Posts

Showing posts from June, 2018

ದಿನಕ್ಕೊಂದು ಕಥೆ 839

*🌻ದಿನಕ್ಕೊಂದು ಕಥೆ🌻                                               ಭಗತ್ ಸಿಂಗ್ ಚಿಕ್ಕಮ್ಮನ ಕಣ್ಣೀರಿನ ಕಥೆ*       23ನೆಯ ವರ್ಷದಲ್ಲೇ ಇಹಲೋಕ ತ್ಯಜಿಸಿದ ಭಗತ್ ಸಿಂಗ್​ನ ಎರಡನೆಯ ಚಿಕ್ಕಪ್ಪ ಸ್ವರ್ಣ ಸಿಂಹನ ಪತ್ನಿ ಹುಕುಮ್ ಕೌರ್​ಳದ್ದು ಅಪ್ಪಟ ತ್ಯಾಗದ ಬದುಕು. ಜೀವನದಲ್ಲಿ ಅಂಧಕಾರವೇ ಘನೀಭವಿಸಿದ್ದರೂ ಈ ತ್ಯಾಗಮಯಿಯಲ್ಲಿ ಕೆನೆಗಟ್ಟಿದ್ದ ದೇಶಪ್ರೇಮಕ್ಕೆ ಒಂದಿನಿತೂ ಧಕ್ಕೆಯಾಗಲಿಲ್ಲ ಎಂಬುದು ಹೆಮ್ಮೆಯ ಸಂಗತಿ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಕಲಿಗಳನ್ನು ಕುರಿತು ನೂರಾರು ಲೇಖನಗಳನ್ನು ಬರೆದಿದ್ದಾಯಿತು. ಒಬ್ಬೊಬ್ಬರೂ ಅನುಭವಿಸಿದ ಘೊರ ಶಿಕ್ಷೆಗಳನ್ನು, ನರಕಯಾತನೆಯನ್ನು ವಿವರಿಸಿದ್ದಾಯಿತು. ಇನ್ನೂ ನೂರಾರು ವೀರರು ಈ ಅಂಕಣದಲ್ಲಿ ಕಾಣಿಸಿಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ. ಎಲ್ಲವೂ ಸರಿಯೇ. ಆದರೆ ರಣರಂಗದಲ್ಲಿ ಹೋರಾಡಲು ಹೋಗಿ ಜೀವಾವಧಿ ಶಿಕ್ಷೆ ಅನುಭವಿಸಿದವರ, ಮಡಿದು ಹುತಾತ್ಮರಾದವರ ತಾಯಿ, ಪತ್ನಿ, ಸೋದರಿಯರನ್ನು ಕುರಿತು ಒಂದು ಉಲ್ಲೇಖವೂ ಆಗಿಲ್ಲದಿರುವುದು, ಮೌನವಾಗಿ ಊರ್ವಿುಳೆಯಂತೆ, ಸೀತೆಯಂತೆ ಕಷ್ಟ ಸಹಿಸಿಕೊಂಡ ವೀರ ಸತಿಮಣಿಯರಿಗೆ ಆಗಿರುವ ಅನ್ಯಾಯ ಎಂದೇ ಹೇಳಬೇಕು. ಮತ್ತೇನು. ವಾಸುದೇವ ಬಲವಂತ ಫಡಕೆಯ ಹೆಂಡತಿ, ವೀರ ಸಾವರ್​ಕರರ ಪತ್ನಿ, ಅಜಿತ್ ಸಿಂಹನ ಪತ್ನಿ, ಸ್ವರ್ಣ ಸಿಂಹ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ ಕೈ ಹಿಡಿದ ಹೆಣ್ಣುಮಕ್ಕಳು ಮಾಡಿರುವ ತ್ಯಾಗ ಬೇರಾರಿಗಿಂತಲೂ ಕಡಿಮೆಯಲ್ಲ. ಅವರ

