Posts

Showing posts from August, 2021

ದಿನಕ್ಕೊಂದು ಕಥೆ 1023

*🌻ದಿನಕ್ಕೊಂದು ಕಥೆ🌻* *ಸರ್ವಂ ಶ್ರೀ ಕೃಷ್ಣಾರ್ಪಣಂ.*  ಒಂದು ಸ್ವಾರಸ್ಯವಾದ ಕತೆ.  ಮುಲ್ಲೈಕ್ಕೊಡು ಎಂದು ತಮಿಳುನಾಡಿನ ಒಂದು ಪುಟ್ಟ ಗ್ರಾಮ. ಅಲ್ಲಿ ಶ್ರೀಕೃಷ್ಣ ನ ಒಂದು ಸುಂದರವಾದ ದೇವಾಲಯ. ಅರ್ಚಕರೂ ಅವರಿಗೆ ಸಹಾಯಕನಾಗಿದ್ದ ತುಳಸಿ ಎಂಬ ಯುವಕನೂ ದಿನವೂ ಬೆಳಿಗ್ಗೆ ನಾಲ್ಕು ಗಂಟೆಗೇ ಎದ್ದು ಶುಚಿಯಾಗಿ ದೇವಸ್ಥಾನಕ್ಕೆ ಬರುತ್ತಿದ್ದರು. ದೇವಾಲಯದ ಪಕ್ಕದಲ್ಲೇ ಒಂದು ಹೂದೋಟ.  ತೋಟದಿಂದ ಹೂಗಳನ್ನು ತಂದು ದೇವರೀಗೆ ಮಾಲೆಯಾಗಿ ಕಟ್ಟಿಕೊಡುವ ಕೆಲಸ ತುಳಸಿಯದು. ಅವನೋ ಪರಮ ಕೃಷ್ಣ ಭಕ್ತ. ಸದಾ ಕೃಷ್ಣಧ್ಯಾನ ನಿರತ.  ತೋಟದಲ್ಲಿ ಹೂಗಳನ್ನು ಕೀಳುವಾಗಲೂ ಅವನಿಗೆ ಕೃಷ್ಣನದೇ ನೆನಪು. ಕೃಷ್ಣಾರ್ಪಣಂ ಎಂದು ಮನದಲ್ಲಿ ಹೇಳಿಕೊಂಡೇ ಹೂಗಳನ್ನು ಕಿತ್ತು ಪೋಣಿಸಿ ಹಾರ ಮಾಡುವನು ಈ ಭಕ್ತ.   ಹತ್ತು ಹದಿನೈದು ಮಾಲೆಗಳನ್ನು ಸಿದ್ಧ ಪಡಿಸಿದ ಮೇಲೆ ಕೃಷ್ಣನಿಗೆ ಅವನ್ನು ತಾನೇ ಮುಡಿಸಿದಂತೆ ಭಾವಿಸಿಕೊಂಡು ಅದೇ ನೆನಪಿನಲ್ಲೇ ಅರ್ಚಕರ ಬಳಿಗೆ ಅವನ್ನು ತಲುಪಿಸಿಬಿಡುವನು.  ಇತ್ತ ಅರ್ಚಕರು ಅವನಿತ್ತ ಮಾಲೆಗಳನ್ನು ಶ್ರೀ ಕೃಷ್ಣನ ಮಂಗಳ ಮೂರ್ತಿಗೆ ಮುಡಿಸಿ  ಅಲಂಕಾರ ಮಾಡಲು ಹೋದರೆ, ಅದಾಗಲೇ ದೇವರು ಒಂದು ಹೊಸ ಮಾಲೆಯನ್ನು ಧರಿಸಿ ಹುರುಪಿನೊಂದಿಗೆ ಇವರನ್ನು ಎದುರುಗೊಳ್ಳಲು ಸಿದ್ಧನಾಗಿರುತ್ತಿದ್ದ. ಹಳೆಯ ನಿರ್ಮಾಲ್ಯವನ್ನು ತೆಗೆದು ಹೊಸ ಮಾಲೆಯನ್ನು ದೇವರಿಗೆ ಹಾಕಿ ಅಲಂಕಾರ ಮಾಡಬೇಕೆಂದಿದ್ದ ಅರ್ಚಕರಿಗೆ ಒಂದು ಕಡೆ ನಿರಾಸೆ. ಇನ್ನೊಂದೆಡೆ ಅಚ್ಚರಿ. ಇದು ಹೇಗೆ ಸಾಧ್ಯ ?

