Posts

Showing posts from July, 2022

ದಿನಕ್ಕೊಂದು ಕಥೆ 1052

*🌞ದಿನಕ್ಕೊಂದು ಕಥೆ🌞* ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು.. ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು.. ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.  ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..  ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...  ಮಂತ್ರಿ ಹೇಳಿದ *‘ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರ

ದಿನಕ್ಕೊಂದು ಕಥೆ 1051

*🌞ದಿನಕ್ಕೊಂದು ಕಥೆ🌞* *ಅವಕಾಶ ಸಿಕ್ಕಾಗ ಸಹಾಯ ಮಾಡಬೇಕು.* ಇದೊಂದು ನೈಜ ಘಟನೆ ಉತ್ತರ  ಭಾರತದ ಒಂದು ಗ್ರಾಮದಲ್ಲಿ ಒಬ್ಬ ವೈದ್ಯರಿದ್ದರು. ಅವರು ಬಡತನದಲ್ಲಿ ಕಷ್ಟಪಟ್ಟು ಓದಿ ವೈದ್ಯರಾಗಿದ್ದರು. ವೈದ್ಯರಾದ ಮೇಲೆ ಬಡಬಗ್ಗರಿಗೆ  ತುಂಬಾ ಸಹಾಯ ಮಾಡುತ್ತಿದ್ದರು.  ಬಡಜನರ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಸುತ್ತಮುತ್ತ ಊರಿನಲ್ಲೆಲ್ಲಾ ಅವರಿಗೆ ಒಳ್ಳೆಯ ಹೆಸರಿತ್ತು. ಅವರ  ಹತ್ತಿರ ಒಂದು ಮೊಬೈಲ್ ಇತ್ತು. ಆ ಮೊಬೈಲ್ನಲ್ಲಿ ಇದ್ದ  ನಂಬರನ್ನು  ಒಂದು ಪೇಪರ್ ನಲ್ಲಿ ಬರೆದು ಮರದ ಮೇಲೆ, ಹಳೆಯ ಕಾಂಪೌಂಡುಗಳ ಮೇಲೆ, ಕಟ್ಟಡಗಳಲ್ಲಿ , ಬಸ್ಟಾಂಡ್ ಗಳಲ್ಲಿ ಹೀಗೆ  ಎಲ್ಲಾ ಕಡೆಗಳಲ್ಲಿ  ಅಂಟಿಸಿದ್ದರು. ಯಾಕೆಂದರೆ  ಯಾರಿಗಾದರೂ ಹುಷಾರಿಲ್ಲದಿದ್ದರೆ ಅಂದರೆ ಸಣ್ಣಪುಟ್ಟ ಜ್ವರ ಕೆಮ್ಮು ನೆಗಡಿಗಲ್ಲ, ತುರ್ತುಚಿಕಿತ್ಸೆಯ ಅಗತ್ಯವಿದ್ದ ಯಾರಾದರೂ ಸರಿಯೇ ಇಲ್ಲಿ ಬರೆದಿರುವ ನಂಬರಿಗೆ ಫೋನ್  ಮಾಡಿದರೆ ಸ್ವಲ್ಪವೂ ತಡಮಾಡದೆ ಬಿಟ್ಟ ಕೆಲಸ ಬಿಟ್ಟು, ಅದು ಎಷ್ಟೇ ದೂರ ಇರಲಿ, ಯಾವ ಮೂಲೆಯಲ್ಲೇ ಇರಲಿ, ಅಲ್ಲಿಗೆ ಹೋಗಿ ಅವರಿಗೆ ಚಿಕಿತ್ಸೆಯನ್ನು ಕೊಡುವುದು ಅವರ  ಕಾರ್ಯವಾಗಿತ್ತು. ಸಾಧಾರಣವಾಗಿ ಇದರ ಅವಶ್ಯಕತೆ ಬಡಬಗ್ಗರಿಗೆ ಮಾತ್ರ ಇರುತ್ತದೆ. ಇವರಾದರೋ, ಅವರಿಗೆ ಇಂತಿಷ್ಟೇ ಹಣ ಕೊಡಿ ಎಂದು ಯಾವತ್ತೂ ಕೇಳುತ್ತಿರಲಿಲ್ಲ ಅವರ ಯೋಗ್ಯತಾನುಸಾರ ಕೊಟ್ಟರೆ ತೆಗೆದುಕೊಳ್ಳುತ್ತಿದ್ದರು.  ಇಲ್ಲದಿದ್ದರೆ  ಇಲ್ಲ  ಬಡವರಿಗೆ ಕೈಯಿಂದ ಹಣವನ್ನು ಇವರೇ  ಕೊಟ್ಟು

