Posts

ದಿನಕ್ಕೊಂದು ಕಥೆ 1067

*🌻ದಿನಕ್ಕೊಂದು ಕಥೆ 🌻*                                            *ಕೊರಳಲ್ಲಿ ಚಿನ್ನದ ಪದಕ ಇದ್ದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು!* ಲಂಡನ್ನಿನ ಬರ್ಮಿಂಗ್ಹ್ಯಾಮ್  ನಗರದಲ್ಲಿ ನಡೆದ ಕಾಮನವೆಲ್ತ್ ಗೇಮ್ಸನ ಬಾಕ್ಸಿಂಗ್ ವಿಭಾಗದ ಪದಕ ಪ್ರದಾನ ಕಾರ್ಯಕ್ರಮವು ಒಂದು ಭಾವುಕ ಕ್ಷಣಕ್ಕೆ ಸಾಕ್ಷಿ ಆಯಿತು!  ಆಕೆ ನೀತು ಗಂಘಾಸ್. ವಯಸ್ಸು 21. ಭಾರತದ ಬಾಕ್ಸಿಂಗನ ನವೋದಿತ ತಾರೆ. ಇದು ಆಕೆಯ ಮೊದಲ ಕಾಮನವೆಲ್ತ್ ಗೇಮ್ಸ್ ಆಗಿತ್ತು. ಆಕೆಯನ್ನು ಈಗಲೆ ಜನರು ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್ ಜೊತೆ ಹೋಲಿಕೆ ಮಾಡಲು ತೊಡಗಿದ್ದರು.  ಕೊರಳಲ್ಲಿ ಚಿನ್ನದ ಪದಕವನ್ನು ತೋಡಿಸಿದಾಗ ಭಾರತದ ತ್ರಿವರ್ಣ ಧ್ವಜ ಮೇಲೇರುವ ಕ್ಷಣ, ಬ್ಯುಗಲ್ ರಾಷ್ಟ್ರಗೀತೆ ಜನಗಣಮನವನ್ನು ನುಡಿಸುವಾಗ ಆಕೆಯ ಕಣ್ಣಲ್ಲಿ ಗಂಗಾ ಭಾಗೀರಥಿ ಎಲ್ಲವೂ ಸುರಿಯಿತು. ಆದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು! ಹೌದು, ಅವಳು ಹುಡುಕುತ್ತ ಇದ್ದದ್ದು ಅವಳ ಪ್ರೀತಿಯ ಅಪ್ಪನನ್ನು! ಅವರ ಹೆಸರು ಜೈ ಭಗವಾನ್. ಹರ್ಯಾಣ ಸರಕಾರಿ ಇಲಾಖೆಯಲ್ಲಿ ಒಬ್ಬ ಸಾಮಾನ್ಯ ನೌಕರ ಆಗಿದ್ದ ಅವರು ತನ್ನ ಮಗಳ ಸಾಧನೆಗೆ ಒತ್ತಾಸೆ ಆಗಿ ನಿಂತವರು. ಕಳೆದ ಮೂರು ವರ್ಷಗಳಿಂದ ಅವರು ವೇತನವಿಲ್ಲದ ರಜೆ ಹಾಕಿ ಮಗಳ ಜೊತೆಗೆ ಓಡಾಟ ಮಾಡುತ್ತಿದ್ದರು! ಮ...

ದಿನಕ್ಕೊಂದು ಕಥೆ 1066

*🌻ದಿನಕ್ಕೊಂದು ಕಥೆ🌻*                                          *"ಪಾದಚಾರಿ ಮಾರ್ಗದಿಂದ ರಾಷ್ಟ್ರಪತಿಗಳ ಅಂಗಳದವರೆಗೆ"* ಹುಟ್ಟಿದ್ದು ಮಂಜುನಾಥ ಆಗಿ, ಬೆಳೆದಿದ್ದು ಮಂಜಮ್ಮನಾಗಿ. ಆಮೇಲೆ ಹೊಟ್ಟೆಪಾಡಿಗಾಗಿ ಕೈಗೊಂಡ ಕಲಾ ವೃತ್ತಿಯೇ ಇವರನ್ನು ಮಂಜಮ್ಮ ಜೋಗತಿಯನ್ನಾಗಿ ರೂಪಿಸಿತು. ಅವರು ಈಗ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು ಹೌದು. ಉತ್ತರ ಕರ್ನಾಟಕದ ಭಾಗದಲ್ಲಿ ಈಗಲೂ ಉಳಿದುಕೊಂಡು ಬಂದಿರುವ . ಜೋಗತಿ’ ಕಲಾ ಪ್ರಕಾರದ ಪ್ರಮುಖ ರಾಯಭಾರಿಯೂ ಹೌದು. *ಉರುಳಾದ ಕರಳು ಸಂಬಂಧ :* ಮಂಜುನಾಥ ನಾಗಿದ್ದ ಮಂಜಮ್ಮನ ಜನ್ಮಭೂಮಿ ಬಳ್ಳಾರಿ ಜಿಲ್ಲೆ ಕಲ್ಲುಕಂಬ. ಈಗ ಕರ್ಮಭೂಮಿ ಮರಿಯಮ್ಮನ ಹಳ್ಳಿ. ತಂದೆ ಹನುಮಂತಪ್ಪ ಶೆಟ್ಟಿ, ತಾಯಿ ಜಯಲಕ್ಷ್ಮೀ. ತಂದೆ ಕಂಪ್ಲಿ ಶುಗರ್‌ಫ್ಯಾಕ್ಟರಿಯಲ್ಲಿ ಉದ್ಯೋಗಿ. ಆರು ಎಕರೆ ಜಮೀನು ಅಥವಾ ವ್ಯಾಪಾರ -ಈ ಎರಡರಲ್ಲಿ ಯಾವುದನ್ನುಆಯ್ಕೆ ಮಾಡಿಕೊಂಡರೂ ತಂದೆ-ತಾಯಿಗೆ ಒಪ್ಪಿಗೆ ಇತ್ತು. ಆದರೆ, ತಾನು ಹುಡುಗನಾಗಿ ದುಡಿಯಲಾರೆ, ಹುಡುಗಿಯಂತೆ ನೃತ್ಯ ಮಾಡುವೆ ಎಂದಾಗ ಯಾರೂ ಒಪ್ಪಲಿಲ್ಲ. ಎಸ್‌ಎಸ್‌ಎಲ್‌ಸಿ ಮುಗಿದ ಮೇಲೆ ದೇಹದ ಚಿತ್ರ ಬದಲಾದಂತೆ ಮನೆಯ ಚಿತ್ರವೂ ಬದಲಾಯಿತು. ಹೆಣ್ಣಂತೆ ಇರುವುದನ್ನು ಸಹಿಸದ ಸಮಾಜ ಗೇಲಿ ಮಾಡಿತು. ಕುಟುಂಬದವರು ಕಂಬಕ್ಕೆ ಕಟ್ಟಿ ಹೊಡೆದರು. ಸಂಬಂಧಕ್ಕೆ ಬೇಲ...

ದಿನಕ್ಕೊಂದು ಕಥೆ 1065

*🌻ದಿನಕ್ಕೊಂದು ಕಥೆ🌻* *ಅಳಿಲಿನ ಜಾಣತನ* ವಿಕ್ರಮ ಎಂಬ ವ್ಯಕ್ತಿ ಕಾಡಿನಲ್ಲಿ ಹೋಗುತ್ತಿದ್ದ. ಆಗ ಅವನಿಗೆ ಮರದ ಮೇಲಿಂದ ವಿಚಿತ್ರ ಶಬ್ಧವೊಂದು ಕೇಳಿಸಿತು. ಅದೇನೆಂದು ನೋಡಿದಾಗ, ಹಾವೊಂದು ಮರದ ರೆಂಬೆಯಲ್ಲಿ ತನ್ನ ಬಾಲ ಸಿಕ್ಕಿಸಿಕೊಂಡು ಒದ್ದಾಡುತ್ತಿತ್ತು. ಹಾವು ವಿಕ್ರಮನನ್ನು ಕಂಡು "ಅಯ್ಯಾ ನಿನ್ನ ಕತ್ತಿಯಿಂದ ಈ ರೆಂಬೆಯನ್ನು ಸೀಳು. ನನ್ನ ಬಾಲ ಬಿಡಿಸಿಕೊಳ್ತಿನಿ." ಎಂದು ಬೇಡಿಕೊಂಡಿತು. "ಅದು ಸರಿ, ಆದರೆ, ನೀನು ನನ್ನನ್ನು ಕಚ್ಚಿದರೆ?" ಎಂದು ಕೇಳಿದ ವಿಕ್ರಮ. ಹಾವು "ಖಂಡಿತ ಕಚ್ಚೋದಿಲ್ಲ" ಎಂದು ಮಾತು ಕೊಟ್ಟಿತು. ಅವನು ತನ್ನ ಕತ್ತಿಯಿಂದ ರೆಂಬೆಯ ಸಂದಿಯನ್ನು ಅಗಲಗೊಳಿಸಿದಾಗ ಹಾವು ತನ್ನ ಬಾಲವನ್ನು ಬಿಡಿಸಿಕೊಂಡಿತು. ಬಳಿಕ ಹಾವು "ಅಯ್ಯಾ, ನಿನ್ನ ಕೋಲನ್ನು ಮರದ ರೆಂಬೆಗೆ ಹಿಡಿ. ನಾನು ಕೆಳಗಿಳಿದು ಬರುತ್ತೇನೆ."ಎಂದು ನುಡಿಯಿತು. ಹಾವು ತನ್ನನ್ನು ಕಚ್ಚುವುದಿಲ್ಲ ಎಂದು ಮಾತು ಕೊಟ್ಟಿದ್ದುದರಿಂದ ವಿಕ್ರಮ ಧೈರ್ಯವಾಗಿ ಕೋಲನ್ನು ರೆಂಬೆಗೆ ಹಿಡಿದ. ಹಾವು ಕೆಳಗಿಳಿದು ಬಂದು ಅವನ ಮೈಸುತ್ತ ಬಲವಾಗಿ ಸುತ್ತಿಕೊಂಡಿತು. ಆಗ ಅವನು ಗಾಬರಿಯಿಂದ, "ಅಯ್ಯೋ ಇದೇನು ಮಾಡುತ್ತ ಇದ್ದೀಯಾ?" ಎಂದು ಕೇಳಿದ. "ನಿನ್ನನ್ನು ಸಾಯಿಸುತ್ತೇನೆ" ಎಂದಿತು ಹಾವು. "ನಿನ್ನ ಪ್ರಮಾಣ ಏನಾಯಿತು?" ಎಂದು ಸಂಕಟದಿಂದ ಕೇಳಿದ. "ನಾನು ಪ್ರಮಾಣ ಮಾಡಿದ್ದೇನೋ ನಿಜ. ಆದರೆ, ಅದು...

