Posts

Showing posts from February, 2019

ದಿನಕ್ಕೊಂದು ಕಥೆ 911

*🌻ದಿನಕ್ಕೊಂದು ಕಥೆ🌻* ಬುದ್ಧನು ಒಂದು ದಿನ ಭಿಕ್ಷೆಗಾಗಿ ಒಬ್ಬ ಧನಿಕನ ಮನೆಗೆ ಹೋದ. ಸಿರಿತನದ ಅಹಂಭಾವದಿಂದ ಕೊಬ್ಬಿದ್ದ ಧನಿಕನು, ‘ಭಿಕ್ಷುವೇ, ನಿನಗೇನು ಬೇಕೋ ಕೋರಿಕೋ.! ಚಿನ್ನದ ನಾಣ್ಯಗಳೇ, ರತ್ನಾರಣಗಳೇ, ಹೊಟ್ಟೆ ತುಂಬ ಮೃಷ್ಟಾನ್ನದೂಟವೇ? ಏನು ಬೇಕಿದ್ದರೂ ಸಂಕೋಚವಿಲ್ಲದೆ ಕೇಳು, ಕೊಡುತ್ತೇನೆ’ ಎಂದ. ‘ನನಗೆ ಅಂಥ ಮಹತ್ತರವಾದ ಬೇಡಿಕೆಗಳು ಏನೂ ಇಲ್ಲ. ಆದರೂ ನಿನ್ನದು ಅಂತ ಇದ್ದರೆ ಏನಾದರೂ ಒಂದು ತಂದುಕೊಡು. ಅದನ್ನೇ ಸ್ವೀಕರಿಸುತ್ತೇನೆ’ ಬುದ್ಧ ಮುಗುಳ್ನಗುತ್ತ ಹೇಳಿದ.  ‘ಇಲ್ಲಿರುವುದೆಲ್ಲ ನನ್ನದೇ ತಾನೆ! ಏನು ಬೇಕಿದ್ದರೂ ಕೊಡಬಲ್ಲೆ. ತೆಗೆದುಕೋ, ಈ ರತ್ನಖಚಿತ ಒಡವೆಯೊಂದನ್ನು ನಿನಗೆ ತಂದುಕೊಡುತ್ತೇನೆ’ ಧನಿಕ ಒಡವೆಯನ್ನು ಅವನೆದುರು ಚಾಚಿದ. ಆದರೆ ಬುದ್ಧ ಅದನ್ನು ಸ್ವೀಕರಿಸಲಿಲ್ಲ. ‘ಇದು ನಿನ್ನದು ಹೇಗಾಗುತ್ತದೆ? ಬಡವರಿಗೆ ಹಣ ಸಾಲ ಕೊಟ್ಟು ಬಡ್ಡಿ ವಿಧಿಸಿ ಅವರಿಂದ ಅದನ್ನು ಮರಳಿಸಲಾಗದೆ ಬಿಟ್ಟುಹೋದ ಒಡವೆ ಇದಲ್ಲವೆ? ನಿನ್ನದಲ್ಲದ್ದು ನನಗೂ ಬೇಡ’ ಎಂದು ನಿರಾಕರಿಸಿದ.  ‘ಹೋಗಲಿ, ಪೆಟ್ಟಿಗೆ ತುಂಬ ಹಣ ಇದೆ. ಇದು ನನ್ನದೇ,ಇನ್ನೊಬ್ಬರದಲ್ಲ. ತೆಗೆದುಕೋ’ ಧನಿಕ ಹಣವನ್ನು ತಂದು ಬುದ್ಧನ ಎದುರಿಗಿರಿಸಿದ. ಬುದ್ಧ ಸಂತೃಪ್ತನಾಗಿರಲಿಲ್ಲ . ‘ಇದು ನಿನ್ನದಲ್ಲ. ಹಿರಿಯರು ಗಳಿಸಿಟ್ಟದ್ದು ನಿನ್ನದಾಗುವುದು ಹೇಗೆ? ನಿನ್ನದು ಮಾತ್ರ ನನಗೆ ಬೇಕು’ ಎಂದ ಆತ. ಧನಿಕನು ಒಂದೊಂದಾಗಿ ವಸ್ತುಗಳನ್ನು ತಂದು ಕೊಡುತ್ತಲೇ ಹೋದ. ಬುದ್ಧನು ಅದನ್ನು ತಿರಸ

