Posts

Showing posts from November, 2016

ದಿನಕ್ಕೊಂದು ಕಥೆ. 230

🌻🌻 *ದಿನಕ್ಕೊಂದು ಕಥೆ*🌻🌻                                             *ಇದು ಸಿನಿಮಾ ಕತೆಯಲ್ಲ, ನನ್ನ ಜೀವನದಲ್ಲಿ ನಡೆದ ಸಂಗತಿ. ಇದು ನಡೆದದ್ದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ.* *ಅದೊಂದು ದಿನ ದೀರ್ಘ ಹೊತ್ತಿನ ಮೀಟಿಂಗ್ ಮುಗಿಸಿ ಊಟ ಮಾಡಲೆಂದು ಹೋಟೆಲ್‌ವೊಂದಕ್ಕೆ ಹೋಗಿ ಊಟ ಆರ್ಡರ್ ಮಾಡಿದೆ. ಹಾಗೆ ಆರ್ಡರ್ ಕೊಟ್ಟ ಊಟವನ್ನು ಕಾದು ಕುಳಿತಿರುವಾಗ ಅಲೆಮಾರಿಯಾದ ಪುಟ್ಟ ಬಾಲಕನೊಬ್ಬ ಹೋಟೆಲ್ ನ ತಿಂಡಿಗಳ ಮೇಲೆ ಕಣ್ಣಿಟ್ಟು ನಿಂತಿರುವುದು ಕಾಣಿಸಿತು. ಕೂಡಲೇ ಆ ಹುಡುಗನಿಗೆ ಒಳಗೆ ಬರುವಂತೆ ಸನ್ನೆ ಮಾಡಿ ಕರೆದೆ. ನನ್ನನ್ನು ಗಮನಿಸಿದ ಆ ಬಾಲಕ, ತನ್ನ ಪುಟ್ಟ ಸಹೋದರಿಯನ್ನೂ ಕರೆದು ಕೊಂಡು ಒಳಗೆ ಬಂದ. ನಿಮಗೇನು ಬೇಕು ಎಂದು ಕೇಳಿದಾಗ ಇದೇ ಬೇಕು ಎಂದು ಆ ಬಾಲಕ ನನ್ನ ಪ್ಲೇಟ್‌ನತ್ತ ಕೈ ತೋರಿಸಿದ. ಇನ್ನೊಂದು ಪ್ಲೇಟ್ ಊಟಕ್ಕೆ ಮತ್ತೆ ಆರ್ಡರ್ ಕೊಟ್ಟೆ. ಆ ಊಟವನ್ನು ಬಡಿಸುವಾಗ ಬಾಲಕ ಕಣ್ಣು ಖುಷಿಯಿಂದ ಅರಳುತ್ತಿತ್ತು. ಜತೆಗೆ ಒಂದಷ್ಟು ಅಳುಕು!.* *ಅವರಿಬ್ಬರಿಗೆ ಸಿಕ್ಕಾಪಟ್ಟೆ ಹಸಿವಾಗಿದ್ದಿರಬೇಕು. ಊಟ ನೋಡಿದೊಡನೆ ಗಬಗಬನೆ ತಿನ್ನಲು ಆತ ಮುಂದಾದರೂ ಪುಟ್ಟ ಸಹೋದರಿ ಆತನನ್ನು ತಡೆದಳು. ಊಟಕ್ಕೆ ಮುನ್ನ ಕೈ ತೊಳೆದಿಲ್ಲ ಎಂಬುದನ್ನು ಆಕೆ ನೆನಪಿಸಿದ್ದಳು. ಕೈ ತೊಳೆದು ಬಂದ ಅವರಿಬ್ಬರು ಪರಸ್ಪರ ಮುಖ ನೋಡಿಕೊಂಡು ಖುಷಿಯಾಗಿ ಉಣ್ಣುತ್ತಿದ್ದರು. ಊಟ ಮುಗಿಸಿ ಕೈ ತೊಳೆದು ಅವರು ಖುಷಿ ಖುಷಿಯಾಗಿಯೇ ಹೊರಗೆ ನಡೆದದ್ದನ್ನು ನಾನು ನೋಡುತ್

