದೋಷ ನಿವಾರಣೆಗೆ ಆಂಜನೇಯನ ಗುಡಿಗೆ ಜನ ಹೋಗುವುದನ್ನು ನೋಡಿರುತ್ತೇವೆ, ಹಾಗೆಯೇ  ಪ್ರಥಮ ಪೂಜಕ,  ಆದಿ ದೈವ, ವಿಘ್ನನಿವಾರಕ, ವಿದ್ಯಾಗಣಪತಿ, ಹೀಗೆ ನಾನಾ ಹೆಸರುಗಳಿಂದ ಕರೆಯುವ  ಗಣೇಶನನ್ನು ಪೂಜಿಸಿದರೆ ಶನಿ ದೋಷ  ನಿವಾರಣೆಯಾಗುತ್ತದೆ ಎಂಬುದರ ಕುರಿತಾಗಿ ಒಂದು ಕಥೆಯಿದೆ.  ಒಂದು ದಿನ ಗಣೇಶ  ನಿಧಾನವಾಗಿ ವಾಯು ವಿಹಾರ  ಹೋಗ್ತಾ ಇದ್ದ. ಹೀಗೆ ಹೋಗ್ತಾ ಇರುವಾಗ ಶನಿದೇವ ಎದುರಿಗೆ  ಬರುತ್ತಿದ್ದ . ಗಿಡ್ಡ ಬುಡ್ಡಕ್ಕೆ ,ಮುದ್ದು ಮುದ್ದಾಗಿರುವ   ಗಣೇಶನನ್ನ ನೋಡಿ  ಶನಿಗೆ ಕೀಟಲೆ ಮಾಡಬೇಕೆನಿಸಿತು.  ಹೀಗೆ ಮನಸ್ಸಿನಲ್ಲಿ ಅಂದುಕೊಂಡ ಶನಿ ಗಣೇಶನಿಗೆ ಎದುರಾಗೆ ಹೊರಟ, ಗಣೇಶ ತನ್ನ ಕಡೆಗೆ  ಶನಿ ಬರುವುದನ್ನು ನೋಡಿದ, ಶನಿಗೆ ಸ್ವಲ್ಪ ಆಟ ಆಡಿಸಬೇಕು ಎಂದು ಅನಿಸಿತು....

ದಿನಕ್ಕೊಂದು ಕಥೆ 1038

ದಿನಕ್ಕೊಂದು ಕಥೆ ಬಿಡಿ ಅತ್ತೆ ಇಲ್ಲೇ ಚೆನ್ನಾಗಿದೆ ಶಿವಪುರ ಎಂಬ ಊರಿನಲ್ಲಿ ಪಾರ್ವತಮ್ಮ ಎಂಬ ವಿಧವೆ ಇದ್ದಳು. ಅವಳಿಗೆ ಒಬ್ಬನೇ ಮಗ ರಮೇಶ, ರಮೇಶನಿಗೆ ತಾಯಿಯ ಮಾತು ವೇದವಾಕ್ಯ ಜೊತೆಗೆ ಸ್ವಲ್ಪ ಪೆದ್ದು ಕೂಡ. ಆತನು ಪ್ರಾಪ್ತವಯಸ್ಸಿಗೆ ಬಂದಾಗ ಪಾರ್ವತಮ್ಮ ಮಗನಿಗೆ ಮದುವೆ ಮಾಡಲು ಯೋಚಿಸುತ್ತಾಳೆ. ಆದರೆ ಅವಳ ಸಂಬಂಧಿಕರಾರು ಹೆಣ್ಣು ಕೊಡಲು ಮುಂದೆ ಬರುವುದಿಲ್ಲ. ಹಾಗೂ ಹೀಗೂ ಪಕ್ಕದ ಊರಿನಲ್ಲಿ ಒಂದು ಹೊಸ ಸಂಬಂಧ ನೋಡಿ ಮಗನಿಗೆ ಮದುವೆ ಮಾಡುತ್ತಾಳೆ. ಮದುವೆ ಆದ ಸ್ವಲ್ಪ ದಿನದ ಮೇಲೆ ಮಗ ಅತ್ತೆ ಮನೆಗೆ ಮೊದಲನೆ ಸಾರಿ ಹೋಗಬೇಕಾಗುತ್ತೆ. ಅವನು ಸ್ವಲ್ಪ ದಡ್ಡ ಮತ್ತು ಮುಂಗೋಪಿಯಾದ್ದರಿಂದ ತಾಯಿ ಮಗನಿಗೆ ನೋಡು ರಮೇಶ ನೀನು ಮೊದಲನೆ ಸಾರಿ ಅತ್ತೆ ಮನೆಗೆ ಹೋಗುತ್ತಿರುವುದು. ಅಲ್ಲಿಗೆ ಹೋದ ಮೇಲೆ ಅದು ಚೆನ್ನಾಗಿಲ್ಲ ಇದು ಚೆನ್ನಾಗಿಲ್ಲ ಎಂದು ಹೇಳಬೇಡ. ಅದು ಏನೇ ಆಗಲಿ ಹೇಗೇ ಇರಲಿ ಮೊದಲನೆ ಸಾರಿ ಯಾದ್ದರಿಂದ ತಾಳ್ಮೆಯಿಂದ ಚೆನ್ನಾಗಿದೆ ಎಂದು ಹೇಳು. ಯಾವುದಕ್ಕೂ ಕೋಪಿಸಿಕೊಳ್ಳಬೇಡ ಎಂದು ಬುದ್ಧಿ ಹೇಳಿ ಕಳುಹಿಸಿಕೊಡುತ್ತಾಳೆ. ಮಗ ಸಂಜೆ ಹೊತ್ತಿಗೆ ಅತ್ತೆಯ ಮನೆಗೆ ಹೋಗುತ್ತಾನೆ. ಮಬ್ಬು ಕತ್ತಲು. ಅತ್ತೆಯ ಮನೆಯಲ್ಲಿ ಕೈಕಾಲು ತೊಳೆಯಲು ಮನೆಯ ಹೊರಗಡೆ ಜಾಗ ಇರುತ್ತೆ. ಅದರ ಪಕ್ಕದಲ್ಲೇ ಬಚ್ಚಲು ನೀರು ತುಂಬಲು ಒಂದು ಗುಂಡಿಯನ್ನು ಮಾಡಿರುತ್ತಾರೆ, ಅಳಿಯನಿಗೆ ಕೈ ಕಾಲು ತೊಳೆಯಲು ಅತ್ತೆ ಕೂಗುತ್ತಾಳೆ. ಅಳಿಯ ಬಂದು ಕೈ ಕಾಲು ತೊಳೆಯಲು ಕಲ್ಲಿನ ಮೇಲೆ ನಿಲ್ಲುತ...

