Posts

Showing posts from March, 2018

ದಿನಕ್ಕೊಂದು ಕಥೆ. 752

*🌻ದಿನಕ್ಕೊಂದು ಕಥೆ🌻                          ಅಂತಃಕರಣ, ಬಾಂಧವ್ಯಕ್ಕಿದೆ ದೊಡ್ಡ ಶಕ್ತಿ.* ಟಾಲ್ ಸ್ಟಾಯ್ ಅದೊಂದು ದಿನ ರಷ್ಯಾದ ಬೀದಿಯಲ್ಲಿ ಸಂಚರಿಸುತ್ತಿದ್ದಾಗ ಒಬ್ಬ ಭಿಕ್ಷುಕ ಅವರನ್ನು ಸಹಾಯಕ್ಕಾಗಿ ಯಾಚಿಸಿದ. ತಕ್ಷಣ ಟಾಲ್ ಸ್ಟಾಯ್ ಜೇಬುಗಳನ್ನು ತಡಕಾಡಿದರು. ಏನೂ ಸಿಗಲಿಲ್ಲ. ತಮ್ಮ ನಿಸ್ಸಹಾಯಕತೆಗೆ ಚಿಂತಿಸುತ್ತ ಕ್ಷಣಕಾಲ ಸುಮ್ಮನೇ ನಿಂತ ಟಾಲ್ ಸ್ಟಾಯ್ ಮರು ಘಳಿಗೆಯಲ್ಲೇ ಆ ಭಿಕ್ಷುಕನನ್ನು ಪ್ರೀತಿ, ಆತ್ಮೀಯತೆಯಿಂದ ಅಪ್ಪಿಕೊಂಡು- ‘ನಿನ್ನ ಕ್ಷಮೆ ಯಾಚಿಸುತ್ತೇನೆ, ನನ್ನ ಮೇಲೆ ಬೇಸರ, ಕೋಪ ಮಾಡಿಕೊಳ್ಳಬೇಡ ಸಹೋದರ! ನನ್ನ ಬಳಿ ತಕ್ಷಣವೇ ಕೊಡುವುದಕ್ಕೆ ಏನೂ ಇಲ್ಲ’ ಎಂದರು. ಕಳೆಗುಂದಿದ್ದ ಭಿಕ್ಷುಕನ ಮುಖದಲ್ಲಿ ಸಂತಸ ಅರಳಿತು. ‘ನೀವು ನನಗೆ ಏನೂ ಕೊಡದೇ ಹೋದರೂ ಪರವಾಗಿಲ್ಲ. ಸಹೋದರ… ಅಂತ ಕರೆದಿರಲ್ಲ ಅದಕ್ಕಿಂತ ಇನ್ನೇನು ಬೇಕು’ ಎಂದ ಭಿಕ್ಷುಕನ ಕಣ್ಣಾಲಿಗಳಲ್ಲಿ ನೀರು ಬಂದಿತ್ತು. ಈ ಘಟನೆ ಎಷ್ಟೊಂದು ಸಂದೇಶ ನೀಡುತ್ತದೆ ಅಲ್ಲವೆ? ಜಗತ್ತನ್ನು ಸೃಷ್ಟಿಸಿದ ಆ ಭಗವಂತನೇ ಸಕಲ ಚರಾಚರಗಳಿಗೆ ಬದುಕಲು ಯೋಗ್ಯವಾದ ಅವಕಾಶವನ್ನು ಕೊಟ್ಟಿರುವಾಗ, ಹುಲು ಮಾನವರಾದ ನಾವು ಯಕಶ್ಚಿತ ಯಾವುದೋ ಕಾರಣಕ್ಕೆ ಮನಸ್ತಾಪ, ಅಸಹನೆಯಿಂದ ಜೀವಿಸುವುದು ಎಷ್ಟು ಸರಿ? ನಮ್ಮ ಜೀವನದ ಅಂತ್ಯ ಎಂಬುದು ಶರೀರಕ್ಕೆ ಹೊರತು ಆತ್ಮಕ್ಕಲ್ಲ. ಆದ್ದರಿಂದ ನಾವು ಎಷ್ಟೇ ದೊಡ್ಡವರಿದ್ದರೂ, ಎಂತಹ ಉನ್ನತ ಸ್ಥಾನದಲ್ಲಿದ್ದರೂ ನಮಗಿಂತಲೂ ಕೆಳಗಿರುವವರ ಜೊ

