Posts

Showing posts from January, 2019

ದಿನಕ್ಕೊಂದು ಕಥೆ 909

*🌻ದಿನಕ್ಕೊಂದು ಕಥೆ🌻* *ತಮ್ಮ ಪ್ರಾಣವನ್ನು ಲೆಕ್ಕಿಸದೇ ಬಟ್ಟೆಗಳನ್ನು ಬಿಚ್ಚಿ ರೈಲಿನ ಎದುರಾಗಿಯೇ ಓಡಿ 1200 ಜನರ ಜೀವ ಉಳಿಸಿದ ಸಾಹಸಿ ಹುಡುಗರು!ಈ ರೋಚಕ ಸುದ್ದಿ ನೋಡಿ..* ಜನವರಿ 12 ರಂದು ಅವಘಡ ಒಂದು ನಡೆಯಲಿಕೆ ಇತ್ತು. ಆದರೆ ಇಬ್ಬರು ಯುವಕರ ಸಮಯ ಪ್ರಜ್ಞೆ ಯಿಂದ ಈ ಭಾರಿ ದುರಂತ ತಪ್ಪಿದೆ. ಅಷ್ಟಕ್ಕೂ ಪ್ರಾಣದ ಹಂಗು ತೊರೆದು ಅದ ಯುವಕರು ಮಾಡಿದ್ದಾದರೂ ಏನು? ಅಂತಹ ಅನಾಹುತ ಏನು ಸಂಭವಿಸುತಿತ್ತು? ಎಂಬುದನ್ನು ನಾವು ಇಲ್ಲಿ ಹೇಳುತ್ತೇವೆ. ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಗಾಂಧೀನಗರ ಬಳಿ ರೈಲ್ವೆಯ ಹಳಿಯ ಮೇಲೆ ಬೃಹತರವೊಂದು ಬಿದ್ದಿತ್ತು. ಇದನ್ನು ಗಮನಿಸಿದ ಇಬ್ಬರು ಯುವಕರು…ರಿಯಾಸ್ ಮತ್ತು ತೊಫಿಕ್ ಎಂಬುವವರು ರೈಲು ಬರುವ ಮಾರ್ಗಕ್ಕೆ ವಿರುದ್ಧ ವಾಗಿ ಓಡಿ ತಮ್ಮ ಬಟ್ಟೆಗಳನ್ನು ಬಿಚ್ಚಿ ರೈಲಿನ ಮುಂದೆಯೇ ಓಡಿ ಅಪಾಯವಿದೆ ಎಂದು ಸೂಚಿಸಿದ್ದಾರೆ.ಇದನ್ನು ಕಂಡ ರೈಲಿನ ಚಾಲಕ ಏನೋ ಆಗಿರಬಹುದು ಎಂದು ಊಹಿಸಿ ರೈಲು ನಿಲ್ಲಿಸಿದ್ದಾನೆ. ಈ ಇಬ್ಬರು ಯುವಕರು ತಮ್ಮ ತೋಟಕ್ಕೆ ಹೋಗಿದ್ದರು. ಆಗ ರೈಲು ಹಳಿಯ ಮೇಲೆ ಮರ ಬಿದ್ದಿರುವುದನ್ನು ಕಂಡು ಯಾವುದೇ ಅವಘಡ ಆಗಬಾರದೆಂದು ತಮ್ಮ ಪ್ರಾಣದ ಹಂಗು ತೊರೆದು ರೈಲಿನಲ್ಲಿ ಇದ್ದ ಜನರನ್ನು ರಕ್ಷಿಸಿದರು.ಇವರು ಮನಸ್ಸು ಮಾಡಿದ್ದರೆ ನಮಗೆ ಏಕೆ ಎಂದು ಹಾಗೆಯೇ ಹೋಗಿ ಬಿಡ ಬಹುದಾಗಿತ್ತು. ಆದರೆ ಹಾಗೆ ಮಾಡದ ಅವರು ಮಾನವೀಯತೆ ಮಾತ್ರವಲ್ಲ, ಸಾಹಸ ಧೈರ್ಯವನ್ನು ಮೆರೆದಿದ್ದಾರೆ. ಇವರ ಧೈರ್ಯ ಮತ್ತು ಸಾಹಸದಿ

