ದಿನಕ್ಕೊಂದು ಕಥೆ 1128
*🌻ದಿನಕ್ಕೊಂದು ಕಥೆ🌻* *" ಅಳುಕು"* ಸಾಯಂಕಾಲ , ಸಂಜಯ್ ಕಚೇರಿ ಕೆಲಸ ಮುಗಿಸಿ ಮನೆಗೆ ಬಂದು ಗೇಟು ತೆರೆದು ಒಳಗೆ ಬರುತ್ತಿದ್ದಂತೆ, ವರಾಂಡದಲ್ಲಿ ಆರಾಮ ಕುರ್ಚಿ ಮೇಲೆ ಕುಳಿತಿದ್ದ ಆತನ ಎಪ್ಪತ್ತೆಂಟು ವರ್ಷದ ವಯೋವೃದ್ಧ ತಂದೆ ಗೋವಿಂದ ರಾಯರು ಆತನ ಕೈಯಲ್ಲಿ ಕಚೇರಿ ಬ್ಯಾಗ್ ಬಿಟ್ಟು ಮತ್ತಿನ್ಧೆನೂ ಇಲ್ಲದಿರುವುದನ್ನು ಆಸೆ ಕಣ್ಣಿನಿಂದ ಒಮ್ಮೆ ಗಮನಿಸಿ -"ಏನೂ ತಂದಿಲ್ವೇನೋ..? ಹಿಂದೂ"ಎಂದು ಕೇಳಿದಾಗ ಆತ " ಇಲ್ಲಾ ಅಪ್ಪಾಜಿ" ಎನ್ನುತ್ತ ತನ್ನ ರೂಮಿಗೆ ಹೋಗುತ್ತಾನೆ.ಆತನ ತಂದೆ ಮೆಲ್ಲಗಿನ ಸ್ವರದಲ್ಲಿ "ಹೋಗಲಿ ಬಿಡು" ಎನ್ನುವುದನ್ನು ಕೇಳಿಸಿಕೊಂಡವ ತನ್ನಷ್ಟಕ್ಕೆ ತಾನು " ಛೇ.. ಎಂಥಾ ಕೆಲಸ ಮಾಡ್ದೆ" ಎಂದು ಅಂದು ಕೊಂಡು ಫ್ರೆಶ್ ಅಪ್ ಆಗಿ ಬಂದವ ಪತ್ನಿ ಕೊಟ್ಟ ಕಾಫೀ ಕುಡಿದು , ಕಚೇರಿಗೆ ಸಂಬಂಧಿಸಿದ ಯಾವುದೋ ಫೈಲ್ ತೆಗೆದುಕೊಂಡು ಬಂದು ವೆರಾಂಡಾ ದಲ್ಲಿ ಆತನ ತಂದೆ ಕುಳಿತ ಕುರ್ಚಿ ಪಕ್ಕ ಇದ್ದ ಮತ್ತೊಂದು ಕುರ್ಚಿ ಮೇಲೆ ಕುಳಿತು, ಕೈಯಲ್ಲಿ ಇದ್ದ ಫೈಲ್ ನೋಡುವ ಮೊದಲು ಅಪ್ಪನ ಮುಖ ಗಮನಿಸುತ್ತಾನೆ.ತನ್ನ ತಾಯಿ ತೀರಿ ಹೋದ ನಂತರ ಮೊದಲಿಗಿಂತ ಅವರು ದೈಹಿಕವಾಗಿ ಮಾನಸಿಕವಾಗಿ ಅಶಕ್ತ ರಾಗಿರುತ್ತಾರೆ . ಅವರನ್ನು ನೋಡುತ್ತಿದ್ದಂತೆ ಸಂಜಯ್ ನಿಗೆ ತನ್ನ ಬಾಲ್ಯದ ದಿನಗಳು ನೆನಪಿಗೆ ಬರುತ್ತವೆ.... ಬಾಲ್ಯದಲ್ಲಿ ನಿತ್ಯವೂ ಆತನ ತಂದೆ ಸಂಜೆ ಕಚೇರಿಯಿಂದ ಮನೆಗೆ ಬರುವಾಗ ಮಕ್ಕಳು ಇಷ್ಟ ...