Posts

Showing posts from June, 2022

ದಿನಕ್ಕೊಂದು ಕಥೆ 1047

*🌞ದಿನಕ್ಕೊಂದು ಕಥೆ 🌞* ಕಾಲೇಜು ಪ್ರಿನ್ಸ್ ಪಾಲರ ಮನೆಗೆ ತೆಂಗಿನ ಮರಕ್ಕೆ ಹತ್ತಲು ಸುಬ್ಬಣ್ಣ ಹೋಗಿದ್ದ. ಮನೆಯ ಜಗಲಿಯಲ್ಲಿ ಪ್ರಿನ್ಸಿಪಾಲರು ಸೋಫಾದಲ್ಲಿ ಕುಳಿತ್ತಿದ್ದರು. ಅವರೊಂದಿಗೆ ಮಾತನಾಡುತ್ತ ಸುಬ್ಬಣ್ಣ ಕೇಳಿದ "ಧನಿ ನಿಮಗೆ ಕಾಲೇಜಿನಲ್ಲಿ ಸಂಬಳ ಎಷ್ಟು ಸಿಗುತ್ತದೆ". ಅದಕ್ಕೆ ಅವರು ಹೇಳಿದರು "ಒಂದು ಒಂದೂವರೆ ಲಕ್ಷದಷ್ಟು". ಆಗ ಸುಬ್ಬಣ್ಣ ಹೇಳಿದ "ಅದು ಸ್ವಲ್ಪ ಜಾಸ್ತಿ ಆಯಿತು ಅಲ್ವಾ" ಅದಕ್ಕೆ ಪ್ರಿನ್ಸಿಪಾಲ್ ಹೇಳಿದರು "ಶಾಲೆಗೆ ಹೋಗೋ ಸಮಯದಲ್ಲಿ ಹಲಸಿನ ಮರ ಮಾವಿನ ಮರ ಏರಿ ಆಟ ಆಡದೆ ಶಾಲೆಗೆ ಹೋಗಬೇಕಿತ್ತು ಈಗ ಅಸೂಯೆ ಪಟ್ಟು ಪ್ರಯೋಜನ ಇಲ್ಲ "ಎಂದು ನಕ್ಕುಬಿಟ್ಟರು. ನಂತರ ಸುಬ್ಬಣ್ಣ ತೆಂಗಿನ ಮರಕ್ಕೆ ಹತ್ತಿ ತೆಂಗಿನ ಕಾಯಿ ಎಲ್ಲಾ ತೆಗೆದು. ಪ್ರಿನ್ಸಿಪಾಲರ ಹತ್ತಿರ ಕೂಲಿಗಾಗಿ ಕೈ ಚಾಚಿದ ಆಗ ಪ್ರಿನ್ಸಿಪಾಲರು ಅವನ ಕೈಗೆ 100 ರೂಪಾಯಿ ನೋಟೊಂದನ್ನು ಕೈಗೆ ಕೊಟ್ಟರು. ಆಗ ಸುಬ್ಬಣ್ಣ ಹೇಳಿದ "ನನ್ನ ಕೂಲಿ ನೂರು ರೂಪಾಯಿ ಅಲ್ಲ 500 ರೂಪಾಯಿ "ಎಂದ. ಅದಕ್ಕೆ ಪ್ರಿನ್ಸಿಪಾಲರು "ಅದು ಜಾಸ್ತಿಯಾಯಿತು ಅಲ್ವ" ಎಂದರು. ಸುಬ್ಬಣ್ಣ ಅದಕ್ಕೆ ಉತ್ತರಿಸಿದ "ಚಿಕ್ಕ ವಯಸ್ಸಿನಲ್ಲಿ ಕಾಗದ, ಪೆನ್ನು, ಶಾಲೆ ಕಾಲೇಜು ಅಂತ ತಿರುಗಾಡುವಾಗ ಆಲೋಚಿಸಬೇಕಿತ್ತು. ತೆಂಗಿನ ಮರ ಹತ್ತಲು ಕೂಡ ಕಲಿಯಬೇಕು ಎಂದ".... ಪ್ರಿನ್ಸಿಪಾಲರು ಒಮ್ಮೆಗೆ ದಂಗಾಗಿ ಸುಬ್ಬಣ್ಣನಿಗೆ 500