ದಿನಕ್ಕೊಂದು ಕಥೆ 838

*🌻ದಿನಕ್ಕೊಂದು ಕಥೆ🌻                                     ಉದಾತ್ತರ ಲಕ್ಷಣ* ಯುದ್ಧಕಾಲದಲ್ಲಿ ಶಿವಾಜಿಯ ಸೈನಿಕರು ಮುಸಲ್ಮಾನ ತರುಣಿಯೊಬ್ಬಳನ್ನು ಸೆರೆ ಹಿಡಿದು ಶಿವಾಜಿಯ ಮುಂದೆ ತಂದು ನಿಲ್ಲಿಸಿದ್ದರು. ಇಂಥ ಸೌಂದರ್ಯವತಿಯನ್ನು ಕರೆತಂದದ್ದಕ್ಕೆ ತಮಗೆಲ್ಲ ಬಹುಮಾನ ಸಿಗಲಿದೆ ಎಂದೇ ಅವರು ಭಾವಿಸಿದ್ದರು. ತಲೆತಗ್ಗಿಸಿ ನಿಂತಿದ್ದ ಆಕೆಯನ್ನು ದಿಟ್ಟಿಸಿ ನೋಡಿದ ಶಿವಾಜಿ ಒಮ್ಮೆ ಮುಗುಳ್ನಕ್ಕು, ಆಕೆಯೆಡೆಗೆ ನಡೆದ. ಆ ತರುಣಿ ಶಿವಾಜಿಯ ಶೀಲ, ಕರುಣೆ, ಮಮತೆ, ಚಾರಿತ್ರ್ಯದ ಬಗ್ಗೆ ಕೇಳಿದ್ದಳು. ಗೋವು, ಸ್ತ್ರೀ, ಜ್ಞಾನಿಗಳು ಮತ್ತು ಮಕ್ಕಳ ಬಗ್ಗೆ ಆತ ಅತೀವ ಪ್ರೀತಿ-ಗೌರವ ಹೊಂದಿದ್ದಾನೆಂದೂ, ಇವರ ರಕ್ಷಣೆಗಾಗಿ ಎಂಥದ್ದೇ ಕಷ್ಟ ಎದುರಿಸಲೂ ಆತ ಸಿದ್ಧನೆಂದೂ ಆಕೆಗೆ ತಿಳಿದಿತ್ತು. ಆದರೂ ಆತ ಮುಗುಳ್ನಗುತ್ತ ತನ್ನೆಡೆಗೆ ಬರುತ್ತಿರುವುದನ್ನು ಕಂಡು ಆ ಯುವತಿ ಒಮ್ಮೆ ಬೆವರಿದಳು. ಇತ್ತ ಸೇವಕರು, ತಾವು ಕರೆತಂದ ಯುವತಿ ಮಹಾರಾಜರಿಗೆ ಇಷ್ಟವಾಗಿದ್ದಾಳೆಂದು ಭಾವಿಸಿ ಖುಷಿಪಟ್ಟರು. ಆಗ ಶಿವಾಜಿ ಸೈನಿಕರ ಕಡೆಗೆ ತಿರುಗಿ ‘ಈ ತರುಣಿಯನ್ನು ಆಕೆಯ ನಿವಾಸಕ್ಕೆ ಗೌರವಾದರಗಳೊಂದಿಗೆ ಬಿಟ್ಟುಬನ್ನಿ; ಆಕೆಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಿ’ ಎಂದು ಆಜ್ಞಾಪಿಸಿದ. ನಂತರ ಆ ಯುವತಿಯನ್ನು ಕುರಿತು ಶಿವಾಜಿ, ‘ನನ್ನ ಸೈನಿಕರ ಪ್ರಮಾದವನ್ನು ಮನ್ನಿಸು ತಾಯಿ; ನನಗೆ ಶತ್ರುತ್ವವಿರುವುದು ನಿಮ್ಮ ಸುಲ್ತಾನರೊಡನೆಯೇ ಹೊರತು, ಅವರ ಸಾಮ್ರಾಜ್ಯದ ಹೆಣ್ಣುಮ

