Posts

Showing posts from January, 2021

ದಿನಕ್ಕೊಂದು ಕಥೆ 1005

*🌻ದಿನಕ್ಕೊಂದು ಕಥೆ🌻* *ಬೆರಗಿನ ಬೆಳಕು* ಹಿಂದೆ ವಿದೇಹ ರಾಜ್ಯವನ್ನು ಅಂಗರಾಜ ಆಳುತ್ತಿದ್ದಾಗ ಬೋಧಿಸತ್ವ ನಾರದನೆಂಬ ಮಹಾಬ್ರಹ್ಮನಾಗಿದ್ದ. ಆತ ಕರುಣೆಯಿಂದ ಭೂಲೋಕದ ಕಡೆಗೆ ದೃಷ್ಟಿಯನ್ನು ಹರಿಸಿ, ಯಾವ ಯಾವ ಜೀವಗಳು ಧರ್ಮದಲ್ಲಿ ಬದುಕುತ್ತಿವೆ, ಯಾವ ಜೀವಗಳು ಅಧರ್ಮದ ಕಡೆಗೆ ಮುಖ ಮಾಡಿವೆ ಎಂದು ನೋಡುತ್ತಿದ್ದ. ಆಗ ಅವನ ದೃಷ್ಟಿ ಅಂಗರಾಜನ ಅರಮನೆಯ ಮೇಲೆ ಬಿತ್ತು. ಅವನು ನೋಡಿದ್ದು ಅವನಿಗೆ ಆಶ್ಚರ್ಯವನ್ನು ತಂದಿತು. ರಾಜ ತನ್ನ ಅಮಾತ್ಯರಲ್ಲಿ ನೀಚಬುದ್ಧಿ ಇರುವವರನ್ನೇ ಆದರಿಸುತ್ತ, ಅವರ ಮಾತುಗಳನ್ನು ಕೇಳುತ್ತಿದ್ದ. ಸಜ್ಜನರಾದ ಅಮಾತ್ಯರು ಅಸಹಾಯಕರಾಗಿದ್ದರು. ಅವನಿಗೆ ಅಲ್ಲೊಂದು ಆಶಾಕಿರಣ ಕಂಡಿತು. ಅಂಗರಾಜನ ಮಗಳು ರುಜಾ ತಂದೆಗೆ ಧರ್ಮದ ದಾರಿಯನ್ನು ಹೇಳುತ್ತಿದ್ದಳು. ಆದರೆ ತಂದೆ ಮಾತ್ರ ಕುತ್ಸಿತ ಬುದ್ಧಿಯ ಕಾಶ್ಯಪನ ಮಾತುಗಳನ್ನು ಕೇಳಿ ಮಗಳಿಗೆ ಹೇಳಿದ, “ಮಗಳೇ, ನೀನು ಬಹಳಷ್ಟು ಹಣವನ್ನು ವ್ಯರ್ಥ ಮಾಡುತ್ತಿದ್ದೀಯಾ. ಯಾವುಯಾವುದೋ ವೃತಗಳನ್ನು ಮಾಡಿ ಪ್ರಯೋಜನವಿಲ್ಲದವರಿಗೆ ಹಂಚುತ್ತೀಯಾ, ಸುಮ್ಮನೆ ಉಪವಾಸ, ವ್ರತಗಳನ್ನು ಮಾಡುತ್ತ ದೇಹವನ್ನು ದಂಡಿಸುತ್ತೀ. ಅದರಿಂದ ಯಾವ ಪುಣ್ಯವೂ ಬರುವುದಿಲ್ಲ. ಬದುಕಿರುವ ತನಕ ತಿಂದು ಸಂತೋಷಪಡುವುದನ್ನು ಬಿಡಬಾರದು. ಪರಲೋಕವೆಂಬುವುದು ಇಲ್ಲವೇ ಇಲ್ಲ”. ಆ ಮಾತುಗಳನ್ನು ಕೇಳಿ ಮಗಳಿಗೆ ಬಹಳ ದು:ಖವಾಯಿತು. ಸ್ವಭಾವತ: ಒಳ್ಳೆಯವನಾಗಿದ್ದ ತಂದೆ, ನೀಚ ಮಂತ್ರಿಯ ಮಾತಿನಿಂದ ಅಧರ್ಮದ ಹಾದಿಗೆ ಹೋಗುತ್ತಿದ್ದನಲ್ಲ ಎ