Posts

Showing posts from January, 2025

ದಿನಕ್ಕೊಂದು ಕಥೆ 1131

*🌻ದಿನಕ್ಕೊಂದು ಕಥೆ🌻* ಬರ್ನಾಡ್ ಡಿ ಕ್ಲರ್ಕ್, ರವರು ಭಾರತೀಯ ಸಾವಯುವ ಬೇಸಾಯ ಚಳುವಳಿಯ ರೂವಾರಿಗಳಲ್ಲಿ ಒಬ್ಬರು. ಬೆಲ್ಜಿಯಂ ಮೂಲದ ಬರ್ನಾಡ್ ರವರು ಪಾಂಡಿಚೆರಿಯ ಆರೋವಿಲ್ ಗೆ ಬಂದು ಅಲ್ಲಿನ ವಿಶಾಲ ಬರಡು ಭೂಮಿಯ  ಪುನರ್ಜೀವನದ ಕೆಲಸದಲ್ಲಿ, ತಮ್ಮನ್ನು  ತೊಡಗಿಸಿಕೊಂಡಿದ್ದರು. ಅಸಾಧಾರಣ ವಾಗ್ಮಿ ಮತ್ತು ತರಬೇತುದಾರರಾದ ಬರ್ನಾಡ್ ರವರು ಒಂದು ಸಲ ಕರ್ನಾಟಕಕ್ಕೆ ಬಂದು ರೈತರಿಗೆ ಸಾವಯುವ ಬೇಸಾಯದ ತರಬೇತಿಗಳನ್ನು ನಡೆಸಿಕೊಡುತ್ತಿದ್ದರು.     ನಿರರ್ಗಳವಾಗಿ ಅನೇಕ ಗಂಟೆಗಳ ಕಾಲ ಮಾತನಾಡುತ್ತಿದ್ದ ಅವರು, ಕೇಳುಗರಿಗೆ ಸ್ವಲ್ಪ ಬೇಸರವಾಯಿತೆಂದು ಕಂಡು ಬಂದರೆ, ಒಂದು ಆಸಕ್ತಿಯುತ ಸೂಕ್ಷ್ಮ ಒಳನೋಟದ ಕಥೆಯನ್ನು ಹೇಳಿ, ಕೇಳುಗರ ಮನಸ್ಸನ್ನು ತಮ್ಮ ಕಡೆಗೆ ಎಳೆದುಕೊಳ್ಳುತ್ತಿದ್ದರು. ಹಾಗೆ ಅವರು ಹೇಳುತ್ತಿದ್ದ ಕಥೆಗಳಲ್ಲಿ ಇದೂ ಒಂದು.      ಒಂದು ನಿಮಿಷ ಕಾದಿರು.      ರೈತನೊಬ್ಬ, ತನ್ನ ಕೆಲಸಗಳ ನಡುವೆ, ಬಿಡುವು ಮಾಡಿಕೊಂಡು, ಹಿಮಾಲಯ ಪರ್ವತವನ್ನು ನೋಡಲೆಂದು ಹೋದ. ಅಷ್ಟು ದೊಡ್ಡ ಪರ್ವತವನ್ನು ನೋಡಿ ಆತ ಬೆರಗಾಗಿ  ನಿಂತಿದ್ದ. ಅಷ್ಟರಲ್ಲಿ ರೈತನಿಗೆ ಪರ್ವತ ಇಳಿದು ಬರುತ್ತಿದ್ದ ದೇವರು ಎದುರಾಗಿ ಬಿಟ್ಟ. ಕಕ್ಕಾಬಿಕ್ಕಿಯಾದ  ರೈತ ಈ ಅವಕಾಶವನ್ನು ಹೇಗಾದರೂ ಮಾಡಿ ತನ್ನ ಒಳ್ಳೆಯದಕ್ಕೆ ಉಪಯೋಗಿಸಿಕೊಳ್ಳಲೇ ಬೇಕು ಎಂದುಕೊಂಡು, ದೇವರಿಗೆ ದೀರ್ಘ ದಂಡ ನಮಸ್ಕಾರ ಮಾಡಿ, ತನ್ನ...

