Posts

Showing posts from February, 2018

ದಿನಕ್ಕೊಂದು ಕಥೆ. 721

*🌻ದಿನಕ್ಕೊಂದು ಕಥೆ🌻                                                                     ನುಡಿದರೆ ಮಾಣಿಕ್ಯದ ದೀಪ್ತಿ!* ಮಾಣಿಕ್ಯದ ದೀಪ್ತಿಯಂಥ ಮೂರು ಮಾತುಗಳಿಂದ ಕಳ್ಳನೊಬ್ಬನ ಬದುಕು ಬದಲಾದ ಪವಾಡಸದೃಶ ಜೆನ್ ಕತೆಯೊಂದು ಇಲ್ಲಿದೆ! ಶತಮಾನಗಳ ಹಿಂದೆ ಜಪಾನಿನಲ್ಲಿ ಒಬ್ಬ ಜೆನ್ ಗುರುಗಳಿದ್ದರು. ಸಣ್ಣದೊಂದು ಕುಟೀರದಲ್ಲಿ ವಾಸವಿದ್ದವರು. ಸದಾ ಅಧ್ಯಯನ ಮತ್ತು ಧ್ಯಾನಮಗ್ನರು. ಒಂದು ರಾತ್ರಿ ಅವರು ಅಧ್ಯಯನದಲ್ಲಿದ್ದಾಗ ಕುಟೀರದೊಳಕ್ಕೆ ಒಬ್ಬ ಕಳ್ಳ ನುಗ್ಗಿದ. ಆತ ಕೈಯಲ್ಲಿದ್ದ ಕತ್ತಿಯಿಂದ ಗುರುಗಳ ಎದೆಗೆ ತಾಕಿಸಿ ‘ನಿಮ್ಮಲಿರೋ ಹಣವನ್ನೆಲ್ಲ ಕೊಟ್ಟುಬಿಡಿ. ಇಲ್ಲದಿದ್ದರೆ ನಿಮ್ಮನ್ನು ಕೊಂದು ಹಾಕುತ್ತೇನೆ’ ಎಂದು ಅಬ್ಬರಿಸಿದ. ಗುರುಗಳು ಪುಸ್ತಕದಿಂದ ತಲೆಯೆತ್ತಿ ನೋಡಲಿಲ್ಲ. ಶಾಂತವಾದ ದನಿಯಲ್ಲಿ ‘ತಮ್ಮಾ! ನಿನಗೆ ಕಾಣುವುದಿಲ್ಲವೇ? ನಾನು ಓದಿನಲ್ಲಿ ಮಗ್ನನಾಗಿದ್ದೇನೆ. ನಿನಗೆ ಬೇಕಿರುವುದು ಹಣವಲ್ಲವೇ? ಆ ಮೇಜಿನ ಮೇಲೆ ಹಣವಿದೆ. ಅದನ್ನು ತೆಗೆದುಕೊಂಡು ಹೋಗು. ನನ್ನ ಓದಿಗೆ ಭಂಗ ತರಬೇಡ’ ಎಂದರು. ಆಶ್ಚರ್ಯಗೊಂಡ ಕಳ್ಳ ಕತ್ತಿಯನ್ನು ಎತ್ತಿಟ್ಟುಕೊಂಡ. ಮೇಜಿನ ಮೇಲಿದ್ದ ನಾಣ್ಯಗಳನ್ನೆಲ್ಲಾ ಬಾಚಿಕೊಂಡ. ಆಗಲೂ ಗುರುಗಳು ತಲೆಯೆತ್ತದೆಯೇ ‘ಎಲ್ಲವನ್ನೂ ತೆಗೆದುಕೊಂಡು ಹೋಗಬೇಡಯ್ಯಾ. ನಾಳೆ ನನಗೆ ಕಂದಾಯ ಕಟ್ಟಬೇಕಿದೆ. ಅದಕ್ಕೆ ಹತ್ತು ನಾಣ್ಯಗಳು ಬೇಕು. ಅಷ್ಟನ್ನು ಅಲ್ಲಿಟ್ಟು ಉಳಿದುದನ್ನು ತೆಗೆದುಕೊಂಡು ಹೋಗು. ನಾನೇ ಅದನ್ನು ನಿನಗ