ದಿನಕ್ಕೊಂದು ಕಥೆ. 751

*🌻ದಿನಕ್ಕೊಂದು ಕಥೆ🌻                                  ಸಾಧನೆ ಸಾಧಕನ ಸ್ವತ್ತು, ಹೊರತು ಸೋಮರಿಗಳ ಸ್ವತ್ತಲ್ಲ.* ಜಾಕ್ ಮಾ ಒಂದು ಸಮಯದಲ್ಲಿ ಕೆಲಸಕ್ಕಾಗಿ ಪರದಾಡುತ್ತಿದ್ದ ಇವರು ಮುಂದೆ ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದರು ಬನ್ನಿ ಇವರ ಜೀವನದ ಬಗ್ಗೆ ಮೊದಲಿನಿಂದ ತಿಳಿದುಕೊಳ್ಳೋಣ… ಸೆಪ್ಟೆಂಬರ್ 10 1964 ರಂದು ಜಾಕ್ ಮಾ ಅವರು ಚೈನಾದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದರು. ಇವರು ತಮ್ಮ 13 ನೇ ವಯಸ್ಸಿನಲ್ಲೇ ಟೂರಿಸ್ಟ್ ಗೈಡ್ ಆಗಿ ಕೆಲಸ ಮಾಡಲು ಆರಂಭಿಸಿದರು. ಇವರು ಫಾರಿನರ್ ಗಳ ಜೊತೆ ಇಂಗ್ಲಿಷ್ ನಲ್ಲೇ ಮಾತನಾಡಲು ಪ್ರಯತ್ನಿಸುತ್ತಿದ್ದರು 9 ವರ್ಷ ಈ ಕೆಲಸ ಮಾಡಿದರು ಹಾಗಾಗಿ ಇವರಿಗೆ ಇಂಗ್ಲಿಷ್ ನಲ್ಲಿನ ಜ್ಞಾನ ತುಂಬಾ ಹೆಚ್ಚಿತು. ಈ ಕೆಲಸ ಮಾಡುತ್ತಿದ್ದಾಗ ಒಬ್ಬ ವಿದೇಶಿ ಸ್ನೇಹಿತ ಇವರ ಚೈನೀಸ್ ಹೆಸರು ಹೇಳಲು ಕಷ್ಟ ಎಂದು ಇವರಿಗೆ ಜಾಕ್ ಎನ್ನುವ ಹೆಸರನ್ನ ಇಟ್ಟರು. ಇವರಿಗೆ ಓದಿನಲ್ಲಿ ಅಷ್ಟು ಆಸಕ್ತಿ ಇರದ ಕಾರಣ 4ನೇ ತರಗತಿಯಲ್ಲಿ ಎರಡು ಬಾರಿ 8ನೇ ತರಗತಿಯಲ್ಲಿ 3 ಬಾರಿ ಫೇಲ್ ಆಗಿದ್ದರು …ಕೊನೆಗೆ ಹೇಗೋ ಪಾಸ್ ಮಾಡಿ ಇಂಗ್ಲಿಷ್ ನಲ್ಲಿ ಡಿಗ್ರಿ ಪಡೆದರು. ನಂತರ ಕೆಲಸ ಹುಡುಕಲೆಂದು 30 ಬೇರೆ ಬೇರೆ ಕಂಪನಿಗಳಿಗೆ ಅರ್ಜಿ ಹಾಕಿದ್ದರು ಆದರೆ ಎಲ್ಲಾ ಕಡೆ ತಿರಸ್ಕೃತರಾದರು. ಕೆ.ಎಫ್.ಸಿ ಮೊದಲ ಬಾರಿಗೆ ಚೈನಾ ದಲ್ಲಿ ಬಂದಾಗ ಇಲ್ಲಿ ಕೆಲಸಕ್ಕಾಗಿ 24 ಜನ ಅರ್ಜಿ ಹಾಕಿದ್ದರು ಅದರಲ್ಲಿ 23 ಜನ ಸೆಲೆಕ್ಟ್ ಆದರೂ

