Posts

Showing posts from March, 2020

ದಿನಕ್ಕೊಂದು ಕಥೆ 977

ದಿನಕ್ಕೊಂದು ಕಥೆ ಮೂರ್ತಿ ಚಿಕ್ಕದಾದರು  ಕೀರ್ತಿ ದೊಡ್ಡದು..!  ಈ ಮಾತು ಯಾಕೆ ಬಂತು ಗೊತ್ತಾ.. ಇವಾಗೆಲ್ಲಾ ಡಬಲ್ ಮೀನಿಂಗ್ ಗೆ ಈ ಮಾತನ್ನು ಬಳಸುತ್ತಾರೆ..  ನೆನಪಿಡಿ..  ಈ ಮಾತು ತುಂಬ ಅರ್ಥ ಗರ್ಭಿತವಾಗಿದೆ.. ಓದಿ.. ಹೀಗೆ ಒಂದು ಸಂದರ್ಭದಲ್ಲಿ ಕೈಯಲ್ಲಿನ ಬೆರಳುಗಳು.. ಪರಸ್ಪರ ಮಾತಾಡುತ್ತಿರಬೇಕಾದರೆ.. ನಮ್ಮಲ್ಲಿ ಯಾರು ಶ್ರೇಷ್ಠ ಎಂಬ ಮಾತು ಹಾದು ಹೋಯಿತು.. ಎಲ್ಲಾ ಬೆರಳುಗಳು ನಾವು ನಾವು ಎಂದು ಚೀರ ತೊಡಗಿದವು.. ಆಗ ಯಾರ್ಯಾರು ತಾವು ಹೇಗೆ ಯಾವುದರಲ್ಲಿ ಶ್ರೇಷ್ಠವೆಂದು ಹೇಳಿದರೆ ತೀರ್ಮಾನಿಸಲು ಸೂಕ್ತವಾಗುತ್ತದೆ ಎಂದು ಆಲೋಚಿಸಿ.. ಒಂದೋಂದಾಗೇ ತಮ್ಮ ಶ್ರೇಷ್ಠತೆಯನ್ನು ಹೇಳತೊಡಗಿದವು.. ಮೊದಲು ಹೆಬ್ಬೆರೆಳು ಹೇಳಿತು.. ನಾನು ನಿಮಗಿಂತಲೂ ಗಾತ್ರದಲ್ಲಿ.. ಉಪಮೆಯಲ್ಲಿ ( ಹೋಲಿಕೆ) ದೊಡ್ಡವ... ನಿಮ್ಮೆಲ್ಲರಿಗೂ ಹಿರಿಯಣ್ಣ..  ತಂದೆ ತಾಯಿಗೆ ನನ್ನನ್ನು ಹೋಲಿಸಲಾಗುತ್ತದೆ.. ಏಕಲವ್ಯ. ಅರ್ಜುನರಾದಿ ದ್ರೋಣರು ಕೂಡ ನನ್ನಿಂದಲೇ ಪ್ರಸಿದ್ಧರಾಗಿದ್ದು ಗೊತ್ತಾ ಎಂದು ಬೀಗಿತು.. ಎಲ್ಲಾ ಬೆರಳುಗಳು ಹೌದೆಂದೆವು.. ನಂತರ ತೋರು ಬೆರಳು ಹೇಳಿತು.. ನಾನು ತೋರು ಬೆರಳು.. ನಾನು ಪ್ರತಿಯೊಬ್ಬರ ಅಹಂ ನ ಸಂಕೇತ.. ನಾನು ನನ್ನದು ನನಗೆ ನಾನೇ ಎಂಬ ಸ್ವಂತಿಕೆಯ ಪ್ರತೀಕ.. ನಾನು ಪ್ರತಿಯೊಬ್ಬರ ಸೊಕ್ಕು ಧಿಮಾಕು ಜಂಭದ ಪ್ರತೀಕ ವೆಂದು ಜಂಭಪಟ್ಟಿತು.. ಎಲ್ಲಾ ಬೆರಳುಗಳು ತಲೆಯಾಡಿಸಿದವು.. ನಂತರ ನಡುಬೆರಳು ಎದ್ದು ನಿಂತಿತು.. ನಾನು ನಿಮ್ಮಲ್ಲಗಿರಿಂತ ಎತ್ತರ ಉ

