Posts

Showing posts from March, 2024

ದಿನಕ್ಕೊಂದು ಕಥೆ 1107

*🌻ದಿನಕ್ಕೊಂದು ಕಥೆ🌻* *ಹೂವು ಕಲಿಸಿದ ಪಾಠ* ಒಬ್ಬ ಹುಡುಗನಿಗೆ ಸ್ವಲ್ಪ ದುಡುಕು  ಸ್ವಭಾವ. ತನಗೆ ಯಾರಾದರೂ ತೊಂದರೆ ಕೊಟ್ಟರೆ ಅವರ ಮೇಲೆ ಸೇಡು ತೀರಿಸಿಕೊಳ್ಳದೇ ಬಿಡುವುದೇ ಇಲ್ಲ ಎಂಬ ಮನೋಭಾವದವನು. ಅವನಪ್ಪನಿಗೆ ಮಗನ  ಈ ಸ್ವಭಾವ ‌ ಇಷ್ಟವಾಗುತ್ತಿರಲಿಲ್ಲ. ಮಗನಿಗೆ ತೊಂದರೆ ಆಗಿದ್ದು ನಿಜವೇ.ಅವನ ಮನಸ್ಸಿಗೆ ನೋವಾಗಿದ್ದು ನಿಜವೇ. ಹಾಗೆಂದ ಮಾತ್ರಕ್ಕೆ , ಹೋಗು  ನೀನೂ ಅವರಿಗೆ ತೊಂದರೆ ಕೊಡು ಎಂದು ಹೇಳುವುದು, ಅಪ್ಪನ ಜವಾಬ್ದಾರಿಯಲ್ಲ. ಆದರೆ ಹೀಗೆ ಮಾಡಬೇಡ ಎಂದು ಮಗನಿಗೆ ಹೇಳಿದರೆ, ಅವನಿಗೆ ಇನ್ನಷ್ಟು ಕೋಪ ಜಾಸ್ತಿಯಾಗುತ್ತದೆ. ತನ್ನ ಅಪ್ಪ ಕೂಡ ತನ್ನನ್ನು ನಂಬುವುದಿಲ್ಲವೆಂದು ಅವನಿಗೆ ಬೇಸರವಾಗುತ್ತದೆ. ಆದರೆ ಪ್ರಪಂಚದಲ್ಲಿ, ನಾವು ಹೇಗೆ ಬದುಕಬೇಕು ಎಂಬುದನ್ನು ಮಗನಿಗೆ ತಿಳಿಸುವುದು ತಂದೆಯಾದವನ  ಕರ್ತವ್ಯ, ಎಂದುಕೊಂಡಿದ್ದ ಆತ.       ಪ್ರತಿದಿನ ಮಗನಿಗೆ,  ತನಗೆ ತೊಂದರೆ ಕೊಟ್ಟವರ ಮೇಲೆ ,ಹೇಗೆ ಸೇಡುತೀರಿಸಿಕೊಳ್ಳಬೇಕೆಂಬ ಯೋಚನೆ. ಅಪ್ಪನಿಗೆ ಮಗನನ್ನು ಇದರಿಂದ ಹೇಗೆ ಹೊರ ತರುವುದು, ಎಂಬ ಯೋಚನೆ.ಅವನ ದುಡುಕು ಸ್ವಭಾವದಿಂದ ಯಾರಿಗೂ ತೊಂದರೆಯಾಗದಂತೆ ಅವನನ್ನು ತಡೆಯುವುದು ಹೇಗೆ ಎಂಬ ಚಿಂತೆ ಅಪ್ಪನದು. ಇದು  ಅಪ್ಪನ ಕರ್ತವ್ಯ ಕೂಡ ಎಂದುಕೊಂಡಿದ್ದ ಆತ . ಹೀಗೆ ಅಪ್ಪ ಮಗ ಇಬ್ಬರೂ ತಮ್ಮ ತಮ್ಮ ಯೋಚನೆಯಲ್ಲಿ ಇದ್ದರು.        ಒಂದು ದಿನ ದೇವರ ಪೂಜೆಗಾಗಿ ಬುಟ್ಟಿಯಲ್ಲಿ ಇಟ್ಟ ವಿವಿಧ ಬಣ್ಣ ಬಣ್ಣದ ಸುವಾಸನೆಯುಕ್ತ ಹೂಗಳು, ಮನೆಯ ತುಂಬೆಲ್

