Posts

Showing posts from August, 2016

ದಿನಕ್ಕೊಂದು ಕಥೆ. 100

💐ದಿನಕ್ಕೊಂದು ಕಥೆ💐 👝ಅನಂತರೂಪ👝 ನಮ್ಮ ಜೀವನ ಅಮೂಲ್ಯವಾದುದು. ನಮ್ಮ ಸುತ್ತಮುತ್ತ ವಿಶಾಲವಾದ ವಿಶ್ವ ಹರಡಿಕೊಂಡಿದೆ. ಇಲ್ಲಿ ಅಸಂಖ್ಯ ಜೀವರಾಶಿಗಳು ಬದುಕಿವೆ. ಅವುಗಳ ಮಧ್ಯದಲ್ಲಿ ನಾವು ನಮ್ಮ ನೂರು ವಸಂತಗಳ ಸಂತಸದ ಬದುಕನ್ನು ಕಟ್ಟಿಕೊಳ್ಳಬೇಕು. ಆದರೆ ಸಂತಸದ ಬದುಕಿನ ಸೂತ್ರ ಯಾವುದು ಎಂಬುದೇ ದೊಡ್ಡ ಪ್ರಶ್ನೆ. ಇದು ಇಂದು ನಿನ್ನಿನ ಪ್ರಶ್ನೆಯಲ್ಲ. ಸಾವಿರ ಸಾವಿರ ವರುಷಗಳ ಹಿಂದಿನ ಪುರಾತನ ಪ್ರಶ್ನೆ ಇದು. ಮಾನವ ಜೀವನದ ದುಃಖವನ್ನು ಕಳೆಯುವುದು ಹೇಗೆ ಎನ್ನುವುದೆ ಬುದ್ಧನು ಎದುರಿಸಿದ ಪ್ರಶ್ನೆ. ಈ ಮಾಯಾಸಂಸಾರ ಸಾಗರವನ್ನು ದಾಟುವುದು ಹೇಗೆ? ಎನ್ನುವುದೆ ಶಂಕರಾಚಾರ್ಯರು ಎದುರಿಸಿದ ಮಹಾಪ್ರಶ್ನೆ. ಈ ಜಗತ್ತಿನಲ್ಲಿರುವ ಹಿಂಸೆಯನ್ನು ಕಳೆಯುವುದು ಹೇಗೆ ಎನ್ನುವುದು ಮಹಾವೀರರು ಎದುರಿಸಿದ ಮಹಾಪ್ರಶ್ನೆ. ಈ ಪ್ರಶ್ನೆಗಳ ಪರಿಹಾರಕ್ಕಾಗಿಯೇ ಅವರು ತಮ್ಮ ಬದುಕನ್ನು ಮೀಸಲಾಗಿಟ್ಟರು. ಅವರ ಆ ಪವಿತ್ರವಾದ ಬದುಕೇ ಬೋಧೆಯಾಯಿತು, ಜಗತ್ತಿಗೆ ದಿವ್ಯಸಂದೇಶ ನೀಡಿತು. ದೇವರು ನಮಗೆ ಕರುಣಿಸಿರುವ ಈ ತನು, ಮನ, ಬುದ್ಧಿಯ ಸಾಮರ್ಥ್ಯ‌ ಸಾಮಾನ್ಯವಾದುದಲ್ಲ. ಅದರಲ್ಲೂ ಮನಸ್ಸಿನ ಸಾಮರ್ಥ್ಯ‌ವಂತೂ ಕಲ್ಪನಾತೀತವಾದುದು. ಬುದ್ಧ, ಬಸವ, ಮಹಾವೀರ ಮೊದಲಾದ ಮಹಾತ್ಮರನ್ನು ಜಗದ್ವಂದ್ಯರನ್ನಾಗಿ ಮಾಡಿದ್ದು ಇದೇ ಮನಸ್ಸು. ಈ ಮನಸ್ಸು ಸುಂದರವಾದರೆ ನಮ್ಮ ಬದುಕೂ ಸುಂದರ ಈ ಮನಸ್ಸು ಕುರೂಪವಾದರೆ ನಮ್ಮ ಬದುಕೂ ಕುರೂಪ! ಯಾರ ಮನಸ್ಸು ಸದಾ ನಗುನಗುತಲಿರುವುದೋ ಅವರು ಮಾನವರ

