ದಿನಕ್ಕೊಂದು ಕಥೆ 1047

*🌞ದಿನಕ್ಕೊಂದು ಕಥೆ 🌞*

ಕಾಲೇಜು ಪ್ರಿನ್ಸ್ ಪಾಲರ ಮನೆಗೆ ತೆಂಗಿನ ಮರಕ್ಕೆ ಹತ್ತಲು ಸುಬ್ಬಣ್ಣ ಹೋಗಿದ್ದ. ಮನೆಯ ಜಗಲಿಯಲ್ಲಿ ಪ್ರಿನ್ಸಿಪಾಲರು ಸೋಫಾದಲ್ಲಿ ಕುಳಿತ್ತಿದ್ದರು. ಅವರೊಂದಿಗೆ ಮಾತನಾಡುತ್ತ ಸುಬ್ಬಣ್ಣ ಕೇಳಿದ "ಧನಿ ನಿಮಗೆ ಕಾಲೇಜಿನಲ್ಲಿ ಸಂಬಳ ಎಷ್ಟು ಸಿಗುತ್ತದೆ". ಅದಕ್ಕೆ ಅವರು ಹೇಳಿದರು "ಒಂದು ಒಂದೂವರೆ ಲಕ್ಷದಷ್ಟು". ಆಗ ಸುಬ್ಬಣ್ಣ ಹೇಳಿದ "ಅದು ಸ್ವಲ್ಪ ಜಾಸ್ತಿ ಆಯಿತು ಅಲ್ವಾ" ಅದಕ್ಕೆ ಪ್ರಿನ್ಸಿಪಾಲ್ ಹೇಳಿದರು "ಶಾಲೆಗೆ ಹೋಗೋ ಸಮಯದಲ್ಲಿ ಹಲಸಿನ ಮರ ಮಾವಿನ ಮರ ಏರಿ ಆಟ ಆಡದೆ ಶಾಲೆಗೆ ಹೋಗಬೇಕಿತ್ತು ಈಗ ಅಸೂಯೆ ಪಟ್ಟು ಪ್ರಯೋಜನ ಇಲ್ಲ "ಎಂದು ನಕ್ಕುಬಿಟ್ಟರು.

ನಂತರ ಸುಬ್ಬಣ್ಣ ತೆಂಗಿನ ಮರಕ್ಕೆ ಹತ್ತಿ ತೆಂಗಿನ ಕಾಯಿ ಎಲ್ಲಾ ತೆಗೆದು. ಪ್ರಿನ್ಸಿಪಾಲರ ಹತ್ತಿರ ಕೂಲಿಗಾಗಿ ಕೈ ಚಾಚಿದ ಆಗ ಪ್ರಿನ್ಸಿಪಾಲರು ಅವನ ಕೈಗೆ 100 ರೂಪಾಯಿ ನೋಟೊಂದನ್ನು ಕೈಗೆ ಕೊಟ್ಟರು. ಆಗ ಸುಬ್ಬಣ್ಣ ಹೇಳಿದ "ನನ್ನ ಕೂಲಿ ನೂರು ರೂಪಾಯಿ ಅಲ್ಲ 500 ರೂಪಾಯಿ "ಎಂದ. ಅದಕ್ಕೆ ಪ್ರಿನ್ಸಿಪಾಲರು "ಅದು ಜಾಸ್ತಿಯಾಯಿತು ಅಲ್ವ" ಎಂದರು. ಸುಬ್ಬಣ್ಣ ಅದಕ್ಕೆ ಉತ್ತರಿಸಿದ "ಚಿಕ್ಕ ವಯಸ್ಸಿನಲ್ಲಿ ಕಾಗದ, ಪೆನ್ನು, ಶಾಲೆ ಕಾಲೇಜು ಅಂತ ತಿರುಗಾಡುವಾಗ ಆಲೋಚಿಸಬೇಕಿತ್ತು. ತೆಂಗಿನ ಮರ ಹತ್ತಲು ಕೂಡ ಕಲಿಯಬೇಕು ಎಂದ".... ಪ್ರಿನ್ಸಿಪಾಲರು ಒಮ್ಮೆಗೆ ದಂಗಾಗಿ ಸುಬ್ಬಣ್ಣನಿಗೆ 500 ರೂ ಕೊಟ್ಟು ಮನೆಯ ಒಳಗೆ ನಡೆದರು.

