Posts

Showing posts from October, 2017

ದಿನಕ್ಕೊಂದು ಕಥೆ. 594

*🌻ದಿನಕ್ಕೊಂದು ಕಥೆ🌻                                          ಸೀರೆ ಕಟ್ಟಿದ್ದಾಳೆಂದು ಹಳ್ಳಿ ಹೆಂಗಸು ಎಂದು “ಸುಧಾ ಮೂರ್ತಿ”ಯನ್ನು ಹೀಯಾಳಿಸಿದರು..! ಅದಕ್ಕೆ ಅವರು ಕೊಟ್ಟ ಕೌಂಟರ್ ಹೈಲೈಟ್..!* ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಬಗ್ಗೆ ಗೊತ್ತಲ್ಲವೇ. ಇನ್ಫೋಸಿಸ್ ಕೋ ಫೌಂಡರ್ ನಾರಾಯಣ ಮೂರ್ತಿ ಅವರ ಧರ್ಮಪತ್ನಿ. ಇವರು ಗೇಟ್ಸ್ ಫೌಂಡೇಷನ್ ಕಾರ್ಯಕ್ರಮಗಳಲ್ಲೂ ಪಾಲುದಾರರಾಗಿದ್ದಾರೆ. ಆದರೆ ಸುಧಾಮೂರ್ತಿ ಒಂದು ಪುಸ್ತಕ ಬರೆದಿದ್ದಾರೆ. ತನ್ನ ಜೀವನದಲ್ಲಿ ನಡೆದ ಹಲವು ಸಂಗತಿಗಳನ್ನು ಅದರಲ್ಲಿ ಪ್ರಸ್ತಾಪಿಸಿದ್ದಾರೆ. “ಥ್ರಿ ತೌಸಂಡ್ ಸ್ಟಿಚೆಸ್: ಆರ್ಡಿನರಿ ಪೀಪಲ್, ಎಕ್ಸ್‌ಟ್ರಾ ಆರ್ಡಿನರಿ ಲೈಫ್” ಎಂಬ ಪುಸ್ತಕವನ್ನು ಬರೆದ ಅವರು ತನ್ನ ವಿಷಯಗಳನ್ನು ಅದರಲ್ಲಿ ತಿಳಿಸಿದ್ದಾರೆ. ಕೃತಿಯಲ್ಲಿ ತನ್ನ ಜೀವನದಲ್ಲಿ ನಡೆದ ಒಂದು ಮುಖ್ಯವಾದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಅದರ ಬಗ್ಗೆ ಈಗ ತಿಳಿದುಕೊಳ್ಳೋಣ. ಸುಧಾಮೂರ್ತಿ ಒಮ್ಮೆ ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದರು. ಅದಕ್ಕಾಗಿ ಬಿಜಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿಕೊಂಡಿದ್ದರು. ಹಾಗಾಗಿ ಲಂಡನ್‌ನ ಹೀತ್ರೂ ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಆದರೆ ಸಾಮಾನ್ಯವಾಗಿ ಅವರು ಸೀರೆಯನ್ನೇ ಉಡುತ್ತಾರೆ. ಪ್ರಯಾಣದಲ್ಲಿದ್ದರೆ ಚೂಡಿದಾರ ಹಾಕಿಕೊಳ್ಳುತ್ತಾರೆ. ಆ ಸಮಯದಲ್ಲಿ ಆ ಡ್ರೆಸ್ ಅನುಕೂಲಕರವಾಗಿರುತ್ತದೆಂದು ಅವರು ಭಾವಿಸಿದರು. ಹಾಗಾಗಿ ಆ ದ