ದಿನಕ್ಕೊಂದು ಕಥೆ. 720

👌👉ಕಾಡಿನಲ್ಲಿ, ಒಂದು ಗರ್ಭವತಿ ಜಿಂಕೆಯು ತನ್ನ ಮಗುವಿಗೆ ಜನ್ಮ ಕೊಡುವುದಕ್ಕೆ ನದಿಯ ತೀರದಲ್ಲಿ ಹುಲ್ಲಿರುವ ಸಮತಟ್ಟಾದ, ಸುರಕ್ಷಿತವಾದ (!) ಸ್ಥಳವನ್ನು ಹುಡುಕಿ ಕೊಂಡಿತ್ತು. ಪ್ರಸವ ವೇದನೆ ಶುರುವಾದಾಗ ನಿಧಾನವಾಗಿ ತಾನು ಹುಡುಕಿಕೊಂಡ ಸ್ಥಳದ ಕಡೆ ನಡೆಯ ತೊಡಗಿತು. ..... ನಡೆಯುತ್ತಾ ನಡೆಯುತ್ತಾ ತಾನು ಹುಡುಕಿ ಕೊಂಡ ಸ್ಥಳಕ್ಕೆ ತಲುಪಿದ ಜಿಂಕೆಗೆ ಪ್ರಸವ ವೇದನೆ ತಾಳದಾಯಿತು. ಆ ಕ್ಷಣಕ್ಕೆ ಆಕಾಶದಲ್ಲಿ ಕಾರ್ಮೋಡಗಳು ದಟ್ಟವಾಯಿತು, ಮಿಂಚಿನಿಂದ ಕಾಡಿನಲ್ಲಿ ಬೆಂಕಿ ಹತ್ತಿತು. ಇದನ್ನು ಕಂಡ ಜಿಂಕೆ ಆ ಸ್ಥಳದಿಂದ ದೂರ ಹೋಗಲು ತಿರುಗಿತು. ತಿರುಗಿದ ಜಿಂಕೆಗೆ ಆಗ ಕಂಡದ್ದು ಏನೆಂದರೆ ಅದರ ಎಡಕ್ಕೆ ಒಬ್ಬ ಬೇಟೆಗಾರ ಜಿಂಕೆಗೆ ಗುರಿ ಮಾಡಿ ಬಾಣ ಹೂಡಿದ್ದಾನೆ. ಇದನ್ನು ಕಂಡು ಆಘಾತದಿಂದ ಜಿಂಕೆ ಬಲಕ್ಕೆ ತಿರುಗಿದಾಗ ಅಲ್ಲೊಂದು ಹಸಿದ ಸಿಂಹ ಇದರೆಡೆಗೆ ಬರುತ್ತಿದೆ. ಪ್ರಸವ ವೇದನೆ ತಾಳಲಾರದ ಜಿಂಕೆ ಈಗ ಏನು ಮಾಡೀತು !!?... ಜಿಂಕೆ ಬದುಕುಳಿಯುತ್ತದಾ !!?... ತನ್ನ ಮಗುವಿಗೆ ಜನ್ಮ ನೀಡುತ್ತದಾ !!?... ಕಾಡಿನ ಬೆಂಕಿಗೆ ಎಲ್ಲರೂ ಆಹುತಿಯಾ!!?.. ಆ ಕ್ಷಣ ಏನು, ಎತ್ತ, ಹೇಗೆ !!??...  ಜಿಂಕೆ ತನ್ನ ಎಡಕ್ಕೆ ಹೋಗುತ್ತದಾ!!?.. ಅಲ್ಲಿ ಬೇಟೆಗಾರ ಇದ್ದಾನೆ. ಜಿಂಕೆ ತನ್ನ ಬಲಕ್ಕೆ ಹೋಗುತ್ತದಾ!!?.. ಅಲ್ಲಿ ಹಸಿದ ಸಿಂಹ ಇದೆ. ತನ್ನ ಸ್ಥಳದಿಂದ ಮುಂದಕ್ಕೆ ಹೊರಟರೆ !!?.. ಕಾಡಿಗೆ ಬೆಂಕಿ ಬಿದ್ದಿದೆ. ತನ್ನ ಸ್ಥಳದಿಂದ ಹಿಂದಕ್ಕೆ ಸರಿದರೆ !!?..