ದಿನಕ್ಕೊಂದು ಕಥೆ 976

*🌻ದಿನಕ್ಕೊಂದು ಕಥೆ🌻* *ಹಣ ಏನೇನೆಲ್ಲಾ ಮಾಡಿಸುತ್ತದೆ.. ಅಲ್ಲವಾ..?*  ಒಂದೂರಲ್ಲಿ ಮಾಂಸದ ವ್ಯಾಪಾರಿಯಿದ್ದ..ದಿನವೂ ಕುರಿಯನ್ನೋ ಕೋಳಿಯನ್ನೋ ಕೊಯ್ದು.. ಮಾರಾಟ ಮಾಡಿ ಜೀವನ ಮಾಡುತ್ತಿದ್ದ.. ಆ ಮಾಂಸ ವ್ಯಾಪಾರಿಯ ಒಂದೇ ಒಂದು ವೀಕ್ನೆಸ್ ಎಂದರೆ ಕೋಪ.. ! ಊರವರ ಎಲ್ಲರೊಂದಿಗೂ ಕೋಪ ಮಾಡಿಕೊಳ್ಳುತ್ತಿದ್ದ.. ಕಟ್ಟಿಕೊಂಡ ಹೆಂಡತಿಯನ್ನು ಕಣ್ಣಳತೆಯಲ್ಲೇ ಇಟ್ಟಿದ್ದ..  ಇವನ ಈ ವರ್ತನೆಯಿಂದ ಜನ ಇವನ ಜೋಡಿ ಅಷ್ಟಕಷ್ಟೆ ಇದ್ದರು.. ಅದೇ ಊರಲ್ಲಿ  ಇನ್ನೊಬ್ಬನಿದ್ದ.. ಕಾಳುಗಳ ವ್ಯಾಪಾರಿ.. ಭಲೇ ಮಾತುಗಾರ.. ತನ್ನ ಬಣ್ಣ ಬಣ್ಣದ ಮಾತುಗಳಿಂದ ಮುಂದಿರುವವರನ್ನು ಹೌದೆಂದೂ ತಲೆಯಾಡಿಸುವಂತೆ ಮಾಡುವ ಚಾತುರ್ಯ್ಯ ಉಳ್ಳವನು.. ಆವತ್ತು ಎಂದಿನಂತೆ ಭಾನುವಾರ.. ಮಾಂಸದ ವ್ಯಾಪಾರಿ ತುಸು ಗಡಿಬಿಡಿಯಲ್ಲಿದ್ದ.. ಆ ದಿನ ವ್ಯಾಪಾರ ಜೋರಿತ್ತು.. ಮಧ್ಯಾಹ್ನವಾದ್ದರಿಂದ ಆಳುಗಳಿಬ್ಬರೂ ಊಟಕ್ಕೆಂದು ಹೋಗಿದ್ದರು.. ಇತ್ತ ಮಾಂಸದ ವ್ಯಾಪಾರಿ ಅಂಗಡಿಯನ್ನು ಸ್ವಚ್ಛಗೊಳಿಸಿ.. ಒಂದು ವಾರದಿಂದ ಬಾಕಿ ಇರುವ ಹಣದ ಬಟವಾಡೆ ಮಾಡುವ ಸಲುವಾಗಿ ಹಣದ ಥೈಲಿಯನ್ನು ( ಥೈಲಿ -ಚೀಲ) ಕೈಯಲ್ಲಿಡಿದುಕೊಂಡಿದ್ದ.. ವಾರದಿಂದ ಕುರಿ ಕೋಳಿ ಸಾಲದಿಂದ ತಂದವರಿಗೆ.. ಆಳುಗಳಿಗೆ ದುಡ್ಡನ್ನು ಕೊಟ್ಟರೆ ತಲೆ ಬಿಸಿ ಮುಗಿಯುತೆಂದು.. ಹುಫ್ ಎಂದು ಉಸಿರೆಳೆದುಕೊಂಡ.. ಅದೇ ಹೊತ್ತಿಗೆ ಅವನ ಹತ್ತಿರವೇ ಕಾಳುಗಳ ವ್ಯಾಪಾರಿ ಬಂದ.. ಮಾಂಸದ ವ್ಯಾಪಾರಿ ನಗುತ್ತಾ ಬಾ ಎಂದು ಕರೆದ.. ಇವನು ನಗುತ್ತಾ ಅವನ ಹತ್ತಿರವೇ

