Posts

Showing posts from September, 2017

ದಿನಕ್ಕೊಂದು ಕಥೆ. 561

*🌻ದಿನಕ್ಕೊಂದು ಕಥೆ🌻                        ಭಾವನೆಗಳ ತುಡಿತ ಮಿಡಿತಗಳಿಗೆ ಕಿವಿಗೊಡದಿದ್ದರೆ ?* ಭಾವವೆಂಬ ಹಕ್ಕಿ ಗರಿಗೆದರಿದರೆ ಗುಡಿಸಲು ಮಹಲಾಗುವುದು. ಭಾವ ಹೀನರಾದರೆ ಮಹಲೂ ಗುಡಿಸಲಾಗುವುದು. ಹುಟ್ಟೋದು ಒಂದು ದಿನ ಸಾಯೋದು ಒಂದು ದಿನ. ನಡುವಿರುವುದೇ ಮೂರು ದಿನದ ಜೀವನ ಅನ್ನೋದು ಜೀವನದ ಸಾಮಾನ್ಯ ನುಡಿ. ಈ ಮೂರು ದಿನದ ಜೀವನ ಹೇಗೆ ಕಳೆಯುತ್ತೇವೆ? ಏನೆಲ್ಲ ಕಳೆದುಕೊಂಡು ಏನು ಪಡೆದುಕೊಳ್ಳುತ್ತೇವೆ. ಪಡೆದು ಕೊಂಡ ದ್ದನ್ನು ಅದೆಷ್ಟು ಪ್ರಮಾಣದಲ್ಲಿ ಅನುಭವಿಸುತ್ತೇವೆ? ಜೀವನದ ಪಯಣದಲ್ಲಿ ಸಹ ಪಯಣಿಗರಿಗೆ ಎಷ್ಟು ಪ್ರೀತಿ ಅನುಕಂಪ ಖುಷಿ ನೀಡುತ್ತೇವೆ? ಪರರ ಕಷ್ಟಕ್ಕೆ ಮಂಜಿನಂತೆ ಕರಗಿ ನೆರವಿಗೆ ಧಾವಿಸುತ್ತೇವೆ ಇವೆಲ್ಲ ನಮ್ಮ ಬದುಕಿನ ಸಾರ್ಥಕತೆಯನ್ನು ಸಾರಿ ಹೇಳುತ್ತವೆ. ಹುಟ್ಟು ಸಾವು ಎರಡು ಸೇತುವೆಗಳ ನಡುವೆ ಇರುವ ಕಾಲವೇ ಬದುಕು. ದೈವ ಸೃಷ್ಟಿಯ ಎಲ್ಲ ಜೀವ ಸಂಕುಲಗಳು ಬದುಕುತ್ತವೆ ಆದರೆ ಸರ್ವಶ್ರೇಷ್ಠ ಪ್ರಾಣಿಗಳಾದ ನಾವು ಬರೀ ಬದುಕಬಾರದು ಜೀವಿಸಬೇಕು. ಹಾಗಾದಾಗಲೇ ಬದುಕಿಗೊಂದು ನಿಜವಾದ ಅರ್ಥ. ಜೀವಿಸಬೇಕೆಂದರೆ ಭಾವಗಳ ನದಿಯಲ್ಲಿ ಈಸಬೇಕು. ಬಾಳಿಗೂ ಭಾವಕೂ ಅವಿನಾಭಾವ ಸಂಬಂಧವಿದೆ ಅದಕ್ಕೆಂತಲೇ ಕವಿಯೊಬ್ಬ ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ ಎಂದು ಹಾಡಿ ಹೊಗಳಿ ಬಾಳಿನಲ್ಲಿ ಭಾನೆಗಳ ಮಹತ್ವ ಸಾರಿ ಹೇಳಿದ್ದಾನೆ. ಮೈಕೆಲ್ ಡಾಗ್ಲಸ್‌ನ ಹೆಸರು ಕೇಳದೇ ಇರುವವರು ತುಂಬಾ ಕಮ್ಮಿ. ಆತ ಪ್ರಸಿದ್ಧ ನಟ ಮತ್ತು ನಿರ್ದೇಶಕ. ಆತನ