ದಿನಕ್ಕೊಂದು ಕಥೆ. 229

🌻🌻 *ದಿನಕ್ಕೊಂದು ಕಥೆ*🌻🌻                                         *ಸಿರಿಯ ಅಸಲಿ ಬೆಲೆ ಎಷ್ಟು?* ಇಂದಿದ್ದು ನಾಳೆ ಇಲ್ಲದಂತಾಗುವ ಈ ನಶ್ವರ ಪ್ರಪಂಚದ ಮೋಹವನ್ನು ಅಳೆದವರು ಸಂತರು, ಶರಣರು, ಮಹಂತರು. ಅವರಿಗೆ ಈ ಪ್ರಪಂಚದ ಸಿರಿ ಸಂಪದವೆಲ್ಲವೂ ಒಂದು ಹುಲ್ಲುಕಡ್ಡಿಯಂತೆ. ನಮಗಾದರೂ ಈ ಪ್ರಪಂಚವೇ ಸರ್ವಸ್ವ. ಧನಕನಕಾದಿಕಗಳಿಗಾಗಿ ನಾವು ಪ್ರಾಣ ಪಣಕ್ಕಿಟ್ಟು ಹೋರಾಡುತ್ತೇವೆ. ಅಮೂಲ್ಯವಾದ ಆಯುಷ್ಯವನ್ನು ವ್ಯರ್ಥ ಕಳೆಯುತ್ತೇವೆ. ಒಂದು ಗೇಣು ಭೂಮಿಗಾಗಿ ಮಹಾಭಾರತದಂಥ ಘನಘೋರ ಯುದ್ಧವೇ ನಡೆಯಿತು. ಅಣ್ಣ-ತಮ್ಮಂದಿರಾದ ಕೌರವರು, ಪಾಂಡವರು ಬದ್ಧ ವೈರಿಗಳಂತೆ ಹೋರಾಡಿ ಮಡಿದರು. ಒಂದು ಕ್ಷಣ ರೂಪದ ಆಕರ್ಷಣೆ ಒಳಗಾಗಿ ರಾಮಾಯಣ ನಡೆದುಹೋಯಿತು. ಸುಂದರವಾದ ಲಂಕಾ ಪಟ್ಟಣ ಬೂದಿಯಾಯ್ತು. ಮಹಾ ಶಿವಭಕ್ತನಾದ ರಾವಣ ಅಸುನೀಗಿದೆ. ಅಪಾರ ಜೀವಹಾನಿ ಸಂಭವಿಸಿತು. ಇಂಥಾ ನಶ್ವರ ಸಂಪತ್ತಿನ ಮೋಹವು ಸಂತರು, ಶರಣರ ಬಳಿ ಎಂದೂ ಸುಳಿಯಲಿಲ್ಲ. ಚೀನಾ ದೇಶದ ಸಂತ ಲಾವೋತ್ಸೆ ನಾವೆಯಲ್ಲಿ ಕುಳಿತು ನದಿ ದಾಟುತ್ತಿದ್ದ . ಅದೇ ನಾವೆಯಲ್ಲಿ ಒಬ್ಬ ಸಿರಿವಂತನಿದ್ದ . ಸಂತನನ್ನು ಕಂಡು ವಂದಿಸಿ ಚಿನ್ನದ ಸರವನ್ನು ಕಾಣಿಕೆಯಾಗಿ ಕೊಟ್ಟ. ತಕ್ಷಣ ಸಂತ ಆ ಸರವನ್ನು ನದಿಗೆ ಎಸೆದ. ಸಿರಿವಂತನು ನೀರಿಗಿಳಿದು ಅದನ್ನು ತಂದ. 'ಸಂತರೆ ಇದು ಚಿನ್ನದ ಸರ. ಇದರ ಬೆಲೆ ಎಷ್ಟು ನಿಮಗೆ ಗೊತ್ತೇ?' ಎಂದು ಕೇಳಿದ. ಸಂತ ಲಾವೋತ್ಸೆ ಹೇಳಿದ, ''ಅದರ ಬೆಲೆ ನಿನ್ನನ್ನು ನೀರ