ದಿನಕ್ಕೊಂದು ಕಥೆ. 593

*🌻ದಿನಕ್ಕೊಂದು ಕಥೆ🌻                                 ಚಕ್ರಧರ್ ಅಲಾ : ಬುಲೆಟ್​ ಟ್ರೈನಿಗೆ ಲೋಗೊ ರಚಿಸಿದ ವಿದ್ಯಾರ್ಥಿಯ ಕತೆ ಕೇಳಿ* ಹೈದರಾಬಾದ್ ನ ಈ ವಿದ್ಯಾರ್ಥಿ ಅಂತಿಮ ನಗೆ ಸೂಸುವ ಮುನ್ನ ಬರೋಬ್ಬರಿ 30 ಲೋಗೊ ವಿನ್ಯಾಸಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಒಂದರಲ್ಲಿಯೂ ವಿಜೇತರಾಗಿರಲಿಲ್ಲ. ಆದರೂ ನಿರುತ್ಸಾಹಗೊಳ್ಳದೆ 31ನೇ ಬಾರಿ ಮತ್ತೊಂದು ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ ಬಾರಿ ಅದೃಷ್ಟ ಅವರ ಕೈ ಹಿಡಿಯಿತು. ಮುಂಬೈ-ಅಹಮದಾಬಾದ್​ ನಡುವೆ ಚಿರತೆಯ ವೇಗದಲ್ಲಿ ಓಡಲಿರುವ ಬುಲೆಟ್​ ಟ್ರೈನಿಗೆ ಇವರು ರಚಿಸಿರುವ ಲೋಗೊ ಆಯ್ಕೆಗೊಂಡಿತು. ಮೋದಿ ಬುಲೆಟ್ ‍ಟ್ರೈನಿಗೆ ಅಹಮದಾಬಾದ್ ವಿದ್ಯಾರ್ಥಿ ರಚಿಸಿದ ಲೋಗೊ ಸೆಲೆಕ್ಟ್ ಆಯ್ತು! ಇದು ಚಕ್ರಧರ್​ ಆಲಾ ಎಂಬ ವಿದ್ಯಾರ್ಥಿಯ ಕತೆ. ಇವರು ನ್ಯಾಶನಲ್​ ಇನ್ಟಿಟ್ಯೂಟ್​ ಆಫ್​ ಡಿಸೈನ್​ನ ಎರಡನೇ ವರ್ಷದ ವಿದ್ಯಾರ್ಥಿ. ಇವರು ರಚಿಸಿರುವ ಚಿರತೆಯ ಲೋಗೊ ಇನ್ನು ಬುಲೆಟ್​ ಟ್ರೈನಿನ ಮೇಲೆ ರಾರಾಜಿಸಲಿದೆ. ರೈಲು ಸೇರಿದಂತೆ ಸರ್ಕಾರದ ಎಲ್ಲ ಬುಲೆಟ್​ ರೈಲು ದಾಖಲೆಗಳು, ನಿಲ್ದಾಣಗಳು, ಟಿಕೆಟ್​ಗಳ ಮೇಲೆ ನನ್ನ ವಿನ್ಯಾಸವನ್ನು ನೋಡಲು ಕಾತರಿಸುತ್ತಿದ್ದೇನೆ ಎಂದು ಚಕ್ರಧರ್​ ಅತ್ಯುತ್ಸಾಹದಿಂದ ಹೇಳುತ್ತಾರೆ. ಅಂದ ಹಾಗೆ ಬುಲೆಟ್​ ರೈಲು ತನ್ನ ಯಾನವನ್ನು 2022ರ ಆಗಸ್ಟ್​ನಿಂದ ಪ್ರಾರಂಭಿಸಲಿದೆ ಲೋಗೊ ಮ್ಯಾನ್ ಚಕ್ರಧರ್​ ಆಲಾ! ಲೋಗೊ ಬಗ್ಗೆ ಮಾತನಾಡುವ ಅವರು ಅದರ ಸಣ್ಣ ಸಣ್ಣ ವಿವರಗಳನ್ನು ಹ

