ದಿನಕ್ಕೊಂದು ಕಥೆ. 90


🌻🌻 *ದಿನಕ್ಕೊಂದು ಕಥೆ*🌻🌻
💐 *ಈಶ್ವರ_ಭಕ್ತಿ*💐
ಒಬ್ಬ ತಾಯಿಗೆ ಒಂದು ಮಗುವಿದೆ. ಅದು ಊರಿಗೆ ಹೋಗಿದೆ. ನಾಳೆ ಸಂಜೆ ಮರಳಿ ಬರಲಿದೆ. ತಾಯಿ ಇಂದೇ ಕನಸು ಕಾಣುತ್ತಾಳೆ.ಕನಸಿನಲ್ಲಿ ಮಗು ಬಂದಂತೆ, ತನ್ನನ್ನು ಅಪ್ಪಿಕೊಂಡಂತೆ ಎನಿಸುತ್ತದೆ. ಮರುದಿನ ಬೆಳಿಗ್ಗೆ ಏಳುತ್ತಲೇ ಮತ್ತೆ ಮಗುವಿನ ದಾರಿ ಕಾಯುತ್ತಾಳೆ. ಅದಕ್ಕೆ ಬೇಕಾಗುವ ತಿಂಡಿ ತಿನಿಸು ಮಾಡಿ ಇಡುತ್ತಾಳೆ. ಮಗು ಬರುವ ಸುದ್ದಿ ನೆರೆಹೊರೆಯವರಿಗೆ ಹೇಳಿ ಸಂತಸ ಪಡುತ್ತಾಳೆ. ಪರಿ ಪರಿಯಾಗಿ ತನ್ನ ಮಗುವಿನ ಗುಣಗಾನ ಮಾಡುತ್ತಾಳೆ. ಮಗು ಬರುವ ಮೊದಲೇ ಮಗುವಿನ ದಾರಿಕಾಯುವಲ್ಲಿ ಆ ತಾಯಿಗೆ ಆನಂದವೇ ಆನಂದ! ಹಾಗೆಯೇ ಭಕ್ತನಿಗೆ ಭಗವಂತನ ಬರುವಿಕೆಯ ದಾರಿ ಕಾಯುವಲ್ಲಿ ಅಪಾರ ಆನಂದ. ಸದಾ ದೇವರ ನೆನೆಯುತ್ತ, ಹಾಡಿಹೊಗಳುತ್ತ, ಆನಂದಪರವಶನಾಗುತ್ತಾನೆ! ಕಾಣುವ ಜಗದಲ್ಲಿರುವಾಗಲೇ ಕಾಣದ ಜಗದೀಶನಲ್ಲಿ ಆತನ ಮನವೊಂದಾಗಿದೆ. ಅದು ಈಶ್ವರ ಭಕ್ತಿ!!.

  ಕೃಪೆ: ಶ್ರೀ ಸಿದ್ಧೇಶ್ವರ ಸ್ವಾಮಿಜಿ.                               ಸಂಗ್ರಹ : ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ. 359

ದಿನಕ್ಕೊಂದು ಕಥೆ 1135

ದಿನಕ್ಕೊಂದು ಕಥೆ 1132