ದಿನಕ್ಕೊಂದು ಕಥೆ. 681

        *🌻ದಿನಕ್ಕೊಂದು ಕಥೆ🌻*                                                              ಹೊಸ ತಾಯಿಗೂ, ಸತ್ತು ಹೋದ ಹಳೆ ತಾಯಿಗೂ ವ್ಯತ್ಯಾಸ ಏನು ಎಂದು ತಂದೆ ಕೇಳಿದ.! 8 ವರ್ಷದ ಮಗ ಏನೆಂದ ಗೊತ್ತಾ.?

ಒಂದು 8 ವರ್ಷದ ಬಾಲಕನ ತಾಯಿ ನಿಧನರಾದರು..
ಅವರ ತಂದೆ ಇನ್ನೊಂದು ಮದುವೆ ಮಾಡಿಕೊಂಡ..

ಒಂದು ದಿನ ಅವರ ತಂದೆ ಬಾಲಕನ ಜತೆಗೆ ಮಗನೇ ನಿನಗೆ ಹೊಸ ಅಮ್ಮ, ಸತ್ತು ಹೋದ ಹಳೆಯ ಅಮ್ಮನ ನಡುವೆ ಏನು ವ್ಯತ್ಯಾಸ ಅನ್ನಿಸುತ್ತಿದೆ ಎಂದು ಕೇಳಿದ….

ಆಗ ಆ ಬಾಲಕ ಈ ರೀತಿ ಎಂದ…

ಅಪ್ಪಾ ಹೊಸ ಅಮ್ಮ ನಿಜ…ಹಳೆ ಅಮ್ಮ ಸುಳ್ಳು ಎಂದ…

ಅದನ್ನು ಕೇಳಿದ ತಂದೆ ಅವಾಕ್ಕಗಿ…ಇದೇನು ಮಗನೇ ಆ ರೀತಿ ಹೇಳುತ್ತಿದ್ದೀಯಾ ಎಂದರೆ…

ಆಗ ಆ ಬಾಲಕ ಈ ರೀತಿ ಹೇಳಿದ.

ನಾನು ಯಾವಾಗಲಾದರೂ ತುಂಟಾಟ ಮಾಡಿದರೆ ಆಗ ನಮ್ಮ ಅಮ್ಮ ಅನ್ನುತ್ತಿದ್ದಳು ನೀನು ಹೀಗೆಯೇ ಮಾಡುತ್ತಿದ್ದರೆ ನಿನಗೆ ಅನ್ನ ಇಡಲ್ಲ ಎಂದು…

ಆದರೂ ನಾನು ತುಂಟಾಟ ಮಾಡುತ್ತಿದ್ದೆ…ಆ ಅಮ್ಮ ನನ್ನನ್ನು ಕರೆದೊಯ್ದು ತನ್ನ ಬಳಿ ಕೂರಿಸಿಕೊಂಡು ಅನ್ನ ತಿನ್ನಿಸುತ್ತಿದ್ದಳು…

ಅದರೆ ಈಗ ಇರುವ ಹೊಸ ಅಮ್ಮ ಸಹ ತುಂಟಾಟ ಮಾಡಿದರೆ ನಿನಗೆ ಅನ್ನ ಇಡಲ್ಲ ಎನ್ನುತ್ತಾಳೆ

ಆದರೆ ಈ ಹೊಸ ಅಮ್ಮ 3 ದಿನಗಳಿಂದ ನನಗೆ ನಿಜವಾಗಿ ಅನ್ನ ಇಟ್ಟಿಲ್ಲ ಅಪ್ಪಾ…

ಅದಕ್ಕೇ ಆ ಹಳೆ ಅಮ್ಮ ಸುಳ್ಳು… ಈ ಹೊಸ ಅಮ್ಮ ನಿಜ.

ಇದನ್ನು ಕೇಳಿದ ಆ ತಂದೆಗೆ ಮಾತೇ ಬರದಂತಾಯಿತು…!                ಕೃಪೆ :ಕಿಶೋರ್.     ****""*********""*****"""****"""""***********************      ಹೊಸ ತಾಯಿಗೂ, ಸತ್ತು ಹೋದ ಹಳೆ ತಾಯಿಗೂ ವ್ಯತ್ಯಾಸ ಏನು ಎಂದು ತಂದೆ ಕೇಳಿದ.! 8 ವರ್ಷದ ಮಗ ಏನೆಂದ ಗೊತ್ತಾ.?