ದಿನಕ್ಕೊಂದು ಕಥೆ 1022

*🌻ದಿನಕ್ಕೊಂದು ಕಥೆ🌻* ನದಿ ದಂಡೆಯಲ್ಲಿ ಕೆಲವರು ಹಾಯಾಗಿ ವಿಹರಿಸುತ್ತಿದ್ದರು. ಕೆಲವರು ಕೆಮೆರಾ ಕಣ್ಣಿಗೆ ಭಂಗಿಗಳಾಗಿದ್ದರು. ಕೆಲವರು ಬುತ್ತಿ ಬಿಚ್ಚಿ ಕುಳಿತಿದ್ದರು. ಕೆಲವರು ಕಾಲುಗಳನ್ನು  ನೀರಿನಲ್ಲಿ ಇಳಿಬಿಟ್ಟು  ಹರಟುತ್ತಿದ್ದರು. ಆಗ ನದಿಯ ನಡುಮಧ್ಯದಲ್ಲಿ ಇದ್ದಕ್ಕಿದ್ದಂತೆ ದೋಣಿಯೊಂದು ಮಗುಚಿ ಬೀಳುತ್ತದೆ.   ಮುಳುಗುತ್ತಿರುವವರ ಆಕ್ರಂದನ ಹಕ್ಕಿಗಳ ಚಿಲಿಪಿಲಿಯನ್ನು ಹಿನ್ನೆಲೆಗೆ ದೂಕುತ್ತದೆ.  ದಂಡೆಯಲ್ಲಿರುವವರು ಭಯಭೀತರಾಗಿ ಆ ದೃಶ್ಯವನ್ನು ನೋಡತೊಡಗುತ್ತಾರೆ. "ಮಾರಣಾಂತಿಕ ಸುಳಿಗಳಿವೆ ಎಚ್ಚರ"  ಎಂದು ಅಲ್ಲಿ ಬೋರ್ಡು ಹಾಕಲಾಗಿದೆ.  ಅಲ್ಲೀವರೆಗೂ ಸುಳಿಗೆ ಬಲಿಯಾದವರ ಅಂಕಿ ಅಂಶಗಳನ್ನೂ ಹಾಕಲಾಗಿದೆ .ಯಾರೂ ನೀರಿಗೆ ಇಳಿಯಲೊಲ್ಲರು. ಗುಂಪನ್ನು ಸೀಳಿಕೊಂಡು ಒಬ್ಬ ಬಂದೇಬಿಟ್ಟನಲ್ಲ! ಆತ ಭರ್ಜಿಯಂತೆ ನೀರಿಗೆ ಜಿಗಿದಿದ್ದನ್ನು ನೋಡಿ  ಎಲ್ಲರೂ  ಬೆರಗಾದರು. ಆತಂಕ ತಿಳಿಯಾಯಿತು.‌ ತಮ್ಮ ಜವಾಬ್ದಾರಿಯನ್ನು ಅವನ ಹೆಗಲಿಗೆ ಹೊರಿಸಿ ನಿರಾಳದ ನಿಟ್ಟುಸಿರು ಬಿಟ್ಟರು. ಆತ ಒಬ್ಬೊಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸುತ್ತಿದ್ದರೆ, ಹುರಿದುಂಬಿಸುವ ಶಿಳ್ಳೆಗಳ ಮೊರೆತ ನಾಲ್ಕೂ ದಿಕ್ಕುಗಳಲ್ಲಿ ಮಾರ್ದನಿಸತೊಡಗಿತು.‌.. ಆತ ಕಟ್ಟಕಡೆಯ ವ್ಯಕ್ತಿಯನ್ನು ದಂಡೆಗೆ ತಲುಪಿಸಿ ಕುಸಿದು ಕುಳಿತಾಗ ಜೈಕಾರದ ಸದ್ದು ಮುಗಿಲನ್ನು ಕೊರೆದು  ನಭೋಮಂಡಲವನ್ನು ವ್ಯಾಪಿಸಿತು.  ದುರದೃಷ್ಟವಶಾತ್,  ಆ  ರಕ್ಷಕ ಅತೀವವಾಗಿ ದಣಿದು ವೀರ ಮರಣವನ್ನು ಅಪ್ಪಿದ. 

