Posts

Showing posts from June, 2019

ದಿನಕ್ಕೊಂದು ಕಥೆ 924

*🌻ದಿನಕ್ಕೊಂದು ಕಥೆ🌻* '' ಸರ್...  ಹೆಂಡ್ತಿ ಗರ್ಭಿಣಿಯಾದಳು. ಸ್ವಲ್ಪ ತಡವಾಗಿ ಸಾಕು ಅಂತ ನಾವು ನಿರ್ಧರಿಸಿದ್ದೆವು.  ಆದರೆ ಎಲ್ಲೋ ಎಡವಟ್ಟಾಗೋಯ್ತು....... ಮಾತ್ರೆಗಳನ್ನೂ ನಂಬಲಾಗದಾಯಿತು...... ಇದು ಆರನೇಯ ತಿಂಗಳು... ನನಗೆ ರಜೆ ಇಲ್ಲ.... ಆಗ ಆಕೆ ಒಂಟಿಯಾಗುತ್ತಾಳೆ...." ಹರೀಶನಿಗೆ ಯಾವಾಗಲೂ ಪರಿಹಾರಗಳನ್ನು ಸೂಚಿಸುತ್ತಿದ್ದ ಮಾಸ್ಟರ್ ಆಗಿರುವ ವಿನಾಯಕ ಮಾಸ್ಟರ್ ಹತ್ತಿರ ಆತ ತನಗೆದುರಾದ ಸಮಸ್ಯೆಯನ್ನು ಹೇಳಿಕೊಂಡ.... ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ. ಏಳನೆಯ ತಿಂಗಳು ಅಡ್ಮಿಟ್ ಮಾಡಬೇಕು. ಪ್ರಸವಾನಂತರದ ಚಿಕಿತ್ಸೆಗಳ ಬಳಿಕ ಮನೆತಲುಪಿಸುತ್ತಾರೆ. ಅಡ್ರೆಸ್ ಮತ್ತು ಫೋನ್ ನಂಬರ್ ಬರೆದುಕೋ.......... ಆತ ಅಡ್ರೆಸ್ ಮತ್ತು ಫೋನ್ ನಂಬರ್ ಬರಕ್ಕೊಂಡು ಮಾಸ್ಟರ್ ಗೆ ಥ್ಯಾಂಕ್ಸ್ ಹೇಳಿ ಹಿಂತಿರುಗಿದ...... ತಿಂಗಳುಗಳ ನಂತರ ..... ಆತ ಪುನಃ ಮಾಸ್ಟರನ್ನು ಭೇಟಿಯಾಗುತ್ತಾನೆ..... '' ಸರ್ ... ಮಗುವಿಗೆ ನಾಲ್ಕು ತಿಂಗಳಾಗಿದೆ..... ಪತ್ನಿಗೆ ರಜೆ ಮುಂದುವರಿಸಲು ಸಾಧ್ಯವಿಲ್ಲ.... ನನಗೆ ಪ್ರಮೋಶನೂ ಆಗಿದೆ....." ಮಾಸ್ಟರ್ ಗೆ ವಿಷಯ ಅರ್ಥವಾಯಿತು. ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ. ಮೂರು ವಯಸಿನವರೆಗೆ ಮಗುವನ್ನು ನೋಡಿಕೊಳ್ಳುವ ಒಂದು ಪ್ಯಾಕೇಜ್..... ಬೆಳಿಗ್ಗಿನಿಂದ ಸಂಜೆವರೆಗೂ ನೋಡಿಕೊಳ್ಳುತ್ತಾರೆ.... ಮತ್ತೆ ಫುಲ್ ಟೈಮ್ ಬೇಕಾದರೆ ಅದಕ್ಕೆ ಸ್ವಲ್ಪ ರೇಟು