ಒಂದು 8 ವರ್ಷದ ಬಾಲಕನ ತಾಯಿ ನಿಧನರಾದರು..
ಅವರ ತಂದೆ ಇನ್ನೊಂದು ಮದುವೆ ಮಾಡಿಕೊಂಡ..

ಒಂದು ದಿನ ಅವರ ತಂದೆ ಬಾಲಕನ ಜತೆಗೆ ಮಗನೇ ನಿನಗೆ ಹೊಸ ಅಮ್ಮ, ಸತ್ತು ಹೋದ ಹಳೆಯ ಅಮ್ಮನ ನಡುವೆ ಏನು ವ್ಯತ್ಯಾಸ ಅನ್ನಿಸುತ್ತಿದೆ ಎಂದು ಕೇಳಿದ….

ಆಗ ಆ ಬಾಲಕ ಈ ರೀತಿ ಎಂದ…

ಅಪ್ಪಾ ಹೊಸ ಅಮ್ಮ ನಿಜ…ಹಳೆ ಅಮ್ಮ ಸುಳ್ಳು ಎಂದ…

ಅದನ್ನು ಕೇಳಿದ ತಂದೆ ಅವಾಕ್ಕಗಿ…ಇದೇನು ಮಗನೇ ಆ ರೀತಿ ಹೇಳುತ್ತಿದ್ದೀಯಾ ಎಂದರೆ…

ಆಗ ಆ ಬಾಲಕ ಈ ರೀತಿ ಹೇಳಿದ.

ನಾನು ಯಾವಾಗಲಾದರೂ ತುಂಟಾಟ ಮಾಡಿದರೆ ಆಗ ನಮ್ಮ ಅಮ್ಮ ಅನ್ನುತ್ತಿದ್ದಳು ನೀನು ಹೀಗೆಯೇ ಮಾಡುತ್ತಿದ್ದರೆ ನಿನಗೆ ಅನ್ನ ಇಡಲ್ಲ ಎಂದು…

ಆದರೂ ನಾನು ತುಂಟಾಟ ಮಾಡುತ್ತಿದ್ದೆ…ಆ ಅಮ್ಮ ನನ್ನನ್ನು ಕರೆದೊಯ್ದು ತನ್ನ ಬಳಿ ಕೂರಿಸಿಕೊಂಡು ಅನ್ನ ತಿನ್ನಿಸುತ್ತಿದ್ದಳು…

ಅದರೆ ಈಗ ಇರುವ ಹೊಸ ಅಮ್ಮ ಸಹ ತುಂಟಾಟ ಮಾಡಿದರೆ ನಿನಗೆ ಅನ್ನ ಇಡಲ್ಲ ಎನ್ನುತ್ತಾಳೆ

ಆದರೆ ಈ ಹೊಸ ಅಮ್ಮ 3 ದಿನಗಳಿಂದ ನನಗೆ ನಿಜವಾಗಿ ಅನ್ನ ಇಟ್ಟಿಲ್ಲ ಅಪ್ಪಾ…

ಅದಕ್ಕೇ ಆ ಹಳೆ ಅಮ್ಮ ಸುಳ್ಳು… ಈ ಹೊಸ ಅಮ್ಮ ನಿಜ.

ಇದನ್ನು ಕೇಳಿದ ಆ ತಂದೆಗೆ ಮಾತೇ ಬರದಂತಾಯಿತು…!          ಕೃಪೆ :ಕಿಶೋರ್.           ಸಂಗ್ರಹ :ವೀರೇಶ್ ಅರಸಿಕೆರೆ ‌.

Comments

Popular posts from this blog

ದಿನಕ್ಕೊಂದು ಕಥೆ. 359

ದಿನಕ್ಕೊಂದು ಕಥೆ 1132

ದಿನಕ್ಕೊಂದು ಕಥೆ 1134