ದಿನಕ್ಕೊಂದು ಕಥೆ. 719

*🌻ದಿನಕ್ಕೊಂದು ಕಥೆ🌻                                  ಭಾರತೀಯ ಸೇನೆಗೂ ಉಪಯುಕ್ತವಾಯ್ತು ಮಣಿಪಾಲದ ಪ್ರೊಫೆಸರ್ ಕಂಡುಹಿಡಿದ ಹೊಸ ದೂರದರ್ಶಕ* ಮನುಷ್ಯನಿಗೆ ಸಾಧನೆ ಮಾಡಬೇಕು ಎಂಬ ಮನಸ್ಸಿದ್ದರೆ ಏನು ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಇಂದಿನ ಪಬ್ಲಿಕ್ ಹೀರೋನೇ ಸಾಕ್ಷಿ. ಲ್ಯಾಬ್ ಇನ್ಸ್‍ಸ್ಟ್ರಕ್ಟರ್ ಆಗಿ ಕೆಲಸ ಮಾಡುತ್ತಿರುವ ಉಡುಪಿಯ ಮಣಿಪಾಲದ ಪ್ರೊ. ಮನೋಹರ್ ಪೇಟೆಂಟ್‍ಗಳ ಮೇಲೆ ಪೇಟೆಂಟ್ ಪಡೆದುಕೊಂಡಿದ್ದಾರೆ. ಭಾರತೀಯ ಸೇನೆಗೂ ಇವರ ಅನ್ವೇಷಣೆ ಉಪಯುಕ್ತವಾಗಿದೆ. ಪ್ರೊ. ಮನೋಹರ್ ಎಂಐಟಿ ಕಾಲೇಜಿನ ಉಪನ್ಯಾಸಕರಾಗಿದ್ದಾರೆ. ಸ್ವತಃ ಸಂಶೋಧನೆ ಮಾಡಿ, ದೂರದರ್ಶಕವನ್ನು ಕಂಡು ಹಿಡಿದಿದ್ದಾರೆ. ಈ ಬೈನಾಕ್ಯುಲರ್ ಒಳಗೆ 9 ಲೆನ್ಸ್ ಅಳವಡಿಸಿದ್ದಾರೆ. ಪಿವಿಸಿ ಪೈಪ್, ಭೂತಕನ್ನಡಿಗಳನ್ನು ಬಳಸಿಕೊಂಡು ಈ ಸಾಧನೆ ಮಾಡಿದ್ದಾರೆ. ಬೇರೆ ದೂರದರ್ಶಕಗಳಲ್ಲಿ ತಲೆಕೆಳಗಾಗಿ ದೃಶ್ಯಗಳು ಕಂಡರೆ, ಮನೋಹರ್ ಕಂಡುಹಿಡಿದಿರೋ ಬೈನಾಕುಲರ್‍ನಲ್ಲಿ ಕಣ್ಣಿನಲ್ಲಿ ಕಾಣಿಸುವಂತೆಯೇ ನೋಡಬಹುದು. ಮಣಿಪಾಲ ವಿವಿಯ ಎಂಐಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗಿಯಾಗಿರುವ ಮನೋಹರ್ ವಿಜ್ಞಾನಿಗಳು ಮಾಡುವ ಸಾಧನೆಯನ್ನು ಮಾಡಿದ್ದಾರೆ. ಈಗ ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಣೆ ಮಾಡಿದ್ದು ಮಿಲಿಟರಿ ಅಧಿಕಾರಿಗಳ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ. ಮನೋಹರ್ ಅವರ ಸಾಧನೆಗೆ ಭಾರತ ಸರ್ಕಾರದಿಂದ ಪೇಟೆಂಟ್ ಸಿಕ್ಕಿದೆ. ಭಾರತೀಯ ಸೇನೆಯಿಂದ 200 ದೂರದರ್ಶಕಗಳನ್ನು ಸಿದ್ಧ