ದಿನಕ್ಕೊಂದು ಕಥೆ 923

*🌻ದಿನಕ್ಕೊಂದು ಕಥೆ🌻* ಟೀಚರೊಬ್ಬರು ಬೋರ್ಡಿನ ಮೇಲೆ ಐದರ ಮಗ್ಗಿಯನ್ನು ಬರೆಯುತ್ತಿದ್ದರು 5X1 = 3 5X2 = 10 5X3 = 15 5X4 = 20 5X5 = 25 5X6 = 30 5X7 = 35 5X8 = 40 5X9 = 45 5X10 = 50 ಬರೆದ ನಂತರ ವಿದ್ಯಾರ್ಥಿಗಳ ಕಡೆ ತಿರುಗಿ ನೋಡುವಾಗ ಎಲ್ಲಾ ವಿದ್ಯಾರ್ಥಿಗಳೂ ನಗುತ್ತಿದ್ದರು. ಟೀಚರ್ ವಿದ್ಯಾರ್ಥಿಗಳತ್ರ - ನೀವು ನಗೋದಕ್ಕೆ ಇರುವ ಕಾರಣವಾದರೂ ಏನು? ಅಂತ ವಿಚಾರಿಸಿದಾಗ ವಿದ್ಯಾರ್ಥಿಗಳು ಹೇಳುತ್ತಾರೆ - ಮಗ್ಗಿಯ ಮೊದಲನೆ ಸಾಲು ತಪ್ಪಾಗಿದೆ ಮೂರರ ಬದಲಿಗೆ ಐದು ಆಗಬೇಕಿತ್ತು.... ಟೀಚರ್ ಮುಗುಳ್ನಗುತ್ತಾ -  " ನಾನು ನಿಮಗೊಂದು ಇಂಪೋರ್ಟೆಂಟ್ ಆದ ವಿಷಯವನ್ನು ಕಲಿಸುವುದಕ್ಕಾಗಿ ಹಾಗೆ ಬರೆದೆ.... ನಿಮ್ಮ ನಿಜ ಜೀವನದಲ್ಲಿ ನೀವು ಅರಿತುಕೊಳ್ಳಬೇಕಾದ ವಿಷಯವೇ ಆಗಿದೆ.... ನಾನು ಸರಿಯಾದ  9 ಸಾಲುಗಳನ್ನು ಬರೆದೆ... ಆದರೆ, ಯಾರೂ ಆ ಸಾಲುಗಳು ಸರಿಯಾಗಿ ಬರೆದುದ್ದಕ್ಕಾಗಿ ನನ್ನನ್ನು ಅಬಿನಂದಿಸಿಲ್ಲ... ಆದರೆ, ಒಂದು ಸಾಲನ್ನು ತಪ್ಪಾಗಿ ಬರೆದಾಗ ಎಲ್ಲರೂ ನನ್ನನ್ನು ಬೆರಳು ತೋರಿಸಿ ಬೊಟ್ಟು ಮಾಡಿದರು... ಒಂದು ಕಪ್ಪು ಚುಕ್ಕೆಯಂತೆ... ಆ ತಪ್ಪಿಗೆ ಹೆಚ್ಚು ಬೆಲೆ ಕೊಟ್ಟರು... ನೀವು ಮಾಡುವ ಎಲ್ಲಾ ಒಳ್ಳೆಯ ಕೆಲಸಗಳಿಗೂ ಜಗತ್ತು ಬೆಲೆ ಕೊಡಲ್ಲ. ಆದರೆ ಒಂದು ತಪ್ಪಾದ ಪ್ರವರ್ತಿಗೆ ವಿಮರ್ಶೆಗಳು ಇದ್ದೇ ಇರುತ್ತದೆ... ಆದ್ದರಿಂದ ಯಾರಾದರೂ ನಿಮ್ಮನ್ನು ವಿಮರ್ಶಿಸಿದರೆ, ಯಾವತ್ತೂ ಬೇಸರಪಟ್ಟುಕೊಳ್ಳಬಾರದು.