ದಿನಕ್ಕೊಂದು ಕಥೆ 1021

*🌻ದಿನಕ್ಕೊಂದು ಕಥೆ*🌻 *ಬುದ್ಧಿವಂತಿಕೆಗೆ ಬಡತನ ಸಿರಿತನ ಮುಖ್ಯವಲ್ಲ* ಒಂದೂರಿನಲ್ಲಿ ಒಬ್ಬ ರಾಜನಿದ್ದ. ರಾಜನಿಗೆ ಇಬ್ಬರು ಗಂಡು ಮಕ್ಕಳು. ಚಿಕ್ಕ ರಾಜ್ಯವಾಗಿದ್ದು  ಪ್ರಜೆಗಳು ನೆಮ್ಮದಿಯಿಂದ ಬದುಕುತ್ತಿದ್ದರು.ರಾಜನ ಆಸ್ಥಾನದಲ್ಲಿ ಅವನ ತಂದೆಯ ಕಾಲದಿಂದ ಬಂದ ವಿದ್ವಾಂಸರು, ಪಂಡಿತರು, ಗಾಯಕರು, ವಾಕ್ಚಾತುರ್ಯರು, ಕವಿಗಳು, ಹೀಗೆ ಎಲ್ಲಾ ತರಹದ ಕಲಾವಿದರಿಂದ ರಾಜನ ಸಭೆ ಮೇಳೈಸಿತ್ತು. ಆದರೆ ಸಭಾಭವನದಲ್ಲಿ,ಹಳೆಯ ಕಾಲದ, ಜಿಗಟು ಹಿಡಿದಂತೆ,  ಜಿಡ್ಡುಗಟ್ಟಿದ, ಹಾಡಿದ್ದೇ ಹಾಡೋ ಕಿಸುಬಾಯಿ ದಾಸಾ ಎನ್ನುವಂತಹ ಒಬ್ಬ ವಿದ್ವಾಂಸನು  ಪ್ರತಿಬಾರಿಯೂ ಸಭೆ ಶುರುವಾಗುತ್ತಿದ್ದಂತೆ, ಯಾವುದಾದರೂ ಒಂದು ವಿಷಯವನ್ನು ಪ್ರಸ್ತಾಪಿಸಿ, ಅದೇ ವಿಷಯದಲ್ಲೇ, ಇಡೀ ದಿನದ ಸಭೆಯನ್ನು ವ್ಯರ್ಥ ಮಾಡುತ್ತಿದ್ದನು. ರಾಜನಿಗೆ ಆಡುವಂತಿಲ್ಲ, ಅನುಭವಿಸುವಂತಿಲ್ಲ ಎನ್ನುವಂತಾಗಿತ್ತು, ಆದರೆ ಗತ್ಯಂತರವಿಲ್ಲ. ಹಿರಿಯ ತಲೆಮಾರಿನವರು, ಪಂಡಿತನಾದುದರಿಂದ ವಿರೋಧವಾಗಿ ಮಾತನಾಡಲು ಸಾಧ್ಯವಿಲ್ಲ. ಸೂಕ್ಷ್ಮವಾಗಿ ಬೇಕಾದಷ್ಟು ಸಲ ಹೇಳಿ, ಹೇಳಿಸಿ, ಆಗಿದೆ ಆದರೆ ಅದು ಯಾವುದು ಪ್ರಯೋಜನವಾಗದೆ, ರಾಜನೇ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.  ಈ  ಮಧ್ಯೆ ರಾಜನ ಎರಡು ಗಂಡು ಮಕ್ಕಳು, ರಾಜ್ಯದ ಗಡಿಭಾಗದಲ್ಲಿ ಮನರಂಜನೆಗೆಂದು ಹೋಗಿ, ಪಕ್ಕದ ರಾಜ್ಯದ ಮಕ್ಕಳ ಜೊತೆಗೆ ಜಗಳವಾಡಿಕೊಂಡು ಮನೆಗೆ ಬಂದರು. ಈ ಕಾರಣದಿಂದ ಪಕ್ಕದ ರಾಜನು ಈ ರಾಜ್ಯದ ಮೇಲೆ ಯುದ್ಧ  ಘೋಷಣೆ ಮಾಡಿದ್ದಾನೆ.  ರ

ದಿನಕ್ಕೊಂದು ಕಥೆ 1020

*🌻 ದಿನಕ್ಕೊಂದು ಕಥೆ🌻* *ಬಿದಿರಿನ ಬೊಂಬು* ಬಲಿಷ್ಠ ಸಾಮ್ರಾಜ್ಯಕ್ಕೆ  ಒಬ್ಬ ರಾಜನಿದ್ದನು. ವಸಂತಋತು ಬರುತ್ತಿದ್ದಂತೆ  ನಿಗದಿ  ಪಡಿಸಿದ ದಿನಗಳಲ್ಲಿ, ನೆರೆ ಹೊರೆ  ರಾಜ್ಯದವರು,  ಸಣ್ಣಪುಟ್ಟ ಸಂಸ್ಥಾನದ ಸಾಮಂತರಾಜರು, ದೂರದೂರದ ಕಾಡಿನ ರಾಜರುಗಳು, ಕೋಟೆಕೊತ್ತಲಗಳ ಪಾಳೇಗಾರರು,ಇವರುಗಳೆಲ್ಲಾ ಪ್ರತಿವರ್ಷವೂ ಬಲಿಷ್ಠ ಸಾಮ್ರಾಜ್ಯದ ರಾಜನಿಗೆ ಕಪ್ಪ ಕಾಣಿಕೆಗಳನ್ನು ತಂದು ಕೊಡುತ್ತಿದ್ದರು. ಅದರಲ್ಲಿ ಬೆಲೆಬಾಳುವ ಮುತ್ತು ರತ್ನಗಳು, ವಿಶೇಷವಾಗಿ ಬೆಳೆದ ದವಸಧಾನ್ಯಗಳು, ಹಣ್ಣು ಹಂಪಲು,  ಕುಶಲ ಕಲೆಗಾರಿಕೆಯಿಂದ ಮಾಡಿದ  ಅತ್ಯಾಕರ್ಷಕ ವಸ್ತುಗಳು, ಇಂಥ ತರಹೆವಾರಿ ಕೊಡುಗೆಗಳನ್ನು ಪ್ರೀತಿಯಿಂದ ಕೊಡುತ್ತಿದ್ದರು. ರಾಜನು ಸಹ ಬಂದಿರುವ ಅತಿಥಿಗಳಿಗೆ, ಕುಂದು ಕೊರತೆ ಆಗದಂತೆ ಮಾಡಿ, ದೊಡ್ಡ ಸತ್ಕಾರದ ಜೊತೆಗೆ ಮನೋರಂಜನೆ, ಪ್ರತಿಭಾ ಪ್ರದರ್ಶನ ನಡೆಸಿ ಎಲ್ಲರಿಗೂ ನೆನಪಿನ ಕಾಣಿಕೆಗಳನ್ನು ಕೊಟ್ಟು, ಗೌರವದಿಂದ ಕಳಿಸಿ ಕೊಡುತ್ತಿದ್ದನು.ಇದು ಅನೇಕ ವರ್ಷಗಳಿಂದ ನಡೆದು ಬಂದಿದ್ದು, ಯಾವುದೇ ರಾಜ್ಯದಲ್ಲಿ  ವೈಮನಸ್ಸಾಗಲಿ ,ಯುದ್ಧಗಳಾಗಲಿ, ನಡೆಯುತ್ತಿರಲಿಲ್ಲ. ಶ್ರೀಸಾಮಾನ್ಯ ರಿಂದ ಹಿಡಿದು ಶ್ರೀಮಂತರವರೆಗೂ ನೆಮ್ಮದಿಯಾಗಿ ಬದುಕುತ್ತಿದ್ದರು.  ಈ ವರ್ಷವೂ ವಸಂತಋತುವಿನ ಸಂಭ್ರಮಾಚರಣೆ  ಬಂದಿತು. ಮನೋರಂಜನೆಯ ದಿನ ನಿಗದಿಪಡಿಸಿ, ದೂತವಾಹಕರ ಮೂಲಕ ಎಲ್ಲ ಕಡೆಗೂ ತಿಳಿಸಲಾಯಿತು. ರಾಜಧಾನಿ ಸಿಂಗಾರಗೊಂಡಿತು. ಅಂದು ಅತಿಥಿಗಳೆಲ್ಲ ಬಂದು ಸೇರಿದರು. ಸಂಭ್ರಮಾಚರಣೆ ಆ

