Posts

Showing posts from May, 2019

ದಿನಕ್ಕೊಂದು ಕಥೆ 918

*🌻ದಿನಕ್ಕೊಂದು ಕಥೆ🌻* *ಕ್ರಾಂತಿಕಾರಿ  ರಾಸ್ ಬಿಹಾರಿ ಬೋಸ್* ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು ರಾಸ್ ಬಿಹಾರಿ ಬೋಸ್ . ಎಲ್ಲರೂ ಅವರನ್ನು ಪ್ರೀತಿಯಿಂದ ರಾಸುದಾ ಎಂದೇ ಕರೆಯುತ್ತಿದ್ದರು . ರಾಸುದಾ ಅವರ ತಂದೆ ವಿನೋದ ಬಿಹಾರಿ ಬೋಸ್ . ತಾಯಿ ಬಂಗಾಳಿ ಕುಲೀನ ಮನೆತನದ ಸರಳ ಮಹಿಳೆ. ಹೂಗ್ಲಿ ಜಿಲ್ಲೆಯ ಭದ್ರೇಶ್ವರದ ಪರಲವಿಘಟಿ ಎಂಬ ಹಳ್ಳಿಯಲ್ಲಿ ಜನನ ( 25 ಮೇ 1886 ) . ಮೂರು ವರ್ಷಗಳಾದಾಗ ತಾಯಿ ಸ್ವರ್ಗವಾಸಿಯಾದರು. ರಾಮಕೃಷ್ಣ ಪರಮಹಂಸರ ಪರಮ ಭಕ್ತರಾದ ತಾತ ಕಾಳಿಚರಣ ಬೋಸ್​ರಿಂದ ಭರತಖಂಡದ ಧಾರ್ವಿುಕ , ಐತಿಹಾಸಿಕ , ಸಾಂಸ್ಕೃತಿಕ , ರಾಜಕೀಯ ವಿಚಾರಗಳ ಅರಿವು ರಾಸುದಾಗಾಯಿತು . ಚಿಕ್ಕಂದಿನಲ್ಲಂತೂ ಬಲು ತುಂಟ . ಜಗಳಗಂಟ. ಆದರೆ ಸಾಹಿತ್ಯಪ್ರೇಮಿ . ಒಂದು ದಿನ ಶಾಲೆಯಲ್ಲಿ ಇಂಗ್ಲಿಷರ ವಿರುದ್ಧ ಮಾತಾಡಿದ್ದರಿಂದ ಶಾಲೆಯಿಂದಲೇ ಅರ್ಧಚಂದ್ರ ! ಅಪ್ಪ ಛೀಮಾರಿ ಹಾಕಿ ಕಲ್ಕತ್ತೆಗೆ ಅಟ್ಟಿದರು. ವಿವೇಕಾನಂದರ ಕೃತಿಗಳು , ಜದುನಾಥ ಸರ್ಕಾರರ ಉಪನ್ಯಾಸಗಳು ಪ್ರಭಾವಿಸಿದವು . ಸುಳ್ಳು ಹೇಳಿ ಪೋರ್ಟ್ ವಿಲಿಯಂ ಸೇನಾವಿಭಾಗದಲ್ಲಿ ಗುಮಾಸ್ತನಾದ . ಬಂಗಾಳಿ ಎಂದು ತಿಳಿದೊಡನೆ ಆ ಕೆಲಸಕ್ಕೆ ಸಂಚಕಾರ! ಮಗ ತನ್ನ ಕಣ್ಣೆದುರೇ ಇರಲೆಂದು ತಾನು ಕೆಲಸ ಮಾಡುತ್ತಿದ್ದ ಶಿಮ್ಲಾದ ಸರ್ಕಾರಿ ಪ್ರೆಸ್​ನಲ್ಲಿಯೇ ಕೆಲಸ ಕೊಡಿಸಿದರು . ಆದರೆ ಮ್ಯಾನೇಜ್​ ವೆುಂಟ್ ಮತ್ತು ಕೆಲಸಗಾರರ ನಡುವೆ ಘರ್ಷಣೆಯಾದಾಗ ರಾಸು ಕೆಲಸಗಾರರ