ದಿನಕ್ಕೊಂದು ಕಥೆ 922

*🌻ದಿನಕ್ಕೊಂದು ಕಥೆ🌻* ಬೆರಗಿನ ಬೆಳಕು ಡಾ.ಗುರುರಾಜ ಕರ್ಜಗಿ ಸಂಗ್ರಹ : ಪ್ರಜಾವಾಣಿ ಪತ್ರಿಕೆ ರಾಕ್ಷಸ ಶಕ್ತಿಗಿಂತ ಬಲಶಾಲಿ ಯುಕ್ತಿ    ಒಂದಾನೊಂದು ಕಾಲದಲ್ಲಿ ಬೋಧಿಸತ್ವ ಒಂದು ವಾನರನಾಗಿ ಹುಟ್ಟಿದ್ದ. ಆ ಕಪಿ ನೋಡಲು ದೊಡ್ಡದಾಗಿ ಬಲಿಷ್ಠವಾಗಿತ್ತು. ಎಂಭತ್ತು ಸಾವಿರ ಕಪಿ ಸಮೂಹಕ್ಕೆ ನಾಯಕನಾಗಿತ್ತು. ಎಲ್ಲ ಕಪಿಗಳ ರಕ್ಷಣೆ ನಾಯಕನದಾಗಿತ್ತು. ಒಮ್ಮೆ ಎಲ್ಲರನ್ನೂ ಕೂಡ್ರಿಸಿ ಹೇಳಿತು, ‘ಮಕ್ಕಳೇ ಈ ಕಾಡಿನಲ್ಲಿ ಅನೇಕ ವಿಷವೃಕ್ಷಗಳಿವೆ, ವಿಷ ತುಂಬಿದ ಕೊಳಗಳಿವೆ. ಅವುಗಳನ್ನು ಬಳಸಬೇಡಿ. ಮನುಷ್ಯರು ಬಳಸುವ ವೃಕ್ಷಗಳಲ್ಲಿ, ಸರೋವರಗಳಲ್ಲಿ ಯಾವ ಆಪತ್ತೂ ಇಲ್ಲ. ಒಂದು ವೇಳೆ ನಿಮಗೆ ಯಾವುದೇ ಸಂಶಯ ಬಂದರೆ, ಫಲಗಳನ್ನು ತಿನ್ನುವ ಮೊದಲು ಅಥವಾ ನೀರನ್ನು ಕುಡಿಯುವ ಮೊದಲು ನನ್ನನ್ನು ಕೇಳಿ’. ಅವು ಒಪ್ಪಿದವು.    ಒಂದು ದಿನ ಅವು ಯಾವ ಮನುಷ್ಯರೂ ಹೋಗದಿದ್ದ ಕಾಡನ್ನು ಸೇರಿದವು. ನೀರಡಿಕೆಯಾದಾಗ ಅಲ್ಲೊಂದು ಸುಂದರ ಕೊಳವನ್ನು ಕಂಡು ನೀರನ್ನು ಕುಡಿಯುವುದೋ, ಬೇಡವೋ ಎಂದು ಚಿಂತಿಸುತ್ತಾ ಕುಳಿತಾಗ ಬೋಧಿಸತ್ವ ಹೋದ, ವಿಷಯ ತಿಳಿದು ಸರೋವರವನ್ನು ಸುತ್ತು ಹಾಕಿದ. ಸುತ್ತಲೂ ಪುಷ್ಕರಿಣಿಯನ್ನು ಒಳಹೊಕ್ಕ ಪಾದಗಳ ಗುರುತುಗಳು ಇದ್ದುವೇ ವಿನಃ ಹೊರಗೆ ಬಂದ ಪಾದಗಳ ಚಿನ್ಹೆಗಳು ಇರಲಿಲ್ಲ. ಹಾಗಾದರೆ ಇದು ಜಲರಾಕ್ಷಸನ ಕೊಳ ಎಂಬುದು ತಿಳಿಯಿತು. ‘ಎಲ್ಲರೂ ನೀರು ಕುಡಿಯೋಣ, ಆದರೆ ಯಾರೂ ತಪ್ಪಿ ಕೂಡ ಕೊಳದಲ್ಲಿ ಕಾಲಿರಿಸಬಾರದು’ ಎಂದು ತಾಕೀತು ಮಾಡಿದ ನಾಯಕ ಕಪಿ.