ದಿನಕ್ಕೊಂದು ಕಥೆ 1106

*🌻ದಿನಕ್ಕೊಂದು ಕಥೆ🌻* *ಸಮಸ್ತ ಸೃಷ್ಟಿಯ ಪಾಲಕ ಭಗವಂತ* ಮಹಾರಾಷ್ಟ್ರದ ಸಮರ್ಥ ರಾಮದಾಸ ಸ್ವಾಮಿಗಳು ಒಬ್ಬ ಮಹಾನ ಸಂತರಾಗಿದ್ದರು. ಅವರು ಹದಿನೇಳನೇ ಶತಮಾನದಲ್ಲಿ ಮಹಾರಾಷ್ಟ್ರದ ಮಹಾನ ದೈವಭಕ್ತ ರಾಜನಾಗಿದ್ದ ಶಿವಾಜಿ ಮಹಾರಾಜರ ಗುರುಗಳಾಗಿದ್ದರು. ಒಂದು ದಿನ ಶಿವಾಜಿ ಮಹಾರಾಜರು ಮತ್ತು ಅವರ ಗುರುಗಳು ಅರಮನೆಯ ಒಳಗೆ ಕಟ್ಟಡ ಕಾಮಗಾರಿಯನ್ನು ವೀಕ್ಷಿಸುತ್ತಿದ್ದರು, ಆಗ ರಾಜನು ’ನಿಜವಾಗಿಯೂ ನಾನೊಬ್ಬ ಮಹಾನ ರಾಜನಾಗಿದ್ದೇನೆ, ನಾನು ನನ್ನ ಎಲ್ಲ ವಿಷಯಗಳಲ್ಲಿಯೂ ಎಷ್ಟೊಂದು ಕಾಳಜಿ ತೆಗೆದುಕೊಳ್ಳುತ್ತೇನೆ!’ ಎಂದು ವಿಚಾರ ಮಾಡುತ್ತಿದ್ದನು. ಗುರುಗಳು ತಮ್ಮ ದಿವ್ಯ ಜ್ಞಾನದಿಂದ ಶಿಷ್ಯನ ಮನಸ್ಸಿನಲ್ಲಿ ಬಂದ ವಿಚಾರವನ್ನು ತಿಳಿದುಕೊಂಡರು ಮತ್ತು ಕೂಡಲೇ ಅವನ ವಿಚಾರವನ್ನು ಸರಿಪಡಿಸಬೇಕೆಂದು ತೀರ್ಮಾನಿಸಿದರು. ಸಮೀಪದಲ್ಲಿಯೇ ದೊಡ್ಡದಾದ ಬಂಡೆಯೊಂದು ಇತ್ತು. ರಾಮದಾಸ ಸ್ವಾಮಿಗಳು ಶಿವಾಜಿ ಮಹಾರಾಜರ ಕೆಲವು ಸೈನಿಕರನ್ನು ಕರೆದು ಆ ಬಂಡೆಯನ್ನು ಎರಡು ತುಂಡಾಗುವಂತೆ ಒಡೆಯಲು ಹೇಳಿದರು. ಅವರ ಮಾತಿನಂತೆ ಸೈನಿಕರು ಬಂಡೆ ಕಲ್ಲನ್ನು ಒಡೆದಾಗ, ಅಲ್ಲಿ ಉಪಸ್ಥಿತರಿದ್ದ ಎಲ್ಲರೂ, ನಂಬಲು ಅಸಾಧ್ಯವಾದ ದೃಷ್ಯವೊಂದನ್ನು ನೋಡಿದರು. ಆ ಕಲ್ಲುಬಂಡೆಯಲ್ಲಿ ಒಂದು ನೀರು ತುಂಬಿಕೊಂಡಿದ್ದ ಪೊಳ್ಳುಭಾಗವೊಂದಿತ್ತು, ಅದರಲ್ಲಿ ಒಂದು ಸಣ್ಣ ಕಪ್ಪೆಯಿತ್ತು. ಬಂಡೆಯು ಸೀಳಿ ಎರಡು ತುಂಡಾದ ಕೂಡಲೇ ಅದರಲ್ಲಿ ಬಂಧಿಸಲ್ಪಟ್ಟಿದ್ದ ಕಪ್ಪೆಯು ಸ್ವತಂತ್ರಗೊಂಡು ಹೊರಗೆ ಜಿಗಿಯಿತು. ಈಗ ಸಮರ