ದಿನಕ್ಕೊಂದು ಕಥೆ 975

*🌻ದಿನಕ್ಕೊಂದು ಕಥೆ🌻* *ಈ ಕಂಪನಿಯ ಯಶಸ್ಸಿನಿಂದ ಕಲಿಯುವುದು ಬೇಕಾದಷ್ಟಿದೆ!*   ‘ದ ಸ್ಪೋರ್ಟಿಂಗ್ ನ್ಯೂಸ್’ ಪತ್ರಿಕೆ 1993ರಲ್ಲಿ ವರ್ಷದ ವ್ಯಕ್ತಿ ಎಂದು ಘೊಷಿಸಿದ ವ್ಯಕ್ತಿ ಆಟಗಾರನೂ ಆಗಿರಲಿಲ್ಲ, ಕೋಚ್ ಕೂಡ ಆಗಿರಲಿಲ್ಲ. ಆದರೆ ದಶಕಗಳಿಂದ ಅತ್ಯುನ್ನತ ಕ್ರೀಡಾಪಟುಗಳು ಧರಿಸುತ್ತ ಬಂದಿರುವ ಜಗತ್ತಿನ ಅತಿದೊಡ್ಡ ಶೂ ಕಂಪನಿಯ ಸ್ಥಾಪಕ ಫಿಲ್ ನೈಟ್ ಆ ಗೌರವಕ್ಕೆ ಪಾತ್ರನಾದ! ಇಂತಹ ದೊಡ್ಡ ದೊಡ್ಡ ಕಂಪನಿಗಳ ಯಶಸ್ಸಿನ ಹಿಂದೆ ಸಾಮಾನ್ಯ ಜನರಿಗೆ ಹುಚ್ಚುತನ, ಮೂರ್ಖತನ ಎಂದು ಅನಿಸುವ ಐಡಿಯಾಗಳಿರುತ್ತವೆ! ಇವರೇನು ಮಾಡುತ್ತಿದ್ದಾರೆಂಬುದು ಜನರಿಗೆ ಗೊತ್ತೇ ಆಗುವುದಿಲ್ಲ. ಅಂತಹುದೇ ಒಂದು ಕಂಪನಿ ನೈಕಿ. ಈಗ ನೈಕಿ ಕಂಪನಿಯ ಹೆಸರನ್ನು ಕೇಳದವರು ಇರಲಿಕ್ಕಿಲ್ಲ. ಇದೊಂದು ಬಿಲಿಯನ್ ಡಾಲರ್ ಕಂಪನಿ. ಫಿಲ್ ನೈಟ್ ಇದರ ಸಂಸ್ಥಾಪಕ. ಇದು ನೈಕಿ ಕಂಪನಿ ಶುರುವಾದ ಕಥೆ. ಫಿಲ್ ಅತ್ಯಂತ ಬುದ್ಧಿವಂತ ಹುಡುಗನೇನಲ್ಲ. ಕಾಲೇಜಿನಲ್ಲಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದನಾದರೂ ಮೊದಲ ಸ್ಥಾನ ಪಡೆಯುವಂತಹ ಓಟಗಾರನಾಗಿರಲಿಲ್ಲ. ಆದರೆ ಓರ್ವ ಉದ್ಯಮಶೀಲ ವ್ಯಕ್ತಿಯಾಗುವ ಲಕ್ಷಣಗಳು ಅವನಲ್ಲಿದ್ದವು. ಓದುವಾಗಲೇ ಫಿಲ್ ತನ್ನ ತಂದೆಯ ಪತ್ರಿಕೆಯಲ್ಲಿ ಕೆಲಸ ಮಾಡಲು ಬಯಸಿದ. ಆದರೆ ಫಿಲ್​ನ ಸಾಮರ್ಥ್ಯದ ಅರಿವಿದ್ದ ತಂದೆ ಕೆಲಸ ಕೊಡಲು ನಿರಾಕರಿಸಿದರು. ಫಿಲ್ ಅಪ್ಪನ ಪ್ರತಿಸ್ಪರ್ಧಿ ಪತ್ರಿಕೆಯಾದ ‘ಒರೆಗಾನಿಯನ್’ನಲ್ಲಿ ಕ್ರೀಡಾ ವಿಭಾಗದಲ್ಲಿ ರಾತ್ರಿಪಾಳಿಯ ಕೆಲಸಕ್ಕೆ ಸ