ದಿನಕ್ಕೊಂದು ಕಥೆ. 560

*🌻ದಿನಕ್ಕೊಂದು ಕಥೆ🌻*                  *ಒಂದು ಸಹಿಗೋಸ್ಕರ* *ತಂದೆ ಜಿಲ್ಲಾಧಿಕಾರಿ* *ಕಾರ್ಯಾಲಯಕ್ಕೆ* *ಅಲೆದಾಡುವುದನ್ನು ಕಂಡು* *ಐಎಎಸ್ ಆದ ಮಗಳು* ಬಹಳ ವರ್ಷಗಳ ಹಿಂದೆ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಒಬ್ಬ ರೈತನು ಹೊಲದ ದಾಖಲೆಗಳಲ್ಲಿ ಸಹಿ ಮಾಡಿಸಿಕೊಳ್ಳವುದಕ್ಕೆ ಜಿಲ್ಲಾಧಿಕಾರಿ ಕಛೇರಿಯನ್ನು , ರಾತ್ರಿ , ಹಗಲು , ಮಳೆ , ಚಳಿ , ಬಿಸಿಲು ಅನ್ನದೆ ಸುತ್ತುತ್ತಿದ್ದನು.. ಸರಕಾರಿ ಕೆಲಸ ಅಲ್ಲವೆ ಅಷ್ಟು ಸುಲಭವಾಗಿ ಎಲ್ಲಿ ಅಗುತ್ತೇವೆ. ತಂದೆಯು ಅಲೆದಾಡುವುದನ್ನು ನೋಡಿದ ಮಗಳು ಅಪ್ಪ ಯಾಕೇ ಅಷ್ಟೊಂದು ಸುತ್ತಾಡುತ್ತಿರ , ಯಾವಾಗಲೂ ನೀವು ಮನೆಯಲ್ಲಿ ಇರುವುದಿಲ್ಲ.. ನೀವು ಯಾವಾಗಲೂ ವ್ಯಸ್ತವಾಗಿರುತ್ತಿರು ಈ ಕೆಲಸವನ್ನು ಯಾರು ಮಾಡಬೇಕು ಎಂದೆಲ್ಲಾ ಕೇಳುತ್ತಿದ್ದಳು ಅದಕ್ಕೆ ತಂದೆ ಒಂದೆ ಉತ್ತರವನ್ನು ಹೇಳುತ್ತಿದ್ದನು ನಮ್ಮ ಕೆಲಸವನ್ನು ಕಲೆಕ್ಟರ್ ಮಾಡಬೇಕು ಎಂದು... ಆ ಸಮಯದಲ್ಲಿ #ಕಲೆಕ್ಟರ್ ಅನ್ನುವ ಶಬ್ದ ಅ ಒಂಬತ್ತು ವರ್ಷದ ಮಗುವಿನ ತಲೆಯಲ್ಲಿ ಕುಳಿತುಕೊಂಡು ಬಿಟ್ಟಿತು.. ಅ ಸಮಯದಲ್ಲಿ ಅ ಬಾಲಕಿ #ರೋಹಿಣಿಯ ವಯಸ್ಸು 09 ವರ್ಷ ಅಗಿನ ಸರಕಾರ ರೈತರಿಗೆ ಕೆಲವು ಘೋಷಣೆಗಳನ್ನು , ಘೋಷಿಸಿತು.. ಅದರ ಲಾಭ ಪಡೆಯಲು ಅ ರೈತನು ಹಗಲು ರಾತ್ರಿ ಅಲೆದಾಡುತ್ತಿದ್ದನು. ತಂದೆಯ ಸ್ಥಿತಿಯನ್ನು ನೋಡಿದ ಮಗಳು ತಾನು ಕಲೆಕ್ಟರ್ ಅಗಿ ಜನರಿಗೆ ಸೇವೆ ಮಾಡಬೇಕು ಅನ್ನುವ ಧೃಡ ನಿರ್ಧಾರ ಮಾಡಿದಳು.. ರೋಹಿಣಿಯ ತಂದೆ 65 ವರ್ಷಗ