ದಿನಕ್ಕೊಂದು ಕಥೆ 1105

*🌻ದಿನಕ್ಕೊಂದು ಕಥೆ🌻* ಸಂತ ಶ್ರೀ ಗೋರಾ ಕುಂಭಾರ ತೆರೆಡೊಕಿ ಊರಿನಲ್ಲಿ ಗೋರಾ ಕುಂಬಾರನೆಂಬ ವಿಠಲನ ಭಕ್ತನಿದ್ದನು. ಕುಂಬಾರನು ಕೆಲಸಮಾಡುತ್ತಿರುವಾಗಲೂ ನಿರಂತರವಾಗಿ ಪಾಂಡುರಂಗನ ಭಜನೆ ಮಾಡುತ್ತಿದ್ದನು. ಯಾವಾಗಲು ಅವನು ಪಾಂಡುರಂಗನ ನಾಮಜಪದಲ್ಲಿ ಮಗ್ನನಾಗಿರುತ್ತಿದ್ದನು. ಒಂದು ಸಲ ಅವನ ಪತ್ನಿ ಅವರ ಒಂದೇ ಮಗನನ್ನು ಅಂಗಳದಲ್ಲಿ ಬಿಟ್ಟು ನೀರು ತರಲು ಹೋದಳು. ಆ ಸಮಯದಲ್ಲಿ ಗೋರಾಕುಂಬಾರನು ಗಡುಗೆಯನ್ನು ಮಾಡಲು ಅವಶ್ಯವಾಗಿರುವ ಮಣ್ಣನ್ನು ಕಾಲಿನಿಂದ ತುಳಿಯುತ್ತಾ ಪಾಂಡುರಂಗನ ಭಜನೆ ಮಾಡುತ್ತಿದ್ದನು. ಅದರಲ್ಲಿ ಅವನು ಬಹಳ ತಲ್ಲೀನನಾಗಿದ್ದನು. ಪಕ್ಕದಲ್ಲೇ ಆಡುತ್ತಿರುವ ಚಿಕ್ಕ ಮಗು ಅಳುತ್ತ ಬಂದು ಆ ಮಣ್ಣಿನಲ್ಲಿ ಬಿದ್ದು ಬಿಟ್ಟಿತು. ಗೋರಾ ಕುಂಬಾರನು ಮಣ್ಣನ್ನು ಮೇಲೆ ಕೆಳಗೆ ಮಾಡಿ ತುಳಿಯುತ್ತಿದ್ದನು. ಮಣ್ಣಿನ ಜೊತೆಗೆ ತನ್ನ ಮಗುವನ್ನೂ ತುಳಿದು ಬಿಟ್ಟನು. ಪಾಂಡುರಂಗನ ಭಜನೆಯಲ್ಲಿ ಮಗ್ನನಾಗಿರುವದರಿಂದ ಮಗುವಿನ ಅಳುವು ಅವನಿಗೆ ಕೇಳಿಸಲೇ ಇಲ್ಲ. ನೀರು ತಂದ ಮೇಲೆ ಅವನ ಪತ್ನಿ ಮಗುವನ್ನು ಹುಡುಕುತ್ತಿದ್ದಳು. ಬಾಲಕ ಸಿಗದ ಕಾರಣ ಅವಳು ಗೋರಕುಂಬಾರನ ಬಳಿ ಹೋದಳು. ಅಷ್ಟರಲ್ಲಿ ಅವಳ ದೃಷ್ಟಿ ಮಣ್ಣಿನ ಕಿಚಡಿಯಲ್ಲಿ ಹೋಯಿತು, ಕಿಚಡಿಯಲ್ಲಿ ಇರುವ ಕೆಂಪು ರಕ್ತವನ್ನು ನೋಡಿ, ಮಗು ಕೂಡ ಆ ಮಣ್ಣಿನಲ್ಲಿ ತುಳಿಯಲ್ಪಟ್ಟಿದೆ ಅಂತ ತಿಳಿಯಿತು. ಅವಳು ಜೋರಾಗಿ ಚೀರಿದಳು ಮತ್ತು ಗಂಡನ ಮೇಲೆ ಸಿಟ್ಟು ಮಾಡಿದಳು. ಅರಿವಿಲ್ಲದೆ ಮಾಡಿರುವ ಈ ಕೃತ್ಯಕ್ಕಾಗಿ ಗೋರಾ ಕುಂ