ದಿನಕ್ಕೊಂದು ಕಥೆ 1130

*🌻ದಿನಕ್ಕೊಂದು ಕಥೆ🌻* *ಸಾವಿನಮಹತ್ವ.* ಊರ ಹೊರಗಿನ ಮರದ ಕೆಳಗೆ  ಸದಾ ಧ್ಯಾನಸ್ಥರಾಗಿ ಕುಳಿತಿರುವ  ಒಬ್ಬ ಋಷಿಯ ಬಳಿಗೆ , ಒಬ್ಬ ರಾಜ ಹೋಗಿ,  ಗುರುಗಳೇ ,ಅಮರತ್ವವನ್ನು ನೀಡುವ ಯಾವುದಾದರೂ ಔಷಧಿ, ಅಥವಾ ಗಿಡಮೂಲಿಕೆಗಳಿದ್ದರೆ ದಯವಿಟ್ಟು ನನಗೆ ತಿಳಿಸಿ, ಎಂದು ಕೇಳಿದ.   ಆಗ ಋಷಿಗಳು, ರಾಜ ಇಲ್ಲಿರುವ  ಎರಡು   ಮಹಾ ಪರ್ವತಗಳನ್ನು ದಾಟಿದ ನಂತರ , ಅಲ್ಲಿ ಒಂದು ಸರೋವರವಿದೆ,ಅದರ ನೀರನ್ನು ಕುಡಿದಾಗ, ನೀನು ಅಮರನಾಗುವೆ, ಎಂದು ಹೇಳಿದರು.     ಋಷಿಗಳು ಹೇಳಿದಂತೆ ಎರಡು ಪರ್ವತಗಳನ್ನು ದಾಟಿದ ನಂತರ ರಾಜ ,ಒಂದು ಸರೋವರವನ್ನು ಕಂಡ. ಇನ್ನೇನು ಅದರಲ್ಲಿನ ನೀರು ಬಾಚಿ ಕುಡಿಯಬೇಕೆಂದು ಕೊಂಡಾಗ,ಯಾರೋ  ಜೋರಾಗಿ ನರಳುತ್ತಿರುವಂತ  ಶಬ್ದ ಕೇಳಿಸಿತು. ಶಬ್ದ ಬಂದ ಕಡೆಗೆ ಹೋಗಿ ನೋಡಿದರೆ, ಅಲ್ಲೊಬ್ಬ ಅತ್ಯಂತ ದುರ್ಬಲ ವ್ಯಕ್ತಿಯನ್ನು ಕಂಡನು.ಆ ವ್ಯಕ್ತಿ ನರಳುತ್ತಿರುವ ಕಾರಣವನ್ನು  ರಾಜ ಕೇಳಿದಾಗ,  ಆತ ,ನಾನು  ಈ ಸರೋವರದ ನೀರನ್ನು ಕುಡಿದು ಅಮರನಾದೆ, ನನಗೆ ನೂರು ವರ್ಷ ತುಂಬಿದ ನಂತರ ‌ನನ್ನ ಮಗ ನನ್ನನ್ನು ಮನೆಯಿಂದ ಆಚೆ ಓಡಿಸಿದ,ಕಳೆದ ಐವತ್ತು ವರ್ಷಗಳಿಂದ  ನಾನು ಹೀಗೇ  ಇಲ್ಲೇ, ನರಳುತ್ತಾ ಮಲಗಿದ್ದೇನೆ, ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ, ನನ್ನ ಮಗ  ಈಗ ತೀರಿಕೊಂಡಿದ್ದಾನೆ, ನನ್ನ ‌ಮೊಮ್ಮಕ್ಕಳೂ ಈಗ ‌ವೃದ್ದರಾಗಿದ್ದಾರೆ, ಸಾಯಬೇಕೆಂದುಕೊಂ...