ದಿನಕ್ಕೊಂದು ಕಥೆ. 750

*🌻ದಿನಕ್ಕೊಂದು ಕಥೆ🌻                                   ಯಾರೂ ಬಡವರಲ್ಲ…* ಬಡವರ, ದೀನ ದಲಿತರ ಸೇವೆ ಹಾಗೂ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡವರು ಮದರ್ ತೆರೇಸಾ. ಒಮ್ಮೆ ಅವರನ್ನು ಭೇಟಿಯಾದ ಕೆಲ ಪತ್ರಕರ್ತರು, ‘ನೀವೇ ಬಡತನದಲ್ಲಿ ಹುಟ್ಟಿ ಬೆಳೆದವರು. ಹೀಗಿರುವಾಗ ಈ ಬಡವರಿಗೆ ನೀವೇನು ಕೊಡಬಲ್ಲಿರಿ?’ ಎಂದು ಕೇಳಿದಾಗ ‘ಪ್ರೀತಿಯನ್ನು’ ಎಂದುತ್ತರಿಸಿದರು ತೆರೇಸಾ. ಈ ಒಂದೇ ಒಂದು ಶಬ್ದದಲ್ಲಿ ಎಷ್ಟೊಂದು ಅರ್ಥ ಅಡಗಿದೆ! ಇತರರಿಗೆ ನೀಡಲು ನಮ್ಮ ಬಳಿ ಏನೂ ಇಲ್ಲವೆಂದು ಹೇಳೋದು ಬರೀ ಒಂದು ನೆವ, ಪೊಳ್ಳುವಾದ ಅಷ್ಟೆ. ಆದರೆ ಪ್ರೀತಿ-ಪ್ರೇಮ-ಸ್ನೇಹಭಾವಗಳ ಭರಪೂರ ಭಂಡಾರವನ್ನೇ ಹೊಂದಿರುವವರು ಇಂಥ ಕುಂಟುನೆಪಗಳನ್ನು ಮುಂದುಮಾಡುವುದಿಲ್ಲ. ಏನೂ ಖರ್ಚಿಲ್ಲದ, ಯಾವತ್ತೂ ದುಬಾರಿಯಲ್ಲದ ವಿಷಯವೆಂದರೆ ಪ್ರೀತಿ. ಇದನ್ನು ಯಾರು ಬೇಕಾದರೂ, ಯಾರಿಗೆ ಬೇಕಾದರೂ, ಎಷ್ಟು ಬೇಕಾದರೂ ನೀಡಬಹುದು. ಪ್ರೀತಿ ಎಂಬುದು ನೀಡುವ ಶಕ್ತಿ ಇಲ್ಲದವರಿಗೆ ‘ನಾಮಪದ’; ಆದರೆ ನೀಡುವ ಶಕ್ತಿ ಇದ್ದವರಿಗೆ ‘ಕ್ರಿಯಾಪದ’. ‘ಪ್ರೀತಿಗೂ ಬಯಕೆಗೂ ಏನು ವ್ಯತ್ಯಾಸ?’ ಎಂದು ಭಗವಾನ್ ಬುದ್ಧನನ್ನು ಶಿಷ್ಯನೊಬ್ಬ ಕೇಳುತ್ತಾನೆ. ಅದಕ್ಕೆ ಬುದ್ಧ, ‘ನೀನು ಒಂದು ಸುಂದರ ಹೂವನ್ನು ಕಂಡು ಅದನ್ನು ಕಿತ್ತರೆ ಅದು ಬಯಕೆ; ಬದಲಾಗಿ ಆ ಹೂವಿನ ಗಿಡಕ್ಕೆ ನೀರೆರೆದರೆ ಅದು ಪ್ರೀತಿ’ ಎಂದು ಉತ್ತರಿಸುತ್ತಾನೆ. ಆದರೆ ಪ್ರೀತಿ ಎಂಬುದು ಬಹಳ ಸೂಕ್ಷ್ಮವಾದುದು; ಅದು ನೀರು ಕಡಿಮೆಯಾದ

