Posts

Showing posts from July, 2023

ದಿನಕ್ಕೊಂದು ಕಥೆ 1063

ದಿನಕ್ಕೊಂದು ಕಥೆ  ಅವಮಾನದಲ್ಲಿ ಬೆಳೆದು, ಅಸಾಮಾನ್ಯನಾದ... ಅದೊಂದು ತರಗತಿ. ವಿದ್ಯಾರ್ಥಿಯೊಬ್ಬ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತಿದ್ದ. ಆತನಿಗೆ  ಉತ್ತರಿಸಲು ಕಷ್ಟವಾಗುತ್ತಿದೆ. ಉತ್ತರ ಗೊತ್ತಿದ್ದೂ ತಟ್ಟನೆ ಉತ್ತರಿಸಲಾಗುತ್ತಿಲ್ಲ. ಬಹಳನೇ ಕಷ್ಟಪಟ್ಟು ಉತ್ತರಿಸಿದ.   ಉಗ್ಗುವಿಕೆ  ಆತನಿಗಿದ್ದ ನ್ಯೂನ್ಯತೆ. ಉಳಿದ ವಿದ್ಯಾರ್ಥಿಗಳು ಆತನನ್ನು ಗೇಲಿ ಮಾಡುತ್ತಿದ್ದರು. ಆತ ನೋಡಲು ಅಷ್ಟೊಂದು ಸುಂದರನೂ ಆಗಿರಲಿಲ್ಲ. ಅವನ ಮೈನೋಟ ಹಾಗೂ ಉಗ್ಗುವಿಕೆ ನೋಡಿ ಆತನ ಸ್ನೇಹ ಮಾಡಲು ಯಾರೂ ಮುಂದೆ ಬಾರದೆ ಆತ ಏಕಾಂಗಿಯಾಗಿದ್ದ. ಸಹವಿದ್ಯಾರ್ಥಿಗಳ ಟೀಕೆಗಳಿಂದ ಆತ ಜರ್ಝರಿತನಾಗಿದ್ದ. ಆತನ ರೂಪ ನೋಡಿ ‘ಏಲಿಯನ್’ ಎಂದು ಕಟುಕುತಿದ್ದರು. ರೋವನ್ ಅಟ್ಕಿನ್ಸನ್ ಎಂಬ ವಿದ್ಯಾರ್ಥಿ ಎಲ್ಲರಿಂದ ಬೇರ್ಪಟ್ಟ ನತದೃಷ್ಟನಂತೆ ತೋರುತ್ತಿದ್ದ. ದೇವರು ಎಲ್ಲರನ್ನೂ ಒಂದೇ ರೀತಿ ಸೃಷ್ಟಿಸಿಲ್ಲ. ಕೈ ಇಲ್ಲದವರು, ಕಾಲಿಲ್ಲದವರು, ಅಂಧರು, ಕಿವುಡರು, ಮೂಗರು, ಬುದ್ಧಿಮಾಂದ್ಯರು, ಇವೆಲ್ಲಾ ಸೃಷ್ಟಿಯಲ್ಲಿನ ನ್ಯೂನ್ಯತೆಗಳು. ಇವರೆಲ್ಲರಿಗೂ ಎಲ್ಲವನ್ನು ಕ್ರಮಬದ್ಧವಾಗಿ ಹೊಂದಿರುವ ನಮ್ಮಂತೆಯೇ ಬದುಕುವ ಹಕ್ಕಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರ ಹಕ್ಕುಗಳನ್ನು, ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ.  ಈ ರೀತಿಯ ತೀರಾ ನ್ಯೂನ್ಯತಯಲ್ಲದಿದ್ದರೂ, ಸ್ವಲ್ಪ ಮಟ್ಟಿನ ನ್ಯೂನ್ಯತೆಯಲ್ಲಿ ಹುಟ್ಟಿ ಬೆಳೆದ ಹುಡುಗನಾಗಿದ್ದ ರೋವನ್ ಆಟ್ಕಿನ್ಸನ್. ಆದರೂ ಆತ ಅನುಭವಿಸಿದ ವೇದನೆ ಕಡ