ದಿನಕ್ಕೊಂದು ಕಥೆ 1104

*🌻ದಿನಕ್ಕೊಂದು ಕಥೆ🌻*            *ಅಪ್ಪ* *ಲೇಖಕರು: ವತ್ಸಲಾ ಶ್ರೀಶ*   ಅಪ್ಪ ಗೋಡೆ ಹಿಡಿದುಕೊಂಡು ಹೋಗುತ್ತಿದ್ದರು. ಅಪ್ಪ ಕೈಯಿಟ್ಟಲ್ಲೆಲ್ಲ ಗೋಡೆಯ ಬಣ್ಣ ಸ್ವಲ್ಪ ಸ್ವಲ್ಪವೇ ಮಸುಕಾಗುತ್ತಿತ್ತು.ಇದನ್ನು ಕಂಡು ಹೆಂಡತಿಯ ಮುಖಭಾವ ಬದಲಾಗುತ್ತಿದ್ದುದನ್ನು ನಾನು ಗಮನಿಸಿದೆ. ಅದೊಂದು ದಿನ ಅಪ್ಪ ಎಂದಿನಂತೆಯೇ ಗೋಡೆಯ ಮೇಲೆ ಕೈ ಇಟ್ಟಿದ್ದರು. ಮಂಡಿ ನೋವಿಗೆ ಎಣ್ಣೆ ಹಚ್ಚಿದ್ದರೋ ಏನೋ ಕೈ ಗುರುತು ಗೋಡೆ ಮೇಲೆ ಗಾಢವಾಗಿ ಅಂಟಿಕೊಂಡಿತು. ಹೆಂಡತಿ ಒಳಗೆ ಬಂದು ನನ್ನೊಡನೆ ರೇಗಿಯೇ ಬಿಟ್ಟಳು. ನನಗೂ ಅಂದು ಏನಾಯಿತೋ ಏನೋ. ಅಪ್ಪನ ರೂಮಿಗೆ ಹೋದೆ..ಅಪ್ಪಾ  ನಡೆಯುವಾಗ ಗೋಡೆ ಹಿಡಿಯದೆ ನಡೆಯಲು ಪ್ರಯತ್ನಿಸಬಾರದೇ ಎಂದೆ..ಧ್ವನಿಯಲ್ಲಿದ್ದ ಅಸಹನೆ ಅತಿಯಾಯಿತೇನೋ ಅನಿಸಿತು.ಅಪ್ಪ ನನ್ನೆಡೆಗೆ ನೋಡಿದರು.  80 ವರ್ಷದ ಅಪ್ಪನ ಮುಖ ಚಿಕ್ಕ ಮಗು ತಪ್ಪು ಮಾಡಿದಂತಿತ್ತು.ಅಪ್ಪ ಮೌನವಾಗಿ ತಲೆತಗ್ಗಿಸಿದರು.…ಛೇ ನಾನು ಹಾಗನ್ನಬಾರದಿತ್ತು ಎಂದೆನಿಸಿತು…ಸ್ವಾಭಿಮಾನಿಯಾಗಿದ್ದ ಅಪ್ಪ  ಮುಂದೆ ಮೌನಿಯಾದರು. ಆ ಮೇಲೆ ಗೋಡೆ ಹಿಡಿದು ನಡೆಯಲಿಲ್ಲ..ಅದೊಂದು  ದಿನ ಅಪ್ಪ ಆಯತಪ್ಪಿ ಬಿದ್ದು ಹಾಸಿಗೆ ಹಿಡಿದರು. ಮತ್ತೆರಡು ದಿನದಲ್ಲಿ ಇಹಲೋಕವನ್ನು ತ್ಯಜಿಸಿದರು. ಗೋಡೆಯಲ್ಲಿ ಮೂಡಿದ್ದ ಅಪ್ಪನ ಕೈ ಗುರುತು ಕಾಣುವಾಗ ಎದೆಯೊಳಗೆ ಏನೋ ಸಿಕ್ಕಿದಂತಾಗುತ್ತಿತ್ತು.      ದಿನಗಳು ಉರುಳುತ್ತಿತ್ತು. ಅದೊಂದು ದಿನ ಹೆಂಡತಿ ಎಲ್ಲಾ ಗೋಡೆಗಳಿಗೆ ಬಣ್ಣ ಹೊಡೆಯಬೇಕೆಂದಳು..ಬಣ್ಣ ಹೊಡೆಯುವ

