ದಿನಕ್ಕೊಂದು ಕಥೆ. 83
🌻🌻 *ದಿನಕ್ಕೊಂದು ಕಥೆ*🌻🌻 💐 *ಹರಕೆ*💐
ರಾಜಪುರವೆಂಬ ಊರು. ಒಮ್ಮೆ ಒಬ್ಬ ಸನ್ಯಾಸಿ ಆ ಊರಿಗೆ ಬಂದ. ಊರ ಜನರು ಭಯ ಭಕ್ತಿಯಿಂದ ಅವನನ್ನು ಬರಮಾಡಿಕೊಂಡು ಉಪಚರಿಸಿದರು. ಆದರಾತಿಥ್ಯ ನೀಡಿ ತಮ್ಮನ್ನು ಹರಸಲು ಬೇಡಿಕೊಂಡರು. ಸಂತೃಪ್ತಿನಾದ ಸನ್ಯಾಸಿ ಕೈ ಎತ್ತಿ, "ಮುದುಕರೇ ನೀವು ಮೊದಲು ಸತ್ತು ಹೋಗಿರಿ. ನಿಮ್ಮ ಸ್ಥಾನಕ್ಕೆ ಬಂದ ಯುವಕರು ನಂತರ ಸಾಯಲಿ. ನಿಮ್ಮ ಮಕ್ಕಳೂ ಮೊಮ್ಮಕ್ಕಳನ್ನು ಕಂಡು ಸಾಯುವಂತಾಗಲಿ" ಎಂದು ಹರಸಿ ಹೊರಟುಹೋದ.
ನೆರೆದ ಜನರೆಲ್ಲ ಒಂದು ಕ್ಷಣ ಸ್ತಂಬೀಭೂತರಾದರೂ. ಇದೆಂತಹ ಆಶೀರ್ವಾದ? ಚೇತರಿಸಿಕೊಂಡ ಅನೇಕರು ಸನ್ಯಾಸಿಯ ವಿರುದ್ಧ ಧಿಕ್ಕಾರ ಕೂಗಿದರು. ಕೆಲವರು ಕತ್ತಿ ಹಿರಿದು ಅವನನ್ನು ಇರಿಯ ಹೊರಟರು. "ಏನೋ ಸೇವೆ ಸತ್ಕಾರಗಳಿಂದ ಸಂಪ್ರೀತನಾಗಿ ಊರ ಒಳಿತಿಗಾಗಿ ಹರಸುವನೆಂದು ತಿಳಿದರೆ ಅವನೋ ಎಲ್ಲರೂ ಸಾಯಲಿ ಎಂದು ಶಪಿಸುವುದೇ!" ಎಂದು ಗಲಾಟೆ ಜೋರಾಯ್ತು.
ಆಗ ಆ ಊರಲ್ಲಿ ಅತೀ ವೃದ್ಧ ಹಾಗೂ ಹೆಚ್ಚು ತಿಳಿದವನೊಬ್ಬ ಎದ್ದು ನಿಂತು ಕೂಗಿದ. "ನಿಲ್ಲಿರಿ. ಕತ್ತಿ ಹಿಡಿದು ಹೊರಟವರೂ ಹೋಗದಿರಿ. ಘೋಷಣೆ ಕೂಗುತ್ತಿರುವವರೂ ಕೂಗದಿರಿ. ಗಲಾಟೆ ಗೌಜು ಮಾಡುತ್ತಿರುವವರೂ ಮಾಡದಿರಿ. ಆ ಸನ್ಯಾಸಿ ತಪ್ಪಾಗಿ ಹರಸಿಲ್ಲ. ಒಳಿತನ್ನೇ ಬಯಸಿ ಹರಸಿದ್ದಾನೆ".