ದಿನಕ್ಕೊಂದು ಕಥೆ 908

*ಎಮ್ಮೆ ಕಾಯುವ ಹುಡುಗ ಲಕ್ಷ-ಲಕ್ಷ ಮಕ್ಕಳಿಗೆ ಜ್ಞಾನದೀಪವಾದ!*   ಕೃಪೆ:ಹೇಮಂತ್ ಚಿನ್ನು* ಪ್ರತೀ ಯಶಸ್ಸಿನ ಹಿಂದೆಯೂ ನೋವಿನ ಕಥೆಯಿದೆ! ಪ್ರತಿ ನೋವಿನ ಪಯಣ ಕೂಡ ಯಶಸ್ಸಿನಲ್ಲೇ ಕೊನೆಗೊಳ್ಳುತ್ತದೆ! ನಿಜ, ಈ ಜೀವನಗಾಥೆಯಂತೂ ಅಕ್ಷರಶಃ ಬೆರಗು ಮೂಡಿಸುವಂಥದ್ದು, ಪ್ರೇರಣೆ ನೀಡುವಂಥದ್ದು, ಜೀವನದ ಮೇಲೆ ಪ್ರೀತಿ ಹುಟ್ಟಿಸುವಂಥದ್ದು. ಮಗು ತೊದಲು ನುಡಿ ಆಡಲು ಶುರು ಮಾಡುತ್ತಿದ್ದಂತೆ ಈಗಿನ ಅಪ್ಪ-ಅಮ್ಮಂದಿರು ಅದನ್ನು ಶಾಲೆಗೆ ಸೇರಿಸಿ, ‘ಕಾಂಪಿಟಿಟಿವ್ ವರ್ಲ್ಡ್’ನ ಕುದುರೆಯಾಗಿಸಿ ಬಿಡುತ್ತಾರೆ. ಅಂಥದ್ದರಲ್ಲಿ 16ನೇ ವಯಸ್ಸಿನವರೆಗೂ ಈ ಹುಡುಗ ಶಾಲೆ ಮುಖವನ್ನೇ ನೋಡಿರಲಿಲ್ಲ! ಅಕ್ಷರಗಳ ಲೋಕ ಪ್ರವೇಶಿಸಿರಲಿಲ್ಲ! ಮನೆಯಲ್ಲಿ ಅಪ್ಪ-ಅಮ್ಮ, ಒಂಭತ್ತು ಮಕ್ಕಳು! ಇವನು ಐದನೇಯವನು. ಎಮ್ಮೆ ಮೇಯಿಸೋದು, ಮನೆಗೆ ಕಟ್ಟಿಗೆ ತಂದು ಹಾಕೋದು, ಕೃಷಿ ಕೆಲಸ ಮಾಡೋದು ದಿನಚರಿ. ಮನೆ-ಗದ್ದೆ ಬಿಟ್ಟರೆ ಬೇರೆ ಜಗತ್ತಿಲ್ಲ, ಆಪ್ತಸ್ನೇಹಿತರೆಂದರೆ ಎಮ್ಮೆಗಳೇ. ತನ್ನ ಮನಸ್ಸಿನ ಭಾವನೆಗಳನ್ನು ಅವುಗಳೊಡನೇ ಹಂಚಿಕೊಳ್ಳುತ್ತಿದ್ದ. ‘ಎಲ್ಲ ಚುಕ್ಕೋಳು (ಮಕ್ಕಳು) ಸಾಲಿಗ ಹೊಂಟಾವ್, ನಾನ್ಯಾಕ್ ಹೋಗ್ಬಾರದು?’ ಅಂತ ಪ್ರಶ್ನಿಸಿದರೆ ಪಾಪ ಆ ಮೂಕ ಎಮ್ಮೆಗಳು ಏನು ಉತ್ತರ ನೀಡಬೇಕು ಹೇಳಿ. ಶಾಲೆ ಕಾಂಪೌಂಡಿನ ಹೊರಗಡೆ ನಿಂತು ಒಳಗೆ ಕುತೂಹಲದ ಕಣ್ಣುಗಳಿಂದ ಇಣುಕಿ ಮೇಷ್ಟ್ರು ಮಕ್ಕಳಿಗೆ ಹೇಗೆ ಕಲಿಸುತ್ತಾರೆ ಎಂದು ಗಮನಿಸುತ್ತಿದ್ದ, ಸ್ವಲ್ಪ ಹೊತ್ತಲ್ಲೇ ಮತ್ತೆ