ದಿನಕ್ಕೊಂದು ಕಥೆ. 228

🌻🌻 *ದಿನಕ್ಕೊಂದು ಕಥೆ*🌻🌻                                     *ಕಪ್ಪೆಗಳು ಸರ್ ನಾವು ಕಪ್ಪೆಗಳು* ಒಬ್ಬ ರೈತನು ತನ್ನೂರಿನಿಂದ ಪಟ್ಟಣಕ್ಕೆ ಬಂದು ಅಲ್ಲಿದ್ದ ಒಂದು ಉಪಹಾರ ಗೃಹದ ಮಾಲೀಕನ ಹತ್ತಿರ: "ನಾನು ನಿಮಗೆ ನೂರಾರು ಕಪ್ಪೆಯ ಕಾಲನ್ನು ಕೊಡುವೆನು... ನೀವು ಅದನ್ನು ಕೊಳ್ಳುವಿರಾ?" ಅನ್ನಲು, ಅದನ್ನು ಕೇಳಿದ ಉಪಹಾರ ಗೃಹದ ಮಾಲೀಕನಿಗೆ ಅಘಾತ! ತನ್ನನ್ನು ತಾನೇ ಸವರಿಸಿಕೊಂಡು "ನೀನು ಅಷ್ಟು ಕಪ್ಪೆಯ ಕಾಲನ್ನು ಎಲ್ಲಿಂದ ತರುವೆ?" ಎಂದು ಆ ರೈತನನ್ನು ಕೇಳಲು, ರೈತನು ಹೀಗೆ ಉತ್ತರಿಸಿದನು: "ನನ್ನ ಮನೆಯ ಹತ್ತಿರ ಒಂದು ಕೊಳವಿದೆ, ಅದರಲ್ಲಿ ಲಕ್ಷಾಂತರ ಕಪ್ಪೆಗಳಿವೆ... ಅವು ರಾತ್ರಿಯೆಲ್ಲಾ ಕೂಗುವುದರಿಂದ ನನ್ನ ನಿದ್ದೆ/ನೆಮ್ಮದಿ ಹಾಳಾಗಿದೆ.., ಅದಕ್ಕೆ ನಾ ಅವುಗಳನ್ನ ಹಿಡಿದು ತಂದು ನಿಮಗೆ ಮಾರುವೆ, ನೀವು ಯೋಗ್ಯ ಬೆಲೆ ನೀಡಿ ಕೊಂಡುಕೊಳ್ಳಿ..." ಎಂದನು. ಉಪಹಾರ ಗೃಹದ ಮಾಲೀಕನಿಗೆ ಆ ರೈತ ಹೇಳಿದ್ದು ಸರಿಯೆನಿಸಿ ೫೦೦ ರ ಲೆಕ್ಕದಲ್ಲಿ ಮುಂದಿನ ಹಲವು ವಾರಗಳ ಕಾಲ ತನ್ನ ಉಪಹಾರ ಗೃಹಕ್ಕೆ ಕಪ್ಪೆಗಳನ್ನು ಸರಬರಾಜು ಮಾಡಬೇಕು ಎಂಬ ಕರಾರು ಇಟ್ಟನು. ರೈತನು ಮಾಲೀಕನ ಮಾತಿಗೆ ಒಪ್ಪಿ ತನ್ನ ಊರಿಗೆ ಮರುಳಿದನು. ಮುಂದಿನ ವಾರ ಮತ್ತೆ ಆ ಉಪಹಾರ ಗೃಹದ ಬಳಿ ಬಂದ ರೈತನ ಮುಖ ತೀರಾ ಸೆಪ್ಪಗಾಗಿತ್ತು. ನೂರಾರು ಕಪ್ಪೆಗಳನ್ನು ಹೊತ್ತು ತರುವೆ ಎಂದು ಹೇಳಿಹೋಗಿದ್ದ ಅವನ ಕೈಯಲ್ಲಿ ಕೇವಲ ಎರಡು "ಸೊಣಕಲು&qu

