Posts

Showing posts from July, 2019

ದಿನಕ್ಕೊಂದು ಕಥೆ 928

*🌻ದಿನಕ್ಕೊಂದು ಕಥೆ🌻* ಬೆರಗಿನ ಬೆಳಕು ಡಾ.ಗುರುರಾಜ ಕರ್ಜಗಿ ಸಂಗ್ರಹ : ವೀರೇಶ್ ಅರಸಿಕೆರೆ ಹೃದಯಪಾಠವಾಗದ ಬಾಯಿಪಾಠ    ಹಿಂದೆ ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜನಾಗಿದ್ದಾಗ ಬೋಧಿಸತ್ವ ಅತ್ಯಂತ ಶ್ರೀಮಂತನಾದ ಬ್ರಾಹ್ಮಣನ ಮನೆಯಲ್ಲಿ ಜನಿಸಿದ್ದ. ದೊಡ್ಡವನಾದ ಮೇಲೆ ತಕ್ಷಶಿಲೆಗೆ ಹೋಗಿ ಎಲ್ಲ ವಿದ್ಯೆಗಳನ್ನು ಸಂಪಾದಿಸಿಕೊಂಡು ಬಂದು ಶ್ರೇಷ್ಠ ಗುರುವಾಗಿ ಐದುನೂರು ಜನ ಶಿಷ್ಯರಿಗೆ ಶಿಕ್ಷಣ ನೀಡುತ್ತಿದ್ದ.    ಈ ಐದುನೂರು ಶಿಷ್ಯರಲ್ಲಿ ಒಬ್ಬ ಶತಮೂರ್ಖ ವಿದ್ಯಾರ್ಥಿಯೂ ಇದ್ದ. ಆತ ತುಂಬ ಒಳ್ಳೆಯ ಹುಡುಗ, ಪ್ರಾಮಾಣಿಕ ಮತ್ತು ವಿಧೇಯನಾದವನು. ಗುರುವಿನ ಸೇವೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡುವವನು ಆದರೆ ತಲೆಗೆ ವಿದ್ಯೆ ಹತ್ತುತ್ತಿರಲಿಲ್ಲ.    ಒಂದು ದಿನ ರಾತ್ರಿ ಬೋಧಿಸತ್ವ ಮಂಚದ ಮೇಲೆ ಮಲಗಿದಾಗ ಈ ಶಿಷ್ಯ ಬಂದು ಗುರುವಿನ ಕೈ-ಕಾಲುಗಳನ್ನು ಹದವಾಗಿ ಒತ್ತಿ ಹೊರಟ. ಆಗ ಬೋಧಿಸತ್ವ, “ಮಗೂ ಮಂಚದ ಎರಡೂ ಕಾಲುಗಳು ಅಲುಗಾಡುತ್ತಿವೆ, ರಾತ್ರಿ ನಿದ್ರೆ ಮಾಡುವುದು ಕಷ್ಟ. ಅವುಗಳಿಗೆ ಯಾವುದಾದರೂ ಆಧಾರವನ್ನು ಕೊಡು”ಎಂದ. ವಿದ್ಯಾರ್ಥಿ ಅಲ್ಲಲ್ಲಿ ಹುಡುಕಾಡಿ ಒಂದು ಕಾಲಿಗೆ ಆಧಾರವನ್ನು ಕೊಟ್ಟ. ಮತ್ತೊಂದು ಕಾಲಿಗೆ ಏನೂ ದೊರೆಯಲಿಲ್ಲ. ಆಗ ಗುರುಗಳಿಗೆ ನಿದ್ರೆ ಹತ್ತುತ್ತಿತ್ತು. ಅವರಿಗೆ ತೊಂದರೆಯಾಗಬಾರದೆಂದು ತಾನೇ ಅಲ್ಲಿ ಕುಳಿತು ಕೈಯಿಂದ ಒತ್ತಿ ಹಿಡಿದ. ಬೆಳಿಗ್ಗೆ ಬೋಧಿಸತ್ವ ಎದ್ದು ನೋಡುತ್ತಾನೆ, ಶಿಷ್ಯ ರಾತ್ರಿಯಿಡೀ ಮಂಚ ಹಿಡಿದೇ ಕುಳಿತಿದ್ದ