ದಿನಕ್ಕೊಂದು ಕಥೆ 917

*🌻ದಿನಕ್ಕೊಂದು ಕಥೆ🌻* *ಭಗವಾನ್ ಗೌತಮ ಬುದ್ಧ* ಬುದ್ಧ ಪೂರ್ಣಿಮೆ ಬೌದ್ಧ ಧರ್ಮೀಯರ ಪಾಲಿನ ಪವಿತ್ರ ದಿನಗಳಲ್ಲಿ ಒಂದಾಗಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಶುಕ್ಲ ಪಕ್ಷ ಹುಣ್ಣಿಮೆ ದಿನದಂದು ಬುದ್ಧ ಪೂರ್ಣಿಮೆ ಆಚರಿಸಲಾಗುತ್ತದೆ. ಮಾನವರ ಹಿತಕ್ಕಾಗಿ ಜನ್ಮತಾಳಿದ ಬುದ್ಧನ ಹುಟ್ಟಿದ ದಿನವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ರಾಜಕುಮಾರನಾಗಿದ್ದ ಸಿದ್ಧಾರ್ಥ ಮಾನವರ ಕಲ್ಯಾಣಕ್ಕಾಗಿ ತನ್ನೆಲ್ಲಾ ಸುಖವನ್ನು ತ್ಯಾಗ ಮಾಡಿ ನೋವು ಮತ್ತು ಸಾವಿನ ಅರ್ಥವನ್ನು ಕಂಡುಕೊಂಡ ದಿವಸವಾಗಿದೆ. ತನ್ನ ಹದಿನಾರನೇ ವಯಸ್ಸಿನಲ್ಲಿ ಯಶೋಧರೆಯನ್ನು ಮಗುವೆಯಾಗಿ ಒಂದು ಮಗುವಿನ ತಂದೆಯಾಗಿದ್ದ ಸಿದ್ಧಾರ್ಥ ಜೀವನದ ನಿಜವಾದ ಅರ್ಥವನ್ನು ಕಂಡ ಒಡನೇ ತಮ್ಮ ಸುಖವನ್ನು ತೊರೆದು ಸನ್ಯಾಸಿಯಾಗಿ ಮೋಕ್ಷವನ್ನು ಕಂಡುಕೊಳ್ಳುವ ದಾರಿಯಲ್ಲಿ ನಡೆಯುತ್ತಾರೆ. ವೃದ್ಧರು, ಒಂದು ಮೃತದೇಹ ಮತ್ತು ತಪಸ್ವಿಗಳನ್ನು ಕಾಣುತ್ತಾರೆ. ಇಷ್ಟೆಲ್ಲಾ ಕಷ್ಟಗಳನ್ನು ಜನರು ಅನುಭವಿಸುತ್ತಿದ್ದಾರೆ ಮತ್ತು ತಾನು ಅನುಭವಿಸುತ್ತಿರುವುದೇ ಸುಖವೆಂದು ಅದುವರೆಗೆ ಅರಿತಿದ್ದ ಸಿದ್ಧಾರ್ಥ ಒಂದು ರಾತ್ರಿ ತಮ್ಮ ಪತ್ನಿ, ಪುತ್ರ, ರಾಜವೈಭೋಗದ ಎಲ್ಲಾ ಸುಖವನ್ನು ತ್ಯಜಿಸಿ ಹೊರಟು ಹೋಗುತ್ತಾರೆ. ಗೌತಮ ಬುದ್ಧನು ಅರಣ್ಯಕ್ಕೆ ತೆರಳಿ ಅಲ್ಲಿ ತಪ್ಪಸ್ಸನ್ನು ಆಚರಿಸಲು ಆರಂಭಿಸುತ್ತಾರೆ. ಎಂಟು ವರ್ಷಗಳ ಬಳಿಕ ಬೋಧಿ ವೃಕ್ಷದ ಅಡಿಯಲ್ಲಿ ಗೌತಮನಿಗೆ ಮೋಕ್ಷ ಸಿಗುತ್ತದೆ. ತಮ್ಮ ೮೦ ರ ಹರೆಯದಲ್ಲಿ ಮರಣವ