ದಿನಕ್ಕೊಂದು ಕಥೆ 921

*🌻ದಿನಕ್ಕೊಂದು ಕಥೆ🌻* ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾ ದೇಶಕ್ಕೆ ಮೊದಲನೆಯ ಸಲ ರಾಷ್ಟ್ರಪತಿ ಅದ ನಂತರ, ತನ್ನ  ಸುರಕ್ಷೆಯ ಸೈನಿಕರ ಜೊತೆಯಲ್ಲಿ ಒಂದು ಹೊಟೆಲಗೆ  ಊಟ ಮಾಡುವುದಕ್ಕೆ ಹೋಗಿದ್ದರು. ಎಲ್ಲರೂ ತಮಗೆ ಇಷ್ಟವಾದ ಊಟವನ್ನು ಆರ್ಡರ್ ಮಾಡಿ  ಊಟಕ್ಕೆ ಎದುರು ನೋಡುತ್ತಿದ್ದರು .. ಅದೆ ಸಮಯದಲ್ಲಿ ಮಂಡೇಲಾ ಅವರ ಕುರ್ಚಿಯ ಎದುರುಗಡೆ  ಒಬ್ಬ ವ್ಯಕ್ತಿ ಊಟಕ್ಕೆ ಅಪ್ಪಣೆ ಕೊಟ್ಟ ಊಟ ಗೋಸ್ಕರ ಎದುರು ನೋಡುತ್ತಿದ್ದನು. ನೆಲ್ಸನ್ ಮಂಡೇಲಾ ತನ್ನ ಸುರಕ್ಷೆಯ ಸೈನಿಕರಿಗೆ ಹೇಳಿದರು. ಆ ವ್ಯಕ್ತಿಯನ್ನು ಕೂಡ ತನ್ನ ಟೇಬಲ್ ಮೇಲೆ ಬಂದು ಕುಳಿತು ಕೊಳ್ಳಲಿ ಎಂದು. ಆ ವ್ಯಕ್ತಿ ಬಂದು ನೆಲ್ಸನ್ ಮಂಡೇಲಾ ಅವರ ಟೇಬಲ್ ಮೇಲೆ ಬಂದು ಕುಳಿತುಕೊಂಡನು ಎಲ್ಲರೂ ಊಟ ಮಾಡಲು ಶುರು ಮಾಡಿದರು. ಆ ವ್ಯಕ್ತಿಯ ಕೂಡ ಊಟ ಮಾಡಲು ಶುರು ಮಾಡಿದನು ಅದರೆ ಆ ವ್ಯಕ್ತಿಯ ಕೈಗಳು ನಡುಗುತ್ತಿದ್ದವು. ಬೇಗನೆ ಊಟ ಮಾಡಿ ಆ ವ್ಯಕ್ತಿ ತಲೆ ಬಗ್ಗಿಸಕೊಂಡು ಆ ಹೋಟೆಲ್ ನಿಂದ ಹೊರಗಡೆ ಹೋದನು. ಆ ವ್ಯಕ್ತಿ ಹೊರಗಡೆ ಹೋದ ನಂತರ ಮಂಡೇಲಾ ಅವರ ಸುರಕ್ಷೆಯ ಅಧಿಕಾರಿ ಹೇಳಿದನು. ಸರ್ ಅವರಿಗೆ ಜ್ವರ ಬಂದಿರಬಹುದು  ಊಟ ಮಾಡುವಾಗ ಕೈಗಳು ನಡುಗುತ್ತಿದ್ದವು. ನೆಲ್ಸನ್ ಮಂಡೇಲಾ ನಸು ನಗುತ್ತಾ ಹೇಳಿದರು. ಆ ವ್ಯಕ್ತಿ ರೋಗ ಗ್ರಸ್ತನಲ್ಲ. ನಾನು ಯಾವ ಜೈಲಿನಲ್ಲಿ ಬಂಧಿಯಾಗಿದ್ದನೋ ಆ ಜೈಲಿನ ಜೈಲರ್ ಆ ವ್ಯಕ್ತಿ ಅಗಿದ್ದನು. ನನಗೆ ಬಹಳ ಹಿಂಸೆ ಕೊಟ್ಟಿದ್ದನು ಎಟು ತಿಂದು , ತಿಂದು ಸುಸ್ತಾಗಿ ನೀರು