ದಿನಕ್ಕೊಂದು ಕಥೆ 99

🌻🌻 *ಇದೊಂದು ಸ್ಪೂರ್ತಿದಾಯಕ ಕಥೆ:*🌻🌻 ಹೇಗೆ ಸೊಷಿಯಲ್‌ ಮಿಡಿಯಾದಲ್ಲಿ ಹೆಚ್ಚು ನೆಗೆಟಿವ್ ವಿಚಾರಗಳು ಹರಿದಾಡುತ್ತವೆಯೋ ಮನಸ್ಸಿನಲ್ಲಿ ಕೂಡಾ ಹಾಗೆಯೇ. ಆದರೆ ಆಗೀಗ ಬಂದು ಹೋಗುವ ಪಾಸಿಟಿವ್ ವಿಚಾರಗಳು ಅದೆಷ್ಟು ಬಲವನ್ನು ಕೊಡುತ್ತವೆ ಅಲ್ಲವೇ? ಫ್ರಾನ್ಸಿನ ಈ ಮುಸ್ಲಿಂ ಮಹಿಳೆ ಜೀವನದಲ್ಲಿ ಏನಾದರೂ ಮಾಡಿ ತೋರಿಸಬೇಕು ಎನ್ನುವವರಿಗೆ ಅದೆಷ್ಟು ಪ್ರೇರಣೆ! ಇವಳ ಹೆಸರು Najat Vallaud-Belkacem. ಇಂದು ಇವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ. ಶಿಕ್ಷಣ ಇಲಾಖೆಗೆ ಮಂತ್ರಿಯಾಗಿ ಬಂದ ಮೊದಲ ಮಹಿಳೆಯಂತೆ. ಎಲ್ಲಾ ಹೌದು, ವಿಶೇಷ ಏನು? ಅದೇಕೆ ಪ್ರೇರಣೆ? ಇವಳ ತಂದೆ ತಾಯಿ ಆಗರ್ಭ ಶ್ರೀಮಂತರಲ್ಲ, ಕಡು ಬಡವರು. ತಂದೆ ಕನ್ಸ್ಟ್ರಕ್ಷನ್ ಕೆಲಸದ ಒಬ್ಬ ಕೆಲಸಗಾರ. ಮನೆಗೆ ನೆರವಾಗಲು ನಜತ್ ಚಿಕ್ಕಂದಿನಿಂದಲಿ ಕುರಿ ಕಾಯುವ ಕೆಲಸ ಮಾಡುತ್ತಿದ್ದಳಂತೆ. ನಂತರ ಕುಟುಂಬ ಹೊಟ್ಟೆ ಪಾಡಿಗೆ ಫ್ರಾನ್ಸಿಗೆ ವಲಸೆ ಬಂದಾಗ ಆಕೆಗೆ ಇನ್ನೂ ಚಿಕ್ಕ ವಯಸ್ಸು. ಅದು ಎಷ್ಟು ಪರಿಶ್ರಮದಿಂದ ಕಲಿತಳೋ ಅವಳಿಗೇ ಗೊತ್ತು. ಯಾವುದೇ ಸಹಾಯವಿಲ್ಲದೇ ಸ್ವಪ್ರಯತ್ನದಿಂದ ಫ್ರೆಂಚ್ ಕಲಿತು, ಪ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕಲ್ ಸೈನ್ಸ್’ನಿಂದ ಪದವಿ ಪಡೆದಳು. ನಂತರದಲ್ಲಿ ಸೋಷಿಯಲಿಸ್ಟ್ ಪಾರ್ಟಿಗೆ ಸೇರಿ ತನ್ನ ರಾಜಕೀಯ ಜೀವನ ಶುರು ಮಾಡಿದಳು. ಇಂದು ಅವಳಿಗೆ ಬರೀ ಮೂವತ್ತೆಂಟು ವರ್ಷ, ಅವಳು ಫ್ರಾನ್ಸ್ ದೇಶದ ಶಿಕ್ಷಣ ಮಂತ್ರಿ! ಅವಳ ಜಾತಿ, ಬಡತನ, ಶೋಷಣೆ ಎಷ್ಟು ಎದುರಾದರೂ ಸೋಲ