ದಿನಕ್ಕೊಂದು ಕಥೆ 927

*🌻ದಿನಕ್ಕೊಂದು ಕಥೆ🌻* ಬರ್ಬರಿಕ ಇದ್ಯಾರಪ್ಪ ಇವನು ಬರ್ಬರಿಕ? ಯೂರೋಪ್ ಪ್ರದೇಶದ ಯಾವುದೋ ಪ್ರಭಾವಿ ಮಹಿಳೆಯ ಹೆಸರು ಇದ್ದಹಾಗಿದೆ.! ಇಷ್ಟು ದಿನ, ಏನೋ ರಾಮಾಯಣ, ಮಹಾಭಾರತದ ಪಾತ್ರಗಳ ಪರಿಚಯದ ಬಗ್ಗೆ ಲೇಖನಗಳು ಬರುತ್ತಿದ್ದವು. ಈಗ ಪಾತ್ರಗಳ ಪರಿಚಯ ಎಲ್ಲಿಂದ ಎಲ್ಲಿಗೋ ಹೋಗುವ ಹಾದಿ ಹಿಡಿದಿದೆ ಎಂಬ ಅನುಮಾನ ಮೂಡಬಹುದು. ಆದರೆ ವಾಸ್ತವವಾಗಿ "ಬರ್ಬರಿಕ" ಮಹಾಭಾರತದಲ್ಲಿ ಹೆಚ್ಚು ಪ್ರಚಲಿತವಲ್ಲದ ಪಾತ್ರಧಾರಿ ಎಂಬುದು ನಿಜ. ಯಾರು ಈ ಬರ್ಬರಿಕ...? ಇವನ ತಂದೆ ಘಟೋತ್ಕಚ, ತಾಯಿ ಅಹಿಲವತಿ (ಮೌರ್ವಿ) ಅಂದರೆ, ಬರ್ಬರಿಕನ ತಾತ ಭೀಮಸೇನ. ಬರ್ಬರಿಕ ಪಾಂಡವರು ಮತ್ತು ಕೌರವರಲ್ಲಿ ಅತ್ಯಂತ ಬಲಶಾಲಿ. ಧನುರ್ವಿದ್ಯೆಯಲ್ಲಿ ಅರ್ಜುನ, ಕರ್ಣರನ್ನೂ ಮೀರಿಸುವಂತಹ ಬಿಲ್ಲುಗಾರ. ‌ಇವನ ಸರಿಸಮನಾದವರು ಯಾರೂ ಇಲ್ಲವೇನೋ ಎನ್ನುವಷ್ಟರಮಟ್ಟಿಗೆ ಇವನ ಪರಾಕ್ರಮ. ಕುರುಕ್ಷೇತ್ರದ ಯುದ್ಧಕ್ಕೆ ಮೊದಲು ಶ್ರೀಕೃಷ್ಣ ಪಾಂಡವರು ಹಾಗೂ ಕೌರವರನ್ನು ಕುರಿತು ಕೇಳಿದ ಒಂದು ಪ್ರಶ್ನೆ....? ಭೀಷ್ಮ, ದ್ರೋಣ, ದುರ್ಯೋಧನ, ಧರ್ಮರಾಯ ಭೀಮಸೇನ, ಅರ್ಜುನ ಮುಂತಾದವರಲ್ಲಿ ಕುರುಕ್ಷೇತ್ರ ಯುದ್ಧ ಮುಗಿಯಲು ಸುಮಾರು ಎಷ್ಟು ದಿನಗಳು ಬೇಕಾಗಬಹುದು? ಎಂಬ ಪ್ರಶ್ನೆ ಕೇಳುತ್ತಾನೆ. ಎಲ್ಲ ಮಹಾರಥಿಗಳಿಂದ ಬಂದ ಉತ್ತರ 20, 24, 26, 28 ದಿನಗಳು ಹೀಗೆ ವಿಧವಿಧವಾದ ಉತ್ತರಗಳು ಬಂದವು. ಶ್ರೀಕೃಷ್ಣ ಅದೇ ಪ್ರಶ್ನೆಯನ್ನು 'ಬರ್ಬರಿಕ'ನಲ್ಲಿ ಕೇಳಿದಾಗ ಬಂದ ಉತ್ತರ.?

