ದಿನಕ್ಕೊಂದು ಕಥೆ 909

*🌻ದಿನಕ್ಕೊಂದು ಕಥೆ🌻*
*ತಮ್ಮ ಪ್ರಾಣವನ್ನು ಲೆಕ್ಕಿಸದೇ ಬಟ್ಟೆಗಳನ್ನು ಬಿಚ್ಚಿ ರೈಲಿನ ಎದುರಾಗಿಯೇ ಓಡಿ 1200 ಜನರ ಜೀವ ಉಳಿಸಿದ ಸಾಹಸಿ ಹುಡುಗರು!ಈ ರೋಚಕ ಸುದ್ದಿ ನೋಡಿ..*

ಜನವರಿ 12 ರಂದು ಅವಘಡ ಒಂದು ನಡೆಯಲಿಕೆ ಇತ್ತು. ಆದರೆ ಇಬ್ಬರು ಯುವಕರ ಸಮಯ ಪ್ರಜ್ಞೆ ಯಿಂದ ಈ ಭಾರಿ ದುರಂತ ತಪ್ಪಿದೆ. ಅಷ್ಟಕ್ಕೂ ಪ್ರಾಣದ ಹಂಗು ತೊರೆದು ಅದ ಯುವಕರು ಮಾಡಿದ್ದಾದರೂ ಏನು? ಅಂತಹ ಅನಾಹುತ ಏನು ಸಂಭವಿಸುತಿತ್ತು? ಎಂಬುದನ್ನು ನಾವು ಇಲ್ಲಿ ಹೇಳುತ್ತೇವೆ.

ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಗಾಂಧೀನಗರ ಬಳಿ ರೈಲ್ವೆಯ ಹಳಿಯ ಮೇಲೆ ಬೃಹತರವೊಂದು ಬಿದ್ದಿತ್ತು. ಇದನ್ನು ಗಮನಿಸಿದ ಇಬ್ಬರು ಯುವಕರು…ರಿಯಾಸ್ ಮತ್ತು ತೊಫಿಕ್ ಎಂಬುವವರು ರೈಲು ಬರುವ ಮಾರ್ಗಕ್ಕೆ ವಿರುದ್ಧ ವಾಗಿ ಓಡಿ ತಮ್ಮ ಬಟ್ಟೆಗಳನ್ನು ಬಿಚ್ಚಿ ರೈಲಿನ ಮುಂದೆಯೇ ಓಡಿ ಅಪಾಯವಿದೆ ಎಂದು ಸೂಚಿಸಿದ್ದಾರೆ.ಇದನ್ನು ಕಂಡ ರೈಲಿನ ಚಾಲಕ ಏನೋ ಆಗಿರಬಹುದು ಎಂದು ಊಹಿಸಿ ರೈಲು ನಿಲ್ಲಿಸಿದ್ದಾನೆ.

ಈ ಇಬ್ಬರು ಯುವಕರು ತಮ್ಮ ತೋಟಕ್ಕೆ ಹೋಗಿದ್ದರು. ಆಗ ರೈಲು ಹಳಿಯ ಮೇಲೆ ಮರ ಬಿದ್ದಿರುವುದನ್ನು ಕಂಡು ಯಾವುದೇ ಅವಘಡ ಆಗಬಾರದೆಂದು ತಮ್ಮ ಪ್ರಾಣದ ಹಂಗು ತೊರೆದು ರೈಲಿನಲ್ಲಿ ಇದ್ದ ಜನರನ್ನು ರಕ್ಷಿಸಿದರು.ಇವರು ಮನಸ್ಸು ಮಾಡಿದ್ದರೆ ನಮಗೆ ಏಕೆ ಎಂದು ಹಾಗೆಯೇ ಹೋಗಿ ಬಿಡ ಬಹುದಾಗಿತ್ತು. ಆದರೆ ಹಾಗೆ ಮಾಡದ ಅವರು ಮಾನವೀಯತೆ ಮಾತ್ರವಲ್ಲ, ಸಾಹಸ ಧೈರ್ಯವನ್ನು ಮೆರೆದಿದ್ದಾರೆ. ಇವರ ಧೈರ್ಯ ಮತ್ತು ಸಾಹಸದಿಂದ ೧೨೦೦ ಜನರ ಪ್ರಾಣ ಉಳಿದಿದೆ.

ಒಂದು ವೇಳೆ ರೈಲು ಏಕಾಏಕಿ ಮರವು ಬಿದ್ದಿರುವ ಹಳಿಯ ಮೇಲೆ ಚಲಿಸಿದ್ದರೆ, ಹಳಿ ತಪ್ಪಿ ಹೋಗಿ ರೈಲು ಕೆಳಗೆ ಉರುಳಿ ಭಾರಿ ಅಪಘಾತ ಸಂಭವಿಸುತಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.ಈ ಯುವಕರು ಸಾವಿರಾರು ಜನರ ಜೀವ ಉಳಿಸುವುದರ ಜೊತೆಗೆ ಯುವ ಪೀಳಿಗೆ ಗೆ ಇರಬೇಕಾದ ಜವಾಬ್ದಾರಿ ಮತ್ತು ಸಮಯ ಪ್ರಜ್ಞೆ ಎಂತಹದು ಎಂದು ತೋರಿಸಿಕೊಟ್ಟಿದ್ದಾರೆ.ಈ ಇಬ್ಬರು ಯುವಕರಿಗೂ ಕರ್ನಾಟಕ ಧನ್ಯವಾದಗಳನ್ನು ಸಲ್ಲಿಸುವುದರ ಜೊತೆಗೆ ಪ್ರಶಂಸೆಯನ್ನೂ ವ್ಯಕ್ತ ಪಡಿಸುತ್ತದೆ.
ಕೃಪೆ:ಕನ್ನಡ ಟಿವಿ.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059