ದಿನಕ್ಕೊಂದು ಕಥೆ. 719
*🌻ದಿನಕ್ಕೊಂದು ಕಥೆ🌻 ಭಾರತೀಯ ಸೇನೆಗೂ ಉಪಯುಕ್ತವಾಯ್ತು ಮಣಿಪಾಲದ ಪ್ರೊಫೆಸರ್ ಕಂಡುಹಿಡಿದ ಹೊಸ ದೂರದರ್ಶಕ*
ಮನುಷ್ಯನಿಗೆ ಸಾಧನೆ ಮಾಡಬೇಕು ಎಂಬ ಮನಸ್ಸಿದ್ದರೆ ಏನು ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಇಂದಿನ ಪಬ್ಲಿಕ್ ಹೀರೋನೇ ಸಾಕ್ಷಿ.
ಲ್ಯಾಬ್ ಇನ್ಸ್‍ಸ್ಟ್ರಕ್ಟರ್ ಆಗಿ ಕೆಲಸ ಮಾಡುತ್ತಿರುವ ಉಡುಪಿಯ ಮಣಿಪಾಲದ ಪ್ರೊ. ಮನೋಹರ್ ಪೇಟೆಂಟ್‍ಗಳ ಮೇಲೆ ಪೇಟೆಂಟ್ ಪಡೆದುಕೊಂಡಿದ್ದಾರೆ. ಭಾರತೀಯ ಸೇನೆಗೂ ಇವರ ಅನ್ವೇಷಣೆ ಉಪಯುಕ್ತವಾಗಿದೆ. ಪ್ರೊ. ಮನೋಹರ್ ಎಂಐಟಿ ಕಾಲೇಜಿನ ಉಪನ್ಯಾಸಕರಾಗಿದ್ದಾರೆ. ಸ್ವತಃ ಸಂಶೋಧನೆ ಮಾಡಿ, ದೂರದರ್ಶಕವನ್ನು ಕಂಡು ಹಿಡಿದಿದ್ದಾರೆ.
ಈ ಬೈನಾಕ್ಯುಲರ್ ಒಳಗೆ 9 ಲೆನ್ಸ್ ಅಳವಡಿಸಿದ್ದಾರೆ. ಪಿವಿಸಿ ಪೈಪ್, ಭೂತಕನ್ನಡಿಗಳನ್ನು ಬಳಸಿಕೊಂಡು ಈ ಸಾಧನೆ ಮಾಡಿದ್ದಾರೆ. ಬೇರೆ ದೂರದರ್ಶಕಗಳಲ್ಲಿ ತಲೆಕೆಳಗಾಗಿ ದೃಶ್ಯಗಳು ಕಂಡರೆ, ಮನೋಹರ್ ಕಂಡುಹಿಡಿದಿರೋ ಬೈನಾಕುಲರ್‍ನಲ್ಲಿ ಕಣ್ಣಿನಲ್ಲಿ ಕಾಣಿಸುವಂತೆಯೇ ನೋಡಬಹುದು. ಮಣಿಪಾಲ ವಿವಿಯ ಎಂಐಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗಿಯಾಗಿರುವ ಮನೋಹರ್ ವಿಜ್ಞಾನಿಗಳು ಮಾಡುವ ಸಾಧನೆಯನ್ನು ಮಾಡಿದ್ದಾರೆ. ಈಗ ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಣೆ ಮಾಡಿದ್ದು ಮಿಲಿಟರಿ ಅಧಿಕಾರಿಗಳ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ.
ಮನೋಹರ್ ಅವರ ಸಾಧನೆಗೆ ಭಾರತ ಸರ್ಕಾರದಿಂದ ಪೇಟೆಂಟ್ ಸಿಕ್ಕಿದೆ. ಭಾರತೀಯ ಸೇನೆಯಿಂದ 200 ದೂರದರ್ಶಕಗಳನ್ನು ಸಿದ್ಧಪಡಿಸಿಕೊಡುವಂತೆ ಆರ್ಡರ್ ಬಂದಿದೆ. 10 ಕಿಲೋಮೀಟರ್ ದೂರದಲ್ಲಿರುವ ಬೋರ್ಡ್‍ಗಳನ್ನು ಮನೋಹರ್ ಅವರ ಸಾಧನದಲ್ಲಿ ನೋಡಬಹುದು, ದೂರದಲ್ಲಿರುವ ಬೋರ್ಡ್‍ಗಳನ್ನು ಓದಬಹುದು. ಶತ್ರು ರಾಷ್ಟ್ರದ ವಾಹನಗಳು ನಮ್ಮ ದೇಶದತ್ತ ಬರುತ್ತಿದ್ರೆ ಅದನ್ನು ಓದಿ ಗುರುತಿಸಬಹುದು. ಚಂದ್ರನ ಮೇಲಿನ ಗುಳಿಗಳನ್ನು ಸ್ಪಷ್ಟವಾಗಿ ನೋಡಬಹುದು. ಶನಿಗ್ರಹದ ವರ್ತುಲಗಳನ್ನು ನೋಡಬಹುದು. ಗ್ರಹಣಗಳಾದಾಗ ಈ ದೂರದರ್ಶಕದ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ಕೊಡುವ ಕೆಲಸವನ್ನು ಪ್ರೊ. ಮನೋಹರ್ ಮಾಡುತ್ತಾ ಬಂದಿದ್ದಾರೆ.
