Posts

Showing posts from December, 2023

ದಿನಕ್ಕೊಂದು ಕಥೆ 1083

🌻 *ದಿನಕ್ಕೊಂದು ಕಥೆ* 🌻        *ಅರ್ಚಕನ ಬೆಲೆ*                                                 ಒಂದು ದಿನ ಒಂದು ಕೋರ್ಟಿನಲ್ಲಿ ಜಡ್ಜ್ ಮುಂದೆ ಒಂದು ಕೇಸ್ ಬಂದಿತ್ತು. ಒಬ್ಬ ಫಿರ್ಯಾದಿ ತಂದ ಕೇಸ್ ಹೀಗಿತ್ತು. ಒಬ್ಬ ಮಾಮೂಲಿ ಅರ್ಚಕ, ದೇವಸ್ಥಾನದಲ್ಲಿ ಮಂಗಳಾರತಿ ತಟ್ಟೆಯ ಪುಡಿಗಾಸಿನಿಂದ ಬದುಕುವವನು, ಸರ್ಕಾರಕ್ಕೆ ಯಾವುದೇ ತೆರಿಗೆ ಕಟ್ಟದೇ ಕೆಲವೇ ಸಮಯದಲ್ಲಿ ಶ್ರೀಮಂತನಾದ ಎಂದರೆ ಅವನು ಅಕ್ರಮ ರೀತಿಯಲ್ಲಿ ಧನಸಂಪಾದನೆ ಮಾಡಿರಬೇಕು. ಆದ್ದರಿಂದ ಆ ಅರ್ಚಕನ ಅಕ್ರಮ ಸಂಪಾದನೆಯ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಶಿಕ್ಷೆ ವಿಧಿಸಬೇಕೆಂದು ಪ್ರಾರ್ಥನೆ. ' ಜಡ್ಜ್ ಮೊದಲು ಆ ಅರ್ಚಕನನ್ನು ಪ್ರಶ್ನೆ ಮಾಡಿದರು "ನಿಮ್ಮ ಮೇಲೆ ಅಕ್ರಮ ಧನ ಸಂಪಾದನೆಯ ಆರೋಪವಿದೆ. ನಿಮ್ಮ ಸಂಪಾದನೆ ಸಕ್ರಮವೋ ಅಕ್ರಮವೋ ಸ್ಪಷ್ಟ ಪಡಿಸಿ" ಅರ್ಚಕರು ಹೇಳಿದರು "ಅಯ್ಯಾ, ನನ್ನ ಬಳಿಯಿರುವ ಧನವೆಲ್ಲಾ ಸಕ್ರಮವಾಗಿ ನನಗೆ ಬಂದಿದ್ದು". ಜಡ್ಜ್ ಸವಾಲು ಹಾಕಿದರು. "ಸಾಧಾರಣ ಅರ್ಚಕವೃತ್ತಿಯಿಂದ ಬದುಕುತ್ತಿರುವ ನೀವು ಗಳಿಸಿದ್ದೆಲ್ಲಾ ಸಕ್ರಮವಾಗಿ ಎಂದು ಹೇಗೆ ನಂಬುವುದು?" ಅರ್ಚಕರು ಹೇಳುತ್ತಾರೆ, "ಅಯ್ಯಾ, ಒಂದು ದಿನ ನಾನು ಊರಿನ ಕೆರೆಯಬಳಿ ಸಂಧ್ಯಾವಂದನೆಯಲ್ಲಿರುವಾಗ ಸಂಜೆಯ ಮಬ್ಬು ಬೆಳಕಿನಲ್ಲಿ ಯಾರೋ ಇಬ್ಬರು ಕೆರೆಯಂಚಿನಲ್ಲಿ ನಿಂತು ಅಳುವುದು ಕೇಳಿಸಿ ನಾನು ಅಲ್ಲಿಗೆ ಧಾವಿಸಿದೆ. ದಂಪತಿಗಳು ಇಬ್ಬರು ಕೆರೆಗೆ ಹಾರಿ ಆ

ದಿನಕ್ಕೊಂದು ಕಥೆ 1082

*🌻ದಿನಕ್ಕೊಂದು ಕಥೆ🌻* *ತಿಮ್ಮಪ್ಪನ ದರ್ಶನ* ಒಬ್ಬ ಅಜ್ಜಿ ಕೂಲಿ ಕೆಲಸ ಮಾಡಿ ಕಾಲಯಾಪನೆ ಮಾಡುತ್ತಿದ್ದಳು. ಅವಳ ಬಹಳ ಕಾಲದ ಬಯಕೆ ಸಾಯುವ ಮುನ್ನ ಒಮ್ಮೆ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿ ಬರುವುದು. ಅದಕ್ಕಾಗಿ ಅವಳು ದಿನವೂ ಸಂಪಾದನೆಯ ಒಂದಷ್ಟು ಭಾಗವನ್ನು ಕೂಡಿಡುತ್ತಿದ್ದಳು. ಇನ್ನೇನು ತಿರುಪತಿಗೆ ಹೋಗಲು ಬೇಕಾದಷ್ಟು ಹಣ ಸಂಗ್ರಹವಾಯಿತು ಎನ್ನುವಾಗ, ಆ ಊರಿನಲ್ಲಿ ಹಿಂದೆಂದೂ ಕಂಡರಿಯದ ಕ್ಷಾಮ ಬಂತು. ಮಕ್ಕಳು ಮರಿಗಳು ಹೊಟ್ಟೆಗಿಲ್ಲದೆ ಕಂಗಾಲಾದುವು, ಜಾನುವಾರುಗಳು ಮೇವು ಇಲ್ಲದೆ ಹಸಿವೆಯಿಂದ ಬಳಲುತ್ತಿದ್ದವು.  ಅಜ್ಜಿಗೆ ಯಾಕೋ ತಿರುಪತಿಗೆ ಹೋಗೋದು ಬೇಡ ಅನಿಸಿತು. ಅವಳು ಕೂಡಿಟ್ಟ ಹಣವನ್ನೆಲ್ಲಾ ಖರ್ಚು ಮಾಡಿ ಊರಿಗೆಲ್ಲಾ ಉಣಬಡಿಸಿದಳು.  ಮತ್ತೆ ಕೆಲವು ವರ್ಷಗಳವರೆಗೆ ಹಣ ಸಂಗ್ರಹಿಸುತ್ತಾ ಇದ್ದಹಾಗೆ ಮತ್ತೊಮ್ಮೆ ಊರಿನಲ್ಲಿ ಕ್ಷಾಮ ಬಂತು. ಮತ್ತೆ ಅಜ್ಜಿ ತನ್ನ ದುಡ್ಡನ್ನೆಲ್ಲಾ ಖರ್ಚುಮಾಡಿ ಊರವರಿಗೆಲ್ಲಾ ಉಣಬಡಿಸಿದಳು. ಇದೇ ರೀತಿ ಮೂರನೆಯ ಬಾರಿಯೂ ಆಯಿತು. ಮತ್ತೆ ಅಜ್ಜಿ ಊರವರಿಗೆ ಉಣಬಡಿಸುತ್ತಿದ್ದಾಗ ಯಾರೋ ಅಜ್ಜಿಯನ್ನು ಉದ್ದೇಶಿಸಿ ಹೇಳಿದರು- ಅಜ್ಜಿ ನಿನಗೆ ವಯಸ್ಸಾಗುತ್ತಾ ಬಂತು, ಇನ್ನು ನೀನು ದುಡಿದು ಹಣ ಸಂಪಾದನೆ ಮಾಡಲಾರೆ, ಇನ್ನು ಹೇಗೆ ತಿಮ್ಮಪ್ಪನ ದರ್ಶನ ಮಾಡಬಲ್ಲೆ? ಅಜ್ಜಿ ಅವನನ್ನು ಹೊರಗೆ ಊಟ ಮಾಡುತ್ತಿದ್ದ ಬಡವರನ್ನು, ಮೇವು ತಿನ್ನುತ್ತಿದ್ದ ಜಾನುವಾರುಗಳನ್ನು ತೋರಿಸಿ ಹೇಳಿದಳು- ಹುಚ್ಚಪ್ಪಾ ತಿಮ್ಮಪ್ಪ ನೇ ಸಾಕ್

ದಿನಕ್ಕೊಂದು ಕಥೆ 1081

*🌻ದಿನಕ್ಕೊಂದು ಕಥೆ🌻*        *ಹಣದ ಬೆಲೆ*    ಆ ಊರಿನಲ್ಲಿ ಎಲ್ಲ ಅನುಕೂಲ ಇರುವ ತಂದೆಯ ಮಗನೊಬ್ಬ ಒಂದು ದಿನ  ತನ್ನ ತಂದೆಯ ಬಳಿ ಬಂದು -" ಅಪ್ಪಾಜೀ.. ನನಗೆ ತುರ್ತಾಗಿ ಹತ್ತು ಸಾವಿರ ರೂಪಾಯಿ ಬೇಕು ಕೊಡಿ"ಎಂದು ಕೇಳಿದ. ಆತನ ತಂದೆಯ ಹತ್ತಿರ ಹಣಕ್ಕೇನು ಕಡಿಮೆ ಇರಲಿಲ್ಲ.ಆದರೆ ತನ್ನ ಮಗ ಅನಾವಶ್ಯಕವಾಗಿ ಹಣ ಪೋಲು ಮಾಡುತ್ತಿದ್ದಾನಲ್ಲ.... ಅವನಿಗೆ ಹಣದ ಮಹತ್ವ ಏನೆಂಬುದನ್ನು ಕಲಿಸಿಕೊಡಬೇಕೆಂದು ಇಚ್ಥಿಸಿದವ ಇದೇ ಸೂಕ್ತ ಸಮಯ ಎಂದರಿತು ಮಗನಿಗೆ ಕೂಗಿ ಕರೆದು " ನೋಡು.. ನಿನಗೆ ನಾನು ಹತ್ತು ಸಾವಿರ ರೂಪಾಯಿ ಗಳಲ್ಲ, ಇಪ್ಪತ್ತು ಸಾವಿರ ರೂಪಾಯಿ ಕೊಡುವೆ ಎಂದಾಗ ಮಗನಿಗೆ ಹಿಡಿಸಲಾಗದಷ್ಟು ಸಂತಸವಾಯಿತು. ಮುಂದುವರೆದ ಆತನ ತಂದೆ -" ಆದರೆ ನನ್ನದೊಂದು ಕಂಡೀಷನ್ ಇದೆ.. ಅದೇನೆಂದರೆ, ನಿನಗೆ ನಾನು  ನೂರರ ಐದು ನೋಟುಗಳನ್ನು ಕೊಡುತ್ತಾ ಹೋಗುವೆ, ನೀನು ಅದನ್ನು ಪಡೆದು ಹರಿದು ಹಾಕ ಬೇಕು "ಎಂದು ಹೇಳುತ್ತಾನೆ.ತಂದೆಯ ಈ ಮಾತು ಆಲಿಸಿದ ಮಗ-" ಇಷ್ಟೇನಾ.. ಡ್ಯಾಡ್, ಇದೇನು ದೊಡ್ಡ ಕೆಲಸ ವಲ್ಲ ಕೊಡಿ " ಎಂದ ನಂತರ ಆತನ ತಂದೆ  ತಮ್ಮ ಜೇಬಿನಿಂದ ಒಂದಿಷ್ಟು ಹಣ ತೆಗೆದು ಅದರೊಳಗಿದ್ದ ಒಂದು ನೂರರ ನೋಟನ್ನು ಆತನ ಕೈ ಗೆ ಕೊಡುತ್ತಾರೆ. ಅದನ್ನು ಪಡೆದ ಮಗ ತಕ್ಷಣ ಅದನ್ನು ಹರಿದು ಎರಡು ತುಂಡು ಮಾಡುತ್ತಾನೆ.ಈಗ ಆತನ ಅಪ್ಪ ಎರಡನೇಯ ನೂರರ ನೋಟು ಕೊಡುತ್ತಾನೆ ಮಗ ಅದನ್ನೂ ಎರಡು ತುಂಡು ಮಾಡುತ್ತಾನೆ. ಇದೇ ರೀತಿ ಮೂರನೆ

ದಿನಕ್ಕೊಂದು ಕಥೆ 1080

*🌻ದಿನಕ್ಕೊಂದು ಕಥೆ🌻*            *ಶರಣಾಗತಿ* ಪಾಂಡವರು ವನವಾಸದಲ್ಲಿದ್ದಾಗ, ಕೃಷ್ಣ ಒಮ್ಮೆ,ಅವರಿದ್ದೆಡೆಗೆ ಅವರನ್ನು  ವಿಚಾರಿಸಲೆಂದು ಬಂದ. ಎಲ್ಲರಿಗೂ ಅವನನ್ನು  ನೋಡಿ ಬಹಳ ಸಂತೋಷವಾಯಿತು.  ಅವನನ್ನು ‌ನೋಡಿ‌ ದ್ರೌಪದಿಯ ‌ಕಣ್ಣಲ್ಲಿ ನೀರು ಹರಿಯಲಾರಂಭಿಸಿತು.      ಚಿಂತಿಸಬೇಡ ಸಹೋದರಿ, ಶೀಘ್ರದಲ್ಲೇ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿ ಆಕೆಯನ್ನು ಸಮಾಧಾನ ಪಡಿಸಿದ.     ಇರಲಿ ಬಿಡು ಅಣ್ಣಾ ,ಅದು ಬಂದಾಗ ಬರಲಿ, ನೀನು ಬಂದಿದ್ದೇ ನನಗೆ ಬಹಳ ಸಂತೋಷ, ಈಗ ನೀನು ಸ್ನಾನ ಮಾಡಿ ನಿನ್ನ ಆಯಾಸವನ್ನು ಪರಿಹರಿಸಿಕೋ, ನಂತರ ಭೋಜನ  ಮಾಡುವೆಯಂತೆ,ಎಂದು ಹೇಳಿ, ದ್ರೌಪದಿ  ಕೃಷ್ಣನ ಸ್ನಾನಕ್ಕಾಗಿ ಬಿಸಿ ನೀರನ್ನು ಸಿದ್ಧಪಡಿಸಲು ಹೊರಟಳು.      ಭೀಮ, ಒಣಗಿದ ಸೌದೆಯನ್ನು ದ್ರೌಪದಿಗೆ ತಂದುಕೊಟ್ಟು, ಒಲೆ ಉರಿಸಲು ಸಹಾಯ  ಮಾಡಿದ.ದ್ರೌಪದಿ ಕೃಷ್ಣನ ಸ್ನಾನಕ್ಕಾಗಿ ಒಲೆ ಉರಿಸತೊಡಗಿದಳು.     ಆಗ ಎಲ್ಲರೂ ಗುಡಿಸಲ ಹೊರಗೆ ಕುಳಿತು ಮಾತನಾಡುತ್ತಿದ್ದರು. ಆಗ ಕೃಷ್ಣ, ಅರ್ಜುನನನ್ನು ಕುರಿತು, ವನವಾಸದ ಜೀವನ ಹೇಗೇನಿಸುತ್ತಿದೆ ? ಎಂದು ಕೇಳಿದ. ನೀನು ನಮ್ಮನ್ನೆಲ್ಲಾ ರಕ್ಷಿಸುತ್ತಿರುವಾಗ, ನಮಗೆ ಯಾವುದರ ಚಿಂತೆಯೂ ಇಲ್ಲಾ ಕೃಷ್ಣಾ, ಎಲ್ಲರೂ ಚೆನ್ನಾಗಿಯೇ ಇದ್ದೇವೆ, ಎಂದ ಅರ್ಜುನ.    ಯುಧಿಷ್ಟಿರಾ, ಇವನ ಮಾತನ್ನು ಕೇಳಿದೆಯಾ, ನಿನ್ನ ತಮ್ಮನಿಗೆ ಇಲ್ಲೇ ಹೆಚ್ಚು ಸಂತೋಷವಂತೆ, ಎಂದು ಹೇಳಿದ ಕೃಷ್ಣಾ.   ಅವನು ಹೇಳುವುದು ನಿಜ ತಾನೇ? ಪ್ರಕೃತಿಯ ಸೌಂದರ್ಯದ ಜೊ