ದಿನಕ್ಕೊಂದು ಕಥೆ 974

*🌻ದಿನಕ್ಕೊಂದು ಕಥೆ🌻* ನಾನು ಕಲ್ಕತ್ತಾ ಜೈಲಿನಿಂದ ಅಂಡಮಾನ್ ತಲುಪಿದಾಗ ನಮ್ಮನ್ನು ಉಳಿದ ರಾಜಕೀಯ ಕೈದಿಗಳೊಂದಿಗೆ ಕತ್ತಲ ಕೋಣೆಯೊಳಗೆ ತಳ್ಳಲಾಯಿತು. . ಅಲ್ಲಿ ಚಾಪೆ ಕಂಬಳಿ ಗಳಂತಹ ಯಾವುದೇ ವಸ್ತುಗಳು ಕಾಣುತ್ತಿರಲಿಲ್ಲ. ಇಲ್ಲಿ ನೀರಿನ ನಡುವೆ ಅಜ್ಞಾತ ದ್ವೀಪದಲ್ಲಿ ಕೊಳೆಯುತ್ತಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಹೇಗೆ ದೊರಕೀತು..? ಎಂಬ ಚಿಂತೆ ಕಂಬಳಿ ಚಾಪೆಯ ಚಿಂತೆಯನ್ನು ದೂರ ಮಾಡಿತ್ತು.. ಹೇಗೂ ಆಯಾಸದಿಂದ ಕಲ್ಲು ಚಪ್ಪಡಿಯ ಮೇಲೆ ಒರಗಿದಂತೆಯೇ ನಿದ್ದೆ ಬಂದಿತ್ತು. ರಾತ್ರಿ ಸುಮಾರು 12 ಗಂಟೆ ಹೊತ್ತಿಗೆ ಒಬ್ಬ ಗಾರ್ಡ್ ಕಂಬಳಿ ತೆಗೆದುಕೊಂಡು ಬಂದು ಏನೊಂದೂ ಮಾತಾಡದೆ ಮಲಗಿದ್ದವರ ಮೇಲೆಸೆದು ಹೋದ. ಸೂರ್ಯೋದಯದ ನಂತರ ತಿನ್ನಲು ನನಗೆ ಕಿಚಡಿ ದೊರಕಿತು. ಸ್ವಲ್ಪ ಸಮಯದ ನಂತರ ಕಮ್ಮಾರ ಬಂದಿದ್ದ. ಕೈಗಳಿಗೆ ತೊಡಿಸಿದ ಸಂಕೋಲೆಯನ್ನು ತುಂಡರಿಸುವಾಗ ಕೈಯ ಚರ್ಮವೇ ಕಿತ್ತುಬಂದಿತ್ತು . ಕಾಲಿನ ಬೇಡಿ ತುಂಡರಿಸುವಾಗಂತೂ ಸುತ್ತಿಗೆ ಏಟು ಕಾಲ ಗಂಟಿಗೆ ಬಡಿದಿತ್ತು. ಒಮ್ಮೆಯಂತೂ ನೋವಿನಿಂದ ತಡೆಯಲಾರದೆ ಹೇಳಿದೆ "ಕಾಲಿನ ಮೇಲೆಯೇ ಸುತ್ತಿಗೆ ಬಡಿಯುತ್ತಿದ್ದೀಯಲ್ಲಾ .. ನೀನೇನು ಕುರುಡನೇ..?" "ಕಾಲೇನು? ನಿನ್ನ ಎದೆಗೂ ಬಡಿಯಬಲ್ಲೆ.". ಎಂದು ದರ್ಪದಿಂದ ಹೇಳಿದನವ. ನನಗೆ ಕೋಪ ತಡೆಯಲಾಗಲಿಲ್ಲ. ತಲೆಯೆತ್ತಿ ಅವನ ಮುಖಕ್ಕೆ ಉಗುಳಿದೆ..! "ಮಹಿಳೆಯರಿಗೆ ಗೌರವ ಕೊಡಲು ಕಲಿತುಕೋ" ಎಂದೆ. ಜೈಲರನೂ ಅವರೊಂದಿಗಿದ್ದ .ಅವನು ದನಿ ಎತ