ದಿನಕ್ಕೊಂದು ಕಥೆ. 749

*🌻ದಿನಕ್ಕೊಂದು ಕಥೆ🌻                                        ಬೊಂಬೇ ಹೇಳತೈತೆ! ಕಂಬ ಹೇಳತೈತೆ!* ಬೊಂಬೆ ಏನು ಹೇಳತೈತೆ? ಕಂಬ ಏನು ಹೇಳತೈತೆ? ಇದನ್ನು ತಿಳಿದುಕೊಳ್ಳ ಬೇಕಾದರೆ ಇಲ್ಲಿರುವ ಕತೆಯನ್ನು ಓದಬೇಕು! ನಮ್ಮ ನೆರೆ ರಾಷ್ಟ್ರವಾದ ನೇಪಾಳದ ರಾಜಧಾನಿಯ ಹೆಸರು. ಆ ಊರಿಗೆ ಕಠ್ಮಂಡುವೆಂಬ ಹೆಸರು ಬರಲು ಕಾರಣವೇನೆಂದರೆ ಬಹಳ ಹಿಂದೆ ಅಲ್ಲೊಂದು ದೇವಸ್ಥಾನವಿತ್ತಂತೆ. ಇಡೀ ದೇವಸ್ಥಾನ ಕಟ್ಟಿಗೆಯಲ್ಲಿ ಕಟ್ಟಲ್ಪಟ್ಟಿ ತ್ತಂತೆ. ಸಂಸ್ಕೃತದಲ್ಲಿ ಕಟ್ಟಿಗೆ ಯನ್ನು ’ಕಾಷ್ಟಾ’ ಎಂದು ಕರೆಯುತ್ತಾರಾದ್ದರಿಂದ ದೇವಸ್ಥಾನಕ್ಕೆ ’ಕಾಷ್ಟಮಂಡಪ’ ಎನ್ನುತ್ತಿದ್ದರಂತೆ. ಆ ದೇವಸ್ಥಾನವಿದ್ದ ಊರಿಗೂ ’ಕಾಷ್ಟಮಂಡಪ’ ಎಂಬ ಹೆಸರು ಬಂತು. ಕಾಲಕ್ರಮೇಣ ಜನರ ಬಾಯಲ್ಲಿ ಕಾಷ್ಟಮಂಡಪವೆಂಬುದು ’ಕಠ್ಮಂಡು’ ಎಂದಾಯಿತು! ಈ ಕಾಷ್ಟಮಂಡಪ ದೇವಸ್ಥಾನದ ವಿಶೇಷವೇನೆಂದರೆ, ಇಡೀ ದೇವಸ್ಥಾನ ಅಂದರೆ ಮೂಲ ವಿಗ್ರಹದಿಂದ ಮೊದಲುಗೊಂಡು ಕಟ್ಟಡ, ಅದರ ಮೆಟ್ಟಿಲುಗಳೂ, ಗೋಪುರಗಳೂ ಕಟ್ಟಿಗೆಯಲ್ಲೇ ಮಾಡಲ್ಪಟ್ಟಿದ್ದವು. ಪೂಜಾವಿಗ್ರಹದ ಮುಂದಿದ್ದ ಬಲಿಗಂಬ ಕೂಡ ಕಟ್ಟಿಗೆಯಲ್ಲೇ ಮಾಡಲ್ಪಟ್ಟಿತ್ತು. ಅಲ್ಲಿನ ಜನರಿಗೆ ದೇವಸ್ಥಾನದ ಬಗ್ಗೆ ಬಹಳ ಭಯ-ಭಕ್ತಿಗಳಿದ್ದವು. ದೇವಸ್ಥಾನ ಹಗಲೆಲ್ಲ ಜನಜಂಗುಳಿಯಿಂದ ತುಂಬಿರುತ್ತಿತ್ತು. ಮಧ್ಯರಾತ್ರಿಯಲ್ಲಿ ಸಂಪೂರ್ಣ ಮೌನ ನೆಲೆಸಿದ ನಂತರ ಆ ಬಲಿಗಂಬ ಮತ್ತು ದೇವರ ವಿಗ್ರಹಗಳು ಪರಸ್ಪರ ಮಾತನಾಡಿಕೊಳ್ಳುತ್ತಿದ್ದವಂತೆ. ಒಮ್ಮೊಮ್ಮೆ ಬಲಿಗಂಬ ನಾನು ಮತ್ತ