ದಿನಕ್ಕೊಂದು ಕಥೆ 98

        💐ದಿನಕ್ಕೊಂದು ಕಥೆ💐.                                                            ಪೂರ್ತಿ ಓದಿ ಬ್ಯೂಟಿಫುಲ್ ಮನಸುಗಳಿಗೆ ಹಂಚಿಕೊಳ್ಳಿ.. 50 ಜನರ ಒಂದು ಗುಂಪು ಸೆಮಿನಾರ್ ನಲ್ಲಿ ಭಾಗವಹಿಸಿತ್ತು. ಸಭಾಧ್ಯಕ್ಷರು ತಮ್ಮ ಮಾತನ್ನು ನಿಲ್ಲಿಸಿ ಪ್ರತಿಯೊಬ್ಬರಿಗೂ ಗಾಳಿ ತುಂಬಿದ್ದ ಬಲೂನ್ ಗಳನ್ನು ಕೊಟ್ಟು ಅದರಲ್ಲಿ ತಮ್ಮ ತಮ್ಮ ಹೆಸರುಗಳನ್ನು ಬರೆದು ಕೊಡಲು ಹೇಳಿದರು, ಪ್ರತಿಯೊಬ್ಬರು ತಮ್ಮ ಹೆಸರನ್ನು ಬರೆದು ಕೊಟ್ಟರು, ಆ ಬಲೂನ್ ಗಳನ್ನು ಒಂದು ರೂಮಿನಲ್ಲಿ ತುಂಬಿ 5 ನಿಮಿಷದ ಒಳಗೆ ತಮ್ಮ ತಮ್ಮ ಹೆಸರು ಬರೆದಿರುವ ಬಲೂನ್ ಗಳನ್ನು ಹುಡುಕಲು ಹೇಳಿದರು. ಎಲ್ಲರು ತಮ್ಮ ಹೆಸರಿರುವ ಬಲೂನ್ ಗಳನ್ನು ಹುಡುಕುತ್ತಿದ್ದರು 4 ನಿಮಿಷಗಳು ಕಳೆದರು ಯಾರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಹುಡುಕಲು ಆಗಲಿಲ್ಲ. 5 ನಿಮಿಷ ಕಳೆಯುದರೊಳಗೆ ಎಲ್ಲರ ಕೈಯಲ್ಲೂ ತಮ್ಮ ತಮ್ಮ ಹೆಸರಿನ ಬಲೂನ್ ಗಳಿದ್ದವು. 4 ನಿಮಿಷಗಳವರೆಗೆ ಹುಡುಕಿದರು ಸಿಗದಿದ್ದ ಬಲೂನ್ ಕೊನೆಯ 1 ನಿಮಿಷದಲ್ಲಿ ಹೇಗೆ ಸಿಕ್ಕಿತೆಂದು ನಿಮಗೆ ಆಶ್ಚರ್ಯವಾಗಬಹುದು, ಅದು ಹೇಗೆಂದರೆ ಮೊದಲ 4 ನಿಮಿಷಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಮಾತ್ರ ಹುಡುಕುತ್ತಿದ್ದರು, ಆದರೆ ಕೊನೆಯ 1 ನಿಮಿಷದಲ್ಲಿ ತಮಗೆ ಸಿಕ್ಕ ಬೇರೆ ಹೆಸರಿನ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ನೀಡುತ್ತಿದ್ದರು, ಎಲ್ಲರಿಗೂ ಬೇರೆ ಹೆಸರಿನ ಬಲೂನ್ ಗಳೆ ಸಿಕ್ಕವು, ಸಿಕ್ಕ ಬಲೂನ್ ಗಳ

ದಿನಕ್ಕೊಂದು ಕಥೆ. 97

     💐ದಿನಕ್ಕೊಂದು ಕಥೆ💐                                            ಕಸಾಯಿಖಾನೆಯಲ್ಲಿ ಒಬ್ಬ ಕಟುಕ ಹಸುವನ್ನು ಕೊಲ್ಲಲು ಬಂದಾಗ ಹಸುವು ಕಟುಕನನ್ನು ನೋಡಿ ನಗುತ್ತಿತ್ತು… . . . ಇದನ್ನ ನೋಡಿ ಕಟುಕ ಹೇಳಿದ… ನಾನು ನಿನ್ನನ್ನು ಕೊಲ್ಲಲು ಬಂದಿದ್ದೇನೆ. ಅದನ್ನು  ತಿಳಿದು ನೀನು   ಏಕೆ ಹೀಗೆ ನಗುತ್ತಿರುವೆ…? . . . . . ಹಸು ಹೇಳಿತು: ನಾನು ಯಾವತ್ತಿಗೂ ಮಾಂಸವನ್ನು ತಿಂದಿಲ್ಲ,  ಹಾಗಿದ್ದೂ ನನ್ನ ಸಾವು ಇಷ್ಟು ಘೋರವಾಗಿದೆ. ತಪ್ಪು ಮಾಡದ ಯಾರಿಗೂ ಕೆಡಕು ಮಾಡದ ನನ್ನನ್ನು ನೀನು ಕೊಂದು ನನ್ನ ಮಾಂಸವನ್ನು ತಿನ್ನುವ ನಿನ್ನ ಸಾವು ಎಷ್ಟು  ಘೋರವಾಗಿರುವುದೋ ಎನ್ನುವುದನ್ನು ಯೋಚಿಸಿ ನಾನು ನಗುತ್ತಿದ್ದಿನಿ… ಹಾಲು ಕೊಟ್ಟು ನಿಮ್ಮನ್ನು ಬೆಳೆಸಿದೆ, ನಿಮ್ಮ ಮಕ್ಕಳಿಗೂ ಹಾಲು ಕೊಡುತ್ತಿದ್ದ್ದೀನಿ, ಆದರೆ ನಾನು ತಿನ್ನುತ್ತಿದ್ದದ್ದು ಮಾತ್ರ   ಹುಲ್ಲು, ಹಾಲಿನಿಂದ ಬೆಣ್ಣೆ ಮಾಡಿಕೊಂಡಿರಿ, ಬೆಣ್ಣೆಯಿಂದ ತುಪ್ಪ ಮಾಡಿಕೊಂಡಿರಿ, ಸಗಣಿಯಿಂದ ಬೆರಣಿ ಮಾಡಿಕೊಂಡಿರಿ, ಸಗಣಿ ಮತ್ತು ಗಂಜಲದಿಂದ ನಿಮ್ಮ ಜಮೀನಿನ ಭೂಮಿಯನ್ನು ಹಸನು ಮಾಡಿಕೊಂಡಿರಿ, ಭೂಮಿಯಲ್ಲಿ ಒಳ್ಳೆಯ ಬೆಳೆ ಬೆಳೆದಿರಿ, ಆದರೆ ನನಗೆ ಕೊಡುತ್ತಿದ್ದದ್ದು ಮಾತ್ರ   ಹಾಳಾಗಿ ಕೊಳೆತು ಹೋದ ತರಕಾರಿಗಳನ್ನ,. ಸಗಣಿಯಿಂದ ಗೋಬರ್ ಗ್ಯಾಸ್ ತಯಾರಿಸಿ ನಿಮ್ಮ ಮನೆಯನ್ನು ಕತ್ತಲಿನಿಂದ ಬೆಳಕು ಮಾಡಿಕೊಂಡಿರಿ ಆದರೆ ನನನ್ನೇ ಕುರುಡನಂತೆ ಕೊಲ್ಲಲು ಬಂದಿ