ದಿನಕ್ಕೊಂದು ಕಥೆ 973

*🌻ದಿನಕ್ಕೊಂದು ಕಥೆ🌻* *ಎಂಥವನ ದಾಸ್ಯತ್ವವಿರಬೇಕು?* ನೂರಾರು ಎಕರೆ ಕೃಷಿ ಭೂಮಿ ಇರುವ ಜಮೀನ್ದಾರನೊಬ್ಬನ ಹೊಲದಲ್ಲಿ ಆ ಊರಿನ ಏಳೆಂಟು ಜನ ಕಾರ್ವಿುಕರು ಕೆಲಸ ಮಾಡುತ್ತಿದ್ದರು. ಅವರೆಲ್ಲ ಬೆಳಗ್ಗೆ ಬೇಗನೆ ಎದ್ದು ಕೆಲಸಕ್ಕೆ ಹೋಗುತ್ತಿದ್ದುದರಿಂದ ಅವರವರ ಮನೆಗಳಿಂದ ಊಟ ತೆಗೆದುಕೊಂಡು ಹೋಗಿ ಮಧ್ಯಾಹ್ನ ಅವರಿಗೆ ತಲುಪಿಸುವುದಕ್ಕಾಗಿ ಒಬ್ಬ ನೌಕರನನ್ನು ನೇಮಿಸಿದ್ದ. ಒಂದು ದಿನ ಜಮೀನ್ದಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಾಡೆಯಲ್ಲಿ ಕಾಲಿಡುತ್ತಲೇ ಅವನ ಹೆಂಡತಿ ಹೇಳಿದಳು, ‘ಈ ದಿನ ನಮ್ಮ ನೌಕರನು ಕೆಲಸಕ್ಕೆ ಬಂದಿಲ್ಲ. ಮೈಯಲ್ಲಿ ಹುಷಾರಿಲ್ಲವೆಂದು ಹೇಳಿ ಕಳುಹಿಸಿದ್ದಾನೆ’. ‘ಹೌದಾ! ಹಾಗಾದರೆ ನಮ್ಮ ಕಾರ್ವಿುಕರ ಮನೆಗಳಲ್ಲಿ ಹೆಣ್ಣುಮಕ್ಕಳು ಅಡುಗೆ ತಯಾರಿಸಿ ಬುತ್ತಿ ಕಟ್ಟಿ ನೌಕರನ ದಾರಿ ಕಾಯುತ್ತಿರಬಹುದು. ನಾನೇ ಅವರೆಲ್ಲರ ಮನೆಗಳಿಗೆ ಹೋಗಿ ಬುತ್ತಿಯನ್ನು ತೆಗೆದುಕೊಂಡು ಹೊಲಕ್ಕೆ ಹೋಗುತ್ತೇನೆ’. ‘ಇನ್ನೂ ನಿಮ್ಮ ಊಟವೂ ಆಗಿಲ್ಲ. ತಿರುಗಿ ಬರುವಷ್ಟರಲ್ಲಿ ವೇಳೆ ಆಗುತ್ತದೆ. ಈ ವಯಸ್ಸಿನಲ್ಲಿ ಆಯಾಸವಾಗುವದಿಲ್ಲವೇ?’ ‘ನನ್ನ ಊಟವನ್ನೂ ಕಟ್ಟಿಕೊಡು. ಜೊತೆಗೇ ಕೊಂಡೊಯ್ಯುತ್ತೇನೆ’ ಎಂದು ಪೇಟ ಸುತ್ತಿಕೊಂಡು ತಯಾರಾಗಿಯೇ ಬಿಟ್ಟ. ಸ್ವತಃ ಜಮೀನ್ದಾರನೇ ಬುತ್ತಿ ಕೊಂಡೊಯ್ಯಲು ಬಂದದ್ದು ನೋಡಿ ಅವರಿಗೆಲ್ಲ ಆಶ್ಚರ್ಯ. ಒಬ್ಬರು ಬಟ್ಟೆಯಲ್ಲಿ ಸುತ್ತಿದ ರೊಟ್ಟಿ- ಪಲ್ಯ, ಇನ್ನೊಬ್ಬರು ಮಡಿಕೆಯಲ್ಲಿ ಮಜ್ಜಿಗೆ, ಮತ್ತೊಬ್ಬರು ಕಾಗದದಲ್ಲಿ ಚಟ್ನಿಪು