ದಿನಕ್ಕೊಂದು ಕಥೆ 1064

ದಿನಕ್ಕೊಂದು ಕಥೆ  ಆತ್ಮಾಭಿಮಾನ ಕೆದಕಿದಾಗ ಅದೊಂದು ಮೊಬೈಲ್ ಅಂಗಡಿ. ಅಂದು ಎಂದಿನಂತೆ ಉತ್ತಮ ವ್ಯಾಪಾರವಿತ್ತು. ಅಮಿತ್ ಅಂದರೆ ಮಾಲಿಕನಿಗೆ ಬಹಳ ಅಚ್ಚು ಮೆಚ್ಚು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಯಾವುದೇ ಗಿರಾಕಿ ಅಂಗಡಿಯೊಳಗೆ ಕಾಲಿಟ್ಟರೆ ಬರಿಗೈನಲ್ಲಿ ಹೋಗುತ್ತಿರಲಿಲ್ಲ. ಅಮಿತ್ ತನ್ನ ಚಾಲಾಕಿತನದಿಂದ ವ್ಯಾಪಾರ ಕುದುರಿಸುತ್ತಿದ್ದ. ಇದು ಮಾಲಿಕನ ಮೇಲೆ ಬಹಳನೇ ಪ್ರಭಾವ ಬೀರಿತ್ತು. ಅಂದು ಬಂದಿದ್ದ ಒಂದೆರಡು ಗಿರಾಕಿಗಳು ತೆರಳಿದ ಮೇಲೆ ಅಮಿತ್ ಅಂಗಡಿಯಲ್ಲಿ ಕುಳಿತು ಅದೇನೋ ಯೋಚಿಸುತ್ತಿದ್ದ. ಇನ್ನೂ ಚಿಗುರು ಮೀಸೆಯ ಯುವಕ. ಸಹಜವಾಗಿಯೇ ಜೀವನದಲ್ಲಿ ನೂರಾರು ಕನಸುಗಳು. ಅಮಿತ್  ತನ್ನದೇ ಲೋಕದಲ್ಲಿ ತಲ್ಲೀನನಾಗಿದ್ದ. ಪಕ್ಕದಲ್ಲೇ ಕುಳಿತಿದ್ದ ಮಾಲಿಕ ಅಮಿತ್ ಯಾವುದೋ ಯೋಚನೆಯಲ್ಲಿರುವುದನ್ನು ಗಮನಿಸಿದ. "ಏನು ಮಾರೆಯಾ ಬಹಳ ಯೋಚನೆ ಮಾಡುತ್ತಿದ್ದಿ?" ಎಂದು ಮಾಲಿಕ ಕೇಳಿದಾಗಲೇ ಅಮಿತ್ ವಾಸ್ತವಕ್ಕೆ ಮರಳಿದ್ದು. ಅಮಿತ್ ಆ ದಿನ "ನಾನು ಒಂದು ಮೊಬೈಲ್ ಅಂಗಡಿ ತೆರೆದಿದ್ದರೆ ಎಷ್ಟು ಚೆನ್ನಾಗಿತ್ತು" ಎಂದು ಯೋಚಿಸುತ್ತಿದ್ದ. ತನ್ನ ಸ್ವಂತ ಅಂಗಡಿಯನ್ನು ಕಲ್ಪಿಸಿಕೊಂಡು ಅದೆಲ್ಲೋ ದಿಟ್ಟಿಸುತ್ತಿದ್ದ. ಮಾಲಿಕನ ಪ್ರಶ್ನೆಗೆ ವಾಸ್ತವಕ್ಕೆ ಮರಳಿದ ಅಮಿತ್ " ಧಣಿಗಳೇ ನನಗೂ ಒಂದು ಮೊಬೈಲ್ ಅಂಗಡಿ ತೆರೆಯಬೇಕೆಂದು ಆಸೆಯಾಗುತ್ತಿದೆ" ಎಂದು ಉತ್ತರಿಸಿದ. ಮಾಲಿಕ ಮನಸ್ಸಿನಲ್ಲೇ ನಕ್ಕು ಬಿಟ್ಟ. ಕೈಯಲ್ಲಿ ಬಿಡಿಗಾಸು ಇಲ್ಲ. ತಿಂಗಳ...

ದಿನಕ್ಕೊಂದು ಕಥೆ 1063

ದಿನಕ್ಕೊಂದು ಕಥೆ  ಅವಮಾನದಲ್ಲಿ ಬೆಳೆದು, ಅಸಾಮಾನ್ಯನಾದ... ಅದೊಂದು ತರಗತಿ. ವಿದ್ಯಾರ್ಥಿಯೊಬ್ಬ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತಿದ್ದ. ಆತನಿಗೆ  ಉತ್ತರಿಸಲು ಕಷ್ಟವಾಗುತ್ತಿದೆ. ಉತ್ತರ ಗೊತ್ತಿದ್ದೂ ತಟ್ಟನೆ ಉತ್ತರಿಸಲಾಗುತ್ತಿಲ್ಲ. ಬಹಳನೇ ಕಷ್ಟಪಟ್ಟು ಉತ್ತರಿಸಿದ.   ಉಗ್ಗುವಿಕೆ  ಆತನಿಗಿದ್ದ ನ್ಯೂನ್ಯತೆ. ಉಳಿದ ವಿದ್ಯಾರ್ಥಿಗಳು ಆತನನ್ನು ಗೇಲಿ ಮಾಡುತ್ತಿದ್ದರು. ಆತ ನೋಡಲು ಅಷ್ಟೊಂದು ಸುಂದರನೂ ಆಗಿರಲಿಲ್ಲ. ಅವನ ಮೈನೋಟ ಹಾಗೂ ಉಗ್ಗುವಿಕೆ ನೋಡಿ ಆತನ ಸ್ನೇಹ ಮಾಡಲು ಯಾರೂ ಮುಂದೆ ಬಾರದೆ ಆತ ಏಕಾಂಗಿಯಾಗಿದ್ದ. ಸಹವಿದ್ಯಾರ್ಥಿಗಳ ಟೀಕೆಗಳಿಂದ ಆತ ಜರ್ಝರಿತನಾಗಿದ್ದ. ಆತನ ರೂಪ ನೋಡಿ ‘ಏಲಿಯನ್’ ಎಂದು ಕಟುಕುತಿದ್ದರು. ರೋವನ್ ಅಟ್ಕಿನ್ಸನ್ ಎಂಬ ವಿದ್ಯಾರ್ಥಿ ಎಲ್ಲರಿಂದ ಬೇರ್ಪಟ್ಟ ನತದೃಷ್ಟನಂತೆ ತೋರುತ್ತಿದ್ದ. ದೇವರು ಎಲ್ಲರನ್ನೂ ಒಂದೇ ರೀತಿ ಸೃಷ್ಟಿಸಿಲ್ಲ. ಕೈ ಇಲ್ಲದವರು, ಕಾಲಿಲ್ಲದವರು, ಅಂಧರು, ಕಿವುಡರು, ಮೂಗರು, ಬುದ್ಧಿಮಾಂದ್ಯರು, ಇವೆಲ್ಲಾ ಸೃಷ್ಟಿಯಲ್ಲಿನ ನ್ಯೂನ್ಯತೆಗಳು. ಇವರೆಲ್ಲರಿಗೂ ಎಲ್ಲವನ್ನು ಕ್ರಮಬದ್ಧವಾಗಿ ಹೊಂದಿರುವ ನಮ್ಮಂತೆಯೇ ಬದುಕುವ ಹಕ್ಕಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರ ಹಕ್ಕುಗಳನ್ನು, ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ.  ಈ ರೀತಿಯ ತೀರಾ ನ್ಯೂನ್ಯತಯಲ್ಲದಿದ್ದರೂ, ಸ್ವಲ್ಪ ಮಟ್ಟಿನ ನ್ಯೂನ್ಯತೆಯಲ್ಲಿ ಹುಟ್ಟಿ ಬೆಳೆದ ಹುಡುಗನಾಗಿದ್ದ ರೋವನ್ ಆಟ್ಕಿನ್ಸನ...