ದಿನಕ್ಕೊಂದು ಕಥೆ 1050

*🌞ದಿನಕ್ಕೊಂದು ಕಥೆ🌞* *ಜಗದ್ರಕ್ಷಕ ಶ್ರೀಕೃಷ್ಣ*    ಮಹಾಭಾರತವೆಂಬ ಬಹುದೊಡ್ಡ ಗ್ರಂಥವನ್ನು ಬರೆದ ವೇದವ್ಯಾಸರು,  ದೊಡ್ಡ ದೊಡ್ಡ ಘಟನೆಗಳ, ಸಂದರ್ಭಗಳಲ್ಲಿ ನಡೆದ ಲೆಕ್ಕಕ್ಕಿಲ್ಲ ಎನ್ನುವಂಥ ಸಣ್ಣಸಣ್ಣ ಘಟನೆಗಳನ್ನು ದಾಖಲಿಸಿದ್ದಾರೆ, ಅಂಥ ಘಟನೆಗಳು ಅನನ್ಯವಾದದ್ದು, ಅದ್ಭುತವಾದದ್ದು. ಅದು ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ, ದಾಯಾದಿಗಳು ಪಾಂಡವರು ಕೌರವರು ಯುದ್ಧಕ್ಕೆ ನಿಂತಿದ್ದಾರೆ.ಇನ್ನೇನು ಯುದ್ಧ ಆರಂಭವಾಗಬೇಕು. ಕೃಷ್ಣ ಅರ್ಜುನನಿಗೆ  ಗೀತೋಪದೇಶ   ಮಾಡಿದ್ದಾಗಿದೆ. ಯುದ್ಧ ಆರಂಭವಾಗುವ ಮೊದಲು ಶಂಖ, ಜಾಗಂಟೆ, ನಗಾರಿ ಡೋಲು, ಕುದುರೆಗಳ  ಹೇಷಾವರ, ಆನೆಗಳಿಗೆ  ಘೀಳಿಟ್ಟವು. ಸೈನಿಕರ ಕೂಗಾಟ, ಯುದ್ಧ ಭೂಮಿ ಆಗಲೇ ರಣರಂಗವಾಗಿ, ಇಡೀ ಜಗತ್ತನ್ನೇ ತುಂಬಿದಂತಾಗಿತ್ತು. ಈ ಸಮಯದಲ್ಲಿ  ಕೃಷ್ಣಾ ನನ್ನ ರಥವನ್ನು ಎರಡೂ ಸೇನೆಗಳ ನಡುವೆ ನಿಲ್ಲಿಸು ನಾನು ಒಮ್ಮೆ ಎಲ್ಲರನ್ನೂ ನೋಡಬೇಕು ಎಂದು ಹೇಳಿದ ಅರ್ಜುನನಿಗಾಗಿ ರಥವನ್ನು ಎರಡೂ ಸೇನೆಗಳ ನಡುವೆ ನಿಲ್ಲಿಸಿದ.  ಹೀಗೆ ಕೃಷ್ಣ ರಥ ನಿಲ್ಲಿಸಿದ ಸಮಯದಲ್ಲಿ ಎಲ್ಲೆಲ್ಲೂ ಧೂಳು, ಗಲಾಟೆ, ಕೂಗು,ಘೋಷಣೆ, ಈ ಬಾರಿ  ಗದ್ದಲದಲ್ಲಿ  ಒಂದು  ಟಿಟ್ಟಿಬ ಎಂಬ ಪುಟ್ಟಹಕ್ಕಿ  ಆಕಾಶದಲ್ಲಿ ಹಾರುತ್ತಾ,  ಅಯ್ಯಯ್ಯೋ ಈ ಗಲಾಟೆ ಏನು ಇದು, ಪ್ರಪಂಚದ ಕಥೆಯೇ ಮುಗಿದು ಹೋಗುತ್ತಾ, ಈ ಗಲಾಟೆ  ನಿಲ್ಲುವಂತೆ ಕಾಣುತ್ತಿಲ್ಲ. ನಾನು ಏನು ಮಾಡಲಿ, ನನ್ನ ಪುಟ್ಟ ಮೂರು ಮರಿಗಳು ಮರದ ಗೂಡಿನಲ್ಲಿವೆ. ಅವುಗಳನ್ನು ಕಾಪಾಡಲು ಯಾರ