ದಿನಕ್ಕೊಂದು ಕಥೆ 926

*🌻ದಿನಕ್ಕೊಂದು ಕಥೆ🌻* ಪಾರಿವಾಳ ಮತ್ತು ಜಮೀನ್ದಾರ.     ಒಬ್ಬ ಜಮೀನ್ದಾರನು ತನ್ನ ಸಣ್ಣ ಮಕ್ಕಳೊಂದಿಗೆ ತೋಟದಲ್ಲಿ ಸುತ್ತುತ್ತಿರುವಾಗ ಅಲ್ಲಿ ಅವರಿಗೆ ಎರಡು ಪುಟ್ಟ ಪಾರಿವಾಳದ ಮರಿಗಳು ಸಿಕ್ಕಿದವು. ಜಮೀನ್ದಾರನ ಮಕ್ಕಳು ಅವುಗಳನ್ನು ತಂದು ತಮ್ಮ ಮನೆಯಲ್ಲಿ  ಸಾಕ ತೊಡಗಿದರು.           ಜಮೀನ್ದಾರನು ಆ ಪಾರಿವಾಳಗಳಿಗಾಗಿ  ಒಂದು ಸುಂದರವಾದ ಗೂಡನ್ನು ನಿರ್ಮಿಸಿದನು, ಮತ್ತು ಅದಕ್ಕೆ ತಿನ್ನಲು ತರ, ತರದ ದಾನ್ಯಗಳನ್ನು ತರಿಸಿಟ್ಟನು, ಜಮೀನ್ದಾರನ ಮಕ್ಕಳು ದಿನವಿಡೀ ಆ ಪಾರಿವಾಳಗಳೊಂದಿಗೆ ಆಟವಾಡುತ್ತಾ, ಅವುಗಳಿಗೆ ತಿನ್ನಿಸುತ್ತಾ ಬಹಳ ಮುದ್ದಿನಿಂದ ಅವುಗಳನ್ನು ಸಾಕುತ್ತಿದ್ದರು, ನೋಡು, ನೋಡುತ್ತಿದ್ದಂತೆ ಪಾರಿವಾಳವು ಬೆಳೆದು ದೊಡ್ಡದಾಯಿತು.           ಆದರೆ ಎಷ್ಟೇ ದೊಡ್ಡದಾದರೂ ಪಾರಿವಾಳವು ಹಾರುತ್ತಿಲ್ಲ, ಇದರಿಂದಾಗಿ  ಜಮೀನ್ದಾರ ಮತ್ತು ಅವನ ಮಕ್ಕಳು ಚಿಂತೆಗೀಡಾದರು, ಅದಕ್ಕಾಗಿ ಅವರು ಬಹಳಷ್ಟು ಹರಕೆಗಳನ್ನು ಮಾಡಿದರು ಯಾವೂದೂ ಫಲಕಾರಿಯಾಗಲಿಲ್ಲ.            ಕೊನೆಗೆ ಜಮೀನ್ದಾರನು ಪಾರಿವಾಳವನ್ನು ಬಾಬಾ, ಮಂತ್ರವಾದಿ, ಜೋತಿಷ್ಯ ರ ಬಳಿಗೆ ಕೊಂಡು ಹೋಗಿ ಹೇಗಾದರೂ ಪಾರಿವಾಳವನ್ನು ಹಾರುವಂತೆ ಮಾಡಲು ಕೇಳಿಕೊಂಡನು ಅವರ ಯಾವ ಮಂತ್ರ, ತಂತ್ರಗಳು ಪರಿಣಾಮ ಬೀರಲಿಲ್ಲ.              ಇದೇ ಚಿಂತೆಯಲ್ಲಿ ಜಮೀನ್ದಾರನು ತನ್ನ ಮನೆಯ ಮುಂದೆ ಕುಳಿತಿರುವಾಗ ಆ ದಾರಿಯಿಂದ ಓರ್ವ ಫಕೀರನು ನಡೆದುಕೊಂಡು ಹೋಗುತ್ತಿದ್ದನು, ಜಮೀನ್ದಾರನು ಓಡ