ದಿನಕ್ಕೊಂದು ಕಥೆ 916

*🌻ದಿನಕ್ಕೊಂದು ಕಥೆ🌻* ಟೌನಿನಲ್ಲಿ ತನ್ನ ಮಗ ಕೆಲಸ ಮಾಡುತ್ತಿದ್ದ ಹೋಟೆಲಿಗೆ ಆಕಸ್ಮಿಕವಾಗಿ ಬಂದುಬಿಟ್ಟಿದ್ದಳು ಆಕೆ. ತಟ್ಟೆ ಎತ್ತುತ್ತಿರುವಾಗ ಎದುರಿನ ಮೇಜಿನಲ್ಲಿ ತನ್ನ ತಾಯಿಯನ್ನು ನೋಡಿ  ಆತನ ಎದೆ ಕಂಪಿಸಿತು. ಉಂಡ ಹರಿವಾಣಕ್ಕೆ   ಒಮ್ಮೆಯೂ ಕೈ ಹಾಕದೇ ಸಾಕಿಸಿಕೊಂಡವನೀಗ ಎಲ್ಲರ ಎಂಜಲು ಬಳಿಯುತ್ತಿರುವುದನ್ನು ಕಣ್ಣಾರೆ ನೋಡಿ ತಾಯಿಯ ಅಂತಃಕರಣ  ಮರುಗಿ ನೀರಾಯಿತು. ಬಡಪಾಯಿಗಳಿಬ್ಬರ ಕಣ್ಣುಗಳೂ ಸಂಧಿಸಿದಾಗ ತುಟಿಗಳು ಸ್ಥಬ್ಧವಾದವು..ಅವರ ಹೃದಯಗಳು ಒಂದನ್ನೊಂದು ಅಪ್ಪಿ  ಮರುಗಿದ್ದು ಯಾರಿಗೂ ಕಾಣಲಿಲ್ಲ.. ಸಾವಿರಾರು ಮಂದಿಯ ಎಂಜಲು ಬಳಿದಿದ್ದವನು ತನ್ನ ತಾಯಿ ಉಂಡ ತಟ್ಟೆಯನ್ನು ಮೊಟ್ಟಮೊದಲ ಬಾರಿಗೆ ಎತ್ತಿ ಜೀವಮಾನದ  ಸಂತಸ ಅನುಭವಿಸಿದ. ಅದೂ ಕೂಡಾ ಯಾರಿಗೂ ಕಾಣಿಸಲಿಲ್ಲ, ಅವಳ ಹೊರತು. ************************* ಮಗ ಸೊಸೆ ಹಬ್ಬ ಮುಗಿಸಿ ನಗರಕ್ಕೆ ಹೊರಡಲು ಅನುವಾಗುತ್ತಿದ್ದರು. ಅವ್ವ ರಾಗಿ ಹಿಟ್ಟಿನ ಡಬ್ಬ,  ಖಾರದಪುಡಿ ಡಬ್ಬ,ಉಪ್ಪಿನಕಾಯಿ ಜರಡಿ,  ಹಪ್ಪಳ ಸಂಡಿಗೆ ,ಹುಣಸೆಹಣ್ಣು ಎಲ್ಲವನ್ನೂ ತಂದು ಕಾರಿನ ಡಿಕ್ಕಿಗೆ ತುಂಬಿದಳು . ಇನ್ನೇನು ಕಾರು ಹೊರಡಬೇಕು ಅನ್ನುವಷ್ಟರಲ್ಲಿ ಸೊಸೆಗೆ ಅದೇನೋ ನೆನಪಾಗಿ , "ತೆಂಗಿನ ಕಾಯಿ ಮರ್ತು ಬಿಟ್ರಲ್ಲಾ ಅತ್ತೆ " ಎಂದು ಕೂಗಿಕೊಂಡಳು. ಆಕೆ, "ಬಂದೆ ತಡಿಯವ್ವ " ಎನ್ನುತ್ತಾ ಒಂದೇ ಉಸುರಿನಲ್ಲಿ ತೆಂಗಿನ ಕಾಯಿ ಚೀಲ ಹೊತ್ತು ಓಡಿ ಬರುವಾಗ ಪಿನ್ನು ಹಾಕಿದ್ದ ಚ