ದಿನಕ್ಕೊಂದು ಕಥೆ 1019

*🌻ದಿನಕ್ಕೊಂದು ಕಥೆ🌻* *ಅಹಲ್ಯೆಬಾಯಿ ಹೋಳ್ಕರ್ ಎಂಬ ಅಚ್ಚಳಿಯದ ನಕ್ಷತ್ರ ಇಂದು 226ನೇ ಪುಣ್ಯಸ್ಮರಣೆ* 12ನೇ ವಯಸ್ಸಿನಲ್ಲಿ ವಿವಾಹ, 29ನೇ ವಯಸ್ಸಿನಲ್ಲಿ ವೈಧವ್ಯ, 42ನೇ ವಯಸ್ಸಿನಲ್ಲಿ ರಾಣಿಯಾಗಿ ರಾಜ್ಯಾಧಿಕಾರ ಸ್ವೀಕಾರ , 28 ವರ್ಷಗಳ ಸುದೀರ್ಘ, ಯಶಸ್ವಿ ಆಳ್ವಿಕೆ ಬಳಿಕ 70ನೇ ವಯಸ್ಸಿನಲ್ಲಿ ದೇಹತ್ಯಾಗ.. ದೇಶದ ಮೂಲೆಮೂಲೆಗಳಲ್ಲಿ ಖಿಲ್ಜಿ, ತುಘಲಕ್, ಮೊಘಲರು, ನಿಜಾಮರು ಮತ್ತಿತರ ಆಕ್ರಮಣಕಾರರಿಂದ ನಾಶವಾಗಿದ್ದ ಹಿಂದೂ ದೇವಾಲಯಗಳನ್ನು, ಪುಣ್ಯಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿದ ಮಹಾಸಾಧ್ವಿ. ಒಂದೂ ಯುದ್ದವನ್ನು ಸೋಲದೇ, ರಾಜ್ಯದ ಭೂಭಾಗದಲ್ಲಿ ಒಂದಿಂಚೂ ವಿರೋಧಿಗಳಿಗೆ ಬಿಟ್ಟುಕೊಡದೆ ಮಾಳವ ಸಾಮ್ರಾಜ್ಯ ಕಾಪಾಡಿದ ವೀರನಾರಿ , ವಿಸ್ತರಣೆಯ ಮಹಾತ್ವಾಕಾಂಕ್ಷೆಯಿಂದ ಪರರ ಮೇಲೆ ಆಕ್ರಮಣ ನಡೆಸದ ಸಂಯಮಿ. ಯುದ್ದದಲ್ಲಿ ಸೆರೆಸಿಕ್ಕ ಶತ್ರುಸೈನಿಕರ ಮಡದಿ, ಮಕ್ಕಳಿಗೆ ಪತ್ರಬರೆದು ಯೋಗಕ್ಷೇಮ ವಿಚಾರಿಸುತ್ತಿದ್ದ ಕರುಣಾಳು, ಎಂಥ ಘೋರ ಅಪರಾಧಕ್ಕೂ ಮರಣದಂಡನೆ ಪರಿಹಾರವಲ್ಲ ಎಂದು ಕ್ಷಮಿಸಿಬಿಡುತ್ತಿದ್ದ ದಯಾಳು, ಭಾರತದ ಇತಿಹಾಸದಲ್ಲಿ ಆಗಿಹೋದ ಹತ್ತುಹಲವು ವೀರರಮಣಿಯರ ತಾರಾಕಾಶದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅಚ್ಚಳಿಯದೇ ಹೊಳೆಯುವ ಅರುಂಧತಿ ನಕ್ಷತ್ರ. ಭಾರತ ದೇಶದ ಮಣ್ಣಿನ ಗುಣವೇ ಅಂಥದ್ದು ಈ ಧರ್ಮಭೂಮಿಯನ್ನು ಆಳಿದ ಸಹಸ್ರಾರು ರಾಜವಂಶಗಳ ಅಸಂಖ್ಯಾತ ರಾಜಮಹಾರಾಜರಂತೆ, ಅಪಾರ ಸಂಖ್ಯೆಯ ವೀರನಾರಿಯರೂ ಇತಿಹಾಸವನ್ನು ಶ್ರೀಮಂತಗೊಳಿಸಿದ್ದಾರೆ. ಮಧ್ಯಪ್ರದ