ದಿನಕ್ಕೊಂದು ಕಥೆ 1037

ಒಬ್ಬ ಹುಡುಗನಿದ್ದ. ಶಾಲೆಗೆ ಹೋಗುವ ವಿಷಯದಲ್ಲಿ ತುಂಬಾ ಸೋಮಾರಿ. ಶಾಲೆಯ ಶಿಕ್ಷಕರ ಪ್ರಕಾರ useless fellow. ಮನೆಯಲ್ಲಿ ಮಲಗುವುದು, ಊಟ ಮಾಡುವುದು, ಊರು ಸುತ್ತುವುದು ಇದೇ ಅವನ ಕೆಲಸ. ಊರು ಸುತ್ತಲು ಹೋದಾಗ ಜೀರುಂಡೆಗಳನ್ನು ಹಿಡಿಯುವುದು, ವಿವಿಧ ರೀತಿಯ ಕಲ್ಲುಗಳು, ಮೂಳೆಗಳನ್ನು ಸಂಗ್ರಹಿಸುವುದು ಅವುಗಳನ್ನು ವರ್ಗೀಕರಿಸುವುದು ಇವನ ಹವ್ಯಾಸ. ಹಾಳು ಹುಡುಗನಿಂದಾಗಿ ಮನೆಯೊಂದು ಮ್ಯೂಸಿಯಂ ಆಗಿ ಬಿಟ್ಟಿತ್ತು. ಅಮ್ಮನಿಗೆ ಎತ್ತಿ ಹೊರಗೆಸೆದು ಮನೆಯನ್ನು ಸ್ವಚ್ಛಗೊಳಿಸುವುದೇ ಒಂದು ಕೆಲಸ. ಅಪ್ಪನಿಗೆ ಮಗನನ್ನು ವೈದ್ಯನಾಗಿಸಬೇಕೆಂಬ ಬಯಕೆ. ಅಂತೂ ಇಂತೂ ಮಗನಿಗೊಂದು ವೈದ್ಯಕೀಯ ಸೀಟು ಗಿಟ್ಟಿಸಿಕೊಂಡೇ ಬಿಟ್ಟ. ಮಗನಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಬೇಕೆಂದಾಗ ಕಾಲೇಜಿಗೆ ಹೋಗುವುದು ಬೇಜಾರಾದಾಗ ಅದೇ ಕಲ್ಲು, ಮೂಳೆ, ಜೀರುಂಡೆಗಳು. ಹಾಗೂ ಹೀಗೂ ಒಂದೂವರೆ ವರ್ಷ ಮಣ್ಣು ಹೊತ್ತು ಕಾಲೇಜು ಬಿಟ್ಟ. ಅಮ್ಮ ಅಪ್ಪ ಇಬ್ಬರೂ ನಿರಾಶರಾದರು. ಅದೇ ಸಮಯದಲ್ಲಿ ಲಂಡನ್ ನ ಸೌತ್ಹಾಂಪ್ಟನ್ ನಿಂದ ಎಚ್ ಎಂ ಎಸ್ ಬೀಗಲ್ ಎಂಬ ಹಡಗೊಂದು ಪ್ರಪಂಚ ಪರ್ಯಟನೆಗೆ ಹೊರಡಲಿದೆ ಎಂಬ ಪ್ರಕಟಣೆ ಹೊರಬಿತ್ತು. ಈತ ಹೆಸರು ನೋಂದಾಯಿಸಿದ. ಆ ಹಡಗಿನಲ್ಲಿ ಪ್ರಕೃತಿ ತಜ್ಞನಾಗಿ ಆಯ್ಕೆಯಾದ ಅಪ್ಪ ಅಮ್ಮನಿಗೂ ಅದೇ ಬೇಕಿತ್ತು ಹೋಯಿತು ಮಾರಿ ಎಂದು ನಿಟ್ಟುಸಿರು ಬಿಟ್ಟರು. ಹಡಗು ದಶಂಬರ 27 1831 ರಂದು ಬಂದರನ್ನು ಬಿಟ್ಟಿತು. ಅದರೊಂದಿಗೆ 22 ರ ಯುವಕ ಕೂಡಾ. ಸುತ್ತಲೂ ಘೋರ ಕಡಲು. ತಲೆ ಸು...

ದಿನಕ್ಕೊಂದು ಕಥೆ 1036

*🌻ದಿನಕ್ಕೊಂದು ಕಥೆ🌻* *ನಂಬಿಕೆಯೇ ದೇವರು* ಭಕ್ತರಿಗೆ  ದೇವರ ಮೇಲೆ ಇದ್ದ ನಂಬಿಕೆ ಪ್ರಾಮಾಣಿಕವಾಗಿದ್ದರೆ, ಭಕ್ತರ ಬೇಡಿಕೆ ನೆರವೇರಿಸಲು  ಹೇಗೆ ಬೇಕೋ ಹಾಗೆ ಭಗವಂತ ಒಲಿಯುತ್ತಾನೆ. ಎಲ್ಲರಿಗೂ ತಿಳಿದಿರುವ ಹಾಗೆ  ಕೃಷ್ಣನಂತೂ, ಭಕ್ತಿಯನ್ನು ಪರೀಕ್ಷಿಸುವ ಸಲುವಾಗಿ  ಭಕ್ತರಿಗೆ ನಾನಾ ಪರೀಕ್ಷೆಗಳನ್ನು ಒಡ್ಡುತ್ತಾನೆ  ಮತ್ತು  ನಾನಾ ರೂಪಗಳಲ್ಲಿ ಬಂದು ಸಲಹುತ್ತಾನೆ.  ಕೃಷ್ಣನ ಮಹಿಮೆಯನ್ನು ಎಷ್ಟು ಹೇಳಿದರೂ ಸಾಲದು. ಹಿಂದೆ ಒಬ್ಬ ರಾಜನಿದ್ದ. ಕೃಷ್ಣನ ಪರಮ ಭಕ್ತ. ರಾಜ್ಯದಲ್ಲಿ ದೊಡ್ಡದಾದ ಕೃಷ್ಣನ ದೇವಾಲಯವನ್ನು  ನಿರ್ಮಿಸುತ್ತಾನೆ.  ಸುಂದರವಾದ ಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ, ಪೂಜೆಗಾಗಿ  ಅರ್ಚಕರನ್ನು  ನೇಮಿಸುತ್ತಾನೆ.  ರಾಜನು ನಿತ್ಯವೂ ಸುಂದರವಾದ  ಹೂಮಾಲೆ ತಂದು ಕೃಷ್ಣನಿಗೆ ಅರ್ಪಿಸುತ್ತಿದ್ದ.  ಅರ್ಚಕರು ಹೂ ಮಾಲೆಯನ್ನು  ಕೃಷ್ಣನಿಗೆ ಹಾಕಿ ಪೂಜಿಸಿ ಮಂಗಳಾರತಿ ಮಾಡಿ ರಾಜನಿಗೆ ಮಂಗಳಾರತಿ ಕೊಟ್ಟು, ಪ್ರಸಾದ ಕೊಡುವಾಗ  ಭಗವಂತನ  ಅನುಗ್ರಹ ಎಂದು ಆಶೀರ್ವದಿಸಿ  ಅದೇ  ಹೂ ಮಾಲೆಯನ್ನು  ಪ್ರತಿದಿನವೂ ರಾಜನಿಗೆ  ಹಾಕುತ್ತಿದ್ದರು.  ರಾಜನು  ನೇಮಕ ಮಾಡಿದ  ಅರ್ಚಕರು  ಶ್ರದ್ಧಾ, ಭಕ್ತಿಯಿಂದ ಕೃಷ್ಣನಿಗೆ ಪೂಜೆ ಮಾಡುತ್ತಿದ್ದರು. ಭಗವಂತನ ಪೂಜೆ ಮಾಡುವ ಕೈಂಕರ್ಯ  ಸಿಕ್ಕಿ...