ಯಾರ ಕೆಲಸವೂ ಕೀಳಲ್ಲ, ಎಲ್ಲಾ ವೃತ್ತಿಗೂ ಅದರದ್ದೇ ಆದ ವಿಶೇಷತೆಯಿದೆ ಅದರದ್ದೇ ಆದ ಗೌರವವಿದೆ. ಪರಸ್ಪರ ಗೌರವಿಸಿ ನಡೆಯೋಣ.

ಕೃಪೆ:Vasanth Bhat
*************************************

*🌞ದಿನಕ್ಕೊಂದು ಕಥೆ🌞*

"ಮಂಥರೆಯ ಪಿತೂರಿಯಿಂದಾದ ಮಹಾತ್ಕಾರ್ಯ" 

 ರಾಮಾಯಣ ಓದಿದವರಿಗೆ ಈ ಮಂಥರೆ ಯಾರು, ಏನು..? ಎಂಬುದು ತಿಳಿದಿರುತ್ತದೆ. 
ಈ ಮಂಥರೆಯು ಕೈಕೆಯ ತಂದೆಯ ಮನೆಯಲ್ಲಿ ಕೆಲಸಕ್ಕಿದ್ದವಳು. ಹಾಗೂ ಕೈಕೇಯಿಯನ್ನು ಚಿಕ್ಕಂದಿನಿಂದಲೇ ಎತ್ತಿ ಆಡಿಸಿದವಳು.‌ ಅವಳ ತಂದೆ-ತಾಯಿಗಿಂತಲೂ  ಹೆಚ್ಚಿನದಾಗಿ ಸಾಕಿ-ಸಲಹಿದವಳು. ಜೊತೆಗೆ ದಶರಥ ಕೈಕೆಯನ್ನು ಮದುವೆಯಾದ ಮೇಲೆ ಅವಳ ಜೊತೆ ಮಂಥರೆಯು ಬರುತ್ತಾಳೆ.  ಮೊದ-ಮೊದಲಿಗೆ ಎಲ್ಲವೂ ಚನ್ನಾಗಿರುತ್ತದೆ. ಯಾವಾಗ ದಶರಥ ಪುತ್ರಕಾಮೇಷ್ಟಿಯಾಗದಿಂದ‌ ಸಂತಾನ ಪಡೆಯುತ್ತಾನೋ ಅಲ್ಲಿಂದಲೇ ಈ ಮಂಥರೆಯ ಮನಸ್ಸು ನಿಧಾನವಾಗಿ ವಿಷಮಯವಾಗುತ್ತಾ ಹೋಗುತ್ತದೆ. ಹೀಗಿದ್ದಾಗ ರಾಮ-ಲಕ್ಷ್ಮಣ ಭರತ-ಶತೃಘ್ನರ ಮದುವೆಯಾದಗಲೂ ಕೊಂಕನ್ನು ನುಡಿದಿರುತ್ತಾಳೆ. ಆದರೆ ಭರತ ಮತ್ತು ಕೈಕೇಯಿ ಅವಳಿಗೆ  ಬುದ್ಧಿ ಹೇಳುತ್ತಾರೆ.  