ದಿನಕ್ಕೊಂದು ಕಥೆ. 227

🌻🌻 *ದಿನಕ್ಕೊಂದು ಕಥೆ*🌻🌻 *ಇದು ನಿಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ* ಗುರುಕುಲದಲ್ಲಿ ಓದುತ್ತಿದ್ದ  ಶಿಷ್ಯರು ಒಮ್ಮೆ ತಮ್ಮ ಗುರುಗಳ ಬಳಿ ಬಂದು, "ಗುರುಗಳೇ ನಾವೆಲ್ಲಾ ತೀರ್ಥಯಾತ್ರೆ ಮಾಡಬೇಕು ಎಂದುಕೊಂಡಿದ್ದೇವೆ. ತಾವು ಸಮ್ಮತಿಸಿದರೆ ಪುಣ್ಯಕ್ಷೇತ್ರಗಳಿಗೆ ತೆರಳಿ ಪವಿತ್ರ ಸ್ನಾನ ಮಾಡಿ ದೇವರ ದರ್ಶನ ಮಾಡಿ ಬರುತ್ತೇವೆ" ಎಂದು ಹೇಳಿ ಯಾತ್ರೆಗೆ ಅನುಮತಿ ಕೋರಿದರು. ನೀವು ತೀರ್ಥಯಾತ್ರೆ ಕೈಗೊಳ್ಳುತ್ತಿರುವ ಉದ್ದೇಶವೇನು? ಎಂದು ಗುರುಗಳು ತಮ್ಮ ಶಿಷ್ಯರಿಗೆ ಕೇಳಿದರು. ಇದಕ್ಕೆ ಉತ್ತರಿಸಿದ ಶಿಷ್ಯರು, "ಗುರುಗಳೇ ನಾವು ಅಂತರಂಗಶುದ್ಧಿಗಾಗಿ ತೀರ್ಥಯಾತ್ರೆ ಮಾಡುತ್ತಿದ್ದೇವೆ" ಎಂದು ತಿಳಿಸಿದರು. "ಸಂತೋಷ ಹೋಗಿಬನ್ನಿ ಶುಭವಾಗಲಿ" ಎಂದ ಗುರುಗಳು, ಯಾತ್ರೆಗೆ ಹೊರಟ ಶಿಷ್ಯರೆಲ್ಲರಿಗೂ ಒಂದೊಂದು ಹಾಗಲಕಾಯಿ ಕೊಟ್ಟು, "ಈ ಕಾಯನ್ನೂ ನಿಮ್ಮ ಜೊತೆ ತೆಗೆದುಕೊಂಡು ಹೋಗಿ, ನೀವು ಎಲ್ಲೆಲ್ಲಿ ಸ್ನಾನ ಮಾಡುತ್ತೀರೋ ಅಲ್ಲಿ ಈ ಹಾಗಲ ಕಾಯಿಗೂ ಸ್ನಾನ ಮಾಡಿಸಿ. ನೀವು ಎಲ್ಲೆಲ್ಲಿ ದೇವರ ದರ್ಶನ ಪಡೆಯುತ್ತೀರೋ ಅಲ್ಲಿ ದೇವರ ಪಾದದ ಬಳಿ ಈ ಕಾಯಿಗಳನ್ನು ಇಟ್ಟು ಪೂಜೆ ಮಾಡಿಸಿಕೊಂಡು ಬನ್ನಿ" ಎಂದು ತಿಳಿಸಿದರು. ಸರಿ ಎಂದ ಶಿಷ್ಯರು ಹಾಗಲಕಾಯಿಯ ಜೊತೆ ಯಾತ್ರೆ ಹೊರಟು ಒಂದು ವಾರದ ಬಳಿಕ ಹಿಂತಿರುಗಿದರು. ಶಿಷ್ಯರನ್ನು ಕಂಡ ಗುರುಗಳು, "ಏನು ಕ್ಷೇತ್ರ ದರ್ಶನದಿಂದ ನೀವೆಲ್ಲ ಪುನೀತರಾದಿರಾ ನಿಮ್ಮ

