ದಿನಕ್ಕೊಂದು ಕಥೆ. 594

*🌻ದಿನಕ್ಕೊಂದು ಕಥೆ🌻                                          ಸೀರೆ ಕಟ್ಟಿದ್ದಾಳೆಂದು ಹಳ್ಳಿ ಹೆಂಗಸು ಎಂದು “ಸುಧಾ ಮೂರ್ತಿ”ಯನ್ನು ಹೀಯಾಳಿಸಿದರು..! ಅದಕ್ಕೆ ಅವರು ಕೊಟ್ಟ ಕೌಂಟರ್ ಹೈಲೈಟ್..!*

ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಬಗ್ಗೆ ಗೊತ್ತಲ್ಲವೇ. ಇನ್ಫೋಸಿಸ್ ಕೋ ಫೌಂಡರ್ ನಾರಾಯಣ ಮೂರ್ತಿ ಅವರ ಧರ್ಮಪತ್ನಿ. ಇವರು ಗೇಟ್ಸ್ ಫೌಂಡೇಷನ್ ಕಾರ್ಯಕ್ರಮಗಳಲ್ಲೂ ಪಾಲುದಾರರಾಗಿದ್ದಾರೆ. ಆದರೆ ಸುಧಾಮೂರ್ತಿ ಒಂದು ಪುಸ್ತಕ ಬರೆದಿದ್ದಾರೆ. ತನ್ನ ಜೀವನದಲ್ಲಿ ನಡೆದ ಹಲವು ಸಂಗತಿಗಳನ್ನು ಅದರಲ್ಲಿ ಪ್ರಸ್ತಾಪಿಸಿದ್ದಾರೆ. “ಥ್ರಿ ತೌಸಂಡ್ ಸ್ಟಿಚೆಸ್: ಆರ್ಡಿನರಿ ಪೀಪಲ್, ಎಕ್ಸ್‌ಟ್ರಾ ಆರ್ಡಿನರಿ ಲೈಫ್” ಎಂಬ ಪುಸ್ತಕವನ್ನು ಬರೆದ ಅವರು ತನ್ನ ವಿಷಯಗಳನ್ನು ಅದರಲ್ಲಿ ತಿಳಿಸಿದ್ದಾರೆ. ಕೃತಿಯಲ್ಲಿ ತನ್ನ ಜೀವನದಲ್ಲಿ ನಡೆದ ಒಂದು ಮುಖ್ಯವಾದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಅದರ ಬಗ್ಗೆ ಈಗ ತಿಳಿದುಕೊಳ್ಳೋಣ.

ಸುಧಾಮೂರ್ತಿ ಒಮ್ಮೆ ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದರು. ಅದಕ್ಕಾಗಿ ಬಿಜಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿಕೊಂಡಿದ್ದರು. ಹಾಗಾಗಿ ಲಂಡನ್‌ನ ಹೀತ್ರೂ ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಆದರೆ ಸಾಮಾನ್ಯವಾಗಿ ಅವರು ಸೀರೆಯನ್ನೇ ಉಡುತ್ತಾರೆ. ಪ್ರಯಾಣದಲ್ಲಿದ್ದರೆ ಚೂಡಿದಾರ ಹಾಕಿಕೊಳ್ಳುತ್ತಾರೆ. ಆ ಸಮಯದಲ್ಲಿ ಆ ಡ್ರೆಸ್ ಅನುಕೂಲಕರವಾಗಿರುತ್ತದೆಂದು ಅವರು ಭಾವಿಸಿದರು. ಹಾಗಾಗಿ ಆ ದಿನ ಚೂಡಿದಾರ ಉಟ್ಟಿದ್ದರು. ನೋಡಲು ತುಂಬಾ ಸರಳವಾಗಿರುತ್ತಾರೆ. ಅವರ ಡ್ರೆಸ್ಸಿಂಗ್ ಸಹ ಯಾವಾಗಲೂ ಅದೇ ರೀತಿ ಇರುತ್ತದೆ. ಅಂದು ತೊಟ್ಟಿದ್ದ ಚೂಡಿದಾರ ಸಹ ಅಂತಹ ದುಬಾರಿಯದ್ದೇನು ಆಗಿರಲಿಲ್ಲ. ಆ ರೀತಿ ಆಕೆ ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಸ್ವಲ್ಪ ಸಮಯ ವೆಯ್ಟ್ ಮಾಡಿದರು. ಬಳಿಕ ಬೋರ್ಡಿಂಗ್ ಪಾಸ್ ತೆಗೆದುಕೊಂಡು ವಿಮಾನ ಹತ್ತಲು ಸಾಲಿನಲ್ಲಿ ನಿಂತರು.