ದಿನಕ್ಕೊಂದು ಕಥೆ 920

*🌻ದಿನಕ್ಕೊಂದು ಕಥೆ🌻* ಒಂದು ಫೋನಿನ ಕಥೆ 📱 〰〰〰〰〰〰〰〰〰〰〰 ಒಬ್ಬ ಅರ್ಚಕರು ದೇವಸ್ಥಾನದಲ್ಲಿ ತಡರಾತ್ರಿವರೆಗೂ ಕೆಲಸ ಮಾಡುತಿದ್ದರು. ಮರುದಿನ ಮಹಾಪೂಜೆ ಇದ್ದಿದ್ದರಿಂದ ಅದರ ತಯಾರಿಯಲ್ಲಿಯೇ ವ್ಯಸ್ತರಾಗಿದ್ದರು. ಆದರೆ ತುಂಬಾ ತಡವಾಗಿತ್ತು ಹಾಗೂ ಎಂದಿನಂತೆಯೇ ತಮ್ಮ ಮಗಳಿಗೆ ದೇವಸ್ಥಾನದ ಲ್ಯಾಂಡ್ ಲೈನಿಂದ  ಕರೆ ಮಾಡಿದರು. ರಿಂಗ್ ಆಗ್ತಾನೆ ಇತ್ತು ಆದರೆ ಮಗಳು ಕರೆಯನ್ನ ಸ್ವೀಕರಿಸಲೇ ಇಲ್ಲಾ. ಅರ್ಚಕರು ಉಳಿದ ಎಲ್ಲಾ ಕೆಲಸಗಳನ್ನ ಮುಗಿಸಿ ನಂತರ ಕರೆ ಮಾಡಿದರಾಯಿತು ಎಂದುಕೊಂಡು ದೇವಸ್ಥಾನಕ್ಕೆ  ಬೀಗ ಹಾಕುವ ಮುನ್ನ ಮತ್ತೊಮ್ಮೆ ಮಗಳಿಗೆ ದೇವಸ್ಥಾನದ ಲ್ಯಾಂಡ್ ಲೈನಿಂದ  ಕರೆ ಮಾಡಿದರು. ಈ ಬಾರಿ ತಕ್ಷಣವೇ ಮಗಳು ಕರೆಯನ್ನ ಸ್ವೀಕರಿಸಿದಳು. ಅರ್ಚಕರು, *”ಮಗಳೇ ನನಗೆ ಗಾಬರಿಯಾಗಿಬಿಟ್ಟಿತ್ತು. ನೀನು ಮೊದಲ ಸಲ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ ?”* ಎಂದರು. ಇದಕ್ಕೆ ಮಗಳು ಆಶ್ಚರ್ಯಳಾಗಿ *”ನನಗ್ಯಾವ ಕರೆಯೂ ಬಂದಿರಲೇ ಇಲ್ಲಾ ಅಪ್ಪಾಜಿ ಹಾಗೂ ಇದೆ ಮೊದಲ ಬಾರಿ ರಿಂಗ್ ಆಗಿದ್ದು”* ಎಂದಳು. ಅದಕ್ಕೆ ಅರ್ಚಕರು ಯೋಚಿಸಿ ಟೆಲಿಫೋನಲ್ಲಿ ಏನಾದರೂ ತೊಂದರೆ ಆಗಿರಬಹುದು ಎಂದುಕೊಂಡು ಆ ಮಾತನ್ನ ಅಲ್ಲಿಯೇ ಅರ್ಧಕ್ಕೆ ಬಿಟ್ಟರು. ಮರುದಿನ ದೇವಸ್ಥಾನದ ಆ ಲ್ಯಾಂಡ್ ಲೈನಿಗೆ ಒಂದು ಕರೆ ಬರುತ್ತದೆ. ಆ ಕಡೆಯಿಂದ  ವ್ಯಕ್ತಿಯೊರ್ವ ಕೇಳ್ತಾನೆ *”ಕಳೆದ ರಾತ್ರಿ 10 ಗಂಟೆಗೆ ನೀವ್ಯಾಕೆ ನನಗೆ ಕಾಲ್ ಮಾಡಿದ್ರಿ ?”* ಅಂತ. ಅರ್ಚಕರಿಗೆ ಎಲ್ಲವೂ ಅರ್ಥವಾಗಿತ್ತು ಹಾ