ದಿನಕ್ಕೊಂದು ಕಥೆ. 96

🌻🌻 *ದಿನಕ್ಕೊಂದು ಕಥೆ*🌻🌻                 ಅಮೇರಿಕದೋಳೊಬ್ಬಳು ಪ್ರೊಪೋಸ್ ಮಾಡಿದಾಗ ಸ್ವಾಮಿ ವಿವೇಕಾನಂದ ನಡ್ಕೊಂಡ ರೀತಿ . ಒಂದ್ಸಲಿ ಸ್ವಾಮಿ ವಿವೇಕಾನಂದ ಹಿಂದೂ ಧರ್ಮದ ಬಗ್ಗೆ ಭಾಷಣ ಮಾಡಕ್ಕೆ ಅಮೇರಿಕಕ್ಕೆ ಹೋಗಿದ್ರಂತೆ. ಅವರ ಬುದ್ಧಿವಂತಿಕೆ ನೋಡಿ ನಿಬ್ಬೆರಗಾದ ಅಮೇರಿಕನ್ ಹೆಂಗಸೊಬ್ಬಳಿಗೆ ಒಂದು ವಿಚಿತ್ರವಾದ ಆಸೆ ಶುರುವಾಯಿತಂತೆ. ಹೋಗಿ ಕೇಳೇ ಬಿಟ್ಳಂತೆ, ‘ನನ್ನ ಮದುವೆ ಆಗ್ತೀರಾ?’ ಅಂತ. ಆಗ ವಿವೇಕಾನಂದರು ‘ಈ ಯೋಚನೆ ಯಾಕೆ ಬಂತು?’ ಅಂದ್ರಂತೆ. ಅದಕ್ಕೆ ಆಕೆ, ‘ನಿಮ್ಮ ಬುದ್ಧಿವಂತಿಕೆ ನೋಡಿ ನಾನು ಮೂಕವಿಸ್ಮಿತಳಾಗಿಬಿಟ್ಟಿದೀನಿ. ನನಗೆ ನಿಮ್ಮ ಥರಾನೇ ಒಂದು ಮಗು ಬೇಕು, ಕೊಡ್ತೀರಾ? ನನ್ನ ಮದುವೆ ಆಗ್ತೀರಾ?’ ಅಂದಳಂತೆ. ಆಗ ವಿವೇಕಾನಂದರು ಥಟ್ಟಂತ ಕೊಟ್ಟ ಉತ್ತರ ಹೀಗಿತ್ತಂತೆ: ‘ನಿಮ್ಮ ಆಸೆ ನನಗೆ ಅರ್ಥ ಆಯಿತು. ಆದರೆ ಅಂಥ ಒಂದು ಮಗೂನ ಹೆರೋದು... ಅದು ಬುದ್ಧಿವಂತವಾಗಿದೆಯೋ ಇಲ್ಲವೋ ಅಂತ ಅರ್ಥ ಮಾಡ್ಕೊಳೋದು... ಇದೆಲ್ಲ ಬಹಳ ದೊಡ್ಡ ಪ್ರಕ್ರಿಯೆ... ತುಂಬಾ ಸಮಯ ತೊಗೊಳೋ ಕೆಲಸ... ಕೊನೆಗೆ ಬೇಕಾದ ಫಲ ಸಿಗದೇನೂ ಇರಬಹುದು. ಆದ್ದರಿಂದ ಅದಕ್ಕಿಂತ ಒಳ್ಳೇ ಆಯ್ಕೆ ಕೊಡ್ತೀನಿ, ಕೇಳಿ: ನಿಮಗೆ ನನ್ನ ಥರ ಇರೋ ಬುದ್ಧಿವಂತ ಮಗು ಬೇಕು ತಾನೇ? ನಾನೇ ಇದೀನಲ್ಲ, ನನ್ನೇ ನಿಮ್ಮ ಮಗುವಾಗಿ ಸ್ವೀಕರಿಸಿಕೊಂಡು ಬಿಡಿ... ನನ್ನ ತಾಯಿಗೆ ಸಮಾನ ನೀವು... ಇದರಿಂದ ನಿಮ್ಮ ಆಸೆ ಈಡೇರಿ ನೆಮ್ಮದಿ ಸಿಗುತ್ತದೆ...’ ಉತ್ತರ ಕೇಳಿ ಆಕೆ ದಂಗಂತೆ!

