Posts

Showing posts from August, 2017

ದಿನಕ್ಕೊಂದು ಕಥೆ. 526

🌻🌻 *ದಿನಕ್ಕೊಂದು ಕಥೆ* 🌻🌻                                               💐*ಐದು ಅಮೂಲ್ಯ ಪ್ರಶ್ನೆಗಳು*💐 ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನ ಆಸ್ಥಾನಕ್ಕೆ ಒಮ್ಮೆ ಸುಜ್ಞಾನಿ ಎಂಬ ಪಂಡಿತ ಬಂದ. ಅವನು ರಾಜನನ್ನು ಕುರಿತು, "ಮಹಾರಾಜರೇ, ನಿಮ್ಮ ಆಸ್ಥಾನದ ಪಂಡಿತರು ಕೇಳಿದ ಯಾವುದೇ ಪ್ರಶ್ನೆಗೆ ತೃಪ್ತಿಕರ ಉತ್ತರ ನೀಡುವೆ. ನಿಮಗೆ ಸರಿ ಎನಿಸಿದರೆ ತಕ್ಕ ಕಾಣಿಕೆ ನೀಡಿರಿ" ಎಂದು ಬೇಡಿಕೊಂಡನು. ರಾಜನ ಒಪ್ಪಿಗೆಯ ಮೇರೆಗೆ ಸಭೆ ಕರೆಯಲಾಯಿತು. ಒಬ್ಬ ಆಸ್ಥಾನದ ಪಂಡಿತನು ಸುಜ್ಞಾನಿಯನ್ನು ಕುರಿತು. "ಸಕಲ ಮಾನವ, ಪಕ್ಷಿ, ಪ್ರಾಣಿ, ಕ್ರಿಮಿ ಕೀಟಗಳು ಹಾಗೂ ಗಿಡ ಮರಗಳನ್ನು ಕಾಪಾಡುವ ಕರುಣಾಮ ತಾಯಿ ಯಾರು? ಎಂದು ಕೇಳಿದನು. ಸುಜ್ಞಾನಿ ಪಂಡಿತನು. "ಭೂಮಿ ತಾಯಿ. ಮಾನವನಿಗೆ ಮನೆ ಕಟ್ಟಲು ಕಲ್ಲು - ಮಣ್ಣು, ಕಟ್ಟಿಗೆ ಕೊಡುವವಳು ಭೂಮಿತಾಯಿ. ಜೋಳ - ಗೋಧಿ ಮುಂತಾದ ಆಹಾರ ಧಾನ್ಯ ಬೆಳೆಯುವವಳು ಅವಳು. ಗಿಡಗಳ ಮೂಲಕ ಹಣ್ಣು, ಕಾಯಿ ನೀಡುವಳು. ಹೊಳೆ, ಕೆರೆ, ಸರೋವರ ಮೂಲಕ ನೀರು ಕೊಡುವವಳು ಭೂಮಿ ತಾಯಿಯೇ" ಎಂದು ಉತ್ತರಿಸಿದನು. ಎರಡನೆಯ ಪಂಡಿತನು, "ಸಕಲ ಜೀವಿಗಳನ್ನು ರಕ್ಷಣೆ ಮಾಡುವ ನಿಜವಾದ ರಾಜನು ಯಾರು" ಎಂದು ಪ್ರಶ್ನಿಸಿದನು. ಸುಜ್ಞಾನಿ ಪಂಡಿತನು "ನಿಜವಾದ ರಾಜನೆಂದರೆ ಮಳೆರಾಜನೆ. ಮಳೆರಾಜನು ಸುರಿಸುವ ಮಳೆ ನೀರಿನಿಂದಲೇ ರೈತ ಆಹಾರ ಧಾನ್ಯ ಬೆಳೆಯುತ್ತಾನೆ. ಲತೆಗಳು ಹೂ ಕೊಡುವವು. ಗಿ