ದಿನಕ್ಕೊಂದು ಕಥೆ. 226

🌻🌻 *. ದಿನಕ್ಕೆ ಇನ್ನೊಂದು ಕಥೆ🌻🌻                                    ಯಾಕಪ್ಪ ಕಷ್ಟ ಬರಿ ನನಗೆ ಬರುತ್ತೆ ಅನ್ನೋರು ಓದಲೇ ಬೇಕಾದ ಕಥೆ*  ಒಂದಾನೊಂದು ಕಾಲದಲ್ಲಿ ಕಳಿಂಗ ದೇಶದ ಪ್ರಜೆ ರಾಮಚಂದ್ರ ಹಾಗೂ ಅವನ ಮಗಳು ಅವಂತಿಕಾ ಒಂದು ಸಾಧಾರಣ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದರು. ಅವಂತಿಕಾ ರೂಪವತಿ ಹಾಗೂ ಬಹಳ ಬುದ್ಧಿವಂತೆ, ಒಂದು ದಿನ ಅವಂತಿಕಾ ತನ್ನ ತಂದೆಯಾ ಬಳಿ ಹೀಗೆಂದು ತನ್ನ ದುಃಖವನ್ನು ತೋಡಿಕೊಂಡಳು “ಅಪ್ಪ ನಾನು ನನ್ನ ಜೀವನದ ಪಥವನ್ನು ನಡೆಸಲು ಬಹಳ ಕಷ್ಟಪಡುತ್ತಿದ್ದೇನೆ ,ಒಂದಲ್ಲ ಒಂದು ಸಮಸ್ಯೆ ಯಾವಾಗಲು ಇದ್ದೆ ಇರುತ್ತದೆ , ಒಂದು ಸಮಸ್ಯೆಯನ್ನು ಸವೆಸಿ ಹೊರಬಂದ ನಂತರಇನ್ನೊಂದು ನನಗೆ ಸಾಕಾಗಿ ಹೋಗಿದೆ ಇದರಿಂದ ಹೆಣಗಾಡುತ್ತಿದ್ದೇನೆ ” . ಅದಕ್ಕೆ ಬಾಣಿಸಿಗನಾದ ಅಪ್ಪ “ಮಗು ನನ್ನೊಂದಿಗೆ ಅಡುಗೆ ಮನೆಗೆ ಬಾ ” ಎಂದು ಕರೆದೊಯ್ದರು. ಅವರು ನೀರು ತುಂಬಿದ ಮೂರು ಮಡಕೆಗಳು ಇರಿಸಿ ಬೆಂಕಿ ಹಚ್ಚಿದರು. ಒಮ್ಮೆ ಮೂರು ಮಡಿಕೆಗಳು ಕುದಿಯಲು ಆರಂಭಿಸಿತು, ಅವರು ಆಲೂಗಡ್ಡೆ ಒಂದು ಮಡಕೆಯಲ್ಲಿ, ಎರಡನೇಮಡಕೆಯಲ್ಲಿ ಮೊಟ್ಟೆಗಳು, ಮೂರನೇ ಮಡಕೆಯಲ್ಲಿ ಕಾಫಿ ಬೀಜಗಳನ್ನು ಇರಿಸಿದ್ದರು . ನಂತರ ತಂದೆ ತಮ್ಮ ಮಗಳಿಗೆ ಒಂದು ಮಾತನ್ನು ಆಡದೆ ಸುಮ್ಮನೆ ಕುಳಿತುಕೊಂಡರು ಆದರೆ ಮಗಳು ಮನಸಲ್ಲೇ ತಮ್ಮ ತಂದೆ ಏನು ಮಾಡುತ್ತಿರಬಹುದು ಎಂದು ಲೆಕ್ಕಾಚಾರ ಹಾಕತೊಡಗಿದಳು. 20 ನಿಮಿಷಗಳ ತರುವಾಯ, ಉರಿಯನ್ನು ಆರಿಸಿ ಪಾತ್ರೆಗಳನ್ನು ಕೆಳಗೆ ಇಳಿಸಿದರು,

