ದಿನಕ್ಕೊಂದು ಕಥೆ 1131
*🌻ದಿನಕ್ಕೊಂದು ಕಥೆ🌻* ಬರ್ನಾಡ್ ಡಿ ಕ್ಲರ್ಕ್, ರವರು ಭಾರತೀಯ ಸಾವಯುವ ಬೇಸಾಯ ಚಳುವಳಿಯ ರೂವಾರಿಗಳಲ್ಲಿ ಒಬ್ಬರು. ಬೆಲ್ಜಿಯಂ ಮೂಲದ ಬರ್ನಾಡ್ ರವರು ಪಾಂಡಿಚೆರಿಯ ಆರೋವಿಲ್ ಗೆ ಬಂದು ಅಲ್ಲಿನ ವಿಶಾಲ ಬರಡು ಭೂಮಿಯ ಪುನರ್ಜೀವನದ ಕೆಲಸದಲ್ಲಿ, ತಮ್ಮನ್ನು ತೊಡಗಿಸಿಕೊಂಡಿದ್ದರು. ಅಸಾಧಾರಣ ವಾಗ್ಮಿ ಮತ್ತು ತರಬೇತುದಾರರಾದ ಬರ್ನಾಡ್ ರವರು ಒಂದು ಸಲ ಕರ್ನಾಟಕಕ್ಕೆ ಬಂದು ರೈತರಿಗೆ ಸಾವಯುವ ಬೇಸಾಯದ ತರಬೇತಿಗಳನ್ನು ನಡೆಸಿಕೊಡುತ್ತಿದ್ದರು. ನಿರರ್ಗಳವಾಗಿ ಅನೇಕ ಗಂಟೆಗಳ ಕಾಲ ಮಾತನಾಡುತ್ತಿದ್ದ ಅವರು, ಕೇಳುಗರಿಗೆ ಸ್ವಲ್ಪ ಬೇಸರವಾಯಿತೆಂದು ಕಂಡು ಬಂದರೆ, ಒಂದು ಆಸಕ್ತಿಯುತ ಸೂಕ್ಷ್ಮ ಒಳನೋಟದ ಕಥೆಯನ್ನು ಹೇಳಿ, ಕೇಳುಗರ ಮನಸ್ಸನ್ನು ತಮ್ಮ ಕಡೆಗೆ ಎಳೆದುಕೊಳ್ಳುತ್ತಿದ್ದರು. ಹಾಗೆ ಅವರು ಹೇಳುತ್ತಿದ್ದ ಕಥೆಗಳಲ್ಲಿ ಇದೂ ಒಂದು. ಒಂದು ನಿಮಿಷ ಕಾದಿರು. ರೈತನೊಬ್ಬ, ತನ್ನ ಕೆಲಸಗಳ ನಡುವೆ, ಬಿಡುವು ಮಾಡಿಕೊಂಡು, ಹಿಮಾಲಯ ಪರ್ವತವನ್ನು ನೋಡಲೆಂದು ಹೋದ. ಅಷ್ಟು ದೊಡ್ಡ ಪರ್ವತವನ್ನು ನೋಡಿ ಆತ ಬೆರಗಾಗಿ ನಿಂತಿದ್ದ. ಅಷ್ಟರಲ್ಲಿ ರೈತನಿಗೆ ಪರ್ವತ ಇಳಿದು ಬರುತ್ತಿದ್ದ ದೇವರು ಎದುರಾಗಿ ಬಿಟ್ಟ. ಕಕ್ಕಾಬಿಕ್ಕಿಯಾದ ರೈತ ಈ ಅವಕಾಶವನ್ನು ಹೇಗಾದರೂ ಮಾಡಿ ತನ್ನ ಒಳ್ಳೆಯದಕ್ಕೆ ಉಪಯೋಗಿಸಿಕೊಳ್ಳಲೇ ಬೇಕು ಎಂದುಕೊಂಡು, ದೇವರಿಗೆ ದೀರ್ಘ ದಂಡ ನಮಸ್ಕಾರ ಮಾಡಿ, ತನ್ನ...