ದಿನಕ್ಕೊಂದು ಕಥೆ 1062

ದಿನಕ್ಕೊಂದು ಕಥೆ  *ಅದು ಕೆನರಾ ಬ್ಯಾಂಕ್ ನ ಕ್ಯಾಶ್ ಕೌಂಟರ್ ರಶ್ ಇತ್ತು ಅಲ್ಲಿ ಒಬ್ಬರು ಸುಮಾರು 75 ವರ್ಷದ ಅಜ್ಜ ಕೈಯ್ಯಲ್ಲಿ ಚೀಟಿ ಯೊಂದನ್ನು ಹಿಡಿದು ಬಂದಿದ್ದರು . ಕ್ಯಾಶಿಯರ್ ಅವರ ಅಕೌಂಟ್ ಚೆಕ್ ಮಾಡಿದ 660 ರೂ ಮಾತ್ರ ಇತ್ತು ಕಳೆದ 2 ತಿಂಗಳಿಂದ 15 ಲಕ್ಷದ ಹೋಂ ಲೋನ್ ನ 14,000 ರೂ EMI ಕಟ್ಟಿರಲಿಲ್ಲ ಆ ಮನುಷ್ಯ .. ಕ್ಯಾಶಿಯರ್ ಸಿಟ್ಟಲ್ಲಿದ್ದ..🥱* *"ಏನಜ್ಜ 2ತಿಂಗಳಿಂದ EMI ಕಟ್ಟಿಲ್ಲ ಅಕೌಂಟ್ ಅಲ್ಲಿ ಹಣ ಇಲ್ಲ ಏನಾಗಿದೆ ನಿಮಗೆ? " ಮತ್ತೆ ಕೂಗಿದ.. ನೋಡಿ ಮಗ ಅಕೌಂಟ್ ಗೆ ಹಣ ಹಾಕಿರ್ತಾನೆ ಚೆಕ್ ಮಾಡಿ ಅಜ್ಜ ಮೆಲ್ಲಗೆ ಹೇಳಿದಾಗ ಈ ಬಾರಿ ಕ್ಯಾಶಿಯರ್ ನ ಬಿಪಿ ಏರಿತ್ತು..🥱🥱* *ನೋಡಿ ಅಜ್ಜ ಆಗ ದಿಂದ ಹೇಳಿದ್ದೇ ಹೇಳುತ್ತೀರಲ್ವ, ತಲೆ ಸರಿ ಇಲ್ವಾ?, ಮಗ ಹಣ ಹಾಕಿಲ್ಲ ಅಕೌಂಟ್ ಅಲ್ಲಿ ಹಣ ಇಲ್ಲ.. ಎಲ್ಲೆಲ್ಲಿಂದ ಬರ್ತೀರಾ ನೀವೆಲ್ಲ"....ಈ ಬಾರಿ ಜೋರಾಗಿ ಕೂಗಿದ. ಆ ಸ್ವರ ಇಡೀ ಬ್ಯಾಂಕ್ ಗೆ ಪ್ರತಿಧ್ವನಿಸಿತ್ತು.ಎಲ್ಲರೂ ಆ ವೃದ್ಧರನ್ನು ಅಸಹ್ಯವಾಗಿ ಕಂಡರು🥱..* *ವೃದ್ಧರಿಗೂ ನಾಚಿಕೆ ಯಾಗಿದ್ದು ಅಲ್ಲೇ ಸೈಡ್ ಗೆ ಹೋಗಿ ತಮ್ಮ ಮೊಬೈಲ್ ಅಲ್ಲಿ ಮಗನ ಸಂಖ್ಯೆಗೆ ಕಾಲ್ ಮಾಡುತಿದ್ದರು.. ಕಾಲ್ ತಾಗುತ್ತಿರಲಿಲ್ಲ😔.. ಕ್ಯಾಶಿಯರ್ ನ ಸಿಟ್ಟು ತಗ್ಗಿರಲಿಲ್ಲ ನೋಡಿ ಅಜ್ಜ ನಿಮ್ಮ ಹೋಂ ಲೋನ್ ಮುಗಿಯಲು 7 ಒಟ್ಟು ಕಂತು ಬಾಕಿ ಇದೆ,ಈಗಾಗಲೇ 2 ಕಂತು ಕಟ್ಟಿಲ್ಲ ಮುಂದಿನ  ತಿಂಗಳು ಕಟ್ಟದಿದ್ದಲ್ಲಿ ಮನೆ ಜಪ್ತಿ ಮಾಡುತ್ತೇವೆ ನೋ...

ದಿನಕ್ಕೊಂದು ಕಥೆ 1061

*🌻ದಿನಕ್ಕೊಂದು ಕಥೆ🌻* *ಸುಂದರ ಸಂದೇಶ* ಹೀಗೆ ಒಂದೂರಲ್ಲಿ ಒಬ್ಬ ರಾಜಾ ಇದ್ದ. ಅವನು  ಬಹಳ ವರ್ಷಗಳಿಂದ ತನ್ನ ಸಾಮ್ರಾಜ್ಯವನ್ನಿ ಆಳ್ತಿದ್ದ. ತಾನು ರಾಜನ ಪಟ್ಟಕ್ಕೇರಿದ ನಲವತ್ತನೇ ವರ್ಷದ ಆಚರಣೆಯನ್ನ ವಿಜೃಂಭಣೆಯಿಂದ ಆಚರಿಸಬೇಕೆಂಬ ಉದ್ದೇಶದಿಂದ ಒಂದು ಉತ್ಸವವನ್ನ ಏರ್ಪಡಿಸಿದ. ಆ ಉತ್ಸವಕ್ಕೆ ತನ್ನ ಆರಾಧ್ಯ ಗುರುಗಳನ್ನು ಹಾಗೂ ಮಿತ್ರ ದೇಶದ ರಾಜರು,ರಾಜಕುಮಾರರನ್ನು ಕೂಡ ಮರ್ಯಾದಾಪೂರ್ವಕವಾಗಿ ಆಮಂತ್ರಿಸಿದ್ದ. ಉತ್ಸವವನ್ನ ರೋಚಕವಾಗಿಸಲು ತನ್ನ ರಾಜ್ಯದ ಸುಪ್ರಸಿದ್ಧ ನರ್ತಕಿಯ ನಾಟ್ಯ ಕಾರ್ಯಕ್ರಮವನ್ನ ಆಸ್ಥಾನದಲ್ಲಿ ಏರ್ಪಡಿಸಿದ್ದ. ರಾಜನು ಒಂದು ದೊಡ್ಡ ಪಾತ್ರೆಯ ತುಂಬ ಬಂಗಾರದ ನಾಣ್ಯಗಳನ್ನ ತನ್ನ ಗುರುವಿನ ಕೈಯಲ್ಲಿ ಕೊಟ್ಟಿದ್ದ. ನರ್ತಕಿಯು ಒಳ್ಳೆಯ ಹಾಡು,ನರ್ತನದಿಂದ ಮನಸ್ಸನ್ನು ಉಲ್ಲಸಿತಗೊಳಿಸಿದಲ್ಲಿ,ಆಕೆಗೆ ಗುರುಗಳ ಹಸ್ತದಿಂದ ಆ ನಾಣ್ಯಗಳ ನೀಡಿಸಿ ಸನ್ಮಾನಿಸುವುದು ಆತನ ಇಚ್ಛೆಯಾಗಿತ್ತು. ರಾತ್ರಿಯೆಲ್ಲ ಹಾಡು,ನಾಟ್ಯ ನಡೆಯುತ್ತ ಬ್ರಾಹ್ಮೀ ಮುಹೂರ್ತದ ಸಮಯವೂ ಬಂದಿತು.ಆಕಸ್ಮಿಕವಾಗಿ ನರ್ತಕಿ ತಬಲ ಬಾರಿಸುವವನ್ನ ನೋಡುತ್ತಾಳೆ.ಪಾಪ ಅವನಿಗೆ ನಿದ್ದೆ ಕಣ್ತುಂಬಿ ಬಂದು ತೂಕಡಿಸುತ್ತಿರುತ್ತಾನೆ. ನರ್ತಕಿಗೆ ಗಾಬರಿಯಾಯಿತು. ನಿದ್ದೆಗಣ್ಣಿನಲ್ಲಿ ತಬಲದ ದಾಟಿಯನ್ನ ತಪ್ಪು ನುಡಿಸಿದಲ್ಲಿ ರಾಜನಿಗೆ ಕೋಪ ಬಂದು ಏನಾದರೂ ಶಿಕ್ಷೆ ಕೊಟ್ಟಾನು ಎಂಬ ಭಯದಿಂದ,ಆತನನ್ನು ಎಚ್ಚರಿಸಲು ಚೌಪದಿಯ ನುಡಿಯೊಂದನು ಹೇಳುತ್ತಾಳೆ. "ಸಮಯವು ಕಳೆದಿಹುದು ಬಹಳ ...