ದಿನಕ್ಕೊಂದು ಕಥೆ. 718

    ದಿನಕ್ಕೊಂದು ಕಥೆ                                                                  ಕೃಷ್ಣನ ಪ್ರಕಾರ ಒಬ್ಬರು ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುವುದು ಕೇವಲ ಎರಡೇ  ಕಾರಣಕ್ಕಾಗಿ. ನೀವು ಎಷ್ಟಾದರೂ ಯೋಚಿಸಿ ಮೂರನೇ ಕಾರಣ ಸಿಗೋಲ್ಲ. ಒಂದು: ಪ್ರೀತಿಯಿಂದ ಕರೆದಾಗ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ. ಎರಡು: ನಮಗೆ ಗತಿ ಇಲ್ಲದಿದ್ದಾಗ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗುತ್ತೇವೆ. ಇದು ಬಿಟ್ಟು ಮೂರನೆಯ ಕಾರಣವೇ ಇಲ್ಲ. ಪ್ರಸಂಗ: ಕೃಷ್ಣ ಪರಮಾತ್ಮನು ದುರ್ಯೋಧನನ ಮನೆಗೆ ಸಂಧಾನಕ್ಕೆ ಹೋದಾಗ ದುರ್ಯೋಧನನು ಪಂಚಭಕ್ಷ್ಯ ಪರಮಾನ್ನವನ್ನು ಅಡುಗೆ ಮಾಡಿಸಿರುತ್ತಾನೆ‌. ಅತಿಥಿಯಾಗಿ ಬಂದಂತಹ ಭಗವಂತನೊಂದಿಗೆ ಭಕ್ತಿಯಿಂದ ನಡೆದುಕೊಳ್ಳದೆ, ತನ್ನ ವೈಭವ, ಐಶ್ವರ್ಯವನ್ನು ತೋರಿಸಿಕೊಳ್ಳಲು  ಅಹಂಕಾರದಿಂದ ಶ್ರೀ ಕೃಷ್ಣನನ್ನು ದುರ್ಯೋಧನನು ಊಟಕ್ಕೆ ಆಹ್ವಾನಿಸುತ್ತಾನೆ. ಆಗ ಪರಮಾತ್ಮನು " ನ ಚ ಸಂಪ್ರೀಯಸೆ ರಾಜನ್ ನಚೈವ ಆಪತ್ಗತಾ: ವಯಂ" (ನೀನು ಪ್ರೀತಿಯಿಂದ ಕರೆಯುತ್ತಿಲ್ಲ, ನಾನು ಗತಿಯಿಲ್ಲದೆ ಬಂದಿಲ್ಲ) ಎಂದು ದುರ್ಯೋಧನನ ಆಹ್ವಾನವನ್ನು ತಿರಸ್ಕರಿಸುತ್ತಾನೆ. ಹಾಗಾದರೆ ಶ್ರೀ ಕೃಷ್ಣನು ಯಾರ ಮನೆಯ ಪ್ರಸಾದವನ್ನು ಸ್ವೀಕರಿಸುತ್ತಾನೆ ಎಂದರೆ: ದುರ್ಯೋಧನನ ಆಹ್ವಾನವನ್ನು ತಿರಸ್ಕರಿಸಿದ ನಂತರ ಶ್ರೀ ಕೃಷ್ಣನು ದಾಸಿಯ ಮಗನೆಂದು ದುರ್ಯೋಧನನು ಹೀಯಾಳಿಸುತ್ತಿದ್ದಂತಹ ಪರಮ ಜ್ಞಾನಿಯಾದ ವಿದುರನ ಮನೆಯ ಪ್ರಸಾದವನ್ನು ಸ್ವೀಕರಿಸ