ದಿನಕ್ಕೊಂದು ಕಥೆ 1079

*🌻ದಿನಕ್ಕೊಂದು ಕಥೆ*🌻          *ವಿಸ್ಮಯ*   "ಅಪ್ಪಾ, ನಾನು ನಿಮ್ಮ ಹತ್ತಿರ ಒಂದು ವಿಷಯ ಕೇಳಬೇಕಿತ್ತು. ತುಂಬಾ ವರ್ಷಗಳಿಂದ ನನಗೊಂದು ಸಂದೇಹ ಮನದಲ್ಲಿ ಕೊರೆಯುತ್ತಾ ಇದೆ." "ಅದೇನು ಎಂದು ಕೇಳು. ನಿನ್ನ ಅಪ್ಪನ ಹತ್ತಿರವೂ ಸಂಕೋಚವಾ?" " ಅಪ್ಪಾ ನೀವು ನಿಮ್ಮ ಕೆಲಸದಿಂದ ಸಧ್ಯದಲ್ಲೇ ನಿವೃತ್ತರಾಗಲಿದ್ದೀರಿ. ನೀವು ಮಾಡುವ ಕೆಲಸದಲ್ಲಿ ಎಷ್ಟೊಂದು ಏಳು ಬೀಳುಗಳನ್ನು ಕಂಡಿದ್ದೀರಿ. ಹಾಗೆಯೇ ಬದುಕಿನಲ್ಲಿಯೂ ಸಹ! ಆದರೂ ಎಲ್ಲವನ್ನೂ ಎಷ್ಟು ಚೆನ್ನಾಗಿ ನಿಭಾಯಿಸಿಕೊಂಡು ಬಂದಿದ್ದೀರಿ!! ಅಕ್ಕನಿಗೆ ಆಗಲೇ ಮದುವೆ ಮಾಡಿದ್ದೀರಿ. ಸಾಕಷ್ಟು ವಿದ್ಯಾವಂತನನ್ನಾಗಿ ಮಾಡಿ ಒಳ್ಳೆಯ ಕೆಲಸ ಸಿಗುವಂತೆ ನನ್ನನ್ನು ರೂಪಿಸಿದ್ದೀರಿ. ಅಮ್ಮನೂ ಯಾವುದೇ ಕೊರಗಿಲ್ಲದೆ ಸಂತೋಷದಿಂದ ಹಾಯಾಗಿದ್ದಾಳೆ. ನಾನು ಸಹ ಇನ್ನುಮೇಲೆ ಮದುವೆಯಾಗಿ ಹೆಂಡತಿ, ಮಕ್ಕಳು, ಕೆಲಸ ಎಂದು ಎಲ್ಲವನ್ನು ನಿಭಾಯಿಸಬೇಕು. ನಿಮ್ಮಂತೆ ಬಾಳಬೇಕೆನ್ನುವ ಆಸೆ ನನ್ನದು. ನನಗೂ ಅವೆಲ್ಲವನ್ನು ಕಲಿಸಿಕೊಡಿ ಅಪ್ಪಾ" ಮಗನ ಪ್ರಶ್ನೆಗೆ ಮುಗುಳ್ನಕ್ಕರು ಅಪ್ಪ.  "ಮಗನೇ! ನಿನಗೆ ನಾನು ಮಾತಿನಲ್ಲಿ ಹೇಳಿದರೆ ಅರ್ಥವಾಗುವುದಿಲ್ಲ. ಹೇಗೂ ಇವತ್ತು ಭಾನುವಾರ. ಸಾಯಂಕಾಲ ನಿನ್ನನ್ನು ಒಂದು ಕಡೆಗೆ ಕರೆದುಕೊಂಡು ಹೋಗುತ್ತೇನೆ. ನಿನ್ನ ಪ್ರಶ್ನೆಗೆ ಉತ್ತರವನ್ನೂ ಕೊಡುತ್ತೇನೆ." ಅಪ್ಪನ ಮಾತಿಗೆ ಮಗ ಒಪ್ಪಿಗೆ ನೀಡಿದ. ಸಾಯಂಕಾಲ ಸುಮಾರು ಆರು ಗಂಟೆಯ ಸಮಯ. ಅಪ್ಪ ಮಗ

ದಿನಕ್ಕೊಂದು ಕಥೆ 1078

*🌻ದಿನಕ್ಕೊಂದು ಕಥೆ🌻* *ಅವರವರು ಮಾಡಿದ ಕರ್ಮ ಅವರವರಿಗೆ*    ಇದೊಂದು ಮಹಾಭಾರತದ ಉಪಕಥೆ:- ಕುರುಕ್ಷೇತ್ರ ಯುದ್ಧ ಮುಗಿದಿದೆ. ಅರಮನೆಯಲ್ಲಿ  ಕುಂತಿ ಹಾಗೂ ಅವಳ ಮಕ್ಕಳು ಒಂದು ಕಡೆ ಕುಳಿತು ಮಾತನಾಡುತ್ತಿದ್ದರು. ಅರ್ಜುನ ತನ್ನ ಸಾಹಸ ಶೌರ್ಯದ ಬಗ್ಗೆ ತಾನೇ ಹೊಗಳಿಕೊಳ್ಳುತ್ತಾ, ನೋಡು ಎಷ್ಟು ಚೆನ್ನಾಗಿ ಯುದ್ಧಮಾಡಿ ನಾನು ವಿಜಯ ಸಾಧಿಸಿದೆ ಎಂದು ಹೇಳಿಕೊಂಡ. ಅದಕ್ಕೆ ಭೀಮ "ಏನೋ, ಅರ್ಜುನ ನಿನ್ನ ಶಕ್ತಿಯಿಂದ ಆಯಿತು ಅಂತಲೋ, ಅಥವಾ ಕೃಷ್ಣನ ಕೃಪೆಯಿಂದ ಆಯಿತು ಅಂತ ಅಂದುಕೊಂಡಿದ್ದೀಯೋ"?  ಅದಕ್ಕೆ ಅರ್ಜುನ "ಏ ಹೋಗೋ, ಕೃಷ್ಣ ಏನ್ ಮಾಡ್ತಾನೆ ಅವನಿಗೆ ಕುದುರೆ ಹಿಡುಕೊಂಡು ಬರುವುದೇ ಕಷ್ಟವಾಗಿತ್ತು. ಅಲ್ಲದೆ ಕೃಷ್ಣ ನಮ್ಮನ್ನೆಲ್ಲ ವನವಾಸಕ್ಕೆ ಕಳಿಸಿ ಕೌರವರಿಗೆ ರಾಜ್ಯ ಕೊಟ್ಟ, ಯಾವತ್ತಿದ್ರು ಕೌರವರ ಪಕ್ಷಪಾತಿನೆ  ಕೃಷ್ಣ", ಹೀಗೆ  ಮಾತಾಡುತ್ತಾ ಇರುವುದನ್ನು ಕೃಷ್ಣ ಹಿಂದೆಯೇ ನಿಂತು ಎಲ್ಲಾ ಕೇಳಿಸಿಕೊಂಡ.  ಓಹೋಹೋ  ಅರ್ಜುನ, ನನ್ನ ಮೇಲೆ ದೊಡ್ಡ ಅಪವಾದ ಹೊರಿಸುತ್ತಾ ಇದ್ದೀಯಾ? ಹಾಗೇನಿಲ್ಲ ಕೃಷ್ಣ ಇದ್ದಿದ್ದು ಇದ್ದ ಹಾಗೆ ಹೇಳ್ತಾ ಇದೀನಿ, ನೋಡಪ್ಪ ನೀನು ಯಾವತ್ತಿದ್ದರೂ ಶ್ರೀಮಂತರ ಪರಾನೇ ಇರ್ತಿಯ, ನೀನು ಭಕ್ತರಿಗೆ, ಬಡವರಿಗೆ, ಸಾತ್ವಿಕರಿಗೆ  ಕಣ್ಣಿಗೂ ಕಾಣಲ್ಲ ಎಂದು ಅರ್ಜುನ ಹೇಳಿದ. ಕುಂತಿ  ಎಷ್ಟು ಬೇಡ ಎಂದು ತಡೆಯುತ್ತಿದ್ದರೂ, ಅರ್ಜುನ ಮಾತ್ರ ಸುಮ್ಮನಿರದೆ ಮಾತು ಮುಂದುವರೆಸುತ್ತಿದ್ದ.  ಕೃಷ್ಣನದು ಯಾವಾಗಲೂ ಅವ