ದಿನಕ್ಕೊಂದು ಕಥೆ 1060

ದಿನಕ್ಕೊಂದು ಕಥೆ  ನಾನೇಕೆ ಅಪ್ಪನಾದೆ?          ಆವತ್ತು ಸಿಟ್ಟು , ಒಂದೇ "ಸಮನೇ "ನೆತ್ತಿಗೆ ಏರಿತ್ತು . ನನ್ನ ಮಗ "ರವಿಯ "ಬಾಯಲ್ಲಿ ಇದ್ದ , ಚೀವಿಂಗ್ ಗಮ್ ನೋಡಿ .           ಕೈಯಲ್ಲಿ ಕೋಲು ಬಂದಿತ್ತು , ಮನೆಯ ಅಂಗಳಕ್ಕೆ ದರ ದರ ಎಳೆದುಕೊಂಡು ಹೋಗಿದ್ದೆ .        ಆಳುತ್ತಿದ್ದ ಆತ , "ಅಪ್ಪ ಪಕ್ಕದ ಮನೆ ತ್ರಯಾಂಭಕ ಚೀವಿಂಗ್ ಗಮ್ ಕೊಟ್ಟನೆಂದು".          "ಜೀವಮಾನದಲ್ಲಿ ಇನ್ನು ತಿನ್ನುವುದಿಲ್ಲ "ಎಂದು . ಕೋಲು ಪುಡಿ ಆಗುವ ತನಕ ಹೊಡೆದಿದ್ದೆ . ಆತ ಕೈ ಮುಗಿಯುತಿದ್ದ ..."ಇದೊಂದು ಸಾರಿ ಬಿಟ್ಟು ಬಿಡು ಅಪ್ಪ " ಎಂದು .          ಮಗನ ಹದ್ದು ಬಸ್ತಿನಲ್ಲಿ ಇಟ್ಟಿದ್ದೆ . ಆದರೆ ನಾನು ಸಣ್ಣವನಿದ್ದಾಗ , ಅಪ್ಪನ "ಜೇಬಿನಿಂದ " ದುಡ್ಡು ಹಾರಿಸಿಕೊಂಡು ಹೋಗಿ ...ಶುಂಠಿ ಪೇಪರ್ ಮೆಂಟ್ ,     ಸೋಡಾ "ಕುಡಿದಿದ್ದು "ಮರೆತು ಹೋಗಿತ್ತು .       ನಾಲ್ಕನೇ ವರ್ಷಕ್ಕೆ ಆತನ ಶಾಲೆಗೆ ಹಾಕುವಾಗ , ಪ್ರತಿ ಬಾರಿ ಆತನ "ಕಲಿಕೆಯ "ಮೇಲೆ ನನ್ನ ಗಮನ .      "ನನ್ನ ಮಗ ನೂರರಲ್ಲಿ ಒಬ್ಬನಾಗಬೇಕು" ಎಂಬ ಹಂಬಲ ನನ್ನದು . ನನ್ನಾಕೆ ಯಾವತ್ತೂ , ನನ್ನ "ಆಸೆಗೆ "ಒತ್ತೆಯಾಗಿ ನಿಂತವಳು .            ಮ...

ದಿನಕ್ಕೊಂದು ಕಥೆ 1059

*🌻ದಿನಕ್ಕೊಂದು ಕಥೆ🌻* *ಆಸ್ತಿಗಾಗಿ ತಂದೆಯನ್ನೇ ಕೋರ್ಟಿಗೆ ಎಳೆದ ಶ್ರೀಮಂತ ಮಗಳು; ಕೋರ್ಟಿನಲ್ಲಿಯ ದೃಶ್ಯ ನೋಡಿ ತಂದೆ ಫುಲ್ ಶಾಕ್!* ನಿವೃತ್ತನಾಗಿ ಪೆನ್ಶನ್ ತೆಗೆದುಕೊಳ್ಳುತ್ತಿರುವ ತಂದೆಯ ವಿರುದ್ಧವೇ ಗಂಡನ ಮನೆಯಲ್ಲಿ ವಾಸಿಸುತ್ತಿದ್ದ ಮಗಳೊಬ್ಬಳು ಆಸ್ತಿಗಾಗಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದಳು. ನ್ಯಾಯಾಲಯದಲ್ಲಿ ಮಗಳು ನ್ಯಾಯಾಧೀಶರ ಮುಂದೆ ನನಗೆ ತಂದೆಯ ಆಸ್ತಿಯಲ್ಲಿ ನನ್ನದೇ ಆದ ಪಾಲು ಬೇಕಾಗಿದೆ ಎಂದಳು. ಇದಕ್ಕಾಗಿಯೇ ನಾನು ನನ್ನ ತಂದೆಯ ವಿರುದ್ಧ ಖಟ್ಲೆಯನ್ನು ದಾಖಲಿಸಿದ್ದೇನೆ ಎನ್ನುತ್ತಾಳೆ. ಮಗನ ಹಾಗೆ ಮಗಳಿಗೂ ತಂದೆಯ ಆಸ್ತಿಯಲ್ಲಿ ಸಮನಾದ ಪಾಲು ದೊರೆಯಬೇಕಾಗಿರುವುದು ಮಗಳ ಅಧಿಕಾರವಾಗಿದೆ. ಇದಕ್ಕಾಗಿ ವಿಚಾರಣೆಯ ಅವಶ್ಯಕತೆಯೇ ಇಲ್ಲ ಎಂದು ನ್ಯಾಯಾಧೀಶರು ಹೇಳುತ್ತಾರೆ. ತಂದೆಯಾದವನು ತನ್ನ ಮಕ್ಕಳಿಗೆ ಆಸ್ತಿಯಲ್ಲಿ ಸಮನಾಗಿ ಪಾಲು ಮಾಡಿ ಕೊಟ್ಟೇ ಕೊಡುತ್ತಾರೆ ಇದು ಅವರ ಕರ್ತವ್ಯವಾಗಿದೆ ಎಂದು ನ್ಯಾಯಾಧೀಶರು ಹೇಳುತ್ತಾರೆ. ಆಗ ಮಗಳು, ನೋಡಿ ನಾನು ತುಂಬಾ ಶ್ರೀಮಂತಳಾಗಿದ್ದೇನೆ. ನನಗೆ ಹಣದ ಅವಶ್ಯಕತೆ ಇಲ್ಲ ಆದರೂ ಸಹ ನನಗೆ ತಂದೆಯ ಆಸ್ತಿಯಲ್ಲಿ ಪಾಲು ಬೇಕೆ ಬೇಕು ಎನ್ನುತ್ತಾಳೆ. ನನಗೆ ನನ್ನ ತಂದೆಯ ಕಡೆಯಿಂದ ಪ್ರತಿ ತಿಂಗಳಿನ ಖರ್ಚು ತೆಗೆದುಕೊಳ್ಳಬೇಕಾಗಿದೆ ಎನ್ನುತ್ತಾಳೆ. ಇದನ್ನು ಕೇಳಿ ನ್ಯಾಯಾಧೀಶರು ಆಶ್ಚರ್ಯ ವ್ಯಕ್ತ ಮಾಡುತ್ತಾರೆ, ಹಾಗೂ ಆ ಮಗಳಿಗೆ ಕೇಳುತ್ತಾರೆ, ನೀನು ಇಷ್ಟೊಂದು ಶ್ರೀಮಂತಳಾಗಿರುವಾಗ ನಿನಗೆ ಹಣದ ಅವಶ್ಯಕ...