ದಿನಕ್ಕೊಂದು ಕಥೆ. 225

🌻🌻 *ದಿನಕ್ಕೊಂದು ಕಥೆ*🌻🌻 *ಬದುಕು ಧೈರ್ಯಕ್ಕೆ ಕಾರಣ*   ದಟ್ಟವಾದ ಕಾಡಿನಲ್ಲಿನ ಸರೋವರದ ಬದಿಯಲ್ಲಿ ಸಾವಿರಾರು ಮೊಲಗಳು ವಾಸ­ವಾ­ಗಿ­ದ್ದವು. ಅವುಗಳಿಗೆ ಅಲ್ಲಿ ಬೇಕಾದಷ್ಟು ಆಹಾರ ಸಿಗುತ್ತಿತ್ತು.   ಅವುಗಳ ಪರಿ­ವಾರ ದಿನದಿಂದ ದಿನ ಕ್ಕೆ ವೃದ್ಧಿಸುತ್ತಲೇ ಇತ್ತು. ಮೊಲಗಳು ಮೊದಲೇ ತುಂಬ ಪುಕ್ಕಲು ಸ್ವಭಾವದ ಪ್ರಾಣಿಗಳು. ಒಂದು ಚೂರು ಸದ್ದಾ­ದರೂ ಹೆದರಿ ಓಡು­ವಂಥ ಜೀವಿಗಳು. ಒಂದು ಬಾರಿ ಮೊಲಗಳೆಲ್ಲ ಸಭೆ ಸೇರಿದ್ದಾಗ ಹಿರಿಯ ಮೊಲ­ವೊಂದು ಗಂಭೀರವಾಗಿ ಮಾತನಾಡಿತು, ‘ಬಂಧು­ಗಳೇ, ನಾವೆಲ್ಲ ಈ ಅರಣ್ಯದಲ್ಲಿ ಚೆನ್ನಾಗಿದ್ದೇವೆ ಎಂಬುದು ಒಂದು ಭಾವನೆ. ಆದರೆ, ನಿಜವಾಗಿ ನೋಡಿದರೆ ನಾವು ಇರುವಷ್ಟು ಆತಂಕದಲ್ಲಿ ಬೇರೆ ಯಾವ ಪ್ರಾಣಿಯೂ ಕಾಡಿನಲ್ಲಿ ಇರು­ವುದು ಸಾಧ್ಯವಿಲ್ಲ. ನಮ್ಮ ಸ್ವಭಾವವೇ ಪುಕ್ಕಲು. ನಾವು ಪಕ್ಕಾ ಸಸ್ಯಾಹಾರಿಗಳು, ಯಾರಿಗೂ ತೊಂದರೆ ಕೊಡುವವರಲ್ಲ.  ಆದರೆ, ಎಲ್ಲರೂ ನಮ್ಮ ಮೇಲೆ ಯಾಕೆ ಇಷ್ಟು ದ್ವೇಷ ಸಾಧಿಸುತ್ತಾರೋ ತಿಳಿ­ಯದು. ಮಾಂಸಾಹಾರಿಗಳಾದ ಪ್ರಾಣಿ­ಗಳು ನಮಗೋಸ್ಕರ ಕಾಯುತ್ತಿರುತ್ತವೆ. ಸಿಕ್ಕಸಿಕ್ಕಲ್ಲಿ ನಮ್ಮವರನ್ನು ಹೊಡೆದು ತಿನ್ನು­ತ್ತವೆ. ಇನ್ನೊಂದೆಡೆಗೆ ಬೇಟೆ­ಗಾ­ರರೂ ನಮ್ಮನ್ನೇ ಹುಡುಕಿಕೊಂಡು ಬರುತ್ತಾರೆ.  ಅಲ್ಲಲ್ಲಿ ಬಲೆ ಹಾಕಿ ನಮ್ಮನ್ನು ಹಿಡಿಯುತ್ತಾರೆ. ಸಿಕ್ಕವರನ್ನು ಹಿಡಿದುಕೊಂಡು ಹೋಗಿ ಕೆಲವರನ್ನು ಕೊಂದು ಮಾಂಸ ಮಾರುತ್ತಾರೆ. ಇನ್ನೂ ಕೆಲವರನ್ನು ಹಿಡಿದುಕೊಂಡು ಹೋಗಿ ಪಂಜರದಲ್ಲಿಟ್ಟು ಸಾಕುತ್ತಾರೆ. ಪಾಪ