ದಿನಕ್ಕೊಂದು ಕಥೆ 1077

*🌻ದಿನಕ್ಕೊಂದು ಕಥೆ🌻* *ಯಾರನ್ನು ಮೆಚ್ಚಿಸಲು ಹೋಗಬಾರದು* ಬಹಳ ಹಿಂದೆ ಒಬ್ಬ  ಚಿತ್ರಕಾರ ಇದ್ದ. ತುಂಬಾ ಒಳ್ಳೆಯ ಚಿತ್ರಕಾರ. ಅವನಿಗೆ ಚಿತ್ರಗಳನ್ನು ಬರೆಯುವುದು ಬಹಳ ಪ್ರೀತಿ, ಚಿತ್ರಗಳನ್ನು ಸುಂದರವಾಗಿ ಬರೆಯುತ್ತಿದ್ದ. ಅವನ ಆಯ್ಕೆಗಳು, ದೇವಾನುದೇವತೆಗಳು,ವಿವಾಹ ಮಹೋತ್ಸವ,  ಯುದ್ಧದ ಸನ್ನಿವೇಶಗಳು, ಅತಿರಥ- ಮಹಾರಥರು, ರಾಜ- ಮಹಾರಾಜರು, ಗುಡಿ ಗೋಪುರಗಳು, ಪ್ರಕೃತಿ ಸೌಂದರ್ಯ, ಹೀಗೆ ನಾನಾಥರದ ಚಿತ್ರಗಳನ್ನು ಬಿಡಿಸಿ,  ಬಹಳ ನಾಜೂಕಾಗಿ ಬಣ್ಣಗಳನ್ನು ತುಂಬಿದಾಗ  ಎಲ್ಲರ ಗಮನ ಸೆಳೆಯುತ್ತಿತ್ತು. ಹಾಗೆ ಆತ ಅವನಿಗೆ ಇಷ್ಟವಾದ ಅಪರೂಪದ ಚಿತ್ರಗಳನ್ನು ಬರೆದು ಅವುಗಳನ್ನು ಪೇಟೆಯಲ್ಲಿ ಮಾರಿ ಬಂದ ಹಣದಿಂದ  ಜೀವನ ನಡೆಸುತ್ತಿದ್ದ. ಎಲ್ಲಾ ಕಡೆಯೂ ಅವನು ಒಳ್ಳೆಯ ಚಿತ್ರಕಾರ ಎಂದು ಹೆಸರನ್ನು ಪಡೆದಿದ್ದನು. ಒಂದು ದಿನ ಒಂದು ಚಿತ್ರವನ್ನು ಎರಡು ದಿನಗಳು ಇಷ್ಟಪಟ್ಟು  ಬರೆದು ಬಣ್ಣ ತುಂಬಿದ. ಅದು ಎಷ್ಟು ಚೆನ್ನಾಗಿತ್ತು ಎಂದರೆ, ಬರೆದವನಿಗೆ ಖುಷಿಯಾಯಿತು. ನೋಡಿದವರಂತೂ ಇದು ಚಿತ್ರಪಟವೋ, ನಿಜವೋ ಎಂದು ಅನುಮಾನ ಬರುವಂತಿತ್ತು. ಅದನ್ನು ಪದೇ ಪದೇ ನೋಡಿದ ಚಿತ್ರದಲ್ಲಿ ಅವನಿಗೆ ಏನೋ ಒಂದು ತಪ್ಪಾಗಿದೆ ಎಂಬ ಅನುಮಾನ ಬರುತ್ತಿತ್ತು. ಏನೆಂದು ಅವನಿಗೆ ಕಂಡು ಹಿಡಿಯಲು ಆಗಲಿಲ್ಲ. ಹಾಗೆ ಬಿಡಲು ಮನಸ್ಸು ಒಪ್ಪಲಿಲ್ಲ ಅವನು ಆ ಚಿತ್ರವನ್ನು ತೆಗೆದು ಕೊಂಡು  ಆತ್ಮೀಯ ಸ್ನೇಹಿತನಿಗೆ ಹೇಳುತ್ತಾನೆ. ನೋಡು ಈ ಚಿತ್ರವನ್ನು  ಬಹಳ ಇಷ್ಟಪಟ್ಟು ತುಂಬಾ ಸಮಯ ತೆಗೆದು

ದಿನಕ್ಕೊಂದು ಕಥೆ 1076

*🌻ದಿನಕ್ಕೊಂದು ಕಥೆ🌻*             *ಧರ್ಮ- ಪತ್ನಿ* ಬೆಂಗಳೂರಿನಿಂದ ರೈಲು ಹತ್ತಿದವನಿಗೆ ಏನೋ ನಿರಾಳ. ಇನ್ನು ಮನೆಯಲ್ಲಿ ನೆಮ್ಮದಿ ಸಿಗಬಹುದೆಂಬ ಆಸೆ. ಇನ್ನಾದರೂ ತನ್ನ ಧರ್ಮಪತ್ನಿ ಖುಷಿಯಾಗಿರ ಬಹುದು ಎಂಬ ಭಾವನೆ. ಮನೆಯಲ್ಲಿನ ದಿನ ನಿತ್ಯದ ಜಗಳ, ಗಲಾಟೆ, ಹೆಂಡತಿಯ ಕೂಗಾಟ, ಕುಹುಕು, ತಂದೆ ತಾಯಿಯ ಹತಾಶೆ, ಮೌನ ಎಲ್ಲದರಿಂದ ಮುಕ್ತಿ ಎಂಬ ನೆಮ್ಮದಿ. ತಮ್ಮೊಡನೆ ಇದ್ದು ತಂದೆ ತಾಯಿ ಅನುಭವಿಸುವ ನೋವು, ಹಿಂಸೆ, ಅವಮಾನ ಕ್ಕಿಂತ ಅವರು ವೃದ್ಧಾಶ್ರಮದಲ್ಲಿ ಆದರೂ ನೆಮ್ಮದಿಯಿಂದ ಇರಲಿ ಎಂಬ ಯೋಚನೆ ಇವನದ್ದು.  ಗಂಡ ಹೆಂಡತಿ ಇಬ್ಬರೂ ಪ್ರತಿಷ್ಠಿತ ಹುದ್ದೆಯಲ್ಲಿ ಕೈ ತುಂಬಾ ಸಂಬಳ ಗಳಿಸುವವರೇ.  ಅತ್ತೆ ಮಾವರೊಂದಿಗೆ ಹೊಂದಿಕೊಳ್ಳಲಾಗದೆ ಹೆಂಡತಿ ಮನೆ ಬಿಟ್ಟು ತಾಯಿ ಮನೆ ಸೇರಿದಾಗ ಕೈ ಹಿಡಿದವಳ ಬಿಟ್ಟಿರುವುದು ಧರ್ಮವಲ್ಲ ಎಂದು ಹೆಂಡತಿಯ ಹಿಂದೆ ಬಂದು ಅತ್ತೆ ಮನೆಯಲೆ ಇದ್ದ ಇವನು ಅತ್ತೆ ತೀರಿದ ಬಳಿಕ ಆಗ ತಾನೇ ಹುಟ್ಟಿದ ಮಗುವನ್ನು ನೋಡಿಕೊಳ್ಳಲು ಯಾರು ಇಲ್ಲದಾಗ ಅಪ್ಪ ಅಮ್ಮನನ್ನು ಉಟ್ಟ ಬಟ್ಟೆಯಲ್ಲೇ ಕರೆ ತಂದಿದ್ದ. ಒಂದು ಮಾತೂ ಇಲ್ಲವೆನ್ನದೆ ಮೊಮ್ಮಗುವಿಗಾಗಿ ತಮ್ಮೆಲ್ಲಾ ನೋವು, ಅವಮಾನಗಳು ಮರೆತು ಮಗನೊಂದಿಗೆ ಬಂದು ಇದ್ದರು ಇವನ ಹೆತ್ತವರು. ಮನೆಯಲ್ಲಿ ದಿನ ನಿತ್ಯ ರಣರಂಗ. ಅತ್ತೆ ಮಾವ ಕೆಲಸದವರಿಗಿಂತ ಕೀಳು ಇವನ ಹೆಂಡತಿಗೆ. ಕಳ್ಳತನದ ಆರೋಪದಿಂದ ಹಿಡಿದು ಎಲ್ಲಾ ರೀತಿಯ ಅಪವಾದ ಅವಮಾನಗಳನ್ನು ಸಹಿಸಿ ಮೊಮ್ಮಗುವನ್ನು ಎತ್ತಿ ಆಡಿಸಿಕೊಂಡು ಮಗು

