ದಿನಕ್ಕೊಂದು ಕಥೆ 912
*🌻ದಿನಕ್ಕೊಂದು ಕಥೆ🌻* "ಸುರಭಿ ಸ್ಕೂಲ್ಗೆ ಚಿನ್ನ ತರಬಾರದು ಅಂತ ಗೊತ್ತಿಲ್ವಾ ನಿನಗೆ " "ಸಾರ್ ಅದು ನಿನ್ನೆ ನನ್ನ ಹುಟ್ಟಿದ ಹಬ್ಬ ಇತ್ತು ಅಂತ ಅಮ್ಮ ಸರ ಹಾಕಿದ್ರು ವಾಪಸ್ ಕೊಡೋದು ಮರೆತೆ.. ಸಂಜೆ ಕೊಡೋಣ ಅಂತ ಬ್ಯಾಗ್ ಅಲ್ಲಿ ಇಟ್ಟಿದ್ದೆ ..ಈಗ ನೋಡಿದ್ರೆ ಇಲ್ಲ" "ಎಲ್ಲ ಕಡೆ ನೋಡಿದೆಯಾ,ಡೆಸ್ಕ್ ಬ್ಯಾಗ್ ಎಲ್ಲ" "ಹು ಸಾರ್ ಎಲ್ಲ ಕಡೆ ನೋಡಿದೆ" ಪ್ರಿನ್ಸಿಪಾಲ್ ಚೇಂಬರ್ ಅಲ್ಲಿ ಎಲ್ಲರ ಮುಖದಲ್ಲೂ ಒಂದು ರೀತಿಯ ದುಗುಡ ಗಾಬರಿ... ಸರಿ ನೀನು ಕ್ಲಾಸ್ಗೆ ಹೋಗು ನಾನು ಬರ್ತೀನಿ ಪ್ರಿನ್ಸಿಪಾಲ್ ಹೇಳಿದಾಗ ಕ್ಲಾಸ್ ಟೀಚರ್ ಜೊತೆ ತರಗತಿಗೆ ಬಂದಳು..10 ನಿಮಿಷದಲ್ಲಿ ಬಂದವರೇ "ಸುರಭಿದು ಚಿನ್ನದ ಚೈನ್ ಕಳುವಾಗಿದೆ ಯಾರು ತೊಗೊಂಡಿದಿರಾ ನಿಜ ಹೇಳಿ" ಇಡೀ ತರಗತಿಯಲ್ಲೂ ಪೂರ್ತಿ ನಿಶಬ್ದ... "ಸರಿ ..ನಿಮಗೆಲ್ಲ ಯಾರ ಮೇಲೆ ಆದ್ರೂ ಅನುಮಾನ ಇದೆಯಾ ಇದ್ರೆ ಹೇಳಿ..." ಎಲ್ಲರ ದೃಷ್ಟಿ ಕೊನೆ ಬೆಂಚ್ ಕೊನೆ ಹುಡುಗನ ಕಡೆ ಹೋಯ್ತು ಗಣೇಶ ಇದೆ ವರ್ಷ ಶಾಲೆಗೆ ಸೇರಿದ್ದ ಬಂದು ತಿಂಗಳು ಆಗಿತ್ತು ಪ್ರಾಂಶುಪಾಲರು ಕೋಪದಿಂದ "ಅದ್ಕೆ ಅವತ್ತೇ ನಿಮ್ ತಾಯಿಗೆ ಸೇರಿಸಿಕೊಳ್ಳೋದಿಲ್ಲ ಅಂತ ಹೇಳಿದೆ.. ನೀವೆಲ್ಲ ಸರಕಾರಿ ಶಾಲೆ ಮಕ್ಳು ಹೀಗೆ..ನಿಮಗೆಲ್ಲ ಶಿಸ್ತು ಅನ್ನೋದೇ ಗೊತ್ತಿರೋಲ್ಲ..ಓದು ಇರೋಲ್ಲ... ಅದರ ಜೊತೆ ಈ ಕಳ್ಳತನ ...ಸುಳ್ಳುತನಗಳು ಬೇರೆ" "ಸಾರ್