ದಿನಕ್ಕೊಂದು ಕಥೆ. 748

*🌻ದಿನಕ್ಕೊಂದು ಕಥೆ🌻                                 ಮನುಷ್ಯತ್ವ ಮರೆಯದಿರೋಣ* ಒಂದಾನೊಂದು ಕಾಲದಲ್ಲಿ ಒಬ್ಬ ಮಹಾಕೋಪಿಷ್ಟ ಜಮೀನ್ದಾರನಿದ್ದ. ತನಗೆ ಯಾರಾದರೂ ಎದುರಾಡಿದರೆ, ತಪ್ಪು ಮಾಡಿದರೆ ಅವರನ್ನು ತನ್ನ ಮನೆಯ ನಾಯಿಗಳಿಗೆ ಆಹಾರವಾಗಿ ಕೊಟ್ಟು ಸಾಯಿಸಿಬಿಡುವುದು ಅವನ ವಿಲಕ್ಷಣ ಪರಿಪಾಠವಾಗಿತ್ತು. ಅವನ ನಾಯಿಗಳೂ ಅಷ್ಟೇ ಕ್ರೂರವಾಗಿದ್ದವು, ಯಾರಾದರೂ ಸಿಕ್ಕಿದರೆ ಸಾಕು ಸೀಳಿ ತಿಂದುಬಿಡುತ್ತಿದ್ದವು. ಜಮೀನ್ದಾರನಿಗೊಬ್ಬ ನಂಬಿಕಸ್ತ ಸಹಾಯಕನಿದ್ದ. ಅವನೋ ಸಾತ್ವಿಕ ಗುಣದವನು. ತನ್ನೊಡೆಯನ ಕ್ರೌರ್ಯವನ್ನು ಕಂಡು ಆತ ರೋಸಿಹೋಗಿದ್ದ. ಆದರೇನು ಮಾಡುವುದು? ಆಡುವಂತಿರಲಿಲ್ಲ, ಅನುಭವಿಸುವಂತಿರಲಿಲ್ಲ. ಒಮ್ಮೆ ಯಾವುದೋ ಸಣ್ಣ ಪ್ರಮಾದವಾಗಿಹೋಯಿತು. ಆ ಸಹಾಯಕ ಒಡೆಯನ ವಿರುದ್ಧವೇ ಮಾತಾಡುವ ಸ್ಥಿತಿ ನಿರ್ವಣವಾಯಿತು. ವಾಡಿಕೆಯಂತೆ ಜಮೀನ್ದಾರ ಇವನಿಗೂ ಶಿಕ್ಷೆ ವಿಧಿಸಿದ, ನಾಯಿಗಳನ್ನು ಕರೆತರುವಂತೆ ಆಳುಗಳಿಗೆ ತಿಳಿಸಿದ. ಆಗ ಸಹಾಯಕ, ‘ಸ್ವಾಮೀ, ನಾನೀಗ ನಿಮ್ಮ ನಾಯಿಗಳಿಗೆ ಆಹಾರವಾಗುತ್ತೇನೆ ಎಂಬುದು ಗೊತ್ತು. ಆದರೆ ನನ್ನದೊಂದು ಪುಟ್ಟ ಕೋರಿಕೆಯಿದೆ’ ಎಂದ. ‘ಏನದು ಬೇಗ ಹೇಳು’ ಎಂದು ಜಮೀನ್ದಾರ ದರ್ಪ ತೋರಿದ. ‘ನಾನು ಹತ್ತಾರು ವರ್ಷಕಾಲ ಅನನ್ಯ ಶ್ರದ್ಧಾಭಕ್ತಿಗಳಿಂದ ತಮ್ಮ ಸೇವೆ ಮಾಡಿದೆ. ಅದಕ್ಕೆ ಪ್ರತಿಯಾಗಿ ಕೊಡುಗೆಯನ್ನೇನೂ ನಾನು ಬೇಡುವುದಿಲ್ಲ. ಆದರೆ ಇನ್ನೂ ಹತ್ತು ದಿನಗಳ ಕಾಲ ಬದುಕುವುದಕ್ಕೆ ದಯವಿಟ್ಟು ನನಗೆ ಅವಕಾ

ದಿನಕ್ಕೊಂದು ಕಥೆ 747

ದಿನಕ್ಕೊಂದು ಕಥೆ                                                                      ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ " ನನ್ನ ಜೀವನದ ಬೆಲೆ ಏನು? " ಎಂದು. ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು "ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ. ಆದರೆ ಅದನ್ನು ನೀನು ಮಾರಬಾರದು" ಎಂದು ಹೇಳಿದನಂತೆ. ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ' ಈ ಕಲ್ಲಿನ ಬೆಲೆ ಎಷ್ಟಿರಬಹುದು? ' ಎಂದು ಕೇಳಿದನಂತೆ. ಅದಕ್ಕಾ ಹಣ್ಣಿನ ವ್ಯಾಪಾರಿ "ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ. ಮಾರುತ್ತೀಯಾ?" ಎಂದು ಕೇಳಿದನಂತೆ. ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ. ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. " ಈ ಕಲ್ಲಿಗೆ ನಾನು ಒಂದು ೧೦ ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?" ಎಂದು ಕೇಳಿದನಂತೆ. ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ. ಇದಾದಮೇಲೆ ಆ ವ್ಯಕ್ತಿ ಚಿನ