ದಿನಕ್ಕೊಂದು ಕಥೆ. 525

*🌻ದಿನಕ್ಕೊಂದು ಕಥೆ🌻                                               ಜನರಲ್ ತಿಮ್ಮಯ್ಯ! ದೇಶ ಕಂಡ ಅತ್ಯದ್ಭುತ ವೀರ ಸೇನಾನಿಯ ಅರಿವಿದೆಯೇ?!*                                            ದಂತಕಥೆಗಳಾಗಿ ಉಳಿದುಕೊಳ್ಳುವ ಅತ್ಯಪರೂಪದ ವ್ಯಕ್ತಿಗಳನ್ನು ನಾವು ಸ್ಮರಿಸಲೇಬೇಕು. ಆಧುನಿಕ ಇತಿಹಾಸದ ವೀರಸೇನಾನಿ ಎಂದಿನೆಸಿರುವ ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಯಾವಾಗಲೂ ನೆನಪಿನಲ್ಲೇ ಉಳಿದಿರುವಂತಹ ಭಾರತೀಯ ಯೋಧ!! ಭಾರತೀಯರಾದ ನಾವು ವೀರಸೇನಾನಿ  ದೇಶಕ್ಕೆ ಕೊಟ್ಟ ಕೊಡುಗೆಯನ್ನು ಇಂದು ಸ್ಮರಿಸಲೇಬೇಕು.                    ಜನರಲ್ ಅವರ ಜೀವನ ತುಂಬಾ ಉತ್ಸಾಹಕತೆಯಿಂದ ತುಂಬಿದ್ದು, ತನ್ನ ದೇಶಕ್ಕಾಗಿ ಮತ್ತು ಸೈನಿಕನಾಗಿದ್ದಾಗ ತಾವು ತೋರಿಸಿದ ಕರ್ತವ್ಯ ನಿಷ್ಠೆ ಹಾಗೂ ತನ್ನ ಬದ್ಧತೆ ಶ್ಲಾಘನೀಯವಾದದ್ದು. ಸೆಪ್ಟೆಂಬರ್ 1947ರಲ್ಲಿ ಅಂದರೆ ಸ್ವಾತಂತ್ರ್ಯ ಸಿಕ್ಕ ಕೆಲವೇ ಸಮಯಗಳಲ್ಲಿ ಮೇಜರ್ ಜನರಲ್ ಆಗಿ ಬಡ್ತಿ ಪಡೆದುಕೊಂಡರು. ದೇಶಕ್ಕಾಗಿ ಹೋರಾಡಿ ತಮ್ಮ ಹೆಸರನ್ನು ವಿಶ್ವದೆಲ್ಲೆಡೆ ಪಸರಿಸಿದ ಯೋಧ, ಜವಹರಲಾಲ್ ನಂತರದಲ್ಲಿ ಜನರಲ್ ತಿಮ್ಮಯ್ಯ ಭಾರತದ ಎರಡನೇಯ ಪ್ರಬಲ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ.            ಪಾಕಿಸ್ತಾನ ಮತ್ತು ಭಾರತದದಲ್ಲಿ ಪ್ರಕ್ಷುಬ್ದತೆಯ ವಾತಾವರಣ ತುಂಬಿದ್ದಾಗ, ಭಾರತೀಯರು ಭಾರತ ವಿಂಗಡಣೆಗೊಂಡು ಎರಡು ಭಾಗಗಳಾಗಿದೆ ಎಂದು ಜೀರ್ಣ ಮಾಡುವ ವೇಳೆ ಪಾಕಿಸ್ತಾನದ ಸೇನೆ ಕೆಳಗಿಳಿಯಿತು. ಗಲಭೆ ನಿಯಂತ್ರಣ