ದಿನಕ್ಕೊಂದು ಕಥೆ. 592

*🌻ದಿನಕ್ಕೊಂದು ಕಥೆ🌻                                   ಇದೊಂದು ಹಿಜಡಾ ಜೀವನ ಚರಿತ್ರೆ.! ಆತನದ್ದೇ ನಿಜವಾದ ಗಂಡಸುತನ.* ಗಂಡು ಮಗು ಹುಟ್ಟಿದಾಕ್ಷಣ… ದೊಡ್ಡವನಾದಮೇಲೆ ನನ್ನ ಮಗನಿಗೆ ನಿನ್ನ ಮಗಳನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಆ ಹುಡುಗನ ತಂದೆ ತನ್ನ ತಂಗಿಗೆ ಮಾತುಕೊಟ್ಟ. ಮಗ ಬೆಳೆದು ದೊಡ್ಡವನಾಗುತಿದ್ದಾನೆ. ಅಷ್ಟರಲ್ಲೇ ಹುಡುಗನ ಅತ್ತೆಗೆ ಮಗಳು ಹುಟ್ಟುತ್ತಾಳೆ. ಬೆಳೆದು ದೊಡ್ಡವಳಾಗುತ್ತಾಳೆ. ಇನ್ನೇನಿದೆ ಮೊದಲೇ ಮಾತು ಕೊಟ್ಟಾಗಿದೆ. ಈಗ ನೇರವಾಗಿ ಹೇಳುತ್ತಿದ್ದಾರೆ ನೀನು ಮದುವೆಯಾಗುವುದು ನಿನ್ನ ಮಾವನನ್ನೇ ಎಂದು ಹುಡಿಗಿಯೊಡನೆ,ನಿನ್ನ ಸೋದರತ್ತೆಯ ಮಗಳನ್ನೇ ಎಂದು ಹುಡುಗನಿಗೆ ಹೇಳಿ ಎಲ್ಲರೂ ತಮಾಷೆ ಮಾಡುತ್ತಿದ್ದಾರೆ. ಹುಡುಗಿಗೆ ಹುಡುಗ ಕೂಡಾ ಇಷ್ಟವಾಗಿದ್ದಾನೆ.ಇನ್ನುಳಿದಿರುವುದು ಕೇವಲ ಮದುವೆ ಮಾತ್ರ. ಆದರೆ…ಹುಡುಗ ಮಾತ್ರ ನನಗೆ ವಯಸ್ಸಾಗುತ್ತಿದ್ದರೂ ಶರೀರದಲ್ಲಿ ಬದಲಾವಣೆಗಳು ಆಗದಿರುವುದನ್ನು ಗಮನಿಸಿದ. ತನ್ನ ಸಹಪಾಟಿಗಳ ಪ್ರವರ್ತನೆಗೂ ತನ್ನ ಪ್ರವರ್ತನೆಗೂ ವ್ಯತ್ಯಾಸವಿರುವುದನ್ನು ಗಮನಿಸುತ್ತಾನೆ. ಕೊನೆಗೆ ತಾನೊಬ್ಬ ಹಿಜಡಾ ಎಂದು ಆತನಿಗೆ ತಿಳಿಯುತ್ತದೆ. ಈ ವಿಷಯವನ್ನು ಇತರರಿಗೆ ಹೇಳದೆ ತನ್ನಲ್ಲೇ ಅದುಮಿಟ್ಟುಕೊಂಡು ನರಕಯಾತನೆಯನ್ನು ಅನುಭವಿಸುತ್ತಿದ್ದಾನೆ. ಹೇಗಾದರೂ ಸರಿ,ತನ್ನ ತಂದೆ ತಾಯಿಗಳಿಗೆ ಈ ವಿಷಯವನ್ನು ತಿಳಿಸಬೇಕೆಂದುಕೊಳ್ಳುತ್ತನೆ. ಆದರೆ,ಅವರದು ಸಂಪ್ರದಾಯ ಕುಟುಂಬ… ಇದು ಸಾಲದೆಂಬಂತೆ,ಹುಡುಗನ ಮ

