ದಿನಕ್ಕೊಂದು ಕಥೆ .588

      *🌻ದಿನಕ್ಕೊಂದು ಕಥೆ🌻*                                                              ಇಬ್ಬರು ವಯಸ್ಕರು ಹೊಲದ ಹತ್ತಿರ ನಿಂತು ಮಾತನಾಡುತ್ತಾ ಇರುತ್ತಾರೆ.

ಮೊದಲನೆಯ ವ :ನನಗೆ ಒಬ್ಬಳು ಮೊಮ್ಮಗಳಿದ್ದಾಳೆ B.E ಓದಿದ್ದಾಳೆ, ನೌಕರಿ ಮಾಡ್ತಾ ಇದ್ದಾಳೆ ನೋಡಲು ಸುಂದರವಾಗಿದ್ದಾಳೆ, ಮೈಕಟ್ಟು ಸಹ ಚೆನ್ನಾಗಿದೆ ಯಾವುದಾದರೂ ಹುಡುಗ ಇದ್ದರೆ ಹೇಳಿ..

ಎರಡನೆಯವ : ನಿಮ್ಮ ಮಮ್ಮಗಳಿಗೆ ಯಾವ ರೀತಿಯ ಪರಿವಾರದ ಹುಡುಗ ಬೇಕು ?

ಮೊದಲನೆಯವ :  ದೊಡ್ಡ ಪರಿವಾರವೇನು ಬೇಡಬಿಡಿ ಹುಡುಗ  M.E /M.Tech ಓದಿರಬೇಕು, ಸ್ವಂತ ಮನೆ ಇರ್ಬೇಕು, ಕಾರು ಮತ್ತೆ ತೋಟ ಹಾಗೂ ಒಳ್ಳೆ ನೌಕರಿ ಇರಬೇಕು ಜೊತೆಗೆ ಒಳ್ಳೆ ಸಂಬಳ 1ಲಕ್ಷ ತನಕ ಇದ್ದರೆ ಸಾಕು.

ಎರಡನೆಯವ : ಮತ್ತೆನ್ನಾದ್ರೂ ? ? ?

ಮೊದಲೆಯವ : ಹಾ.... ಮತ್ತೊಂದು ವಿಷಯ ಹುಡುಗ ಒಬ್ಬನೇ ಇರಬೇಕು ಅಪ್ಪಾ, ಅಮ್ಮ, ಅಣ್ಣ, ತಮ್ಮ ತಂಗಿ ಇರಬಾರದು , ಅದು ಯಾಕೆಂದರೆ ಕುಟುಂಬದಲ್ಲಿ ಸುಮ್ನೆ ಜಗಳ ಆಗುತ್ತೆ ನೋಡಿ ಅದಕ್ಕೆ .

ಎರಡೆಯವನ ಕಣ್ಣಲ್ಲಿ ನೀರು ಬಂತು, ಕಣ್ಣನ್ನು ಒರಿಸುತ್ತಾ  ಹೇಳಿದ : ಹಾ ... ನನ್ನ ಒಬ್ಬ ಗೆಳೆಯನ ಮಗಾ ಇದ್ದಾನೆ ಅವನ ಕುಟುಂಬ ಒಂದು ಆಕ್ಕ್ಸಿಡೆಂಟ್ ನಲ್ಲಿ ಕಳೆದು ಕೊಂಡಿದ್ದಾನೆ, ಒಳ್ಳೆ ಓದಿದ್ದಾನೆ ಕಾರು, ಬಂಗಲೆ , ಮನೆಆಳು,  ಎಲ್ಲವೂ ಇದೆ ತಿಂಗಳಿಗೆ ರೂ 1.5 ಲಕ್ಷ ದುಡಿಯುತ್ತಾನೆ. ನಿಮ್ಮ ಹುಡುಗಿಯನ್ನು ಸುಖವಾಗಿ ಇಡುತ್ತಾನ್ನೇ.

ಮೊದಲೆಯವ : ಸರಿ ಹಾಗಾದ್ರೆ ಸಂಬದ ಜೋಡಿಸೋಣ.