ದಿನಕ್ಕೊಂದು ಕಥೆ 1035

*🌻ದಿನಕ್ಕೊಂದು ಕಥೆ🌻* *ವಿದ್ಯಾ ದದಾತಿ ವಿನಯಂ* ಚಂದ್ರಗುಪ್ತ ನೆಂಬ ರಾಜನು ವಿದ್ಯಾಕಾಶಿಯನ್ನು ಆಳುತ್ತಿದ್ದನು. ಚತುರನು, ವಿದ್ಯಾವಂತನು, ಬುದ್ಧಿವಂತನು, ಸಮರ್ಥ ಆಡಳಿತಗಾರನಾಗಿದ್ದನು. ರಾಜ್ಯವು ಸುಭಿಕ್ಷವಾಗಿತ್ತು. ರಾಜನಿಗೆ ಅಧ್ಯಾತ್ಮದತ್ತ ಒಲವು ಮೂಡಿತು. ಆಧ್ಯಾತ್ಮವನ್ನು ಕಲಿತು ತಿಳಿದುಕೊಳ್ಳಬೇಕೆಂಬ ಹಂಬಲದಿಂದ, ಆತನು ತನ್ನ ಮಂತ್ರಿಯನ್ನು ಕರೆದು ಮಹಾಮಂತ್ರಿಗಳೆ ನಾನು ಆಧ್ಯಾತ್ಮವನ್ನು ಕಲಿತುಕೊಳ್ಳಬೇಕು ನಮ್ಮ ರಾಜ್ಯದಲ್ಲಿರುವ ಎಲ್ಲಾ ಗುರುಕುಲಗಳನ್ನು ವಿಚಾರಿಸಿ, ಶ್ರೇಷ್ಠವಾದ ಆಧ್ಯಾತ್ಮ ಅನುಭವವಿರುವ ಗುರುವನ್ನು ಗುರುತಿಸಿ, ಪ್ರತಿದಿನ ಅರಮನೆಗೆ ಬಂದು ನನಗೆ ಆಧ್ಯಾತ್ಮ ಕಲಿಸಿಕೊಡುವಂತೆ ತಿಳಿಸಿ ಎಂದನು .  ಸ್ವಲ್ಪ ದೂರದ ಕಾಡಿನಲ್ಲಿ 'ಸುಗುಣಾನಂದ' ಎಂಬ ಅನುಭವಿ ಆಧ್ಯಾತ್ಮ ಗುರುಗಳು ವಾಸಿಸುತ್ತಿದ್ದಾರೆ. ಅವರಿಗೆ ದೈವ ಸಾಕ್ಷಾತ್ಕಾರವಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅವರು ಅರಮನೆಗೆ ಬರಲು ಒಪ್ಪುವರೇ ಎಂಬ ಅನುಮಾನ ನನಗೆ ಇದೆ ಎಂದು ಮಂತ್ರಿಯು ಹೇಳಿದನು. ಅದಕ್ಕೆ ರಾಜನು ಮಂತ್ರಿಗಳೆ, ನೀವು ರಥವನ್ನು ತೆಗೆದುಕೊಂಡು ಹೋಗಿ ಗೌರವಾದರದಿಂದ ಮಾತನಾಡಿಸಿ ಅವರನ್ನು ಹೇಗಾದರೂ ಮಾಡಿ ಅರಮನೆಗೆ ಕರೆತನ್ನಿ ಎಂದನು.  ರಾಜನ ಮಾತಿನಂತೆ ಮಂತ್ರಿ ರಥದಲ್ಲಿ ಹೊರಟು ಗುರುಗಳ ಆಶ್ರಮಕ್ಕೆ ಬಂದನು. ಗುರುಗಳನ್ನು ಕಂಡು ವಿನಯದಿಂದ ನಮಸ್ಕರಿಸಿ, ಸ್ವಾಮಿ ನಾನು ಅರಮನೆಯಿಂದ ಬಂದಿದ್ದೇನೆ. ನಮ್ಮ ರಾಜರ...

ದಿನಕ್ಕೊಂದು ಕಥೆ 1034

*🌻ದಿನಕ್ಕೊಂದು ಕಥೆ🌻* *ಹವ್ಯಾಸ ಬದಲಿಸಿದರೆ ಹಣೆಬರಹ ಬದಲಾದೀತು!* ಇದು ಎರಡು ಓಟೆಗಳ ಕಥೆ. ಒಮ್ಮೆ ಒಬ್ಬ ಗೃಹಿಣಿ ಎರಡು ಮಾವಿನ ಹಣ್ಣಿನ ಓಟೆಗಳನ್ನು ತಿಪ್ಪೆಯ ಮೇಲೆ ಬಿಸಾಡಿದಳು. ಒಂದು ಓಟೆ ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯ ಗೊಬ್ಬರ ಪೌಷ್ಟಿಕಾಂಶ ಕೊಡುತ್ತದೆ, ಸಸಿಯಾಗುತ್ತೇನೆ, ನಂತರ ಸಣ್ಣ ಗಿಡವಾಗುತ್ತೇನೆ, ಕಾಲಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರ ಮಾವಿನ ಹಣ್ಣನ್ನು ಕೋಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆ ಎಂದು ಯೋಚಿಸಿ ಅದರಂತೆಯೇ ಬೆಳೆಯಿತು, ಬದುಕಿತು. ಅದರ ಪಕ್ಕದಲ್ಲೇ ಇದ್ದ ಮತ್ತೊಂದು ಓಟೆ ನನ್ನ ಬೇರುಗಳಿಗೆ ಅಂತರ್ಜಲ ಸಿಕ್ಕದಿದ್ದರೇ? ಪೌಷ್ಟಿಕಾಂಶ ಸಿಗದಿದ್ದರೇ? ಗಿಡವಾದಾಗ ಕುರಿ ಮೇಕೆಗಳು ಬಂದು ತಿಂದುಬಿಟ್ಟರೇ? ಮರವಾಗಿ ಹಣ್ಣು ಬಿಡುವಾಗ, ಜನ ಹಣ್ಣು ಉದುರಿಸಲು ಕಲ್ಲು ಹೊಡೆದರೆ ನನಗೆ ನೋವಾಗುದಿಲ್ಲವೇ? ಎಂದೆಲ್ಲ ಯೋಚಿಸಿ ಬೇರನ್ನು ಕೆಳಗೆ ಬಿಡದೆ, ಮೇಲೆ ಸಸಿಯಾಗಿ ಬೆಳೆಯದೆ ಹಾಗೆಯೇ ಉಳಿಯಿತು. ಕೆಲವೇ ದಿನಗಳಲ್ಲಿ ತಿಪ್ಪೆಯಲ್ಲಿನ ಗೊಬ್ಬರದೊಂದಿಗೆ ಗೊಬ್ಬರವಾಗಿ ಬೆರೆತು ಹಾಳಾಗಿ ಹೋಯಿತು. ಮೊದಲನೆಯ ಓಟೆಯ ಮನೋಭಾವ ಸಕಾರಾತ್ಮಕ. ಎರಡನೆಯ ಓಟೆಯ ಮನೋಭಾವ ನಕಾರಾತ್ಮಕ. ಸಕಾರಾತ್ಮಕ ವಾಗಿದ್ದ ಓಟೆ ಬೆಳೆದು ದಶಕಗಳ ಕಾಲ ಉಳಿಯಿತು. ಆದರೆ ನಕಾರಾತ್ಮಕವಾಗಿದ್ದ ಓಟೆ ಒಂದೆರಡು ವಾರಗಳಲ್ಲೇ ಮರೆಯಾಗಿ ಹೋಯಿತು. ನೀಜ ಜೀವನದ...