ದಿನಕ್ಕೊಂದು ಕಥೆ. 559

*🌻ವಿಜಯ ದಶಮಿ🌻*                             *9 ದಿನ ತಾಯಿ ಬಳಿ ಇರಬೇಕೆಂದು “ದುರ್ಗೆ”ಗೆ ಶಿವನ ವರ”ದಸರಾ ನವರಾತ್ರಿ” ಹಿಂದಿನ ಕುತೂಹಲ ಕಥೆ* ದಸರಾ ಹಬ್ಬ ಎಂದರೆ ಎಲ್ಲರಿಗೂ ಗೊತ್ತಿರುವುದೇ. ಕೆಟ್ಟದರ ಮೇಲೆ ಗೆಲುವು ಸಾಧಿಸಿದರ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ. ದುರ್ಗಾ ಮಾತೆ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹರಿಸಿದ ದಿನ. ಹಾಗಾಗಿ ಆ ಕ್ಷಣಗಳನ್ನು ನೆನಪಿಸಿಕೊಳ್ಳಲು ಜನ ಹಬ್ಬ ಮಾಡಿಕೊಳ್ಳುತ್ತಾರೆ. ದುರ್ಗೆಯನ್ನು ನವರಾತ್ರಿಗಳ ಕಾಲ ವಿವಿಧ ರೂಪಗಳಲ್ಲಿ ಭಕ್ತರು ಪೂಜಿಸುತ್ತಾರೆ. ಆ ಬಳಿಕ ಕೊನೆಯ ದಿನ ವಿಜಯದಶಮಿ ಬರುತ್ತದೆ. ಆ ದಿನ ಉತ್ಸವಗಳನ್ನು ವೈಭವದಿಂದ ಮಾಡುತ್ತಾರೆ. ಅನೇಕ ಕಡೆ ದಸರಾ ಉತ್ಸವಗಳು ವೈಭವವಾಗಿ ನಡೆಯುತ್ತವೆ. ಆದರೆ ಅದೇ ದಿನ ಬಹಳಷ್ಟು ಮಂದಿ ಆಯುಧ ಪೂಜೆ ಸಹ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ದಸರಾ ಹಬ್ಬದ ಬಗ್ಗೆ ಕೆಲವೊಂದು ಕುತೂಹಲಕರವಾದ ವಿಷಯಗಳನ್ನು ಈಗ ತಿಳಿದುಕೊಳ್ಳೋಣ. ಪೂರ್ವದಲ್ಲಿ ಮಹಿಷಾಸುರ ಎಂಬ ರಾಕ್ಷಸ ಜನರನ್ನು ಹಿಂಸಿಸುತ್ತಿದ್ದ. ದೇವತೆಗಳನ್ನೂ ಹಿಂಸಿಸುತ್ತಿದ್ದ. ಆದರೆ ಹೆಸರಿಗೆ ತಕ್ಕಂತೆ ಮಹಿಷ ಎಂದರೆ (ಕೋಣ), ಅವನ ತಲೆ ಕೋಣದಂತೆ ಇತ್ತು. ಈ ಹಿನ್ನೆಲೆಯಲ್ಲಿ ಅವನನ್ನು ಸಂಹರಿಸಲು ದೇವತೆಗಳು ದುರ್ಗಾದೇವಿಯನ್ನು ಸೃಷ್ಟಿಸಿದರು. ಆದರೆ ದುರ್ಗೆಯನ್ನು ನೋಡಿದ ಮಹಿಷಾಸುರ ಆಕೆಯ ಸೌಂದರ್ಯಕ್ಕೆ ಮರುಳಾಗಿ ಆಕೆಯನ್ನು ಮದುವೆಯಾಗುವಂತೆ ಕೋರುತ್ತಾರೆ. ಆದರೆ ದುರ್ಗಾಮಾತೆ ಆತನಿಗೆ ಷರತ್ತುಗಳನ್