ದಿನಕ್ಕೊಂದು ಕಥೆ. ,95

🌻🌻 *ದಿನಕ್ಕೊಂದು ಕಥೆ*🌻🌻                                        ನಾನು ನಿಮಗೆ ಇದು  ಅರ್ಥ ಆಗಿದೆ ಅಂದುಕೊಳ್ತಿನಿ ದಯವಿಟ್ಟು ಒಂದು ದಿನ ಒಬ್ಬ ಶ್ರೀಮಂತ ಮಾಧ್ಯಮದವರನ್ನ ಅವನ ಮನೆಗೆ ಬರಲು ಹೇಳಿದ. ಮಾಧ್ಯಮದವರು ಬಂದು ಸೇರಿದರು ಆಗ ಆ ಶ್ರೀಮಂತ ತನ್ನ ಹತ್ತಿರ ಇದ್ದ ಬಿಲಿಯನ್ ಡಾಲರ್ ಕಾರನ್ನು ನಾಳೆ ಗುಂಡಿಯಲ್ಲಿ ಹೂಳುವುದಾಗಿ ತಿಳಿಸುತ್ತಾನೆ. ಮಾಧ್ಯಮದವರು ಯಾಕೆ ಎಂದು ಕೇಳಿದಾಗ ನನ್ನ ನಂತರ ಇದನ್ನು ಉಪಯೋಗಿಸಲು ಯಾರು ಇಲ್ಲ ಅದಕ್ಕಾಗಿ ಎನ್ನುತ್ತಾರೆ. ಸರಿ ಈಗ ಹೊರಡಿ ನಾಳೆ ಬನ್ನಿ ಎಂದು ಹೇಳಿ ಎಲ್ಲರನ್ನೂ ಕಳುಹಿಸಿದ. ನಾಳೆ ಆಯಿತು ಮಾಧ್ಯಮದವರೆಲ್ಲ ಬಂದರು ಶ್ರೀಮಂತನ ಮನೆ ಮುಂದೆ ಒಂದು ಗುಂಡಿಯನ್ನು ತೆಗೆಸಲಾಗಿತ್ತು ಅದರ ಮುಂದೆ ಆ ಶ್ರೀಮಂತನ ಬಿಲಿಯನ್ ಡಾಲರ್ ಬೆಲೆ ಬಾಳುವ ಕಾರು ಕೂಡಾ ನೀಲ್ಲಿಸಲಾಗಿತ್ತು. ಆಗ ಮಾಧ್ಯಮಗಳ ಜೊತೆಗೆ ಬಂದಿದ್ದ ಜನರೆಲ್ಲಾ ಮಾತಾಡಲು ಶುರುಮಾಡಿದರು.. ಇವನಿಗೆ ಹುಚ್ಚು ಹಿಡಿದುಕೊಂಡಿದೆ ಅನಿಸುತ್ತೆ ಅಷ್ಟು ಬೆಲೆ ಬಾಳುವ ಕಾರು ತನಗೆ ಉಪಯೋಗ ಇಲ್ಲ ಅಂದರೆ ಮಾರಾಟ ಮಾಡಲಿ ಇಲ್ಲ ಅಂದರೆ ಯಾರಿಗಾದರೂ ದಾನ ಮಾಡಲಿ ಅಂತ ಮಾತನಾಡತೊಡಗಿದರು... ಆಗ ಇದನ್ನೆಲ್ಲ ಕೇಳಿದ ಶ್ರೀಮಂತ ಹೇಳುತ್ತಾನೆ ನಾನು ಈ ಕಾರನ್ನು ಮಣ್ಣಿನಲ್ಲಿ ಮುಚ್ಚಿಹಾಕಿದರೆ ಹುಚ್ಚುತನ ಅದೆ ದಾನ ಮಾಡಿದರೆ ಮಾನವೀಯತೆ ಅಲ್ಲವೇ ಎಂದ ಹಾಗ ಜನರೆಲ್ಲ ಹೌದು ಹೌದು ಎಂದರು... ಆಗ ಆ ಶ್ರೀಮಂತ ಹೇಳ್ತಾನೆ" ಹಾಗಾದರೆ ನಾನು ಮಾತ್ರ