ದಿನಕ್ಕೊಂದು ಕಥೆ 1033

*🌻ದಿನಕ್ಕೊಂದು ಕಥೆ🌻* *ಬಡತನ ಸತ್ತು ಹೋದಾಗ* ಒಂದು ಬಡ ಸಂಸಾರವಿತ್ತು. ಆ ಸಂಸಾರದ ಯಜಮಾನ ಒಂದು ಖಾಸಗಿ ಕಂಪನಿಯ ಉದ್ಯೋಗಿಯಾದರೆ ಪತ್ನಿ ಗೃಹಿಣಿ. ಅವರಿಗೆ ಇಬ್ಬರು ಮುದ್ದು ಮಕ್ಕಳು. ಆದರೆ ಯಜಮಾನನಿಗೆ ಮಾತ್ರ ಕುಡಿತದ ಚಟ. ಸರಿಯಾಗಿ ಕೆಲಸಕ್ಕೆ ಹೋಗದೆ, ದಿನಾ ಕುಡಿದು ಮನೆಗೆ ಬಂದು ಲೇ ಲೇ ಹಾಕುತಿದ್ದ. ಆತನ ತಿಂಗಳ ಸಂಬಳ ಅವನ ಕುಡಿತಕ್ಕೆ ಸಾಕಾಗುತ್ತಿರಲಿಲ್ಲ. ಮನೆ ಗೃಹಿಣಿ ಕೆಲಸಕ್ಕೆ ಸೇರಿದಾಗ, ಅದಕ್ಕೂ ಅನುಮಾನ ಪಟ್ಟು ಬೈದು ನಿಂದನೆ ಮಾಡಿ ಕೆಲಸ ಬಿಡಿಸಿದ. ಮನೆ ಬಾಡಿಗೆ, ಮಕ್ಕಳ ವಿದ್ಯಬ್ಯಾಸ, ಮನೆ ಖರ್ಚು ಎಂಬಂತೆ, ಯಾವುದನ್ನೂ ನಿಭಾಯಿಸಲು ಸಾಧ್ಯವಾಗದೆ ಕೈ ತುಂಬಾ ಸಾಲ ಮಾಡಿಕೊಂಡಿದ್ದ. ಅದರ ಪರಿಣಾಮ, ಅತೀವವಾದ ಬಡತನ ಅವನ ಸಂಸಾರವನ್ನು ಕಾಡುತ್ತಿತ್ತು. ಕೈಯಲ್ಲಿ ಹಣವಿಲ್ಲ. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುವ ಪರಿಸ್ಥಿತಿ ಅವರದ್ದು. ಅಂದರೆ, ಆತನ ಈ ಕುಡಿತದ ಚಟದಿಂದಾಗಿ ಬಡತನ ಅವರ ಬೆನ್ನು ಹತ್ತಿ ಕಾಡುತ್ತಿತ್ತು. ಒಂದು ಕಡೆ ಬಾಡಿಗೆಗಾಗಿ ಮನೆ ಮಾಲೀಕರ ಕಿರುಕುಳವಾದರೆ ಇನ್ನೊಂದು ಕಡೆ ಸಾಲಗಾರರ ಕಿರುಕುಳ. ಈ ಎಲ್ಲಾ ಕಷ್ಟಗಳಿಂದ ಪಾರಾಗುದು ತುಂಬಾ ಕಷ್ಟ ಎಂದು ಭಾವಿಸಿದ ಆತನ ಹೆಂಡತಿ ' ಮರಿಯಾದೆಗೆ ಅಂಜಿದಳು. ಬದುಕಲು ಇಷ್ಟವಿಲ್ಲದೆ, ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದು ಬಿಟ್ಟಳು . ಮರುದಿನ ಅವಳ ಯಜಮಾನ ಕೆಲಸಕ್ಕೆಂದು ಹೊರಟು ಹೋದ. ಮಕ್ಕಳೂ ಶಾಲೆಗೆ ಹೊರಟು ಹೋದರು. ಆ ವೇಳೆಗೆ ಮನೆಯಲ್ಲಿ ...