ದಿನಕ್ಕೊಂದು ಕಥೆ 1018

*🌻ದಿನಕ್ಕೊಂದು ಕಥೆ🌻* *ವೃದ್ಧೆಯ ಜಾಣತನ.* ನ್ಯಾಯ, ನೀತಿ, ದಾನ,ಧರ್ಮಗಳನ್ನು ತಿಳಿದು  ಪಾಲಿಸುತ್ತಿದ್ದ  ಒಬ್ಬ ಮಹಾರಾಜನಿದ್ದನು. ಒಂದು ಸಲ ಒಂದು ದೊಡ್ಡ ಪ್ರದರ್ಶನವನ್ನು ಏರ್ಪಾಟು ಮಾಡಿದ.ಆ  ಪ್ರದರ್ಶನದಲ್ಲಿ ಹಲವಾರು ವಸ್ತುಗಳು ಇದ್ದವು. ಬೆಲೆಬಾಳುವ  ಬಟ್ಟೆಗಳು ಅಪರೂಪದ ಒಡವೆ,ವಸ್ತುಗಳು ಇದ್ದವು. ಪ್ರದರ್ಶನದಲ್ಲಿಟ್ಟ ವಸ್ತುಗಳನ್ನು ನೋಡಲು ಬಂದವರು, ತಮಗೆ ಯಾವ ವಸ್ತು ಬೇಕೋ ಅದನ್ನು  ತೆಗೆದುಕೊಂಡು ಹೋಗಬಹುದಿತ್ತು. ಇದರಿಂದ ಸುತ್ತಮುತ್ತಲ ಹಳ್ಳಿ, ಪಟ್ಟಣ ಹಾಗೂ ನಗರದ ಜನರು ಬಂದರು. ಪ್ರದರ್ಶನ ನೋಡಲು ಬಂದವರೆಲ್ಲ ನೋಡು ನೋಡುತ್ತಾ ತಮಗೆ ಬೇಕಾದ ಬೆಲೆಬಾಳುವ ಬಟ್ಟೆಗಳನ್ನು, ಇನ್ನು ಕೆಲವರು ಒಡವೆಗಳನ್ನು, ಮತ್ತೆ ಕೆಲವರು ಅದ್ಭುತವಾದ ಪುಸ್ತಕಗಳನ್ನು, ಇನ್ನಷ್ಟು ಜನ ಹಣ್ಣುಹಂಪಲುಗಳನ್ನು, ಹೇಗೆ ತಮಗೆ ಬೇಕು ಬೇಕಾದಂತಹ ವಸ್ತುಗಳನ್ನು ತೆಗೆದುಕೊಂಡು ಹೋದರು  ಅಲ್ಲಿಗೆ ಬಂದವರೆಲ್ಲಾ ತಮಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೋದರು. ಆದರೆ ಅಲ್ಲಿಗೆ ಬಂದವರಲ್ಲಿ , ವೃದ್ಧಳಾದ ಮಹಿಳೆಯೂಬ್ಬಳು ಅಲ್ಲಿರುವ ಯಾವ ವಸ್ತುವನ್ನು ಮುಟ್ಟಲಿಲ್ಲ. ಅವಳಿಗೆ ಯಾವುದೂ ತೃಪ್ತಿ ಕಂಡಂತೆ ಅನಿಸಲಿಲ್ಲ. ಇದನ್ನೇ ಗಮನಿಸುತ್ತಿದ್ದ ದಿವಾನನು, ರಾಜನ್, "ಈ ಪಟ್ಟಣದ ಜನರೆಲ್ಲರೂ ಈ ಪ್ರದರ್ಶನವನ್ನು ನೋಡಿ ಆನಂದಿಸಿ ಅದರಲ್ಲಿನ ಎಲ್ಲಾ ವಸ್ತುಗಳನ್ನು ನೋಡಿ ಕಣ್ತುಂಬಿಕೊಂಡು ತಮಗೆ ಬೇಕಾದುದನ್ನು ತೆಗೆದುಕೊಂಡು ಸಂತೋಷಗೊಂಡರು. ಆದರೆ ಒಬ್ಬ ಮಹಿಳೆ ಇದ್ಯಾವು