ದಿನಕ್ಕೊಂದು ಕಥೆ 925

*🌻ದಿನಕ್ಕೊಂದು ಕಥೆ🌻* ರವೀಂದ್ರನಾಥ್ ಟ್ಯಾಗೋರರು ಮರಣಶಯ್ಯೆಯಲ್ಲಿದ್ದರು.ಅವರ ಆತ್ಮೀಯ ಬಳಗ ಅಲ್ಲಿ ನೆರೆದಿತ್ತು.ಟ್ಯಾಗೋರರ ಕಂಗಳಲ್ಲಿ ಧಾರಾಕಾರವಾಗಿ ಕಣ್ಣೀರು ಇಳಿಯುತ್ತಿದ್ದವು.. ನೆರೆದ ಆತ್ಮೀಯರಲ್ಲೊಬ್ಬರು ಟ್ಯಾಗೋರರ ಕಂಗಳಲ್ಲಿ ಸುರಿಯುತ್ತಿದ್ದ ಕಣ್ಣೀರನ್ನು ನೋಡಿ ವಿಚಲಿತರಾಗುತ್ತಾರೆ. ಅವರು ಟ್ಯಾಗೋರರನ್ನು ಕುರಿತು ಹೀಗೆ ಹೇಳುತ್ತಾರೆ "lನೀವು ಪ್ರಬುದ್ಧರು,ಸಾರಸ್ವತ ಲೋಕದ ಅಮೂಲ್ಯ ಆಸ್ತಿ ಸಾವಿನ ಬಗ್ಗೆ ಏನೆಲ್ಲಾ ಬರೆದಿದ್ದೀರಿ.ಮಹಾನ್ ಸಾಧನೆಗೈದಿದ್ದೀರಿ ನೀವು ಸಾವಿಗಂಜುವುದೇ? ಟ್ಯಾಗೋರ್"ಎನ್ನುತ್ತಾರೆ ಆಗ  ಟ್ಯಾಗೋರ್ ರವರು ಉತ್ತರಿಸುತ್ತಾರೆ "ಸ್ನೇಹಿತರೇ, ನಾನು ಸಾವಿಗೆ ಅಂಜಲಾರೆ.ಸಾವು ನನ್ನ ಪರಮ ಮಿತ್ರ ಎಂದೇ ಭಾವಿಸಿದ್ದೇನೆ", ಎಂದರು " ಮತ್ತೇಕೆ ಕಣ್ಣೀರು?" "ಇತ್ತೀಚೆಗೆ ಹೊಸ ಹೊಸ ಆಲೋಚನೆಗಳು ,ಚಿಂತನೆಗಳು ನನ್ನಲ್ಲಿ  ಮೂಡತೊಡಗಿದ್ದವು.ಅವುಗಳನ್ನು  ದಾಖಲಿಸಬೇಕೆಂಬ ಮಹದಾಸೆ ನನಗಿದೆ.ನನಗೆ ಗೊತ್ತಿದೆ ನಾನು ಬದುಕಲಾರೆ ಎಂದು‌ ನನಗೆ ಮೂಡಿದ ಹೊಸ ಹೊಸ ಆಲೋಚನೆಗಳನ್ನು ಚಿಂತನೆಗಳನ್ನು ದಾಖಲಿಸದೇ ಹೋಗುತ್ತಿದ್ದೇನಲ್ಲ ಎಂಬ ನೋವು ನನಗಿದೆ.ಅದಕ್ಕಾಗಿ ದುಃಖಿತನಾಗಿದ್ದೇನೆ", ಎಂದು ಉತ್ತರಿಸುತ್ತಾರೆ ಟ್ಯಾಗೋರ್ ರವರು.. ಸಾವಿನ ಸಮಯದಲ್ಲೂ ಕವಿಯ ಕೊರಗು ಎಂತಹದ್ದು?ನೋಡಿ..ಜನಸಾಮಾನ್ಯರು ಊಹಿಸಲಸಾಧ್ಯ.ಮಹಾನ್ ಕವಿಯೇ ನಿಮ್ಮನ್ನು ಪಡೆದ ಭಾರತದ ಸಾರಸ್ವತ ಲೋಕ ಧನ್ಯ ಧನ