ದಿನಕ್ಕೊಂದು ಕಥೆ 920

*🌻ದಿನಕ್ಕೊಂದು ಕಥೆ🌻*
ಒಂದು ಫೋನಿನ ಕಥೆ 📱
〰〰〰〰〰〰〰〰〰〰〰
ಒಬ್ಬ ಅರ್ಚಕರು ದೇವಸ್ಥಾನದಲ್ಲಿ ತಡರಾತ್ರಿವರೆಗೂ ಕೆಲಸ ಮಾಡುತಿದ್ದರು. ಮರುದಿನ ಮಹಾಪೂಜೆ ಇದ್ದಿದ್ದರಿಂದ ಅದರ ತಯಾರಿಯಲ್ಲಿಯೇ ವ್ಯಸ್ತರಾಗಿದ್ದರು. ಆದರೆ ತುಂಬಾ ತಡವಾಗಿತ್ತು ಹಾಗೂ ಎಂದಿನಂತೆಯೇ ತಮ್ಮ ಮಗಳಿಗೆ ದೇವಸ್ಥಾನದ ಲ್ಯಾಂಡ್ ಲೈನಿಂದ  ಕರೆ ಮಾಡಿದರು.

ರಿಂಗ್ ಆಗ್ತಾನೆ ಇತ್ತು ಆದರೆ ಮಗಳು ಕರೆಯನ್ನ ಸ್ವೀಕರಿಸಲೇ ಇಲ್ಲಾ. ಅರ್ಚಕರು ಉಳಿದ ಎಲ್ಲಾ ಕೆಲಸಗಳನ್ನ ಮುಗಿಸಿ ನಂತರ ಕರೆ ಮಾಡಿದರಾಯಿತು ಎಂದುಕೊಂಡು ದೇವಸ್ಥಾನಕ್ಕೆ  ಬೀಗ ಹಾಕುವ ಮುನ್ನ ಮತ್ತೊಮ್ಮೆ ಮಗಳಿಗೆ ದೇವಸ್ಥಾನದ ಲ್ಯಾಂಡ್ ಲೈನಿಂದ  ಕರೆ ಮಾಡಿದರು.

ಈ ಬಾರಿ ತಕ್ಷಣವೇ ಮಗಳು ಕರೆಯನ್ನ ಸ್ವೀಕರಿಸಿದಳು. ಅರ್ಚಕರು, *”ಮಗಳೇ ನನಗೆ ಗಾಬರಿಯಾಗಿಬಿಟ್ಟಿತ್ತು. ನೀನು ಮೊದಲ ಸಲ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ ?”* ಎಂದರು. ಇದಕ್ಕೆ ಮಗಳು ಆಶ್ಚರ್ಯಳಾಗಿ *”ನನಗ್ಯಾವ ಕರೆಯೂ ಬಂದಿರಲೇ ಇಲ್ಲಾ ಅಪ್ಪಾಜಿ ಹಾಗೂ ಇದೆ ಮೊದಲ ಬಾರಿ ರಿಂಗ್ ಆಗಿದ್ದು”* ಎಂದಳು. ಅದಕ್ಕೆ ಅರ್ಚಕರು ಯೋಚಿಸಿ ಟೆಲಿಫೋನಲ್ಲಿ ಏನಾದರೂ ತೊಂದರೆ ಆಗಿರಬಹುದು ಎಂದುಕೊಂಡು ಆ ಮಾತನ್ನ ಅಲ್ಲಿಯೇ ಅರ್ಧಕ್ಕೆ ಬಿಟ್ಟರು.

ಮರುದಿನ ದೇವಸ್ಥಾನದ ಆ ಲ್ಯಾಂಡ್ ಲೈನಿಗೆ ಒಂದು ಕರೆ ಬರುತ್ತದೆ. ಆ ಕಡೆಯಿಂದ  ವ್ಯಕ್ತಿಯೊರ್ವ ಕೇಳ್ತಾನೆ *”ಕಳೆದ ರಾತ್ರಿ 10 ಗಂಟೆಗೆ ನೀವ್ಯಾಕೆ ನನಗೆ ಕಾಲ್ ಮಾಡಿದ್ರಿ ?”* ಅಂತ. ಅರ್ಚಕರಿಗೆ ಎಲ್ಲವೂ ಅರ್ಥವಾಗಿತ್ತು ಹಾಗೂ ಅವರು ಮುಂದೆ ಮಾತನಾಡುತ್ತಾ *”ಇಲ್ಲಪ್ಪಾ, ನಾನು ನನ್ನ ಮಗಳಿಗೆ ಕರೆ ಮಾಡುವಾಗ ತಪ್ಪಿ ಸಮಯವಲ್ಲದ ಸಮಯದಲ್ಲಿ ನಿನಗೆ ಕರೆ ಬಂದು ತೊಂದರೆಯಾಯಿತು. ದಯವಿಟ್ಟು ಕ್ಷಮಿಸು”* ಅಂದರು.