ದಿನಕ್ಕೊಂದು ಕಥೆ. 94

*ಸುಖೀ ದಾಂಪತ್ಯದ ಗುಟ್ಟು* ನಾನೊಮ್ಮೆ ಪಾಶ್ಚಾತ್ಯ ದೇಶದಲ್ಲಿದ್ದಾಗ ಒಬ್ಬರು... "ನಿಮಗೆ ಮದುವೆಯಾಗಿ ಎಷ್ಟು ವರ್ಷವಾಯಿತು?" ಎಂದು ಕೇಳಿದರು. V ನಾನು "ಇಪ್ಪತ್ತೆಂಟು ವರ್ಷ ಎಂದೆ. ಆವರು... "ಒಬ್ಬಳೇ ಹೆಂಡತಿಯೊಂದಿಗೆ ಅಷ್ಟು ವರ್ಷ ಹೇಗಿದ್ದೀರಿ ?" ಎಂದು ಆಶ್ಚರ್ಯ ಪಟ್ಟರು. ನಾನು ಅವರಿಗೆ ಹೇಳಿದೆ... "ನನ್ನದೇನೂ ವಿಶೇಷವಲ್ಲ, ನನ್ನ ಅಜ್ಜ, ಅಜ್ಜಿ ದಂಪತಿಗಳಾಗಿ ಎಪ್ಪತ್ತು ವರ್ಷಗಳ ಕಾಲ ಇದ್ದರು" ಅವರಿಗೆ ನಂಬಲಾಗಲಿಲ್ಲ. ನನ್ನಜ್ಜ, ಅಜ್ಜಿ ಚೆನ್ನಾಗಿಯೇ ಬದುಕಿದರು. ಅಂದರೆ ಅವರಲ್ಲಿ ಜಗಳ, ಮನಸ್ತಾಪ , ವಿಚಾರ ಭೇದ ಇರಲಿಲ್ಲವೆಂದಲ್ಲ. ಒಂದೊಂದು ಬಾರಿ ಜಗಳವಾಡುತ್ತಿದ್ದರೆ ಏಳೇಳು ಜನ್ಮದಲ್ಲಿ ವೈರಿಗಳಾಗಿದ್ದರೇನೋ ಎನಿಸುತಿತ್ತು. ಆದರೆ ಕೆಲವು ಕ್ಷಣಗಳು ಮಾತ್ರ. ಊಟ ಮುಗಿದ ಮೇಲೆ ನನ್ನಜ್ಜ ವರ್ತಮಾನ ಪತ್ರಿಕೆ ಓದುವರು. ಆಗ ನಮ್ಮ ಅಜ್ಜಿ ಪಕ್ಕದಲ್ಲೇ ಕೂತು ಕೇಳಬೇಕು. ಆಕೆ ಅಲ್ಲಿಲ್ಲದಿದ್ದರೆ ಅವಳನ್ನು ಹುಡುಕಾಡಿ, ಕರೆದುಕೊಂಡು ಬಂದು ಕೂಡಿಸಿಕೊಳ್ಳುವರು. ಆಕೆಗೋ ಪೂರ್ತಿ ಕಿವುಡು. ಕೂಗಿದರೂ ಕೇಳಿಸುತ್ತಲಿರಲಿಲ್ಲ . ಆದರೆ ಅಜ್ಜ ಆಕೆಗೆ ಅಂದಿನ ರಾಜೆಕೀಯ, ದಿನದ ವಾರ್ತೆಗಳನ್ನೆಲ್ಲ ವರ್ಣಿಸಿ ಹೇಳುವರು. ಆಕೆ ನಡುನಡುವೆ ನಕ್ಕು, " ಹೌದೇ ಇಂದಿರಮ್ಮ ಹಾಗಂದಳೇ? ಮುರಾರಿ (ಮುರಾರ್ಜಿ) ಏನಂತಾರೆ ಅದಕ್ಕೆ ?" ಅವರು ಹೇಳುವುದೇನೋ, ಅವಳು ಕೇಳುವುದೇನೋ ? ಹೀಗೆ