ದಿನಕ್ಕೊಂದು ಕಥೆ 919

*🌻ದಿನಕ್ಕೊಂದು ಕಥೆ🌻* ಅಂದು *ಕಡಿದಾಳು ಮಂಜಪ್ಪ(ತೀರ್ಥಹಳ್ಳಿ)ನವರು ತಿರಸ್ಕರಿಸಿದ ಪ್ಯಾಲೇಸ್ ಗ್ರೌಂಡಿನ ಆ ಒಂದು ಎಕರೆ ಭೂಮಿ ಬೆಲೆ ಇಂದು ನೂರಾರು ಕೋಟಿ. ಇಂದು ಅವರ ಜನುಮ ದಿನ* *ಮುಖ್ಯಮಂತ್ರಿಯಂತಹ ರಾಜ್ಯದ ಅತ್ಯುನ್ನತ ಅಧಿಕಾರ ಸ್ಥಾನದಿಂದ ಹೊರ ಬಂದಿರುತ್ತಾರೆ.ವೈಭವೋಪೇತ ಬಂಗಲೆಯಿಂದ ಬೆಂಗಳೂರಿನ ಆಂಡ್ರಿ ರಸ್ತೆಯಲ್ಲಿರುವ ಬಾಡಿಗೆ ಮನೆಗೆ ಬಂದಿದ್ದ ಸಮಯ.ತಮ್ಮ ಜೀವನೋಪಾಯಕ್ಕಾಗಿ ಮತ್ತೆ ಕರಿಕೋಟು ಹಾಕಿ ಹೈಕೋರ್ಟಿನ ಲಾಯರ್ ಆಗಿ ಹೋಗುತ್ತಿರುತ್ತಾರೆ.ಸಮರ್ಥ ಲಾಯರ್ ಆಗುವಲ್ಲಿ ದಾಪುಗಾಲಿಡುತ್ತಾ ಮುಂದುವರಿಯುತ್ತಿರುವಾಗ ಮುಖ್ಯಮಂತ್ರಿಯಂತಹ ಅತ್ಯುನ್ನತ ಹುದ್ದೆ ಹೊಂದಿದವರು ಮತ್ತೆ ಲಾಯರ್ ಗಿರಿ ಮಾಡುವ ಬಗ್ಗೆ ಇವರ ಹಿತೈಷಿಗಳನೇಕರು ಅಪಸ್ವರ ಎತ್ತಿದರೂ ಜೀವನೋಫಾಯಕ್ಕಾಗಿ ಮನೆ ಆಸ್ತಿ ಮಾಡಿಕೊಳ್ಳದೆ ಕೇವಲ ಪ್ರಾಮಾಣಿಕತೆಯನ್ನೇ ಮೈತುಂಬಾ ಹೊದ್ದುಕೊಂಡಿದ್ದ  ಈ ಪ್ರವಾದಿಗೆ ಲಾಯರಾಗಿ ಪ್ರಾಕ್ಟೀಸ್ ಮಾಡುವುದು ಅವಮಾನವೆನಿಸಲಿಲ್ಲ.ಮುಖ್ಯಮಂತ್ರಿ ಆದವನೊಬ್ಬ ಮತ್ತೆ ತನ್ನಗ ಹಿಂದಿನ ವೃತ್ತಿಗೆ ಮರಳಿದ ಘಟನೆ ಭಾರತದಂತಹ ದೇಶದಲ್ಲಿ ಬಹು ಅಪರೂಪವೇ ಸರಿ*. *ಒಂದು ಸಂಜೆ  ಒಳಕೋಣೆಯ ಬಾಗಿಲು ಹಾಕಿಕೊಂಡು ತಮ್ಮ ಕಕ್ಷಿಗಾರರೊಂದಿಗೆ ಚರ್ಚೆಮಾಡುತ್ತಿದ್ದಾರೆ.ಹೊರಗಡೆ ಆಡುತ್ತಿದ್ದ ಇವರ ಮಕ್ಕಳಿಬ್ಬರು ಓಡೋಡಿ ಒಳಗಡೆ ಬಂದು ಯಾರೋ ವಿಶ್ವೇಶರಯ್ಯ ಎಂಬುವರು ನಿಮ್ಮನ್ನು ನೋಡಲು ಬಂದಿದ್ದಾರೆ ಎಂದಾಗ ಇವರ ಪರಿಚಿತರಾಗಿದ್ದ ತಾಲೂಕು ಮ್ಯಾಜಿಸ್ಟ್ರೇಟ್ ಆಗಿದ್