ದಿನಕ್ಕೊಂದು ಕಥೆ 972

*🌻ದಿನಕ್ಕೊಂದು ಕಥೆ🌻* *ಭರವಸೆಯೇ ಬದುಕಿನ ಬೆಳಕು* ಅವನೊಬ್ಬ ಚಿಕ್ಕಂದಿನಿಂದಲೂ ಸಮಸ್ಯೆಗಳನ್ನು ಕಂಡಿರದೆ ತುಂಬ ಸುಖದಲ್ಲಿಯೇ ಬೆಳೆದು ಬಂದ ಹುಡುಗ. ಒಬ್ಬನೇ ಮಗನೆಂಬ ಕಾರಣದಿಂದ ತಂದೆ-ತಾಯಿ ಯಾವ ಸಮಸ್ಯೆಯನ್ನೂ ಕಾಣಗೊಡದೆ, ಕಷ್ಟಗಳ ಕಲ್ಪನೆಯೂ ಇಲ್ಲದಂತೆ, ಮುದ್ದಿನಿಂದ ಬೆಳೆಸಿದ್ದರು. ಮುಂದೊಂದು ದಿನ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಹುಡುಗನಿಗೆ ಎಲ್ಲ ಜವಾಬ್ದಾರಿಗಳು ಒಂದೇ ಬಾರಿಗೆ ಹೆಗಲೇರಿದವು. ಒಂದೊಂದೇ ಸಮಸ್ಯೆಗಳು ಎದುರಾಗಿ ಬದುಕು ಕಷ್ಟ ಎನಿಸತೊಡಗಿತು. ಇದುವರೆಗೂ ಬರೀ ಸುಖವನ್ನಷ್ಟೇ ಕಂಡು ಬೆಳೆದ ಹುಡುಗನಿಗೆ ಜವಾಬ್ದಾರಿಯನ್ನೆಲ್ಲ ನಿಭಾಯಿಸಿ ಜೀವನ ಸಾಗಿಸುವುದು ಅಸಾಧ್ಯವೆಂದೆನಿಸತೊಡಗಿತು. ಹೀಗೆ ಒಂದು ದಿನ ಬದುಕಿನ ಬಗ್ಗೆ ಎಲ್ಲ ವಿಶ್ವಾಸ, ನಂಬಿಕೆಗಳನ್ನು ಕಳೆದುಕೊಂಡು ಜೀವನೋತ್ಸಾಹವೇ ಇಲ್ಲದೆ ಕೈಚೆಲ್ಲಿ, ಊರಾಚೆಯ ಕೆರೆಯ ದಡದಲ್ಲಿ ಹೋಗಿ ಕುಳಿತ. ಶೂನ್ಯಭಾವದಿಂದ ನೀರನ್ನೇ ದೃಷ್ಟಿಸಿ ನೋಡುತ್ತಿದ್ದ ಅವನಿಗೆ ನೀರಿನಲ್ಲಿ ಬಿದ್ದು ಒದ್ದಾಡುತ್ತಿರುವ ಇರುವೆಯೊಂದು ಕಣ್ಣಿಗೆ ಕಂಡಿತು. ಈಜು ಪಾದಗಳಿಲ್ಲದಿದ್ದರೂ ನೀರಿನಲ್ಲಿ ಚಲಿಸುವ ಸಾಮರ್ಥ್ಯವಿಲ್ಲದಿದ್ದರೂ ಆ ಇರುವೆ ತನ್ನ ಉಳಿವಿಗಾಗಿ ಹೋರಾಡುತ್ತಿತ್ತು. ಬೀಸುತ್ತಿರುವ ಗಾಳಿಗೆ ಅಂಜದೆ, ನೀರಿನ ರಭಸಕ್ಕೆ ಹೆದರದೆ ತುಂಬ ಕಷ್ಟಪಟ್ಟು ದಡ ಸೇರಲು ಹವಣಿಸುತ್ತಿತ್ತು. ಕೊನೆಗೂ ನಿರಂತರ ಹೋರಾಟದ ಫಲವಾಗಿ ಇರುವೆ ದಡವನ್ನು ಸೇರಿತು. ಇರುವೆಯನ್ನು ನೋಡಿದ ಹುಡುಗನಿಗೆ ಆಶ್ಚ