ದಿನಕ್ಕೊಂದು ಕಥೆ 910

*🌻ದಿನಕ್ಕೊಂದು ಕಥೆ🌻*                                            ಶ್ರೀ ಕೃಷ್ಣ ಪರಮಾತ್ಮ ಕಂಸನನ್ನು ಸಂಹಾರ ಮಾಡಿದ ನಂತರ ಕಂಸನ ಮಾವ ಜರಾಸಂಧ ಕೋಪಗೊಂಡನು ಕೃಷ್ಣನನ್ನು ಕೊಲ್ಲಲು 17 ಬಾರಿ  ಮಥುರಾ ಮೇಲೆ ದಾಳಿ ನಡೆಸುತ್ತಾನೆ. ಅದು ಹೇಗೆಂದರೆ ಭೂಮಂಡಲದಲ್ಲಿರುವ ಎಲ್ಲ ರಾಕ್ಷಸರನ್ನು ಒಟ್ಟು ಗೂಡಿಸಿ ಒಂದು ಮಹಾ ಸೈನ್ಯವನ್ನು ಒಟ್ಟುಗೂಡಿಸಿ ಒಮ್ಮೆಲೇ ಕೃಷ್ಣನ ಸೈನ್ಯದ ಮೇಲೆ ಧಾಳಿ ಮಾಡುತ್ತಾನೆ ಆದ್ರೆ ಅವನು ಎಷ್ಟೋ ಸಲ ಹೀಗೆ ಮಾಡಿದರೂ ಪ್ರತಿ ಸಲ ಸೋಲುಂಡು ಮರಳಿ ಹೋಗುತ್ತಾನೆ. ವಿಶೇಷತೆ ಏನು ಅಂದ್ರೆ ಪ್ರತಿ ಸಲ ಜರಾಸಂಧ ಧಾಳಿ ಮಾಡಿದಾಗ ಶ್ರೀ ಕೃಷ್ಣನು ಇಡೀ ಸೈನ್ಯವನ್ನು ವಧಿಸುತ್ತಾನೆ ಆದ್ರೆ ಜರಾಸಂಧನನ್ನು ಮಾತ್ರ ಜೀವಂತವಾಗಿ ಬಿಡುತ್ತಾ ಇರುತ್ತಾನೆ ಇದೆಲ್ಲವನ್ನೂ ನೋಡಿದ ಬಲರಾಮನು ಶ್ರೀ ಕೃಷ್ಣನಿಗೆ ಕೇಳುತ್ತಾನೆ.... ನೀನು ಎಲ್ಲರನ್ನೂ ಕೊಂದು ಜರಸಂಧಾನನ್ನು ಏಕೆ ಕೊಲ್ಲದೆ ಹಾಗೆ ಬಿಡುತ್ತಿಯಾ? ಆಗ ಶ್ರೀ ಕೃಷ್ಣ ಹೇಳುತ್ತಾನೆ ...." ಭೂಮಿಯ ಮೂಲೆ ಮೂಲೆಗಳಲ್ಲಿರುವ ಎಲ್ಲಾ ದುಷ್ಟರನ್ನು ಹುಡುಕಿ ಅವರನ್ನು ಒಟ್ಟುಗೂಡಿಸಿ ಕೊಲ್ಲಲು ತುಂಬಾ ಸಮಯ ಮತ್ತು ಪ್ರಯಾಸ ಪಡಬೇಕಾಗುತ್ತದೆ ಅಲ್ಲವೇ ? ಆದರೆ ಜರಾಸಂಧ ನನ್ನ ಕೆಲಸವನ್ನು ಹಗುರ ಮಾಡುತ್ತಿದ್ದಾನೆ ,ನಾನು ಪ್ರತಿಸಲ ಅವನನ್ನು ಜೀವಂತವಾಗಿ ಬಿಟ್ಟಾಗಲೂ ಆತ ಭೂಮಂಡಲದ ಎಲ್ಲಾ ರಾಕ್ಷಕರನ್ನು ಒಂದೇ ಕಡೆ (................)  ಸೇರಿಸುತ್ತಾನೆ ಆಗ ನಾನು ಒಂದೇ ಸಲ ಎಲ್ಲರನ್ನ