ದಿನಕ್ಕೊಂದು ಕಥೆ 843
*🌻ದಿನಕ್ಕೊಂದು ಕಥೆ🌻* ಕೃಪೆ: ಉಮೇಶ್ಆಚಾರ್
ಆತನ ಹೆಸರು "ನಿಕೋಲಸ್ ಟೆಸ್ಲಾ " 1856 ರಲ್ಲಿ ಕ್ರೋವೇಷ್ಯಾ ಎಂಬ ಊರಿನಲ್ಲಿ ಆತ ಹುಟ್ಟಿದ್ದು ಆ ನಂತರದ ಅವನ ಜೀವನವೆಲ್ಲವೂ ಅತ್ಯಂತ ಕಡು ಕಷ್ಟದಲ್ಲಿಯೇ ಕಳೆಯಿತು .
ಹೀಗಾಗಿ ಆತ ಖಿನ್ನತೆಯಲ್ಲಿಯೇ ಬೆಳೆದ ಕಾರಣದಿಂದ ಬಹಳ ಮೌನಿಯಾಗಿಯೇ ಇದ್ದ ಆದರೆ ಮಹಾನ್ ವಿಜ್ಞಾನಿ .ಪ್ರತಿಯೊಂದನ್ನೂ ಮನದಲ್ಲಿಯೇ ಯೋಚಿಸುತ್ತಲೇ ಜೀವನ ಕಳೆಯುತ್ತಿದ್ದನೇ ಹೊರತು ಯಾವುದೊಂದನ್ನೂ ಕೂಡ ದಾಖಲೆ ಮಾಡುತ್ತಲೇ ಇರಲಿಲ್ಲ !
1881ರಲ್ಲಿ ಈತ ಯುರೋಪಿನಲ್ಲಿದ್ದಾಗ ಮ್ಯಾಗ್ನಟ್ ಬಳಸದೆಯೇ ಶಬ್ಧ ಮಾಡದೆ ತಿರುಗುವ 'ಇಂಡಕ್ಷನ್ ಮೋಟರ್' ತಂತ್ರಜ್ಞಾನದ ಅನ್ವೇಷಣೆ ಮಾಡಿ ಅದನ್ನು ಮರಳಿನ ಮೇಲೆ ಬರೆದು ತೋರಿಸುತ್ತಾನೆ ಆದರೆ ಈತನ ಅನ್ವೇಷಣೆಗೆ ಯುರೋಪಿನಲ್ಲಿ ಹೆಚ್ಚು ಬೆಲೆಕೊಡುವವರು ಸಿಗದ ಕಾರಣದಿಂದ ಅಮೇರಿಕಕ್ಕೆ ಹೊರಡುತ್ತಾನೆ.
ಸ್ನೇಹಿತನೊಬ್ಬನ ಪರಿಚಯದ ಮೇರೆಗೆ 'ಪ್ರಪಂಚವು ಶ್ರೇಷ್ಟ ವಿಜ್ಞಾನಿಯೆಂದು ಹೆಸರಿಸುವ ಉರುಫ್ ಮೋಸಗಾರನಾದ "ಥಾಮಸ್ ಅಲ್ವಾ ಎಡಿಸನ್"ಬಳಿ ಕೆಲಸಕ್ಕೆ ಸೇರಿಕೊಂಡಾಗ ಎಡಿಸನ್ 'ಡಿ.ಸಿ ಮೋಟರ್ ಅನ್ವೇಷಣೆ ಮಾಡುವ ಕೆಲಸದಲ್ಲಿ ನಿರತನಾಗಿರುತ್ತಾನೆ .ಇದನ್ನು ಗಮನಿಸಿದ ನಿಕೋಲಸ್ ಟೆಸ್ಲಾ 'ನೀವೀಗ ಬಳಸುತ್ತಿರುವ ವಸ್ತುಗಳಿಗಿಂತಲೂ ಕಡಿಮೆ ವಸ್ತುಗಳನ್ನು ಬಳಸಿಯೇ ಈ ಅನ್ವೇಷಣೆ ಸುಲಭವಾಗಿಸುವುದು ನನಗೆ ತಿಳಿದಿದೆ"ಎನ್ನುತ್ತಾನೆ .