ದಿನಕ್ಕೊಂದು ಕಥೆ 1058

*🌻ದಿನಕ್ಕೊಂದು ಕಥೆ*🌻 ನಮ್ಮ ಜೀವನಕ್ಕೊಂದು ಮಾದರಿ ಪಾಠ.... *ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ  ಸಾಹಿತಿಗಳು.*..!!🌟 *ಗಳಗನಾಥರು:-* 🙏🏻 ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.ಸತ್ತಮೇಲೆ ಅಂತ್ಯಸಂಸ್ಕಾರ ಮಾಡಲೂ ಇವರ ಮನೆಯವರ ಬಳಿ ಹಣವಿರಲಿಲ್ಲ. ಪುಸ್ತಕಗಳಿಂದಲೇ ಇವರ ಅಂತ್ಯಸಂಸ್ಕಾರ  ಮಾಡಬೇಕಷ್ಟೇಯೆಂದು ಅವರ ಮನೆಯವರು ಅ ಸಂದರ್ಭದಲ್ಲಿ ನೊಂದುಕೊಂಡು ನುಡಿದಿದ್ದರು. *ವಿ.ಸೀತಾರಾಮಯ್ಯ*🙏🏻  ಇವರು ದಿನಾ ಬೆಳಿಗ್ಗೆ ಹೊಟೇಲಿನಿಂದ ಹತ್ತು ಇಡ್ಲಿ ತರಿಸುತ್ತಿದ್ದರಂತೆ.ಅದರಲ್ಲಿ ಒಂದು ಇಡ್ಲಿಯನ್ನಷ್ಟೇ ತಾವು ತಿಂದು ಉಳಿದ ಒಂಬತ್ತು ಇಡ್ಲಿಯನ್ನು ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಿದ್ದರು.ಇದನ್ನು ಅವರು ತಮ್ಮ ಬದುಕಿನುದ್ದಕ್ಕೂ ದಿನಚರಿಯಂತೆ ಪಾಲಿಸುತ್ತಿದ್ದರು. *ದ.ರಾ.ಬೇಂದ್ರೆ:-*🙏🏻 ಇವರೊಮ್ಮೆ ದಾರಿಯಲ್ಲಿ ನಡೆದುಕೊಂಡು ಬರಬೇಕಾದರೆ ಚಪ್ಪಲಿ ಕಿತ್ತುಹೋಗುತ್ತದೆ.ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಸ್ವಲ್ಪ ದೂರ ನಡೆದುಕೊಂಡು ಬಂದಮೇಲೆ,ದಾರಿಪಕ್ಕ ಕೂತಿದ್ದ ಚಮ್ಮಾರ ಸಿಗುತ್ತಾನೆ.ಬಿರುಬಿಸಿಲು ಆಗಿದ್ದರಿಂದ ಬೇಂದ್ರೆ ಅಜ್ಜ ಛತ್ರಿಬಿಡಿಸಿಕೊಂಡಿದ್ದರು.ಚಮ್ಮಾರ ತಮ್ಮ  ಚಪ್ಪಲಿಯನ್ನು ರಿಪೇರಿ ಮಾಡುವಾಗ ಅವರು ತಮ್ಮ ಛತ್ರಿಯನ್ನು ಬಿಸಿಲಲ್ಲಿದ್ದ ಚಮ್ಮಾರನಿಗೆ ಹಿಡಿದಿದ್ದರು..! ಇದರಿಂದ ಮುಜುಗರಗೊಂಡ ಚಮ್ಮಾರ,'ನಾನು ದಿನಾ ಬಿಸಿಲಲ್ಲೇ ಕೂತು ಕೆಲಸ ಮಾಡು...

ದಿನಕ್ಕೊಂದು ಕಥೆ 1057

*🌻ದಿನಕ್ಕೊಂದು ಕಥೆ🌻* *ಸಮುದ್ರದ ಚಿಪ್ಪು ಹಣವಾದರೆ?* ಒಬ್ಬ ಪುಟ್ಟ ಬಾಲಕ ತನ್ನ ತಂಗಿಯೊಂದಿಗೆ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ. ಹಿಂತಿರುಗಿ ನೋಡಿದರೆ ತಂಗಿ ಕಾಣುತ್ತಿಲ್ಲ. ಅವಳು ಒಂದು ಆಟಿಕೆಯ ಅಂಗಡಿಯ ಮುಂದೆ ನಿಂತು ಸುಂದರವಾದ ಗೊಂಬೆಯೊಂದನ್ನು  ನೋಡುತ್ತಿದ್ದಾಳೆ. ತಂಗಿಯ ಆಸೆಯನ್ನು ಅರಿತು  ಒಬ್ಬ ಜವಾಬ್ದಾರಿಯುತ ಅಣ್ಣನಾಗಿ ಆ ಗೊಂಬೆಯನ್ನು ತಂಗಿಗೆ ತೆಗೆದುಕೊಡುತ್ತಾನೆ.  ತಂಗಿಗೆ ಬಹಳ ಖುಷಿಯಾಗುತ್ತದೆ.   ಬಾಲಕನ ವಯಸ್ಸಿಗೂ ಮೀರಿದ ವರ್ತನೆಯನ್ನು ಅಂಗಡಿ ಮಾಲಕ ಬಹಳ ಕುತೂಹಲದಿಂದ ಗಮನಿಸುತ್ತಿದ್ದ. ಬಾಲಕ ತಂಗಿಯ ಕೈಹಿಡಿದುಕೊಂಡು  ಕ್ಯಾಶ್ ಕೌಂಟರ್ ಬಂದು ಗೊಂಬೆಯ ಕ್ರಯ ಕೇಳುತ್ತಾನೆ.. ಬದುಕಿನಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದ್ದ ಆ ಶಾಂತ ಸ್ವಭಾವದ ಅಂಗಡಿ ಮಾಲಕ ಬಾಲಕನಲ್ಲಿ ಕೇಳುತ್ತಾನೆ.  "ನಿನಗೆ ಏನು ಕೊಡಬಹುದು?".ಆಗ ಆ ಬಾಲಕ ಸಮುದ್ರದ ಬದಿಯಲ್ಲಿ ತಾನು ಸಂಗ್ರಹಿಸಿದ್ದ ಚಿಪ್ಪನ್ನು  ತನ್ನ ಕಿಸೆಯಿಂದ  ತೆಗೆದು   ಕೊಡುತ್ತಾನೆ. ಅಂಗಡಿ ಮಾಲಿಕ ನೋಟುಗಳನ್ನು ಎಣಿಸಿದಂತೆ ಎಲ್ಲಾ ಚಿಪ್ಪುಗಳನ್ನು ಎಣಿಸುತ್ತಾನೆ. ನಂತರ ಅದರಲ್ಲಿ 4 ಚಿಪ್ಪುಗಳನ್ನು ಮಾತ್ರ ತಗೊಂಡು ಉಳಿದ ಎಲ್ಲಾ ಚಿಪ್ಪುಗಳನ್ನು ಬಾಲಕನಿಗೆ ವಾಪಾಸು ಕೊಡುತ್ತಾನೆ. ಬಾಲಕ ಉಳಿದ ಚಿಪ್ಪುಗಳನ್ನು ತನ್ನ ಕಿಸೆಗೆ ತುಂಬಿಸಿಕೊಂಡು ತಂಗಿಯೊಂದಿಗೆ ತುಂಬಾ ಸಂತೋಷದಿಂದ ಅಂಗಡಿಯಿಂದ ಹೊರ ನಡೆಯುತ್ತಾನೆ...

ದಿನಕ್ಕೊಂದು ಕಥೆ 1056

*🌻ದಿನಕ್ಕೊಂದು ಕಥೆ🌻*                                                                     *ದೇವರಾದ ಡಾಕ್ಟರ್*                           ಅರ್ಧರಾತ್ರಿಯ ಸಮಯ. ಆ ಡಾಕ್ಟರ್ ತಮ್ಮ ಕೆಲಸವೆಲ್ಲಾ ಮುಗಿಸಿ ಮಲಗಿ ಹತ್ತು ನಿಮಿಷವಾಗಿಲ್ಲ, ಯಾರೋ ಬಾಗಿಲು ತಟ್ಟಿದರು.     ‌ಡಾಕ್ಟರು ಬಹಳ ನಿಯತ್ತಿನ ಮನುಷ್ಯ. ಬೇಸರ ಪಟ್ಟುಕೊಳ್ಳದೆ ಹೋಗಿ ತೆಗೆದರು. ಬಂದ ಮನುಷ್ಯ ಇವರ ಕಾಲು ಹಿಡಿದುಕೊಂಡು "ಸಾರ್, ಒಬ್ಬ ಗರ್ಭಿಣಿ ಹೆಂಗಸು ಬಹಳ ಪ್ರಸವವೇದನೆ ಅನುಭವಿಸುತ್ತಿದ್ದಾಳೆ ಸಾರ್. ಆಕೆಯನ್ನು ನೀವೇ ಕಾಪಾಡಬೇಕು ಸಾರ್. ದಯಮಾಡಿ ನೀವೇ ಬಂದು ಅವಳನ್ನು ಉಳಿಸಬೇಕು, ಆಗಲ್ಲ ಅನ್ನಬೇಡಿ ಸಾರ್" ಎಂದು ಅಲವತ್ತುಕೊಂಡ.  ಸುಮಾರು ೭೦ ವರ್ಷಗಳ ಕೆಳಗೆ ಮಹಾರಾಷ್ಟ್ರದ ಮೂಲೆಯಲ್ಲೊಂದು ಗ್ರಾಮದಲ್ಲಿನ ಡಾಕ್ಟರ್ ಅವರು. ತಕ್ಷಣ ಅವನೊಂದಿಗೆ ಹೊರಟರು.     ಆ ಹೆಂಗಸು ೧೯-೨೦ರ ವಯಸ್ಸಿನವಳಿದ್ದಿರಬೇಕು ಎಂದು ತಿಳಿಯಿತು. ಪ್ರಸವ ನಿಜಕ್ಕೂ ಕಷ್ಟದಾಯಕ ವಾಗಿತ್ತು ಆಕೆಗೆ. ಬೆಳಗಿನ ಜಾವವಾಗಿತ್ತು ಆಗ. ಆ ಹೆಂಗಸು ಡಾಕ್ಟರ ಕ...

