ದಿನಕ್ಕೊಂದು ಕಥೆ. 81

🌻🌻 *ದಿನಕ್ಕೊಂದು ಕಥೆ*🌻🌻                                        ಒಂದು ಊರಲ್ಲಿ ಒಬ್ಬ ರಾಜ ದಿನ ಬೆಳಿಗ್ಗೆ ಎದ್ದು ಸೂರ್ಯನನ್ನು ನೋಡುವುದು ರೂಡಿ ಹಾಗೆ ನೋಡಿದಾಗ ಅಂದಿನ ದಿನವೆಲ್ಲ ತನ್ನ ಜೀವನದಲ್ಲಿ  ಒಳ್ಳೆಯದೆ ನಡೆಯುವುದು ಎಂಬುದು ಆ ರಾಜನ ನಂಬಿಕೆ

ಅಂದುಕೊಂಡ ಹಾಗೆ ಎಲ್ಲವು ಒಳ್ಳೆಯದೆ ನಡೆಯುತಿತ್ತು ಹೀಗಿರುವಾಗ ಒಂದು ದಿನ ರಾಜ ಸೂರ್ಯ ನಮಸ್ಕಾರ ಮಾಡಲು ಹೊರಗೆ ಬಂದಾಗ ಒಬ್ಬ ಬಿಕ್ಷುಕ ಅಡ್ಡ ಬರುತ್ತಾನೆ ಆ ರಾಜ ಅಂದಿನ ದಿನ ಬಿಕ್ಷುಕ ನನ್ನು ನೋಡುತ್ತಾನೆ ಹೀಗೆ ನೋಡಿ ಆ ರಾಜ ಹಿಂತಿರುಗುವಾಗ ಕಾಲು ಜಾರಿ ಕೆಳಗೆ ಬೀಳುತ್ತಾನೆ ತಲೆಗೆ ಪೆಟ್ಟಾಗಿ ರಕ್ತ ಸುರಿಯುತ್ತದೆ ಹೀಗೆಲ್ಲ ಆಗುವುದೆಂದು ಆ ರಾಜ ಎಂದಿಗೂ ಉಹಿಸಿರಲಿಲ್ಲ ಈ ಅನಾಹುತಕ್ಕೆಲ್ಲ ಆ  ಬಿಕ್ಷುಕನೇ ಕಾರಣ ಎಂದು ಆ ಬಿಕ್ಷುಕನನ್ನು ತಂದು ಗಲ್ಲಿಗೇರಿಸಲು ಆಗ್ನೆ ನೀಡುತ್ತಾನೆ ರಾಜನ ಆಗ್ನೆಯಂತೆಯೆ ಆ ಬಿಕ್ಷುಕನನ್ನು ಕರೆತಂದು ಗಲ್ಲಿಗೇರಿಸಲು ಸಿದ್ದತೆ ಮಾಡುತ್ತಾರೆ ಗಲ್ಲಿಗೇರಿಸೊ ಕೊನೆಯ ಸಮಯದಲ್ಲಿ ಆ ಬಿಕ್ಷುಕ ರಾಜನನ್ನು ನೋಡಿ ನಗುತ್ತಾನೆ ಇದು ಆ ರಾಜನಿಗೆ ಆಶ್ಚರ್ಯವನ್ನು ಮೂಡಿಸಿತು

ಆ ರಾಜ ಬಿಕ್ಷುಕನನ್ನು ಕೇಳಿದ ಇಂದು ನಿನ್ನನ್ನು ಗಲ್ಲಿಗೇರಿಸುತಿದ್ದೇನೆ ನಿನಗೆ ಸ್ವಲ್ಪವಾದರೂ ದುಃಖ್ಖ ಆಗಲಿ  ಬೇಜಾರು ಆಗಲಿ ಇದು ಯಾವುದು ನಿನ್ನ ಮುಖದಲ್ಲಿ ಕಾಣಿಸುತ್ತಿಲ್ಲವಲ್ಲ ಯಾಕೆ ಎಂದು ಪ್ರಶ್ನಿಸಿದನು

ಅದಕ್ಕೆ ಆ ಬಿಕ್ಷುಕ ಹೇಳಿದ ಇಂದು ನೀವು ನನ್ನ ಮುಖ ನೋಡಿದ್ದರಿಂದ ನಿಮ್ಮ ತಲೆಗೆ ಮಾತ್ರ ಪೆಟ್ಟಾಯಿತು ಆದರೆ ನಾನು ನಿಮ್ಮ ಮುಖ ನೋಡಿದ್ದರಿಂದ ಇಂದು ನಾನು ಗಲ್ಲಿಗೇರುತಿದ್ದೇನೆ ಎಂದು ಹೇಳಿದನು

ಅಂದು ಆ ಬಿಕ್ಷುಕನ ಮಾತು ಮೂಡನಂಬಿಕೆ ಇಂದ ಮುಚ್ಚಿದ ರಾಜನ ಕಣ್ಣು ತೆರೆಸಿತು.

ನೀತಿ : ನೀವೆ ಹೇಳಿ.....
ಕೃಪೆ : ರೋಹಿತ್ ಗೌಡ.                     ಸಂಗ್ರಹ: ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ. 359

ದಿನಕ್ಕೊಂದು ಕಥೆ 1135

ದಿನಕ್ಕೊಂದು ಕಥೆ 1132