ದಿನಕ್ಕೊಂದು ಕಥೆ 1129

*🌻ದಿನಕ್ಕೊಂದು ಕಥೆ🌻* *ಮಗನನ್ನು ಜ್ಞಾನ ಶಿಲ್ಪಿಯಾಗಿ  ಕಡೆದ ತಂದೆ* ಆ ಊರಿನ ಒಬ್ಬ ಶಿಲ್ಪಿ  ಸುಂದರವಾದ ಮೂರ್ತಿಗಳನ್ನು  ಕೆತ್ತನೆ ಮಾಡುತ್ತಿದ್ದ ಇದರಿಂದ ಅವನಿಗೆ ಒಳ್ಳೆಯ ಆದಾಯ ಇತ್ತು.  ಶಿಲ್ಪಿಗೆ ವಿವಾಹವಾಗಿ ಒಂದು ಗಂಡು ಮಗು ಜನಿಸಿತು. ಮಗುವಾಗಿದ್ದಾಗಲೇ ತಂದೆ ಕಲ್ಲು ಕಡೆಯುವುದನ್ನು ಆಸಕ್ತಿಯಿಂದ ನೋಡುತ್ತಿತ್ತು.‌ ಪುಟ್ಟ ಬಾಲಕನಾದಾಗಲೇ ಉಳಿ ಹಿಡಿದು ಕಲ್ಲು ಕೆತ್ತುವುದನ್ನು ಕಲಿತು, ಸ್ವಲ್ಪ ದೊಡ್ಡವನಾದಂತೆ, ಸುಂದರವಾದ ಮೂರ್ತಿಗಳನ್ನು ತಯಾರಿಸುತ್ತಿದ್ದ. ಮಗನ ಕೆತ್ತನೆ ಕಂಡು ತಂದೆಗೆ ಬಹಳ  ಖುಷಿಯಾಯಿತು. ಹಾಗಂತ  ಮಗನನ್ನು  ಹೊಗಳದೆ, ಮಗನ ಕೆತ್ತನೆಯಲ್ಲಿ ಸಣ್ಣ ದೋಷಗಳನ್ನು ತೋರಿಸಿ, ಮಗು ನಿನ್ನ ಕೆತ್ತನೆ ಚೆನ್ನಾಗಿದೆ ಮುಂದಿನ ಸಾರಿ ಸಣ್ಣಪುಟ್ಟ ತಪ್ಪುಗಳು ಆಗದಂತೆ ಗಮನ ಕೊಡು ಎನ್ನುತ್ತಿದ್ದನು. ಮಗ ತಂದೆಗೆ ಎದುರಾಡದೆ ತಂದೆ ಹೇಳಿದ ಪ್ರತಿ ಮಾತನ್ನು ಗಮನದಲ್ಲಿಟ್ಟು ತಿದ್ದಿಕೊಂಡು ಇನ್ನೂ ಚೆನ್ನಾಗಿ  ಶಿಲೆಗಳನ್ನು ಕಡೆಯುತ್ತಿದ್ದ. ಮಗನ ಈ ಶ್ರದ್ದೆ- ಶ್ರಮದಿಂದಾಗಿ, ತಂದೆ ಕೆತ್ತುವ ಶಿಲೆಗಳಿಗಿಂತ ಮಗ ಕಡೆಯುವ ಶಿಲೆಗಳಿಗೆ ಹೆಚ್ಚಿನ ಬೆಲೆ- ಬೇಡಿಕೆ ಬಂದಿತು. ಮಗನ ಶಿಲೆಗಳಿಗೆ ಹೆಚ್ಚಿನ ಹಣ ಮತ್ತು ಬೇಡಿಕೆ ಬಂದಂತೆ, ತಂದೆ ಕಡೆದ ಶಿಲೆಗಳಿಗೆ ಹಳೆ ಬೆಲೆ ಇದ್ದರೂ, ಬೇಡಿಕೆ ಕಮ್ಮಿಯಾ ಯಿತು. ಆದರೂ ತಂದೆ ಮಗನು ಕಡೆದ ಶಿಲೆಗಳನ್ನು ನೋಡಿ ಮತ್ತಷ್ಟು ಚೆನ್ನಾಗಿ ಮಾಡಬೇಕು ಈ ದೋಷ ಇದ...