ದಿನಕ್ಕೊಂದು ಕಥೆ 907

*🌻ದಿನಕ್ಕೊಂದು ಕಥೆ🌻* *ಆಸ್ಪತ್ರೆಯಲ್ಲಿ ನಿತ್ಯ ಅನ್ನದಾನ... ಚಾಮರಾಜನಗರದಲ್ಲೊಬ್ಬ ಅಪರೂಪದ ವೈದ್ಯ*      ಚಾಮರಾಜನಗರ: ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಒಳ ರೋಗಿಗಳಿಗೆ ಮಾತ್ರ ಸರ್ಕಾರ ಆಹಾರ ವಿತರಣೆ ಮಾಡುತ್ತದೆ. ಆದರೆ ಇಲ್ಲೊಬ್ಬ ನಿವೃತ್ತ ವೈದ್ಯ ರೋಗಿಗಳ ಸಂಬಂಧಿಗಳಿಗೆ ಹಾಗೂ ತಾಂತ್ರಿಕೇತರ ಸಿಬ್ಬಂದಿಗೆ ಆಹಾರ ವಿತರಣೆ ಮಾಡಿ ಅನ್ನದಾತ ಎನಿಸಿಕೊಂಡಿದ್ದಾರೆ. ಜಿಲ್ಲಾಸ್ಪತ್ರೆಯ ನಿವೃತ್ತ ನೇತ್ರ ತಜ್ಞ ಡಾ. ಚಂದ್ರಶೇಖರ್ ಯಾವುದೇ ಫಲಾಪೇಕ್ಷೆ ಇಲ್ಲದೇ ರೋಗಿಗಳ ಸಂಬಂಧಿಗಳು ಹಾಗೂ ತಾಂತ್ರಿಕೇತರ ನೌಕರರಿಗೆ ನಿತ್ಯ ಊಟ ನೀಡುತ್ತಿದ್ದಾರೆ. ಬೆಳಿಗ್ಗೆ 4 ಗಂಟೆಗೆ ಎದ್ದು 30ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ಬಟ್ಟೆ ಒಗೆಯುವವರು, ಆ್ಯಂಬುಲೆನ್ಸ್ ಚಾಲಕರು, ಒಳರೋಗಿಗಳ ಸಂಬಂಧಿಕರಿಗೆ ಶುಚಿಯಾದ ಆಹಾರ ತಯಾರಿಸುತ್ತಾರೆ. ಮತ್ತೆ ಸಂಜೆ ಅಡುಗೆ, ಆಹಾರ ವಿತರಣೆಯಲ್ಲಿ ನಿರತರಾಗುತ್ತಾರೆ. ಕಳೆದ 4-5 ವರ್ಷಗಳಿಂದ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವೈದ್ಯರು, ಅನ್ನ-ಸಾಂಬಾರ್​ ಜೊತೆ ಚಕ್ಕುಲಿ, ಕೋಡುಬಳೆ, ಮದ್ದೂರು ವಡೆಯನ್ನೂ ನೀಡುವ ಮೂಲಕ ಅನ್ನದಾನದಲ್ಲಿ ಸಂತೋಷ ಕಾಣುತ್ತಿದ್ದಾರೆ. ಹೋಟೆಲ್​, ಊಟದ ಮೆಸ್​ನವರಿಂದ ಊಟ ತರಿಸಿಕೊಳ್ಳುವುಕ್ಕೆ ಹೆಚ್ಚು ಖರ್ಚಾಗುತ್ತದೆ. ಜೊತೆಗೆ ಸಂಜೆ 7 ಗಂಟೆಯ ನಂತರ ಹತ್ತಿರದ ಹೋಟೆಲ್​ಗಳು ಬಂದ್​ ಆಗುವುದರಿಂದ ಆಹಾರಕ್ಕೆ ಪರದಾಡಬೇಕಾಗುತ್ತದೆ. ಅದಕ್ಕೆ ನಾನೇ ಆಹಾರ ತಯಾರಿಸಿ ವಿತರಿಸುತ್ತೇನೆ ಎಂದು