ದಿನಕ್ಕೊಂದು ಕಥೆ 1049

*🌞ದಿನಕ್ಕೊಂದು ಕಥೆ🌞*               ರಾಜ ನೊಬ್ಬನಿಗೆ ,ಯಾರೋ ಸ್ನೇಹಿತರು ಸುಂದರವಾದ ಎರಡು ಗಿಡುಗ ಪಕ್ಷಿಗಳನ್ನು ಉಡುಗೊರೆಯಾಗಿ ಕೊಟ್ಟಿದ್ದರು. ರಾಜ ಅದನ್ನು ಗಿಡುಗಗಳಿಗೆ ತರಬೇತಿ ನೀಡುವವನ ಹತ್ತಿರ ಕೊಟ್ಟು ಅವಕ್ಕೆ ತರಬೇತಿ ನೀಡಲು ಹೇಳಿದ.         ಕೆಲವು ತಿಂಗಳುಗಳ ನಂತರ ಆ ತರಬೇತುದಾರ ಬಂದು ಹೇಳಿದ,ಮಹಾಸ್ವಾಮಿ ,ಒಂದು ಹಕ್ಕಿ ,ಬಹಳ ಸುಂದರವಾಗಿ ರಾಜಗಾಂಭೀರ್ಯದಿಂದ ಮುಗಿಲೆತ್ತರಕ್ಕೆ  ಹಾರಾಡುತ್ತದೆ ,ಆದರೆ ಇನ್ನೊಂದು ಏನು ಮಾಡಿದರೂ  ಮರದ ಕೊಂಬೆಯನ್ನು ಬಿಟ್ಟು ಕದಲುವುದಿಲ್ಲಾ, ನಾನು  ಅದು  ಹಾರಲು ನನ್ನ ಬುದ್ದಿ ಯನ್ನೆಲ್ಲಾ   ಉಪಯೋಗಿಸಿದ್ದೇನೆ,ಆದರೆ ಏನೂ ಪ್ರಯೋಜನ ವಾಗಲಿಲ್ಲಾ ಎಂಬುದಾಗಿ ತಿಳಿಸಿದ.      ಏನೋ ಅನಾರೋಗ್ಯ ಇರಬೇಕೆಂದು,ಭಾವಿಸಿದ ರಾಜ ,ವೈಧ್ಯರು,ಚಿಕಿತ್ಸಕರನ್ನು ಕರೆಸಿ ,ಔಷಧೋಪಚಾರ ಮಾಡಿಸಿದ,ಆದರೂ ಗಿಡುಗ ಕೊಂಬೆಯನ್ನು ಬಿಟ್ಟು ಹಾರಲೇ ಇಲ್ಲಾ. ರಾಜನಿಗೆ ತುಂಬಾ ಬೇಸರವಾಯ್ತ.     ಕೊನೆಗೆ ನೈಸರ್ಗಿಕ ಜೀವನ ನೆಡೆಸುವವರಿಂದ  ಇದಕ್ಕೆ ಪರಿಹಾರ ಸಿಗಬಹುದೆಂದು ಒಬ್ಬ  ರೈತಾಪಿ  ವ್ಯಕ್ತಿ ಯನ್ನು  ಕರೆತಂದು ಇದರ  ವಿಷಯವನ್ನು ತಿಳಿಸಿದ.        ಮರುದಿನ ಅಂತಃಪುರದ ಕಿಟಕಿಯಿಂದ  ನೋಡಿದಾಗ  ಈ ಗಿಡುಗ ,ಗರಿಗೆದರಿ  ಆಕಾಶದಲ್ಲಿ ಮುಕ್ತವಾಗಿ ಹಾರಾಡುವುದನ್ನು  ಕಂಡು  ರಾಜನಿಗೆ ಬಹಳ ಖುಷಿಯಾಯಿತು. ಅರೆ ಆ ರೈತ ಏನು ಚಮತ್ಕಾರ ಮಾಡಿದ ,ಆತನನ್ನು ಕರೆತನ್ನಿ ಎಂದು ಆದೇಶಮಾಡಿದ.      ಏನು ಮಂತ್ರ ಮಾಡಿದೆ,ಈ ಹಕ್ಕಿಗೆ  ಹ