ದಿನಕ್ಕೊಂದು ಕಥೆ 1032

*🌻ದಿನಕ್ಕೊಂದು ಕಥೆ🌻* *ಆಸರೆ* ಲ್ಯಾಪ್ಟಾಪ್ ನೋಡುತ್ತಲೇ ಎಸ್ ವಾಟ್, ಎಂದು ಎದುರಿನಲ್ಲಿ ನಿಂತಿದ್ದ ಹುಡುಗಿಯನ್ನು ನೋಡದೇ ಕೇಳಿದಳು ಲತಾ...ಮೇಡಂ ನನಗೆ ಕೆಲಸದ ಅವಶ್ಯಕತೆ ತುಂಬಾನೆ ಇದೆ.  ಪಿಯುಸಿ ಮಾರ‍್ಕಕಾರ‍್ಡ್ ನೋಡಿ ಮೇಡಂ 90%...ಈಗ ಡಿಗ್ರಿ ಮಾಡ್ತಾ ಇದೀನಿ ಕರೆಸ್ಪಾಂಡೆನ್ಸ್ ಲ್ಲಿ...ಒಂದೇ ಒಂದು ತಿಂಗಳು ನನ್ನ ಕೆಲಸ ನೋಡಿ ,ಆಮೇಲೆ ಬೇಕಾದ್ರೆ ನನ್ನ  ತೆಗೆದುಹಾಕಿ...ನನ್ನ ತಮ್ಮ ಹೈಸ್ಕೂಲ್ ಓದ್ತಾ ಇದಾನೆ,ತಾಯಿಗೆ ಖಾಯಿಲೆಯಿಂದ ನರಳ್ತಾ ಇದಾಳೆ, ಹೆಚ್ ಆರ್ ಡಿಗ್ರಿ ಆಗಿಲ್ಲ ಕೆಲಸ ಕೊಡಲ್ಲ ಎಂದರು ಒಂದೇ ಸಮ ಹೇಳುತ್ತಿದ್ದ ಆ ಹುಡುಗಿಯನ್ನು ತಲೆ ಎತ್ತಿ ನೋಡಿದಳು ಕಂಪನಿಯ ಎಂ ಡಿ ಲತಾ... ಮುಗ್ದತೆಯ ಸಹಜ ಸುಂದರಿ...ಬಡತನದ ಛಾಯೆ ಅವಳು ತೊಟ್ಟಿರುವ ಬಟ್ಟೆಯಲ್ಲಿ ಎದ್ದು ಕಾಣುತ್ತಿತ್ತು.  ಕರುಣೆ ಮನದಲ್ಲಿ ಹಾದುಹೋದರೂ ಕಂಪನಿಯ ನಿಯಮದ ಪ್ರಕಾರ ಪದವಿ ಇಲ್ಲದೆ ಕೆಲಸ ಕೊಡುವಂತಿಲ್ಲ. ಐ ಮ್ ಸಾರಿ ,ಕಾಂಟ್ ಹೆಲ್ಪ್ ,ಟ್ರೈ ಆಫ್ಟರ್ ಡಿಗ್ರಿ ಎದ್ದು ಹೊರ ಹೊರಟಳು ಲತಾ. ಆ ಹುಡುಗಿ ದುಃಖ ನಿರಾಶೆಯಿಂದ ಕಣ್ಣೀರು ಒರೆಸುತ್ತಾ ನಿಂತಿದ್ದಳು. ರಾತ್ರಿ  ಮಲಗಿದರೂ ನಿದ್ದೆ ಕಣ್ಣಿಗೆ ಸುಳಿಯುತ್ತಿಲ್ಲ.ಯಾಕೊ ಆ ಹುಡುಗಿಯ ಧೈನ್ಯ ಮುಖ ಕಣ್ಣೇದುರೇ     ಬಿಂಬಿಸುತ್ತಿದೆ. ಏನಾದರೂ ಸಹಾಯ ಮಾಡಬೇಕಿತ್ತು. ಯಾಕೋ ಕಣ್ಣು          ಮಸಕಾಯಿತು ...ಲತಾಳ ಮನಸು ಹದಿನೈದು ವರ್ಷಗಳ ಹಿಂದಕ...

ದಿನಕ್ಕೊಂದು ಕಥೆ 1031

*🌻ದಿನಕ್ಕೊಂದು ಕಥೆ🌻* *ಯಥಾರ್ಥ ಮಾನವೀಯತೆ* ಕಪಿಲ ನಗರದ ಮಹಾರಾಜ ಒಂದುದಿನ ಬೆಳಿಗ್ಗೆ ತನ್ನ ಕೈ ತೋಟದಲ್ಲಿ ಕುಳಿತು ಮಂತ್ರಿ, ಸೇನಾಧಿಪತಿಗಳ ಜತೆ ಗಹನವಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದ. ಕೈತೋಟದ ಸುತ್ತಲೂ ಎತ್ತರವಾದ ಬಲಿಷ್ಠ ಗೋಡೆಯಿತ್ತು. ಗೋಡೆಯ ಆ ಬದಿಯಲ್ಲಿ ಬಯಲು ಪ್ರದೇಶವಿತ್ತು. ಒಬ್ಬ ವೃದ್ಧ ತನ್ನ ಮೊಮ್ಮಗನ ಜತೆಯಲ್ಲಿ ಆ ಕಡೆ ಬರುತ್ತಿದ್ದ. ತಾತ ಹಾಗೂ ಹುಡುಗನಿಗೆ ತುಂಬಾ ಹಸಿವಾಗುತ್ತಿತ್ತು. ರಾತ್ರಿಯಿಂದ ಉಪವಾಸ, ಗೋಡೆಯ ಪಕ್ಕದಲ್ಲಿ ನಡೆದು ಬರುವಾಗ ರಾಜನ ಕೈ ತೋಟದಲ್ಲಿರುವ ದೊಡ್ಡ ಮಾವಿನ ಕೊಂಬೆಯೊಂದು ಹೊರಗಡೆ ಬಾಗಿತ್ತು. ಅದರಲ್ಲಿ ಫಲಿತ ಮಾವಿನ ಹಣ್ಣುಗಳಿದ್ದವು. ವೃದ್ಧ ಅಲ್ಲೇ ಬಿದ್ದಿದ್ದ ಒಂದು ಕಲ್ಲೆತ್ತಿಕೊಂಡು ಎತ್ತರದ ಕೊಂಬೆಗೆ ಹೊಡೆದ. ಮಾವಿನಹಣ್ಣು ಕೆಳಗೆ ಬಿತ್ತು. ಹುಡುಗ ಖುಷಿಯಿಂದ ಎತ್ತಿಕೊಂಡು ತಿನ್ನತೊಡಗಿದ. ಆದರೆ ಗೋಡೆಯ ಆ ಬದಿಯಲ್ಲಿ ಕುಳಿತಿದ್ದ ರಾಜನ ಹಣೆಗೆ ಕಲ್ಲು ಬಡಿದು ಹಣೆ ಸೀಳಿತು. ಮಂತ್ರಿ ಹಾಗೂ ಸೇನಾಧಿಪತಿ ಗಾಬರಿಗೊಂಡರು. ಕೂಡಲೇ ಗಾಯಕ್ಕೆ ಪಟ್ಟಿ ಕಟ್ಟಿದರು. ಹೊರಗೆ ಬಂದು ಇಣುಕಲಾಗಿ ಮುದುಕ ಹಾಗೂ ಹುಡುಗ ಕುಳಿತಿದ್ದರು. ಸೇನಾಧಿಪತಿ ಅವರಿಬ್ಬರನ್ನೂ ಹಿಡಿದು ರಾಜನೆದುರು ನಿಲ್ಲಿಸಿದರು. ಅವರಿಬ್ಬರೂ ವಂದಿಸಿ ಕ್ಷಮೆ ಬೇಡಿದರು. ತಕ್ಷಣವೇ ರಾಜ ಮುಗುಳ್ನಕ್ಕು ಆ ಬಡವನಿಗೆ ನೂರು ಚಿನ್ನದ ನಾಣ್ಯವನ್ನು ಕೊಡುವಂತೆ ಮಂತ್ರಿಗೆ ಸೂಚಿಸಿದ. ಇದನ್ನು ಕಂಡು ಸೇನಾಧಿಪತಿಗೆ ವಿಚಿತ್ರ ಎನಿಸಿತು. 'ಶಿಕ್ಷೆ ಕೊ...