ದಿನಕ್ಕೊಂದು ಕಥೆ. 717

  ದಿನಕ್ಕೊಂದು ಕಥೆ                                                                      *ಅಮ್ಮ ನಮ್ಮ ಕಾಲೇಜು ಕ್ಯಾಂಪಸ್ ಬಳಿ ಸೊಪ್ಪು ಮಾರಲು ಬರಬೇಡ* ಕಾಲೇಜು ಕ್ಯಾಂಪಸ್‌ನ ಹೊರಗೆ ಸೊಪ್ಪು… ಸೊಪ್ಪು.. ಎಂದು ಕೂಗುತ್ತಾ ತಲೆಯಲ್ಲಿ ಬುಟ್ಟಿ ಹೊತ್ತು ನಡೆದಾಡಿಕೊಂಡು ಹೋಗುತ್ತಿದ್ದ ವಯಸ್ಸಾದ ತಾಯಿಯ ಕೂಗು ಕೇಳಿ ವಿದ್ಯಾರ್ಥಿಯ ಸ್ನೇಹಿತರು ಹೀಗೆ ಹೇಳಿದರು “ನೋಡೋ ನಿನ್ನ ತಾಯಿ ಸೊಪ್ಪುಗಳನ್ನು ತಗೊಂಡು ಬಂದಿದ್ದಾರೆ, ನಮ್ಗೂ ಬೇಕು ಎರಡು ಕಟ್ಟು” ಎಂದು ಹೇಳಿ ವ್ಯಂಗ್ಯವಾಗಿ ನಕ್ಕರು. ವಿದ್ಯಾರ್ಥಿಗೆ ಅದನ್ನು ಕೇಳಿ ಅವಮಾನದ ಜೊತೆಗೆ ಕೋಪ ನೆತ್ತಿಗೇರಿತು. ಕಾಲೇಜು ಬಿಟ್ಟಂತೆ ನೇರವಾಗಿ ಮನೆಗೆ ಬಂದು ಬ್ಯಾಗ್ ಬಿಸಾಕಿ ಅಮ್ಮನ ಎದುರಲ್ಲಿ ನಿಂತನು. ಅಮ್ಮ ಮಗನನ್ನು ಕರೆದು “ಯಾಕೋ ಮಗ ಆತುರದಿಂದ ಓಡೋಡಿ ಬಂದೆ? ಬಾ ಚಹಾ ಕುಡಿ” ಎಂದಾಗ ಮಗ ಕೋಪದಿಂದ “ಅಮ್ಮ ನಂಗೆ ಚಹಾನು ಬೇಡ ಏನು ಬೇಡ.‌ ನಾಳೆಯಿಂದ ನಮ್ಮ ಕಾಲೇಜು ಹತ್ತಿರ ಬಂದು ಸೊಪ್ಪು ಸೊಪ್ಪು ಅಂತ ಕೂಗಿ ನನ್ನ ಮಾನ ಮರ್ಯಾದೆ ತೆಗಿಬೇಡ” ಎಂದಾಗ ಅಮ್ಮ ಪ್ರೀತಿಯಿಂದ “ಸರಿ ಮಗ.. ಬರಲ್ಲ ಬಿಡು! ನಿಂಗೆ ಅವಮಾನ ಆಗುವಂಥ ಕೆಲಸ ನಾನು ಮಾಡಲ್ಲ. ನಂಗೆ ಇರೋದು ನೀನೊಬ್ಬನೆ ಮಗ” ಎಂದು ಮಗನಿಗೆ ಚಹಾ ಕೊಟ್ಟಳು. ಮರುದಿನ ಕಾಲೇಜು ಕ್ಯಾಂಪಸ್ ಹೊರಗೆ ಎಂದಿನಂತೆ ಅಮ್ಮನ ಕೂಗು ಇಲ್ಲ. ಸ್ನೇಹಿತರ ಕಿರಿಕಿರಿ ಇಲ್ಲ.‌ ವಿದ್ಯಾರ್ಥಿ ನೆಮ್ಮದಿಯಿಂದ ಇದ್ದ. ಎಂದಿನಂತೆ ಕಾಲೇಜು ಬಿಟ್ಟು ಮನೆಗೆ ಹೋದ