ದಿನಕ್ಕೊಂದು ಕಥೆ 1046

*🌻 ದಿನಕ್ಕೊಂದು ಕಥೆ 🌻* *ವಿದುರನು ಶಸ್ತ್ರಸಂನ್ಯಾಸ.*  ಪಾಂಡವರು ಹನ್ನೆರಡು ವರ್ಷ ವನವಾಸವನ್ನು ಒಂದು ವರ್ಷ  ಅಜ್ಞಾತವಾಸವನ್ನು ಮುಗಿಸಿ ಬಂದರು. ಷರತ್ತಿನಂತೆ ಅವರ ಪಾಲಿನ ಅರ್ಧರಾಜ್ಯವನ್ನು ಕೌರವರು ಕೊಡಬೇಕು. ಆದರೆ ದುರ್ಯೋಧನ ಕೊಡುವುದಿಲ್ಲ .ಸಂಧಾನ ಮಾಡಿಕೊಳ್ಳಬೇಕು.  ಪಾಂಡವರು ಕೃಷ್ಣನ ಜೊತೆ ಕುಳಿತು ಮಾತುಕತೆ ನಡೆಸಿ ಅದರಂತೆ ಕೃಷ್ಣನೇ ಇದರ ರಾಯಭಾರಿಯಾಗಿ ಹೋಗಿ ಸಂಧಾನ ನಡೆಸಬೇಕು ಎಂದು ತೀರ್ಮಾನಿಸಿದರು.  ಒಂದು ಶುಭ ದಿನ ಕೃಷ್ಣನು ಸೂರ್ಯೋದಯಕ್ಕೂ ಮುನ್ನವೇ ಸ್ನಾನ , ಸಂಧ್ಯಾವಂದನೆ, ಪ್ರಾತರ್ವಿಧಿಗಳನ್ನು ಮುಗಿಸಿ ಸಾರಥಿಯೋಡನೆ ರಥದಲ್ಲಿ ಕುಳಿತು ಪಾಂಡವರಿಂದ ಬೀಳ್ಕೊಂಡು ಹಸ್ತಿನಾಪುರಕ್ಕೆ ಬರುತ್ತಿದ್ದಾನೆ. ಒಂದಷ್ಟು ದೂರ ಬಂದ ಮೇಲೆ ಸಣ್ಣ ಸಣ್ಣ ಸಂಸ್ಥಾನದ ರಾಜರುಗಳೆಲ್ಲ ಬಂದು ಕೃಷ್ಣನನ್ನು ಸ್ವಾಗತಿಸಿ ಅತಿಥಿ ಸತ್ಕಾರಕ್ಕಾಗಿ ಆಹ್ವಾನಿಸುತ್ತಾರೆ.ಕೃಷ್ಣನು ಮುಗುಳ್ನಗೆಯಿಂದಲೇ ಸತ್ಕಾರ ಗಳನ್ನು ಇನ್ನೂಮ್ಮೆ ಸ್ವೀಕರಿಸುತ್ತೇನೆ ಎಂದು ಹೇಳಿ  ಅವರಿಂದ ಬೀಳ್ಕೊಂಡು ಹಸ್ತಿನಾಪುರದ ದ್ವಾರದ ಸಮೀಪ ಬಂದಿದ್ದಾನೆ.  ಕೃಷ್ಣನನ್ನು ಸ್ವಾಗತಿಸಲು ಅರಮನೆಯ ಪ್ರಮುಖರಾದ ಭೀಷ್ಮ ,ದ್ರೋಣ, ವಿದುರ ,ಕೃಪಾಚಾರ್ಯರು ನಿಂತಿದ್ದರೆ ,ಕೃಷ್ಣನನ್ನು ನೋಡಲು ಹಸ್ತಿನಾಪುರದ ಜನಸ್ತೋಮವೇ ಕಾತರಿಸಿ ಕಾಯುತ್ತಿದೆ. ಕುದುರೆಯ ಖರಪುಟದ ಸದ್ದು ಕೇಳಿಸಿತು. ರಥದಲ್ಲಿ ವಿರಾಜಮಾನನಾಗಿ ಕುಳಿತಿದ್ದ ಕೃಷ್ಣನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.  ಕೃಷ್ಣ ಬರುತ್ತಿರು