"ಸಾಯಲಿ ಎಂದು ಕೈ ಎತ್ತಿ ಶಪಿಸುವುದೋ ಹರಸುವುದೆಂದು ಅರ್ಥವೇನು? ಈ ಮುದುಕನಿಗೂ ಮುದಿತನದ ಹುಚ್ಚು ಹಿಡಿದಿರಬೇಕು. ನಡೆಯೀರೆಲ್ಲ. ಪ್ರತೀಕಾರ ತೀರಿಸಿಕೊಳ್ಳುವ" ಎಂದು ಕೆಲವು ಮಂದಿ ಸಿಟ್ಟಿನಿಂದ ಹರಿಹಾಯ್ದರು. ಅದಕಕೆ ವೃದ್ಧ. "ಶಾಂತಿ.. ಶಾಂತಿ.. ದಯವಿಟ್ಟು ಮೊದಲು ನನ್ನ ಮಾತು ಪೂರ್ತಿ ಕೇಳಿಸಿಕೊಳ್ಳಿ. ಮುದುಕರು ಮೊದಲು ಸಾಯಿರಿ ಅಂದರೆ ಹೇಗೋ ಅವರು ತಮ್ಮ ಪೂರ್ಣ ಜೀವಿತಾವಧಿ ಕಳೆದವರಾಗಿದ್ದಾರೆ. ಇನ್ನೂ ಅವರೆದುರೇ ಅವರ ಮಕ್ಕಳು ಮತ್ತು ಮೊಮ್ಮೋಕ್ಕಳು ಸತ್ತರೆ ಅವರಿಗೆ ಪುತ್ರ ಶೋಕಾಡಿಗಳು ಕಾಡುವುದಿಲ್ಲವೇ. ಹೀಗಾಗಿ ಇಹಲೋಕದ ಯಾತ್ರೆ ಮುಗಿಯುವಂತಾಗಲಿ ಎಂಬುದು ಅದರ ಅರ್ಥ. ಮುದುಕರ ಸ್ಥಾನಕ್ಕೆ ಬಂದ ಯುವಕರು ನಂತರ ಸಾಯಲಿ ಎಂದರೆ ಅವರು ತಮ್ಮ ಹಿರಿಯರ ಹಾಗೆ ಪೂರ್ಣಾಯಷ್ಠ ಬಾಳಿ ಬದುಕಿ ತದನಂತರವಷ್ಟೆ ಅಸುನೀಗಲಿ ಎಂದು. ನಾನಾತರ ಮಕ್ಕಳು ಅವರ ಮೊಮ್ಮಕ್ಕಳನ್ನು ಕಂಡು ಸಾಯಲಿ ಅಂದರೆ ಅವರು ತಮ್ಮ ತಂದೆ, ತಾತರಂತೆ ಮುದುಕರಾದ ಮೇಲೆ ಅಸುನೀಗಿದರೆ ಸಾಕು ಎಂದರ್ಥ. ಯಾರು ರೋಗರುಜಿನಾಡಿಗಳು ಬಂದು, ಅನ್ಯರ ಆಕ್ರಮಣ, ದಾಳಿ ತಿಂದು ಅರ್ಧಾಯುಷ್ಯದಲ್ಲೇ ಮೃತ್ಯು ಹೊಂದಾದಂತಾಗಲಿ ಎಂದು ಅಶ್ರ್ವಾದ ಮಾಡಿ ಹೋಗಿದ್ದಾನೆ" ಎಂದು ವಿವರಿಸಿದ.
ಅರ್ಥ ತಿಳಿಯುತ್ತಿದ್ದಂತೆ ಎಲ್ಲರೂ ಸನ್ಯಾಸಿಯ ಗುಣಗಾನ ಮಾಡಿ ಜಯಕಾರದ ಘೋಷಣೆ ಕೂಗಿದರು.
ಆಧಾರ : ರವಿರಾಜ ಹಾಲಂಬಿ
ಕೃಪೆ :ಕಿಶೋರ್. ಸಂಗ್ರಹ:ವೀರೇಶ್ ಅರಸಿಕೆರೆ
Comments
Post a Comment