ದಿನಕ್ಕೊಂದು ಕಥೆ. 716

ದಿನಕ್ಕೊಂದು ಕಥೆ ನಿಮ್ಮ ಬದುಕಿಗೊಂದು ಬೆಳಕು.... *ಉಪದೇಶಕ್ಕಿಂತ ಅನುಭವ ಮಿಗಿಲು* ಒಂದು ಅನುಭವ ನೂರು ಉಪದೇಶಕ್ಕಿಂತ ಮಿಗಿಲು. ಯಾವುದೇ ಜ್ಞಾನ ಕೇವಲ ಜ್ಞಾನವಾಗಿಯಷ್ಟೇ ಉಳಿದರೆ ಪ್ರಯೋಜನವಿಲ್ಲ. ಅದು ಅನುಭವವಾಗಿ ಪರಿವರ್ತನೆ ಹೊಂದಬೇಕು. ಜ್ಞಾನ ಪಡೆಯುವುದರ ಮುಖ್ಯ ಉದ್ದೇಶ, ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಭವ ಪಡೆಯುವುದು. ತಾಯಿಯೊಬ್ಬಳಿಗೆ ಸುಮಾರು ಒಂದೂವರೆ ವರ್ಷದ ಮಗುವಿತ್ತು. ಮಗು *ಎಲ್ಲಾದರೂ ಬಿದ್ದುಬಿಟ್ಟರೆ? ಕಾಲು ಜಾರಿದರೆ? ಮೈಕೈಗಳಿಗೆ ಗಾಯವಾಗಿಬಿಟ್ಟರೆ?* ಎಂಬುದಾಗಿ ಆಕೆ ಮಗುವಿನ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದಳು. ಆದರೆ ಮಗುವಿನ ಮನಸ್ಸಿನಲ್ಲಿ ಹಾಗಿಲ್ಲ; ತಾನು ಮನೆತುಂಬ ಓಡಾಡಬೇಕು, ಸಿಕ್ಕಿದ್ದರ ಜತೆ ಆಟವಾಡಬೇಕೆಂಬುದು ಅದರಾಸೆ. ಆದರೆ ತಾಯಿ ಅದಕ್ಕೆ ಅವಕಾಶ ನೀಡುತ್ತಿಲ್ಲ. *‘ಮಗು, ಹುಷಾರಾಗಿರು. ದೇವರ ಮನೆಯಲ್ಲಿ ಉರಿಯುತ್ತಿರುವ ದೀಪವನ್ನು ಮುಟ್ಟಬೇಡ, ಸುಡುತ್ತದೆ’* ಎಂದು ತಾಯಿ ಮಗುವಿಗೆ ಹೇಳುತ್ತಾಳೆ. ಮಗುವಿಗಾದರೋ ಆ ನಂದಾದೀಪ ನಿತ್ಯಾಕರ್ಷಕ ವಸ್ತು. ಜತೆಗೆ, *‘ಅದೇನಿರಬಹುದು?’* ಎಂಬ ಕುತೂಹಲ ಬೇರೆ. ಇಷ್ಟಾಗಿಯೂ ಅಮ್ಮ ಅದನ್ನು ಮುಟ್ಟದಂತೆ ಅದೇಕೆ ತಡೆಯುತ್ತಾಳೆ ಎಂಬುದು ಮಗುವಿಗೆ ಅರ್ಥವಾಗುತ್ತಿಲ್ಲ. ದೀಪದ ಬಣ್ಣ, ಅದು ಅತ್ತಿಂದಿತ್ತ ಆಡುವುದನ್ನು ನೋಡಿದ ಮಗುವಿಗೆ ಅದನ್ನು ಮುಟ್ಟಬೇಕೆಂಬ ಆಸೆ ಹೆಚ್ಚಾಯಿತು, ಅದಕ್ಕಾಗಿ ಹೊಂಚುಹಾಕುತ್ತಿತ್ತು. ಅಮ್ಮ ಕೊಂಚ ನಿಮಿಷದ ಮಟ್ಟಿಗೆ ಆಚೆ ಹೋಗ