ದಿನಕ್ಕೊಂದು ಕಥೆ. 524

*🌻ದಿನಕ್ಕೊಂದು ಕಥೆ🌻                  ಕೊನೆಯವರೆಗೆ ಉಳಿಯುವವನೇ ಧೀರ.* ಈ ಜಗತ್ತು ವಿಶಾಲವಾದ ರಂಗಭೂಮಿಯಿದ್ದಂತೆ. ಇಲ್ಲಿ ಒಬ್ಬರನ್ನು ನೋಡಿ, ಮತ್ತೊಬ್ಬರು ಅನುಕರಣೆ ಮಾಡುತ್ತಾರೆ. ಯಾರಾದರೊಬ್ಬರು ಒಂದು ಒಳ್ಳೆಯ ಕೆಲಸ ಮಾಡಿ ಗೆಲುವು ಸಾಧಿಸಿದರೆ, ಬಹಳಷ್ಟು ಜನರಿಗೆ ನಾವೂ ಹೀಗೆಯೇ ಮಾಡಿ ಏಕೆ ಗೆಲುವು ಸಾಧಿಧಿಧಿಸಬಾರದು? ಎಂದನ್ನಿಸುತ್ತದೆ. ಆರಂಭಿಸಿಯೇ ಬಿಡುತ್ತಾರೆ. ಆದರೆ ಕಾರ್ಯವನ್ನು ಪೂರ್ಣಗೊಳಿಸುವಂತಹ ಸ್ಥಿರ ಬುದ್ಧಿಯಿರುವುದಿಲ್ಲ. ಇಂತಹ ಆರಂಭಶೂರರಿಗೆ ಸೂಕ್ತ ಮಾರ್ಗದರ್ಶನ ನೀಡುವ ಒಂದು ಪ್ರಸಂಗವಿಲ್ಲಿದೆ. ಪ್ರಾಚೀನ ಕಾಲದಲ್ಲಿ ಗುರುವೊಬ್ಬರು ಶತಾಯುವಾದರು. ಆಗ ಅವರು ಯೋಗ ಸಮಾಧಿಧಿಯಿಂದ ದೇಹ ತ್ಯಾಗ ಮಾಡುವುದೆಂದು ನಿಶ್ಚಯಿಸಿದರು. ಆದರೆ ಅದಕ್ಕಿಂತ ಮೊದಲು ತನ್ನ ಆಶ್ರಮಕ್ಕೆ ಧಿಒಬ್ಬ ಉತ್ತರಾಧಿಧಿಕಾರಿಯನ್ನು ಆರಿಸಬೇಕಿತ್ತು. ಕಳೆದ ಇಪ್ಪತ್ತು ವರ್ಷಗಳಿಂದ ಅತ್ಯಂತ ನಿಷ್ಠೆಯಿಂದ ಗುರುಸೇವೆ ಮಾಡುತ್ತಿದ್ದ ಒಬ್ಬ ಶಿಷ್ಯನಿದ್ದ. ಆ ಶಿಷ್ಯನೊಡನೆ ನಮ್ಮ ಆಶ್ರಮದ ಪರಿಸರದಲ್ಲಿ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಬಯಸುವ ನೂರು ಮಂದಿ ಯುವಕರನ್ನು ಕರೆದುಕೊಂಡು ಬಾ ಎಂದರು. ಶಿಷ್ಯನು ಗುರುವಿಗೆ ವಂದಿಸಿ ಹೊರಟ. ಆದರೆ ದಾರಿಯಲ್ಲಿ ಆತ ಯೋಚಿಸಿದ. ಗುರುಗಳು ನನ್ನನ್ನು ಉತ್ತರಾಧಿಧಿಕಾರಿಯನ್ನಾಗಿ ಮಾಡುವುದಿದ್ದರೆ ಈ ನೂರು ಮಂದಿ ಜತೆಗಾರರನ್ನೇಕೆ ನೀಡ ಬಯಸುತ್ತಾರೆ? ಹೇಗಿದ್ದರೂ ಗುರುಗಳ ಆಜ್ಞೆಯನ್ನು ಪಾಲಿಸಬೇಕೆಂದು ಆಶ್ರಮದ ಪರಿಸರದಿಂದ