ದಿನಕ್ಕೊಂದು ಕಥೆ 1075

*🌻ದಿನಕ್ಕೊಂದು ಕಥೆ*🌻 *ರಹಸ್ಯ ಬಯಲಾದಾಗ* "ರೀ, ನನ್ನ ಮಾತನ್ನು ನಿಧಾನವಾಗಿ ಕೇಳಿ. ಆಗಲೂ ನಿಮಗೆ ಮನವರಿಕೆಯಾಗದಿದ್ದರೆ ನಿಮಗೆ ಹೇಗೆ ಬೇಕೋ ಹಾಗಿರಿ. ನಾವು ಸಾಕಷ್ಟು ಸಿರಿವಂತರು. ನಿಮಗೆ ನಮ್ಮ ಮಗ ಆಕಾಶ್ ಏನು ಕೇಳಿದರೂ ಕೊಡಿಸುವ ತಾಕತ್ತು ಇದೆ ಎಂದು ನನಗೆ ಗೊತ್ತು ! ಆದರೆ ಕೆಲವೊಂದು ವಿಷಯದಲ್ಲಿ ನೀವು ತಪ್ಪು ಮಾಡುತ್ತಾ ಇದ್ದೀರಾ ಎಂದು ನನಗನಿಸುತ್ತದೆ. ನಮ್ಮ ಮಗ ಇನ್ನೂ ಮೂರನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಇನ್ನೂ ಬೇಕಾದಷ್ಟು ಸಮಯವಿದೆ. ನಾನು ಹೇಳುತ್ತಿರುವುದನ್ನು ಕೇಳಿ. ಈಗಲಾದರೂ ನಿಮ್ಮ ಮನಸ್ಸನ್ನು ಬದಲಿಸಿ." "ಏನೇ ಗೋಳು ನಿನ್ನದು??ನನಗೆ ನಿನ್ನ ಪುರಾಣ ಕೇಳಲು ಸಮಯವಿಲ್ಲ. ನೀನು ಏನು ಹೇಳಬೇಕೆಂದಿರುವೆಯೋ ಅದನ್ನು ನೇರವಾಗಿ ಹೇಳು." "ಹೇಳುತ್ತೇನೆ ಕೇಳಿ. ನಾನು ನೀಡುವ ಸಲಹೆಯನ್ನು ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು. ಆಕಾಶ್ ಗೆ ಅಮ್ಮನಾಗಿ ಈ ಮಾತು ಹೇಳುತ್ತಿದ್ದೇನೆ. ನಿಮ್ಮ ಶ್ರೀಮಂತಿಕೆಯ ಮದ ಆತನ ಜೀವನವನ್ನು ಹಾಳು ಮಾಡುವುದು ಬೇಡ. ಆತನು ಸ್ಕೂಲಿಗೆ ಹೋಗಲು ಒಂದು ಬೇರೆಯದೇ ಕಾರು, ಅದಕ್ಕೊಂದು ಡ್ರೈವರ್.. ಬೇಕಾ ಇವೆಲ್ಲಾ?? ಎಲ್ಲ ಮಕ್ಕಳಂತೆ ಆತನೂ ಸ್ಕೂಲ್ ಬಸ್ಸಿನಲ್ಲಿ ಶಾಲೆಗೆ ಹೋಗಲಿ. ಎಲ್ಲರ ಜೊತೆಗೆ ಬೆರೆಯಲಿ. ಶಾಲೆಯ ಪಾಠದ ಜೊತೆಗೆ ಆತ ಜೀವನದ ಪಾಠವನ್ನೂ ಕಲಿಯಲಿ. ಬದುಕಿನ ಕಷ್ಟ ಸುಖದ ಅರಿವು ಅವನಿಗಾಗಲಿ." "ಆಯ್ತಾ ನಿನ್ನ ಪುಕ್ಕಟೆ ಸಲಹೆ ??" "ನನಗೆ

ದಿನಕ್ಕೊಂದು ಕಥೆ 1074

*🌻ದಿನಕ್ಕೊಂದು ಕಥೆ*🌻 *ಸಂಗೀತ ತಪಸ್ವಿ ಹರಿದಾಸರು* ತಾನ್ಸೇನ್ ಅಕ್ಬರನ ಆಸ್ಥಾನದಲ್ಲಿದ್ದ ಪ್ರಮುಖ ಗಾಯಕ. ಒಂದು ದಿನ ಅಕ್ಬರ್,  ತಾನ್ಸೇನನಿಗೆ  ನಿನ್ನಂತ ಗಾಯಕ ಈ ಜಗತ್ತಿನಲ್ಲೇ ಯಾರು ಇಲ್ಲ, ನೀನು  ಸಿಕ್ಕಿದ್ದು, ನನ್ನ ಅದೃಷ್ಟವೇ ಸರಿ, ನೀನು  ನನ್ನ ಆಸ್ಥಾನದ ಅಮೂಲ್ಯವಾದ ರತ್ನ  ಎಂದು ಅವನನ್ನು ಹೊಗಳುತ್ತಿದ್ದ. ಆಗ ತಾನ್ಸೇನ್, ಇಲ್ಲಾ ಪ್ರಭೂ, ನೀವು ನನ್ನ ಗುರುಗಳಾದ ಹರಿದಾಸರ ಗಾಯನವನ್ನು ಕೇಳಿಲ್ಲ, ಅದಕ್ಕೆ ಹೀಗೆ ಹೇಳುತ್ತಿರುವಿರಿ, ಅವರ ಗಾಯನವನ್ನು ನೀವೇನಾದರೂ ಒಂದು ಸಲ ಕೇಳಿದರೆ ,ಇಡೀ ಜಗತ್ತನ್ನೇ ಮರೆಯುವಿರಿ, ಅಂತಹ  ಶಕ್ತಿ ಅವರ‌ ಗಾಯನದಲ್ಲಿ ಎಂದು ಹೇಳಿದ.    ಅಕ್ಬರನಿಗೆ ಆಶ್ಚರ್ಯವಾಯಿತು, ತಾನು ಕೇಳಿದ, ಅತ್ಯಂತ ಮಧುರವಾದ ಕಂಠದ ಗಾಯಕ ತಾನ್ಸೇನ್,  ಬಹುಶಃ ಇವನಿಗೆ ತನ್ನ ಗುರುಗಳ ಬಗ್ಗೆ ಅಪಾರವಾದ ಗೌರವ ಅಭಿಮಾನವಿರುವುದಕ್ಕೆ, ಇವನು  ಹೀಗೆ ಹೊಗಳುತ್ತಿರಬಹುದು, ಎಂದುಕೊಂಡು, ಸರಿ ಹಾಗಿದ್ದರೆ ನಿಮ್ಮ ಗುರುಗಳ ಗಾಯನವನ್ನೂ ಒಮ್ಮೆ ಕೇಳಿಯೇ ಬಿಡೋಣ,  ಅವರನ್ನು ಆಸ್ಥಾನಕ್ಕೆ ಕರೆಸಿಬಿಡು ಎಂದು ಹೇಳಿದ ಅಕ್ಬರ್.    ಕ್ಷಮಿಸಿ ಮಹಾಪ್ರಭೂ, ನನ್ನ ಗುರುಗಳು ಎಲ್ಲೆಂದರಲ್ಲಿ ಹಾಗೆಲ್ಲ ಬರುವವರಲ್ಲ, ಎಂದ ತಾನ್ಸೇನ್, ಅಕ್ಬರನಿಗೆ ಈಗ ರೇಗಿ ಹೋಯಿತು. ಅಲ್ಲಪ್ಪಾ, ಅವರು ಬರಲಾರರು, ನನ್ನೆದಿರು ಹಾಡಲಾರರು ಎಂದರೆ ನಾನು ಅವರ ಗಾಯನವನ್ನು ಕೇಳುವುದಾದರೂ ಹೇಗೆ? ಎಂದ. ಮಹಾಪ್ರಭೂ, ಅವರು ಯಮುನಾ ನದಿಯ ತೀರದಲ್ಲಿ,  ಇದ್ದಾರೆ.ಪ್ರತಿ ದಿನ ಬೆ