ದಿನಕ್ಕೊಂದು ಕಥೆ 746

*🌻ದಿನಕ್ಕೊಂದು ಕಥೆ🌻                                ಆದರ್ಶಮಯ ಬದುಕು… ಹರಿದುಹೋದ ಉಡುಪು ಧರಿಸಿದ್ದ ಪುಟ್ಟ ಬಾಲಕನೊಬ್ಬ ಅಂಗಡಿಯ ಹೊರಗೆ ನಿಂತು ಅದರ ಷೋಕೇಸನ್ನೇ ನೋಡುತ್ತಿದ್ದ. ಇದನ್ನು ಗಮನಿಸಿದ ಹಿರಿಯರೊಬ್ಬರು, ‘ಏನು ನೋಡುತ್ತಿರುವೆ ಮಗೂ…?’ ಎಂದು ಪ್ರೀತಿಯಿಂದ ಕೇಳಿದರು. ‘ಆ ಸುಂದರ ಗೊಂಬೆಯನ್ನು…. ಅದಕ್ಕೆಷ್ಟು ಬೆಲೆ ಇರಬಹುದು ಎಂದು ಯೋಚಿಸುತ್ತಿರುವೆ’ ಎಂದ ಆ ಬಾಲಕ. ಹಿರಿಯರು ಕೂಡಲೆ ಆತನನ್ನು ಅಂಗಡಿಯೊಳಗೆ ಕರೆದುಕೊಂಡು ಹೋಗಿ ಗೊಂಬೆ ಕೊಡಿಸಿದರು. ಅದನ್ನು ಪಡೆದ ಬಾಲಕ, ಅದುವರೆಗೂ ಕೈಯಲ್ಲಿ ಬಚ್ಚಿಟ್ಟುಕೊಂಡಿದ್ದ, ಆಗಲೇ ಹರಿದು ಜೀರ್ಣವಾಗಿದ್ದ ಐದು ರೂಪಾಯಿ ನೋಟನ್ನು ಆ ಹಿರಿಯರಿಗೆ ಕೊಟ್ಟ. ಮಗುವಿನ ಬದ್ಧತೆ ಕಂಡು ಅವರ ಕಂಗಳಲ್ಲಿ ನೀರು ಜಿನುಗಿತು. ‘ಹಣ ಬೇಡ ಮಗು, ನೀನೇ ಇಟ್ಟುಕೋ, ಗೊಂಬೆಯ ಜತೆ ಆಡಿಕೋ’ ಎನ್ನುತ್ತ ಅವರು ಬಾಲಕನ ತಲೆ ನೇವರಿಸಿದಾಗ, ‘ತಾತಾ, ಈ ಗೊಂಬೆ ನನಗಲ್ಲ; ನಾಳೆ ನನ್ನ ತಂಗಿಯ ಹುಟ್ಟುಹಬ್ಬ. ಅವಳಿಗೆ ಕೊಡುತ್ತೇನೆ’ ಎಂದು ನುಡಿದ ಆ ಮುಗ್ಧಬಾಲಕ. ಆ ಪುಟ್ಟ ವಯಸ್ಸಿನಲ್ಲೇ ಅವನಲ್ಲಿ ಕೆನೆಗಟ್ಟಿರುವ ಪ್ರೀತಿ-ಮಮಕಾರ ಕಂಡು ಹಿರಿಯರ ಮನಸ್ಸು ಪ್ರಫುಲ್ಲಗೊಂಡಿತು. ಆತನ ಪುಟ್ಟಬೆರಳು ಹಿಡಿದು ರಸ್ತೆಯಲ್ಲಿ ಹೆಜ್ಜೆಹಾಕುತ್ತಿರುವಾಗ, ‘ನೀವು ದೇವರೇ?’ ಎಂದು ಅವರನ್ನು ಆ ಬಾಲಕ ಮುಗ್ಧವಾಗಿ ಪ್ರಶ್ನಿಸಿದ. ‘ಇಲ್ಲ ಮಗೂ… ನಾನು ದೇವರಲ್ಲ. ದೇವರ ಮಗ!’ ಎಂದುತ್ತರಿಸಿದರು ಹಿರಿಯರು. ಒಬ್ಬರು ಮತ್