ದಿನಕ್ಕೊಂದು ಕಥೆ 1017

*🌻ದಿನಕ್ಕೊಂದು ಕಥೆ🌻*  *ಮಣ್ಣಿನ ಗಣಪ* *ಕೃಪೆ: ಡಾ.ಗವಿಸ್ವಾಮಿ.ಚಾಮರಾಜನಗರ.* ಆತ ಕಾಲೇಜು ಅಧ್ಯಾಪಕ. ಆತನ ಮಗ ನಾಲ್ಕನೇ ತರಗತಿಯಲ್ಲಿ‌ ಕಲಿಯುತ್ತಿದ್ದ.‌ ಅಪ್ಪ-ಮಗ ಆವತ್ತು ಗೌರಿ ಹಬ್ಬಕ್ಕೆ ಹುಟ್ಟೂರಿಗೆ ಬಂದಿದ್ದರು.   ಇಬ್ಬರೂ ಸಂಜೆ ಹೊತ್ತು ಕೆರೆ ಬಯಲಿನಲ್ಲಿ ತಿರುಗಾಡುತ್ತಿದ್ದಾಗ ಹುಡುಗರಿಬ್ರು ಹಸಿ ಮಣ್ಣಿನೊಂದಿಗೆ ಆಟವಾಡುತ್ತಿದ್ದುದು ಕಾಣಿಸಿತು.  ಮಗನಿಗೆ ಅವರೊಂದಿಗೆ ಬೆರೆತು ಆಟವಾಡಲು‌ ಆಸೆಯಾಯಿತು. ಅಪ್ಪನನ್ನು ಬಲವಂತದಿಂದ ಅವರ ಬಳಿಗೆ ಕರೆದುಕೊಂಡು ಹೋದ. ಆ ಹುಡುಗರು ಕೆರೆಯ ಅಂಟು ಮಣ್ಣಿನಲ್ಲಿ ಗಣಪನ ಮೂರ್ತಿಗಳನ್ನು ಮಾಡುವಲ್ಲಿ ತಲ್ಲೀನರಾಗಿದ್ದರು .  ಒಬ್ಬ ಹುಡುಗ ಅಂಗೈ ಮೇಲೆ ಇಲಿ ಬಾಲದಂತಹ ಸೊಂಡಿಲನ್ನು ಹೊಸೆಯುತ್ತಿದ್ದ . ಇನ್ನೊಬ್ಬ ತನ್ನ ಗಣಪನ ಮುಖಕ್ಕೆ ಸಕ್ಕರೆ ಗಾತ್ರದ ಕಲ್ಲುಗಳನ್ನು ಅಂಟಿಸಿ  ಕಣ್ಣು ಗುಡ್ಡೆಗಳನ್ನು ರೂಪಿಸುತ್ತಿದ್ದ . ಆ ಹುಡುಗನಿಗೆ ಅವರಿಬ್ಬರ ಕೈಚಳಕವನ್ನು ಕಂಡು ಅಸೂಯೆಯಾಯಿತು . ಮಣ್ಣಿನುಂಡೆಯಲ್ಲಿ ತಾನೂ ಒಂದು ಗಣಪತಿಯನ್ನು ಮಾಡುವ ಆಸೆಯಾಯಿತು . ಮಣ್ಣಿಗೆ ಕೈ ಹಾಕಿದರೆ ಅಪ್ಪ ಗದರಬಹುದು ಎಂಬ ಭಯವೂ ಇತ್ತು . ಹಾಗಾಗಿ ಆಸೆಗಣ್ಣಿನಿಂದ ಆ ಹುಡುಗರ ಕೈಗಳನ್ನೇ  ಗಮನಿಸತೊಡಗಿದ ‌. ಏತನ್ಮಧ್ಯೆ, ದಾರಿಯಲ್ಲಿ ಹೊಲಕ್ಕೆ ಹೊರಟಿದ್ದವನೊಬ್ಬ ಅಧ್ಯಾಪಕನನ್ನು ಗುರುತಿಸಿ ಮಾತನಾಡಿಸಲು ಬಂದ. ಆತ ಅಧ್ಯಾಪಕನ ಸಹಪಾಠಿಯಾಗಿದ್ದ . ಏಳನೇ ಕ್ಲಾಸ್ ಫೇಲಾದ ಮೇಲೆ ದನಕರು, ತೆವರುತಿಟ್ಟುಗಳಲ್ಲಿ ಕಳೆದುಹೋಗಿದ್ದ.  ಅಲ

