ದಿನಕ್ಕೊಂದು ಕಥೆ. ,95
🌻🌻 *ದಿನಕ್ಕೊಂದು ಕಥೆ*🌻🌻 ನಾನು ನಿಮಗೆ ಇದು ಅರ್ಥ ಆಗಿದೆ ಅಂದುಕೊಳ್ತಿನಿ ದಯವಿಟ್ಟು
ಒಂದು ದಿನ ಒಬ್ಬ ಶ್ರೀಮಂತ ಮಾಧ್ಯಮದವರನ್ನ ಅವನ ಮನೆಗೆ ಬರಲು ಹೇಳಿದ.
ಮಾಧ್ಯಮದವರು ಬಂದು ಸೇರಿದರು ಆಗ ಆ ಶ್ರೀಮಂತ ತನ್ನ ಹತ್ತಿರ ಇದ್ದ ಬಿಲಿಯನ್ ಡಾಲರ್ ಕಾರನ್ನು ನಾಳೆ ಗುಂಡಿಯಲ್ಲಿ ಹೂಳುವುದಾಗಿ ತಿಳಿಸುತ್ತಾನೆ.
ಮಾಧ್ಯಮದವರು ಯಾಕೆ ಎಂದು ಕೇಳಿದಾಗ ನನ್ನ ನಂತರ ಇದನ್ನು ಉಪಯೋಗಿಸಲು ಯಾರು ಇಲ್ಲ ಅದಕ್ಕಾಗಿ ಎನ್ನುತ್ತಾರೆ. ಸರಿ ಈಗ ಹೊರಡಿ ನಾಳೆ ಬನ್ನಿ ಎಂದು ಹೇಳಿ ಎಲ್ಲರನ್ನೂ ಕಳುಹಿಸಿದ.
ನಾಳೆ ಆಯಿತು ಮಾಧ್ಯಮದವರೆಲ್ಲ ಬಂದರು ಶ್ರೀಮಂತನ ಮನೆ ಮುಂದೆ ಒಂದು ಗುಂಡಿಯನ್ನು ತೆಗೆಸಲಾಗಿತ್ತು ಅದರ ಮುಂದೆ ಆ ಶ್ರೀಮಂತನ ಬಿಲಿಯನ್ ಡಾಲರ್ ಬೆಲೆ ಬಾಳುವ ಕಾರು ಕೂಡಾ ನೀಲ್ಲಿಸಲಾಗಿತ್ತು.
ಆಗ ಮಾಧ್ಯಮಗಳ ಜೊತೆಗೆ ಬಂದಿದ್ದ ಜನರೆಲ್ಲಾ ಮಾತಾಡಲು ಶುರುಮಾಡಿದರು..
ಇವನಿಗೆ ಹುಚ್ಚು ಹಿಡಿದುಕೊಂಡಿದೆ ಅನಿಸುತ್ತೆ ಅಷ್ಟು ಬೆಲೆ ಬಾಳುವ ಕಾರು ತನಗೆ ಉಪಯೋಗ ಇಲ್ಲ ಅಂದರೆ ಮಾರಾಟ ಮಾಡಲಿ ಇಲ್ಲ ಅಂದರೆ ಯಾರಿಗಾದರೂ ದಾನ ಮಾಡಲಿ ಅಂತ ಮಾತನಾಡತೊಡಗಿದರು...
ಆಗ ಇದನ್ನೆಲ್ಲ ಕೇಳಿದ ಶ್ರೀಮಂತ ಹೇಳುತ್ತಾನೆ
ನಾನು ಈ ಕಾರನ್ನು ಮಣ್ಣಿನಲ್ಲಿ ಮುಚ್ಚಿಹಾಕಿದರೆ ಹುಚ್ಚುತನ ಅದೆ ದಾನ ಮಾಡಿದರೆ ಮಾನವೀಯತೆ ಅಲ್ಲವೇ ಎಂದ ಹಾಗ ಜನರೆಲ್ಲ ಹೌದು ಹೌದು ಎಂದರು...
ಆಗ ಆ ಶ್ರೀಮಂತ ಹೇಳ್ತಾನೆ" ಹಾಗಾದರೆ ನಾನು ಮಾತ್ರ ಅಲ್ಲ ಇಲ್ಲಿ ಎಲ್ಲರೂ ಹುಚ್ಚರೆ ಯಾಕೆ ಗೊತ್ತಾ ಒಬ್ಬ ವ್ಯಕ್ತಿ ಮರಣದ ನಂತರ ಆ ವ್ಯಕ್ತಿಯ ಶವ ಹುಳುವ ಬದಲು ದೇಹ ದಾನ ಮಾಡಿದರೆ ಆ ವ್ಯಕ್ತಿಯ ಎಷ್ಟೋ ಅಂಗಗಳು ಉಪಯೋಗಕ್ಕೆ ಬರುತ್ತವೆ ಅದರಿಂದ ಎಷ್ಟೋ ಜೀವಗಳು ಬದುಕುತ್ತವೆ" ನಾನು ಇವತ್ತು ಈ ಕಾರು ಹೂಳಲು ನಿಮ್ಮನ್ನು ಇಲ್ಲಿ ಕರೆದಿಲ್ಲ....
ನಾನು ನಿಮ್ಮನ್ನು ಕರೆದು ಹೇಳಬಯಸಿದ ವಿಷಯ ನಿಮಗೆ ಅರ್ಥ ಆಗಿದೆ ಅಂದುಕೋಳ್ಳತ್ತೇನೆ ಅಂದ....!!
ಸ್ನೇಹಿತರೆ ನಾನು ಹೇಳಿದ ಈ ಕಥೆ ನಿಜ ಅನಿಸಿದರೆ ಲೈಕ್ ಕೊಟ್ಟು ಶೇರ್ ಮಾಡಿ
ಕೃಪೆ: ಕಿಶೋರ್. ಸಂಗ್ರಹ : ವೀರೇಶ್ ಅರಸಿಕೆರೆ
Comments
Post a Comment