ಅದಕ್ಕೆ ಆ ವ್ಯಕ್ತಿ ಹೇಳಿದನು, *”ಇಲ್ಲಾ ಅರ್ಚಕರೆ,  ಸರಿಯಾದ ಸಮಯಕ್ಕೆ ಸರಿಯಾದ ಕರೆಯೇ ಬಂದಿದೆ. ನಿಮಗೆ ಗೊತ್ತೇ , ನಿನ್ನೆ ರಾತ್ರಿ 10 ಗಂಟೆಗೆ ನಾನು ಆತ್ಮಹತ್ಯೆ ಮಾಡಿಕೊಳ್ಳುವವನಿದ್ದು ಅದೇ ಸಮಯಕ್ಕೆ ನಾನು ಆ ಭಗವಂತನಿಗೆ “ನಿನಗೇನಾದರೂ ನಾನು ಸಾಯಬಾರದು ಎಂದೆನಿಸಿದರೇ ನಿನ್ನ ಇರುವಿಕೆಯ ಬಗ್ಗೆ ನನಗೆನಾದರೂ ಸುಳಿವು ನೀಡು”* ಎಂದು ಬೇಡಿಕೊಂಡಿದ್ದೆ.

ತಕ್ಷಣವೇ ನನ್ನ ಮೊಬೈಲ್ ರಿಂಗ್ ಆಯಿತು ಹಾಗೂ ಕಾಲರ್ ಐಡಿಯಲ್ಲಿ “ದೇವಸ್ಥಾನ”ಎಂದು ಬರೆದಿತ್ತು. ನಾನು ಅಕ್ಷರಶಃ ಅವಾಕ್ಕಾಗಿಬಿಟ್ಟಿದ್ದೆ,ಹೆದರಿಬಿಟ್ಟಿದ್ದೆ ಹಾಗೂ ಆ ಕರೆ ಸ್ವೀಕರಿಸುವ ಧೈರ್ಯ ನನ್ನಲ್ಲಿರಲಿಲ್ಲಾ.
〰〰〰〰〰〰〰〰〰〰〰
*ಅರ್ಥಾತ್ ನೀವು ಪ್ರೀತಿಸುವ ಆ ಸರ್ವಶಕ್ತಿಶಾಲಿ ಭಗವಂತ ನಿಮಗಿಂತ ಹೆಚ್ಚು ನಿಮ್ಮನ್ನ ಪ್ರೀತಿಸುತ್ತಾನೆ ಹಾಗೆಯೇ ಸದಾ ನಿಮ್ಮ ಪ್ರಾರ್ಥನೆಯನ್ನ ಕೇಳುತ್ತಿರುತ್ತಾನೆ. ಅದ್ಯಾವುದೋ ಶಕ್ತಿ ಖಂಡಿತ ಇದೆ ಹಾಗೂ ಈ ಇಡೀ ಜಗತ್ತನ್ನ ಮುನ್ನಡೆಸುತ್ತಿದೆ.🙏🏼*

*ಆದ್ದರಿಂದ ಮುಂದಿನ ಬಾರಿ ನಿಮಗೇನಾದರೂ ತೊಂದರೆಯಾದಾಗ ಕಣ್ಣುಮುಚ್ಚಿ ಶುದ್ಧ ಮನಸಿನಿಂದ ಆ ಭಗವಂತನಿಗೆ ಅದರ ಪರಿಹಾರ ಕೇಳಿ ಉತ್ತರ ಖಂಡಿತ ಸಿಕ್ಕೆ ಸಿಕ್ಕುತ್ತೇ.🙏🏼*

*ನೋವು ಸಂಕಷ್ಟಗಳು ಅವನ ಸೃಷ್ಟಿಯ ತಾತ್ಕಾಲಿಕ ಕ್ಷಣಗಳೇ ಹೊರತು ಅವೇ ಶಾಶ್ವತವಲ್ಲ.👌🏽*

ಕೃಪೆ:ವಾಟ್ಸಪ್ ಗ್ರೂಪ್
ಸಂಗ್ರಹ:ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097