ದಿನಕ್ಕೊಂದು ಕಥೆ. 523

*🌻ದಿನಕ್ಕೊಂದು ಕಥೆ🌻                        ಪ್ರತಿಕ್ಷಣವೂ ಸಂತೋಷದಿಂದ ಇರುವುದನ್ನು ಕಲಿಯಬೇಕು* ‘ನಿಮ್ಮಲ್ಲಿ ಎಷ್ಟು ಜನರಿಗೆ ತಿನ್ನುವುದೆಂದರೆ ಇಷ್ಟ?’ ಎಂದು ನಾನು ಕೇಳಿದರೆ ‘ಅರೆ ಇದೆಂಥ ಪ್ರಶ್ನೆ! ತಿನ್ನದೆ ಬದುಕಲು ಸಾಧ್ಯವೇ?’ ಅಂತ ನೀವು ನನ್ನನ್ನೇ ಮರು ಪ್ರಶ್ನಿಸಬಹುದು. ಹೌದು ನಾವೆಲ್ಲ ಬದುಕುವುದಕ್ಕಾಗಿ ತಿನ್ನುವವರಲ್ಲ. ಕೆಲವೊಮ್ಮೆ ತಿನ್ನುವುದಕ್ಕಾಗಿಯೇ ಬದುಕುತ್ತಿದ್ದೇವೇನೋ ಎಂಬಂತೆ ಆಡುವವರು. ನಾವು ಪ್ರತಿದಿನ ಬೆಳಗ್ಗೆ ಚಪಾತಿ, ತರಕಾರಿ ಪಲ್ಯ, ಮಧ್ಯಾಹ್ನ ಅನ್ನ-ಸಾಂಬಾರ್, ರಾತ್ರಿ ರೊಟ್ಟಿ-ಸಬ್ಜಿ ತಿಂದು ಬದುಕಬಹುದು. ಇವನ್ನಷ್ಟೆ ತಿಂದರೂ ನಮಗೆ ಬೇಕಾಗುವಷ್ಟು ಪೌಷ್ಟಿಕಾಂಶ ದೊರೆಯುತ್ತದೆ. ಆದರೂ ನಮಗೆ ಪಿಜ್ಜಾ, ಬರ್ಗರ್ ಬೇಕು. ವೀಕೆಂಡ್ ಬಂತೆಂದರೆ ರೆಸ್ಟೋರೆಂಟ್‌ನಲ್ಲೇ ತಿನ್ನಬೇಕು. ಅದಕ್ಕೆ ನಾನು ಹೇಳಿದ್ದು ನಾವು ತಿನ್ನುವುದಕ್ಕಾಗಿ ಬದುಕುತ್ತಿರುವವರೇನೋ ಅಂತ. ‘ಅಯ್ಯೋ ದಿನಾ ಅದನ್ನೇ ಯಾರು ತಿಂತಾರೆ ಸ್ವಾಮೀಜಿ? ನಾಲಗೆಗೆ ರುಚಿ ಬೇಡವೆ?’ ಅಂತ ಕೇಳುತ್ತೀರಲ್ಲವೆ. ನಿಮ್ಮಲ್ಲಿ ಎಷ್ಟು ಜನರಿಗೆ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುವುದೆಂದರೆ ಇಷ್ಟ? ಮಾನ ಮುಚ್ಚುವುದಕ್ಕಷ್ಟೇ ಬಟ್ಟೆ ಹಾಕುವುದಾದರೆ ಇಷ್ಟೊಂದು ಬ್ರಾಂಡೆಂಡ್ ಕಂಪನಿಗಳು, ಫ್ಯಾಷನ್ ಡಿಸೈನರ್‌ಗಳು ಕೆಲಸವಿಲ್ಲದೆ ಇರಬೇಕಿತ್ತು. ನಮಗೆ ನಾಲ್ಕು ಜನರೆದುರು ಸುಂದರವಾಗಿ ಕಾಣಿಸಬೇಕೆಂಬ ಆಸೆ. ಯಾವುದಾದರೂ ಸಮಾರಂಭಕ್ಕೆ ಹೋದಾಗ ‘ ವಾಹ್, ಎಷ್ಟು ಚೆನ್ನಾಗಿ ಕ