ದಿನಕ್ಕೊಂದು ಕಥೆ 1073

*🌻ದಿನಕ್ಕೊಂದು ಕಥೆ🌻* *ವೈರತ್ವ* ಇಬ್ಬರು ವ್ಯಾಪಾರಿಗಳ ನಡುವೆ ಯಾವಾಗಲೂ ಪೈಪೋಟಿ ನಡೆಯುತ್ತಿತ್ತು. ಒಬ್ಬನಿಗೆ ವ್ಯಾಪಾರ ಚೆನ್ನಾಗಿ ಆದರೆ , ಇನ್ನೊಬ್ಬನಿಗೆ ಹೊಟ್ಟೆ ಉರಿ,ಇಬ್ಬರೂ ಒಬ್ಬರನ್ನೊಬ್ಬರು ಕೆಳಕ್ಕೆ ಹಾಕಲು ಸದಾ ಪ್ರಯತ್ನಿಸುತ್ತಿದ್ದರು. ಇದು ಅವರಿಬ್ಬರಲ್ಲಿ ದ್ವೇಷಕ್ಕೆ ಎಡೆ ಮಾಡಿ, ತಮ್ಮ  ವ್ಯಾಪಾರವನ್ನು  ಅಭಿವೃದ್ಧಿ ಪಡಿಸುವುದರ ಬದಲು, ಒಬ್ಬರ ಕಾಲೆಳೆಯಲು ಇನ್ನೊಬ್ಬರು  ಸದಾ ಕಾಯುತ್ತಿದ್ದರು.    ಒಂದು ಸಲ  ಒಬ್ಬ ವ್ಯಾಪಾರಿ, ತನ್ನ ಸ್ನೇಹಿತರೊಂದಿಗೆ, ಮತ್ತೊಂದು ಊರಿಗೆ ಹೊರಟಿದ್ದ. ಊರು ಸೇರುವ ಮೊದಲು ಅವರು ಒಂದು ದಟ್ಟವಾದ ಕಾಡನ್ನು ಹಾದು ಹೋಗಬೇಕಿತ್ತು. ಹೊರಡುವಾಗಲೇ ಸ್ವಲ್ಪ  ತಡವಾದದ್ದರಿಂದ, ಕಾಡು ದಾಟುವಾಗ ಕತ್ತಲಾಗ ತೊಡಗಿತು. ಎಲ್ಲರಿಗೂ ಕಾಡುಪ್ರಾಣಿಗಳ ಭಯವಿದ್ದಿದ್ದರಿಂದ ಬಹಳ ಹುಷಾರಾಗಿ ನಡೆಯುತ್ತಿದ್ದರು.      ಇದ್ದಕ್ಕಿದ್ದಂತೆ  ಭೀಕರವಾದ ಸಿಂಹದ ಘರ್ಜನೆ ಕೇಳತೊಡಗಿತು. ಅದು ಹತ್ತಿರದಲ್ಲೇ ಎಲ್ಲೋ ಕೂಗುತ್ತಿರುವಂತೆ ಭಾಸವಾಯಿತು. ಜೊತೆಯಾಗಿ ಹೊರಟ ಸ್ನೇಹಿತರೆಲ್ಲಾ ಗಾಬರಿಯಾಗಿ ತಮಗೆ ತೋಚಿದ ಕಡೆ ಓಡತೊಡಗಿದರು. ಸಿಕ್ಕ ಸಿಕ್ಕ ಮರಗಳನ್ನೇರಿ ಕುಳಿತರು. ಈ ವ್ಯಾಪಾರಿ ಕೂಡಾ ಒಂದು ಮರವನ್ನೇರಿ ಕುಳಿತುಕೊಂಡ.     ಅಷ್ಟರಲ್ಲೇ, ದೊಡ್ಡ ಸಿಂಹವೊಂದು, ಇವನು ಕುಳಿತಿದ್ದ ಮರದ ಕೆಳಗೆ ಬಂದು ಕುಳಿತುಕೊಂಡಿತು. ಅದರ ಕಿಡಿ ಕಾರುವ ಕಣ್ಣುಗಳು, ಅದರ ಕೂದಲು, ನಡು ನಡುವೆ ಅದರ ಘರ್ಜನೆ , ಇವೆಲ್ಲದರಿಂದ, ಅವನಿಗೆ ಮೈಯಲ್ಲಿ

ದಿನಕ್ಕೊಂದು ಕಥೆ 1072

*🌻ದಿನಕ್ಕೊಂದು ಕಥೆ🌻* *"ಗೆಲುವು"*  ಹತ್ತು ವರ್ಷಗಳ ಹಿಂದೆ ಖರೀದಿಸಿದ್ದ ಕನ್ನಡಕವನ್ನು ತುಂಬಾ ಜತನದಿಂದ ನೋಡಿಕೊಳ್ಳುತ್ತಿದ್ದ ಪಾತಜ್ಜಿ, ಅಂದು ಬೆಳಗಿನ ಉಪಹಾರ ಸೇವಿಸಿ ಪೇಪರ್ ಓದಲು ಅದನ್ನು ಟೇಬಲ್ ಮೇಲಿಂದ ಎತ್ತಿಕೊಳ್ಳುವಾಗ, ಪಕ್ಕದಲ್ಲಿ ರಭಸವಾಗಿ ಬಂದ ಮೊಮ್ಮೊಗಳ ಮೊಣ ಕೈ ಗೆ ತಗುಲಿ ಅದು ನೆಲಕ್ಕೆ ಬಿದ್ದಿತ್ತು.ಸಧ್ಯ ಫ್ರೇಮಿನೊಳಗೆ ಬಿಗಿಯಾಗಿ ಬಂಧಿಯಾಗಿದ್ದ ಗಾಜುಗಳಿಗೆ ಒಂದಿನಿತೂ ಏಟಾಗಿರಲಿಲ್ಲ.ಬದಲಿಗೆ ಕನ್ನಡಕ ಬಲಗಡೆ  ಕಿವಿಗೆ ಹಾಕಿಕೊಳ್ಳುವ ಹಿಡಿಕೆಯ ಸ್ಕ್ರೂ ಬಿಚ್ಚಿ ಅದೆಲ್ಲೋ ಉರುಳಿಹೋಗಿತ್ತು.ಕೆಳಗೆ ಬಿದ್ದ ಒಂಟಿ ಹಿಡಿಕೆಯ ಕನ್ನಡಕ ಎತ್ತಿಕೊಂಡ ಪಾತಜ್ಜಿ, ಕೆಲಸಕ್ಕೆ ಹೊರಟು ನಿಂತ ಮಗನಿಗೆ "ಯಶೂ..ಇದನ್ನ ಸ್ವಲ್ಪ ರಿಪೇರಿ ಮಾಡ್ಸಕೊಂಡು ಬರ್ತೀಯಾ...?"ಎಂದು ಕೇಳಿದಾಗ ಆತ "ಅಮ್ಮಾ.. ನಿನಗೆ ಗೊತ್ತಿಲ್ವಾ, ನಾನು ಹೊರಡುವ ಟೈಂ ನಲ್ಲಿ ಅಂಗಡಿ ಬಾಗಿಲು ತೆರೆದಿರಲ್ಲ, ಇನ್ನು ರಾತ್ರಿ ವಾಪಸ್ ಬರುವಾಗ ಎಲ್ಲಾ ಅಂಗಡಿಗಳೂ ಮುಚ್ಚಿರುತ್ತಾರೆ,ಇದನ್ನ ಪದ್ಮಳ ಕೈ ಲಿ ಕೊಡು ಅವ್ಳು ರಿಪೇರಿ ಮಾಡ್ಸಕೊಂಡು ಬರ್ತಾಳೆ"ಎಂದು ನಯವಾಗಿ ಜವಾಬ್ದಾರಿಯನ್ನು ಹೆಂಡತಿಯ ಮೇಲೆ ಹಾಕಿ  ಕಚೇರಿಗೆ ಹೊರಟು ಹೋದ. ಬೆಳಿಗ್ಗೆಯಿಂದ ರಾತ್ರಿಯ ತನಕ ಮನೆಕೆಲಸ, ಆಫೀಸ್ ಕೆಲಸದಿಂದಾಗಿ ತಲೆ ಕೆರೆದುಕೊಳ್ಳುವುದಕ್ಕೂ ಪುರುಸೊತ್ತಿಲ್ಲದ ಪದ್ಮ, ತನ್ನ ಲಂಚ್ ಬಾಕ್ಸ್ ಗೆ ತಿಂಡಿ ಹಾಕಿಕೊಳ್ಳುತ್ತಾ"ಅತ್ತೇ.... ನಾನು ಅದನ್ನ ತಗ