ದಿನಕ್ಕೊಂದು ಕಥೆ. 591

*🌻ದಿನಕ್ಕೊಂದು ಕಥೆ🌻                            ಒಂದು ಕಾಲದಲ್ಲಿ ಬಾರ್ ನಲ್ಲಿ ಸಪ್ಲೈಯರ್ ಆಗಿದ್ದ ಹುಡುಗ ಇಂದು ದೇಶದ ಹೆಮ್ಮೆಯ ಖಡಕ್ ಐಪಿಎಸ್ ಆಫೀಸರ್*. ಅವರು ಚಿಕ್ಕಂದಿನಲ್ಲಿಯೇ ಐಪಿಎಸ್ ಆಫೀಸರ್ ಆಗೋ ಕನಸು ಕಂಡವರು. ಕನಸು ಕಂಡರೇನು ಬಂತು, ಆ ಕನಸು ನನಸಾಗಲು ಪೂರಕ ವಾತಾವರಣವೂ ಬೇಕಲ್ವಾ? ದುಡ್ಡಿನ ಜಮಾನದಲ್ಲಿ ಕನಸುಗಳ ಸಾಕಾರಕ್ಕೆ ದುಡ್ಡು ಬೇಕೇ ಬೇಕು. ಅದೇ ದುಡ್ಡು ದೊಡ್ಡ ಕನಸಿನ ಮೂಟೆಯನ್ನು ಹೊತ್ತಿದ್ದ ಆ ಹುಡುಗನ ಗುರಿಗೂ ಅಡ್ಡಿ ಆಗುತ್ತೆ, ಆದರೂ ಛಲ ಬಿಡದೆ ಕಷ್ಟಪಟ್ಟು ಓದ್ತಾರೆ, ಕೊನೆಗೂ ಅಂದುಕೊಂಡಿದ್ದನ್ನು ಸಾದಿಸಿ ಬಿಡುತ್ತಾರೆ… ಹೌದು, ಈಗ ನಿಮ್ಮ ತಲೆಯಲ್ಲಿ ಬಂದಿರುವ ಯೋಚನೆ ಸರಿ, ಅವರು ಬೇರೆ ಯಾರೂ ಅಲ್ಲ ಒನ್ ಅಂಡ್ ಓನ್ಲಿ “ರವಿ ಡಿ ಚೆನ್ನಣ್ಣನವರ್” ಐಪಿಎಸ್ ಆಫೀಸರ್. ಅಂದು ಬಾರ್ ಸಪ್ಲೇಯರ್ ಆಗಿ, ಹಮಾಲಿಯಾಗಿ, ಕಸ ಗುಡಿಸುವವನಾಗಿ ಕಷ್ಟ ಪಟ್ಟಿದ್ದ ರವಿ ದ್ಯಾಮಪ್ಪ ಚೆನ್ನಣ್ಣನವರ್ ಇಂದು ರೌಡಿಗಳ, ದಂಧೆಕೋರರ ಪುಡಾರಿಗಳ ಪಾಲಿಗೆ ದುಸ್ವಪ್ನ..! ಆ ಸಾಧಕ ಇವತ್ತು ದುಷ್ಟರ ಪಾಲಿಗೆ ಸಿಂಹಸ್ವಪ್ನ, ಆತ ಎದುರು ನಿಂತ ಅಂದ್ರೆ ಒಂದಷ್ಟು ಜನ ಗಡಗಡ ನಡಗ್ತಾರೆ. ಸಜ್ಜನರು, ನೀನು ನೂರುಕಾಲ ಚೆನ್ನಾಗಿ ಬಾಳಪ್ಪ ಅಂತ ಮನತುಂಬಿ ಹರಸುತ್ತಾರೆ. ಈ “ಗ್ರೇಟ್ ಮ್ಯಾನ್ ಆಫ್ ಇಂಡಿಯಾ ಫ್ರಮ್ ಉತ್ತರ ಕರ್ನಾಟಕ”, ಬೆಳೆದು ಬಂದ ಹಾದಿ ಇದೆಯಲ್ಲಾ ಅದು ಪ್ರತಿಯೊಬ್ಬ ಯುವಕನಿಗೂ ಸ್ಪೂರ್ತಿ! ಅವರ್ಯಾರು ಅನ್ನೋ ಮೊದಲು ಅವರ ಸ್ಟೋರಿ ಹೇಳ್ತ