ದಿನಕ್ಕೊಂದು ಕಥೆ 1055

*🌻ದಿನಕ್ಕೊಂದು ಕಥೆ 🌻* *ಮಿಡಿತ*      "ಅವ್ವಾ..ss, ಬಾಕ್ಲು ಹಾಕ್ಕೋ..,ನಾ ಬತ್ತೀನೀ.."ಎಂದು ತನ್ನ ತಾಯಿಗೆ ಕೂಗಿ ಹೇಳಿದ ನಿಂಗಿಯ ಗಂಡ ಪರಶು,ಅವರ ಉತ್ತರಕ್ಕಾಗಿ ಕಾಯದೇ, ಎಂದಿನಂತೆ ಗಾರೆ ಕೆಲಸಕ್ಕೆಂದು ಮೊಪೆಡ್ ಸ್ಟಾರ್ ಮಾಡಿ, ಇನ್ನೇನು ಹೊರಡಬೆಕೆನ್ನುವಷ್ಟರಲ್ಲಿ ಎದುರಿನಿಂದ ನಿಧಾನವಾಗಿ ಬರುತ್ತಿದ್ದ ಆಟೋ ಆತನ ಪಕ್ಕಕ್ಕೆ ಬಂದು ನಿಂತಿತು.ಪರಶು ಇಣುಕಿ ನೋಡಿದ.ಅದರೊಳಗೆ ತನ್ನ ಪತ್ನಿ ಇರುವುದನ್ನು ಕಂಡು ಮನದಲ್ಲಿ"ಅರ್ರೇ.. ಇದೇನು  ಇವಳು ಭಾಗಕ್ಕನ ಮನೆ ಕೆಲಸಕ್ಕೆ ಹೋಗಿ ಇನ್ನೂ ಒಂದು ಗಂಟೆ ಕೂಡಾ ಆಗಿಲ್ಲ.. ಇದ್ಯಾಕೆ ರಿಕ್ಷಾ ದಲ್ಲಿ ಬಂದ್ಲು"ಎಂದು ಯೋಚಿಸುತ್ತಿದ್ದವ ಅರ್ಧಕ್ಕೆ ನಿಲ್ಲಿಸಿ ಕುತೂಹಲದಿಂದ"ಇದ್ಯಾಕೆ ನಿಂಗೀ.."ಎಂದು ಕೇಳುತ್ತಿದ್ದಂತೆ , ಆಕೆ ಕುಳಿತಲ್ಲಿಂದಲೇ "ಮತ್ತೆ..ಭಾಗಕ್ಕಾವ್ರು ಇಂದ ನಸಕ್ ನ್ಯಾಗೆ  ಹೂ ಕಿತ್ತಾಕೆ ಹೋಗಿ ತಲೆತಿರುಗಿ ಮೆಟ್ಲಮ್ಯಾಲಿಂದ ಬಿದ್ದು ತಲೆಗೆ ಏಟು ಮಾಡ್ಕೊಂಡಾವ್ರೆ.. ತಲೆಯಿಂದ ಸಾನೆ ರಕ್ತ ಹೋಗಿ ಪ್ರಜ್ಞೆ ತಪ್ಪಿತ್ತಂತೆ, ಹಿಂಗಾಗಿ ಅಪ್ಪಾರು ಮತ್ತೆ ಅವರ ಮಗ ಎಲ್ಲಾ ಸೇರಿ  ಅವರನ್ನ ಆಸ್ಪತ್ರೆಗೆ ಸೇರ್ಸಿದ್ದಾರಂತೆ... ಅಲ್ಲಿ ಅವ್ರ ರಕ್ತದ ಗುಂಪಿನ ರಕ್ತ ಸಿಗ್ತಿಲ್ಲಂತ ಎಲ್ಲಾ ಕಡೆ ಹುಡುಕ್ತಾವ್ರೆ... ಹಿಂಗಾಗಿ ಭಾಗಕ್ಕಾರ ಮಗಳು. ನನಗೆ ಪಾತ್ರೆ ತೊಳ್ದು ಬಿಟ್ಟು, ನೀ ಆಸ್ಪತ್ರೆಗೆ ಹೋಗೀರು ಎಂದು ಆಟೋ ಮಾಡಿ ಕಳ್ಸಕೊಟ್ಟವ್ರೆ.. ಅದ್ಕೆ  ಅತ್ತೆಗೆ ಒ...

ದಿನಕ್ಕೊಂದು ಕಥೆ 1054

*🌻ದಿನಕ್ಕೊಂದು ಕಥೆ*🌻 *ನಿಮ್ಮ_ಆಲೋಚನಾ_ಶಕ್ತಿಯೇ_ನಿಮ್ಮ_ಸಂಪತ್ತು*  (ಮಹಾರಾಷ್ಟ್ರದ ಜಿಲ್ಲಾಧಿಕಾರಿ ಒಬ್ಬರ ಸತ್ಯ ಘಟನೆ) ಒಂದು ಶಾಲೆಯಲ್ಲಿ ದಿನದ ಪಾಠಗಳು ನೆಡೆಯುತ್ತಿತ್ತು ಎಂದಿನಂತೆ.......ಹೊರಗೆ ಜೋರಾಗಿ ಮಳೆ ಬರುತ್ತಿತ್ತು,....4ನೇ ತರಗತಿಯಲ್ಲಿ ಪಾಠದ ಮದ್ಯ ಶಿಕ್ಷಕರೊಬ್ಬರು ತಮಾಷೆಗೆ ಮಕ್ಕಳನ್ನು ಕೇಳಿದರು - ನಿಮ್ಮೆಲ್ಲರಿಗೂ ನಾನು 100-100 ರೂಪಾಯಿ ಕೊಟ್ಟರೆ ನೀವೆಲ್ಲರೂ ಏನು ಖರೀದಿಸುತ್ತೀರಿ?  ಒಬ್ಬ ವಿದ್ಯಾರ್ಥಿ ಹೇಳಿದ - ನಾನು ವಿಡಿಯೋ ಗೇಮ್‌ ಖರೀದಿಸುತ್ತೇನೆ.. ಇನ್ನೊಬ್ಬ ಹೇಳಿದ - ನಾನು ಕ್ರಿಕೆಟ್ ಬಾಲ್ ಖರೀದಿಸುತ್ತೇನೆ. ಮತ್ತೊಬ್ಬ ಹೇಳಿದ- ನಾನು ಒಂದು ಮುದ್ದಾದ ಗೊಂಬೆಯನ್ನು ಖರೀದಿಸುತ್ತೇನೆ. ಬೇರೆಯೊಬ್ಬ ಹೇಳಿದ - ನಾನು  ಚಾಕೊಲೇಟ್ಗಳನ್ನು ಖರೀದಿಸುತ್ತೇನೆ. ...ಆದರೆ..   ಒಂದು ಮಗು ಆಲೋಚನೆಯಲ್ಲಿ ಮುಳುಗಿತ್ತು....ಅದನ್ನು ಗಮನಿಸಿದ ಶಿಕ್ಷಕರು ಆ ಹುಡುಗನನ್ನು ಕೇಳಿದರು - ನೀನು ಏನು ಯೋಚಿಸುತ್ತಿದ್ದಿಯ ಮರಿ, ನೀನು ಏನು ಖರೀದಿಸುತ್ತೀಯಾ? ಆ ಮಗು ಹೇಳಿತು - ಕನ್ನಡಕ ಖರೀದಿಸುವೇ!! ಶಿಕ್ಷಕ-:ಕನ್ನಡಕನ....ಯಾಕೆ ನಿನಗೆ ಅದು? ಆ ಹುಡುಗ ಹೇಳಿದ.....ಸಾರ್, ನನ್ನ ತಾಯಿಗೆ ಸ್ವಲ್ಪ  ದೃಷ್ಟಿ ಮಂಜು, ಸರಿಯಾಗಿ ಕಣ್ಣು ಕಾಣಿಸುವುದಿಲ್ಲ...ಆದ್ದರಿಂದ ನಾನು ನನ್ನ ತಾಯಿಗೆ ಕನ್ನಡಕವನ್ನು ಖರೀದಿಸುತ್ತೇನೆ!  ಶಿಕ್ಷಕರು ಕೇಳಿದರು - ನಿನ್ನ ತಂದೆ ನಿನ್ನ ತಾಯಿಗೆ ಕನ್ನಡಕವನ್ನು ತಂದು...