ದಿನಕ್ಕೊಂದು ಕಥೆ 1071

*🌻ದಿನಕ್ಕೊಂದು ಕಥೆ🌻*    *ಆಸ್ತಿ* ತಂದೆ ಸತ್ತು ಅವರ ಕ್ರಿಯಾಕರ್ಮಗಳೆಲ್ಲಾ ಮುಗಿದು ತನ್ನ ಬಾಡಿಗೆ ಮನೆಗೆ ಬಂದ ಸತೀಶನಿಗೆ ಪುನಃ ಅಣ್ಣನ  ಕರೆ ನೋಡಿ ಆಶ್ಚರ್ಯ ಆದರೂ ಶಾಂತವಾಗಿಯೇ ಮಾತನಾಡಿದ. ಆಗ ತಿಳಿದುದು ಇಷ್ಟು ಅಪ್ಪ ಬಿಟ್ಟು ಹೋದ ಒಂದು ತುಂಡು ಜಮೀನನ್ನು ಮಾರುವುದು, ಬಂದ ಹಣವನ್ನು  ಮಕ್ಕಳು ( ತಾವಿಬ್ಬರೂ) ಹಂಚಿಕೊಳ್ಳೋದು ಹಾಗೂ ಅಮ್ಮನ  ಬಗ್ಗೆ ನಿರ್ಣಯ ತಗೊಳ್ಳೋದು.  ಸತೀಶನ ಕಣ್ಣ ಮುಂದೆ ತಾಯಿಯ ನಿಷ್ಕಳಂಕ ಮುಖ  ಬಂದೊಡನೆ  ಏನೋ ನಿರ್ಣಯವನ್ನು ಮಾಡಿ ಕೂಡಲೇ ಅದನ್ನು ತನ್ನ ಮಡದಿಯ ಬಳಿ ಹಂಚಿಕೊಂಡ. ಅವಳೂ ಸಮ್ಮತಿಸಿದಳು. ಹೇಳಿದ ಸಮಯಕ್ಕೆ ಸರಿಯಾಗಿ ಬಂದ ತಮ್ಮನನ್ನು ಕಂಡು ಅಣ್ಣನಿಗೆ ಆಶ್ಚರ್ಯ ಸಂತೋಷ ಎರಡೂ ಆಗಿ ಬೇಗನೆ ತನ್ನ ಯೋಜನೆಯನ್ನು ತಮ್ಮನ ಮುಂದಿಟ್ಟ. ಜಮೀನಿನ ತುಂಡನ್ನು ಮಾರಿ ಹಣ ಮಾಡುವುದು,,  ಅಮ್ಮನನ್ನು ಆರು ತಿಂಗಳು ತಾನು ಆರು ತಿಂಗಳು ತಮ್ಮ ನೋಡಿಕೊಳ್ಳೋದು, ಇದೇ ಮುಖ್ಯ ವಿಷಯವಾಗಿತ್ತು.  ಕೇಳಿದ ಸತೀಶ ಸುಮ್ಮನೆ ಅಮ್ಮನ ಮುಖವನ್ನು ನೋಡಿದ. ತಮಗಾಗಿ ರಕ್ತ, ಮಾಂಸವನ್ನು ಹಂಚಿ ನಮಗೊಂದು ಜೀವನವನ್ನು ಕಲ್ಪಿಸಕೊಟ್ಟ ಮಾತೃದೇವತೆಯನ್ನು ಇವತ್ತು ಪಾಲು ಮಾಡುವುದೇ ? ಸತೀಶ ಮನೆಯ ಸುತ್ತ ಕಣ್ಣು ಹಾಯಿಸಿದ ಬಾಗಿಲ ಸಂದಿಯಲ್ಲಿ ಮೈಯೆಲ್ಲ ಕಿವಿಯಾಗಿ ಕೇಳುವ ಅತ್ತಿಗೆಯನ್ನು ಕಂಡು,, ಹೆದರಿಕೆಯಿಂದ ದೀನನಾಗಿ ಕುಳಿತ ಅಣ್ಣನನ್ನು ಕಂಡು ಯಾಕೋ ಬೇಸರಗೊಂಡ.  ಕೂಡಲೇ ಎದ್ದು ನಿಂತು ದೀನಳಾಗಿ ನೋಡುತಿದ್ದ ತಾಯಿಯ ಕೈಯನ್ನು ಹಿಡಿದು ಎಬ್ಬ

ದಿನಕ್ಕೊಂದು ಕಥೆ 1070

*🌻ದಿನಕ್ಕೊಂದು ಕಥೆ🌻* *ಕೃತಜ್ಞತೆ*  ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್, ನಿಲ್ದಾಣದಿಂದ ನಿಧಾನವಾಗಿ ಹೊರಟು ನಿಂತಾಗ ಕಂಡಕ್ಟರ್ ಮಾದೇಶಿ ಹರ ಸಾಹಸ ಪಡುತ್ತ ಜನರ ಮಧ್ಯೆ ನುಗ್ಗಿ " ಟಿಕೇಟ್... ಟಿಕೇಟ್.."ಎಂದು ಬೆವರು ಸುರಿಸುತ್ತಲೇ ಕೇಳಿ ಕೊಡುತ್ತಿದ್ದ. ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಎಲ್ಲರಿಗೂ ಟಿಕೆಟ್ ಕೊಟ್ಟು ಕೊನೆಯದಾಗಿ ಆ ಬಸ್ಸಿನ ಚಾಲಕನ ಹಿಂಬದಿ ಸೀಟಿನಲ್ಲಿ ಮುದುರಿ ,ಕುಳಿತಿದ್ದ ವೃದ್ಧನ ಬಳಿ ಬಂದು " ಎಲ್ಲಿಗೆ ಹೋಗಬೇಕು ಅಜ್ಜಾ..."ಎಂದು ಕೇಳಿದಾಗ ಆ ವೃದ್ಧ ತಾನು ಇಳಿಯಬೇಕಾದ ಸ್ಥಳ ತಿಳಿಸುತ್ತಾನೆ. ಅದರಂತೆ ಕಂಡಕ್ಟರ್ ಟಿಕೇಟ್ ಕಟ್ ಮಾಡಿ ಆತನಿಗೆ ಕೊಡುತ್ತ "ಎಂಬತ್ತು ರೂಪಾಯಿ ಕೊಡು" ಎಂದಾಗ ಆ ವೃದ್ಧ ನಿಧಾನವಾಗಿ ತಾನು ಧರಿಸಿದ ಜುಬ್ಬಾದ ಜೇಬಿಗೆ ಕೈ ಇಳಿಬಿಡುತ್ತಾನೆ. ಅಲ್ಲಿ ಹಣ ಕಾಣದಾದಾಗ ಮತ್ತೊಂದು ಜೇಬಿಗೆ ಕೈ ಹಾಕಿ ನೋಡುತ್ತಾನೆ.. ಊಹೂಂ, ಅಲ್ಲೂ ಹಣ ಕಾಣದಾದಾಗ ಗಾಬರಿಗೊಂಡು ಎದ್ದು ನಿಂತು ಅಲ್ಲೆಲ್ಲಾ ತಡಕಾಡಿದವ ಬೆವರಲಾರಂಭಿಸುತ್ತಾನೆ. ಇತ್ತ ಕಂಡಕ್ಟರ್ " ಏಯ್.. ಬೇಗ ಕೊಡೋ ಮಾರಾಯಾ"ಎಂದು  ತನ್ನ ಗೊಗ್ಗರು ಧ್ವನಿ ಯಿಂದ ಕೇಳಿದಾಗ ಆ ವೃದ್ಧನ ಕಣ್ಣಲಿ ಅಕ್ಷರಶಃ ನೀರು ತುಂಬಿ ಬಂದು ದೈನ್ಯದಿಂದ ಕೈ ಮುಗಿಯುತ್ತ " ಅಪ್ಪಾ... ನನ್ನ ದುಡ್ಡನ್ನು ಯಾರೋ ಹೋಡ್ದಾರಾ ಐವತ್ತು ರೂಪಾಯಿ ಯು ಮೂರು ನೋಟು ಇದ್ದು..."ಎಂದು ತಡವರಿಸುತ್ತ ಹೇಳುತ್ತಾನೆ. ಮೊದಲ