ಹೀಗಿದ್ದಾಗಲೇ ಆ ಒಂದು ದಿನ ಬಂದೇಬಿಟ್ಟಿತು. ಅದೇ ರಾಮನ ಪಟ್ಟಾಭಿಷೇಕ. ಅಂದು ಈ ಮಂಥರೆ ಕೈಕೇಯಿಯ ತಲೆ ಕೆಡಿಸಿ, ವಿಷ ಬೀಜ ಬಿತ್ತಿ ರಾಮನ ಪಟ್ಟಾಭಿಷೇಕ ತಪ್ಪಿಸಿ ರಾಮನು ಸೀತಾಲಕ್ಷ್ಮಣ ಸಮೇತ ಕಾಡಿಗೆ ಹೋಗಲು ಕಾರಣಳಾಗುತ್ತಾಳೆ. ಅವಳ ಕುತಂತ್ರದಿಂದಲೇ ದಶರಥ ಕೊರಗಿ-ಕೊರಗಿ ಸಾಯುತ್ತಾನೆ. ಮುಂದೆ ಭರತನೂ ರಾಜ್ಯ ಬೇಡವೆಂದು  ರಾಮನ ಬಳಿಗೆ ಹೋಗಿ ಅವನ ಪಾದುಕೆ ತಂದು ಸಿಂಹಾಸನದ ಮೇಲಿಟ್ಟು ತಾನೂ ನಾರುಮಡಿ ತೊಟ್ಟು ತಪಸ್ವಿಯಾಗಿ ರಾಜ್ಯಭಾರ ಮಾಡುತ್ತಾನೆ.
ಮುಂದೆ ರಾಮ ಹಲವಾರು ಋಷಿಮುನಿಗಳಿಗೆ ದರುಶನ ನೀಡಿ, ಹಲವಾರು ರಾಕ್ಷಸರನ್ನು ಸಂಹರಿಸಿ, ಶಬರಿಗೆ ಮುಕ್ತಿ ನೀಡಿ, ಹನುಮಂತನನ್ನು ಕಂಡು, ಹಲವಾರು ವಾನರರ ಪರಾಕ್ರಮವನ್ನು ಪರಿಚಯಿಸಿ, ದುಷ್ಟ ರಾವಣ-ಕುಂಭಕರ್ಣರನ್ನು ಸಂಹರಿಸಿ ದೇವಾನು-ದೇವತೆಗಳಿಗೆ ಕಂಟಕವನ್ನು ತಪ್ಪಿಸಿ ಮತ್ತೆ ಅಯೋಧ್ಯೆಗೆ ಹಿಂದಿರುಗಿ 11700 ವರ್ಷಗಳವರೆಗೆ ಇಂದ್ರನ ಅಮರಾವತಿಯೇ ನಾಚುವಂತೆ ರಾಜ್ಯಭಾರ ಮಾಡುತ್ತಾನೆ.

ಇದು  ನಿಮಗೆ  ಗೊತ್ತಿರುವ ರಾಮಯಣದ ಕಥೆ.  ಆದರೆ ಇಲ್ಲಿ ಯೋಚಿಸ ಬೇಕಾದ ವಿಚಾರವೊಂದಿದೆ ಅದೇನೆಂದರೆ ಕೈಕೇಯಿ ಮಂಥರೆಯ ಮಾತನ್ನು ಕೇಳದೇ ಹೋಗಿದ್ದರೇ ರಾಮ ಕಾಡಿಗೆ ಬರುವ ಸಂದರ್ಭವೇ ಸೃಷ್ಟಿಯಾಗುತ್ತಿರಲಿಲ್ಲ. ಅವನು ಕಾಡಿಗೆ ಬಾರದೇ ಹೋಗಿದ್ದರೇ ಸಾವಿರಾರು ವರ್ಷಗಳಿಂದ ತಪಸ್ಸು ಮಾಡುತ್ತಿದ್ದ ಋಷಿಗಳು, ಗಂಧರ್ವರಿಗೆ ನಿರಾಸೆಯಾಗುತ್ತಿತ್ತು. ಅಷ್ಟೇ ಅಲ್ಲ ದುಷ್ಟ ರಾವಣ-ಕುಂಭಕರ್ಣರನ್ನ ಸಂಹರಿಸುವ ಪ್ರಸಂಗವೇ ಎದುರಾಗುತ್ತಿರಲಿಲ್ಲ. 
ಇದೆಲ್ಲದರ ಹಿಂದೆ  ಮಂಥರೆಯ ಪೂರ್ವ ನಿಯೋಜಿತ ಯೋಜನೆಯೆ ಕಾರಣ. ಅದೇನೆಂದರೆ ರಾಜ್ಯವನ್ನು ಆಳಲು ರಾಮನೇ ಬೇಕೆಂದಿಲ್ಲ, ಭರತನೇ ಸಾಕು. ಆದರೆ ರಾವಣನಂಥ ದೈತ್ಯನನ್ನು ಸಂಹರಿಸಲು ಭರತನಿಗೆ ಅಸಾಧ್ಯವಾಗುತ್ತಿತ್ತು. ಹಾಗಾಗಿಯೇ ಮಂಥರೆಯ ಪಿತೂರಿ ಕೆಲಸದಿಂದ ಲೋಕಕ್ಕೆ ಒಳ್ಳೆಯದಾಯಿತು. 

ನರಚಿತ್ತವೆ ಬೇರೆ
ಹರಿಚಿತ್ತವೇ ಬೇರೆ.

ಕೃಪೆ ನಿತ್ಯ ಸತ್ಯ.ಮುಖ ಪುಸ್ತಕ.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059