ದಿನಕ್ಕೊಂದು ಕಥೆ 1016

*🌻ದಿನಕ್ಕೊಂದು ಕಥೆ🌻* *ಬುದ್ಧಿವಂತ ತಾತ* ಒಮ್ಮೆ ವಯಸ್ಸಾದ ವೃದ್ದರು, ಕೆಲಸದಿಂದ ನಿವೃತ್ತರಾದ ಮೇಲೆ, ಒಂದು ಒಳ್ಳೆಯ ಜಾಗದಲ್ಲಿ ಮನೆ ಕೊಂಡುಕೊಂಡರೂ. ಇವರ ಮನೆಯ ಹತ್ತಿರದಲ್ಲೇ ಒಂದು ಶಾಲೆ ಇತ್ತು. ಬೇಸಿಗೆ ಕಳೆದು ಶಾಲೆ ಪುನರಾರಂಭವಾಯಿತು. ಶಾಲೆಯ ಮೂರು ತುಂಟ ಹುಡುಗರು, ಊಟವಾದ ಮೇಲೆ, ಪಕ್ಕದಲ್ಲಿದ್ದ ತಾತನ ಮನೆಯ ಮುಂದೆ ಇದ್ದ ಕಸದ ಡಬ್ಬವನ್ನು ಒದೆಯುವುದು, ಬಡಿಯುವುದು ಮಾಡುತಿದ್ದರು. ಕಸದ ಡಬ್ಬ ತುಂಟ ಹುಡುಗರ ತಬಲವಾಗಿತ್ತು. ಗಲಾಟೆಯಿಂದ ಬೇಸತ್ತ ತಾತ, ಇವರಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿ, ಮಾರನೆ ದಿನ ಹುಡುಗರು ಬರುವುದನ್ನೇ ಕಾಯುತಿದ್ದರು. ಹುಡುಗರು ಬಂದು ಎಂದಿನಂತೆ ತಬಲಾ ಬಾರಿಸಲಾರಂಬಿಸಿದಾಗ, ತಾತ ಹೊರಗಡೆ ಬಂದು, ಹುಡುಗರೊಡನೆ ಪರಿಚಯ ಮಾಡಿಕೊಂಡರು. ನಿಮ್ಮ ವಯಸ್ಸಿನವನಾಗಿದ್ದಾಗ ನಾನು ಹೀಗೆ ಮಾಡುತಿದ್ದೆ, ನೀವು ತಬಲಾ ಬಾರಿಸುವುದನ್ನು ಕೇಳುವುದೇ ಆನಂದ ಎಂದು ಹೇಳಿದರು. ಇನ್ನೂ ಮುಂದುವರೆದು, ಇನ್ನೂ ಮುಂದೆ ನೀವು ದಿನಾ ಇಲ್ಲಿ ಬಂದು ತಬಲಾ ಬಾರಿಸುವುದಾದರೆ ನಿಮಗೆ ದಿನಕ್ಕೆ ಒಬ್ಬೊಬ್ಬರಿಗೆ ಒಂದು ರೂಪಾಯಿ ಕೊಡುತ್ತೇನೆ ಎಂದರು. ಹುಡುಗರಿಗೋ ಆನಂದವೋ ಆನಂದ, ತಾತನ ಮಾತಿಗೆ ಒಪ್ಪಿ. ಪ್ರತಿದಿನ ಬಂದು ತಬಲಬಾರಿಸಿ, ಹಣ ಪಡೆದು ಹೋಗುತಿದ್ದರು. ಒಂದು ವಾರವಾಯಿತು, ಆ ದಿನ ಹುಡುಗರು ಹಣ ಪಡೆಯಲು ಹೋದಾಗ, ತಾತ “ಮಕ್ಕಳೇ ನನಗೆ ಬರುತಿದ್ದ ಕಾಸು ಕಡಿಮೆಯಾಗಿದೆ. ಇನ್ನೂ ಮುಂದೆ ನಿಮಗೆ ಪ್ರತಿಯೊಬ್ಬರಿಗೂ ಐವತ್ತು ಪೈಸೆ ಮಾತ್ರ ಕೊಡಬಲ್

ದಿನಕ್ಕೊಂದು ಕಥೆ 1015

*🌻ದಿನಕ್ಕೊಂದು ಕಥೆ🌻* *ಈ ದೃಶ್ಯ ಟೋಕಿಯೊ ೨೦೨೦ರ ಓಲಂಪಿಕ್ ನ ಪುರುಷರ ಹೈಜಂಪ್ ಫೈನಲ್ಲಿನ ದೃಶ್ಯ.* ಪುರುಷರ ಹೈಜಂಪ್ ಫೈನಲ್ಲಿನಲ್ಲಿ ಇಟಲಿಯ ಜಿಯಾನ್ ಮಾರ್ಕೊ ತಂಬರಿ ಸ್ಪರ್ಧೆಯು ಕತಾರ್ ದೇಶದ ಮುತಾಜ್ ಈಸಾ ಬಾರ್ಶಿಮ್ ಜೊತೆಗಿತ್ತು. ಇಬ್ಬರು ಸ್ಪರ್ಧಿಗಳೂ 2.37 ಮೀಟರ್ ಎತ್ತರ ಹಾರಿದ್ದರಿಂದ ರಿಸಲ್ಟ್ ಸಮ ಬಂದಿತು. ನಂತರದಲ್ಲಿ ಓಲಂಪಿಕ್ ಅಧಿಕಾರಿಗಳು ಇಬ್ಬರೂ ಸ್ಪರ್ಧಿಗಳಿಗೆ ತಲಾ ಮೂರು ಅವಕಾಶಗಳನ್ನು ನೀಡಿದರು. ಮೂರು ಬಾರಿಯೂ ಇವರಿಬ್ಬರು 2.37 ಮೀ.ಗಿಂತ ಹೆಚ್ಚಿನ ಎತ್ತರ ಹಾರಲಿಲ್ಲ. ಹಾಗಾಗಿ ಇಬ್ಬರಿಗೂ ಮತ್ತೊಂದು ಅವಕಾಶವನ್ನು ನೀಡಲಾಯಿತು. ಆದರೆ ಇಟಲಿಯ ಸ್ಪರ್ಧಿ ತಂಬರಿಯ ಕಾಲಿಗೆ ಗಂಭೀರ ಪೆಟ್ಟಾದ್ದರಿಂದ ಆತನು ದುಃಖದಿಂದ ಕೊನೆಯ ಅವಕಾಶವನ್ನು ಉಪಯೋಗಿಸಿಕೊಳ್ಳದೇ ಹಿಂದೆ ಸರಿದನು. ಈ ಕ್ಷಣದಲ್ಲಿ ಕತಾರ್ ನ ಬಾರ್ಶಿಮ್ ಎದುರಿಗೆ ಯಾವ ಸ್ಪರ್ಧಿಯು ಇಲ್ಲದಂತಾಗಿ,ಆತನು ಸುಲಭವಾಗಿ ಚಿನ್ನದ ಪದಕ ಧರಿಸಲು ಕೊರಳು ಒಡ್ಡಬಹುದಿತ್ತು. ಆದರೆ ಬಾರ್ಶಿಮ್ ತಲೆಯಲ್ಲಿ ನಡೆಯುತ್ತಿದ್ದ ವಿಚಾರವೇ ಬೇರೆ ಇತ್ತು. ಆತನು ನಿಧಾನವಾಗಿ ಯೋಚಿಸಿ ಅಲ್ಲಿದ್ದ ಓಲಂಪಿಕ್ ಅಧಿಕಾರಿಗಳನ್ನು "ನಾನು ಕೂಡ  ಈ ಅಂತಿಮ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಬಂಗಾರದ ಪದಕವನ್ನ ಇಬ್ಬರಿಗೂ ಹಂಚುತ್ತೀರಲ್ಲವೇ?" ಅಂತ ಪ್ರಶ್ನಿಸಿದ. ಅಧಿಕಾರಿಗಳು ತಮ್ಮಲ್ಲಿ ಪರಾಮರ್ಶೆ ಮಾಡಿ 'ಹೌದು ಹಾಗಾದಲ್ಲಿ ನಿಮ್ಮಿಬ್ಬರನ್ನೂ ಜಂಟಿಯಾಗಿ ವಿಜೇತರೆಂದು ಘೋಷಿಸಲಾಗುತ್ತದೆ.