ದಿನಕ್ಕೊಂದು ಕಥೆ 1030

*🌻ದಿನಕ್ಕೊಂದು ಕಥೆ🌻*           *ಕಾಮನೆಗಳು* ಬಹಳ ಹಿಂದೆ ಪರ್ವತ ಪ್ರದೇಶದಲ್ಲಿ ಒಬ್ಬ ವೃದ್ಧನು  ವಾಸಿಸುತ್ತಿದ್ದನು. ಅವನ ಹೆಸರು 'ವಿಕ್ರಾಂತ ಯಾವಗಲ್'. ಕಡು ಬಡವ. ಈತನಿಗೆ ಒಂದು ಜೋಪಡಿ ತರಹದ ಗುಡಿಸಲು ಇತ್ತು. ಇವನು ತುಂಬಾ ಸೋಮಾರಿ ; ಹಾಗಾಗಿ ಜೀವನ ಮಾಡಲು  ಕಷ್ಟ ಪಡುತ್ತಿದ್ದನು. ವಿಕ್ರಾಂತ ಯಾವಗಲ್ಗೆ ಒಂದು ವಿಷಯ ತಿಳಿದಿತ್ತು. ಸಾಧು ಸನ್ಯಾಸಿಗಳು ತಮ್ಮ ಯೋಗಶಕ್ತಿಯಿಂದ ಸಿದ್ಧಿಗಳನ್ನು, ಮಾಡಬಲ್ಲರು, ಹಾಗೂ ಬೇಕಾದ ವಸ್ತುಗಳನ್ನು ಪಡೆಯಬಲ್ಲರು ಎಂದು ಕೇಳಿ ತಿಳಿದಿದ್ದನು. ಈಗ ಅವನ ತಲೆಯಲ್ಲಿ  ಯೋಚನೆಯೊಂದು  ಬಂದಿತು. ನಾನು ಯಾವ ಕೆಲಸವನ್ನೂ ಮಾಡದೆ ಸುಖವಾದ ಜೀವನ ನಡೆಸಬೇಕೆಂಬ ಆಸೆಯೊಂದು  ಮೊಳಕೆಯೊಡೆಯಿತು. ಇದನ್ನು ಪಡೆಯಬೇಕೆಂಬ ಆಕಾಂಕ್ಷೆಯಿಂದ, ಅವನು ಪರ್ವತದ ಮೇಲೆ ಹತ್ತಿ ಅಲ್ಲಿನ ಗವಿಗಳಲ್ಲಿ ವಾಸಮಾಡುವ ಯಾರಾದರೂ ಸಿದ್ಧಪುರುಷರನ್ನು ಭೇಟಿ ಮಾಡಿ ಮನದಿಚ್ಚೆಯನ್ನು  ಪೂರೈಸಿಕೊಳ್ಳಬೇಕೆಂದು ಹವಣಿಸಿದನು. ಇದಕ್ಕಾಗಿ ಸಾಧುಗಳನ್ನು ಹುಡುಕಲು  ಗವಿಗಳನ್ನು  ಹುಡುಕಿಕೊಂಡು ಹೊರಟನು. ಪರ್ವತದ ಮೇಲೆ ನಡೆಯುತ್ತಾ ಒಂದು ಕಡೆ ಹೋದಾಗ ಗವಿ ಕಂಡಿತು. ಅಲ್ಲೇ ತಪಸ್ಸು ಮಾಡುತ್ತಿದ್ದ ಸಾಧುವನ್ನು ಕಂಡನು. ಮತ್ತು ಅವರಿಗೆ ಭಕ್ತಿಯಿಂದ ಪ್ರಣಾಮ ಮಾಡಿದನು. ಸಾಧುಗಳು ಅವನನ್ನು ಸ್ವಾಗತಿಸಿ ಮಾತನಾಡಿಸಿ, ನೀನು ನಮ್ಮಲ್ಲಿಗೆ ಬಂದ ಉದ್ದೇಶ ಏನು ಎಂದು ಕೇಳಿದರು...

ದಿನಕ್ಕೊಂದು ಕಥೆ 1029

*🌻ದಿನಕ್ಕೊಂದು ಕಥೆ🌻*                                            ಸಾಧಕರಿಗೆ ಜೇಡರ ಹುಳು ಒಂದು ಜೀವಂತ ಪಾಠವಾಗಿದೆ.ಸಹನೆ ಮತ್ತು ಪ್ರಯತ್ನಶೀಲತೆಗೆ ಜೇಡರ ಹುಳು ಒಂದು ಆದರ್ಶ.ಬಲೆ ನಿರ್ಮಿಸುವ ಕೆಲಸದಲ್ಲಿ ಅದು ಹಲವು ಬಾರಿ ಸೋಲುತ್ತದೆ.ನೆಲಕ್ಕೆ ಉರುಳುತ್ತದೆ.ಆದರೂ ಅದು ಸದ್ದಿಲ್ಲದೆ ತನ್ನ ಪ್ರಯತ್ನವನ್ನು ಸಹನೆಯಿಂದ ಮುಂದುವರೆಸುತ್ತದೆ.ಅದು ಕೊನೆಗೂ ಒಂದು ಬಲೆಯನ್ನು ನಿರ್ಮಿಸಿಯೇ ನಿರ್ಮಿಸುತ್ತದೆ.                                                           ಒಬ್ಬ ರಾಜ ಯುದ್ದದಲ್ಲಿ ಹಲವು ಬಾರಿ ವೈರಿಗಳಿಂದ ಸೋತುಹೋದ.ಸೋತ ಆತ ನಿರಾಶನಾದ.ಹಾಗೆ ಕುಳಿತ್ತಿದ್ದಾರೆ ಅವನ ಕಣ್ಣಿಗೆ ಒಂದು ಜೇಡರ ಹುಳು ಕಾಣಿಸಿಕೊಂಡಿತು.ಅದನ್ನು ಆತ ಗಮನವಿರಿಸಿ ನೋಡಿದ!                                                        ...