ದಿನಕ್ಕೊಂದು ಕಥೆ. 715

ದಿನಕ್ಕೊಂದು ಕಥೆ                                             ಸ್ವಾಮೀಜಿ ಮತ್ತು ದೇವರು ಚಂದ್ರು ಹಿರೇಮಠ ಒಂದೂರಿನಲ್ಲಿ ಅತ್ಯಂತ ಜಾಣ ಸ್ವಾಮೀಜಿಯೊಬ್ಬರು ತಮ್ಮ ಮಠದ ಆವರಣದಲ್ಲಿ 'ದೇವರು ಆಪದ್ಭಾಂಧವ' ಎಂಬ ವಿಷಯದ ಮೇಲೆ ಪ್ರವಚನ ಮಾಡುತ್ತಿದ್ದರು. ಪ್ರತಿದಿನ ಪ್ರವಚನ ಕೇಳಲು ಸಾವಿರಾರು ಭಕ್ತರು ಸೇರುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ದಿನ ಆ ಊರ ಮುಂದಿನ ಕೆರೆಯ ಗೋಡೆ ಕುಸಿದು ನೀರು ನುಗ್ಗತೊಡಗಿತು. ಅಲ್ಲಿಯ ಜನರು ಜೀವ ಭಯದಿಂದ ರಕ್ಷ ಣೆಗಾಗಿ ಓಡಾಡತೊಡಗಿದರು. ಆದರೆ ಸ್ವಾಮೀಜಿ ಮಾತ್ರ 'ನಾನು ದೇವರ ಕುರಿತು ಪ್ರವಚನ ಮಾಡುವವ. ನಾನು ದೇವರನ್ನು ತುಂಬಾ ನಂಬಿದ್ದೇನೆ. ಅವನು ಯಾವತ್ತು ನನ್ನ ಕೈ ಬಿಡುವುದಿಲ್ಲ' ಎಂದು ಮಠದಲ್ಲಿಯೇ ಕುಳಿತರು. ತುಂಬಾ ರಭಸದಿಂದ ನೀರು ಮಠದೊಳಗೇ ಬರತೊಡಗಿತು. ಆಗ ಆ ಊರಿನ ಜನ ದೋಣಿ ತಂದು ಸ್ವಾಮಿಗಳೇ ಬೇಗ ಬನ್ನಿ, ಸುರಕ್ಷಿತ ಸ್ಥಳಕ್ಕೆ ಬೇಗ ಹೋಗೋಣ ಎಂದು ಕರೆದರು. ಆಗ ಸ್ವಾಮೀಜಿ 'ಇಲ್ಲಾ ನಾನು ಬರಲ್ಲ. ಆ ದೇವರೇ ನನ್ನನ್ನು ಕಾಪಾಡುತ್ತಾನೆ' ಎಂದು ಹೇಳಿ ಅಲ್ಲಿಯೇ ಕುಳಿತರು. ನುಗ್ಗಿ ಬಂದ ನೀರು ಮಠದ ಸುತ್ತ ಮುತ್ತ ಹಾಗೂ ಮಠದ ಅರ್ಧದಷ್ಟು ಆವರಿಸಿತು. ಆಗ ಸ್ವಾಮೀಜಿ ಮಠದ ಮೂಲೆಯೊಂದರಲ್ಲಿ ಏರಿ ಕುಳಿತರು. ಆಗ ಮತ್ತೆ ಆ ಊರಿನ ಜನ ದೊಡ್ಡ ದೋಣಿ ತಂದು, ಸ್ವಾಮೀಜಿಯವರೇ ಈಗಲಾದರೂ ಬನ್ನಿ. ಕೆರೆ ನೀರಿನ ಹರಿವು ತುಂಬಾ ಹೆಚ್ಚಾಗುತ್ತದೆ. ಬೇಗ ಬನ್ನಿ ಎಂದು ಕರೆದರು. ಆದರೂ ಸ