ದಿನಕ್ಕೊಂದು ಕಥೆ 1045

*🌻ದಿನಕ್ಕೊಂದು ಕಥೆ🌻* *ತಪಸ್ಸಿಗಿಂತ 'ವಿಶ್ವಾಸ ಮತ್ತು ನಂಬಿಕೆ' ಬೇಕು.* ಪ್ರಾಚೀನ ಕಾಲದಲ್ಲಿ ನಡೆದ ಕಥೆ ,  ಒಂದು  ಮರದಲ್ಲಿ  ಪುಟ್ಟ ಪಕ್ಷಿ  ಗೂಡಿನಲ್ಲಿ ತನ್ನ ಎರಡು  ಮರಿಗಳೊಂದಿಗೆ ವಾಸವಾಗಿತ್ತು. ಪುಟ್ಟ ಪಕ್ಷಿ ದಿನವೂ  ಹೊರಗೆ ಹೋಗಿ ತನಗೂ ಹಾಗೂ ಮರಿಗಳಿಗೆ  ಆಹಾರ ತಂದು  ಕೊಕ್ಕಿನಿಂದ ಮರಿಗಳಿಗೆ  ತಿನ್ನಿಸಿ,  ಆಟವಾಡಿ  ದಿನ ಕಳೆಯುತ್ತಾ  ಸಂತೋಷವಾಗಿದ್ದವು.  ಹೀಗೆ ಒಂದು ದಿನ ತಾಯಿ ಪಕ್ಷಿಯು ಆಹಾರ ತರುವಾಗ  ಆಕಾಶವೆಲ್ಲಾ ಮೋಡ  ಕವಿತಿರುವುದನ್ನು  ನೋಡಿ  ಲಘು ಬಗೆ ಯಿಂದ ಗೂಡಿಗೆ ಬಂದು ಸೇರಿತು. ಅದು ಅಂದು ಕೊಂಡಂತೆ ಮಳೆ ಬಂದಿತು. ಎರಡು  ದಿನಗಳಾದರೂ ಮಳೆ ಕಡಿಮೆಯಾಗಲಿಲ್ಲ. ಜೋರಾಗಿಯೇ  ಸುರಿಯುತ್ತಿತ್ತು. ಹೀಗಾಗಿ ತಾಯಿ ಪಕ್ಷಿ ಹೊರಗೆ ಹೋಗಿ  ತನ್ನ  ಮರಿಗಳಿಗೆ ಆಹಾರ ತರಲು ಸಾಧ್ಯವಾಗಲಿಲ್ಲ. ಮರಿಗಳು ತಾಯಿ ಮುಂದೆ ತಮ್ಮ ಕೊಕ್ಕನ್ನು  ಕಳೆದು ಆಹಾರ ಕೇಳುತ್ತಿದ್ದವು. ಮರಿಗಳು ಹಸಿವಿಗಾಗಿ   ಒದ್ದಾಡುವುದನ್ನು ತಾಯಿ ಪಕ್ಷಿಗೆ ನೋಡಲಾಗಲಿಲ್ಲ. ಮಳೆ ಕಡಿಮೆಯಾದ ಹೊರತು ಆಹಾರ ತರಲು ಅದರ ಕೈಯಲ್ಲಿ ಸಾಧ್ಯವಿರಲಿಲ್ಲ.  ಆಗ ಅದು ಕೃಷ್ಣನನ್ನು ಪ್ರಾರ್ಥಿಸುತ್ತಾ,  ಹೀಗೆ ಹೇಳಿತು. ಹೇ ಪ್ರಭು ನೀನು ಗೋಕುಲ ಪರ್ವತವನ್ನೆ  ಎತ್ತಿ  ಗೋಪಾಲಕರ  ಜೀವವನ್ನು ರಕ್ಷಣೆ  ಮಾಡಿದ್ದಿ,ಅದೇ ತರಹ ನನ್ನ ಮಕ್ಕಳ ಜೀವವನ್ನು ರಕ್ಷಣೆ ಮಾಡು ಎಂದು ಕೇಳುತ್ತಿತ್ತು. ಆ ಸಮಯಕ್ಕೆ  ದ್ವಾರಕಾನಗರದಲ್ಲಿ ಕೃಷ್ಣನು ತನ್ನ ಅಂತಃಪುರದಲ್ಲಿ ರುಕ್ಮಿಣಿ ಜೊ