ದಿನಕ್ಕೊಂದು ಕಥೆ 837

*🌻ದಿನಕ್ಕೊಂದು ಕಥೆ🌻                        ಸ್ವಾಭಿಮಾನಿಗಳಾಗಿ ಬದುಕಬೇಕು* ಸ್ವಾಮಿ ವಿವೇಕಾನಂದರ ಪರಮಶಿಷ್ಯರಲ್ಲಿ ಒಬ್ಬರು ಸಹೋದರಿ ನಿವೇದಿತಾ. ತಮ್ಮ ಗುರುಗಳ ಆಶಯದಂತೆ ಅವರು ಬಾಲಕಿಯರಿಗಾಗಿ ಸ್ವದೇಶಿ ಚಿಂತನೆಯುಳ್ಳ ಶಾಲೆಯನ್ನು ಆರಂಭಿಸಿದರು. ಆದರೆ ಅದನ್ನು ನಡೆಸಲು ನಿವೇದಿತಾರಿಗೆ ಆರಂಭದಲ್ಲಿಯೇ ಆರ್ಥಿಕ ಸಂಕಷ್ಟ ಎದುರಾಯಿತು. ಈ ಸಮಯದಲ್ಲಿ ಕಾಶ್ಮೀರ ಮಹಾರಾಜರು ಕಿಂಚಿತ್ತು ಧನಸಹಾಯ ಮಾಡಿದರಾದರೂ ಅದು ನಾಲ್ಕೈದು ತಿಂಗಳ ನಿರ್ವಹಣೆಗಷ್ಟೇ ಸಾಕಾಯಿತು. ಮುಂದೇನು ಮಾಡಬೇಕೆಂದು ಚಿಂತಿಸುತ್ತಲೇ ನಿವೇದಿತಾ ತಾವು ನಂಬಿದ್ದ ದೈವ ಹಾಗೂ ತಮ್ಮ ಪರಿಶ್ರಮದ ಮೇಲೆ ಭಾರ ಹಾಕಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೀಗಿರುವಾಗ ಒಮ್ಮೆ ಅವರ ಶ್ರೀಮಂತ ಗೆಳತಿ ಹೆನ್ರಿಯೇಟಾ ಮುಲ್ಲರ್ ಭೇಟಿಯಾಗಿ ಶಾಲೆಯ ಬಗ್ಗೆ ಪ್ರಸ್ತಾಪಿಸಿ ‘ನನ್ನೆಲ್ಲ ಸಂಪತ್ತನ್ನು ನಿನ್ನ ಶಾಲೆಗೆ ಧಾರೆಯೆರೆಯುತ್ತೇನೆ’ ಎಂದು ಹೇಳಿಕೊಂಡರು. ಆ ಕ್ಷಣಕ್ಕೆ ನಿವೇದಿತಾರಿಗೆ ಆದ ಸಂತಸಕ್ಕೆ ಪಾರವೇ ಇರಲಿಲ್ಲ; ಕಾರಣ, ಅದು ಕಷ್ಟಕಾಲದಲ್ಲಿ ಬಂದೊದಗಿದ ಭಾಗ್ಯ. ಹೆನ್ರಿಯೇಟಾ ಮಾತು ಮುಂದುವರಿಸುತ್ತ, ‘ನಾನೇನೋ ಧನಸಹಾಯ ಮಾಡುತ್ತೇನೆ; ಆದರೆ ಶಾಲೆಯ ಸಂಪೂರ್ಣ ಶಿಕ್ಷಣಕ್ರಮವನ್ನು ಆಂಗ್ಲಪದ್ಧತಿಗೆ ಬದಲಿಸಬೇಕು’ ಎಂದಾಗ ನಿವೇದಿತಾರಿಗೆ ತಮ್ಮ ಹುಮ್ಮಸ್ಸಿನ ಮಹಲು ಅರೆಕ್ಷಣದಲ್ಲಿ ಕುಸಿದಂತಾಯಿತು. ‘ನಿನ್ನ ಬಿಡಿಗಾಸೂ ನನಗೆ ಬೇಡ. ಶಿಕ್ಷಣ ಪದ್ಧತಿಯನ್ನು ಬದಲಿಸಲಾರೆ. ನಾನು ಆ