ದಿನಕ್ಕೊಂದು ಕಥೆ. 93

*ದಿನಕ್ಕೊಂದು ಕಥೆ* 🌼🌼🌼🌼🌼🌼 *ನಮ್ಮ ಉದ್ಧಾರ ನಮ್ಮಿಂದಲೇ* ನಟೇಶ್ ನರ್ಸಿಂಗ್ ಹೋಮ್ ಈಗ ನಮ್ಮ ಊರಿನಲ್ಲಿ ಅತ್ಯಂತ ಪ್ರಖ್ಯಾತವಾದ ಆಸ್ಪತ್ರೆ. ಅಲ್ಲಿ ಸುಮಾರು ನೂರು ಜನ ವೈದ್ಯರು ಕೆಲಸಮಾಡುತ್ತಿದ್ದಾರೆ. ಐದು ನೂರು ಹಾಸಿಗೆಗಳನ್ನು ಹೊಂದಿದೆ ಈ ಆಸ್ಪತ್ರೆ. ಅಲ್ಲಿ ಇಂತಹ ಸೇವೆ ಇಲ್ಲವೇ ಇಲ್ಲ ಎನ್ನುವ ಹಾಗೆಯೇ ಇಲ್ಲ. ಆಸ್ಪತ್ರೆಗೆ ಸಹಕಾರಿಯಾಗಿ ನಿಂತಿವೆ ನಟೇಶ್ ವೈದ್ಯಕೀಯ ವಿದ್ಯಾಲಯ ಹಾಗೂ ನಟೇಶ ನರ್ಸಿಂಗ್ ಕಾಲೇಜು. ಈ ಕಾಲೇಜುಗಳಲ್ಲಿ ಸೀಟು ದೊರಕುವುದೇ ಕಷ್ಟ. ಹೀಗೆಲ್ಲ ಊರೆಲ್ಲ ಹಂಚಿಕೊಂಡಿರುವ ಸಂಸ್ಥೆಗಳ ಮುಖ್ಯಸ್ಥರು ಡಾ. ನಟೇಶರವರು. ಅವರ ದೂರದರ್ಶಿತ್ವದಿಂದಲೇ ಈ ಸಂಸ್ಥೆಗಳೆಲ್ಲ ತಲೆಎತ್ತಿ ನಿಂತಿವೆ.  ಅವರು ಈಗ ಇಡೀ ಪ್ರದೇಶಕ್ಕೆ ಅತ್ಯಂತ ಗೌರವಾನ್ವಿತ ವ್ಯಕ್ತಿ, ಎಷ್ಟೋ ಜನ ಅವರನ್ನು ದೇವರೆಂದೇ ಭಾವಿಸುತಾರೆ. ಅವರು ಕೈ ಮುಟ್ಟಿದರೆ ಸಾಕು ರೋಗ ಕಡಿಮೆಯಾಗುತ್ತೆಂದು ನಂಬುತ್ತಾರೆ. ಅವರಿಗೀಗ ಸುಮಾರು ಎಪ್ಪತ್ತೈದು ವರ್ಷ. ಡಾ. ನಟೇಶ್ ಈ ಊರಿಗೆ ಬಂದು ಐವತ್ತು ವರ್ಷಗಳೇ ಕಳೆದಿವೆ. ಇಪ್ಪತ್ತೈದು ವರ್ಷದ ನಟೇಶ ತಮ್ಮ ಎಂ.ಬಿ.ಬಿ.ಎಸ್ ಮುಗಿಸಿದಾಗ ಅವರಿಗೆ ಯಾವ ಸಹಾಯ, ಸಹಕಾರವೂ ಇರಲಿಲ್ಲ. ಅವರ ತಂದೆ ತಾಯಿ ಅನಕ್ಷರಸ್ಥರು, ಊರಿನಲ್ಲಿ ಸಣ್ಣ ಒಕ್ಕಲುತನ ಮಾಡಿಕೊಂಡಿದ್ದವರು. ಅವರಿಗೆ ಮಗನಿಗಾಗಿ ಒಂದು ಆಸ್ಪತ್ರೆ ಹಾಕಿಕೊಡುವಷ್ಟು ಸಾಮರ್ಥ್ಯವಿರಲಿಲ್ಲ. ಆಗ ನಟೇಶ ತಮ್ಮ ಊರುಬಿಟ್ಟು ಯಾರಾದರೂ ಪ್ರಾಕ್ಟೀಸ್ ಮಾಡುವುದಕ್ಕೆ ಅವಕಾಶ ಕೊಟ