ದಿನಕ್ಕೊಂದು ಕಥೆ 971

*🌻ದಿನಕ್ಕೊಂದು ಕಥೆ🌻* *ನಿಮ್ಮನ್ನು ನೀವು ಸಾಬೀತು ಮಾಡಬೇಕಿರುವುದು ಎಲ್ಲಿ ಗೊತ್ತೇ?* ಒಂದು ಸ್ಪರ್ದೆ ಏರ್ಪಾಟಾಗಿತ್ತು ," ಪ್ರತಿಯೊಬ್ಬರೂ ನೀವು ಸಾಕಿರುವ ಪ್ರಾಣಿಯನ್ನು ಕರೆತನ್ನಿ ಯಾವುದು ವೇಗವಾಗಿ ಓಡುತ್ತದೆಯೋ ಅದಕ್ಕೆ ಪ್ರಶಸ್ತಿ ಕೊಡುತ್ತೇವೆ" ಎಂದರು. ಊರವರೆಲ್ಲರೂ ತಮ್ಮತಮ್ಮ ಮನೆಯಲ್ಲಿದ್ದ ನಾಯಿಗಳನ್ನು ಹಿಡಿದು ತಂದು,ಈಗ ವೇಗವಾಗಿ ಓಡಿ ಸ್ಪರ್ದೆ ಗೆಲ್ಲಬೇಕೆಂದು ಅವರವರ ನಾಯಿಗೆ ಹೇಳಿಕೊಟ್ಟರು. ಅದರಲ್ಲೊಬ್ಬ ಸಾಕಿದ ಚಿರತೆಯನ್ನೂ ಕೂಡ ತಂದಿದ್ದ! ಸೇರಿದ್ದ ಸಾರ್ವಜನಿಕರು ದಿಗ್ಭ್ರಮೆಯಾಗಿದ್ದರು,'ಚಿರತೆಯ ಸರಿಸಮನಾಗಿ ಈ ನಾಯಿಗಳು ಓಡುವುದುಂಟಾ?' ಎಂದು. ಸ್ಪರ್ದೆ ಶುರುವಾದದ್ದೇ ತಡ ಎಲ್ಲಾ ನಾಯಿಗಳೂ ದೌಡಾಯಿಸಿದವು,ಧೂಳೆಬ್ಬಿಸಿಕೊಂಡು ಪೇರಿ ಕಿತ್ತವು,ಮೊದಲ ಸ್ಥಾನ ಪಡೆಯಲು ಉಲ್ಕಾ ವೇಗ ಕಾಪಾಡುತ್ತಾ ಓಡತೊಡಗಿದವು ಆದರೆ ಚಿರತೆ ಮಾತ್ರ ಉಹ್ಞೂಂ, ಅಲುಗಾಡಲಿಲ್ಲ,ನಿರುಮ್ಮಳವಾಗಿ ಸುಮ್ಮನೆ ಕೂತಿತ್ತು. ಅದನ್ನು ನೋಡಿ ಸಿಟ್ಟಾದ ಮಾಲೀಕ ಚಿರತೆಯ ಬಳಿ ಹೋಗಿ 'ನಿನಗೇನು ಬರಬಾರದ್ದು ಬಂದಿದೆ? ಯಾಕೆ ಹೀಗೆ ಮಾಡಿದೆ? ಓಡಿದ್ದಿದ್ದರೆ ನೀನೇ ಅಲ್ಲವಾ ಗೆಲ್ಲುತ್ತಿದ್ದದ್ದು' ಎಂದ. ಆಗ ಚಿರತೆಯು 'ಕೆಲವು ಸಲ ಎಲ್ಲರಿಗಿಂತ ನಾವೇ ಶ್ರೇಷ್ಟ ಎಂದು ಪ್ರತಿಪಾದಿಸಹೊರಡುವುದು ಅನೇಕ ಸಲ ನಮಗೆ ನಾವೇ ಅವಮಾನ ಮಾಡಿಕೊಂಡದ್ದಕ್ಕೆ ಸಮಾನವಾಗುತ್ತದೆ,ಅದಲ್ಲದೆ ಅನಗತ್ಯ ಜಾಗದಲ್ಲಿ ನಮ್ಮನ್ನು ನಾವು ಸಾಬೀತುಪಡಿಸಬೇಕಾದ ಅವಶ್ಯ