ದಿನಕ್ಕೊಂದು ಕಥೆ 906

*🌻ದಿನಕ್ಕೊಂದು ಕಥೆ🌻*                                                 *I.P.S.ಅಂಬಿಕಾ* *ತಮಿಳುನಾಡಿನ "ದಿಂಡಿಗಲ್"* ಎಂಬ ಒಂದು ಪ್ರದೇಶ. ಅಲ್ಲಿ 14 ವರ್ಷದ ಒಬ್ಬ ಹುಡುಗಿ, ಆ ವಯಸ್ಸಿನಲ್ಲೇ ಅವಳಿಗೆ ಮದುವೆಯಾಗುತ್ತದೆ.ಮುಂದೆ ಅವಳಿಗೆ 18 ವರ್ಷ ತುಂಬುವಾಗ ಅವಳು ಎರಡು ಮಕ್ಕಳ ತಾಯಿಯಾಗಿರುತ್ತಾಳೆ.ಆ ಮಕ್ಕಳ ಹೆಸರು *ಅಳಿಗಣನ್, ಮತ್ತು ನಿಹಾರಿಕಾ* ಎಂದು ಈ ಮಕ್ಕಳ ಹೆತ್ತ ತಾಯಿಯ ಹೆಸರು *ಅಂಬಿಕಾ.* ಇವಳ ಗಂಡ ಒಬ್ಬ ಸಾಮಾನ್ಯ *ಪೋಲಿಸ್ ಪೇದೆ.* ಒಂದು ದಿನ ಪೋಲಿಸ್ ಇಲಾಖೆಯ ಪರೇಡ್  ನಡೆಯುತ್ತಿರುತ್ತದೆ. ಪ್ರತಿ ದಿನ ಗಂಡ ತಿಂಡಿಗೆ ಬರುವ ಹೊತ್ತಾದರೂ ಆ ದಿನ ಬರುವುದಿಲ್ಲ. ಯಾಕೋ ಗಂಡ ಮನೆಗೆ ಬಂದಿಲ್ಲವೆಂದು *ಅಂಬಿಕಾ* ತನ್ನೆರಡು ಮಕ್ಕಳನ್ನು ಕರೆದುಕೊಂಡು ಗಂಡ ಇರುವ *ಪೋಲಿಸ್ ಠಾಣೆಗೆ* ಬರುತ್ತಾಳೆ. ಅಲ್ಲಿ *ಪೋಲಿಸ್ ಪರೇಡ್* ನಡೆಯುತ್ತಿರುವಾಗ ತನ್ನ ಗಂಡನೂ ಸೇರಿದಂತೆ ನೂರಾರು ಪೋಲಿಸರು ಪರೇಡ್ ಮಾಡುತ್ತಿರುತ್ತಾರೆ. ಮೇಲೆ ಒಬ್ಬ ಅಧಿಕಾರಿ ನಿಂತಿರುತ್ತಾನೆ. ಎಲ್ಲಾ ಪೋಲಿಸರು ಆ ಅಧಿಕಾರಿಗೆ *ಸೆಲ್ಯೂಟ್* ಮಾಡುವುದನ್ನು ಅಂಬಿಕಾ ಗಮನಿಸುತ್ತಾಳೆ. ಗಂಡ ಮನೆಗೆ ಬಂದಾಗ ಕೇಳುತ್ತಾಳೆ. ಯಾರು ಅವರು ? ನೀವೆಲ್ಲಾ ಅವರಿಗ್ಯಾಕೆ ಸೆಲ್ಯೂಟ್ ಮಾಡುತ್ತೀರಿ ಎಂದು ಕೇಳುತ್ತಾಳೆ.ಆಗ ಆ ಪೋಲೀಸ ಪೇದೆ ಅವರು ನಮ್ಮ *ಐ.ಜಿ.* ಅವರೇ ನಮ್ಮ ಇಲಾಖೆಯ ದೊಡ್ಡ ಅಧಿಕಾರಿ. *I.P.S.* ಮಾಡಿದ್ದಾರೆ ಎಂದು ಹೇಳುತ್ತಾನೆ. ಈ ಮಾತನ್ನು ಕೇ