ದಿನಕ್ಕೊಂದು ಕಥೆ 1014

*🌻ದಿನಕ್ಕೊಂದು ಕಥೆ🌻* *ಈ ದೃಶ್ಯ ಟೋಕಿಯೊ ೨೦೨೦ರ ಓಲಂಪಿಕ್ ನ ಪುರುಷರ ಹೈಜಂಪ್ ಫೈನಲ್ಲಿನ ದೃಶ್ಯ.* ಪುರುಷರ ಹೈಜಂಪ್ ಫೈನಲ್ಲಿನಲ್ಲಿ ಇಟಲಿಯ ಜಿಯಾನ್ ಮಾರ್ಕೊ ತಂಬರಿ ಸ್ಪರ್ಧೆಯು ಕತಾರ್ ದೇಶದ ಮುತಾಜ್ ಈಸಾ ಬಾರ್ಶಿಮ್ ಜೊತೆಗಿತ್ತು. ಇಬ್ಬರು ಸ್ಪರ್ಧಿಗಳೂ 2.37 ಮೀಟರ್ ಎತ್ತರ ಹಾರಿದ್ದರಿಂದ ರಿಸಲ್ಟ್ ಸಮ ಬಂದಿತು. ನಂತರದಲ್ಲಿ ಓಲಂಪಿಕ್ ಅಧಿಕಾರಿಗಳು ಇಬ್ಬರೂ ಸ್ಪರ್ಧಿಗಳಿಗೆ ತಲಾ ಮೂರು ಅವಕಾಶಗಳನ್ನು ನೀಡಿದರು. ಮೂರು ಬಾರಿಯೂ ಇವರಿಬ್ಬರು 2.37 ಮೀ.ಗಿಂತ ಹೆಚ್ಚಿನ ಎತ್ತರ ಹಾರಲಿಲ್ಲ. ಹಾಗಾಗಿ ಇಬ್ಬರಿಗೂ ಮತ್ತೊಂದು ಅವಕಾಶವನ್ನು ನೀಡಲಾಯಿತು. ಆದರೆ ಇಟಲಿಯ ಸ್ಪರ್ಧಿ ತಂಬರಿಯ ಕಾಲಿಗೆ ಗಂಭೀರ ಪೆಟ್ಟಾದ್ದರಿಂದ ಆತನು ದುಃಖದಿಂದ ಕೊನೆಯ ಅವಕಾಶವನ್ನು ಉಪಯೋಗಿಸಿಕೊಳ್ಳದೇ ಹಿಂದೆ ಸರಿದನು. ಈ ಕ್ಷಣದಲ್ಲಿ ಕತಾರ್ ನ ಬಾರ್ಶಿಮ್ ಎದುರಿಗೆ ಯಾವ ಸ್ಪರ್ಧಿಯು ಇಲ್ಲದಂತಾಗಿ,ಆತನು ಸುಲಭವಾಗಿ ಚಿನ್ನದ ಪದಕ ಧರಿಸಲು ಕೊರಳು ಒಡ್ಡಬಹುದಿತ್ತು. ಆದರೆ ಬಾರ್ಶಿಮ್ ತಲೆಯಲ್ಲಿ ನಡೆಯುತ್ತಿದ್ದ ವಿಚಾರವೇ ಬೇರೆ ಇತ್ತು. ಆತನು ನಿಧಾನವಾಗಿ ಯೋಚಿಸಿ ಅಲ್ಲಿದ್ದ ಓಲಂಪಿಕ್ ಅಧಿಕಾರಿಗಳನ್ನು "ನಾನು ಕೂಡ  ಈ ಅಂತಿಮ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಬಂಗಾರದ ಪದಕವನ್ನ ಇಬ್ಬರಿಗೂ ಹಂಚುತ್ತೀರಲ್ಲವೇ?" ಅಂತ ಪ್ರಶ್ನಿಸಿದ. ಅಧಿಕಾರಿಗಳು ತಮ್ಮಲ್ಲಿ ಪರಾಮರ್ಶೆ ಮಾಡಿ 'ಹೌದು ಹಾಗಾದಲ್ಲಿ ನಿಮ್ಮಿಬ್ಬರನ್ನೂ ಜಂಟಿಯಾಗಿ ವಿಜೇತರೆಂದು ಘೋಷಿಸಲಾಗುತ್ತದೆ.