ಅವರ ಮುಂದೆ ನಿಂತಿದ್ದ ಒಬ್ಬಾಕೆ…ಹೋಗಮ್ಮಾ ಹೋಗು ಇದು ಬಿಝಿನೆಸ್ ಕ್ಲಾಸ್, ನೀನು ನಿಂತುಕೊಳ್ಳಬೇಕಾದ ಎಕನಾಮಿಕ್ ಕ್ಲಾಸ್ ಅಲ್ಲಿದೆ ನೋಡು ಅಲ್ಲಿಗೆ ಹೋಗು ಎಂದು ತಿರಸ್ಕಾರವಾಗಿ ಮಾತನಾಡಿದ ಆಕೆಯನ್ನು ನೋಡಿ ಏನೂ ಮಾತನಾಡದೆ ಸೈಲೆಂಟ್ ಆಗಿ ಇದ್ದರು ಸುಧಾಮೂರ್ತಿ.ಅತ್ತ ಹೋಗಿ ನಿಂತುಕೊಳ್ಳಿ ಎಂದಾಕೆ ನೋಡಲು ನೀಟಾಗಿ ಡ್ರೆಸ್ ಮಾಡಿಕೊಂಡಿದ್ದಳು. ಕಟ್ ಮಾಡಿದರೆ ಅದೇ ದಿನ ಸಂಜೆ ಸದರಿ ಹೈಹೀಲ್ಸ್ ಹಾಕಿಕೊಂಡ ಮಹಿಳೆ ಹಾಜರಾದ ಸೆಮಿನಾರ್‌ ನಿರ್ವಹಿಸಿದ್ದು ಏರ್‌ಪೋರ್ಟ್‌ನಲ್ಲಿ ಸಾದಾಸೀದ ಸಲ್ವಾರ್ ಕಮೀಜ್ ಧರಿಸಿದ್ದ ಆ ಮಹಿಳೆ.

ಇನ್ಫೋಸಿಸ್ ಫೌಂಡೇಷನ್ ಚೇರ್ಮನ್, ಬರಹಗಾರ್ತಿ ಸುಧಾಮೂರ್ತಿ ಬರೆದಿರುವ ’ತ್ರಿ ಥೌಸಂಡ್ ಸ್ಟಿಚಸ್’ ಪುಸ್ತಕದಲ್ಲಿ ತನಗೆ ಎದುರಾದ ಆಸಕ್ತಿಕರವಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬಟ್ಟೆ, ಆಹಾರದ ಬಗ್ಗೆ ಮೂಲಭೂತವಾದ ಭಾವನೆಗಳನ್ನು ಖಂಡಿಸುತ್ತಾ ಅವರಿಗೆ ಎದುರಾದ ಅನುಭವಗಳನ್ನು ಮೆಲುಕುಹಾಕಿದ್ದಾರೆ. “ಎಕಾನಮಿ ಕ್ಲಾಸ್ ಅತ್ತಕಡೆ…ಇದು ಬಿಝಿನೆಸ್ ಕ್ಲಾಸ್” ಎಂದು ಸೂಚಿಸಿದ್ದರು. ಸುಧಾಮೂರ್ತಿ ಅದನ್ನ ಕೇರ್ ಮಾಡದೆ ಕ್ಯೂನಲ್ಲಿ ಇರುವುದನ್ನು ನೋಡಿ “ಹೇಳ್ತಿದ್ದರೆ ಅರ್ಥಾವಾಗುತ್ತಿಲ್ಲವೇ” ಎಂದು ಮತ್ತೊಮ್ಮೆ ಜೋರು ಮಾಡಿದ್ದಳು ಆಕೆ.