ದಿನಕ್ಕೊಂದು ಕಥೆ 1053

*🌻ದಿನಕ್ಕೊಂದು ಕಥೆ🌻                                ಪ್ರಜೆಯೊಬ್ಬಳಿಗೆ ದೇಶದ  ಪ್ರಧಾನಿಯ ಪ್ರಾಮಿಸ್ !* ದೇಶದ ಪ್ರಧಾನಿಯೊಬ್ಬರು ಸಾಮಾನ್ಯ ಪ್ರಜೆಯೊಬ್ಬಳಿಗೆ ಮಾಡಿದ ಪ್ರಾಮಿಸ್ ಒಂದರ ಬಗೆಗಿನ ಕುತೂಹಲಕಾರಿಯಾದ ಪ್ರಸಂಗವೊಂದು ಇಲ್ಲಿದೆ. ಬ್ರಿಟನ್ನಿನಲ್ಲಿ ವಿಕ್ಟೋರಿಯಾ ರಾಣಿಯ ಆಳ್ವಿಕೆಯಿದ್ದಾಗ, 1855ರಿಂದ 1865ರವರೆಗೆ ಲಾರ್ಡ್ ವಿಸ್ಕೌಂಟ್ ಪಾಮರ್ಸ್ಟನ್ ಬ್ರಿಟನ್ನಿನ ಪ್ರಧಾನಿಯಾಗಿದ್ದರು. ರಾಣಿಯವರ ಮತ್ತು ಪ್ರಧಾನಿಗಳ ನಡುವೆ ಮನಸ್ತಾಪಗಳ ಶೀತಲ ಸಮರ ನಡೆಯುತ್ತಿತ್ತು. ಆದರೆ ಪ್ರಜಾಪ್ರಭುತ್ವದ ಮೂಲಕ ಪ್ರಧಾನಿಯಾಗಿದ್ದವರನ್ನು ಪದಚ್ಯುತಗೊಳಿಸಲು ರಾಣಿಯವರಿಗೆ ಸಾಧ್ಯವಿರಲಿಲ್ಲ. ಹಾಗಾಗಿ ಸಹಿಸಿಕೊಳ್ಳಬೇಕಿತ್ತು! ಒಮ್ಮೆ ಸಚಿವ ಸಂಪುಟದ  ನಡೆಯುತ್ತಿತ್ತು. ಗಹನ ಚರ್ಚೆಯಾಗುತ್ತಿತ್ತು. ಇದ್ದಕ್ಕಿದ್ದಂತೆ ಪ್ರಧಾನಿಯವರು ಈಗಲೇ ಬರುತ್ತೇನೆನ್ನುತ್ತ ಹೊರಕ್ಕೆ ಹೋದರು. ಅರ್ಧ ಗಂಟೆಯ ನಂತರ ಹಿಂತಿರುಗಿ ಸಭೆಯನ್ನು ಮುಂದುವರೆಸಿದರು. ಎಲ್ಲರಿಗೂ ಸಂಪುಟದ ಸಭೆಯನ್ನು ಮಧ್ಯದಲ್ಲೇ ಬಿಟ್ಟು ಪ್ರಧಾನಿಯವರು ಹೋಗಿ ಬರುವಂತಹ ಘನಕಾರ್ಯ ಏನಿರಬಹುದೆನ್ನುವ ಕುತೂಹಲ! ಹಿರಿಯ ಮಂತ್ರಿಗಳೊಬ್ಬರು ಧೈರ್ಯದಿಂದ ಪ್ರಶ್ನೆಯನ್ನು ಕೇಳಿಬಿಟ್ಟರು! ಪ್ರಧಾನಿಯವರು ತಕ್ಷಣ ಹೇಳಲು ಪ್ರಾರಂಭಿಸಿದರು. ನಾನಿಂದು ಮುಂಜಾನೆ ಕಚೇರಿಗೆ ಬರುವಾಗ ರಸ್ತೆಯಲ್ಲಿ ಹತ...

ದಿನಕ್ಕೊಂದು ಕಥೆ 1052

*🌞ದಿನಕ್ಕೊಂದು ಕಥೆ🌞* ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು.. ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು.. ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.  ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..  ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...  ಮಂತ್ರಿ ಹೇಳಿದ *‘ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್...

ದಿನಕ್ಕೊಂದು ಕಥೆ 1051

*🌞ದಿನಕ್ಕೊಂದು ಕಥೆ🌞* *ಅವಕಾಶ ಸಿಕ್ಕಾಗ ಸಹಾಯ ಮಾಡಬೇಕು.* ಇದೊಂದು ನೈಜ ಘಟನೆ ಉತ್ತರ  ಭಾರತದ ಒಂದು ಗ್ರಾಮದಲ್ಲಿ ಒಬ್ಬ ವೈದ್ಯರಿದ್ದರು. ಅವರು ಬಡತನದಲ್ಲಿ ಕಷ್ಟಪಟ್ಟು ಓದಿ ವೈದ್ಯರಾಗಿದ್ದರು. ವೈದ್ಯರಾದ ಮೇಲೆ ಬಡಬಗ್ಗರಿಗೆ  ತುಂಬಾ ಸಹಾಯ ಮಾಡುತ್ತಿದ್ದರು.  ಬಡಜನರ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಸುತ್ತಮುತ್ತ ಊರಿನಲ್ಲೆಲ್ಲಾ ಅವರಿಗೆ ಒಳ್ಳೆಯ ಹೆಸರಿತ್ತು. ಅವರ  ಹತ್ತಿರ ಒಂದು ಮೊಬೈಲ್ ಇತ್ತು. ಆ ಮೊಬೈಲ್ನಲ್ಲಿ ಇದ್ದ  ನಂಬರನ್ನು  ಒಂದು ಪೇಪರ್ ನಲ್ಲಿ ಬರೆದು ಮರದ ಮೇಲೆ, ಹಳೆಯ ಕಾಂಪೌಂಡುಗಳ ಮೇಲೆ, ಕಟ್ಟಡಗಳಲ್ಲಿ , ಬಸ್ಟಾಂಡ್ ಗಳಲ್ಲಿ ಹೀಗೆ  ಎಲ್ಲಾ ಕಡೆಗಳಲ್ಲಿ  ಅಂಟಿಸಿದ್ದರು. ಯಾಕೆಂದರೆ  ಯಾರಿಗಾದರೂ ಹುಷಾರಿಲ್ಲದಿದ್ದರೆ ಅಂದರೆ ಸಣ್ಣಪುಟ್ಟ ಜ್ವರ ಕೆಮ್ಮು ನೆಗಡಿಗಲ್ಲ, ತುರ್ತುಚಿಕಿತ್ಸೆಯ ಅಗತ್ಯವಿದ್ದ ಯಾರಾದರೂ ಸರಿಯೇ ಇಲ್ಲಿ ಬರೆದಿರುವ ನಂಬರಿಗೆ ಫೋನ್  ಮಾಡಿದರೆ ಸ್ವಲ್ಪವೂ ತಡಮಾಡದೆ ಬಿಟ್ಟ ಕೆಲಸ ಬಿಟ್ಟು, ಅದು ಎಷ್ಟೇ ದೂರ ಇರಲಿ, ಯಾವ ಮೂಲೆಯಲ್ಲೇ ಇರಲಿ, ಅಲ್ಲಿಗೆ ಹೋಗಿ ಅವರಿಗೆ ಚಿಕಿತ್ಸೆಯನ್ನು ಕೊಡುವುದು ಅವರ  ಕಾರ್ಯವಾಗಿತ್ತು. ಸಾಧಾರಣವಾಗಿ ಇದರ ಅವಶ್ಯಕತೆ ಬಡಬಗ್ಗರಿಗೆ ಮಾತ್ರ ಇರುತ್ತದೆ. ಇವರಾದರೋ, ಅವರಿಗೆ ಇಂತಿಷ್ಟೇ ಹಣ ಕೊಡಿ ಎಂದು ಯಾವತ್ತೂ ಕೇಳುತ್ತಿರಲಿಲ್ಲ ಅವರ ಯೋಗ್ಯತಾನುಸಾರ ಕೊಟ್ಟರೆ ತೆಗೆದುಕೊಳ್ಳುತ್ತಿದ್ದರು....

ದಿನಕ್ಕೊಂದು ಕಥೆ 1050

*🌞ದಿನಕ್ಕೊಂದು ಕಥೆ🌞* *ಜಗದ್ರಕ್ಷಕ ಶ್ರೀಕೃಷ್ಣ*    ಮಹಾಭಾರತವೆಂಬ ಬಹುದೊಡ್ಡ ಗ್ರಂಥವನ್ನು ಬರೆದ ವೇದವ್ಯಾಸರು,  ದೊಡ್ಡ ದೊಡ್ಡ ಘಟನೆಗಳ, ಸಂದರ್ಭಗಳಲ್ಲಿ ನಡೆದ ಲೆಕ್ಕಕ್ಕಿಲ್ಲ ಎನ್ನುವಂಥ ಸಣ್ಣಸಣ್ಣ ಘಟನೆಗಳನ್ನು ದಾಖಲಿಸಿದ್ದಾರೆ, ಅಂಥ ಘಟನೆಗಳು ಅನನ್ಯವಾದದ್ದು, ಅದ್ಭುತವಾದದ್ದು. ಅದು ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ, ದಾಯಾದಿಗಳು ಪಾಂಡವರು ಕೌರವರು ಯುದ್ಧಕ್ಕೆ ನಿಂತಿದ್ದಾರೆ.ಇನ್ನೇನು ಯುದ್ಧ ಆರಂಭವಾಗಬೇಕು. ಕೃಷ್ಣ ಅರ್ಜುನನಿಗೆ  ಗೀತೋಪದೇಶ   ಮಾಡಿದ್ದಾಗಿದೆ. ಯುದ್ಧ ಆರಂಭವಾಗುವ ಮೊದಲು ಶಂಖ, ಜಾಗಂಟೆ, ನಗಾರಿ ಡೋಲು, ಕುದುರೆಗಳ  ಹೇಷಾವರ, ಆನೆಗಳಿಗೆ  ಘೀಳಿಟ್ಟವು. ಸೈನಿಕರ ಕೂಗಾಟ, ಯುದ್ಧ ಭೂಮಿ ಆಗಲೇ ರಣರಂಗವಾಗಿ, ಇಡೀ ಜಗತ್ತನ್ನೇ ತುಂಬಿದಂತಾಗಿತ್ತು. ಈ ಸಮಯದಲ್ಲಿ  ಕೃಷ್ಣಾ ನನ್ನ ರಥವನ್ನು ಎರಡೂ ಸೇನೆಗಳ ನಡುವೆ ನಿಲ್ಲಿಸು ನಾನು ಒಮ್ಮೆ ಎಲ್ಲರನ್ನೂ ನೋಡಬೇಕು ಎಂದು ಹೇಳಿದ ಅರ್ಜುನನಿಗಾಗಿ ರಥವನ್ನು ಎರಡೂ ಸೇನೆಗಳ ನಡುವೆ ನಿಲ್ಲಿಸಿದ.  ಹೀಗೆ ಕೃಷ್ಣ ರಥ ನಿಲ್ಲಿಸಿದ ಸಮಯದಲ್ಲಿ ಎಲ್ಲೆಲ್ಲೂ ಧೂಳು, ಗಲಾಟೆ, ಕೂಗು,ಘೋಷಣೆ, ಈ ಬಾರಿ  ಗದ್ದಲದಲ್ಲಿ  ಒಂದು  ಟಿಟ್ಟಿಬ ಎಂಬ ಪುಟ್ಟಹಕ್ಕಿ  ಆಕಾಶದಲ್ಲಿ ಹಾರುತ್ತಾ,  ಅಯ್ಯಯ್ಯೋ ಈ ಗಲಾಟೆ ಏನು ಇದು, ಪ್ರಪಂಚದ ಕಥೆಯೇ ಮುಗಿದು ಹೋಗುತ್ತಾ, ಈ ಗಲಾಟೆ  ನಿಲ್ಲುವಂತೆ ಕಾಣುತ್ತಿಲ್ಲ...