ದಿನಕ್ಕೊಂದು ಕಥೆ. 745

*🌻ದಿನಕ್ಕೊಂದು ಕಥೆ🌻                      ಯಾಂತ್ರಿಕ_ಜೀವನ..* ಗಂಡ ಹೆಂಡತಿ ಇಬ್ಬರೂ ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಿರುವಾಗ ಹೆಂಡತಿ ತನ್ನ ಗಂಡನೊಂದಿಗೆ ನಿಮ್ಮನ್ನು ಒಂದು ವಿಷಯ ಕೇಳಲೆ ? ಎಂದಳು. ಗಂಡ : ಕೇಳು ಅದಕ್ಕೆ ಅನುಮತಿ ಬೇಕೆ? ಹೆಂಡತಿ : ಈ ಮಧ್ಯೆ ನೀವು ಆಫೀಸಿನಿಂದ ಬೇಗ ಬಂದು ನಮ್ಮನ್ನು ಸುತ್ತಾಡಲು ಹೊರಗೆ ಕರೆದುಕೊಂಡು ಹೋಗುತ್ತಿದ್ದೀರಿ. ಮಕ್ಕಳಿಗೆ ಹೋಂ ವರ್ಕ್ ಮಾಡಿಸುತ್ತಾ ಅವರೊಂದಿಗೆ ಸಮಯ ಕಳೆಯುತ್ತಿದ್ದೀರಿ. ನನ್ನೊಂದಿಗೆ ತುಂಬಾ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದೀರಿ. ಕಾರಣವೇನಿರಬಹುದೆಂದು ಸ್ವಲ್ಪ ಭಯದಿಂದಲೇ ಕೇಳಿದಳು. ಗಂಡ : ನಾನು ಎಂದಿನಂತೆಯೇ ಇದ್ದೇನೆ. ನಿನಗ್ಯಾಕೆ ಹಾಗೆ ಅನ್ನಿಸುತ್ತಿದೆಯೋ ನನಗೆ ಅರ್ಥವಾಗುತ್ತಿಲ್ಲ. ಹೆಂಡತಿ : ನಿಜ ಹೇಳಿ. ನಿಮ್ಮ ಮುಖ ನೋಡಿದರೆ ಇನ್ನೊಂದು ಮನೆ ಮಾಡಿದ್ದೀರಿ ಅನ್ನಿಸುತ್ತದೆ. ಗಂಡ : ಅಬ್ಬಾ…. ಆ ರೀತಿ ಯೋಚಿಸಬೇಡ. ಹೆಂಡತಿ : ಹಾಗಿದ್ದಲ್ಲಿ ನಿಜ ಏನೆಂದು ಹೇಳಿ. ಗಂಡ : ಅದಕ್ಕೆ ಬೇರೆ ವಿಷಯ ಇದೆ ಎನ್ನುತ್ತಾ ತನ್ನ ಡೈರಿಯಿಂದ ಒಂದು ಪತ್ರವನ್ನು ತೆಗೆದು ತನ್ನ ಹೆಂಡತಿ ಕೈಯಲ್ಲಿಟ್ಟನು. ಹೆಂಡತಿಗೆ ಆ ಪತ್ರವನ್ನು ಓದುವಾಗ ಕೈ ನಡುಗತೊಡಗಿತು. ತಾಯಿ ಮಗನಿಗೆ ಬರೆದ ಆ ಪತ್ರವನ್ನು ಓದುವಾಗ ಆಕೆಯ ಕಣ್ಣಲ್ಲಿ ನೀರು ಬಂದಿತು. ಪ್ರೀತಿಯ ಮಗನಿಗೆ… ಒಂದಲ್ಲ ಒಂದು ದಿನ ಈ ಪತ್ರ ನಿನಗೆ ಸಿಗುತ್ತದೆ ಎಂಬ ಆಸೆಯಿಂದ ಬರೆಯುತ್ತಿರುವೆ. ಸ್ವಲ್ಪ ತಾಳ್ಮೆಯಿಂದ ಈ ಪತ್ರವನ