ದಿನಕ್ಕೊಂದು ಕಥೆ 836

*🌻ದಿನಕ್ಕೊಂದು ಕಥೆ🌻                                 ಜೀವನವನ್ನು ಇಂದೇ ಆನಂದಿಸೋಣ…* ತೋಟದ ದಂಡೆಗುಂಟ ಹಚ್ಚಿದ ಮಾವಿನ ಮರಗಳಲ್ಲಿ ಆ ವರ್ಷ ಸಾಕಷ್ಟು ಕಾಯಿಗಳಾಗಿದ್ದವು. ಮಾಲಿಕನು ಅವುಗಳನ್ನೆಲ್ಲ ಕೋಣೆಯ ಒಣಹುಲ್ಲು ಹಾಸಿನ ಮೇಲೆ ಹರವಿ ಮೇಲೆ ಒಂದಿಷ್ಟು ಹುಲ್ಲು ಹಾಕಿ ಕಂಬಳಿ, ಗೋಣಿಚೀಲ ಹೊದಿಸಿ ಹಣ್ಣು ಮಾಡಲೆಂದು ಇಟ್ಟನು. ವಾರದ ನಂತರ ಕೋಣೆಯೊಳಗಿಂದ ಮಾವಿನ ಹಣ್ಣಿನ ಪರಿಮಳ ಬರಲಾರಂಭಿಸಿತು. ಅವುಗಳಲ್ಲಿ ಎಂಟ್ಹತ್ತು ಕಾಯಿಗಳು ಒಳ್ಳೆ ಹಣ್ಣುಗಳಾಗಿ ತಿನ್ನಲಿಕ್ಕೆ ತಯಾರಾಗಿದ್ದವು. ಉಳಿದವು ಸ್ವಲ್ಪ ಸ್ವಲ್ಪ ಹಣ್ಣುಗಳಾಗಿ ಕೆಲ ದಿನಗಳಲ್ಲಿ ಮಾಗಲಿದ್ದವು. ಅಷ್ಟರಲ್ಲಿ ಮಾಲಿಕನ ದೃಷ್ಟಿ ಒಂದು ಮೂಲೆಯ ಕಡೆಗೆ ಹೊರಳಿತು. ಅಲ್ಲಿ ನಾಲ್ಕೈದು ಕಾಯಿಗಳು ಸಂಪೂರ್ಣ ಹಣ್ಣುಗಳಾಗಿ ಮೇಲ್ಭಾಗದಲ್ಲಿ ಕೊಳೆಯಲಾರಂಭಿಸಿದ್ದವು. ಅವನು ಆ ಹಣ್ಣುಗಳನ್ನು ಮಾತ್ರ ಅಲ್ಲಿಂದ ಹೊರತೆಗೆದು-‘ಇವಷ್ಟನ್ನು ಇಂದು ತಿಂದರಾಯಿತು. ಹೇಗೂ ನಾಳೆಯಿಂದ ಒಳ್ಳೆಯ ಹಣ್ಣುಗಳು ಸಿಗುತ್ತವೆ’ ಎಂದೆಣಿಸಿ ಮೇಲಿನ ಕೊಳೆತ ಭಾಗವನ್ನು ಚಾಕುವಿನಿಂದ ತೆಗೆದು ಅರ್ಧರ್ಧ ಭಾಗವನ್ನು ತಿಂದನು. ಮರುದಿನ ಮತ್ತೆ ಐದಾರು ಹಣ್ಣುಗಳು ತಯಾರಾಗಿದ್ದವು. ಆದರೆ ನಿನ್ನೆ ತಿನ್ನಲು ತಯಾರಾಗಿದ್ದ ಆ ಎಂಟ್ಹತ್ತು ಹಣ್ಣುಗಳು ಇಂದು ಅರ್ಧ ಕೊಳೆತಿದ್ದವು. ಆಗ ಅವುಗಳನ್ನು ಬಿಸಾಡಲು ಮನಸ್ಸಾಗದೆ ಮತ್ತೆ ಅವುಗಳನ್ನಷ್ಟೇ ಹೊರಗೆ ತೆಗೆದು ಅರ್ಧಭಾಗವನ್ನು ತಿಂದ. ಮೂರನೇ ದಿನವೂ ಇದೇ ಪರಿಯಾಯಿತು.