ದಿನಕ್ಕೊಂದು ಕಥೆ 1049

*🌞ದಿನಕ್ಕೊಂದು ಕಥೆ🌞*               ರಾಜ ನೊಬ್ಬನಿಗೆ ,ಯಾರೋ ಸ್ನೇಹಿತರು ಸುಂದರವಾದ ಎರಡು ಗಿಡುಗ ಪಕ್ಷಿಗಳನ್ನು ಉಡುಗೊರೆಯಾಗಿ ಕೊಟ್ಟಿದ್ದರು. ರಾಜ ಅದನ್ನು ಗಿಡುಗಗಳಿಗೆ ತರಬೇತಿ ನೀಡುವವನ ಹತ್ತಿರ ಕೊಟ್ಟು ಅವಕ್ಕೆ ತರಬೇತಿ ನೀಡಲು ಹೇಳಿದ.         ಕೆಲವು ತಿಂಗಳುಗಳ ನಂತರ ಆ ತರಬೇತುದಾರ ಬಂದು ಹೇಳಿದ,ಮಹಾಸ್ವಾಮಿ ,ಒಂದು ಹಕ್ಕಿ ,ಬಹಳ ಸುಂದರವಾಗಿ ರಾಜಗಾಂಭೀರ್ಯದಿಂದ ಮುಗಿಲೆತ್ತರಕ್ಕೆ  ಹಾರಾಡುತ್ತದೆ ,ಆದರೆ ಇನ್ನೊಂದು ಏನು ಮಾಡಿದರೂ  ಮರದ ಕೊಂಬೆಯನ್ನು ಬಿಟ್ಟು ಕದಲುವುದಿಲ್ಲಾ, ನಾನು  ಅದು  ಹಾರಲು ನನ್ನ ಬುದ್ದಿ ಯನ್ನೆಲ್ಲಾ   ಉಪಯೋಗಿಸಿದ್ದೇನೆ,ಆದರೆ ಏನೂ ಪ್ರಯೋಜನ ವಾಗಲಿಲ್ಲಾ ಎಂಬುದಾಗಿ ತಿಳಿಸಿದ.      ಏನೋ ಅನಾರೋಗ್ಯ ಇರಬೇಕೆಂದು,ಭಾವಿಸಿದ ರಾಜ ,ವೈಧ್ಯರು,ಚಿಕಿತ್ಸಕರನ್ನು ಕರೆಸಿ ,ಔಷಧೋಪಚಾರ ಮಾಡಿಸಿದ,ಆದರೂ ಗಿಡುಗ ಕೊಂಬೆಯನ್ನು ಬಿಟ್ಟು ಹಾರಲೇ ಇಲ್ಲಾ. ರಾಜನಿಗೆ ತುಂಬಾ ಬೇಸರವಾಯ್ತ.     ಕೊನೆಗೆ ನೈಸರ್ಗಿಕ ಜೀವನ ನೆಡೆಸುವವರಿಂದ  ಇದಕ್ಕೆ ಪರಿಹಾರ ಸಿಗಬಹುದೆಂದು ಒಬ್ಬ  ರೈತಾಪಿ  ವ್ಯಕ್ತಿ ಯನ್ನು  ಕರೆತಂದು ಇದರ  ವಿಷಯವನ್ನು ತಿಳಿಸಿದ.        ಮರುದಿನ ಅಂತಃಪುರದ ಕಿಟಕಿಯಿಂದ  ನೋಡಿದಾಗ  ಈ ಗಿಡುಗ ,ಗರ...

ದಿನಕ್ಕೊಂದು ಕಥೆ 1048

🌻  *ದಿನಕ್ಕೊಂದು ಕಥೆ* 🌻  🪷🪴    *ಹಗಲು ಕನಸಿನ ಅಪಾಯ.* 🪷🪴 ಒಂದು ಹಳ್ಳಿಯಲ್ಲಿ ಒಬ್ಬ ಯುವಕನಿದ್ದ. ಹೆಸರು ರಮೇಶ್. ಗಟ್ಟಿಮುಟ್ಟಾದ ದೇಹವಿದ್ದರೂ ದುಡಿಯುವುದರಲ್ಲಿ ಅವನಿಗೆ ಆಸಕ್ತಿಯಿರಲಿಲ್ಲ. ತಾಯಿ ದುಡಿದು ತಂದುದನ್ನೇ ಹೊಟ್ಟೆ ತುಂಬ ಊಟ ಮಾಡಿ ಹಗಲಲ್ಲೇ ಚೆನ್ನಾಗಿ ನಿದ್ರೆ ಮಾಡುತ್ತಿದ್ದ. ನಿದ್ರೆಯಿಂದ ಎದ್ದ ಮೇಲೆ ತಾಯಿಯೊಂದಿಗೆ, 'ಅಮ್ಮ, ನಾನೊಂದು ಕನಸು ಕಂಡೆ. ಅದರಲ್ಲಿ ರಾಜಕುಮಾರಿ ನನ್ನ ಕೈ ಹಿಡಿದುಕೊಂಡಿದ್ದಳು" ಎನ್ನುತ್ತಿದ್ದ. ಇನ್ನೊಂದು ದಿನ ತಾನು ದೊಡ್ಡ ಅರಮನೆ ಕಟ್ಟಿಸಿದಂತೆ ಕನಸು ಕಂಡೆನೆಂದು ಹೇಳುತ್ತಿದ್ದ. ದಿನವೂ ಅವನ ಕನಸಿನ ಕಥೆ ಕೇಳಿ ಬೇಸತ್ತು ತಾಯಿ, ಮಗನೇ, ಕನಸಿನಲ್ಲಿ ಬರುವ ಸಿರಿವಂತಿಕೆ ಎಚ್ಚರವಾದಾಗ ಇರುವುದಿಲ್ಲ. ಹಗಲು ನಿದ್ರೆ ಮಾಡಿದರೆ ಇಂತಹ ಕನಸು ಬೀಳುವುದು ಸಹಜ. ಹಗಲು ದೇಹ ಶ್ರಮದಿಂದ ಸಂಪಾದಿಸಿ ಸಿರಿವಂತನಾಗಿ ಕನಸುಗಳನ್ನೆಲ್ಲ ನನಸು ಮಾಡಿಕೊಳ್ಳಬೇಕು ಎಂದು ಹೇಳಿದಳು. "ಸರಿ, ನಾಳೆಯಿಂದಲೇ ಕನಸು ಕಾಣುವುದನ್ನು ನಿಲ್ಲಿಸಿ ಕೆಲಸಕ್ಕೆ ಹೋಗಿ ನಿಜವಾಗಿಯೂ ಶ್ರೀಮಂತನಾಗಿ ಸುಖವಾಗಿರುತ್ತೇನೆ" ಎಂದು ಹೇಳಿದ ಮರುದಿನ ರಮೇಶ್ ಕೆಲಸ ಹುಡುಕಿಕೊಂಡು ಹೊರಟ. ಒಬ್ಬ ರೈತ, "ನನ್ನಲ್ಲಿ ಐವತ್ತು ತೆಂಗಿನ ಮರಗಳಿವೆ. ಎಲ್ಲ ಮರಗಳನ್ನೇರಿ ತೆಂಗಿನಕಾಯಿ ತೆಗೆದುಕೊಟ್ಟರೆ ಮರಕ್ಕೊಂದು ಕಾಯಿಯಂತೆ ಐವತ್ತು ತೆಂಗಿನಕಾಯಿ ಕೂಲಿ ಕೊಡುತ್ತೇನೆ" ಎಂದು ಹೇಳಿದೆ. ಅವನು ಒಪ್ಪಿಕೊಂಡು ಕೆಲವು ...