ಹಾಗಾದರೆ ನಿನಗೆ ಸಾವಿರಗಟ್ಟಲೆ ಡಾಲರ್ ಕೊಡುತ್ತೇನೆ ಈ ಅನ್ವೇಷಣೆ ಪೂರ್ಣಗೊಳಿಸು ಎಂದಾಗ ಈ ಅನ್ವೇಷಣೆಯ ಜವಾಬ್ಧಾರಿ ವಹಿಸಿದ ನಿಕೋಲಸ್ ಅದನ್ನು ಪೂರ್ಣಗೊಳಿಸಿದ ನಂತರ ಹಣ ಕೊಡದೆ ಮೋಸ ಮಾಡುತ್ತಾನೆ !
ನಂತರ ಅಲ್ಲಿಂದ ಅಳುಮುಖದಲ್ಲಿಯೇ ಹೊರನಡೆದ ನಿಕೋಲಸ್ ಮಣ್ಣು ಹೊರುವ ಕೂಲಿ ಕೆಲಸವನ್ನೂ ಮಾಡಿ ಬದುಕಬೇಕಾಯಿತು !
ನಂತರ ಈತ ಬೆಳಕಿನಿಂದ ಮೂಳೆಯ ಎಕ್ಸರೇ ತೆಗೆಯಬಹುದೆಂಬುದನ್ನೂ ಕಂಡುಹಿಡಿದ ಈ ಅನ್ವೇಷಣೆಯನ್ನೂ ಕೂಡ ವಿಲಹೆಮ್ ರಾಂಟಜಿನ್ ಎಂಬುವವನು ದೇಪಿಕೊಂಡು ನನ್ನದೆಂದು ಹೇಳಿಕೊಂಡು ಪ್ರಶಸ್ತಿ ಪಡೆದ .
ಅದೇ ಸಂದರ್ಭದಲ್ಲಿ 'ರೇಡಿಯೋ ಬೇಸಿಕ್ ಸಿಸ್ಟಂ"ನ ಬಗ್ಗೆ ಅನ್ವೇಷಣೆ ಮಾಡಿ ಪತ್ರಿಕಾ ಪ್ರಕಟಣೆಯಲ್ಲಿ ವಿಚಾರ ಮಂಡಿಸಿದ ಇದನ್ನೂ ಕೂಡ ಮಾರ್ಕೋನಿ ಎಂಬುವ ಅಯೋಗ್ಯ ವಿಜ್ಞಾನಿ ದೇಪಿಕೊಂಡು ನಾನೇ ರೇಡಿಯೋ ಕಂಡುಹಿಡಿದದ್ದು ಎಂದು ತಲೆ ಅಲ್ಲಾಡಿಸಿಕೊಂಡು ನಗುತ್ತಾ ಎದ್ದು ಹೋದ !
ಹೀಗೆ ಜೀವನದಲ್ಲಿ ಪ್ರತಿಯೊಂದರಲ್ಲಿಯೂ ಸೋಲುತ್ತಲೇ ಗೆಲುವನ್ನು ದಾಖಲಿಸುತ್ತಲೇ ಹೋದ ನಿಕೋಲಸ್ ಒಂದು ದಿನ ಕಲೋರಾಡ್ ಲ್ಯಾಬಿನಲ್ಲಿ ವೈರನ್ನು ಬಳಸದೆಯೇ ಮನೆ ಮನೆಗೆ ವಿದ್ಯುತ್ ಸರಬರಾಜು ಮಾಡಬಹುದೇ ಎಂಬ ಕುರಿತು ಅನ್ವೇಷಣೆ ಮಾಡಲು ಶುರು ಹಚ್ಚಿಕೊಂಡ ಆಗ ಇಸವಿ 1900.ಈಗಲೂ ಕೂಡ ಪ್ರಪಂಚ ಕಂಡ ಶ್ರೇಷ್ಟ ಅನ್ವೇಷಣೆಗಳಲ್ಲಿ 300 ಶೋಧನೆಗಳ ಪೇಟೆಂಟ್ ಈತನ ಹೆಸರಿನಲ್ಲಿದೆ !
ನಿಮಗೆ ವಿಜ್ಞಾನ ತಿಳಿವಳಿಕೆ ಇದ್ದದ್ದೇ ಆದರೆ ದಿಗಿಲಿಕ್ಕಿಸುವಂತಹದ್ದು ಈ ಅನ್ವೇಷಣೆಯ ಮುಂದಿನ ಭಾಗದ ವಿಚಾರವಾಗಿದೆ ಅದೇನೆಂದರೆ ಭೂಮಿಯು ತಿರುಗುತ್ತಿರುವುದರಿಂದ ಈ ತಿರುಗುವಿಕೆಯನ್ನೇ ಬಳಸಿ ಇಡೀ ಭೂಮಿಯನ್ನೇ ಡೈನಮೋವನ್ನಾಗಿ ಬಳಸಿ ವಿದ್ಯುತ್ ಉತ್ಪಾದಿಸಬಹುದೇ !?