ದಿನಕ್ಕೊಂದು ಕಥೆ. 92

🌻🌻 *ದಿನಕ್ಕೊಂದು ಕಥೆ*🌻🌻 💐 *ದೊಡ್ಡವರಾರು* ?💐     ಒಂದು ಸಾಂಕೇತಿಕ ಕಥೆ. ಒಮ್ಮೆ ನಾಲ್ಕು ಜನರು ನೌಕೆಯಲ್ಲಿ ಕುಳಿತು ಹೊರಟರು. ಅವರಲ್ಲಿ ಒಬ್ಬ ಸಿರಿವಂತನಿದ್ದ. ಇನ್ನೊಬ್ಬ ವಿದ್ಯಾವಂತ. ಮತ್ತೊಬ್ಬ ಸ್ಜಕ್ತಿವಂತ. ಮಗದೊಬ್ಬ ರೂಪವಂತ. ಪ್ರತಿಯೊಬ್ಬರೂ ತಾವೇ ‘ಶ್ರೇಷ್ಠರು’ ಎಂದು ಒಳಗೊಳಗೇ ಭಾವಿಸಿ ಬೀಗುತ್ತಿದ್ದರು. ಇನ್ನೊಬ್ಬರನ್ನು ಕಡೆಗಣಿಸುತ್ತಿದ್ದರು. ಅಷ್ಟರಲ್ಲಿ ನೌಕೆಯು ಸಾಗರದ ಮಧ್ಯಭಾಗ ತಲುಪಿತು. ಆಕಸ್ಮಿಕವಾಗಿ ಬಿರುಗಾಳಿ ಬೀಸಿ ನೌಕೆ ಬುಡಮೇಲಾಗುವಂತಾಯಿತು. ಭಯಗೊಂಡ ನಾಲ್ವರೂ ‘ನಮ್ಮನ್ನು ಕಾಪಾಡು’ ಎಂದು ಜಲದೇವತೆಯನ್ನು ಪ್ರಾರ್ಥಿಸಿದರು. ಇವರ ಮನೋಗತವನ್ನೆಲ್ಲ ತಿಳಿದಿದ್ದ ಜಲದೇವತೆ ಹೇಳಿದಳು. “ನಿಮ್ಮಲ್ಲಿ ಯಾರು ಶ್ರೇಷ್ಠರೋ, ಅವರು ಉಳಿದವರನ್ನೆಲ್ಲ ಕಾಪಾಡಿ!” ನಾಲ್ವರೂ ಒಟ್ಟಾಗಿ ಹೇಳಿದರು, “ನಾವು ಯಾರೂ ಶ್ರೇಷ್ಠರಲ್ಲ, ದೊಡ್ಡವರಲ್ಲ. ನೀನೇ ದೊಡ್ಡವಳು, ದಯಾಮಯಿ ನಮ್ಮನ್ನು ಕಾಪಾಡು!” “ಹಾಗಾದರೆ ನೀವು ಯಾರನ್ನೂ ದ್ವೇಷಿಸದೇ ಪರಸ್ಪರ ಪ್ರೀತಿಯಿಂದಿರಿ” ಎಂದು ಹೇಳಿ ಜಲದೇವತೆಯು ಅವರನ್ನು ಸಾಗರದಿಂದ ಪಾರು ಮಾಡಿ ಸಂರಕ್ಷಿಸಿದಳು!.                         ಕೃಪೆ : ಶ್ರೀ ಸಿದ್ಧೇಶ್ವರ ಸ್ವಾಮೀಜಿ,                     ಸಂಗ್ರಹ : ವೀರೇಶ್ ಅರಸಿಕೆರೆ.

ದಿನಕ್ಕೊಂದು ಕಥೆ. 91

🌻🌻 *ದಿನಕ್ಕೊಂದು ಕಥೆ*🌻🌻 💐 *ಸಾಪೇಕ್ಷ_ಜೀವನ* 💐   ಒಂದು ಗುಡ್ಡದ ಎದುರು ಒಂದು ಪುಷ್ಟವಾದ ಎಮ್ಮೆ ನಿಂತಿತ್ತು. ಒಂದು ದಿನ ಆ ಎಮ್ಮೆಯ ಮಾಲೀಕ ಗುಡ್ಡವನ್ನೆರಿದ. ವಿಶಾಲ ಆಗಸ, ಹಸಿರು ಸೃಷ್ಟಿಯನ್ನು ನೋಡುವುದರಲ್ಲಿ ತನ್ಮಯನಾದ. ಅಕಸ್ಮಾತ್ತಾಗಿ ಆತನ ದೃಷ್ಟಿ ಕುಟೀರದ ಎದುರು ಕಟ್ಟಿದ್ದ ಎಮ್ಮೆಯತ್ತ ಹರಿಯಿತು. ಎತ್ತರದ ಗುಡ್ಡದ ಮೇಲಿಂದ ತನ್ನ ಎಮ್ಮೆಯನ್ನು ನೋಡಿದ ಮಾಲೀಕ “ಈ ಎಮ್ಮೆ ಎಷ್ಟು ಚಿಕ್ಕದಾಗಿ ಕಾಣುತ್ತಿದೆಯಲ್ಲ”  ಎಂದು ಉದ್ಗರಿಸಿದ.   ಅದೇ ಸಮಯಕ್ಕೆ ಸರಿಯಾಗಿ ಗುಡ್ಡದ ಕೆಳಗಿದ್ದ ಎಮ್ಮೆಯು ತನ್ನ ಮಾಲೀಕನನ್ನು ನೋಡಿ “ನಮ್ಮ ಮಾಲೀಕ ಎಷ್ಟು ಕುಳ್ಳನಾಗಿ ಕಾಣುತ್ತಾನಲ್ಲ!” ಎಂದಿತು. ಮಾಲೀಕನ ದೃಷ್ಟಿಯಲ್ಲಿ ಎಮ್ಮೆ ಚಿಕ್ಕದು. ಎಮ್ಮೆಯ ದೃಷ್ಟಿಯಲ್ಲಿ ಮಾಲೀಕ ಚಿಕ್ಕವ! ನಿಜವಾಗಿ ಯಾರು ಚಿಕ್ಕವರು? ಯಾರೂ ಅಲ್ಲ; ಅದು ಒಬ್ಬರನ್ನೊಬ್ಬರು ಹೋಲಿಸಿ ಕೊಂಡಾಗ ಬರುವ ಭಾವನೆ ಅಷ್ಟೆ. ಇದು ಸಾಪೆಕ್ಷಿಕತೆ.                         ಕೃಪೆ:ಶ್ರೀ ಸಿದ್ಧೇಶ್ವರ ಸ್ವಾಮೀಜಿ,                   ಸಂಗ್ರಹ: ವೀರೇಶ್ ಅರಸಿಕೆರೆ