ದಿನಕ್ಕೊಂದು ಕಥೆ. 590

ನಮ್ಮ ರಾಷ್ಟ್ರ ಭಕ್ತಿ .                                            ನಿನ್ನೆ ರಿಪಬ್ಲಿಕ್ ಟಿವಿಯಲ್ಲಿ ಒಂದು ಡಿಬೇಟ್ ನಡೀತಾಯಿತ್ತು ಕುತೂಹಲ ತಡಿಯಲಾರದೆ ಒಂದ್ ಅರ್ಧ ಗಂಟೆ ನೋಡಿದೆ. ಆ ಡಿಬೇಟಲ್ಲಿ ಒಂದ್ 6 ಜನ ಭಾಗವಹಿಸಿದ್ದರು ಅದರಲ್ಲಿ 3 ಜನ ಪರ ಇನ್ನುಳಿದ 3 ಜನ ವಿರೋಧ . ವಿಷಯ ಏನಂದ್ರೆ ಚಿತ್ರಮಂದಿರದಲ್ಲಿ ಪ್ರಸಾರವಾಗೋ ರಾಷ್ಟ್ರಗೀತೆಗೆ ಎದ್ದು ಗೌರವ ಸೂಚಿಸೋದು ಕಡ್ಡಾಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಬಗ್ಗೆ. ಸಿನೆಮಾ ಮಂದಿರಗಳಲ್ಲಿ  ನಮ್ಮ ರಾಷ್ಟ್ರಗೀತೆ ಪ್ರಸಾರ ಮಾಡಬೇಕೋ ಬೇಡವೋ ಒಂದು ವೇಳೆ ಪ್ರಸಾರ ಮಾಡಿದ್ರು ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಕ್ಕೂ ಪರ ವಿರೋಧ ಚರ್ಚೆಗಳು ನಡೀತಾಯಿದ್ದವೂ. ಇಲ್ಲಿ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಬೇಡಾ ಅನ್ನೋರ ವಾದ ಏನಂದ್ರೆ ಬಾಹ್ಯ ಒತ್ತಡದಿಂದ ನಮ್ಮ ರಾಷ್ಟ್ರಭಕ್ತಿ ತೋರಿಸುವ ಅಗತ್ಯವಿಲ್ಲ . ನಾವೂ ಬೇಕಂದ್ರೆ ನಿಲ್ತಿವಿ ಇಲ್ಲಾ ಅಂದ್ರೆ ಇಲ್ಲಾ ಅನ್ನೋದು ಅವರ ವಾದವಾಗಿತ್ತು. ಅವರನ್ನ ನೋಡಿ ನನಗೆ ಒಂದು ಕಥೆ ಜ್ಞಾಪಕಕ್ಕೆ ಬರ್ತಾಯಿದೆ ಇದನ್ನ ಮುಂಚೆನೆ ಒಂದ್ ಸರಿ ಪೋಸ್ಟ್ ಮಾಡಿದ್ದೆ. ಜಪಾನ್ ದೇಶದ ಒಂದೂ ಚಿಕ್ಕ ಪಟ್ಟಣದಲ್ಲಿ ಒಬ್ಬ  ಶ್ರೀಮಂತನಿದ್ದ. ಅವನೂ ಒಂದು ದೊಡ್ಡ ಮನೆಯಲ್ಲಿ ಅವನೊಬ್ಬನೇ ವಾಸವಾಗಿದ್ದ . ಅವನಿಗೆ ದುಡ್ಡಿನ ಬಗ್ಗೆ ತುಂಬಾ ವ್ಯಾಮೋಹವಿತ್ತು. ಒಂದೂ ರಾತ್ರಿ ಅವನು ಮಲಗಿದ್ದ ಬೆಳಗ್ಗಿನ ಜಾವದಲ್ಲಿ ಅವನ ಮನ