ಎಂಬ ಕುರಿತು ಅನ್ವೇಷಣೆ ಮಾಡಿದ ಮೊಟ್ಟ ಮೊದಲ ವ್ಯಕ್ತಿ ಹಾಗೂ ಸದ್ಯದ ಮಟ್ಟಿಗೆ ಕೊನೆಯ ವ್ಯಕ್ತಿ "ನಿಕೋಲಸ್ ಟೆಸ್ಲಾ "!
ನಂತರ ಮಾರ್ಗನ್ ಎಂಬುವವರ ಸಹಾಯದೊಂದಿಗೆ ಲಂಗ್ ಎಂಬ ಹೆಸರಿನ ದ್ವೀಪದಲ್ಲಿ 200 ಅಡಿ ಎತ್ತರದ ಟವರ್ ಒಂದನ್ನು ನಿರ್ಮಿಸಲು ಶುರು ಮಾಡುತ್ತಾನೆ ಅದರ ಮೂಲಕ ವಿದ್ಯುತ್ ಸಿಗ್ನಲ್ ಹರಿಸಿದರೆ ಮನೆಮನೆಗೆ ವೈರ್ ಬಳಸದೆಯೇ ವಿದ್ಯುತ್ ಸರಬರಾಜು ಮಾಡಬಹುದು ಎಂಬುದು ಅವನ ಅನ್ವೇಷಣೆಯ ಹಾದಿಯಾಗಿತ್ತು .
ಆದರೆ ಟವರಿನ ಕೆಲಸವು ಪ್ರಗತಿಯಲ್ಲಿ ಇದ್ದಾಗಲೇ ಮೊದಲ ವಿಶ್ವ ಸಮರದ ಸುರಕ್ಷತೆ ಎಂಬ ಅಯೋಗ್ಯ /ಅನಾಗರೀಕ ಕಾರಣ ಕೊಟ್ಟು ಬಹುಮೊತ್ತ ಹೂಡಿಸಿಕೊಂಡಿದ್ದ ಆ ಟವರನ್ನು ಕೆಡವಲಾಗುತ್ತದೆ !
ನಂತರ 1930 ರಲ್ಲಿ ಈತ "ಡೆತ್ ಬೀಮ್"ಎಬ ಬೆಳಕಿನಿಂದಲೇ 20 ಕಿ.ಮೀ ದೂರದಲ್ಲಿ ಇರುವವರನ್ನು ಸಾಯಿಸುವಂತಹಾ ಅಪಾಯಕಾರಿ ಉಪಕರಣವನ್ನೂ ಸಹ ಅನ್ವೇಷಿಸಿದನೆಂದು ಹೇಳಲಾಗುತ್ತದೆ .
ಆತ ಒಂದು ಸಲ ಮಾತನಾಡುವಾಗ ಹೇಳುತ್ತಾನೆ "ನಾ ಕಂಡುಹಿಡಿಯುವ ವಿಮಾನಕ್ಕೆ ರೆಕ್ಕೆಗಳಾಗಲಿ ಹೆಲಿಕಾಪ್ಟರಿನಂತೆ ಪ್ರೊಪೆಲರಾಗಲೀ ಇರುವುದಿಲ್ಲ" ಪ್ರಪಂಚ ಕಂಡ ಶ್ರೇಷ್ಟ ವಿಜ್ಞಾನಿ ಹೇಳುವ ಈ ಮಾತಿನಲ್ಲಿ ಯಾವುದೇ ಆಶ್ಚರ್ಯವಿಲ್ಲ !ಆತ ಕಂಡುಹಿಡಿದೇ ಬಿಡುತಿದ್ದ ಆದರೆ ಈ ಅಯೋಗ್ಯ ಸಮಾಜ .ರಾಜಕಾರಣಿ.ರಾಜಕೀಯಗಳು ಆತನ ಎಲ್ಲಾ ಅನ್ವೇಷಣೆಗಳನ್ನೂ ತಿಂದು ತೇಗಿದವು ಹಾಳು ಮಾಡಿದವು.