ದಿನಕ್ಕೊಂದು ಕಥೆ 970

*🌻ದಿನಕ್ಕೊಂದು ಕಥೆ🌻* *ಕೆಲಸದಲ್ಲಿ ಶ್ರದ್ಧೆ ಇರಲಿ.*   ಅದೊಂದು ದಿನ ಯೋಗಸಂಸ್ಥೆಯ ಕಾರ್ಯಕ್ರಮಕ್ಕೆ ನಾನು ಮತ್ತು ಮೈಸೂರಿನ ಪ್ರಸಿದ್ಧ ಯೋಗ ಗುರುಗಳು ಹೋಗಬೇಕಿತ್ತು. ಯೋಗಗುರುಗಳನ್ನು ಮೆಜೆಸ್ಟಿಕ್​ನ ರೈಲು ನಿಲ್ದಾಣದಲ್ಲಿ ಬರ ಮಾಡಿಕೊಂಡು ಇನ್ನೇನು ಟ್ಯಾಕ್ಸಿ ಅಥವಾ ಆಟೋದಲ್ಲಿ ಹೋಗಬೇಕೆಂದುಕೊಂಡಾಗ ಟ್ಯಾಕ್ಸಿಯವರು ಬರೋಲ್ಲ ಅಂದ್ರು. ಮತ್ತು ಆಟೋದವರ ಹತ್ತಿರ ಕೇಳಿದಾಗ ಮೂರರಿಂದ ನಾಲ್ಕು ಪಟ್ಟು ಜಾಸ್ತಿ ಹಣ ಕೇಳಿದರು. ನಾವು ಇನ್ನೇನು ಅಲ್ಲೇ ಬಸ್ ನಿಲ್ದಾಣದಿಂದ, ಬಸ್ ಮೂಲಕ ಪ್ರಯಾಣ ಮಾಡಬೇಕು ಅನ್ನುವಷ್ಟರಲ್ಲಿ ಮತ್ತೊಬ್ಬ ಆಟೋದವರು ಬಂದು ‘ನೀವು ಎಲ್ಲಿಗೆ ಹೋಗಬೇಕು’ ಎಂದು ವಿಚಾರಿಸಿದರು. ನಮ್ಮ ಸ್ಥಳ ತಿಳಿಸಿದಾಗ ಆ ಆಟೋದವ ‘ಬನ್ನಿ ಸ್ವಾಮಿ ನಾನು ಕರೆದುಕೊಂಡು ಹೋಗುವೆ’ ಅಂದರು. ಹಣದ ಬಗ್ಗೆ ವಿಚಾರಿಸಿದಾಗ, ‘ಸ್ವಾಮಿ ನನಗೆ ಒಂದು ರೂಪಾಯಿಯೂ ಜಾಸ್ತಿ ಬೇಡ. ಮೀಟರ್ ಪ್ರಕಾರ ಎಷ್ಟು ಆಗುತ್ತೋ ಅಷ್ಟೇ ಕೊಡಿ’ ಅಂದ್ರು. ಆಟೋ ಏರಿ ಹೊರಟೆವು. ಹಾಗೇ ಮಾತಾಡ್ತಾ ಅವರಿಗೆ ಕೇಳಿದೆವು-‘ಎಷ್ಟು ವರ್ಷಗಳಿಂದ ಆಟೋ ಓಡಿಸುತ್ತಿದ್ದಿರಿ’ ಅಂತ. ‘ಸ್ವಾಮಿ ನಾನು 30 ವರ್ಷದಿಂದ ಆಟೋ ಓಡಿಸಿಕೊಂಡೇ ಜೀವನ ಸಾಗಿಸುತ್ತಿರುವೆ. ಈಗ ನನಗೆ 65 ವರ್ಷ. ನಾನು ಇಲ್ಲಿಯವರೆಗೂ ಪ್ರಯಾಣಿಕರಿಂದ ಅನ್ಯಾಯವಾಗಿ ಜಾಸ್ತಿ ಹಣ ತೊಗೊಂಡಿಲ್ಲ. ಮೀಟರ್ ಪ್ರಕಾರ ಎಷ್ಟಾಗುತ್ತೋ ಅಷ್ಟು ಮಾತ್ರ ಪಡೆಯುತ್ತೇನೆ. ನನಗೆ ಮೂರು ಜನ ಮಕ್ಕಳು. ಒಬ್ಬ ಸಿವಿಲ್ ಇ