ದಿನಕ್ಕೊಂದು ಕಥೆ. 558

*🌻ದಿನಕ್ಕೊಂದು ಕಥೆ🌻                                   ಹೀಗೂ ವಾರಾಂತ್ಯ ಕಳೆಯಬಹುದು ನೋಡಿ…!* ವಾರಪೂರ್ತಿ ದುಡಿಮೆಯಲ್ಲಿ ಹೈರಾಣಾದವರು ಅವರವರ ಭಾವಕ್ಕೆ ತಕ್ಕಂತೆ ವಾರಾಂತ್ಯ ಕಳೆಯಲು ಯೋಜನೆ ಹಾಕಿ ಕೊಂಡಿರುತ್ತಾರೆ. ವಾರಾಂತ್ಯವನ್ನು ಮೋಜು ಮಸ್ತಿಯಲ್ಲಿ ಹಾಳುಮಾಡದೆ ಸಮಾಜಮುಖಿ ಕಾರ್ಯಗಳಿಗೆ ಮೀಸಲಿಟ್ಟ ಎರಡು ಮಾದರಿ ತಂಡಗಳ ಪರಿಚಯ ಇಲ್ಲಿದೆ. ವಾರ ಪೂರ್ತಿ ಮೈಮುರಿಯುವ ದುಡಿತ, ಕಂಪ್ಯೂಟರ್ ಕೀಬೋಡ್ ಗರ್ಳ ಜತೆಗಿನ ಅವಿರತ ಸಾಂಗತ್ಯ, ಬೆಳಗ್ಗೆ 9 ರಿಂದ ರಾತ್ರಿ ಒಂಬತ್ತರವರೆಗೆ ಪುರುಸೊತ್ತು ಅನ್ನುವ ಪದದ ಅರ್ಥವೇ ಗೊತ್ತಿಲ್ಲದಂತೆ ಮನಸ್ಸು ಕೆಲಸದ ಒಳಗೆ ಮುದುಡಿ ಕುಳಿತಿರುತ್ತದೆ. ಇನ್ನು ಟ್ರಾಫಿಕ್ ಮಧ್ಯೆ ಸಿಕ್ಕಿಬಿದ್ದರಂತೂ ಹೊರಗಿನ ಪ್ರಪಂಚದಲ್ಲಿ ಏನು ನಡೆಯುತ್ತಿದೆಯೆಂದು ತಿಳಿಯುವ ಛಾನ್ಸೇ ಇರುವುದಿಲ್ಲ. ಇವೆಲ್ಲದರಿಂದ ಹೊರಗೆ ಬರಬೇಕೆಂದರೆ ವಾರಾಂತ್ಯಕ್ಕೆ ಕಾಯಲೇಬೇಕು. ಹೀಗಾಗಿ ಸಿಕ್ಕಿದ ಎರಡು ದಿನಗಳನ್ನು ಸದ್ಬಳಕೆ ಮಾಡಲು ಹೊಸ ದಾರಿಗಳನ್ನು ಹುಡುಕುತ್ತಾ ಇರುತ್ತಾರೆ. ಕೆಲವರು ಸಿನಿಮಾ, ಡ್ಯಾನ್ಸ್, ಪಬ್ ಅಂತ ರಿಲ್ಯಾಕ್ಸ್ ಆದ್ರೆ ಇನ್ನುಳಿದವರು ಇದ್ಯಾವುದೂ ನಮಗೆ ಬೇಡ ಪ್ರಕೃತಿ ಮಡಿಲಲ್ಲಿ ಮೈಮರೆಯುವುದೇ ನಮಗಿಷ್ಟ, ಕನಿಷ್ಠ ಎರಡು ದಿನಗಳಾದರೂ ಈ ಎಲ್ಲಾ ಜಂಜಾಟದಿಂದ ಹೊರ ಬರಬೇಕು ಅಂದುಕೊಳ್ಳುತ್ತಾರೆ. ಮತ್ತೆ ಕೆಲವರದ್ದು ಸಮಾಜಸೇವೆ ಮಾಡುವ ಇಂಗಿತ. ಈ ಮೂಲಕ ಬದುಕನ್ನು ಸಾರ್ಥಕವಾಗಿಸುವ ಬಯಕೆ. ಹೀಗೆ ಅವರವರ ಭಾವಕ್ಕೆ ತಕ್