ದಿನಕ್ಕೊಂದು ಕಥೆ 905

  *🌻ದಿನಕ್ಕೊಂದು ಕಥೆ🌻*                                                            *"ಯಾಕಿಂಗಾತು ನನಗೆ ತಿಳೀವಲ್ದು .."* ಮಲ್ಲಪ್ಪ ಒಂದೇ ಸಮನೆ ಅಳುತ್ತಿದ್ದ.ಮಗ ಆಸ್ಪತ್ರೆಯ ಹಾಸಿಗೆಯ ಮೇಲೆ ಒರಗಿದ್ದ. ಎಲ್ಲ ರಿಪೋರ್ಟ್ ನಲ್ಲಿ ನಾರ್ಮಲ್ ಅಂತ ಇದೆ    *ಹಿಂಗ್ಯಾಕಾತು* ಡಾಕ್ಟರ್ ಶೇಷಗಿರಿ ತಮ್ಮ ಕೋಣೆಯಲ್ಲಿ ಕುಳಿತು ಆಲೋಚಿಸತೊಡಗಿದರು.. ಮಲ್ಲಪ್ಪ ಮಾಸ್ತರ್  ರ  ಹನ್ನೆರಡು ವರ್ಷದ  ಮಗನಿಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿತು.ಎರಡು ದಿನ ಜ್ವರ ಬಂದ ನಂತರ ಹುಡುಗ ಕೋಮಾ ಸ್ಥಿತಿ ತಲುಪಿದ್ದ. ಈಗ ಹದಿನೈದು ದಿನಗಳಾದವು.ಅದೇ ಸಲೈನ್ ಅವನ ಆಹಾರ. ದಿನಕ್ಕೆ ಆರು ಬಾಟಲ್ ಗಳು ಅವನ ಮೈ ಸೇರುತ್ತಿದ್ದವು ಇಂಜೆಕ್ಷನ್ ಗಳಿಗೆ ಲೆಕ್ಕವೇ ಇಲ್ಲ ಕೈ ಯಲ್ಲಿದ್ದ ಹಣ ಖಾಲಿಯಾದಾಗ ಕಂಡವರ ಬಳಿ ಸಾಲ ತಂದಿದ್ದರು ಮಲ್ಲಪ್ಪ ಹಳ್ಳಿಯ ಜನ ದಿನಾ ಆಸ್ಪತ್ರೆಗೆ ಬಂದು ಬಂದು ನೋಡಿಕೊಂಡು ಮಲ್ಲಪ್ಪ ಮಾಸ್ಟರ್ ಗೆ ಧೈರ್ಯ ಹೇಳಿ ಹೋಗುತ್ತಿದ್ದರು. ಮಲ್ಲಪ್ಪ ಮಾಸ್ಟರ್ ರು ಎದೆಗುಂದಿದ್ದರು ಊಟ ನೀರು ಬಿಟ್ಟು ಕುಳಿತರು. ರೋಧನೆ ಅವರ ನಿತ್ಯ ಬದುಕಾಯ್ತು. ಸಾಲ ಸಹ ಹುಟ್ಟದಾಯ್ತು. ತಲೆ ಮೇಲೆ ಕೈ ಹೊತ್ತು ಕುಳಿತರು.. ದೆವ್ವದ ಕಾಟ ಇರಬಹುದು ಅಂದರು ಯಾರೋ .ಮುಲ್ಲಾ ಕರೀಂ ಸಾಬಿ ಹತ್ತಿರ ಹೋಗಿ ಮಂತ್ರಿಸಿದ ನಿಂಬೆಹಣ್ಣು ತಂದು ಮಗ ನಿತೀಶನ ತಲೆ ಕಾಲ ಬುಡಕ್ಕೆ ಇಟ್ಟರು. *ಆ ದಿನ ಶಾಲೆಯ ಮೂವತ್ತು ವಿದ್ಯಾರ್ಥಿಗಳು ಮಗನನ್ನು ನೋಡಲು ಬಂದರು