ದಿನಕ್ಕೊಂದು ಕಥೆ 835

*🌻ದಿನಕ್ಕೊಂದು ಕಥೆ🌻                                       ದುಡುಕು ಬಹು ಕೆಡುಕು* ಬಡವನೊಬ್ಬ ಬಾಡಿಗೆ ಟ್ಯಾಕ್ಸಿ ಚಲಾಯಿಸುತ್ತಿದ್ದ, ಇದರಿಂದ ಬರುವ ಆದಾಯದಿಂದ ಸಂಸಾರ ಸಾಗಿಸುವುದು ಕಷ್ಟವಾಗುತ್ತಿತ್ತು. ಎಷ್ಟು ದಿನ ಹೀಗೆ ಕಷ್ಟದ ಕಣ್ಣೀರಿನಲ್ಲಿ ಕೈತೊಳೆಯುವುದು ಎಂದು ಸಾಲಮಾಡಿ ಒಂದಷ್ಟು ಹಣವನ್ನು ಹೊಂದಿಸಿ ಸ್ವಂತಕ್ಕೆ ಒಂದು ಹೊಸ ಕಾರನ್ನು ಕೊಂಡು ತಂದು ಮನೆಮುಂದೆ ನಿಲ್ಲಿಸಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ. ಅಷ್ಟರಲ್ಲಿ ಅವನ 5 ವರ್ಷದ ಮಗು ಅಲ್ಲೇ ಬಿದ್ದಿದ್ದ ಕಬ್ಬಿಣದ ಸಲಾಕೆಯಿಂದ ಹೊಡೆದ ಪರಿಣಾಮ ಕಾರಿನ ಗಾಜು ಒಡೆಯಿತು. ಹೊಸಕಾರು ಹೀಗಾಯಿತಲ್ಲ ಎಂದು ಕೋಪಗೊಂಡು ಮಗುವಿನ ಕೈಯಲ್ಲಿದ್ದ ಸಲಾಕೆಯನ್ನು ಕಿತ್ತುಕೊಂಡು ಕೈಗೆ ಬಲವಾಗಿ ಬಾರಿಸಿದ. ಆ ನಂತರ ನೋವಿನಿಂದ ನರಳಾಡುತ್ತಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ದ. ವೈದ್ಯರು ಉಪಚರಿಸಿ, ‘ಬಲವಾದ ಪೆಟ್ಟು ಬಿದ್ದಿರುವುದರಿಂದ ಮಗುವಿನ ಕೈಮೂಳೆ ಮುರಿದಿದೆ. ಆದ್ದರಿಂದ ಸಂಪೂರ್ಣವಾಗಿ ಸರಿಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಮಗುವನ್ನು ಮನೆಗೆ ಬಿಟ್ಟು, ಒಡೆದುಹೋದ ಕಾರಿನ ಗಾಜನ್ನು ಬದಲಾಯಿಸಿ ಮುಂಚಿನ ಹಾಗೆ ಹೊಸದರಂತೆ ಸರಿಪಡಿಸಿಕೊಂಡು ಮನೆಗೆ ತಂದ. ಮಗು ಮನೆಯಿಂದ ಹೊರಬಂದು ಕಾರನ್ನೊಮ್ಮೆ ನೋಡಿ, ‘ಅಪ್ಪ ಕಾರಿನ ಗಾಜು ಈಗ ಸರಿಹೋಗಿದೆ. ಹಾಗಾದ್ರೆ ನನ್ನ ಕೈನೂ ಈಗ ಸರಿಯಾಗುತ್ತಲ್ವ’ ಎಂದಿತು ಮುಗ್ಧತೆಯಿಂದ. ಅಷ್ಟೊತ್ತಿಗಾಗಲೇ ಅವನಿಗೆ ತನ್ನ ತಪ್ಪಿನ ಅರಿವಾಗ