ದಿನಕ್ಕೊಂದು ಕಥೆ. 714

ಬಳಪವಾದ ಗಣಪನ ದಂತ! ಹೊರಾ.ಪರಮೇಶ್‌ ಹೊಡೇನೂರು   ಒಮ್ಮೆ ಗಣೇಶ ಮತ್ತು ಸುಬ್ರಹ್ಮಣ್ಯ ಇಬ್ಬರೂ ತಂದೆ ಮಹಾದೇವನ ಕೈಲಾಸದ ದ್ವಾರದಲ್ಲಿ ಕಾವಲು ನಿಂತಿರುತ್ತಾರೆ. ಅಲ್ಲಿಗೆ ಪರಶಿವನ ದರ್ಶನ ಪಡೆಯಲು ಪರಶುರಾಮರು ಬರುತ್ತಾರೆ. ಧ್ಯಾನದಲ್ಲಿ ಮಗ್ನರಾಗಿರುವ ತಂದೆಯ ದರ್ಶನಕ್ಕೆ ಹೋಗಲು ಪ್ರಯತ್ನಿಸಿದ ಪರಶುರಾಮನನ್ನು ಗಣೇಶನು ತಡೆಯುತ್ತಾನೆ. ವ್ಯಗ್ರಗೊಂಡ ಪರಶುರಾಮರು ಗಣೇಶನ ಉದ್ಧಟತನವನ್ನು ಅಲಕ್ಷಿಸಿ, ಬಲವಂತವಾಗಿ ಕೈಲಾಸದ ಒಳಗೆ ಪ್ರವೇಶಿಸಲು ಮುಂದಾದಾಗ ಗಣೇಶನು ಅವರ ಎದೆಗೆ ಕೈಹಾಕಿ ಹಿಂದಕ್ಕೆ ತಳ್ಳುತ್ತಾನೆ. ತನ್ನ ಮೈಮುಟ್ಟಿ ಕೊಳಕು ಮಾಡಿದನೆಂದು ಭಾವಿಸಿದ ಪರಶುರಾಮರು ಕೋಪಗೊಂಡು 'ಮಾನಸ ಸರೋವರದಲ್ಲಿ ಮಿಂದು ಪವಿತ್ರಗೊಂಡು ಮರಳುವಷ್ಟರಲ್ಲಿ ಮನಸ್ಸು ಬದಲಾಯಿಸಿಕೊಳ್ಳಿ, ಇಲ್ಲದಿದ್ದರೆ ಘೋರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ!' ಎಂದು ಎಚ್ಚರಿಕೆ ನೀಡಿ ಮಾನಸ ಸರೋವರಕ್ಕೆ ತೆರಳುತ್ತಾರೆ. ಸ್ವಲ್ಪ ಸಮಯದ ಬಳಿಕ ಮರಳಿದ ಪರಶುರಾಮರನ್ನು ಪುನಃ ತಡೆದ ಗಣೇಶನ ಜೊತೆ ಪರಶುರಾಮರು ಯುದ್ಧಕ್ಕೆ ಮುಂದಾಗುತ್ತಾರೆ. ತನ್ನ ಸೋದರನೊಡನೆ ಕಾದಾಡಲು ಮುಂದಾದ ಪರಶುರಾಮರ ನಿಲುವನ್ನು ಖಂಡಿಸಿದ ಸುಬ್ರಹ್ಮಣ್ಯನು ತಾನೇ ಯುದ್ಧ ಮಾಡಲು ಮುಂದಾದಾಗ, ಗಣೇಶನು ಅವನನ್ನು ತಡೆದು ತಾನೇ ಯುದ್ಧ ಮಾಡುತ್ತಾನೆ. ಬಹಳ ಹೊತ್ತು ಕಾದಾಡಿದರೂ ಸೋಲದ ಗಣೇಶನ ಮೇಲೆ ಪರಶುರಾಮರು ಪರಶಿವನು ವರವಾಗಿ ಕರುಣಿಸಿದ ಶಕ್ತಿಶಾಲಿ ಪರಶು(ಕೊಡಲಿ)ವನ್ನು ಪ್ರಯೋಗಿಸುತ್ತಾರೆ. ತನ್ನ ತಂ