ಎರಡನೆಯವ : ಹಾ ಆದ್ರೆ ಹುಡುಗನ ಒಂದು ಸರತ್ತು ಇದೆ ಅದೇನಪ್ಪಾ ಅಂದ್ರೆ ಹುಡುಗಿಯ ಯಾವುದೇ ಸಂಬಂಧಿಕರು ಇರಬಾರದು, ಕುಟುಂಬದವರು ಸಹ ಇರಬಾರದು, ಇಷ್ಟು ಹೇಳ್ತಾ ಹೇಳ್ತಾ ಇವರ ಕಣ್ಣು ತುಂಬಿ ನೀರು ಬರ್ತಾ ಇತ್ತು, ಮತ್ತೆ ಹೇಳಿದ್ರು ನಿಮ್ಮ ಪರಿವಾರದವರು ಆತ್ಮ ಹತ್ಯೆ ಮಾಡಿ ಕೊಂಡರೆ ಸಂಬಂದ ಕುಡಿ ಬರಬಹುದು ಎಂದರು.

ಮೊದಲೇನೆಯವ : ಇದೇನು ಹುಚ್ಚರ ರೀತಿ ಮಾತನಾಡುತ್ತೀರಾ ? ನಮ್ಮ ಕುಟುಂಬದವರು ಯಾಕೆ ಆತ್ಮಹತ್ಯೆ ಮಾಡಬೇಕು ನಾಳೆ ಏನಾದ್ರು ಹುಡುಗಿಗೆ ಹೆಚ್ಚು ಕಡಿಮೆ ಆಗಿ ಕಷ್ಟದಲ್ಲಿ ಸಿಲುಕಿದರೆ ಯಾರು ಇರುತ್ತಾರೆ ಅವಳ ಹತ್ತಿರ ?
ಎರಡನೆಯವ : ವ್ಹಾ. ರೇ ವ್ಹಾ.... ಗೆಳೆಯ ತನ್ನ ಕುಟುಂಬ ಮಾತ್ರ ಪರಿವಾರ , ಪರರ ಕುಟುಂಬ ಅಂದ್ರೆ ಏನು ಅಲ್ಲ ಅಲ್ವಾ ? ಓ.... ಗೆಳೆಯ ಮಕ್ಕಳಿಗೆ ಪರಿವಾರದ ಮಹತ್ವವನ್ನು ಹೇಳಿಕೊಡು, ಮನೆಯ ದೊಡ್ಡವರು, ಚಿಕ್ಕವರು ಎಲ್ಲರೂ ನಮಗೆ ಬೇಕಾದವರು, ಇಲ್ಲಾ ಅಂದರೆ ಮನುಷ್ಯ ಸುಖ -ದುಃಖದ ಮಹತ್ವವನ್ನೇ ಅರಿಯುವುದಿಲ್ಲ, ಜೀವನಪೂರ್ತಿ ಅರ್ಥ ಇಲ್ಲದ ಬದುಕು ಆಗಿ ಬಿಡುತ್ತೆ.
  ಮೊದಲನೆಯವ ಇ ಮಾತುಗಳನ್ನು ಕೇಳಿ ನಾಚಿಕೆಯಾಗಿ ಬಾಯಿಂದ ಒಂದು ಮಾತು ಸಹ ಬರದೆ ಮುಖನಾಗಿ ನಿಂತು ಬಿಟ್ಟ.

     ಪ್ರಿಯ ಗೆಳೆಯರೇ ಕುಟುಂಬ ಇದ್ದರೆ ಮಾತ್ರ ಸಂತಸದ ಬೆಲೆಯನ್ನು ಸವಿಯಬಹುದು, ಇಲ್ಲ ಅಂದರೆ ಯಾರೊಟ್ಟಿಗೆ ತಮ್ಮ ಸುಖ- ದುಃಖವನ್ನು ಹಂಚಿಕೊಳ್ಳುವಿರಾ ? ಆದರಿಂದ ಸದಾ ನಗು- ನಗುತ್ತಾ ಪರಿವಾರದಲ್ಲಿ ಜೀವನ ನಡೆಸಿರಿ, ಪರಿವಾರ ಅಂದಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ವೈರತ್ವವನ್ನು ಸಾದಿಸಬೇಡಿ. ಕೃಪೆ :ವಾಟ್ಸ್ ಆ್ಯಪ್ ಗ್ರೂಪ್.                            ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ. 359

ದಿನಕ್ಕೊಂದು ಕಥೆ 1132

ದಿನಕ್ಕೊಂದು ಕಥೆ 1134