ದಿನಕ್ಕೊಂದು ಕಥೆ 1069

*🌻 ದಿನಕ್ಕೊಂದು ಕಥೆ 🌻* *ಬ್ರಿಟಿಷರು‌ ನಂಬಿ ಕರೆದರೆ‌ ಓ ಎನ್ನನೇ ಶಿವನು?* ವಿಸ್ಮಯದ ಶಿವಾಲಯವೊಂದು ಮಧ್ಯಪ್ರದೇಶದ ಶಾಜಾಪೂರ್ ಜಿಲ್ಲೆಯ ಅಗರ್ ಎಂಬಲ್ಲಿದೆ. ವಿಸ್ಮಯವೇನೆಂದರೆ ಇದನ್ನು ಕಟ್ಟಿಸಿದವರು ಬ್ರಿಟಿಷ್ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಾರ್ಟಿನ್ ಎಂಬ ಕ್ರಿಶ್ಚಿಯನ್ ಅಧಿಕಾರಿ! ಇದರ ಹಿಂದಿನ ರೋಚಕ ಪ್ರಸಂಗ ಹೀಗಿದೆ.  1879ರಲ್ಲಿ ಮಾರ್ಟಿನ್ ಅಫ್ಘಾನಿಸ್ಥಾನದ ಯುದ್ಧರಂಗದಲ್ಲಿದ್ದರು. ಅವರ ಪತ್ನಿ ಮಧ್ಯಪ್ರದೇಶದಲ್ಲಿದ್ದರು. ಅವರು ತಮ್ಮ ಯೋಗಕ್ಷೇಮವನ್ನು ಪತ್ರಮುಖೇನ ಪತ್ನಿಗೆ ತಿಳಿಸುತ್ತಿದ್ದರು. ಇದ್ದಕ್ಕಿದ್ದಂತೆ ಪತ್ರಗಳು ಬರುವುದು ನಿಂತುಹೋದಾಗ ಲೇಡಿ ಮಾರ್ಟಿನ್ ಚಿಂತಾಕ್ರಾಂತರಾದರು.  ಒಮ್ಮೆ ಆಕೆ ಅಲ್ಲಿದ್ದ ಬೈಜನಾಥ್ ಮಹಾದೇವ ಮಂದಿರದ ಬಳಿ ಹೋಗುತ್ತಿದ್ದಾಗ ದೇವಾಲಯದೊಳಗಿನಿಂದ ಕೇಳಿಬರುತ್ತಿದ್ದ ಮಂತ್ರೋಚ್ಛಾರಣೆಯ ಮತ್ತು ಶಂಖ-ಜಾಗಟೆಗಳ ಶಬ್ದ ಆಕೆಯನ್ನು ಆಕರ್ಷಿಸಿತು. ಆಕೆ ಕುತೂಹಲದಿಂದ ದೇವಾಲಯದೊಳಕ್ಕೆ ಹೋಗಿ ನಿಂತುಕೊಂಡರು. ಅಲ್ಲಿ ಪೂಜೆ ಮಾಡುತ್ತಿದ್ದ ಪುರೋಹಿತರು ಆಕೆ ಚಿಂತಾಕ್ರಾಂತಳಾಗಿರುವ ಕಾರಣವನ್ನು ಕೇಳಿದರು. ಆಕೆ "ನನ್ನ ಪತಿ ಯುದ್ಧರಂಗಕ್ಕೆ ಹೋಗಿದ್ದಾರೆ. ಅವರಿಂದ ಹಲವಾರು ದಿನಗಳಿಂದ ಯಾವ ಸಂದೇಶವೂ ಬಂದಿಲ್ಲ. ಅವರಿಗೆ ಏನಾಗಿದೆಯೋ ಏನೋ?" ಎಂದು ಗೋಳಾಡಿದರು. ಪುರೋಹಿತರು ಸಂದರ್ಭೋಚಿತವಾಗಿ ಸಾಂತ್ವನ ಹೇಳುತ್ತಾ "ನೀವು ಶಿವನನ್ನು ನಂಬಿ ಪ್ರಾರ್ಥಿಸಿ. ಕಷ್ಟಗಳ

ದಿನಕ್ಕೊಂದು ಕಥೆ 1068

*🌻 ದಿನಕ್ಕೊಂದು ಕಥೆ 🌻* *ಬ್ರಿಟಿಷರು‌ ನಂಬಿ ಕರೆದರೆ‌ ಓ ಎನ್ನನೇ ಶಿವನು?* ವಿಸ್ಮಯದ ಶಿವಾಲಯವೊಂದು ಮಧ್ಯಪ್ರದೇಶದ ಶಾಜಾಪೂರ್ ಜಿಲ್ಲೆಯ ಅಗರ್ ಎಂಬಲ್ಲಿದೆ. ವಿಸ್ಮಯವೇನೆಂದರೆ ಇದನ್ನು ಕಟ್ಟಿಸಿದವರು ಬ್ರಿಟಿಷ್ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಾರ್ಟಿನ್ ಎಂಬ ಕ್ರಿಶ್ಚಿಯನ್ ಅಧಿಕಾರಿ! ಇದರ ಹಿಂದಿನ ರೋಚಕ ಪ್ರಸಂಗ ಹೀಗಿದೆ.  1879ರಲ್ಲಿ ಮಾರ್ಟಿನ್ ಅಫ್ಘಾನಿಸ್ಥಾನದ ಯುದ್ಧರಂಗದಲ್ಲಿದ್ದರು. ಅವರ ಪತ್ನಿ ಮಧ್ಯಪ್ರದೇಶದಲ್ಲಿದ್ದರು. ಅವರು ತಮ್ಮ ಯೋಗಕ್ಷೇಮವನ್ನು ಪತ್ರಮುಖೇನ ಪತ್ನಿಗೆ ತಿಳಿಸುತ್ತಿದ್ದರು. ಇದ್ದಕ್ಕಿದ್ದಂತೆ ಪತ್ರಗಳು ಬರುವುದು ನಿಂತುಹೋದಾಗ ಲೇಡಿ ಮಾರ್ಟಿನ್ ಚಿಂತಾಕ್ರಾಂತರಾದರು.  ಒಮ್ಮೆ ಆಕೆ ಅಲ್ಲಿದ್ದ ಬೈಜನಾಥ್ ಮಹಾದೇವ ಮಂದಿರದ ಬಳಿ ಹೋಗುತ್ತಿದ್ದಾಗ ದೇವಾಲಯದೊಳಗಿನಿಂದ ಕೇಳಿಬರುತ್ತಿದ್ದ ಮಂತ್ರೋಚ್ಛಾರಣೆಯ ಮತ್ತು ಶಂಖ-ಜಾಗಟೆಗಳ ಶಬ್ದ ಆಕೆಯನ್ನು ಆಕರ್ಷಿಸಿತು. ಆಕೆ ಕುತೂಹಲದಿಂದ ದೇವಾಲಯದೊಳಕ್ಕೆ ಹೋಗಿ ನಿಂತುಕೊಂಡರು. ಅಲ್ಲಿ ಪೂಜೆ ಮಾಡುತ್ತಿದ್ದ ಪುರೋಹಿತರು ಆಕೆ ಚಿಂತಾಕ್ರಾಂತಳಾಗಿರುವ ಕಾರಣವನ್ನು ಕೇಳಿದರು. ಆಕೆ "ನನ್ನ ಪತಿ ಯುದ್ಧರಂಗಕ್ಕೆ ಹೋಗಿದ್ದಾರೆ. ಅವರಿಂದ ಹಲವಾರು ದಿನಗಳಿಂದ ಯಾವ ಸಂದೇಶವೂ ಬಂದಿಲ್ಲ. ಅವರಿಗೆ ಏನಾಗಿದೆಯೋ ಏನೋ?" ಎಂದು ಗೋಳಾಡಿದರು. ಪುರೋಹಿತರು ಸಂದರ್ಭೋಚಿತವಾಗಿ ಸಾಂತ್ವನ ಹೇಳುತ್ತಾ "ನೀವು ಶಿವನನ್ನು ನಂಬಿ ಪ್ರಾರ್ಥಿಸಿ. ಕಷ್ಟಗಳ