ನಿಮ್ಮ ಮನೆಯಲ್ಲಿ ಒಂದೇ ಒಂದು ಫ್ಯಾನ್ ಇದೆಯೆಂದರೂ ಸಾಕು ನಿಮಗೆ ಈತನ ಹೆಸರು ನೆನಪಿರಲೇಬೇಕು. ನಾಳೆ ಯಾವನಾದರೂ ರೇಡಿಯೋ ಕಂಡುಹಿಡಿದವನ ಹೆಸರನ್ನೋ .ಎಕ್ಸರೇ ಕಂಡುಹಿಡಿದವನ ಹೆಸರನ್ನೋ ನಿಮ್ಮ ಎದುರು ಹೇಳಿದಾಗ ಸರಿಸರಿಯಾಗಿ ಮುಖಕ್ಕೆ ಉಗಿದು ಹೇಳಿ "ನಿಕೋಲಸ್ ಟೆಸ್ಲಾ"ಎಂಬವವನೊಬ್ಬನಿದ್ದ ಆತನ ಬಗ್ಗೆ ಪೂರಾ ತಿಳಿದುಕೊಂಡು ಬಂದು ನಂತರ ಮಾತನಾಡು ಎನ್ನಿ.
ವೈರ್ ಇಲ್ಲದೆ ವಿದ್ಯುತ್ ಸಾಗಿಸುವ ತಂತ್ರಜ್ಞಾನ ಇಂದಿಗೂ ಅನ್ವೇಷಣೆಯಾಗಿಲ್ಲ.ಆತ ಎಂದೋ ನೂರಾರು ವರ್ಷಗಳ ಹಿಂದೆ ಕಂಡುಹಿಡಿದ ಇಂಡಕ್ಷನ್ ವಿಧಾನ ಬಳಸಿದ "ಇಂಡಕ್ಷನ್ ಸ್ಟೋವ್"ಈ ಕೆಲವು ವರ್ಷಗಳ ಹಿಂದೆ ಮಾಕುಕಟ್ಟೆಗೆ ಬಂದಿದೆ.ಅದರ ಹೊರತಾಗಿ ತಿರುಗುವ ಭೂಮಿಯನ್ನೇ ಡೈನಮೋವಾಗಿ ಬಳಸಿ ಸುಲಲಿತವಾಗಿ ವಿದ್ಯುತ್ ಉತ್ಪಾದಿಸುತ್ತೇನೆಂದ ಮತ್ತೊಬ್ಬ ವಿಜ್ಞಾನಿಯ ಹೆಸರನ್ನೂ ನಾ ಇದುವರೆಗೂ ಕೇಳಿಲ್ಲ !
ನಯಾಗರದಲ್ಲಿ ವಿದ್ಯುತ್ ಉತ್ಪಾದಿಸಿದ್ದೂ ಕೂಡ ಇದೇ ನಿಕೋಲಸ್ ಟೆಸ್ಲಾ !
ಪ್ರಪಂಚದಲ್ಲಿ ಅತೀ ಹೆಚ್ಚು ತೊಡರುಗಾಲು ಕೊಟ್ಟು ಬೀಳಿಸಿಕೊಂಡ ವ್ಯಕ್ತಿ ಈತ.ಈತನ ಹೆಸರು ಬೆಳಕಿಗೆ ಬರಬಾರದೆಂದು ಸತತ ಪ್ರಯತ್ನ ಮಾಡಲಾಯಿತು ಹಾಗಾಗಿ ಈತನ ಹೆಸರು ನಿಮಗೆ ನೆನಪಿರಲಿಕ್ಕಿಲ್ಲ.
ಆದರೂ ಈತ ನಿಮ್ಮ ಮನೆಯ ಯಾವುದಾದರೊಂದು ಉಪಕರಣದಲ್ಲಿ ಇಂದಿಗೂ ಜೀವಂತವಿದ್ದಾನೆ "ನಿಕೋಲಸ್ ಟೆಸ್ಲಾ"
ಕೊನೆಗಾಲದಲ್ಲಿ ಈತ ಬಡತನದಲ್ಲಿಯೇ ಹೊಟೆಲೊಂದರಲ್ಲಿ ಒಬ್ಬಂಟಿಯಾಗಿ ಬದುಕಿದ್ದ ಒಬ್ಬಂಟಿಯಾಗಿಯೇ ಸತ್ತುಹೋದ!
ಸಂಗ್ರಹ :ವೀರೇಶ್ ಅರಸಿಕೆರೆ.
Saadhakanige saavilla yaavatthu hats up
ReplyDelete