ದಿನಕ್ಕೊಂದು ಕಥೆ 834

*🌻ದಿನಕ್ಕೊಂದು ಕಥೆ🌻                                  ಅತಿ ನಂಬಿಕೆ ತರವಲ್ಲ* ವ್ಯಾಪಾರಿಯೊಬ್ಬ ಒಂಟೆ ಸಾಕಿದ್ದ. ಅದರ ಮೇಲೆ ಸರಕು ಹೇರಿಕೊಂಡು ಊರೂರು ಅಲೆದು ವ್ಯಾಪಾರ ಮಾಡಿ ಹೊಟ್ಟೆ ಹೊರೆಯುತ್ತಿದ್ದ. ಒಮ್ಮೆ ಹೀಗೆಯೇ ಪಕ್ಕದೂರಿಗೆ ತೆರಳಿದಾಗ ಭರ್ಜರಿ ವ್ಯಾಪಾರವಾಗಿ ಕೈತುಂಬ ಲಾಭವೂ ದಕ್ಕಿತು. ತನ್ನೂರಿಗೆ ಮರಳುವ ಮಾರ್ಗಮಧ್ಯದಲ್ಲಿ ಮಂದಿರವೊಂದು ಗೋಚರಿಸಿ, ತನಗೆ ಹೆಚ್ಚಿನ ಲಾಭ ದೊರಕುವಂತೆ ಮಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಲು ನಿರ್ಧರಿಸಿದ. ಒಂಟೆಯನ್ನು ಮರದ ಕೆಳಗೆ ಬಿಟ್ಟು ಮಂದಿರ ಪ್ರವೇಶಿಸಿದ. ದೇವರೊಂದಿಗಿನ ಅನುಸಂಧಾನದಲ್ಲಿ ಆತನಿಗೆ ಸಮಯ ಜಾರಿದ್ದೇ ತಿಳಿಯಲಿಲ್ಲ. ಮಂದಿರದಿಂದ ಹೊರಬರುವ ಹೊತ್ತಿಗಾಗಲೇ ಸಂಜೆಗತ್ತಲು ಆವರಿಸಿತ್ತು. ಬೇಗ ಮನೆ ಸೇರುವ ತವಕದಿಂದ ಒಂಟೆಯನ್ನು ಬಿಟ್ಟಿದ್ದ ಜಾಗದತ್ತ ಬಂದರೆ, ಅದು ನಾಪತ್ತೆಯಾಗಿತ್ತು. ಸುತ್ತಮುತ್ತಲೆಲ್ಲ ಹುಡುಕಿ, ಅವರಿವರನ್ನು ವಿಚಾರಿಸಿದರೂ ಏನೂ ಪ್ರಯೋಜನವಾಗಲಿಲ್ಲ. ತನ್ನ ಜೀವನಾಧಾರವಾಗಿದ್ದ ಒಂಟೆ ಕಳೆದುಹೋಗಿದ್ದಕ್ಕೆ ಅವನಿಗೆ ದುಃಖವಾಯಿತು, ಜತೆಗೆ ದೇವರ ಮೇಲೆ ಸಿಟ್ಟೂ ಬಂತು. ಆಕಾಶದೆಡೆಗೆ ಮುಖಮಾಡಿ, ‘ಹೇ ಪರಮಾತ್ಮಾ, ನೀನೊಬ್ಬ ವಂಚಕ; ನಿನ್ನನ್ನೇ ನಂಬಿದ್ದ ನನಗೆ ಎಂಥ ಮೋಸ ಮಾಡಿಬಿಟ್ಟೆ? ನಿನ್ನನ್ನು ಭಕ್ತಿಯಿಂದ ಪ್ರಾರ್ಥಿಸಿದ್ದು ನಿರರ್ಥಕವಾಯಿತು’ ಎಂದು ಹಲುಬತೊಡಗಿದ. ಅದೇ ದಾರಿಯಲ್ಲಿ ಸಾಗುತ್ತಿದ್ದ ಜ್ಞಾನಿಯೊಬ್ಬನಿಗೆ ವ್ಯಾಪಾರಿಯ ಅಳಲು, ಕೂಗಾಟ