ಕಡೆಗೆ ವಿಮಾನದ ಒಳಗೆ ಬಂದ ಸುಧಾಮೂರ್ತಿ ಆ ಮಹಿಳೆ ಬಳಿ ಹೋಗಿ….ನಾನು ಹಳ್ಳಿಯವಳೇ. ಆದರೆ ನೀವು ಮಾತ್ರ ಕ್ಲಾಸ್ ಮಹಿಳೆಯರಲ್ಲ. ಒಬ್ಬ ಮನುಷ್ಯನಿಗೆ ಕ್ಲಾಸ್ ಎಂಬುದು ಅವರು ಸಂಪಾದಿಸುವ ಹಣ, ಅಲಂಕಾರದಿಂದ ಬರಲ್ಲ. ತಾನು ಮಾಡುವ ಒಳ್ಳೆಯ ಕೆಲಸಗಳಿಂದ ಬರುತ್ತದೆ. ಅಷ್ಟೇ ಹೊರತು ಅದನ್ನು ಹಣ ತಂದುಕೊಡಲ್ಲ..ಎಂದು ಹೇಳಿ ಅಲ್ಲಿಂದ ಹೊರಟು ಹೋದರು..! ಸುಧಾಮೂರ್ತಿ ಕೊಟ್ಟ ಕೌಂಟರ್‌ಗೆ ಆ ಮಹಿಳೆ ಏನು ಮಾತನಾಡಬೇಕೋ ಅರ್ಥವಾಗಲಿಲ್ಲ. ಹೌದಲ್ಲವೇ ಸುಧಾಮೂರ್ತಿ ಹೇಳಿದ್ದು ಸತ್ಯ. ಹಣದಿಂದ ಗುಣ ಬರುತ್ತಾ, ಕ್ಲಾಸ್ ಆಗಿ ಇರುತ್ತಾರಾ.? ಅದು ಸ್ವತಃ ಬರಬೇಕು, ಅವರು ಮಾಡುವ ಕೆಲಸಗಳನ್ನು ಅವಲಂಭಿಸಿ ಅದು ಇರುತ್ತದೆ..!

’ಕ್ಲಾಸ್’ ಎಂದರೆ ಕೇವಲ ಹಣ ಇರುವುದಲ್ಲ, ನೋಬೆಲ್ ಪುರಸ್ಕೃತ ಮದರ್ ಥೆರೇಸಾ, ಗಣಿತಶಾಸ್ತ್ರಜ್ಞೆ ಮಂಜುಲಾ ಭಾರ್ಗವಿ ಇಬ್ಬರೂ ’ಕ್ಲಾಸಿ’ ಮಹಿಳೆಯರೇ ಎಂದಿದ್ದಾರೆ ಸುಧಾಮೂರ್ತಿ. ನಿರಾಡಂಬರವಾಗಿ ಇದ್ದರೂ ಅವರ ದೊಡ್ಡತನ ಅವರಿಗಿತ್ತು. ಕೇವಲ ಹಣ ಇದ್ದರೆ ಮಾತ್ರ ಉನ್ನತ ಸ್ಥಾನದಲ್ಲಿದ್ದೇವೆಂಬುದು ಹಳೆ ಕಾಲದ ಮೂಲಭೂತವಾದಿ ಧೋರಣೆಗೆ ನಿದರ್ಶನ ಎಂದು ಸುಧಾಮೂರ್ತಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಆ ದಿನ ತನಗೆ ಎದುರಾದ ಅನುಭವ ತನ್ನಲ್ಲಿ ಆಕ್ರೋಶಕ್ಕಿಂತ ನೋವುಂಟು ಮಾಡಿತು ಎಂದಿದ್ದಾರೆ.

ಕೃಪೆ:Kannada+.                                ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097