ದಿನಕ್ಕೊಂದು ಕಥೆ 1028

*🌻ದಿನಕ್ಕೊಂದು ಕಥೆ🌻*                                        *ಬುದ್ಧನ ಕಥೆ* 'ಗೌತಮ ಬುದ್ಧ' ವೈಶಾಲಿಯಲ್ಲಿದ್ದಾಗ, 'ಮೌಲಿಂದಪುತ್ತ' ಅಂತ ಒಬ್ಬ  ಬುದ್ದನನ್ನು ನೋಡೋಕೆ ಬಂದ. ಅವನು ಬಹಳ  ಓದಿ ಎಲ್ಲವನ್ನು ತಿಳಿದುಕೊಂಡಿದ್ದ. ವೇದ, ಪುರಾಣ, ಉಪನಿಷತ್ತು, ಇವುಗಳನ್ನೆಲ್ಲಾ ಕರತಲಾಮಲಕ ಎನ್ನುವಂತೆ ಅರೆದು ಕುಡಿದಿದ್ದ. ಯಾವ ರೀತಿ ಸುತ್ತಿಬಳಸಿ ಕೇಳಿದರೂ ಅವನು ಎಲ್ಲವನ್ನೂ ಹೇಳುವಷ್ಟು  ಜ್ಞಾನವಂತನಾಗಿದ್ದ. ಅಂದಿನ ದಿನಗಳಲ್ಲಿ ಹೀಗೆ ವಿಪರೀತ ತಿಳಿದುಕೊಂಡವರು ತಮ್ಮ ಬುದ್ಧಿಮತ್ತೆಯನ್ನು ಬೇರೆ ಪಂಡಿತರೊಂದಿಗೆ ವಾದ ಮಾಡಿ ಗೆದ್ದು , ಸೋತವರಿಂದ ಜಯ ಪತ್ರವನ್ನು ಪಡೆದುಕೊಳ್ಳಬೇಕೆಂಬ ಆಕಾಂಕ್ಷೆ ಇಟ್ಟುಕೊಂಡಿರುತ್ತಾರೆ. ಈ ಮೌಲಿಂಗ ಪುತ್ತ ಸಹ ಇದಕ್ಕೆ ಹೊರತಾಗಿ ರದೆ ಈಗಾಗಲೇ ಅನೇಕ ಕಡೆ ತನ್ನ ಪಾಂಡಿತ್ಯವನ್ನು ಬೇರೆ ಪಂಡಿತರೊಂದಿಗೆ ವಾದ ಮಾಡಿ ಗೆದ್ದು ಜಯ ಪತ್ರವನ್ನು ಸಾಕಷ್ಟು ಪಡೆದಿದ್ದನು.  ಇನ್ನೂ ಒಂದಷ್ಟು ಕಡೆ ಹೊರಡುವ  ಯೋಚನೆಯಲ್ಲಿದ್ದಾಗ, ಕೆಲವರು ಹೇಳಿದರು. ನೀನು ಅಲ್ಲಿ ಇಲ್ಲಿ ಹಲವು ಕಡೆ ಹೋಗುವುದಕ್ಕಿಂತ ನೇರವಾಗಿ ಬುದ್ಧನ ಬಳಿ ಹೋಗಿ ವಾದಮಾಡಿ ನೀನು ಜಯ ಪತ್ರವನ್ನು ಪಡೆಯಬಹುದು. ಅದಕ್ಕಿಂತ ದೊಡ್ಡ ಜಯಪತ್ರ ಬೇರೆ ಯಾವುದೂ ಇರುವುದಿಲ್ಲ ಎಂದರು. ಇದನ್ನು ತಿಳಿದುಕೊಂಡ 'ಮೌ...

ದಿನಕ್ಕೊಂದು ಕಥೆ 1027

*🌻ದಿನಕ್ಕೊಂದು ಕಥೆ🌻*                                      *ಕರ್ಮ ಮತ್ತು ಕರ್ಮ ಯೋಗದ ಕುರಿತು ಉದಾಹರಣೆಯ ಒಂದು ಕಥೆ.* ರಮಣ ಮಹರ್ಷಿಗಳು  ಒಮ್ಮೆ  ಬೆಟ್ಟ ಹತ್ತಿ ಹೊರಟಿರುವಾಗ, ವಿದೇಶಿ ಯಾತ್ರಿಕರೂಬ್ಬರು ಬಂದು ಅವರಿಗೆ ನಮಸ್ಕರಿಸಿದರು. ಹಾಗೆ, ಸ್ವಾಮಿ ನೆನ್ನೆ ನೀವು ಉಪನ್ಯಾಸದಲ್ಲಿ ಕರ್ಮ ಮತ್ತು ಕರ್ಮಯೋಗದ ಕುರಿತಾಗಿ ಹೇಳಿದಿರಿ.  ಇದರ ಅರ್ಥ ಏನು ಎಂದು ಕೇಳಿದರು. ಆಗ ಮಹರ್ಷಿಗಳು ನನ್ನ ಜೊತೆ ಬೆಟ್ಟಹತ್ತಿ ಬನ್ನಿ ನಿಮಗೆ ಗೊತ್ತಾಗುತ್ತದೆ ಎಂದರು. ಸರಿ ಯಾತ್ರಿಕರು ಅವರೊಟ್ಟಿಗೆ ಬೆಟ್ಟ ಹತ್ತುತ್ತಿದ್ದರು. ಸುಮಾರು ಅರ್ಧ-ಮುಕ್ಕಾಲು ದಾರಿ ಹೋಗಿದ್ದರು. ಆಗ ಅಲ್ಲೊಬ್ಬಳು ಅಜ್ಜಿ ಕಟ್ಟಿಗೆ ಆರಿಸಲು ಕಾಡಿಗೆ ಬಂದಿದ್ದಳು. ಅಜ್ಜಿಗೆ  ವಯಸ್ಸಾಗಿದೆ, ಮೈಯಲ್ಲಿ ಶಕ್ತಿ ಇಲ್ಲ. ಹಾಗಾಗಿ ಕಟ್ಟಿಗೆಗಳನ್ನು ಕಡಿಯುವುದಾಗಲಿ, ಮುರಿಯುವುದಾಗಲಿ  ಮಾಡದೆ ಒಣಗಿ  ಬಿದ್ದಿರುವ  ಸಣ್ಣ ಪುರಲೆಯಂಥ  ಕಟ್ಟಿಗೆಗಳ ತುಂಡುಗಳನ್ನೆ ಆರಿಸಿಕೊಂಡು  ಎಲ್ಲವನ್ನು  ಒಟ್ಟಿಗೆ  ಮಾಡಿ, ಬರುವಾಗಲೇ ತಂದಿದ್ದ ಸಣ್ಣ ಸಣ್ಣ ತುಂಡಾದ ಹಗ್ಗಗಳನ್ನು  ಸೇರಿಸಿ ಗಂಟುಕಟ್ಟಿ ಕಟ್ಟಿಗೆಯ ಹೊರೆ ಮಾಡಿದಳು.  ಆ ಕಟ್ಟಿಗೆ ಹೊರೆಯನ್ನು ತಲೆಯ ಮೇಲೆ ಇಟ್ಟುಕೊಳ್ಳಲು ತುಂಬಾ ಪ್ರಯತ್...