ದಿನಕ್ಕೊಂದು ಕಥೆ. 557

🌻🌻 *ದಿನಕ್ಕೊಂದು ಕಥೆ🌻🌻                                            💐ಚೈತನ್ಯರ ತ್ಯಾಗ*💐 ಚೈತನ್ಯ ಮಹಾಪ್ರಭು ಬಂಗಾಳ ಹಾಗೂ ನಮ್ಮ ದೇಶ ಕಂಡ ಮಹಾನ್ ಸಂತ, ಭಕ್ತಿಪಂಥದ ಬಹುದೊಡ್ಡ ಪ್ರಚಾರಕ, ಪರಮ ದೈವಭಕ್ತ ಮತ್ತು ಶಾಸ್ತ್ರಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ ವಿದ್ವಾಂಸ.  ಒಂದು ದಿನ ಬೇರೆ ಊರಿಗೆ ಪ್ರವಾಸ ಹೊರಟಿದ್ದ ಚೈತನ್ಯರು ನದಿಯನ್ನು ದಾಟಬೇಕಿತ್ತು. ಅಂಬಿಗ ನಾವೆಯನ್ನು ದಂಡೆಗೆ ತಂದೊಡನೆ ಚೈತನ್ಯರು ಏರಿ ಕುಳಿತರು. ಸ್ವಲ್ಪ ಸಮಯದಲ್ಲಿ ನಾವೆ ಭರ್ತಿ­ಯಾಯಿತು. ನಾವೆ ಹೊರಟಿತು. ಅಂಬಿಗನಿಗೆ ನಾವೆಯಲ್ಲಿದ್ದ ಬಹುತೇಕ ಜನ ಪರಿಚತರೇ. ಅವನು ಅವರೊಂದಿಗೆ ತಮಾಷೆ ಮಾಡುತ್ತ ಹರಟೆ ಹೊಡೆ­ಯುತ್ತಿದ್ದ. ಆಗ ಯಾರೋ ಚೈತನ್ಯರ ಹೆಗಲಮೇಲೆ ಕೈ ಇಟ್ಟಂತಾಯಿತು. ತಿರುಗಿ ನೋಡಿದರೆ ಅಲ್ಲಿ ಗದಾಧರ ನಿಂತಿದ್ದಾನೆ. ಗದಾಧರ ಚೈತನ್ಯರ ಬಾಲ್ಯಸ್ನೇಹಿತ. ಇಬ್ಬರೂ ಜೊತೆಗೆ ಶಾಲೆಗೆ ಹೋದವರು, ಆಟ ಆಡಿದ­ವರು. ಈಗ ಅವನನ್ನು ಎಷ್ಟೋ ವರ್ಷಗಳ ನಂತರ ಕಾಣುತ್ತಿದ್ದಾರೆ. ಒಬ್ಬರನೊಬ್ಬರು ಅಪ್ಪಿಕೊಂಡರು, ಹಳೆಯ ನೆನಪುಗಳನ್ನು ತಾಜಾ ಮಾಡಿ­ಕೊಂಡರು. ಗದಾಧರ ಕೇಳಿದ, ‘ಚೈತನ್ಯ ಈಗ ಏನು ಮಾಡುತ್ತಿದ್ದೀ? ನಾವು ಗುರು­ಕುಲಕ್ಕೆ ಹೋಗುತ್ತಿದ್ದಾಗ ನೀನು ಅತ್ಯಂತ ಬುದ್ಧಿವಂತನಾಗಿದ್ದಿ. ನ್ಯಾಯಶಾಸ್ತ್ರದ ಮೇಲೊಂದು ಗ್ರಂಥ ರಚನೆ­ಮಾಡು­ತ್ತೇನೆಂದು ಹೇಳುತ್ತಿದ್ದಿ. ಗುರುಗಳು ಕೂಡ ನಿನಗೆ ಆಶೀರ್ವಾದ ಮಾಡಿ­ದ್ದರಲ್ಲ. ಆ ಗ್ರಂಥ ರಚನೆಯಾಯಿತೇ?’ ಚೈತನ್ಯರು ಮುಗುಳ