ದಿನಕ್ಕೊಂದು ಕಥೆ 1062

ದಿನಕ್ಕೊಂದು ಕಥೆ  *ಅದು ಕೆನರಾ ಬ್ಯಾಂಕ್ ನ ಕ್ಯಾಶ್ ಕೌಂಟರ್ ರಶ್ ಇತ್ತು ಅಲ್ಲಿ ಒಬ್ಬರು ಸುಮಾರು 75 ವರ್ಷದ ಅಜ್ಜ ಕೈಯ್ಯಲ್ಲಿ ಚೀಟಿ ಯೊಂದನ್ನು ಹಿಡಿದು ಬಂದಿದ್ದರು . ಕ್ಯಾಶಿಯರ್ ಅವರ ಅಕೌಂಟ್ ಚೆಕ್ ಮಾಡಿದ 660 ರೂ ಮಾತ್ರ ಇತ್ತು ಕಳೆದ 2 ತಿಂಗಳಿಂದ 15 ಲಕ್ಷದ ಹೋಂ ಲೋನ್ ನ 14,000 ರೂ EMI ಕಟ್ಟಿರಲಿಲ್ಲ ಆ ಮನುಷ್ಯ .. ಕ್ಯಾಶಿಯರ್ ಸಿಟ್ಟಲ್ಲಿದ್ದ..🥱* *"ಏನಜ್ಜ 2ತಿಂಗಳಿಂದ EMI ಕಟ್ಟಿಲ್ಲ ಅಕೌಂಟ್ ಅಲ್ಲಿ ಹಣ ಇಲ್ಲ ಏನಾಗಿದೆ ನಿಮಗೆ? " ಮತ್ತೆ ಕೂಗಿದ.. ನೋಡಿ ಮಗ ಅಕೌಂಟ್ ಗೆ ಹಣ ಹಾಕಿರ್ತಾನೆ ಚೆಕ್ ಮಾಡಿ ಅಜ್ಜ ಮೆಲ್ಲಗೆ ಹೇಳಿದಾಗ ಈ ಬಾರಿ ಕ್ಯಾಶಿಯರ್ ನ ಬಿಪಿ ಏರಿತ್ತು..🥱🥱* *ನೋಡಿ ಅಜ್ಜ ಆಗ ದಿಂದ ಹೇಳಿದ್ದೇ ಹೇಳುತ್ತೀರಲ್ವ, ತಲೆ ಸರಿ ಇಲ್ವಾ?, ಮಗ ಹಣ ಹಾಕಿಲ್ಲ ಅಕೌಂಟ್ ಅಲ್ಲಿ ಹಣ ಇಲ್ಲ.. ಎಲ್ಲೆಲ್ಲಿಂದ ಬರ್ತೀರಾ ನೀವೆಲ್ಲ"....ಈ ಬಾರಿ ಜೋರಾಗಿ ಕೂಗಿದ. ಆ ಸ್ವರ ಇಡೀ ಬ್ಯಾಂಕ್ ಗೆ ಪ್ರತಿಧ್ವನಿಸಿತ್ತು.ಎಲ್ಲರೂ ಆ ವೃದ್ಧರನ್ನು ಅಸಹ್ಯವಾಗಿ ಕಂಡರು🥱..* *ವೃದ್ಧರಿಗೂ ನಾಚಿಕೆ ಯಾಗಿದ್ದು ಅಲ್ಲೇ ಸೈಡ್ ಗೆ ಹೋಗಿ ತಮ್ಮ ಮೊಬೈಲ್ ಅಲ್ಲಿ ಮಗನ ಸಂಖ್ಯೆಗೆ ಕಾಲ್ ಮಾಡುತಿದ್ದರು.. ಕಾಲ್ ತಾಗುತ್ತಿರಲಿಲ್ಲ😔.. ಕ್ಯಾಶಿಯರ್ ನ ಸಿಟ್ಟು ತಗ್ಗಿರಲಿಲ್ಲ ನೋಡಿ ಅಜ್ಜ ನಿಮ್ಮ ಹೋಂ ಲೋನ್ ಮುಗಿಯಲು 7 ಒಟ್ಟು ಕಂತು ಬಾಕಿ ಇದೆ,ಈಗಾಗಲೇ 2 ಕಂತು ಕಟ್ಟಿಲ್ಲ ಮುಂದಿನ  ತಿಂಗಳು ಕಟ್ಟದಿದ್ದಲ್ಲಿ ಮನೆ ಜಪ್ತಿ ಮಾಡುತ್ತೇವೆ ನೋ