Posts

Showing posts from January, 2020

ದಿನಕ್ಕೊಂದು ಕಥೆ 956

🌻ದಿನಕ್ಕೊಂದು ಕಥೆ 🌻 ಬೆರಗಿನ ಬೆಳಕು ಡಾ.ಗುರುರಾಜ ಕರ್ಜಗಿ ಸಂಗ್ರಹ : ಪ್ರಜಾವಾಣಿ ಪತ್ರಿಕೆ ಪರರ ಕೃಪೆ ಇಲ್ಲದ ಸಾಧನೆ    ಬೋಧಿಸತ್ವ ಒಂದು ಸ್ವರ್ಣಹಂಸೆಯಾಗಿ ಹುಟ್ಟಿದ್ದ. ಆತನಿಗೆ ತಮ್ಮನೊಬ್ಬನಿದ್ದ. ಇಬ್ಬರೂ ಯಾವಾಗಲೂ ಜೊತೆಯಾಗಿಯೇ ಇರುತ್ತಿದ್ದರು. ಅವರು ಬದುಕಿದ್ದು ಚಿತ್ರಕೂಟದ ಪರ್ವತ ಪ್ರದೇಶದಲ್ಲಿ. ಆದರೆ, ದಿನವೂ ಹಿಮಾಲಯದ ಪರ್ವತಗಳಿಗೆ ಹಾರಿ ಹೋಗಿ ಅಲ್ಲಿ ದೊರೆಯುವ ಅತ್ಯುತ್ತಮ ಕಾಳುಗಳನ್ನು ತಿಂದು ಬರುತ್ತಿದ್ದರು.    ಒಂದು ದಿನ ಹೀಗೆ ಕಾಳುಗಳನ್ನು ತಿಂದು ಹಾರಿಬರುವಾಗ ಮತ್ತೊಂದು ದಾರಿಯನ್ನು ಹಿಡಿದು ಬಂದರು. ದಾರಿಯಲ್ಲಿ ಒಂದು ಹೊಳೆ ಹೊಳೆವ ಪರ್ವತವನ್ನು ಕಂಡವು. ಕುತೂಹಲದಿಂದ ಆ ಪರ್ವತದ ಶಿಖರಗಳ ಮೇಲೆ ಇಳಿದು ನೋಡಿದಾಗ ಅವರಿಗೊಂದು ಆಶ್ಚರ್ಯ ಕಾದಿತ್ತು. ಅದೊಂದು ಕಂಚಿನ ಪರ್ವತ. ಅದರ ಹೆಸರು ನೆರು. ಈ ನೆರು ಪರ್ವತದ ಮೇಲೆ ವಾಸ ಮಾಡುತ್ತಿದ್ದ ಎಲ್ಲ ಪಕ್ಷಿ, ಪ್ರಾಣಿಗಳು ಬಂಗಾರದ ಬಣ್ಣದಾಗಿದ್ದವು. ಇದರ ವಿಷಯವಾಗಿ ವಿಚಾರಿಸಿದಾಗ ತಿಳಿದು ಬಂದದ್ದಿಷ್ಟು. ಇವೆಲ್ಲ ಸಾಮಾನ್ಯವಾದ ಪಶು-ಪಕ್ಷಿಗಳು. ಬೇರೆ ಪರ್ವತಗಳಲ್ಲಿದ್ದಾಗ ಅವು ತಮ್ಮ ತಮ್ಮ ನೈಸರ್ಗಿಕ ಬಣ್ಣಗಳಲ್ಲೇ ಇರುತ್ತವೆ. ಆದರೆ, ಈ ಕಂಚಿನ ಪರ್ವತದ ಮೇಲೆ ಬಂದೊಡನೆ ಅವು ಸ್ವರ್ಣದ ಬಣ್ಣವನ್ನು ತಳೆಯುತ್ತವೆ.    ಅಲ್ಲಿ ಹಾರಾಡುತ್ತಿದ್ದ ಗರುಡನನ್ನು ಈ ವಿಷಯದ ಬಗ್ಗೆ ಕೇಳಿದಾಗ ಅದು ಹೇಳಿತು, ’ಈ ಪರ್ವತಕ್ಕೆ ಬಂದೊಡನೆ ಎಲ್ಲರೂ ಸಮಾನರೇ ಆಗಿಬಿಡುತ್ತಾರೆ. ಇಲ್ಲಿ ಕಾಡು ಕಾಗೆ,

ದಿನಕ್ಕೊಂದು ಕಥೆ 955

🌻🌻 ದಿನಕ್ಕೊಂದು ಕಥೆ🌻🌻 💐*ಕೊಂಬೆಗೆ ಅಂಟಿ ಕುಳಿತ ಗರುಡ;*💐 ಒಬ್ಬ ರಾಜನಿಗೆ ಪರದೇಶದಲ್ಲಿದ್ದ ಅವನ ಸ್ನೇಹಿತನೊಬ್ಬ ಅತ್ಯಂತ  ಸುಂದರವಾದ ಎರಡು ಗರುಡ ಪಕ್ಷಿಗಳನ್ನು ಕಾಣಿಕೆಯಾಗಿ ಕಳುಹಿಸಿದ.  ಅವುಗಳಷ್ಟು ಸುಂದರವಾದ ಪಕ್ಷಿಗಳನ್ನು ರಾಜ ನೋಡಿರಲೇ ಇಲ್ಲ.  ಅವುಗಳಿಗೆ ಚೆನ್ನಾಗಿ ತರಬೇತಿ ದೊರಕಲೆಂದು ತಮ್ಮ ರಾಜ್ಯದಲ್ಲಿದ್ದ ಶ್ರೇಷ್ಠ ಪಕ್ಷಿ ತರಬೇತಿದಾರನಿಗೆ ಅವನ್ನು ಒಪ್ಪಿಸಿದ.  ಪ್ರತಿದಿನ ಅವುಗಳ ವಿವರ ತನಗೆ ದೊರಕುವಂತೆ ಆಜ್ಞೆ ನೀಡಿದ.  ತರಬೇತಿದಾರ ತನ್ನ ತರಬೇತಿಯನ್ನು ಪ್ರಾರಂಭಿಸಿದ. ವಾರ ಕಳೆಯಿತು, ತಿಂಗಳು ಕಳೆಯಿತು, ತರಬೇತಿದಾರ ದಿನವೂ ವರದಿ ಒಪ್ಪಿಸುತ್ತಿದ್ದ. ಒಂದು ಗರುಡಪಕ್ಷಿ ಗಂಭೀರವಾಗಿ, ರಾಜಯೋಗ್ಯವಾದ ಶೈಲಿಯಿಂದ ಹಾರುತ್ತ ಇಡೀ ಆಕಾಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.  ಅದು ರೆಕ್ಕೆಯನ್ನು ಬಿಚ್ಚಿ ಆಕಾಶದಲ್ಲಿ ಹಾರಾಡಿದ್ದನ್ನು ನೋಡಿದ ಯಾರಿಗಾದರೂ ಪ್ರೀತಿ, ಅಭಿಮಾನ ಉಕ್ಕಿ ಬರುತ್ತಿತ್ತು. ಆದರೆ ಎರಡನೆಯ ಪಕ್ಷಿಯ ಬಗ್ಗೆ ವರದಿ ನಿರಾಶಾದಾಯಕವಾಗಿತ್ತು ಅದು ಹಾರಲು ಪ್ರಯತ್ನಿಸಲೇ ಇಲ್ಲ. ಏನೆಷ್ಟು ಪುಸಲಾಯಿಸಿದರೂ, ಆಸೆ ತೋರಿದರೂ, ಹೆದರಿಸಿದರೂ, ಅದು ತಾನು ಕುಳಿತ ಮರದ ಕೊಂಬೆಯನ್ನು ಬಿಟ್ಟು ಸರಿಯುತ್ತಲೇ ಇಲ್ಲ.  ರಾಜ ತನ್ನ ಅರಮನೆಯ ಕಿಟಕಿಯಿಂದ ಅದನ್ನು ಗಮನಿಸುತ್ತಲೇ ಇದ್ದ. ಅವನಿಗೆ ಈ ಗರುಡ ಪಕ್ಷಿಯ ಬಗ್ಗೆ ಚಿಂತೆಯಾಗಿ ಮತ್ತೊಬ್ಬ ತರಬೇತಿದಾರನನ್ನು ನಿಯಮಿಸಿದ.  ಆದರೆ ಪರಿಣಾಮ ಒಂದೇ - ಗರುಡ ಪಕ್ಷಿ ಕೊಂಬ