ದಿನಕ್ಕೊಂದು ಕಥೆ 1026

*🌻ದಿನಕ್ಕೊಂದು ಕಥೆ🌻*                                       *ಒಂದು ಸ್ಪೂರ್ತಿದಾಯಕ ಕಥೆ* ಹಿಂದೆ  ಬಂಗಾಳ ಪ್ರಾಂತ್ಯದಲ್ಲಿ  ತುಂಬಾ ಬರಗಾಲ ಬಂದಿತು. ಎರಡ್ಮೂರು  ವರ್ಷಗಳಿಂದ ಮಳೆ ಕಡಿಮೆಯಾಗಿ, ಆಹಾರದ ಕೊರತೆಯಾಗಿತ್ತು. ಮತ್ತೆ ಈ ವರ್ಷವೂ ಹಾಗೆ ಆದುದರಿಂದ ಕುಡಿಯುವ ನೀರಿಗೂ ತತ್ವಾರ, ಆಹಾರ ಪದಾರ್ಥಗಳಿಗೂ  ಅದ್ವಾನವಾಗಿ  ಬಡಬಗ್ಗರೀಗಂತು ಒಪ್ಪತ್ತು ಗಂಜಿ ಸಿಗುವುದು ಕಷ್ಟವಾಯಿತು. ದುಡಿಯಲು ಕೆಲಸವಿಲ್ಲ, ಹೊಲಗದ್ದೆಗಳೆಲ್ಲ ಒಣಗಿಹೋಗಿವೆ, ಸ್ವಲ್ಪ ಸ್ಥಿತಿವಂತರು ಹೇಗೋ ಕಾಲ ಹಾಕುತ್ತಿದ್ದಾರೆ.  ಆ ಪ್ರಾಂತ್ಯದ ಒಂದು ಪುಟ್ಟ ಹಳ್ಳಿಯಲ್ಲಿ, ಒಬ್ಬ ತಾಯಿ ಏಳೆಂಟು ವರ್ಷದ  ಮಗ ವಾಸವಾಗಿದ್ದರು. ಮೊದಲೇ ಬಡವರು ಈಗಂತೂ ಕೇಳುವುದೇ ಬೇಡ. ಆ ತಾಯಿ ಕೂಲಿನಾಲಿ ಮಾಡಿ ಮಗನನ್ನು ಸಾಕುತ್ತಿದ್ದಳು. ಜೀವನಕ್ಕೆ ತೊಂದರೆ ಇರಲಿಲ್ಲ. ಆದರೆ ಈ ಬರಗಾಲದಿಂದಾಗಿ ಮನೆಯಲ್ಲಿ ಒಂದು ಕಾಳು , ದವಸ ಧಾನ್ಯಗಳು  ಇಲ್ಲದೆ ಎರಡು ದಿನಗಳಾಗಿದೆ . ತಾಯಿಯಂತೂ ನಿತ್ರಾಣಳಾಗಿ ಮಲಗಿದವಳು  ಎದ್ದಿಲ್ಲ. ಪಾಪ ಸಣ್ಣ ಹುಡುಗ,  ಎರಡು ದಿನಗಳಿಂದ ಹೊರಗೆ ಹೋಗಿ ಅವರಿವರನ್ನು ಕೇಳಿದರೂ  ಒಂದು ಪೈಸೆ  ಸಿಕ್ಕಿಲ್ಲ. ಇವತ್ತು ಒಂದು ದಿನ ನೋಡಿ ಬರುತ್ತೇನೆ, ಮುಂದೆ ಭಗವಂತ  ಇ...

ದಿನಕ್ಕೊಂದು ಕಥೆ 1025

*🌻ದಿನಕ್ಕೊಂದು ಕಥೆ🌻* *ಕಂಠಿಹಾರದ  ಕಳ್ಳ* ಒಮ್ಮೆ ಅಕ್ಬರ್ ತನ್ನ ಪ್ರೀತಿಯ ರಾಣಿಗೆ  ಬೆಲೆಬಾಳುವ ಕಂಠೀಹಾರವನ್ನು ಉಡುಗರೆಯಾಗಿ ತಂದುಕೊಟ್ಟನು. ರಾಣಿಗೆ ಆ ಕಂಠೀ ಹಾರವನ್ನು ನೋಡಿ ಬಹಳ  ಸಂತೋಷವಾಯಿತು. ಪ್ರಭು ನೀವು ಪ್ರೀತಿಯಿಂದ ತಂದುಕೊಟ್ಟ  ಈ ಬೆಲೆಬಾಳುವ ಹಾರವನ್ನು ನಾನು ಬಹಳ ಜೋಪಾನವಾಗಿ ನೋಡಿಕೊಳ್ಳುವೆ. ನಾನು ತುಂಬಾ ಅದೃಷ್ಟವಂತೆ ಎಂದು  ಹೇಳಿದಳು. ರಾಜನು "ನಿನಗೆ ಸಂತೋಷವಾಗುತ್ತದೆ  ಎಂದು  ರಾಜ್ಯದ ಕುಶಲಕರ್ಮಿಗಳಿಂದ  ಈ ಬೆಲೆಬಾಳುವ ಕಂಠಿ ಹಾರವನ್ನು ಮಾಡಿಸಿದೆ.  ನಿನಗೆ ಇಷ್ಟವಾದರೆ ನನಗೆ ಸಂತೋಷ "ಎಂದನು. ಆಗ ರಾಣಿಯು, ಈ ಹಾರ ನನಗೆ ತುಂಬಾ ಇಷ್ಟವಾಗಿದೆ. ನನ್ನ ಜೀವಮಾನ ಪರ್ಯಂತ ಜೋಪಾನವಾಗಿ ಕಾಪಾಡುವೆ ಎಂದಳು. ರಾತ್ರಿ ಸರವನ್ನು ತೆಗೆದು ಮೇಜಿನ ಮೇಲೆ ಇಟ್ಟು ಮಲಗಿದಳು. ಮರುದಿನ ಬೆಳಗ್ಗೆ ರಾಣಿಯು ಕಂಠಿ ಹಾರವನ್ನು ಮತ್ತೊಮ್ಮೆ ನೋಡಬೇಕೆಂದು ತೆಗೆದುಕೊಳ್ಳಲು ಹೋದಳು. ಆದರೆ ಅವಳಿಟ್ಟ ಜಾಗದಲ್ಲಿ ಆ ಕಂಠಿಹಾರ ಇರಲಿಲ್ಲ. ರಾತ್ರಿ ಮಲಗುವಾಗ ಅದನ್ನು ತೆಗೆದು ಟೇಬಲ್ಲಿನ ಮೇಲೆ ಇಟ್ಟಿದ್ದಳು. ಅವಳಿಗೆ ಅದು ಚೆನ್ನಾಗಿ ನೆನಪಿದೆ. ಆದರೆ ಈಗ ಹಾರ ಕಾಣುತ್ತಿಲ್ಲ ಎಲ್ಲಾ ಕಡೆ ಹುಡುಕಿದರೂ ಅದು ಸಿಗಲಿಲ್ಲ. ಆಗ ಅವಳು ತನ್ನ ದಾಸಿಯನ್ನು ಕರೆದು ನಿನ್ನೆ ನನಗೆ ಮಹಾರಾಜರು ತಂದುಕೊಟ್ಟ ಕಂಠಿಹಾರ ಇಲ್ಲೇ ಇಟ್ಟಿದ್ದೆ. ಅದು ಕಳೆದುಹೋಗಿದೆ ನನಗೆ ಹುಡುಕಿಕೊಡು  ಎಂದಳು. ದಾಸಿಯು ಮಹಾರಾಣ...