ದಿನಕ್ಕೊಂದು ಕಥೆ 1048

🌻  *ದಿನಕ್ಕೊಂದು ಕಥೆ* 🌻  🪷🪴    *ಹಗಲು ಕನಸಿನ ಅಪಾಯ.* 🪷🪴 ಒಂದು ಹಳ್ಳಿಯಲ್ಲಿ ಒಬ್ಬ ಯುವಕನಿದ್ದ. ಹೆಸರು ರಮೇಶ್. ಗಟ್ಟಿಮುಟ್ಟಾದ ದೇಹವಿದ್ದರೂ ದುಡಿಯುವುದರಲ್ಲಿ ಅವನಿಗೆ ಆಸಕ್ತಿಯಿರಲಿಲ್ಲ. ತಾಯಿ ದುಡಿದು ತಂದುದನ್ನೇ ಹೊಟ್ಟೆ ತುಂಬ ಊಟ ಮಾಡಿ ಹಗಲಲ್ಲೇ ಚೆನ್ನಾಗಿ ನಿದ್ರೆ ಮಾಡುತ್ತಿದ್ದ. ನಿದ್ರೆಯಿಂದ ಎದ್ದ ಮೇಲೆ ತಾಯಿಯೊಂದಿಗೆ, 'ಅಮ್ಮ, ನಾನೊಂದು ಕನಸು ಕಂಡೆ. ಅದರಲ್ಲಿ ರಾಜಕುಮಾರಿ ನನ್ನ ಕೈ ಹಿಡಿದುಕೊಂಡಿದ್ದಳು" ಎನ್ನುತ್ತಿದ್ದ. ಇನ್ನೊಂದು ದಿನ ತಾನು ದೊಡ್ಡ ಅರಮನೆ ಕಟ್ಟಿಸಿದಂತೆ ಕನಸು ಕಂಡೆನೆಂದು ಹೇಳುತ್ತಿದ್ದ. ದಿನವೂ ಅವನ ಕನಸಿನ ಕಥೆ ಕೇಳಿ ಬೇಸತ್ತು ತಾಯಿ, ಮಗನೇ, ಕನಸಿನಲ್ಲಿ ಬರುವ ಸಿರಿವಂತಿಕೆ ಎಚ್ಚರವಾದಾಗ ಇರುವುದಿಲ್ಲ. ಹಗಲು ನಿದ್ರೆ ಮಾಡಿದರೆ ಇಂತಹ ಕನಸು ಬೀಳುವುದು ಸಹಜ. ಹಗಲು ದೇಹ ಶ್ರಮದಿಂದ ಸಂಪಾದಿಸಿ ಸಿರಿವಂತನಾಗಿ ಕನಸುಗಳನ್ನೆಲ್ಲ ನನಸು ಮಾಡಿಕೊಳ್ಳಬೇಕು ಎಂದು ಹೇಳಿದಳು. "ಸರಿ, ನಾಳೆಯಿಂದಲೇ ಕನಸು ಕಾಣುವುದನ್ನು ನಿಲ್ಲಿಸಿ ಕೆಲಸಕ್ಕೆ ಹೋಗಿ ನಿಜವಾಗಿಯೂ ಶ್ರೀಮಂತನಾಗಿ ಸುಖವಾಗಿರುತ್ತೇನೆ" ಎಂದು ಹೇಳಿದ ಮರುದಿನ ರಮೇಶ್ ಕೆಲಸ ಹುಡುಕಿಕೊಂಡು ಹೊರಟ. ಒಬ್ಬ ರೈತ, "ನನ್ನಲ್ಲಿ ಐವತ್ತು ತೆಂಗಿನ ಮರಗಳಿವೆ. ಎಲ್ಲ ಮರಗಳನ್ನೇರಿ ತೆಂಗಿನಕಾಯಿ ತೆಗೆದುಕೊಟ್ಟರೆ ಮರಕ್ಕೊಂದು ಕಾಯಿಯಂತೆ ಐವತ್ತು ತೆಂಗಿನಕಾಯಿ ಕೂಲಿ ಕೊಡುತ್ತೇನೆ" ಎಂದು ಹೇಳಿದೆ. ಅವನು ಒಪ್ಪಿಕೊಂಡು ಕೆಲವು