ದಿನಕ್ಕೊಂದು ಕಥೆ. 224

🌻🌻 *ದಿನಕ್ಕೊಂದು ಕಥೆ*    *ಯಜಮಾನನ ಗುಣ ಶಿಷ್ಯನಲ್ಲಿ*    ಬಹಳ ವರ್ಷಗಳ ಹಿಂದೆ ಕಾಶಿಯ ರಾಜ ಬ್ರಹ್ಮದತ್ತನಾಗಿದ್ದ. ಆತ ತಾರುಣ್ಯ­ದಲ್ಲೇ ಪಟ್ಟಕ್ಕೇರಿದವನು. ಆತ ಧರ್ಮಜ್ಞ. ಅವನಿಗೆ ಸಕಲ ವಿದ್ಯೆಗಳೂ ಕರ­ತ­ಲಾಮಲಕವಾಗಿದ್ದವು. ಆತನ.  ಮಾತು, ನಡೆ ಅತ್ಯಂತ ನಯ. ಅವನ ಬಾಯಿಯಿಂದ ತಪ್ಪು ಮಾತುಗಳು ಬರುವುದೇ ಸಾಧ್ಯವಿರಲಿಲ್ಲ.  ಅವನ ಕರುಣೆ, ನ್ಯಾಯಪರತೆ, ಜನಪ್ರೀತಿ ದಂತಕಥೆಗಳೇ ಆಗಿದ್ದವು. ಅವನ ರಾಜ್ಯದಲ್ಲಿ ಕಳವು, ಅಪರಾಧಿಗಳೇ ಇರಲಿಲ್ಲ. ನ್ಯಾಯಾಧೀಶರಿಗೆ, ಶಿಸ್ತು­ಪಾಲನೆ ಮಾಡುವ ಸೈನಿಕರಿಗೆ ಯಾವ ಕೆಲಸವೂ ಇರಲಿಲ್ಲ. ಸಮಾಜದಲ್ಲಿ ಅತ್ಯಂತ ಶಾಂತಿ ಇತ್ತು.ಬ್ರಹ್ಮದತ್ತ ಇಷ್ಟಾದರೂ ತನ್ನಲ್ಲಿ ಯಾವುದಾದರೂ ದುರ್ಗುಣವಿದೆಯೇ ಎಂದು ಪರೀಕ್ಷಿಸಿ­ಕೊಳ್ಳುತ್ತಿದ್ದ. ಆಸ್ಥಾನದಲ್ಲಿ ಯಾರನ್ನು ಕೇಳಿದರೂ ಅವರು ಅವನಲ್ಲಿ ಒಂದು ಕೆಟ್ಟಗುಣವನ್ನೂ ಹೇಳಲಿಲ್ಲ. ಅವರು ಹೆದರಿಕೆಯಿಂದ ಹೇಳಿರಲಿ­ಕ್ಕಿಲ್ಲ­ವೆಂದುಕೊಂಡು ವೇಷ ಮರೆಸಿಕೊಂಡು ತನ್ನ ದೇಶದ ಹಳ್ಳಿಹಳ್ಳಿಗಳಲ್ಲಿ ಸಂಚರಿ­ಸಿದ. ಅಲ್ಲಿಯೂ ಸಾಮಾನ್ಯರನ್ನು ಪ್ರಶ್ನಿಸಿದ. ಅವರಲ್ಲಿ ಒಬ್ಬರೂ ರಾಜನ ಒಂದು ದುರ್ಗುಣವನ್ನೂ ಹೇಳಲಿಲ್ಲ. ಬದಲಾಗಿ ಅವನನ್ನು ದೇವರೆಂದೇ ಭಾವಿಸುವು-ದಾಗಿ ಹೇಳಿದರು. ಬ್ರಹ್ಮದತ್ತ ಅಂದಿನ ಕಾಲದ ಮಹಾಜ್ಞಾನಿ ಎಂದು ಹೆಸರಾದ ವಿಷ್ಣುಗೋಪನನ್ನು ಕಂಡು ತನ್ನಲ್ಲಿ ಯಾವುದಾದರೂ ದೋಷವಿದ್ದರೆ ತಿಳಿಸಿ ಅದನ್ನು ಕಳೆದುಕೊಳ್ಳುವ ವಿಧಾನ­ವನ್ನು ಹೇಳಲು ಕೇಳಿಕೊಂಡ. ಇದೇ ರೀತಿಯ ಪರಿಸ್ಥಿತಿ ಕೋ