ದಿನಕ್ಕೊಂದು ಕಥೆ 1103

*🌻ದಿನಕ್ಕೊಂದು ಕಥೆ🌻*  *ಒಬ್ಬರಿಗೊಬ್ಬರ ಅವಹೇಳನ  ಚಪ್ಪಡಿ ಎಳೆದುಕೊಂಡಂತೆ* ಅದೊಂದು  ದೊಡ್ಡ ಗ್ರಾಮ. ಅಲ್ಲಿ ಅನೇಕಾನೇಕ  ವಿದ್ವಾಂಸರಗಳು, ಪಂಡಿತೋತ್ತಮರಿದ್ದರು. ಆಸುಪಾಸಿನ ಊರವರಿಗೆಲ್ಲ  ಪಂಡಿತೋತ್ತಮರ ಊರು  ಎಂದೇ  ಪರಿಚಿತವಾಗಿತ್ತು. ಆ ಊರಿನ ಹತ್ತಿರ ಭಾರಿ  ಶ್ರೀಮಂತ  ಸೇಟು ಒಬ್ಬನಿದ್ದನು.  ಬುದ್ಧಿವಂತ, ಹಾಗೂ ಧರ್ಮಿಷ್ಠನಾಗಿದ್ದನು. ಒಮ್ಮೆ ಅದೇ ಊರಿನ  ಇಬ್ಬರು ವಿದ್ವಾಂಸರನ್ನು ತನ್ನ ಮನೆಗೆ  ಆಹ್ವಾನಿಸಿದನು. ವಿದ್ವಾಂಸರಿಬ್ಬರು ಶ್ರೀಮಂತ ಸೇಟು ಬೇಕಾದಷ್ಟು ಕೊಡುತ್ತಾನೆಂಬ  ಆಸೆಯಿಂದ ಅವನ ಮನೆಗೆ ಬಂದರು. ವಿದ್ವಾಂಸರು ಮನೆಗೆ ಬರುತ್ತಿದ್ದಂತೆ ಸೇಟು ಆದರದಿಂದ ಸ್ವಾಗತಿಸಿ, ಪ್ರಯಾಣ ಸುಖಕರವಾಗಿತ್ತೆ  ಎಂದು ವಿಚಾರಿಸಿದನು. ಒಬ್ಬ ಪಂಡಿತ ತುಂಬಾ ಆರಾಮವಾಗಿ ಬಂದೆವು,  ವಿಚಾರಿಸಿದ ನಿಮ್ಮ  ಔದಾರ್ಯ ಬಹಳ ದೊಡ್ಡತನ ಎಂದನು.  ಸೇಟು ಇಬ್ಬರಿಗೂ ಬಾಯಾರಿಕೆಗೆ  ಆಸರೆ  ಕೊಟ್ಟು, ನಂತರ ಬಿಸಿಲಲ್ಲಿ ಬಂದಿದ್ದೀರಿ  ಸ್ನಾನ ಮಾಡಿ.  ಭೋಜನದ ವ್ಯವಸ್ಥೆ  ಮಾಡಿಸುತ್ತೇನೆ  ಎಂದನು. ಒಬ್ಬ ಪಂಡಿತ ಎದ್ದು  ಸ್ನಾನಕ್ಕೆ ಹೋದನು, ಇನ್ನೊಬ್ಬ ಪಂಡಿತ ಅವನು ಬಂದ ನಂತರ ಹೋಗಲು ಅಲ್ಲೇ ಕುಳಿತಿದ್ದನು.  ಆ ಸಮಯಕ್ಕೆ ಅಲ್ಲಿಗೆ ಬಂದ ಸೇಟು ಊರಿನ ಕಡೆಯೆಲ್ಲಾ  ಚೆನ್ನಾಗಿದೆಯಾ ಎಂದು ವಿಚಾರಿಸುತ್ತಾ ,ನಿಮ್ಮ ಜೊತೆ  ಬಂದಿರುವ ಪಂಡಿತರು  ಬಹು ದೊಡ್ಡ ವಿದ್ವಾಂಸರೆಂದು ಸುತ್ತಮುತ್ತ ಹಳ್ಳಿಯವರು ಹೇಳುವುದನ್ನು ಕೇಳಿದ್ದೇನೆ  ನನಗೆ ತುಂಬಾ ಸಂತೋಷವಾಯಿತು ಎಂದನ