ದಿನಕ್ಕೊಂದು ಕಥೆ 915

*🌻ದಿನಕ್ಕೊಂದು ಕಥೆ🌻* ಬದಲಾದ ಬದುಕು ಒಂದಾನೊಂದು ಕಾಲದಲ್ಲಿ ಒಂದಾನೊಂದು ದೇಶದಲ್ಲಿ ಕಚೇರಿಗಳು ಬೆಳಿಗ್ಗೆ ಒಂಬತ್ತೂವರೆಗೆ ತೆರೆಯುತ್ತಿದ್ದವು. ಕೆಲಸಗಾರರು ಬಂದು ಮೇಜು, ಕುರ್ಚಿಗಳನ್ನು ಸ್ವಚ್ಛಮಾಡಿ ಕಾಗದ ಪತ್ರಗಳನ್ನು ಓರಣವಾಗಿ ಜೋಡಿಸಿಡುತ್ತಿದ್ದರು. ಹತ್ತೂವರೆಗೆ ಆಫೀಸಿನ ಕೆಲಸ ಪ್ರಾರಂಭವಾಗುತ್ತಿತ್ತು. ಸಿಬ್ಬಂದಿ ವರ್ಗದವರು ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತು ಶ್ರಮವಹಿಸಿ ಕೆಲಸ ಮಾಡುತ್ತಿದ್ದರು. ಒಂದರ್ಧ ಗಂಟೆ ಊಟ ಮುಗಿಸಿ ಮತ್ತೆ ಕೆಲಸ. ಸಂಜೆ ಐದೂವರೆಯ ವರೆಗೆ ತಮ್ಮ ನಿಗದಿತ ಕೆಲಸವನ್ನು ಮುಗಿಸಿ ಮೇಲೇಳುತ್ತಿದ್ದರು. ತಮ್ಮ ದಿನದ ಕರ್ತವ್ಯವನ್ನು ಮುಗಿಸಿದೆವು ಎಂಬ ತಪ್ತಿ ಅವರಿಗಿರುತ್ತಿತ್ತು. ಅವರ ಮೇಲಿನವರಿಗೂ ಕೆಲಸ ಸರಿಯಾದ ಸಂತೋಷ.   ಮನೆಗೆ ಬರುವಾಗ ನವಿಲಿನ ನಡಿಗೆ. ದಾರಿಯಲ್ಲಿ ಹೆಂಡತಿಯ ಮುಡಿಗೊಂದು ಮೊಳ ಮಲ್ಲಿಗೆ ತಂದರೆ ಮತ್ತಷ್ಟು ಸಂತೋಷ. ಕಚೇರಿಯ ಕೆಲಸ ಮನೆಗೆ ಬರುತ್ತಿರಲಿಲ್ಲ. ಅಲ್ಲಿಯದು ಅಲ್ಲಿಗೇ. ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ನಗು, ವಿಹಾರ. ಸಂಜೆಗೆ ಎಲ್ಲರೂ ಒಂದೆಡೆಗೆ ಕುಳಿತು ಊಟ, ಹರಟೆ, ನಂತರ ಅದು ವಿಶ್ರಾಂತಿಯ ಸಮಯ. ಇದೆಲ್ಲಿಯೋ ಕೇಳಿದ ಕಥೆ ಎಂದೆನಿಸುವುದಿಲ್ಲವೇ? ಮತ್ತೆ ಕಥೆಗೆ ಬರೋಣ.   ಪಶ್ಚಿಮದ ದೇಶಗಳಿಂದ ಕೆಲ ಪ್ರವಾಸಿಗಳು ಇಡೀ ಪ್ರಪಂಚವನ್ನು ಒಂದು ಹೊಳೆಹೊಳೆಯುವ ಪೆಟ್ಟಿಗೆಯಲ್ಲಿ ತುಂಬಿಕೊಂಡು ತಂದರು. ಅದನ್ನು ಜನ ಕಂಪ್ಯೂಟರ್ ಎಂದು ಕರೆದರು. ಅದರೊಳಗೆ ಇಂಟರ್‌ನೆಟ್ ಎಂಬ ಹೂರಣವನ್ನು ತ