ದಿನಕ್ಕೊಂದು ಕಥೆ. 223

🌻🌻 *ದಿನಕ್ಕೊಂದು ಕಥೆ*🌻🌻                                                *ಹಣೆ ಬರಹ* ಜಪಾನಿನ ಒಂದು ಮುಖ್ಯವಾದ ಯುದ್ಧದಲ್ಲಿ ತನ್ನ ಸೈನ್ಯವು ಬಹುತೇಕ ನಾಶವಾಗಿದ್ದರೂ, ಸೈನಿಕರು ದಣಿದಿದ್ದರೂ ಸೈನ್ಯಾಧಿಕಾರಿಗೆ ಗೆಲುವು ಸಾಧ್ಯವೆಂಬ ಭರವಸೆಯಿತ್ತು. ಆದರೆ ಸೈನಿಕರು ಸಂಶಯದಲ್ಲಿದ್ದರು. ಪುನಃ ಯುದ್ಧವನ್ನು ಮುಂದುವರೆಸುವುದೆಂದು ಸೈನ್ಯಾಧಿಕಾರಿ ನಿರ್ಧರಿಸಿದ. ಸೈನ್ಯವು ಯುದ್ಧಕ್ಕೆ ತೆರಳುತ್ತಿದ್ದಾಗ ದಾರಿಯಲ್ಲಿ ಒಂದು ದೇವಾಲಯದ ಬಳಿ ಪ್ರಾರ್ಥನೆಗಾಗಿ ನಿಂತಿತು. ತನ್ನ ಸೈನಿಕರೊಂದಿಗೆ ಪ್ರಾರ್ಥನೆ ಮುಗಿಸಿದ ಬಳಿಕ ಸೈನ್ಯಾಧಿಕಾರಿಯು ಕಿಸೆಯಿಂದ ಒಂದು ನಾಣ್ಯವನ್ನು ಹೊರ ತೆಗೆದು, “ಸೈನಿಕರೇ, ಈ ನಾಣ್ಯವನ್ನು ನಾನೀಗ ಚಿಮ್ಮಿಸುತ್ತೇನೆ. ಅದರ ಮುಂಭಾಗ ಕಂಡರೆ, ನಾವು ಗೆಲ್ಲುತ್ತೇವೆ. ಹಿಂಭಾಗ ಕಂಡರೆ ನಾವು ಸೋಲುತ್ತೇವೆ.” ಎಂದು ಹೇಳಿ ನಾಣ್ಯವನ್ನು ಮೇಲಕ್ಕೆ ಚಿಮ್ಮಿಸಿದನು. ಎಲ್ಲರೂ ಕುತೂಹಲದಿಂದ ಅದು ಕೆಳಗೆ ಬೀಳುವುದನ್ನೇ ಕಾಯುತ್ತಿದ್ದರು. ನಾಣ್ಯ, ಮುಂಭಾಗ ಕಾಣುವಂತೆ ಕೆಳಗೆ ಬಿತ್ತು. ಸೈನಿಕರು ತಮ್ಮ ಎದೆಯಲ್ಲಿ ಭರವಸೆಯನ್ನು ತುಂಬಿಕೊಂಡು ವೀರಾವೇಶದಿಂದ ಶತ್ರುಗಳೊಂದಿಗೆ ಕಾದಿದರು. ಕಡೆಗೆ ಯುದ್ಧದಲ್ಲಿ ಗೆಲುವು ಸಾಧಿಸಿದರು. “ವಿಧಿಯನ್ನು ಯಾರೂ ಬದಲಾಯಿಸಲಾಗುವುದಿಲ್ಲ.” ಎಂದು ಒಬ್ಬ ಸೈನಿಕ ಸೈನ್ಯಾಧಿಕಾರಿಗೆ ಹೇಳಿದನು. “ನಿಜವಾಗಿಯೂ”, ಎನ್ನುತ್ತಾ ಸೈನ್ಯಾಧಿಕಾರಿಯು ನಾಣ್ಯವನ್ನು ಎಲ್ಲರಿಗೂ ತೋರಿಸಿದನು. ಅದರ