ದಿನಕ್ಕೊಂದು ಕಥೆ 1102

*🌻ದಿನಕ್ಕೊಂದು ಕಥೆ🌻* *ಆತ್ಮ ಜ್ಞಾನದ ಅನುಭೂತಿ* ಇದೊಂದು ಜೈನ ಶಾಸ್ತ್ರದಲ್ಲಿನ ಪ್ರಾಚೀನ ಕಥೆ.   ಮಿಥಿಲಾದ ಮಹಾರಾಜ ನೇಮಿಯು ಯಾವತ್ತೂ  ಯಾವ ಶಾಸ್ತ್ರಗಳನ್ನು ಓದಲಿಲ್ಲ. ಎಂದೂ ಅವನಲ್ಲಿ ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಇರಲಿಲ್ಲ. ಅದೊಂದು ಕೊರತೆಯೆಂದು ಕೂಡ ಅವನಿಗೆ ಅನಿಸಿರಲೇ ಇಲ್ಲ.    ಅವನು ಸ್ವಲ್ಪ  ಮಧ್ಯವಯಸ್ಕನಾಗುತ್ತಾ ‌ಬಂದ. ಒಂದು ಸಲ ಅವನಿಗೆ ಜೋರಾಗಿ ಜ್ವರ ಬಂತು. ಭಯಂಕರ ಜ್ವರದ ಯಾತನೆಯಲ್ಲಿ ನರಳುತ್ತಾ ಮಲಗಿದ್ದನು. ಅವನ ರಾಣಿಯರು  ಜ್ವರದ ತಾಪದಿಂದ ಅವನ ಶರೀರವನ್ನು ತಂಪಾಗಿಸಲಿಕ್ಕಾಗಿ, ಗಂಧ ಮತ್ತು ಕೇಸರಿಯ ಲೇಪ ಮಾಡ ತೊಡಗಿದರು. ರಾಣಿಯರ ಕೈಯಲ್ಲಿ ಬಂಗಾರದ ಬಳೆಗಳಿದ್ದವು. ಬಳೆಗಳಲ್ಲಿ ಮುತ್ತು ರತ್ನಗಳನ್ನು ಅಂಟಿಸಲಾಗಿತ್ತು. ಇವನಿಗೆ ಗಂಧ  ಲೇಪನ ಮಾಡುವ ಸಮಯದಲ್ಲಿ ಅವರ ಬಳೆಗಳು ಬಹಳವಾಗಿ ಸದ್ದು ಮಾಡುತ್ತಿದ್ದವು. ರಾಜನಿಗೆ ಆ ಬಳೆಗಳ ಸದ್ದಿನಿಂದ ವಿಪರೀತ ಕಿರಿ ಕಿರಿ ಯಾಗುತ್ತಿತ್ತು. ತೆಗೆದುಹಾಕಿ ಈ ಬಳೆಗಳನ್ನು, ನನಗೆ ಇವುಗಳ ಶಬ್ದವನ್ನು ತಡೆದುಕೊಳ್ಳಲಾಗುತ್ತಿಲ್ಲ ಎಂದು ಕಿರುಚಿದ.      ‌ ಆ  ರಾಣಿಯರು, ಮಂಗಳಸೂತ್ರದ ಕಲ್ಪನೆಯಿಂದ ಬಳೆಯಿಲ್ಲದೆ ಬರೀ ಕೈನಲ್ಲಿ ಇರಬಾರದು ಎಂದುಕೊಂಡು, ಕೈನಲ್ಲಿ ಒಂದೊಂದು ಬಳೆಗಳನ್ನು ಇಟ್ಟುಕೊಂಡು ಉಳಿದಿದ್ದನ್ನು ತೆಗೆದು ಇಟ್ಟರು. ಬಳೆಯ ಸದ್ದೇನೊ ನಿಂತಿತು,  ಶ್ರೀಗಂಧದ ಲೇಪನ ನಡೆಯುತ್ತಿತ್ತು.   ‌ ಈ ಸಮಯದಲ್ಲಿ ನೇಮಿರಾಜನ ಒಳಗೆ ಒಂದು ಮಹಾ ಕ್ರಾಂತಿ ಘಟಿಸಿಬಿಟ್ಟಿತು. ಹತ್ತು ಬಳೆಗ