ದಿನಕ್ಕೊಂದು ಕಥೆ. 556

Veeresh Arssikere: 🌻🌻 *ದಿನಕ್ಕೊಂದು ಕಥೆ*🌻🌻                                        💐 *ಅಪ್ರಾಮಾಣಿಕತೆಯ ಸದ್ದು*💐 ಒಂದು ಊರಿನಲ್ಲಿ ಒಬ್ಬ ಮುಗ್ಧ ಹಾಗೂ ಪ್ರಾಮಾಣಿಕನಾದ ಗೃಹಸ್ಥನಿದ್ದ.  ಆತನಿಗೆ ದೇವರ ಮೇಲೆ, ಸಾಧು ಸಂತರ ಮೇಲೆ ತುಂಬ ನಂಬಿಕೆ.  ಒಬ್ಬ ಕಟು ಹೃದಯದ ಕಪಟ ತಪಸ್ವಿ ಅವನ ಮನೆಗೆ ಬಂದ.  ಅವನ ಮಾತಿನ ಧಾಟಿ, ತೋರಿಕೆ­ಗಳಿಂದ ಈ ಗೃಹಸ್ಥ ತುಂಬ ಪ್ರಭಾವಿತ­ನಾದ.  ಹತ್ತಿರದ ಕಾಡಿನಲ್ಲಿ ಅವನಿ­ಗೊಂದು ಪರ್ಣಶಾಲೆಯನ್ನು ಕಟ್ಟಿ­ಕೊಟ್ಟು ಅವನ ಸಂತೋಷಕ್ಕಾಗಿ ಹಗಲು ರಾತ್ರಿ ದುಡಿದು ಸೇವೆ ಮಾಡುತ್ತಿದ್ದ.  ಸನ್ಯಾಸಿಯನ್ನು ಬಹುದೊಡ್ಡ ತಪಸ್ವಿ ಎಂದು ಭಾವಿಸಿ ಅವನಿಗೆ ಏನೂ ಕಡಿಮೆಯಾಗದಂತೆ ನೋಡಿಕೊಂಡ. ಈ ಸಮಯದಲ್ಲಿ ಊರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಯಿತು. ದಿನ ಬಿಟ್ಟು ದಿನ ಮನೆಮನೆಗಳಲ್ಲಿ ಕಳ್ಳತನದ ಸುದ್ದಿಗಳು ಬರತೊಡಗಿದವು.  ಗೃಹಸ್ಥ ತನ್ನ ಮನೆ­ಯಲ್ಲಿದ್ದ ಎಲ್ಲ ಒಡವೆಗಳನ್ನು, ಬಂಗಾ­ರದ ನಾಣ್ಯಗಳನ್ನು ಬಟ್ಟೆಯಲ್ಲಿ ಗಂಟುಕಟ್ಟಿಕೊಂಡು ತಪಸ್ವಿಯ ಪರ್ಣ­ಕುಟಿಗೆ ಹೋದ. ಸನ್ಯಾಸಿಗೆ ಸಮಸ್ಕಾರ ಮಾಡಿ ಹೇಳಿದ, ‘ಸ್ವಾಮಿ, ಊರಿನಲ್ಲಿ ಭದ್ರತೆ ಇಲ್ಲ. ಅದಕ್ಕೆ ನಿಮ್ಮ ಪರ್ಣ­ಕುಟಿಯಲ್ಲಿ ಇವುಗಳನ್ನು ಮುಚ್ಚಿಡಲೇ? ಇಲ್ಲಿ ಕಳ್ಳರು ಬರುವುದು ಸಾಧ್ಯವಿಲ್ಲ’. ಸನ್ಯಾಸಿ ಮೃದುವಾಗಿ ನಕ್ಕು ಹೇಳಿದ, ‘ಅಯ್ಯಾ, ನಮ್ಮಂತಹ ಸನ್ಯಾಸಿಗಳಿಗೆ ಬಂಗಾರವೂ ಅಷ್ಟೇ, ಮಣ್ಣೂ ಅಷ್ಟೇ.  ನೀನು ಅದನ್ನು ಎಲ್ಲಿ ಬೇಕಾದರೂ ಇಡು’. ಗೃಹಸ್ಥ ಪರ್ಣಕುಟಿಯ