ದಿನಕ್ಕೊಂದು ಕಥೆ 914

*🌻ದಿನಕ್ಕೊಂದು ಕಥೆ🌻*        *ಶಾರದಾ ಟೀಚರ್* ಶಾರದಾ ಟೀಚರ್ ಇಂದು ಮತ್ತೆ ನೆನಪಾದರು. ಅವರು ತೀರಿಹೋಗಿ ಎರಡು ವರುಷಗಳಾದವು‌. ನನ್ನ ಅಪ್ಪನಿಗೆ ಸಹಿ ಹಾಕಲು ಹೇಳಿಕೊಟ್ಟದ್ದು ಅವರೇ. ಓದಲು, ಸಾಮನ್ಯ ಮಟ್ಟಿಗೆ ಬರೆಯಲು ಅಪ್ಪನಿಗೆ ಇಂದು ಸಾಧ್ಯವಾದರೆ ಅದು ಶಾರದಾ ಟೀಚರ್ ನಿಂದ. ಟೀಚರ್ ಅಂದರೆ ಅವರು ಶಾಲೆಯಲ್ಲಿ ಅಧ್ಯಾಪಕಿ ಆಗಿರಲಿಲ್ಲ. ಕೆಲವು ಮಕ್ಕಳಿಗೆ ಮನೆಪಾಠ ಹೇಳಿಕೊಡುತ್ತಿದ್ದರು. ಸ್ವ ಇಚ್ಛೆಯಿಂದ ವಯಸ್ಕರ ಶಿಕ್ಷಣ ಸುರುಮಾಡಿ ಮನೆ ಮಾತಾದವರು.  ಅವರ ಗಂಡ ರಾಮಸೆಟ್ಟಿಗಾರರು ತೀರಿಕೊಂಡು ವರುಷಗಳೆ ಕಳೆದಿದ್ದವು. ಒಬ್ಬ ಮಗ ಶಶಿಕಾಂತ ಕೆಲಸ ಅಂತ ಬೆಂಗಳೂರಿಗೆ ಹೋದಾಗ ಮನೆಯಲ್ಲಿ ಟೀಚರ್ ಒಬ್ಬರೇ ಆದರು. ಸೆಟ್ಟಿಗಾರರು ಮಾಡಿದ್ದ ಸ್ವಲ್ಪ ಹಣ ಬ್ಯಾಂಕಲಿತ್ತು. ಮಗ ಖರ್ಚಿಗೆ ಕಳಿಸ್ತಿದ್ದ. ಅಮ್ಮನ ಮೇಲೆ ಅಗಾಧ ಪ್ರೀತಿ ಅಲ್ಲದಿದ್ದರೂ ಅಪ್ಪ ಇಲ್ಲದೆ ಬೆಳೆದವನು ಮಗನ ಮೇಲೆ ಟೀಚರಿಗೆ ವಿಪರೀತ ಪ್ರೀತಿ. ಎಡೆಯೆಡೆಯಲ್ಲಿ ಬಂದು ಅಮ್ಮನನ್ನು ನೋಡಿ ಹೋಗುತ್ತಿದ್ದ ಶಶಿಕಾಂತ ವಯಸ್ಸಿಗೆ ಬಂದಾಗ ಮದುವೆ ಮಾಡಲು ಹುಡುಗಿ ನೋಡುವುದು ಎಂದು ಟೀಚರ್ ಎಲ್ಲರಲ್ಲಿ ಹೇಳಿಟ್ಟರು. ಚಿಪ್ಪಾರಿನ ಸೆಟ್ಟಿಗಾರ ಮನೆತನದ ಒಬ್ಬಾಕೆ ವಿಧವೆಯನ್ನು ಬಾಯಾರಿನ ಜಾತ್ರೆಯಲ್ಲಿ ಕಂಡು ಮಾತನಾಡಿದಾಗ ಅವಳನ್ನೇ ಮಗನಿಗೆ ಮದುವೆ ಮಾಡಬಹುದೆಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕಿ ಪತ್ರ ಬರೆದರು. ಆಕೆಗೆ ಮದುವೆ ಮಾತ್ರ ಹೆಸರಿಗೆ ಆಗಿತ್ತು. ಹುಡುಗನ ಮ‌ನೆಯಲ್ಲಿ ಸಮಾರಂಭದಲ್ಲಿ ಚಪ್ಪರ ಬಿ