ಸೂಕ್ಷ್ಮದರ್ಶಕ ಮತ್ತು ದೂರ ದರ್ಶಕವನ್ನು ಬಹಳ ಕಡಿಮೆ ವೆಚ್ಚದಲ್ಲಿ ತಯಾರಿಸಿದ್ದು ಮನೋಹರ್ ಅವರ ಸಾಧನೆ. ಇಡೀ ಟೆಲಿಸ್ಕೋಪ್ ಒಂದೇ ಟ್ಯೂಬ್‍ನಲ್ಲಿ ಫಿಕ್ಸ್ ಮಾಡಿದ ಚಾಕಚಕ್ಯತೆಯನ್ನು ಸ್ಕೆಚ್ ಮಾಡಿದ್ದಾರೆ. 40 ರಿಂದ 50 ಕಿಲೋಮೀಟರ್ ವರೆಗಿನ ಯುದ್ಧಭೂಮಿಗೆ ಬಹಳ ಉಪಯುಕ್ತವಾಗಿದೆ. ಚಂದ್ರಗ್ರಹಣ, ಸೂರ್ಯಗ್ರಹಣ, ಗ್ರಹಗಳು, ಸಮುದ್ರ ಹೀಗೆ ಎಲ್ಲವನ್ನೂ ಹತ್ತಿರದಿಂದ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ಮರದ ಕಟ್ಟಿಂಗ್ ಗೇಜ್ ನಿರ್ಮಾಣ ಮಾಡಿದ್ದು, ಆ ಸಾಧನಕ್ಕೂ ಪೇಟೆಂಟ್ ಸಿಕ್ಕಿದೆ. ಒಟ್ಟಿನಲ್ಲಿ ಇಂಡಿಯಾ, ಅಮೆರಿಕಾ ಸೇರಿದಂತೆ 37 ದೇಶಗಳ ಪೇಟೆಂಟ್ ಸಿಕ್ಕ ಮಹಾನ್ ಸಾಧನ ನಮ್ಮ ನಡುವೆ ಇರೋದು ಹೆಮ್ಮೆಯ ಸಂಗತಿ.
ಕೃಪೆ :ಪಬ್ಲಿಕ್ ಟಿವಿ. ಸಂಗ್ರಹ :ವೀರೇಶ್ ಅರಸಿಕೆರೆ.********************************************* *🌻ದಿನಕ್ಕೊಂದು ಕಥೆ🌻* *ಪಕೋಡಾ, ಬೋಂಡ-ಬಜ್ಜಿ ಮಾರಿ ಬದುಕು ಕಟ್ಟಿಕೊಂಡ ಮಂಡ್ಯದ ಯುವ ಎಂಜಿನಿಯರ್*
ಮಂಡ್ಯ ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಮುಗಿಸಿದ ಯುವಕ ವೆಂಕಟೇಶ್ (ಮನು) ಬಜ್ಜಿ-ಬೋಂಡಾ ಮಾರಿ ಜೀವನ ನಡೆಸುತ್ತಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ನಿವಾಸಿಯಾಗಿರುವ ವೆಂಕಟೇಶ್ ಬಿಇ ಮೆಕಾನಿಕಲ್ ಓದಿದ್ದಾರೆ. ಇಂದು ಯಾವುದೇ ಸಂಕೋಚವಿಲ್ಲದೇ ಕೆ.ಆರ್.ಪೇಟೆ ಪಟ್ಟಣದ ರಸ್ತೆ ಬದಿ ತಳ್ಳುವ ಗಾಡಿಯಲ್ಲಿ ಪಕೋಡಾ, ಬೋಂಡಾ, ಬಜ್ಜಿ ಮಾರುತ್ತಿದ್ದಾರೆ.
ವೆಂಕಟೇಶ್ ಪ್ರಥಮ ದರ್ಜೆಯ ಅಂಕ ಪಡೆದು ಎಂಜಿನಿಯರಿಂಗ್ ಮುಗಿಸಿದ್ದಾರೆ. ಖಾಸಗಿ ಕಂಪನಿಯವರು ತನ್ನ ಓದಿಗೆ ಬೆಲೆ ಕೊಡದಿದ್ದಾಗ, ತನ್ನ ತಂದೆಗೆ ಜೀವನ ಕೊಟ್ಟ ಈ ಉದ್ಯಮವನ್ನು ಮುಂದುವರಿಸಿದ್ದಾರೆ. ಎಂಜಿನಿಯರಿಂಗ್ ಮುಗಿಸಿದ ಹೊಸದರಲ್ಲಿ ಒಂದೆರಡು ಕಂಪನಿಗಳಿಲ್ಲಿ ಕೆಲಸ ಕೂಡ ಮಾಡಿದ್ದಾರೆ. ಜೊತೆಗೆ ಶ್ರವಣಬೆಳಗೊಳದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಇಂದು ಪ್ರತಿದಿನ ಬಜ್ಜಿ ಬೋಂಡಾ ಮಾರುವ ಮೂಲಕವೇ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ. ಕೃಪೆ :ಪಬ್ಲಿಕ್ ಟಿವಿ. ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment